ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮಿತಿ

ಸಮಿತಿ ಸಭೆ ವಿಚಾರಗಳ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಸಮಿತಿ ಸಭೆ ವಿಚಾರಗಳು

ಕಾರ್ಯಕಾರಿ ಸಮಿತಿ ಸಭೆ ನಡೆಸುವುದು ಹೇಗೆ?

 • ಕಾರ್ಯಕಾರಿ ಸಮಿತಿ ಪ್ರತಿ ವಾರ ಸಭೆ ಸೇರಬೇಕು.
 • ಕಾರ್ಯಕಾರಿ ಸಮಿತಿ ಒಟ್ಟು ಸದಸ್ಯರು 11 ಇದ್ದಲ್ಲಿ ಕನಿಷ್ಟ 7(ಕೋರಂ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು 15 ಇದ್ದಲ್ಲಿ ಕನಿಷ್ಟ 9(ಕೋರಂ) ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು.
 • ಕೋರಂನ ಶೇಕಡ 50 ರಷ್ಟು ಮಹಿಳಾ ಸದಸ್ಯರ ಹಾಜರಾತಿ ಇರಬೇಕು.
 • ಅಧ್ಯಕ್ಷರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಸಭೆ ನಡೆಸುತ್ತಾರೆ.
 • ಸಭೆಯ ಪ್ರತಿ ತೀರ್ಮಾನಗಳನ್ನು ತೀರ್ಮಾನ ಪುಸ್ತಕದಲ್ಲಿ ಬರೆಯಬೇಕು.
 • ತೀರ್ಮಾನ ಪುಸ್ತಕದಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಸಹಿ ಮಾಡಬೇಕು.
 • ಸಭೆಯಲ್ಲಿ ಮುಖ್ಯವಾಗಿ ಕ್ರಿಯಾ ಯೋಜನೆ, ಆಗಬೇಕಾಗಿರುವ ಕೆಲಸ, ಖರೀದಿ, ಆಗಿರುವ ಕೆಲಸಗಳ ಗುಣಮಟ್ಟದ ಬಗ್ಗೆ ಚರ್ಚೆ ಮತ್ತು ಅದರ ಅನುಮೋದನೆ ಹಾಗೂ ಬಟವಾಡೆ ಇತ್ಯಾದಿ ವಿಷಯಗಳನ್ನು ಚರ್ಚಿಸಿ ತೀರ್ಮಾನಿಸಲಾಗುತ್ತದೆ.
 • ಸಭೆಯಲ್ಲಿ ಆದ ಎಲ್ಲಾ ಹಣಕಾಸು ವ್ಯವಹಾರವನ್ನು ವಿವರವಾಗಿ ಚರ್ಚಿಸಿ ಆ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬೇಕು. ಕಾರ್ಯಕಾರಿ ಸಮಿತಿ ಸಭೆಯನ್ನು ಪ್ರತಿ ವಾರ ತಪ್ಪದೇ ನಡೆಸುವುದರಿಂದ ಕ್ರಿಯಾ ಯೋಜನೆಯನ್ನು ಬೇಗನೆ ಅನುಷ್ಠಾನ ಮಾಡಬಹುದು. ಆಗಿರುವ ಕೆಲಸಗಳಿಗೆ ಬೇಗ ಬಟವಾಡೆ ಆಗಬೇಕು. ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ ಸದಸ್ಯರಿಗೆ ಅನುಕೋಲಕರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಮಿತಿ ಸಭೆಯಿಂದ ಸಾದ್ಯವಾಗುತ್ತದೆ.
 • ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಜಲಾನಯನ ಸಮಿತಿ / ಕಾರ್ಯಕಾರಿ ಸಮಿತಿ ಸದಸ್ಯರಿಗೆ ಇ1, ಇ2, ಇ3 ತರಬೇತಿ ಒಟ್ಟಾರೆ 3 ದಿನಗಳಿಗೆ ಸರ್ಕಾರೇತರ ಸಂಸ್ಥೆ ಇಲಾಖೆಯೊಂದಿಗೆ ಜೊತೆಗೂಡಿ ಜಲಾನಯನ ಸಮಿತಿ ನಿರ್ವಹಿಸುವ ಕಾರ್ಯಗಳು, ಲೆಕ್ಕ ಪತ್ರ ನಿರ್ವಹಣೆ, ಕಾಮಗಾರಿಗಳಿಗೆ ಪಾವತಿ, ಯೋಜನಾ ಅವಧಿಯಲ್ಲಿ ಸೃಷ್ಟಿಸುವ ಕಾಮಗಾರಿಗಳ ನಿರ್ವಹಣೆ, ನಾಯಕತ್ವದ ಮಹತ್ವ ಇತ್ಯಾದಿ ಕುರಿತು ತರಬೇತಿ ನೀಡಲಾಗುತ್ತದೆ. ಸಮೀಪ ಇರುವ ಸುಜಲ ಜಲಾನಯನಗಳಿಗೆ ಕಾರ್ಯಕಾರಿ ಸಮಿತಿಯ ಚಟುವಟಿಕೆಗಳನ್ನು ನೋಡಲು ಹಾಗೂ ಉತ್ತಮ ಅಂಶಗಳನ್ನು ಕಲಿಯಲು 2 ದಿನಗಳ ಕಲಿಕಾ ಪ್ರವಾಸವನ್ನು ಜಲಾನಯನ ತಂಡದ ಮುಖ್ಯಸ್ಥರು ಸರ್ಕಾರೇತರ ಸಂಸ್ಥೆಗಳೊಂದಿಗೆ ಮತ್ತು ಜಲಾನಯನ ಸಮಿತಿಯೊಂದಿಗೆ ಚರ್ಚಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.
 • ಜೀವನಾಧಾರದ ಕಾರ್ಯಕ್ರಮದಡಿಯಲ್ಲಿ ತೆಗೆದುಕೊಳ್ಳುವ ಆದಾಯ ಉತ್ಪನ್ನ ಚಟುವಟಿಕೆಗಳ ಪೈಕಿ ಜಾನುವಾರು ಘಟಕಕ್ಕೆ ಸಂಬಂಧಿಸಿದಂತೆ ಜಾನುವಾರುಗಳ ಪೋಷಣೆ, ನಿರ್ವಹಣೆ ಸ್ಥಳೀಯವಾಗಿ ಜಾನುವಾರು ಕೊಂಡಾಗ ಒಂದು ದಿನದ ತರಬೇತಿ ಮತ್ತು ನಂತರದ ದಿನಗಳಲ್ಲಿ ಮತ್ತೊಂದು ದಿನ ತರಬೇತಿ (ವಿಬಿಟಿ-1 ಹಾಗೂ ವಿಬಿಟಿ-2)ಗಳನ್ನು ಫಲಾನುಭವಿಗಳಿಗೆ ಜಾನುವಾರು ಘಟಕದಿಂದ (ಇಲಾಖೆ ಅಧಿಕಾರಿಗಳು) ಏರ್ಪಡಿಸುತ್ತಾರೆ. ಇದಕ್ಕೆ ಪೂರಕವಾಗಿ ಒಂದು ದಿನದ ಕಲಿಕಾ ಪ್ರವಾಸ ಸಹ ಎರ್ಪಡಿಸಲಾಗುತ್ತದೆ.

ಜಲಾನಯನ ಸಮಿತಿ ಪಾತ್ರ

ಜಲಾನಯನ ಸಮಿತಿಯು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ಕಛೇರಿಯನ್ನು ಹೊಂದಿರತಕ್ಕದ್ದು.
 • ದೈನಂದಿನ ಕೆಲಸ ಕಾರ್ಯಗಳನ್ನು ಕಾರ್ಯದರ್ಶಿ ನಿರ್ವಹಿಸುವುದು.
 • ಸರ್ವ ಸದಸ್ಯರ ಸಭೆಯನ್ನು ಪ್ರತಿ ವರ್ಷ 2 ಸಾರಿ(6 ತಿಂಗಳಿಗೊಮ್ಮೆ) ಅಥವಾ ಅಗತ್ಯವಿದ್ದಾಗ ಕರೆಯುವುದು.
 • ಇಲಾಖೆಯ ಜಲಾನಯನ ಅಭಿವೃದ್ಧಿ ತಂಡದ ನೇತೃತ್ವದಲ್ಲಿ ತಯಾರಿಸುವ ಕೃಇಯಾ ಯೋಜನೆಗೆ ಸರ್ಕಾರೇತರ ಸಂಸ್ಥೆಯೊಂದಿಗೆ ಒಂದುಗೂಡಿ ಪೂರಕವಾಗಿ ನೆರವಾಗುವುದು.
 • ವರ್ಷದ ಆಯವ್ಯಯವನ್ನು ಚರ್ಚಿಸಿ ಅನುಮೋದನೆ ಪಡೆಯುವುದು.
 • ಯೋಜನೆಯ ಪ್ರಗತಿಯನ್ನು ಮಂಡಿಸುವುದು.
 • ಜಲಾನಯನ ಅಭಿವೃದ್ಧಿಯ ಪ್ರಾರಂಭಿಕ ಹಂತದಿಂದ ಯೋಜನೆ ಮುಕ್ತಾಯದ ನಂತರ ಸೃಷ್ಟಿಸಿದ ಆಸ್ತಿಗಳನ್ನು ನಿರಂತರವಾಗಿ ಅವುಗಳ ಲಾಭ ಪಡೆಯಲು ಅವುಗಳ ನಿರ್ವಹಣೆ ಜವಾಬ್ದಾರಿ ಸಹ ಕಾರ್ಯಕಾರಿ ಸಮಿತಿ ನಿರ್ವಹಿಸುವುದು.
 • ಜಲಾನಯನ ಅಭಿವೃದ್ಧಿ ತಂಡದ ತಾಂತ್ರಿಕ ನೆರವು ಪಡೆದು ಕ್ಷೇತ್ರ ಸರ್ಕಾರೇತರ ಸಂಸ್ಥೆಯೊಂದಿಗೆ ಸಹಕರಿಸಿ ಯೋಜನೆಯ ಎಲ್ಲಾ ಚಟುವಟಿಕೆಯನ್ನು ಅರ್ಥಪೂರ್ಣವಾಗಿ ಮಾಡಲು ಆಸಕ್ತಿವಹಿಸುವುದು.
 • ಯೋಜನೆಯನ್ನು ಕಾರ್ಯಗತ ಮಾಡಲು ಒಂದು ಪ್ರತ್ಯೇಕ ಕಾಮಗಾರಿ ಅನುಷ್ಠಾನ ಬ್ಯಾಂಕ್ ಖಾತೆಯನ್ನು ತೆರೆಯುವುದು. ಇನ್ನೊಂದು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಕಾಮಗಾರಿ ನಿರ್ವಹಣೆ ಬಗ್ಗೆ ಡಬ್ಲೂ ಡಿ ಎಫ್ ಕಾತೆ ತೆರೆಯುವುದು.
 • ಕಾಮಗಾರಿ ಅನುಷ್ಠಾನ ಖಾತೆ ಡಬ್ಲೂ ಡಿ ಎಫ್ ಖಾತೆ – ಕಾಮಗಾರಿ ನಿರ್ವಹಣೆ
 • ಕಾರ್ಯಕಾರಿ ಸಮಿತಿಯ ಪ್ರತಿ ಸಭೆ ನಡೆಸಿ ಯೋಜನೆಯ ವಸ್ತು ಸ್ಥಿತಿ ಗಮನಿಸಿ ಹಿಂದಿನ ವಾರ ಆಗಿರುವ ಕಾಮಗಾರಿಗಳಿಗೆ ಪಾವತಿ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.
 • ದುರ್ಬಲ ವರ್ಗದ ಗುಂಪಿನ ಉಪ ಯೋಜನೆ ಕುರಿತಂತೆ ಸ್ವ ಸಹಾಯ ಗುಂಪುಗಳ ಇಡಿಪಿ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ರೂಪಿಸುವಿಕೆಯಲ್ಲಿ ಸಕ್ರೀಯವಾಗಿ ಸಹಕರಿಸುವುದು ಹಾಗೂ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಇರುವಂತಹ ಸುತ್ತು ನಿಧಿಯನ್ನು ಸ್ವ-ಸಹಾಯ ಗುಂಪುಗಳೊಂದಿಗೆ ಎಂ.ಓಯು ಮಾಡಿಕೊಂಡು ಅನುದಾನ ನೀಡುವುದು. ಜಲಾನಯನ ನಿರ್ವಹಣೆಯ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಜನರ ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳುವುದು.
 • ಕ್ರಿಯಾ ಯೋಜನೆಯ ಪ್ರಕಾರ ಎಲ್ಲಾ ಬಿಲ್ಲು, ಓಚರ್, ಇತ್ಯಾದಿ ಸರಿಯಾದ ರೀತಿಯಲ್ಲಿ ಇಡುವುದು.
 • ಕ್ಷೇತ್ರ ಸರ್ಕಾರೇತರ ಸಂಸ್ಥೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ಸಹಕಾರ ಹಾಗೂ ಸಹಯೋಗದೊಂದಿಗೆ ಯೋಜನೆಯ ಅನಿಷ್ಠಾನ ಮಾಡುವುದು.
 • ಜಲಾನಯನ ಅಭಿವೃದ್ಧಿ ಇಲಾಖೆಯ ಮಾರ್ಗಸೂಚಿ ಹಾಗೂ ಕಾಲ ಕಾಲಕ್ಕೆ ಹೊರಡಿಸುವ ಸುತ್ತೋಲೆಗಳನ್ನು ಪಾಲನೆ ಮಾಡಿ ಜಲಾನಯನ ಅಭಿವೃದ್ಧಿ ಕೈಗೊಳ್ಳುವುದು.
 • ಕ್ರಿಯಾ ಯೋಜನೆಯ ಒಪ್ಪಿಗೆಯನ್ನು ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಪಡೆದ ನಂತರ ಅನುಷ್ಠಾನಗೊಳಿಸುವುದು.
 • ಕ್ರಿಯಾ ಯೋಜನೆ ಸಿದ್ದತೆಯನ್ನು ಸರ್ಕಾರೇತರ ಸಂಸ್ಥೆ ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಕಾರ್ಯಕಾರಿ ಸಮಿತಿಯು ತೊಡಗಿಸಿಕೊಂಡು ಸಿದ್ಧಪಡಿಸುವುದು.
 • ಮತ ಚಲಾಯಿಸುವ ಸಂದರ್ಭ ಬಂದಾಗ ಕಾರ್ಯಕಾರಿ ಸಮಿತಿಯಲ್ಲಿರುವ ಕಾರ್ಯದರ್ಶಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿ ಮತ ಚಲಾಯಿಸುವ ಹಕ್ಕು ಹೊಂದಿರುವುದಿಲ್ಲ.
 • ಕಾಮಗಾರಿ ಅನುಷ್ಠಾನಕ್ಕೆ ಮುಂಚೆ ರೈತರ ವಂತಿಗೆಯನ್ನು ನಗದಾಗಲಿ ಅಥವಾ ಕಾಮಗಾರಿ ನಡೆಯುವಾಗ ಶ್ರಮದಾನದ ಮುಖಾಂತರವಾಗಲಿ ಪಡೆದುಕೊಳ್ಳುವ ಬಗ್ಗೆ ದಾಖಲೆಯಲ್ಲಿ ನಮೋದಿಸಿ ಆ ಕಾಮಗಾರಿಯ ಅಂದಾಜು ವೆಚ್ಚ ಜಲಾನಯನ ಅಭಿವೃದ್ಧಿ ಇಲಾಖೆಯ ಮಂಜೂರಾತಿ ಪಡೆದು ತಾಂತ್ರಿಕ ಸಲಹೆ ಮೇರೆಗೆ ಕಾಮಗಾರಿಯನ್ನು ಅನುಷ್ಠಾನಗೊಳಿಸುವುದು.
 • ವೈಯುಕ್ತಿಕ ಕಾಮಗಾರಿಗಳನ್ನು ಫಲಾನುಭವಿಗಳೇ ಮಾಡಿಕೊಳ್ಳತಕ್ಕದ್ದು, ಕಾಮಗಾರಿ ಆದ ನಂತರ ಅಳತೆ ಪುಸ್ತಕದಲ್ಲಿ ಆಯಾ ವಿಭಾಗದ ಕ್ಷೇತ್ರ ಸಹಾಯಕರಾದ ಕೃಷಿ ಸಹಾಯಕರು, ತೋಟಗಾರಿಕೆ ಸಹಾಯಕರು,ಫಾರೆಸ್ಟರ್/ ಆರ್ ಎಫ್ ಓ ನಮೂದಿಸುತ್ತಾರೆ ನಂತರ ಜಲಾನಯನ ಅಭಿವೃದ್ಧಿ ತಾಂತ್ರಿಕ ತಂಡ ಪರಿಶೀಲನೆ (ಚೆಕ್ ಅಳತೆ) ಮಾಡಿದ ನಂತರ ಜಲಾನಯನ ಸಮಿತಿಯ ವಾರದ/ 2 ವಾರಕ್ಕೊಮ್ಮೆ ನಡೆಯುವ ಸಭೆಯಲ್ಲಿ ಮಂಡಿಸಿ ನಿರ್ಣಯದ ಮೇರೆಗೆ ಪಾವತಿಯನ್ನು ಚೆಕ್ ರೂಪದಲ್ಲಿ ಫಲಾನುಭವಿಗಳಿಗೆ ಸಂದಾಯ ಮಾಡುವುದು.
 • ಸಮುದಾಯ ಜಮೀನಿನಲ್ಲಿ ಮತ್ತು ಜಲವಾಹಿನಿಯಲ್ಲಿ ನೀರು ಸಂಗ್ರಹಣಾ ವಿನ್ಯಾಸಗಳನ್ನು ಮಾರ್ಗಸೂಚಿ ಪ್ರಕಾರ ವಂತಿಗೆ ಬಗ್ಗೆ ಕ್ರಮವಹಿಸಿ ಜಲಾನಯನ ಸಮಿತಿ ಸಭೆಯಲ್ಲಿ ತೀರ್ಮಾನವಾದಂತೆ ಬಳಕೆದಾರರ ಅಥವಾ ಸ್ವ ಸಹಾಯ ಗುಂಪಿನಿಂದ ಇಲಾಖಾ ತಾಂತ್ರಿಕ ಮಾರ್ಗದರ್ಶನದ ಮೇರೆಗೆ ಅನುಷ್ಠಾನ ಮಾಡುತ್ತಾರೆ. ಇದನ್ನು ಸಹ ಕಾರ್ಯಕಾರಿ ಸಮಿತಿಯು ವಾರದ ಸಭೆಯಲ್ಲಿ ಚರ್ಚಿಸಿದ ನಂತರ ಇಲಾಖಾ ನಿಯಮದಂತೆ ಚೆಕ್ ರೂಪದಲ್ಲಿ ಪಾವತಿ ಮಾಡುವುದು.
 • ಕಾಮಗಾರಿ ಗುಣ ನಿಯಂತ್ರಣ ಮತ್ತು ಓ.ಕೆ ಕಾರ್ಡ್ ಬಳಕೆ ಕಾರ್ಯಕಾರಿ ಸಮಿತಿಯು ಆಗಿಂದಾಗ್ಗೆ ಪರಿಶಿಲಿಸಿ ಅವುಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಒತ್ತು ನೀಡುವುದು.
 • ಕಾಮಗಾರಿ ಆದ ನಂತರ ಫಲಾನುಭವಿಗಳಿಗೆ ಪಾವತಿ ಚೆಕ್ ರೂಪದಲ್ಲಿ ನೀಡಬೇಕು. ಇದಕ್ಕೆ ಅಧ್ಯಕ್ಷರು, ಖಜಾಂಚಿ ಮತ್ತು ತಾಲ್ಲೂಕು ಜಲಾನಯನ ಅಧಿಕಾರಿಯಾಗಿರುವ ಕೃಷಿ ಅಧಿಕಾರಿಗಳು ಜಂಟಿಯಾಗಿ ಚೆಕ್ ಮೇಲೆ ಸಹಿ ಮಾಡಿ ನೀಡಬೇಕು.
 • ಯೋಜನೆ ಮುಕ್ತಾಯದ ನಂತರ ಸೃಷ್ಟಿಸಿದ ಆಸ್ತಿಗಳನ್ನು ನಿರಂತರವಾಗಿ ಅವುಗಳ ಫಲಿತಾಂಶ ಪಡೆಯಲು ಅವುಗಳ ನಿರ್ವಹಣೆ ಜವಾಬ್ದಾರಿ ಸಹ ಕಾರ್ಯಕಾರಿ ಸಮಿತಿ ನಿರ್ವಹಿಸುವುದು.

ಸಮಿತಿಯ ಅಧಿಕಾರಿಗಳ ಕರ್ತವ್ಯಗಳು

ಜಲಾನಯನ ಸಮಿತಿಯ ಅಧ್ಯಕ್ಷರ ಕರ್ತವ್ಯಗಳು:

 • ಗ್ರಾಮ ಸಭೆ ಮತ್ತು ಜಲಾನಯನ ಸಮಿತಿಯ ಅಧ್ಯಕ್ಷತೆಯನ್ನು ವಹಿಸುತ್ತಾರೆ. ಅಧ್ಯಕ್ಷರು ಅನುಪಸ್ಧಿತರಾದಾಗ ಸಮಿತಿಯ ಮತ್ತೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷತೆ ವಹಿಸುತ್ತಾರೆ.
 • ದೃಢೀಕರಿಸಿದ ಕಾಮಗಾರಿಗಳಿಗೆ ಸಮಿತಿ ಅನುಮೋದನೆಯೊಂದಿಗೆ ಹಣ ಪಾವತಿಸಲು ಚೆಕ್ ಸಹಿ ಮಾಡಲು, ಭೌತಿಕ ಮತ್ತು ಹಣಕಾಸಿನ ಪ್ರಗತಿಯನ್ನು ಕ್ರೋಢಿಕರಿಸಲು, ತರುವಾಯದ ತಿಂಗಳಿನಲ್ಲಿ ಅನುಷ್ಠಾನಗೊಳಿಸುವ ಚಟುವಟಿಕೆಗಳನ್ನು ಗುರ್ತಿಸಲು, ವಂತಿಗೆ ಸಂಗ್ರಹಿಸುವ ಬಗ್ಗೆ, ವಿವರ ಪಟ್ಟಿ ಮೇಲೆ ಕಾರ್ಯಸೂಚಿಯನ್ನು ತಯಾರು ಮಾಡಲು ಮತ್ತು ಜಲಾನಯನ ಸಮಿತಿಯ ಪದಾಧಿಕಾರಿಗಳ ಮಾಸಿಕ ಸಭೆಗಳನ್ನು ಸಂಘಟಿಸಲು ಅಧಿಕಾರ ಹೊಂದಿರುತ್ತಾರೆ.
 • ಜಲಾನಯನ ಸಮಿತಿಯ ಕಾರ್ಯದರ್ಶಿÀ ಕರ್ತವ್ಯಗಳು:
 • ಪ್ರತಿ ತಿಂಗಳಿಗೊಮ್ಮೆ ಸಮಿತಿಯ ಸಭೆಯನ್ನು ಕರೆಯುವುದು.
 • ಪ್ರತಿ ಸಭೆಯ ನಡವಳಿಕೆಗಳನ್ನು ತಯಾರಿಸುವುದು ಮತ್ತು ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸುವ ವ್ಯವಸ್ಥೆ ಮಾಡುವುದು.
 • ಜಲಾನಯನ ಉಪ ಸಮಿತಿಯ ವಾರ್ಷಿಕ ವರದಿಯನ್ನು ಖಜಾಂಚಿಯ ನೆರವಿನಿಂದ ತಯಾರಿಸುವುದು. ಮತ್ತು ಮಂಡಿಸುವುದು.
 • ಜಲಾನಯನ ಸಮಿತಿಯು ನಿರ್ವಹಿಸುವ ಸಾಮಾನ್ಯ ವಿಷಯಗಳ ಉಸ್ತುವಾರಿ ನೋಡಿಕೊಳ್ಳುವುದು.
 • ಜಲಾನಯನ ಸಮಿತಿಯ ಅಧ್ಯಕ್ಷರು ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಸದಸ್ಯರು ಸೂಚಿಸಿದ ಇತರೆ ಕರ್ತವ್ಯಗಳನ್ನು ನಿರ್ವಹಿಸುವುದು.
 • ಜಲಾನಯನ ಸಮಿತಿಯ ಖಜಾಂಚಿಯ ಕರ್ತವ್ಯಗಳು:
 • ಜಲಾನಯನ ಅಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಜಲಾನಯನ ಪ್ರದೇಶದ ಸಹಾಯಕ ಕೃಷಿ ಅಧಿಕಾರಿ/ಸಹಾಯಕ ತೋಟಗಾರಿಕೆ ಅಧಿಕಾರಿ/ವಲಯ ಅರಣ್ಯಾಧಿಕಾರಿ/ಖಜಾಂಚಿಯಾಗಿ ಕಾರ್ಯ ನಿರ್ವಹಿಸುವುದು.
 • ಜಲಾನಯನ ಸಮಿತಿಗೆ ಬರುವ ಅನುದಾನದ ನಿರ್ವಹಣೆ ಖಜಾಂಚಿಯ ಸುಪರ್ಧಿನಲ್ಲಿರಬೇಕು. ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಯೋಜನೆಯ ರೂಪುರೇಷೆಗಳಂತೆ ಅನುಷ್ಟಾನವಾದ ನಂತರ ಅದಕ್ಕೆ ಸಂಬಂಧಿಸಿದ ಬಟವಾಡೆಯನ್ನು ಮಾಡುವುದು.
 • ಸಮಿತಿಯ ವ್ಯವಹಾರಗಳ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಮತ್ತು ಲೆಕ್ಕ ಪತ್ರ, ಬಾಕಿ ಪತ್ರ, ಹಣ ಬಳಕೆ ದೃಢೀಕರಣ ಪತ್ರ ತಯಾರಿಕೆ ಮುಂತಾದ ಕೆಲಸವು ಖಜಾಂಚಿಯ ಕರ್ತವ್ಯವಾಗಿರುತ್ತದೆ.
 • ಸಮಿತಿಯ ಎಲ್ಲಾ ದಾಖಲಾತಿಗಳು, ಹಣಕಾಸಿನ ವ್ಯವಹಾರದ ಸ್ವೀಕೃತಿ, ಪಾವತಿಗಳ ರಕ್ಷಕರಾಗಿದ್ದು ಪ್ರತಿ ತಿಂಗಳು ಎಲ್ಲಾ ಪಾವತಿ/ಸ್ವೀಕೃತಿ/ದಾಖಲಾತಿ ಮತ್ತು ಹೇಳಿಕೆಗಳನ್ನು ಇಲಾಖೆಯಿಂದ ನೇಮಿಸಲ್ಪಟ್ಟ ಲೆಕ್ಕ ಪರಿಶೋಧನಾ ಸಲಹೆಗಾರರಿಗೆ/ಇಲಾಖೆಗೆ ಕಳುಹಿಸಬೇಕು. ಲೆಕ್ಕ ನಿರ್ವಹಣೆ ಮತ್ತು ಹಣಕಾಸು ವ್ಯವಹಾರಗಳಿಗೆ ಒಳಪಟ್ಟಂತೆ ಸಮಿತಿಯ ಎಲ್ಲಾ ದಾಖಲೆಗಳ ಅಧಿಕೃತ ಸಹಿದಾರರು ಖಜಾಂಚಿಯಾಗಿರುತ್ತಾರೆ.
 • ಆಲಾನಯನ ಅಭಿವೃದ್ಧಿ ತಂಡದ ಸಂಬಂಧಪಟ್ಟ ಘಟಕಗಳ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಹುಂಡಿಗಳನ್ನು ತಯಾರಿಸಿ ಕಾಮಗಾರಿಗೆ ಹಣವನ್ನು ಪಾವತಿಸಬೇಕು.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು ಮತ್ತು ಸಮಗ್ರ ಜಲಾನಯನ ನಿರ್ವಹಣೆ ಯೋಜನೆ
2.96
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top