অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿಜ್ಞಾನ

ಕೃಷಿಜ್ಞಾನ

ದೇಶದ ಬೇರೆ ಭಾಷೆಗಳಲ್ಲಿ ಈ ಮಣ್ಣಿನ ಜ್ಞಾನ ಒಂದೇ ಕಡೆ ಸಿಗುವಂತೆ, ಹುಡುಕಲು ಆಗುವಂತೆ - ಮಾಡಿರುವುದನ್ನು ಕಂಡಿದ್ದೀರಾ? ಮೋ: ನಮ್ಮಲ್ಲಿನ ಕೃಷಿಜ್ಞಾನ ದೇಶದ ಅಸಂಖ್ಯ ಪ್ರಾದೇಶಿಕ ಭಾಷೆಗಳಲ್ಲಿ ಹುದುಗಿಕೊಂಡಿದೆ. ದುರದೃಷ್ಟವಶಾತ್ ಕೃಷಿಸಂವಹನಕ್ಕೆ ಇದು ಬಹುದೊಡ್ಡ ತಡೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಕೊಡುವಯತ್ನಗಳಾಗುತ್ತಿದೆ. ಆದರೂ, ನನಗೆ ಗೊತ್ತಿದ್ದಂತೆ ಕೃಷಿಯ ವಿಚಾರದಲ್ಲಿ ಇಂಥ ಯತ್ನ ನಡೆದಿಲ್ಲ. ಅಲ್ಲಲ್ಲಿ ಉತ್ಸಾಹಿಗಳ ಬ್ಲಾಗ್ಗೆಳು, ಗುಂಪುಗಳು ಸ್ವಲ್ಪ ಮಟ್ಟಿಗೆ ಸಂವಹನ ನಡೆಸಿದ್ದರೂ, ಆಯಾ ನೆಲದ, ಪ್ರಾಯೋಗಿಕ ಕೃಷಿಯ ಅಗಾಧ ಮಾಹಿತಿಯನ್ನು ಒಂದೇ ಕಡೆ ಸಿಗುವಂತೆ ಮಾಡಿರುವುದು ಕಂಡಿಲ್ಲ. ಕರ್ನಾಟಕದ ವಿಶಿಷ್ಟ ಕೃಷಿಕಪರ ಪತ್ರಿಕೋದ್ಯಮ ಬಹುಶಃ ಬೇರೆ ಭಾಷೆಗಳಲ್ಲಿಲ್ಲದಿರುವುದೂ ಇದಕ್ಕೆ ಕಾರಣ ಇರಬಹುದು. ಆದರೆ ದೇಶದ ವಿವಿಧ ಭಾಗಗಳಲ್ಲಿ ಆಧುನಿಕ ಕೃಷಿಯ ಬಗ್ಗೆ ಅಸಂಖ್ಯ ಜಾಲತಾಣಗಳಿವೆ. ಅಲ್ಲಿ ಸಾಂಪ್ರದಾಯಿಕ ಕೃಷಿಯ ಪಳೆಯುಳಿಕೆಗಳು ಸ್ವಲ್ಪ ಮಟ್ಟಿಗೆ ಕಾಣಸಿಗಬಹುದು. ಕರ್ನಾಟಕದ್ದು ವಿಶಿಷ್ಟ ಕೃಷಿಕಪರ ಪತ್ರಿಕೋದ್ಯಮ ಅಂದಿರಿ. ನಿಜಕ್ಕೂ ಹೌದೇ? ಹೇಗೆ? ಮೋ: ನಮ್ಮ ಕೃಷಿಶಿಕ್ಷಣದಲ್ಲಿ ‘ಲ್ಯಾಬ್ ಟು ಲ್ಯಾಂಡ್’ ಕಲ್ಪನೆ ಇತ್ತೇ ವಿನಾ ‘ಲ್ಯಾಂಡ್ ಟು ಲ್ಯಾಬ್’ ಯೋಚನೆ ಇರಲೇ ಇಲ್ಲ. ರೈತನಲ್ಲೂ ಜ್ಞಾನವಿದೆ ಅಂತ ಒಪ್ಪಿಕೊಳ್ಳುವುದೇ ಕಷ್ಟವಾಗಿತ್ತು. ಕೃಷಿಕರಿಗೆ ತಮ್ಮ ಸುಖದು:ಖ ಹೇಳಿಕೊಳ್ಳಲು ಸರಿಯಾದ ವೇದಿಕೆ ಇರಲಿಲ್ಲ. ಈಗ ಈ ಪರಿಕಲ್ಪನೆ ಬದಲಾಗಿದೆ. ರೈತಾಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿದೆ. ಇದಕ್ಕೆ ಮೂಲಕಾರಣ 90ರ ದಶಕದಿಂದೀಚೆಗೆ ನಡೆಯುತ್ತಿರುವ ಕೃಷಿಕಪರ ಪತ್ರಿಕೋದ್ಯಮ ಆಂದೋಲನ. ಕೃಷಿಕನನ್ನು ಕೇಂದ್ರವಾಗಿಟ್ಟುಕೊಂಡು ಕೃಷಿಯ ಸಮಸ್ಯೆ, ಪರಿಹಾರ, ಅಭಿವೃದ್ಧಿ ಮುಂತಾದವನ್ನು ಚರ್ಚಿಸುವ ಸಂಪ್ರದಾಯ ಪೂರ್ತಿ ಅಲ್ಲವಾದರೂ ಗಮನಾರ್ಹವಾಗಿ ಬೆಳೆದಿದೆ. ಕೃಷಿಲೇಖನಗಳಲ್ಲೂ ಕೃಷಿಕಾಭಿಪ್ರಾಯಕ್ಕೇ ಮೊದಲ ‘ನಮ್ಮ ಕೃಷಿಜ್ಞಾನ ಪ್ರಚರಿಸುವ ಖಜಾನೆ’ ‘ಕೃಷಿಕನ್ನಡ’ ಪರಿಕಲ್ಪನೆ ಡಾ. ಮೋಹನ್ತಲಕಾಲುಕೊಪ್ಪ ಅವರದಾದರೆ, ಕೃಷಿಕನ್ನಡದ ಚಾಲನೆ ಅವರ ಪತ್ನಿ ಸೌಖ್ಯ ಮೋಹನ್ರಷದು. ಅಡಿಕೆ ಪತ್ರಿಕೆ ಈ ಎರಡೂ ವಿಚಾರಗಳ ಬಗ್ಗೆ ಇವರನ್ನು ಮಾತನಾಡಿಸಿತು. ಡಾ. ಮೋಹನ್ ಸೌಖ್ಯ ಮೋಹನ್ ಜಾಲತಾಣ ಒಂದು ಹಂತಕ್ಕೆ ಬರಬೇಕಾದರೆ ಇನ್ನೂ 2 - 3 ವರ್ಷ ನಿರಂತರ ಕೆಲಸ ಮಾಡಬೇಕು. ಕನ್ನಡನಾಡಿನ ಸಹೃದಯರ ಉತ್ತೇಜನದಿಂದ ಇದು ಸಾಧ್ಯ ಎಂದು ನಂಬಿದ್ದೇವೆ. ಮಣೆ ಸಿಗುತ್ತಿದೆ. ಇದು ಬಹುದೊಡ್ಡ ಬದಲಾವಣೆ. ಕೃಷಿಯ ನಶಿಸಿ ಹೋಗುವ ಅನನ್ಯ ಜ್ಞಾನಪರಂಪರೆ ಬೇಕಾದಾಗ ಸುಲಭ ಹಾಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದೀರಿ. ಇದು ಶ್ಲಾಘನೀಯ ಮಹತ್ಕಾರ್ಯ. ಈ ಯತ್ನ ಈ ಮಣ್ಣಿನ ಜ್ಞಾನಕ್ಕೆ ಹೆಚ್ಚಿನ ನ್ಯಾಯ, ಅಂಗೀಕಾರ ತಂದೀತು ಎಂದು ನಿಮಗನಿಸುತ್ತದೆಯೇ? ಈ ಜಾಲತಾಣ ಏನೇನು ಪ್ರಯೋಜನ, ಬದಲಾವಣೆಗಳನ್ನು ತರಬಲ್ಲುದು? ಮೋ: ಇನ್ನೂ ಮಾಡುವುದು ಸಾಕಷ್ಟಿದೆ. ಇನ್ನೂ ಹೆಚ್ಚಿನ ಅಂಗೀಕಾರ ಸಿಕ್ಕೇ ಸಿಗುತ್ತದೆ. ನಮ್ಮ ನೆಲದ ಜ್ಞಾನಾಧಾರಿತ ಕೃಷಿ ಸಂಶೋಧನೆಗೆ ಇದು ಪ್ರಯೋಜಕ. ಬಹುತೇಕ ವಿಜ್ಞಾನಿಗಳು ತಮ್ಮ ಸಂಶೋಧನೆಯ ವಿವರ ಸಂಗ್ರಹಣೆಗೆ ಅಂತರ್ಜಾಲ ಅವಲಂಬಿಸುತ್ತಾರೆ. ಅವರು ಇಲ್ಲಿರುವ ಸಾಂಪ್ರದಾಯಿಕ ಕೃಷಿಯ ವಿವರ ಪಡೆದು ಆ ದಿಕ್ಕಿನಲ್ಲಿ ಸಂಶೋಧನೆ ಮಾಡುವ ಸಾಧ್ಯತೆ ಇದೆ. ಕೃಷಿಕರು ಮತ್ತು ಕೃಷಿಸಂಬಂಧಿ ರಂಗದವರಿಗೆ ಎಲ್ಲೆಲ್ಲಿ ಏನೇನು ನಡೆದಿದೆ, ನಡೆಯುತ್ತಿದೆ ಎನ್ನುವ ಮಾಹಿತಿ ಸುಲಭದಲ್ಲಿ ಲಭ್ಯ. ಇದರಿಂದ ತಮ್ಮ ಚಟುವಟಿಕೆಗಳನ್ನು ಸೂಕ್ತವಾಗಿ ಮಾರ್ಪಡಿಸಿಕೊಳ್ಳಲು ಅನುಕೂಲ. ಕೃಷಿ ಪತ್ರಕರ್ತರಿಗೆ ಒಂದು ವಿಷಯದ ಹಲವು ಮಗ್ಗುಲುಗಳನ್ನು ಅಧ್ಯಯನ ಮಾಡಲು ಅನುಕೂಲ. ಇದರಿಂದ ಪ್ರಾಯೋಗಿಕ ಕೃಷಿಯ ಮಾಹಿತಿಪೂರ್ಣ ಸಂವಹನ ಸಾಧ್ಯ. ಪಶ್ಚಿಮದ ಏಕರೂಪಿ ಕೃಷಿ ವಿಧಾನಗಳಿಗಿಂತ ನಮ್ಮದು ಉತ್ತಮ ಎಂದಿದ್ದೀರಿ. ಹೇಗೆ? ಮೋ : ನಮ್ಮದು ಉಷ್ಣವಲಯ. ಜೀವವೈವಿಧ್ಯ ಜಾಸ್ತಿ. ವಿಕಾಸವಾದ ಕೃಷಿವೈವಿಧ್ಯವೂ ವಿಭಿನ್ನ. ನೂರೆಂಟು ಬೆಳೆಗಳು, ಕೃಷಿ ವಿಧಾನಗಳು, ವಿಶಿಷ್ಟ ಕೃಷಿ ಸಂಸ್ಕೃತಿ ಇವೆಲ್ಲವೂ ಮೇಳೈಸಿದ ಸನ್ನಿವೇಶ ನಮ್ಮದು. ಆದರೆ ಕಾಲಾನುಕ್ರಮದಲ್ಲಿ ಜೀವವೈವಿಧ್ಯ ಕಡಿಮೆ ಇರುವಲ್ಲಿ ವಿಕಾಸವಾದ ಆಧುನಿಕ ಕೃಷಿ (ಅಧಿಕ ಜಾಗದಲ್ಲಿ ಏಕಬೆಳೆ, ರಾಸಾಯನಿಕ ಗೊಬ್ಬರ, ಕೀಟ ಹಾಗೂ ಕ್ರಿಮಿನಾಶಕಗಳ ಧಾರಾಳ ಬಳಕೆ) ಯನ್ನು ನಾವು ಅಳವಡಿಸಿಕೊಳ್ಳುತ್ತಾ ಸಾಗಿದ್ದೇವೆ. ಇದರ ದುಷ್ಪರಿಣಾಮಗಳು ಇಲ್ಲಿ ಮಾತ್ರವಲ್ಲ ಪಶ್ಚಿಮದಲ್ಲೂ ಸಾಕಷ್ಟು ಕಂಡುಬರುತ್ತಿವೆ. ಹಾಗಾಗಿ ನಾವು ಮೂಲಬೇರುಗಳನ್ನು ಅರಸಿ, ನಮ್ಮ ನೆಲದ ಸುಸ್ಥಿರ ಕೃಷಿಜ್ಞಾನದ ಮೇಲೆ ನಮ್ಮ ಮುಂದಿನ ಕೃಷಿ ಭವಿಷ್ಯವನ್ನು ಕಟ್ಟಬೇಕು. ಆ ನಿಟ್ಟಿನಲ್ಲಿ ಈ ಮಾಹಿತಿ ಖಜಾನೆ ಒಳ್ಳೆ ಕೊಡುಗೆ ಕೊಡಬಹುದು ಅಂದುಕೊಂಡಿದ್ದೇವೆ. ಈ ಜಾಲತಾಣದಲ್ಲಿ ಆಧುನಿಕ ಕೃಷಿಯ ಮಾಹಿತಿ ಇಲ್ಲವೇ? ಮೋ : ಇಲ್ಲ ಅನ್ನುವಂತಿಲ್ಲ. ಹಲವು ಕೃಷಿಲೇಖನಗಳಲ್ಲಿ ಅದು ಇರಬಹುದು. ಆದರೆ ಬಹುಮಟ್ಟಿಗೆ ಕೃಷಿಕರು ತಮ್ಮ ನೆಲದಲ್ಲಿ ಕಂಡುಕೊಂಡ ಸತ್ಯಗಳಿವೆ. ಕೃಷಿ ಕನ್ನಡ ಸುಧಾರಣೆ ಮತ್ತು ಇನ್ನೂ ಉಪಯೋಗಿ ಆಗಲು ಏನೇನು ಆಗಬೇಕಿದೆ? ಸೌಮೋ : ಅ) ನಮ್ಮ ಸಂಗ್ರಹದಲ್ಲಿ ಈಗಾಗಲೇ ಇರುವ ಕಡತಗಳನ್ನು ಅಳವಡಿಸಬೇಕಿದೆ. ಇನ್ನೂ ಹಲವಾರು ಮೂಲಗಳ ಮಾಹಿತಿ ಸೇರಿಕೊಳ್ಳಬೇಕು. ಈ ಮೂಲಗಳನ್ನು ಸಂಪರ್ಕಿಸುತ್ತಿದ್ದೇವೆ. ಆ) ಕೃಷಿಕರು ಹಾಗೂ ಸಂಬಂಧಿತ ರಂಗದವರು ತಮ್ಮಲ್ಲಿನ ಅಮೂಲ್ಯ ಮಾಹಿತಿಯನ್ನು ಸಾರ್ವಜನಿಕ ಬಳಕೆಗಾಗಿ ಈ ಜಾಲತಾಣಕ್ಕೆ ಕೊಡಬಹುದು (ಉದಾಹರಣೆಗೆ ಮಳೆಯ ದಾಖಲೆ, ಅಮೂಲ್ಯ ಕೃಷಿ ಹೊತ್ತಗೆಗಳು, ಕಸಿ ತಜ್ಞರ ಯಾದಿ ಇತ್ಯಾದಿ). ತಮ್ಮಲ್ಲಿನ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಮುಂದೆ ಬರಬಹುದು. ದ್ವಿಮುಖ ಸಂವಹನ ಅತ್ಯಗತ್ಯ. ಇ) ಜಾಲತಾಣದ ಹಲವು ಘಟಕಗಳನ್ನು ಇನ್ನಷ್ಟು ಬಳಕೆದಾರಸ್ನೇಹಿಯಾಗಿಸಲು ಕೆಲವು ತಾಂತ್ರಿಕ ಬದಲಾವಣೆ ಅಗತ್ಯ. ಈ ಕೆಲಸ ನಡೆಯುತ್ತಿದೆ. ಇದು ನಿರಂತರವಾಗಿ ನಡೆಯಬೇಕಾದದ್ದು ಅನ್ನಿ. ಹರಿದುಬರುವ ಜ್ಞಾನಪ್ರವಾಹ ಒಂದೆಡೆ ತುಂಬಲು ಕೆರೆ ಮಾಡಿದ್ದೀರಿ. ಇದರ ಸಂಗ್ರಹ ಸಾಮಥ್ರ್ಯ ಹೆಚ್ಚಬೇಕು, ತುಂಬುವ ಕೆಲಸ ಅವಿರತವಾಗಿ ನಡೆಯಬೇಕು. ಮುನ್ನಡೆಸಲು ಬೇಕಾದ ಶ್ರಮ, ಸಂಪನ್ಮೂಲ ದೊಡ್ಡದು. ಇದಕ್ಕೇನು ದಾರಿ ಕಂಡಿದ್ದೀರಿ? ನೀವು ಸಾಕಷ್ಟು ಅಂತರ್ಜಾಲಜಾಲಾಡುವವರು. ದೇಶದ ಬೇರೆ ಭಾಷೆಗಳಲ್ಲಿ ಈಮಣ್ಣಿನ ಜ್ಞಾನ ಒಂದೇ ಕಡೆ ಸಿಗುವಂತೆ, ಹುಡುಕಲುಆಗುವಂತೆ - ಮಾಡಿರುವುದನ್ನು ಕಂಡಿದ್ದೀರಾ?ಮೋ: ನಮ್ಮಲ್ಲಿನ ಕೃಷಿಜ್ಞಾನ ದೇಶದ ಅಸಂಖ್ಯಪ್ರಾದೇಶಿಕ ಭಾಷೆಗಳಲ್ಲಿ ಹುದುಗಿಕೊಂಡಿದೆ.ದುರದೃಷ್ಟವಶಾತ್ ಕೃಷಿಸಂವಹನಕ್ಕೆ ಇದುಬಹುದೊಡ್ಡ ತಡೆ. ಇತ್ತೀಚೆಗೆ ಅಂತರ್ಜಾಲದಲ್ಲಿಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಕೊಡುವಯತ್ನಗಳಾಗುತ್ತಿದೆ. ಆದರೂ, ನನಗೆ ಗೊತ್ತಿದ್ದಂತೆಕೃಷಿಯ ವಿಚಾರದಲ್ಲಿ ಇಂಥ ಯತ್ನ ನಡೆದಿಲ್ಲ.ಅಲ್ಲಲ್ಲಿ ಉತ್ಸಾಹಿಗಳ ಬ್ಲಾಗ್ಗೆಳು,  ಸ್ವಲ್ಪ ಮಟ್ಟಿಗೆ ಸಂವಹನ ನಡೆಸಿದ್ದರೂ,ಆಯಾ ನೆಲದ, ಪ್ರಾಯೋಗಿಕ ಕೃಷಿಯ ಅಗಾಧಮಾಹಿತಿಯನ್ನು ಒಂದೇ ಕಡೆ ಸಿಗುವಂತೆಮಾಡಿರುವುದು ಕಂಡಿಲ್ಲ. ಕರ್ನಾಟಕದ ವಿಶಿಷ್ಟಕೃಷಿಕಪರ ಪತ್ರಿಕೋದ್ಯಮ ಬಹುಶಃ ಬೇರೆಭಾಷೆಗಳಲ್ಲಿಲ್ಲದಿರುವುದೂ ಇದಕ್ಕೆ ಕಾರಣಇರಬಹುದು. ಆದರೆ ದೇಶದ ವಿವಿಧ ಭಾಗಗಳಲ್ಲಿಆಧುನಿಕ ಕೃಷಿಯ ಬಗ್ಗೆ ಅಸಂಖ್ಯ ಜಾಲತಾಣಗಳಿವೆ.ಅಲ್ಲಿ ಸಾಂಪ್ರದಾಯಿಕ ಕೃಷಿಯ ಪಳೆಯುಳಿಕೆಗಳುಸ್ವಲ್ಪ ಮಟ್ಟಿಗೆ ಕಾಣಸಿಗಬಹುದು.ಕರ್ನಾಟಕದ್ದು ವಿಶಿಷ್ಟ ಕೃಷಿಕಪರ ಪತ್ರಿಕೋದ್ಯಮಅಂದಿರಿ. ನಿಜಕ್ಕೂ ಹೌದೇ? ಹೇಗೆ?ಮೋ: ನಮ್ಮ ಕೃಷಿಶಿಕ್ಷಣದಲ್ಲಿ ‘ಲ್ಯಾಬ್ ಟುಲ್ಯಾಂಡ್’ ಕಲ್ಪನೆ ಇತ್ತೇ ವಿನಾ ‘ಲ್ಯಾಂಡ್ ಟು ಲ್ಯಾಬ್’ಯೋಚನೆ ಇರಲೇ ಇಲ್ಲ. ರೈತನಲ್ಲೂ ಜ್ಞಾನವಿದೆಅಂತ ಒಪ್ಪಿಕೊಳ್ಳುವುದೇ ಕಷ್ಟವಾಗಿತ್ತು. ಕೃಷಿಕರಿಗೆತಮ್ಮ ಸುಖದು:ಖ ಹೇಳಿಕೊಳ್ಳಲು ಸರಿಯಾದವೇದಿಕೆ ಇರಲಿಲ್ಲ. ಈಗ ಈ ಪರಿಕಲ್ಪನೆ ಬದಲಾಗಿದೆ.ರೈತಾಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿದೆ. ಇದಕ್ಕೆಮೂಲಕಾರಣ 90ರ ದಶಕದಿಂದೀಚೆಗೆನಡೆಯುತ್ತಿರುವ ಕೃಷಿಕಪರ ಪತ್ರಿಕೋದ್ಯಮಆಂದೋಲನ. ಕೃಷಿಕನನ್ನು ಕೇಂದ್ರವಾಗಿಟ್ಟುಕೊಂಡುಕೃಷಿಯ ಸಮಸ್ಯೆ, ಪರಿಹಾರ, ಅಭಿವೃದ್ಧಿಮುಂತಾದವನ್ನು ಚರ್ಚಿಸುವ ಸಂಪ್ರದಾಯ ಪೂರ್ತಿಅಲ್ಲವಾದರೂ ಗಮನಾರ್ಹವಾಗಿ ಬೆಳೆದಿದೆ.ಕೃಷಿಲೇಖನಗಳಲ್ಲೂ ಕೃಷಿಕಾಭಿಪ್ರಾಯಕ್ಕೇ ಮೊದಲ‘ನಮ್ಮ ಕೃಷಿಜ್ಞಾನಪ್ರಚರಿಸುವ ಖಜಾನೆ’‘ಕೃಷಿಕನ್ನಡ’ ಪರಿಕಲ್ಪನೆ ಡಾ. ಮೋಹನ್ತಲಕಾಲುಕೊಪ್ಪ ಅವರದಾದರೆ, ಕೃಷಿಕನ್ನಡದಚಾಲನೆ ಅವರ ಪತ್ನಿ ಸೌಖ್ಯ ಮೋಹನ್ರ್ದು.ಅಡಿಕೆ ಪತ್ರಿಕೆ ಈ ಎರಡೂ ವಿಚಾರಗಳ ಬಗ್ಗೆಇವರನ್ನು ಮಾತನಾಡಿಸಿತು.ಡಾ. ಮೋಹನ್ ಸೌಖ್ಯ ಮೋಹನ್ಜಾಲತಾಣ ಒಂದು ಹಂತಕ್ಕೆ ಬರಬೇಕಾದರೆಇನ್ನೂ 2 - 3 ವರ್ಷ ನಿರಂತರ ಕೆಲಸಮಾಡಬೇಕು. ಕನ್ನಡನಾಡಿನ ಸಹೃದಯರಉತ್ತೇಜನದಿಂದ ಇದು ಸಾಧ್ಯಎಂದು ನಂಬಿದ್ದೇವೆ.ಮಣೆ ಸಿಗುತ್ತಿದೆ. ಇದು ಬಹುದೊಡ್ಡ ಬದಲಾವಣೆ.ಕೃಷಿಯ ನಶಿಸಿ ಹೋಗುವ ಅನನ್ಯಜ್ಞಾನಪರಂಪರೆ ಬೇಕಾದಾಗ ಸುಲಭ ಹಾಗೂಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದೀರಿ. ಇದುಶ್ಲಾಘನೀಯ ಮಹತ್ಕಾರ್ಯ. ಈ ಯತ್ನ ಈ ಮಣ್ಣಿನಜ್ಞಾನಕ್ಕೆ ಹೆಚ್ಚಿನ ನ್ಯಾಯ, ಅಂಗೀಕಾರ ತಂದೀತುಎಂದು ನಿಮಗನಿಸುತ್ತದೆಯೇ? ಈ ಜಾಲತಾಣಏನೇನು ಪ್ರಯೋಜನ, ಬದಲಾವಣೆಗಳನ್ನುತರಬಲ್ಲುದು?ಮೋ: ಇನ್ನೂ ಮಾಡುವುದು ಸಾಕಷ್ಟಿದೆ.ಇನ್ನೂ ಹೆಚ್ಚಿನ ಅಂಗೀಕಾರ ಸಿಕ್ಕೇ ಸಿಗುತ್ತದೆ. ನಮ್ಮನೆಲದ ಜ್ಞಾನಾಧಾರಿತ ಕೃಷಿ ಸಂಶೋಧನೆಗೆ ಇದುಪ್ರಯೋಜಕ. ಬಹುತೇಕ ವಿಜ್ಞಾನಿಗಳು ತಮ್ಮಸಂಶೋಧನೆಯ ವಿವರ ಸಂಗ್ರಹಣೆಗೆ ಅಂತರ್ಜಾಲಅವಲಂಬಿಸುತ್ತಾರೆ. ಅವರು ಇಲ್ಲಿರುವ ಸಾಂಪ್ರದಾಯಿಕಕೃಷಿಯ ವಿವರ ಪಡೆದು ಆ ದಿಕ್ಕಿನಲ್ಲಿ ಸಂಶೋಧನೆಮಾಡುವ ಸಾಧ್ಯತೆ ಇದೆ. ಕೃಷಿಕರು ಮತ್ತುಕೃಷಿಸಂಬಂಧಿ ರಂಗದವರಿಗೆ ಎಲ್ಲೆಲ್ಲಿ ಏನೇನುನಡೆದಿದೆ, ನಡೆಯುತ್ತಿದೆ ಎನ್ನುವ ಮಾಹಿತಿ ಸುಲಭದಲ್ಲಿಲಭ್ಯ. ಇದರಿಂದ ತಮ್ಮ ಚಟುವಟಿಕೆಗಳನ್ನು ಸೂಕ್ತವಾಗಿಮಾರ್ಪಡಿಸಿಕೊಳ್ಳಲು ಅನುಕೂಲ. ಕೃಷಿ ಪತ್ರಕರ್ತರಿಗೆಒಂದು ವಿಷಯದ ಹಲವು ಮಗ್ಗುಲುಗಳನ್ನು ಅಧ್ಯಯನಮಾಡಲು ಅನುಕೂಲ. ಇದರಿಂದ ಪ್ರಾಯೋಗಿಕಕೃಷಿಯ ಮಾಹಿತಿಪೂರ್ಣ ಸಂವಹನ ಸಾಧ್ಯ.ಪಶ್ಚಿಮದ ಏಕರೂಪಿ ಕೃಷಿ ವಿಧಾನಗಳಿಗಿಂತನಮ್ಮದು ಉತ್ತಮ ಎಂದಿದ್ದೀರಿ. ಹೇಗೆ?ಮೋ : ನಮ್ಮದು ಉಷ್ಣವಲಯ. ಜೀವವೈವಿಧ್ಯಜಾಸ್ತಿ. ವಿಕಾಸವಾದ ಕೃಷಿವೈವಿಧ್ಯವೂ ವಿಭಿನ್ನ.ನೂರೆಂಟು ಬೆಳೆಗಳು, ಕೃಷಿ ವಿಧಾನಗಳು, ವಿಶಿಷ್ಟಕೃಷಿ ಸಂಸ್ಕೃತಿ ಇವೆಲ್ಲವೂ ಮೇಳೈಸಿದ ಸನ್ನಿವೇಶನಮ್ಮದು. ಆದರೆ ಕಾಲಾನುಕ್ರಮದಲ್ಲಿ ಜೀವವೈವಿಧ್ಯಕಡಿಮೆ ಇರುವಲ್ಲಿ ವಿಕಾಸವಾದ ಆಧುನಿಕ ಕೃಷಿ (ಅಧಿಕಜಾಗದಲ್ಲಿ ಏಕಬೆಳೆ, ರಾಸಾಯನಿಕ ಗೊಬ್ಬರ, ಕೀಟಹಾಗೂ ಕ್ರಿಮಿನಾಶಕಗಳ ಧಾರಾಳ ಬಳಕೆ) ಯನ್ನುನಾವು ಅಳವಡಿಸಿಕೊಳ್ಳುತ್ತಾ ಸಾಗಿದ್ದೇವೆ. ಇದರದುಷ್ಪರಿಣಾಮಗಳು ಇಲ್ಲಿ ಮಾತ್ರವಲ್ಲ ಪಶ್ಚಿಮದಲ್ಲೂಸಾಕಷ್ಟು ಕಂಡುಬರುತ್ತಿವೆ. ಹಾಗಾಗಿ ನಾವುಮೂಲಬೇರುಗಳನ್ನು ಅರಸಿ, ನಮ್ಮ ನೆಲದ ಸುಸ್ಥಿರಕೃಷಿಜ್ಞಾನದ ಮೇಲೆ ನಮ್ಮ ಮುಂದಿನ ಕೃಷಿಭವಿಷ್ಯವನ್ನು ಕಟ್ಟಬೇಕು. ಆ ನಿಟ್ಟಿನಲ್ಲಿ ಈ ಮಾಹಿತಿಖಜಾನೆ ಒಳ್ಳೆ ಕೊಡುಗೆ ಕೊಡಬಹುದುಅಂದುಕೊಂಡಿದ್ದೇವೆ.ಈ ಜಾಲತಾಣದಲ್ಲಿ ಆಧುನಿಕ ಕೃಷಿಯ ಮಾಹಿತಿಇಲ್ಲವೇ?ಮೋ : ಇಲ್ಲ ಅನ್ನುವಂತಿಲ್ಲ. ಹಲವುಕೃಷಿಲೇಖನಗಳಲ್ಲಿ ಅದು ಇರಬಹುದು. ಆದರೆಬಹುಮಟ್ಟಿಗೆ ಕೃಷಿಕರು ತಮ್ಮ ನೆಲದಲ್ಲಿ ಕಂಡುಕೊಂಡಸತ್ಯಗಳಿವೆ.ಕೃಷಿ ಕನ್ನಡ ಸುಧಾರಣೆ ಮತ್ತು ಇನ್ನೂಉಪಯೋಗಿ ಆಗಲು ಏನೇನು ಆಗಬೇಕಿದೆ?ಸೌಮೋ : ಅ) ನಮ್ಮ ಸಂಗ್ರಹದಲ್ಲಿಈಗಾಗಲೇ ಇರುವ ಕಡತಗಳನ್ನುಅಳವಡಿಸಬೇಕಿದೆ. ಇನ್ನೂ ಹಲವಾರು ಮೂಲಗಳಮಾಹಿತಿ ಸೇರಿಕೊಳ್ಳಬೇಕು. ಈ ಮೂಲಗಳನ್ನುಸಂಪರ್ಕಿಸುತ್ತಿದ್ದೇವೆ.ಆ) ಕೃಷಿಕರು ಹಾಗೂ ಸಂಬಂಧಿತರಂಗದವರು ತಮ್ಮಲ್ಲಿನ ಅಮೂಲ್ಯ ಮಾಹಿತಿಯನ್ನುಸಾರ್ವಜನಿಕ ಬಳಕೆಗಾಗಿ ಈ ಜಾಲತಾಣಕ್ಕೆಕೊಡಬಹುದು (ಉದಾಹರಣೆಗೆ ಮಳೆಯ ದಾಖಲೆ,ಅಮೂಲ್ಯ ಕೃಷಿ ಹೊತ್ತಗೆಗಳು, ಕಸಿ ತಜ್ಞರ ಯಾದಿಇತ್ಯಾದಿ). ತಮ್ಮಲ್ಲಿನ ಯಾವುದೇ ಮಾಹಿತಿಯನ್ನುಹಂಚಿಕೊಳ್ಳಲು ಮುಂದೆ ಬರಬಹುದು. ದ್ವಿಮುಖಸಂವಹನ ಅತ್ಯಗತ್ಯ.ಇ) ಜಾಲತಾಣದ ಹಲವು ಘಟಕಗಳನ್ನುಇನ್ನಷ್ಟು ಬಳಕೆದಾರಸ್ನೇಹಿಯಾಗಿಸಲು ಕೆಲವುತಾಂತ್ರಿಕ ಬದಲಾವಣೆ ಅಗತ್ಯ. ಈ ಕೆಲಸನಡೆಯುತ್ತಿದೆ. ಇದು ನಿರಂತರವಾಗಿನಡೆಯಬೇಕಾದದ್ದು ಅನ್ನಿ.ಹರಿದುಬರುವ ಜ್ಞಾನಪ್ರವಾಹ ಒಂದೆಡೆತುಂಬಲು ಕೆರೆ ಮಾಡಿದ್ದೀರಿ. ಇದರ ಸಂಗ್ರಹಸಾಮಥ್ರ್ಯ ಹೆಚ್ಚಬೇಕು, ತುಂಬುವ ಕೆಲಸಅವಿರತವಾಗಿ ನಡೆಯಬೇಕು. ಮುನ್ನಡೆಸಲು ಬೇಕಾದಶ್ರಮ, ಸಂಪನ್ಮೂಲ ದೊಡ್ಡದು. ಇದಕ್ಕೇನು ದಾರಿಕಂಡಿದ್ದೀರಿ?ಸೌಮೋ : ಮುಂದೆ ಹೋದಂತೆಲ್ಲಾ ಪಥಗೋಚರವಾಗಬಹುದು ಎಂದುಕೊಂಡಿದ್ದೇವೆ.ಜಾಲತಾಣ ಒಂದು ಹಂತಕ್ಕೆ ಬರಬೇಕಾದರೆ ಇನ್ನೂ2-3 ವರ್ಷ ನಿರಂತರ ಕೆಲಸ ಮಾಡಬೇಕು. ನಮ್ಮಅವಿರತ ಶ್ರಮವಂತೂ ಇದ್ದೇ ಇರುತ್ತದೆ.ಕನ್ನಡನಾಡಿನ ಸಹೃದಯ ವ್ಯಕ್ತಿ, ಸಂಘ ಸಂಸ್ಥೆಗಳಉತ್ತೇಜನದಿಂದ ಇದು ಸಾಧ್ಯ ಎಂದು ನಂಬಿದ್ದೇವೆ.ಅಡಿಕೆ ಪತ್ರಿಕೆ ï ಜೂನ್ 2013 ï ಪುಟ 05ಮುಖಪುಟ1995ರಲ್ಲಿ ಕೃಷಿ ಎಂಎಸ್ಸಿಗೆ ಸೇರಿದ್ದೆ. ಆಗ ನಮ್ಮಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಡಿಕೆ ಪತ್ರಿಕೆಯಿಂದ ಕೃಷಿ ಪತ್ರಿಕೋದ್ಯಮ ತರಬೇತಿ ನಡೆಯಿತು.ಮಲೆನಾಡಿನ ನನಗೆ ನಮ್ಮ ನೆಲದ ಕೃಷಿ, ಪರಿಸರಹಾಗೂ ಜೀವವೈವಿಧ್ಯದ ಬಗ್ಗೆ ಆಸಕ್ತಿ. ‘ಚಿಂತನಬಳಗ’ ವಿದ್ಯಾರ್ಥಿ ಒಕ್ಕೂಟದಲ್ಲಿ ಸಕ್ರಿಯಸದಸ್ಯನಾಗಿದ್ದೆ. ಪಠ್ಯದಲ್ಲಿದ್ದ ರಾಸಾಯನಿಕ ಕೃಷಿಗೆಪರ್ಯಾಯವಾಗಿ ಪರಿಸ್ನೇಹಿ ಕೃಷಿವಿಧಾನ,ಭಾರತೀಯ ಕೃಷಿ ಪರಂಪರೆಯ ಬಗ್ಗೆ ಚರ್ಚೆ.ಕೃಷಿಕರ, ಕೃಷಿಕಪರ ಪತ್ರಿಕೆಗಳ ಅಗಾಧ ಕೃಷಿಮಾಹಿತಿಯ ಸ್ಥೂಲ ಪರಿಚಯ.ಪಿ.ಹೆಚ್.ಡಿ.ಯ ನಂತರ ಅಶೋಕ ಪರಿಸರಸಂಶೋಧನಾ ಕೇಂದ್ರದಲ್ಲಿ ಕೆಲಸ. ಭಾರತೀಯಸಸ್ಯವೈವಿಧ್ಯ ಗಣಕೀಕರಣದ ಪ್ರಾಜೆಕ್ಟ್ನಕಸಮನ್ವಯಕಾರ. ನಮ್ಮ ಕೃಷಿ ಮಾಹಿತಿಯನ್ನೂಕಂಪ್ಯೂಟರೀಕರಿಸಬೇಕೆಂಬ ಕನಸು. ಈ ಬಯಕೆನಾಲ್ಕು ವರ್ಷಗಳ ಯತ್ನಈ ವಿಭಿನ್ನ ಯತ್ನ ಡಾ. ಮೋಹನ್ತಲಕಾಲುಕೊಪ್ಪ ಅವರ ಮಿದುಳಮರಿ. ‘ಕೃಷಿಕನ್ನಡ’ಜಾಲತಾಣದ ಹೊಳಹು ಮೂಡಿದ, ಬೆಳೆದುಬಂದನೇಪಥ್ಯದ ಕತೆಯನ್ನು ಅವರಿಲ್ಲಿ ವಿವರಿಸಿದ್ದಾರೆ.ಟ ಅಡಿಕೆ ಪತ್ರಿಕೆ ಬಳಗ‘ಕೃಷಿಕನ್ನಡ’ದ ಸಂಗ್ರಹದಲ್ಲಿಸುಮಾರು 15,000 ಕಡತಗಳಿವೆ.ವೃತ್ತಿಪರವಾಗಿ ಇಷ್ಟನ್ನು ಜಾಲತಾಣಕ್ಕೆಸೇರಿಸಲು 2-3 ವರ್ಷ ಬೇಕು. ದೊಡ್ಡಸಾಫ್ಟ್ವೇ0ರ್ ಕಂಪೆನಿ ಮಾಡುವಂತಹಕಾರ್ಯವನ್ನು ಲಾಭೋದ್ದೇಶವಿಲ್ಲದೆಮಾಡಿದ ತೃಪ್ತಿ ಇದೆ. ಮುಂದೆಮಾಡಬೇಕಾದದ್ದು ಬೆಟ್ಟದಷ್ಟಿದೆ !ಅಮೆರಿಕದ ಮಿಸ್ಸೋರಿ ಸಸ್ಯೋದ್ಯಾನದಸಸ್ಯಮಾಹಿತಿಯ ಗಣಕೀಕರಣ ನೋಡಿದ ಮೇಲೆತೀವ್ರವಾಯಿತು.ಶ್ರಮಭರಿತ ಜಾಲಾಟಕನಸಿಗೆ ವಾಸ್ತವಿಕ ಸ್ಪಷ್ಟತೆ ಸಿಕ್ಕಿದ್ದು ನಾಲ್ಕು ವರ್ಷಹಿಂದೆ. ಶೃಂಗೇರಿಯಲ್ಲೊಂದು ಜೀವವೈವಿಧ್ಯಕಾರ್ಯಾಗಾರ. ಸಾಧಾರಣವಾಗಿ ಜೀವವೈವಿಧ್ಯನಾಶಕ್ಕೆ ಬಹುಪಾಲು ಕಾರಣ ಕೃಷಿ ಅಂತ ದೂರುತ್ತಾರೆ.ಆದರೆ ನನಗೇಕೋ ಕೃಷಿ, ಕೃಷಿಕರಿಂದಉಳಿಯುತ್ತಿರುವ ಜೀವವೈವಿಧ್ಯದ ಮೇಲೆ ಬೆಳಕುಚೆಲ್ಲೋಣ ಅನಿಸಿತು.ಕಾರ್ಯಾಗಾರಕ್ಕೆ ಪ್ರಸ್ತುತಿಯ ವಿಷಯಕಳುಹಿಸಲು ಮೂರೇ ದಿನವಿತ್ತು. ನಾನು ಆಯ್ದವಿಷಯದ ಸಂಗ್ರಹಕ್ಕೆ ನೆರವಾದದ್ದು ಅಡಿಕೆ ಪತ್ರಿಕೆ.ಒಂದೊಂದೇ ಸಂಚಿಕೆ ತಿರುವುತ್ತಾ ಹೋದೆ. ಮೂರುದಿನದಲ್ಲಿ ಸಾಕಷ್ಟು ವಿಷಯ ಸಿಕ್ಕಿತು. ‘ಇವೆಲ್ಲ ಲೇಖನಗಳೂ ಒಂದೇ ಕಡೆ,ಕಂಪ್ಯೂಟರಿನಲ್ಲಿ ಸುಲಭದಲ್ಲಿ ಹುಡುಕುವಂತೆ ಸಿಕ್ಕಿದ್ದರೆ’ಎನಿಸಿತು. ಇದನ್ನು ಹೇಗೆ ಮಾಡಬಹುದು? ಮೊದಲಹೆಜ್ಜೆಯಾಗಿ ಅಂತರ್ಜಾಲ ಹುಡುಕಿದಾಗ ಪಿಡಿಎಫ್ಕಡತವೇ ಸೂಕ್ತ ಅನಿಸಿತು. ಅಡಿಕೆ ಪತ್ರಿಕೆಯ ಹಳೆಸಂಚಿಕೆಗಳನ್ನು ಸ್ಕ್ಯಾನ್ ಮಾಡತೊಡಗಿದೆ.ಕಡತ ಸಂಚಯ !ಈ ನಡುವೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆಯವರನ್ನು ಭೇಟಿಯಾಗಿದ್ದೆ. ಪ್ರಾಥಮಿಕ ಹಂತದಹುಡುಕುವ ವ್ಯವಸ್ಥೆ ಹಾಗೂ ಕಡತ ಸಂಗ್ರಹತೋರಿಸಿದೆ. ಉತ್ತೇಜಕರ ಪ್ರತಿಕ್ರಿಯೆ ಸಿಕ್ಕಿತು.ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಹಳೆ ಸಂಚಿಕೆ ಕಳಿಸಿಕೊಟ್ಟರು. ಸುಜಾತ ಸಂಚಿಕೆಯಸಹಸಂಪಾದಕ ರಾಧಾಕೃಷ್ಣರೂ ಹಳೆ ಸಂಚಿಕೆ ಕೊಟ್ಟುಸಹಕರಿಸಿದರು.ಕೆಲಸ ಮುಂದುವರಿದು ಸುಮಾರು ಹತ್ತುಸಾವಿರಲೇಖನಗಳ ಕಡತಗಳು ತಯಾರಾದುವು.ಬೆಂಗಳೂರಿನ ಸಹಜ ಸಾಗುವಳಿ, ಬೈಫ್ನುಸಿರಿಸಮೃದ್ಧಿ, ಕನ್ನಡಪ್ರಭದ ಕೃಷಿ ಲೇಖನಗಳನ್ನೂಬಳಸಿಕೊಳ್ಳಲು ಒಪ್ಪಿಗೆ ಸಿಕ್ಕಿತು.ಮೊದಲೆಲ್ಲಾ ಅಗಾಧ ಪ್ರಮಾಣದ ಕಡತಗಳನ್ನುಹಾಗೂ ಅವುಗಳನ್ನು ಹುಡುಕುವ ತಂತ್ರಾಂಶವನ್ನುಸಿಡಿಯಲ್ಲಿ ಅಳವಡಿಸಿ ಹಂಚುತ್ತಿದ್ದರು ಕ್ರಮೇಣಅಂತರ್ಜಾಲದಲ್ಲೇ ಈ ವ್ಯವಸ್ಥೆಯ ಸೌಲಭ್ಯ ಬಂತು.ಅಂತರ್ಜಾಲದಲ್ಲಾದರೆ ಬಳಕೆದಾರನಿಗೆ ಮಾಹಿತಿನವೀಕರಣ ಆದ ತಕ್ಷಣವೇ ಲಭ್ಯವಾಗುತ್ತದೆ.ಸಂವಹನದಲ್ಲಿ ಬಳಕೆದಾರನೂಭಾಗಿಯಾಗಬಹುದು.ಇವನ್ನೆಲ್ಲಾ ಯೋಚಿಸಿ ಜಾಲತಾಣವನ್ನೇರೂಪಿಸಬೇಕು ಅಂದುಕೊಂಡೆ. ಅಗಾಧಮಾಹಿತಿಯನ್ನು ಜಾಲತಾಣದಲ್ಲಿ ಅಳವಡಿಸಲುಅಂತರ್ಜಾಲದಲ್ಲಿ ಹೆಚ್ಚಿನ ಸ್ಥಳ ಬೇಕು. ವಿನ್ಯಾಸನೆನಪಿನ ಸುರುಳಿ ಬಿಚ್ಚುತ್ತಿರುವ ಡಾ. ಮೋಹನ್ಹಾಗೂ ನಿರ್ವಹಣೆಗೆ ಪ್ರತ್ಯೇಕ ದೊಡ್ಡ ವೆಚ್ಚಬರುತ್ತದೆ. ವಿಟಮಿನ್ ಎಂ ಎಲ್ಲಿಂದ?ಸ್ಥಳೀಯ ಪೆÇೀಷಣೆಶುರುವಿಗೆ ಆರ್ಥಿಕ ಸಹಾಯ ಮಾಡುವ ಹಲವುರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳನ್ನುಸಂಪರ್ಕಿಸಿದೆ. ಎಲ್ಲರೂ ‘ಪರಿಕಲ್ಪನೆ ಚೆನ್ನಾಗಿದೆಆದರೆ ನಮ್ಮ ಕಾರ್ಯಕ್ಷೇತ್ರದಲ್ಲಿಲ್ಲ’ ಎಂದೋ, ‘ಇದುಕರ್ನಾಟಕಕ್ಕೆ ಸೀಮಿತ, ಹೊರಗಡೆಗೆಉಪಯೋಗವಿಲ್ಲ’ ಎಂದೋ ಹೇಳಿ ಕೈ ಚೆಲ್ಲಿದರು.ಕೃಷಿಕರಿಗೆ ಸ್ವಲ್ಪವೂ ಉಪಯೋಗವಿಲ್ಲದಎಷ್ಟೋ ಪ್ರಾಜೆಕ್ಟ್ಗತಳಿಗೆ ಕೋಟಿಗಟ್ಟಲೆ ಹಣಸಂದಾಯವಾಗುತ್ತದೆ! ಆದರೆ ಕೃಷಿಕಸ್ನೇಹಿವ್ಯವಸ್ಥೆಯನ್ನು ಇವರು ಅರ್ಥಮಾಡಿಕೊಳ್ಳುತ್ತಿಲ್ಲವಲ್ಲಾಅಂತ ಬೇಸರವಾಯಿತು. ಹೊರಗಿನ ದೊಡ್ಡಸಂಸ್ಥೆಗಳ ಸಹಾಯ ಭ್ರಮೆ ಎಂದುಮನವರಿಕೆಯಾಯಿತು. ಇದು ಸ್ಥಳೀಯರಿಂದಲೇಬೆಳೆಯಬೇಕಾದ ಯತ್ನ ಎನಿಸಿತು.ಜಾಲತಾಣ ಶುರುವಾದ ಎರಡು ವರ್ಷಅಡಿಕೆ ಪತ್ರಿಕೆ ï ಜೂನ್ 2013 ï ಪುಟ 06ಮುಖಪುಟಮಾಹಿತಿ ಹುಡುಕಾಟ ಘಟಕ ‘ಕೃಷಿಕನ್ನಡ’ದಜೀವಾಳ. ಇದರಲ್ಲಿ ಸಾಮಾನ್ಯ ಹಾಗೂ ನಿರ್ದಿಷ್ಟ- ಹೀಗೆ ಹುಡುಕಾಟಕ್ಕೆ ಎರಡು ವಿಭಾಗಗಳಿವೆ.ಮೊದಲನೆಯದರಲ್ಲಿ ನಿಮಗೆ ಯಾವ ವಿಷಯಬೇಕೋ ಅದರ ಪದಗಳನ್ನು ಬಳಸಿಹುಡುಕಬಹುದು. ನಿರ್ದಿಷ್ಟ ಹುಡುಕಾಟದಲ್ಲಿ ಬೆಳೆ,ವಿಷಯ, ಮೂಲ, ಲೇಖಕ, ವಲಯ, ಜಿಲ್ಲೆ,ತಾಲ್ಲೂಕು, ವರ್ಷ ಮುಂತಾದ ಕ್ಷೇತ್ರಗಳಿವೆ. ಇಲ್ಲಿಯಾವ ರೀತಿಯ ಸಂಯೋಜನೆ ಮಾಡಿಯಾದರೂಹುಡುಕಬಹುದು.ಉದಾಹರಣೆಗೆ ‘ಬಾಳೆ’ ಆಯ್ಕೆ ಮಾಡಿಹುಡುಕಿದರೆ ಬಾಳೆಗೆ ಸಂಬಂಧಪಟ್ಟ ಎಲ್ಲಾಲೇಖನಗಳು ಲಭ್ಯ. ಅದೇ (‘ಬೆಳೆ’ಯಲ್ಲಿ) ‘ಬಾಳೆ’- (‘ವಿಷಯ’ದಲ್ಲಿ) ‘ಕೃಷಿ’ ಆಯ್ಕೆ ಮಾಡಿಹುಡುಕಿದರೆ ಬಾಳೆ ಕೃಷಿಗೆ ಸಂಬಂಧಪಟ್ಟಲೇಖನಗಳು ಮಾತ್ರ ಸಿಗುತ್ತವೆ. ಆದರೆ(‘ಬೆಳೆ’ಯಲ್ಲಿ) ‘ಬಾಳೆ’, (‘ವಿಷಯ’ದಲ್ಲಿ) ‘ಕೃಷಿ’ಮತ್ತು (‘ವರ್ಷ’ದಲ್ಲಿ)’ ‘1997’ ಅಂತ ಸಂಯೋಜಿತಆಯ್ಕೆ ಮಾಡಿದರೆ, ಆ ನಿರ್ದಿಷ್ಟ ವರ್ಷದಲ್ಲಿ ಬಾಳೆಕೃಷಿಯಲ್ಲಿ ಬಂದಿರುವ ಲೇಖನಗಳು ಮಾತ್ರಸಿಗುತ್ತವೆ.ಯಾವುದೇ ಹಂತದಲ್ಲಿ ಆಯ್ಕೆಯನ್ನು ನಿಲ್ಲಿಸಿ‘ಹುಡುಕು’ ಗುಂಡಿಯನ್ನು ಒತ್ತಿ ನಿಮಗೆ ಬೇಕಾದಸಂಯೋಜನೆಗೆ ಸಂಬಂಧಪಟ್ಟ ಲೇಖನಗಳನ್ನುದಿಂದೀಚೆಗೆ ಉಸ್ತುವಾರಿಯನ್ನು ನನ್ನ ಪತ್ನಿ ಸೌಖ್ಯಮೋಹನ್ ವಹಿಸಿಕೊಂಡಿದ್ದಾರೆ. ಒಳ್ಳೆ ಕೆಲಸಕ್ಕೆಎಲ್ಲಿಂದಾದರೂ ಸಹಾಯ ಒದಗುತ್ತದಂತೆ! ಸೌಖ್ಯಹೇಳುತ್ತಾರೆ, “ಅದಿತಿ ಸಾವಯವ ದೃಢೀಕರಣಸಂಸ್ಥೆಯ ನಾರಾಯಣ ಉಪಾಧ್ಯಾಯ, ಶಿರಸಿಅರಣ್ಯ ಕಾಲೇಜಿನ ಡಾ. ವಾಸುದೇವ, ಬೆಂಗಳೂರುಗ್ರೀನ್ಪಾಾತ್ನಯ ಜಯರಾಂ, ಶಿರಸಿಯ ಟಿಎಸ್ಎನಸ್,ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಗಳ ಸಹಾಯಸಿಕ್ಕಿದೆ.” ಈ ಕೆಲಸ ಲಕ್ಷಗಳ ಲೆಕ್ಕಾಚಾರದಲ್ಲಿ ಅಲ್ಲ,ಹನಿಹನಿಗೂಡಿ ಆದದ್ದು!ಅತಿ ಕಡಿಮೆ ವೆಚ್ಚದಲ್ಲಿ ಅಗಾಧ ಮಾಹಿತಿಅಳವಡಿಸಲು ಅನುಕೂಲವಾಗುವಂತೆಜಾಲತಾಣವನ್ನು ಸುಂದರವಾಗಿ ರೂಪಿಸಿದ್ದು ಇಷ್ಟಗ್ರಾಫಿಕ್ಸ್ನಿ ಹಿರಿಮೆ. ವಿನ್ಯಾಸ, ಮಾಹಿತಿ ಪರಿಷ್ಕರಣೆ,ಅಳವಡಿಕೆ ಮತ್ತು ಪರೀಕ್ಷೆ ಬಹಳಷ್ಟು ಸಮಯಬೇಡಿತು. ಈ ಕೆಲಸ ನಾಲ್ಕು ವರ್ಷ ಬಿಡುವಿನವೇಳೆಯಲ್ಲಿ ನಡೆದಿದೆ. ನಡುವೆ ಕುಟುಂಬಕ್ಕೂಸಾಕಷ್ಟು ಸಮಯ ಕೊಡಲಾಗಲಿಲ್ಲ. “ಕೆಲಸಆರಂಭಿಸಿದಾಕ್ಷಣ ಯಶಸ್ಸು ಸಿಗುವುದಿಲ್ಲ. ಇನ್ನೇನುಗೆಲುವು ಸಿಗುತ್ತದೆ ಎನ್ನುವಾಗ ಸುಸ್ತಾಗಿಕೈಬಿಡುವವರೇ ಜಾಸ್ತಿ. ಆ ಘಟ್ಟವನ್ನೂ ಸಹಿಸಿಮುಂದುವರಿದವರು ಯಶಸ್ವಿಯಾಗುತ್ತಾರೆ” ಎಂಬನಂಬಿಕೆ. ಜಾಲತಾಣದ ಉಪಯುಕ್ತತೆಯ ಮೇಲೆಅದರ ಯಶಸ್ಸು ನಿಂತಿದೆ.ಭಾಷಾ ಸಮಸ್ಯೆನಮ್ಮ ಅನನ್ಯ ಕೃಷಿಜ್ಞಾನದ ಬಗ್ಗೆ ರಾಜ್ಯದಹೊರಗೂ ತಿಳಿಯಬೇಕಾದರೆ ಇಂಗ್ಲಿಷ್ಅನಿವಾರ್ಯ. ಕೆಲವೊಂದು ತಲೆಬರಹ,ವಿವರಣೆಗಳನ್ನು ಮಾತ್ರ ದ್ವಿಭಾಷೆಯಲ್ಲಿ ಕೊಟ್ಟಿದ್ದೇವೆ.ಪಡೆಯಬಹುದು. ಜೊತೆಗೆ ಯಾವಅನುಕ್ರಮದಲ್ಲಾದರೂ ಸಂಯೋಜನೆ ಮಾಡಿ (ವರ್ಷಮೊದಲು, ನಂತರ ಬೆಳೆ, ನಂತರ ಲೇಖಕ ಹೀಗೆ)ಲೇಖನಗಳನ್ನು ಪಡೆಯಬಹುದು.ಇಲ್ಲಿ ನೀವು ಕ್ಷೇತ್ರವೊಂದನ್ನು ಆಯ್ಕೆಮಾಡಿದಾಗಲೆಲ್ಲ ತಂತ್ರಾಂಶ ಆಯಾ ಕ್ಷೇತ್ರಕ್ಕೆಸಂಬಂಧಪಟ್ಟ ಮಾಹಿತಿಯನ್ನು ತರುತ್ತದೆ.ಉದಾಹರಣೆಗೆ ನೀವು ‘ಲೇಖಕ’ದಲ್ಲಿ ‘ಬಾಲಚಂದ್ರಹೆಗಡೆ ಸಾಯಿಮನೆ’ ಎಂದು ಆಯ್ಕೆ ಮಾಡಿದರೆತಂತ್ರಾಂಶ ಅವರು ಬರೆದಿರುವ ಎಲ್ಲಾ ಲೇಖನಗಳಿಗೆಸಂಬಂಧಪಟ್ಟ ಬೆಳೆ, ಮೂಲ, ಪ್ರದೇಶಗಳನ್ನು ಇತರಕ್ಷೇತ್ರಗಳಿಗೆ ತರುತ್ತದೆ.ನಂತರ ನೀವು ‘ಬೆಳೆ’ಯಲ್ಲಿ ‘ಹಲಸು’ ಎಂದುಆಯ್ಕೆ ಮಾಡಿದರೆ, ತಂತ್ರಾಂಶ ಬಾಲಚಂದ್ರ ಹೆಗಡೆ,ಹಲಸು ಇವೆರಡಕ್ಕೆ ಮಾತ್ರ ಸೀಮಿತವಾದಮಾಹಿತಿಯನ್ನು ಉಳಿದ ಕ್ಷೇತ್ರಗಳಿಗೆ ತರುತ್ತದೆ.ಹೀಗೆಯೇ ಪ್ರತಿಯೊಂದು ಕ್ಷೇತ್ರವನ್ನು ಆಯ್ಕೆಮಾಡಿದಾಗಲೆಲ್ಲ ತಂತ್ರಾಂಶ ಈ ಪ್ರಕ್ರಿಯೆಯನ್ನುಮುಂದುವರಿಸುತ್ತದೆ. ಹಾಗಾಗಿ ನಿರ್ದಿಷ್ಟಸಂಯೋಜನೆಗೆ ಸಂಬಂಧಪಟ್ಟ ಕಡತವನ್ನುಪಡೆಯಲು ಅನುಕೂಲ.ಕಡತಗಳು ಪಿಡಿಎಫ್ ಮಾದರಿಯಲ್ಲಿದೊರೆಯುತ್ತವೆ. ಇವನ್ನು ನಿಮ್ಮ ಗಣಕದಲ್ಲಿಉಳಿಸಿಕೊಂಡು ಬೇಕಾದಾಗ (ಅಂತರ್ಜಾಲದಸೌಲಭ್ಯವಿಲ್ಲದಿದ್ದರೂ) ನೋಡಬಹುದು.ಇ-ಮಾರುಕಟ್ಟೆಈ ಘಟಕ ಬಳಕೆದಾರ ಹಾಗೂ ಉತ್ಪಾದಕನನ್ನುಬೆಸೆಯುವ ಉದ್ದೇಶದಿಂದ ಹುಟ್ಟಿಕೊಂಡದ್ದು. ಇಲ್ಲಿನೀವು ಮೊದಲು ಉತ್ಪಾದಕ/ಬಳಕೆದಾರಆಯ್ಕೆಯನ್ನು ಮಾಡಬೇಕು. ನಂತರ ನೀವುಹುಡುಕುತ್ತಿರುವ ಉತ್ಪನ್ನದ ವಿಭಾಗವನ್ನು (ತಾಜಾಉತ್ಪನ್ನ ಅಂದರೆ ತರಕಾರಿ, ಹಣ್ಣು ಇತ್ಯಾದಿ,ಯಂತ್ರೋಪಕರಣಗಳು, ಗೊಬ್ಬರ ಹಾಗೂಸಸ್ಯವರ್ಧಕಗಳು ಹೀಗೆ) ಆಯ್ಕೆ ಮಾಡಬೇಕು.ನಂತರ ಈ ವಿಭಾಗಕ್ಕೆ ಸಂಬಂಧಪಟ್ಟ ವಿಸ್ತೃತಮಾಹಿತಿಯನ್ನು ಕೊಡಬೇಕು (ಯಂತ್ರೋಪಕರಣಆಯ್ಕೆ ಮಾಡಿದರೆ ಕಳೆ ಕೊಚ್ಚುವ ಯಂತ್ರ ಅಂತಕೊಡಬಹುದು).ನಂತರ ನಿಮಗೆ ಬೇಕಾದ ಜಿಲ್ಲೆ, ತಾಲೂಕು,ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಅಲ್ಲಿರುವಉತ್ಪಾದಕ/ಬಳಕೆದಾರರ ಮಾಹಿತಿ ಪಡೆಯಬಹುದು.ಇಲ್ಲೂ ಕೂಡಾ ನೀವು ಯಾವುದೇ ಹಂತದಲ್ಲಿಆಯ್ಕೆ ಸಂಯೋಜನೆಯನ್ನು ನಿಲ್ಲಿಸಿಹುಡುಕಬಹುದು.ಕೊನೆಯಲ್ಲಿ ಬರುವ ಮಾಹಿತಿ ಅವರ ವಿಳಾಸ,ಫೆÇೀನ್ ನಂಬರ್, ಉತ್ಪನ್ನ ಎಷ್ಟಿದೆ ಎಂಬ ವಿವರ,ದರ ಹಾಗೂ ಅದು ಸಿಗುವ ಸಮಯವನ್ನುಒಳಗೊಂಡಿರುತ್ತದೆ.ಜಾಲತಾಣದ ಅತಿ ಮುಖ್ಯ ಎರಡುಘಟಕಗಳನ್ನು ಬಳಸುವ ರೀತಿಯ ಬಗ್ಗೆ ಮಾತ್ರಇಲ್ಲಿ ವಿವರಿಸಿದ್ದೇವೆ. ಉಳಿದ ಘಟಕಗಳಿಗೋ?ಒಳ ಹೋಗಿ, ನೀವೇ ಪರೀಕ್ಷಿಸಿ ನೋಡಿ. vಬಳಸುವುದು ಹೀಗೆ...ಕಡತಗಳು ಕನ್ನಡದಲ್ಲಿದ್ದರೂ ಜಾಲತಾಣದಲ್ಲಿಹುಡುಕುವಾಗ ಬೇಕಾಗುವ ಈ ಕಡತಗಳವಿವರಗಳನ್ನು (ಅಂದರೆ ಕಡತದ ಹೆಸರು, ಲೇಖಕ,ವಿಷಯ ಇತ್ಯಾದಿ) ಸಂಪೂರ್ಣ ಹಾಗೂ ಸಮರ್ಪಕಕನ್ನಡದಲ್ಲಿ ಕೊಡಲು ಗೂಗಲ್ ಭಾಷಾಂತರಸಹಾಯಕ್ಕೆ ಬರಲಿಲ್ಲ. ಅಗಾಧ ಮಾಹಿತಿಯನ್ನುಕಂಪ್ಯೂಟರಿಗೆ ಕನ್ನಡ-ಇಂಗ್ಲಿಷ್ಗಬಳಲ್ಲಿ ಪ್ರತ್ಯೇಕವಾಗಿಉಣಿಸುವುದು ಪ್ರಾಯೋಗಿಕವಲ್ಲ. ಭಾಷಾಂತರತಂತ್ರಾಂಶದಲ್ಲಿ ಸುಧಾರಣೆಯಾದಂತೆ ಈ ಸಮಸ್ಯೆಪರಿಹಾರವಾಗಬಹುದು.ಬೆಟ್ಟದಷ್ಟು ಬಾಕಿ!‘ಕೃಷಿಕನ್ನಡ’ದ ಸಂಗ್ರಹದಲ್ಲಿ ಸುಮಾರು 15,000ಕಡತಗಳಿವೆ. ವೃತ್ತಿಪರವಾಗಿ ಇಷ್ಟನ್ನು ಜಾಲತಾಣಕ್ಕೆಸೇರಿಸಲು 2 - 3 ವರ್ಷ ಬೇಕು. ದೊಡ್ಡಸಾಫ್ಟ್ವೇ ರ್ ಕಂಪೆನಿ ಮಾಡುವಂತಹ ಕಾರ್ಯವನ್ನು ಲಾಭೋದ್ದೇಶವಿಲ್ಲದೆ ಮಾಡಿದ ತೃಪ್ತಿ ಇದೆ.ಮುಂದೆ ಮಾಡಬೇಕಾದದ್ದು ಬೆಟ್ಟದಷ್ಟಿದೆ! ಕೃಷಿಮತ್ತು ಸಂಬಂಧಿತ ರಂಗಗಳವರ ಮಾಹಿತಿಯಹಸಿವೇ ಈ ಜಾಲತಾಣವನ್ನು ಮುನ್ನಡೆಸುತ್ತದೆ.‘ಕೃಷಿಕನ್ನಡ’ ಸದಾ ಹೊಸತನ್ನು ಅಳವಡಿಸುತ್ತಾಹೋಗುತ್ತದೆ. ಹೋಗುತ್ತಲೇ ಇರುತ್ತದೆ”.

ಮೂಲ : ಅಡಿಕೆ ಪತ್ರಿಕೆ

ಕೊನೆಯ ಮಾರ್ಪಾಟು : 6/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate