অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ವ-ಸಹಾಯ ಗುಂಪು

ಸ್ವ-ಸಹಾಯ ಗುಂಪು

  1. ಸ್ವ-ಸಹಾಯ ಗುಂಪು ಇದರ ಅವಶ್ಯಕತೆ
  2. ಸ್ವಸಹಾಯ ಗಂಪು
  3. ಸ್ವ ಸಹಾಯ ಗುಂಪು ಏಕೆ ಬೇಕು :
  4. ಸ್ವ ಸಹಾಯ ಗುಂಪು ವಿವರಗಳು
  5. ಸ್ವ ಸಹಾಯ ಗುಂಪಿನ ಸಭೆ ನಡೆಸುವ ಪದ್ಧತಿ
  6. ಸ್ವ ಸಹಾಯ ಗುಂಪಿನವರು ವಿಶೇಷವಾಗಿ ಮಾಡಬೇಕಾದ ಕೆಲಸಗಳೇನು?
  7. ಸದಸ್ಯರ ಜವಾಬ್ದಾರಿ
  8. ಸ್ವ ಸಹಾಯ ಗುಂಪಿನಲ್ಲಿ ತೀರ್ಮಾನ
  9. ತೀರ್ಮಾನ ಎಂದರೇನು?
  10. ಸ್ವ ಸಹಾಯ ಗುಂಪಿನಲ್ಲಿ ನಾಯಕತ್ವ
  11. ಮಾದರಿ ನಾಯಕತ್ವ
  12. ಒಳ್ಳೆ ನಾಯಕರ ಗುಣಗಳು
  13. ಗುಂಪಿನಲ್ಲಿ ನಾಯಕರ ಜವಾಬ್ದಾರಿಗಳನ್ನು ಏಕೆ ಹಂಚಿಕೊಳ್ಳಬೇಕು
  14. ಎಲ್ಲಾ ಸದಸ್ಯರಲ್ಲಿ ನಾಯಕ ಗುಣ ಬೆಳೆಸಲು ಏನು ಮಾಡಬೇಕು
  15. ಗುಂಪಿನಲ್ಲಿ ಜಗಳ
    1. ಸ್ವ ಸಹಾಯ ಗುಂಪಿನಲ್ಲಿ ಜಗಳ ಏಕೆ ಬರುತ್ತದೆ?
    2. ಜಗಳದಿಂದಾಗುವ ಪರಿಣಾಮವೇನು?
    3. ಜಗಳ ಪರಿಹಾರ ಹೇಗೆ?
    4. ಜಗಳಗಳನ್ನು ಪರಿಹರಿಸಲು ಈ ಕೆಳಗಿನ ಹಂತಗಳನ್ನು ಬಳಸಿ ಪರಿಹಾರ ಮಾಡಲು ಸಾಧ್ಯವಿದೆ
  16. ಆದಾಯ ಉತ್ಪನ್ನ ಚಟುವಟಿಕೆ
    1. ಉದ್ಯಮಶೀಲತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
    2. ಸುತ್ತು ನಿಧಿ ಬಿಡುಗಡೆ ಮತ್ತು ಕೌಶಲ್ಯ ಚಟುವಟಿಕೆಗಳ ಅನುಷ್ಠಾನ
  17. ಹಣಕಾಸು ಮತ್ತು ಮಾರುಕಟ್ಟೆ ಸಂಪರ್ಕ
  18. ಕೌಶಲ್ಯ ತರಬೇತಿ
  19. ಲೆಕ್ಕ ಪುಸ್ತಕ ಹಣಕಾಸು ನಿರ್ವಹಣೆ
    1. ಪರಿಶೋಧನೆ ಮತ್ತು ಹಣಕಾಸು
    2. ಸ್ವ ಸಹಾಯ ಗುಂಪುಗಳ ಸಂಪರ್ಕ
  20. ಸಮುದಾಯ ಸಂಘಗಳು-ಬಳಕೆದಾರರ ಗುಂಪು
    1. ಜಂಟಿ ಭಾದ್ಯತಾ ಗುಂಪು
    2. ಪ್ರವರ್ಧನಾ ಯೋಜನೆ
    3. ಬಳಕೆದಾರರ ಗುಂಪು ಮುಖ್ಯ ಅಂಶಗಳು
    4. ಸಭೆ ಮತ್ತು ಮುಖ್ಯಸ್ಥರ ಜವಾಬ್ದಾರಿಗಳು
    5. ಗುಂಪುಗಳ ರಚನೆ ಮತ್ತು ಪಾತ್ರ
      1. ಸಮಿತಿ ರಚನೆ
      2. ಬಳಕೆದಾರರ ಗುಂಪು ರಚನೆ ಮಾಡುವುದು ಹೇಗೆ?
      3. ಯೋಜನೆಯಿಂದ ಬಳಕೆದಾರರ ಗುಂಪಿಗೆ ಏನು ಉಪಯೋಗ ?
    6. ಕಾರ್ಯಕಾರಿ ಸಮಿತಿ

ಸ್ವ-ಸಹಾಯ ಗುಂಪು ಇದರ ಅವಶ್ಯಕತೆ

  • ಜಲಾನಯನ ಅಭಿವೃದ್ಧಿಯಲ್ಲಿ ಸಮುದಾಯ ಸಂಘಗಳಾದ ಸ್ವಸಹಾಯ ಗುಂಪು, ಬಳಕೆದಾರರ ಗುಂಪು ಮತ್ತು ಜಲಾನಯನ ಸಮಿತಿ / ಕಾರ್ಯಕಾರಿ ಸಮಿತಿಯು ಬಹಳ ಪ್ರಾಮುಖ್ಯತೆ ಹೊಂದಿದ್ದು ಇವುಗಳ ಕಾರ್ಯ ದಕ್ಷತೆಯ ಮೇರೆಗೆ ಮುಂದಿನ ಅಭಿವೃದ್ಧಿ ಆಗುತ್ತದೆ.
  • ಈ ಸಂಘಗಳ ಪೈಕಿ ಸ್ವ ಸಹಾಯ ಗುಂಪು ಭೂರಹಿತ ಮತ್ತು ದುರ್ಬಲ ವರ್ಗದ ಸಮಾನಾಸಕ್ತಿಯುಳ್ಳ 20 ಸದಸ್ಯರನ್ನು ಮೀರದೆ ಇರುವ ಗುಂಪಾಗಿದ್ದು, ಜೀವನಾಧಾರ ಸುಧಾರಣೆಗೆ ಈ ಸದಸ್ಯರಿಗೆ ಯೋಜನೆ ಒತ್ತು ನೀಡುತ್ತದೆ.
  • ಬಳಕೆದಾರರ ಗುಂಪು ಸಹ 20 ಸದಸ್ಯರನ್ನು ಮೀರದೆ ಇರುವ ಭೂ ಒಡೆತನ ಹೊಂದಿತ ರೈತ ಗುಂಪು ಆಗಿದ್ದು, ಭೂ ಅಭಿವೃದ್ಧಿ, ಕೆಲಸ ಕಾರ್ಯಗಳಿಂದ ಇವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗುತ್ತದೆ.
  • ಜಲಾನಯನ ಸಮಿತಿಯು, ಸ್ವ ಸಹಾಯ ಗುಂಪು, ಬಳಕೆದಾರರ ಗುಂಪುಗಳ ಮತ್ತು ಗ್ರಾಮ ಪಂಚಾಯತಿ ಸದಸ್ಯರನ್ನೊಳಗೊಂಡಿರುತ್ತದೆ.

ಸ್ವಸಹಾಯ ಗಂಪು

ಬಳಕೆದಾರರ ಗುಂಪು (ಕಾರ್ಯಕಾರಿ) ಸಮಿತಿ

ಜಲಾನಯನ

ಜಲಾನಯನ ಅಭಿವೃದ್ಧಿಯಲ್ಲಿ ಸ್ವ ಸಹಾಯ ಗುಂಪು :

ಭೂ ರಹಿತ ಬಡ ಕುಟುಂಬದವರು ಆಗಿದ್ದು, ಒಗ್ಗಟ್ಟಿನಿಂದ ಒಂದು ಕಡೆ ಸೇರಿ ಚಿಂತನೆ ಮಾಡುವ ಸಮಾನ ಮನಸ್ಸಿನ 20 ಸದಸ್ಯರು ಇರುವ ಗುಂಪಿಗೆ ಸ್ವ ಸಹಾಯ ಗುಂಪು ಎಂದು ಕರೆಯಲಾಗಿದೆ.

ಸ್ವ ಸಹಾಯ ಗುಂಪು ಏಕೆ ಬೇಕು :

  • ಒಬ್ಬರಿಗೊಬ್ಬರು ಸಹಾಯ ಮಾಡಲು.
  • ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಲು.
  • ತರಬೇತಿಗಳಿಂದ ಹೆಚ್ಚಿನ ತಿಳುವಳಿಕೆ ಪಡೆಯಲು.
  • ಗುಂಪಿನಲ್ಲಿ ಮಿತವ್ಯಯವನ್ನು ಪ್ರೋತ್ಸಾಹಿಸುವುದು ಮತ್ತು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಲು ಪ್ರೇರಣೆಯಾಗುವುದು.
  • ವಾರದ ಸಭೆಯಲ್ಲಿ ಸದಸ್ಯರು ಉಳಿತಾಯದ ಹಣವನ್ನು ಗುಂಪಿನ ಉಳಿತಾಯ ಖಾತೆಗೆ ನೀಡಿ ಈ ಸಂಗ್ರಹಣೆಯನ್ನು ದೊಡ್ಡ ಮೊತ್ತವಾಗಿ ಬೆಳೆಯಲು ಶ್ರಮವಹಿಸುವುದು.
  • ಕಷ್ಟ ಕಾಲದಲ್ಲಿ ಗುಂಪಿನಲ್ಲಿ ಸಂಗ್ರಹಿಸಿದ ಉಳಿತಾಯದ ಹಣವನ್ನು ತಮ್ಮ ತಮ್ಮಲ್ಲಿಯೇ ಕಡಿಮೆ ದರದ ಬಡ್ಡಿಯ ಮೇರೆಗೆ ಸಾಲ ಪಡೆಯಲು.
  • ಧೈರ್ಯ ವಿಶ್ವಾಸ ಬೆಳೆದು ಗೌರವ ಹೆಚ್ಚಿಸಿಕೊಳ್ಳಲು.
  • ಸದಸ್ಯರು ಪರಸ್ಪರ ಚರ್ಚಿಸುವುದರಿಂದ, ವಿಚಾರ ವಿನಿಮಯ ಮಾಡುವುದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ವಿಕಾಸ ಸಾಧ್ಯವಾಗುತ್ತದೆ.
  • ಜೀವನಾಧಾರ ಆದಾಯ ಉತ್ಪಾದನಾ ಚಟುವಟಿಕೆಗಳನ್ನು ಹಮ್ಮಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು.
  • ವಿವಿಧ ಯೋಜನೆಗಳಿಂದ ಆರ್ಥಿಕ, ತಾಂತ್ರಿಕ, ಇತರೆ ಸೌಲಭ್ಯಗಳನ್ನು ಪಡೆಯಲು.

ಸ್ವ ಸಹಾಯ ಗುಂಪು ವಿವರಗಳು

ಸ್ವ ಸಹಾಯ ಗುಂಪು ಕಟ್ಟುವುದು ಹೇಗೆ?

  • ಯೋಜನೆಯವತಿಯಿಂದ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಿ ಬಡ ಕುಟುಂಬಗಳನ್ನು ಗುರುತಿಸಿ ಸದಸ್ಯರಾಗಲು ಬಯಸುವ ವ್ಯಕ್ತಿಯ ಹೆಸರು, ವಿಳಾಸ, ವಯಸ್ಸು ಮತ್ತು ವಿದ್ಯಾರ್ಹತೆ ಮಾಹಿತಿ ಪಡೆಯುವುದು.
  • ಸದಸ್ಯರ ವಯಸ್ಸು 18 ರಿಂದ 60 ವರ್ಷ ವಯೋಮಿತಿಯವರು ಇರುವಂತೆ ಕ್ರಮವಹಿಸುವುದು.
  • ಭೂ ರಹಿತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ / ವರ್ಗದವರ ಹಾಗೂ ಇತರೆ ದುರ್ಬಲ ವರ್ಗದವರ ಮನೆಗಳಿಗೆ ಹೋಗಿ ಸ್ವ ಸಹಾಯ ಗುಂಪಿನ ಫಲಗಳ ಬಗ್ಗೆ ತಿಳುವಳಿಕೆ ನೀಡಿ ಮನವೊಲಿಸುವುದು.
  • ಸಮಾನ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯುಳ್ಳ ಬಡತನ ರೇಖೆಗಿಂತ ಕೆಳಗಿರುವ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಒಂದೇ ಸ್ಥಾನಮಾನ ಹೊಂದಿರುವ ಸದಸ್ಯರಿರಬೇಕು.
  • ಒಂದೇ ಬಡಾವಣೆ, ಬೀದಿ, ಓಣಿಗೆ ಸೇರಿದವರಾಗಿದ್ದು, ಅವರ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯಲು ಸಮಾನ ಮನಸ್ಸಿನವರಿರಬೇಕು.
  • ದುರುದ್ದೇಶ ಮತ್ತು ಪರಸ್ಪರ ಘರ್ಷಣೆಯಿಲ್ಲದೇ ರಾಜಕೀಯೇತರ ಸದಸ್ಯರಿಂದ ಕೂಡಿದ ಗುಂಪಾಗಿರಬೇಕು.
  • ಸ್ವ ಸಹಾಯ ಗುಂಪುಗಳು ಮಹಿಳೆಯರದೇ ಆದ ಗುಂಪು, ಪುರುಷರ ಗುಂಪು ಮತ್ತು ಮಹಿಳೆಯರು ಹಾಗೂ ಪುರುಷರು ಇರುವ ಗುಂಪು ಆಗಬಹುದು.
  • ಹೊಂದಾಣಿಕೆ ಹಾಗೂ ಒಮ್ಮತದಿಂದಿರುವ ಸದಸ್ಯರನ್ನು ಒಂದು ಗುಂಪಿನಲ್ಲಿ ಸೇರಿಸುವುದು.
  • ಗುಂಪಿಗೆ ಎಲ್ಲರಿಗೂ ಇಷ್ಟವಾಗಿರುವ ಹೆಸರಿಡುವುದು.
  • ಎಲ್ಲಾ ಸದಸ್ಯರಿಗೂ ಹಾಗೂ ಪ್ರತಿನಿಧಿಗಳಿಗೆ ತಮ್ಮ ಕರ್ತವ್ಯದ ಬಗ್ಗೆ ಅರಿವು ಮೂಡಿಸಲು ತರಬೇತಿಗಳನ್ನು ಯೋಜನಾವತಿಯಿಂದ ಏರ್ಪಡಿಸಲಾಗುವುದು.
  • ಗುಂಪಿನ ಸದಸ್ಯರಿಗೆ ಮುಂದೆ ಸಭೆ ಕರೆಯುವ ಬಗ್ಗೆ, ಉಳಿತಾಯ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿ ಸ್ವ ಸಹಾಯ ಗುಂಪು ಕಟ್ಟುವುದು.

ಇದಕ್ಕೆ ಪೂರಕವಾಗಿ ಕೆಳಕಂಡಂತೆ ಕ್ರಮ ಅನುಸರಿಸಲಾಗುತ್ತೆಂದು ಸಹ ತಿಳಿಸಿ ಗುಂಪು ಕಟ್ಟುವುದು.

  • ಪ್ರತಿ ವಾರ ನಿಗದಿತ ಸಮಯಕ್ಕೆ ಸಭೆ ಕರಿಯಲು ಸ್ಥಳ ಆಯ್ಕೆ ಮಾಡುವುದು.
  • ಪ್ರತಿ ವಾರ ಪ್ರತಿ ಸದಸ್ಯರಿಂದ ಉಳಿತಾಯ ಹಣ ಗುಂಪಿನಲ್ಲಿ ತೊಡಗಿಸುವುದು.
  • ಗುಂಪಿನ ಹೆಸರಿನಲ್ಲಿ ಮತ್ತು ಸದಸ್ಯರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು.
  • ಉಳಿತಾಯ ಮಾಡಲು ಹಾಗೂ ಬ್ಯಾಂಕಿನಿಂದ ಕಷ್ಟ ಬಂದಾಗ ಸಾಲ ಪಡೆಯಲು.
  • ನಿಯಮಗಳನ್ನು ತೀರ್ಮಾನಿಸಿದ ನಂತರ ಪುಸ್ತಕದಲ್ಲಿ ಬರೆದಿಡುವುದು.

ಸ್ವ ಸಹಾಯ ಗುಂಪಿನ ಸಭೆ ನಡೆಸುವ ಪದ್ಧತಿ

 

  • ಸಭೆಯ ಸದಸ್ಯರು ಗುಂಡಾಕಾರವಾಗಿ ಕುಳಿತುಕೊಳ್ಳುವುದು.
  • ಎಲ್ಲರಿಗೂ ಕುಳಿತುಕೊಳ್ಳಲು ಜಾಗ / ಚಾಪೆ / ಸ್ಥಳ ಶುದ್ಧತೆ / ಬೆಳಕು ಹಾಗೂ ಪುಸ್ತಕಗಳನ್ನು ಇಡಲು ಟ್ರಂಕ್ / ಪೆನ್ / ಇತ್ಯಾದಿಗಳನ್ನು ಒದಗಿಸಬೇಕು.
  • ಯಾವುದೇ ತೊಂದರೆ ಆಗದಂತಹ ಜಾಗದಲ್ಲಿ ಸಭೆ ನಡೆಸಬೇಕು.
  • ರಾತ್ರಿ ಸಭೆ ನಡೆಸುವುದಾದರೆ ಬೆಳಕು ಇರುವಂತಹ ಜಾಗ ಇರಬೇಕು.
  • ವಿಷಯಗಳ ಕುರಿತು ಚರ್ಚೆ ಮಾಡಲು, ಶಿಸ್ತು, ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆಯಲು, ಉಳಿತಾಯ ಹಾಗೂ ಸಾಲ ಪಡೆಯಲು, ಧೈರ್ಯವಾಗಿ ಮಾತನಾಡಲು, ಸಮಸ್ಯೆಗಳನ್ನು ಇತರರೊಂದಿಗೆ ಚರ್ಚಿಸಿ ನಿವಾರಣೆ ಪಡೆದುಕೊಳ್ಳುವುದು ಮತ್ತು ಇತ್ಯಾದಿ.

ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಿಸಬೇಕು

  • ಅಧ್ಯಕ್ಷರು ಸಭೆಗೆ ಹಾಜರಿರುವವರಿಗೆ ಸ್ವಾಗತ ಮಾಡುವುದು.
  • ಮೊದಲಿಗೆ ಹಾಜರಾತಿ ಹಾಗೂ ಹಿಂದಿನ ವಾರದ ಸಭೆಯ ತೀರ್ಮಾನ ಓದುವುದು.
  • ಚರ್ಚಿಸಬೇಕಾದ ವಿಷಯಗಳ ಕುರಿತು ಪಟ್ಟಿ ಮಾಡಿ ಓದುವುದು ಹಾಗೂ ಶಿಸ್ತನ್ನು ಪಾಲಿಸುವಂತೆ ಅಧ್ಯಕ್ಷರು ನೋಡಿಕೊಳ್ಳುವುದು ಹಾಗೂ ಸಭೆಯ ನಿಯಮಗಳನ್ನು ಸಭೆಯು ಮುಗಿಯುವವರೆಗೆ ಕಾಪಾಡಿಕೊಳ್ಳುವುದು.
  • ಉಳಿತಾಯ, ಸಾಲ ಮರುಪಾವತಿ, ಸೇವಾ ಶುಲ್ಕ ಹಾಗೂ ದಂಡ ವಸೂಲಿಗಳ ನಂತರ ಸಾಲ ನೀಡುವುದು.
  • ಚರ್ಚಿಸಿದ ಪ್ರತಿ ವಿಷಯಗಳ ಕುರಿತು ಬರೆದಿಡಬೇಕು.

ಸ್ವ ಸಹಾಯ ಗುಂಪಿನವರು ವಿಶೇಷವಾಗಿ ಮಾಡಬೇಕಾದ ಕೆಲಸಗಳೇನು?

ಜಲಾನಯನ ಸಮಿತಿಯಲ್ಲಿ ಪ್ರತಿನಿಧಿಗೆ ಸಕ್ರೀಯವಾಗಿ ಭಾಗವಹಿಸಲು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿ ಜಲಾನಯನ ಸಮಿತಿಗೆ ತೆಗೆದುಕೊಂಡ ತೀರ್ಮಾನವನ್ನು ತಿಳಿಸಬೇಕು.

  • ಎಲ್ಲರಿಗೂ ಅವಕಾಶ ಸಿಗುವ ಹಾಗೆ ಕಾಲಕಾಲಕ್ಕೆ ಪ್ರತಿನಿದೀಗಳನ್ನು ಬದಲಾಯಿಸುವುದು. ಈ ಪ್ರತಿನಿಧಿಗಳು ಜಲಾನಯನ ಸಮಿತಿಯಲ್ಲಿ ಚರ್ಚಿಸಿದ ವಿಷಯಗಳನ್ನು ಸ್ವ ಸಹಾಯ ಗುಂಪಿನ ಸಭೆಯಲ್ಲಿ ತಿಳಿಸುವುದು.
  • ಜಲಾನಯನ ಪ್ರದೇಶದ ಅಭಿವೃದ್ಧಿಯಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸಿಗುವ ಸೌಲಭ್ಯ, ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಸಿಗುವ ಕೂಲಿ ಮತ್ತು ವಿಶೇಷವಾಗಿ ಆದಾಯ ಉತ್ಪನ್ನ ಹೆಚ್ಚಿಸುವ ಸಲುವಾಗಿ ಇರುವಂತಹ ಅಂಶಗಳನ್ನು ಕುರಿತು ಚರ್ಚೆ ಮಾಡುವುದು.
  • ಸರ್ವ ಸದಸ್ಯರ ಸಭೆಗೆ ಹಾಜರಾಗುವುದು.
  • ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಭಾಗವಹಿಸುವುದು.
  • ಜಲಾನಯನ ಸಮಿತಿಯ ಪ್ರಗತಿ ಪರಿಶೀಲನೆ.
  • ಕ್ರಿಯಾ ಯೋಜನೆಯ ಉಸ್ತುವಾರಿ ಸಮಿತಿಯಲ್ಲಿ ಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸುವುದು.
  • ಲೆಕ್ಕ ಪರಿಶೀಲನೆ ಮಾಡಿ ಸಲಹೆ ನೀಡುವುದು.
  • ಉದ್ಯಮಶೀಲತಾ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸುವುದು.
  • ಯೋಜನಾ ಅನುಷ್ಠಾನದಲ್ಲಿ ಕೂಲಿ ಕಾರ್ಮಿಕರ ಪಟ್ಟಿ ಮಾಡಿ ಸಮಿತಿಗೆ ಒಪ್ಪಿಸುವುದು ಹಾಗೂ ಸಾರ್ವಜನಿಕ ಭೂಮಿಯ ಕ್ರಿಯಾ ಯೋಜನೆ ಅನುಷ್ಠಾನದಲ್ಲಿ ಭಾಗವಹಿಸುವುದು.
  • ಗುಂಪಿನಲ್ಲಿ ನಿಯಮಗಳನ್ನು ರಚಿಸಿ ನಿಯಮ, ತೀರ್ಮಾನ ಹಾಗೂ ವ್ಯವಹಾರಗಳನ್ನು ಪುಸ್ತಕದಲ್ಲಿ ಬರೆದಿಡಬೇಕು.

ಸದಸ್ಯರ ಜವಾಬ್ದಾರಿ

  • ಸಭೆಗೆ ಹಾಜರಾಗಲು ಸದಸ್ಯರಿಗೆ ಪ್ರೋತ್ಸಾಹ.
  • ಪ್ರತಿ ಸಭೆಗೆ ಹಾಜರಾಗಿ, ಉಳಿತಾಯ, ಮರುಪಾವತಿ ಸಮಯಕ್ಕೆ ಮಾಡುವುದು. ಅಧ್ಯಕ್ಷ ಸ್ಥಾನವಹಿಸುವುದು ಗ್ರಾಮಾಭಿವೃದ್ಧಿ ಕೆಲಸದಲ್ಲಿ ತೊಡಗುವುದು.
  • ಸಭೆಯಲ್ಲಿ ಚರ್ಚೆ ಹಾಗೂ ತೀರ್ಮಾನದಲ್ಲಿ ತೊಡಗುವುದು.
  • ಬ್ಯಾಂಕ್ ವ್ಯವಹಾರವನ್ನು ಗುಂಪಿನ ಪರವಾಗಿ ಮಾಡುವುದು.
  • ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ಮಾಡಿ ಕಾರ್ಯಕ್ರಮಗಳ ಬಗ್ಗೆ ಗುಂಪಿನ ಸದಸ್ಯರೊಂದಿಗೆ ಚರ್ಚಿಸುವುದು.
  • ಜಲಾನಯನ ಸಮಿತಿ ಸಭೆಗೆ ಹಾಜರಾದ ಸದಸ್ಯರು ಅಲ್ಲಿ ಚರ್ಚೆ ಆದ ವಿಷಯದ ಬಗ್ಗೆ ಸ್ವ ಸಹಾಯ ಗುಂಪಿನ ಸಭೆಯಲ್ಲಿ ಚರ್ಚೆ ಮಾಡುವುದು.
  • ಹಣಕಾಸು ವ್ಯವಹಾರದ ಬಗ್ಗೆ ಆಡಿಟ್ ಮಾಡಿಸುವುದು.
  • ಕೂಲಿ ಕಾರ್ಮಿಕರ ಪಟ್ಟಿಯನ್ನು ಜಲಾನಯನ ಸಮಿತಿಗೆ ನೀಡುವುದು ಹಾಗೂ ಅವರಿಗೆ ಕೆಲಸ ಸಿಗುವ ಹಾಗೆ ಮಾಡುವುದು.
  • ಕ್ರಿಯಾ ಯೋಜನೆಯನ್ನು ಉಸ್ತುವಾರಿ ಮಾಡುವುದು.
  • ಸಾರ್ವಜನಿಕ ಭೂಮಿಯಲ್ಲಿ ತೆಗೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಸಕ್ರೀಯ ಪಾತ್ರವಹಿಸುವುದು.
  • ಜಲಾನಯನ ಸಮಿತಿಯ ಹಣಕಾಸು ವ್ಯವಹಾರದ ಉಸ್ತುವಾರಿ ಮಾಡಿ ಸಲಹೆಗಳನ್ನು ನೀಡುವುದು.
  • ಗುಂಪಿನ ಸದಸ್ಯರು ಸಮನ್ವಯದೊಂದಿಗೆ ಎಲ್ಲ ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು.

ಇತರೆ ಸಂಘ ಸಂಸ್ಥೆಗಳ ಜೊತೆ ಸಂಪರ್ಕ ಬೆಳೆಸಲು ಸದಸ್ಯರಿಗೆ ಅವಕಾಶ ನೀಡುವುದು.

ಸ್ವ ಸಹಾಯ ಗುಂಪಿನಲ್ಲಿ ತೀರ್ಮಾನ

ಯಾವುದೇ ಸಮಸ್ಯೆ ಅಥವಾ ಪ್ರಶ್ನೆಗೆ ನೇರವಾದ ಪರಿಹಾರ ಅಥವಾ ಉತ್ತರ ಕಂಡುಕೊಳ್ಳುವುದನ್ನು ತೀರ್ಮಾನ ಎನ್ನಬಹುದು.

  • ತೀರ್ಮಾನವಿಲ್ಲದಿದ್ದರೆ ಸಮಸ್ಯೆಗಳು ಬರಿ ಚರ್ಚೆಯಾಗುತ್ತದೆ ಹೊರತು ಪರಿಹಾರ ಸಿಗುವುದಿಲ್ಲ.
  • ಯಾವುದೇ ಕೆಲಸವು ಮುಂದುವರೆಯಬೇಕಾದರೆ ಅದನ್ನು ಯಾರು, ಯಾವಾಗ ಮತ್ತೆ ಹೇಗೆ ಮುಂದುವರೆಸಬೇಕು ಎಂಬ ತೀರ್ಮಾನವಾಗದಿದ್ದರೆ ಆ ಕೆಲಸ ಅಲ್ಲಿಯೇ ನಿಲ್ಲುತ್ತದೆ.

ತೀರ್ಮಾನ ಎಂದರೇನು?

  • ಸಮಸ್ಯೆಗಳಿಗೆ ನೇರವಾದ ಪರಿಹಾರ ಅಥವಾ ಉತ್ತರವನ್ನು ಕೊಡುವುದು. ತೀರ್ಮಾನ ಕೊಡಬೇಕಾದರೆ ಎಲ್ಲರಿಗೂ ಮೆಚ್ಚುವಂತಾಗಬೇಕು ಮತ್ತು ತೀರ್ಮಾನವನ್ನು ಬರೆದಿಡಬೇಕು. ತೀರ್ಮಾನದಲ್ಲಿ ಪಾರದರ್ಶಕತೆ ಇರಬೇಕು.

ಗುಂಪಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ವಿಧಾನ :

ಸ್ವ ಸಹಾಯ ಗುಂಪು ಸಭೆ ನಡೆಸಿ ಈ ಕೆಳಗೆ ತಿಳಿಸಿದ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು

  • ಸ್ವ ಸಹಾಯ ಗುಂಪಿನ ಅಧ್ಯಕ್ಷರು ವಿಷಯ ಮಂಡಿಸಬೇಕು.
  • ನಂತರ ಸದಸ್ಯರೆಲ್ಲರೂ ಚರ್ಚೆಯಲ್ಲಿ ಭಾಗವಹಿಸಿ ತೀರ್ಮಾನ ತೆಗೆದುಕೊಳ್ಳಬೇಕು.
  • ತೆಗೆದುಕೊಳ್ಳುವ ತೀರ್ಮಾನದ ಒಳಿತು ಕೆಡಕುಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು.
  • ಎಲ್ಲರಿಗೂ ತೀರ್ಮಾನಗಳ ಹಿನ್ನೆಲೆ ತಿಳಿದಿರುತ್ತದೆ ಮತ್ತು ಅದರ ಅನುಷ್ಠಾನದ ಜವಾಬ್ದಾರಿ ತೆಗೆದುಕೊಳ್ಳಲು ತಯಾರಿರುತ್ತಾರೆ.
  • ಈ ರೀತಿಯಲ್ಲಿ ತೀರ್ಮಾನದಲ್ಲಿ ಒಮ್ಮತ ಹಾಗೂ ಭಾಗವಹಿಸುವಿಕೆ ಇರುತ್ತದೆ.
  • ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಹಾಗೂ ‘ನಮ್ಮದು’ ಎನ್ನುವ ಭಾವನೆ ಇರುತ್ತದೆ.
  • ತೀರ್ಮಾನದಿಂದ ಏನೇ ಒಳ್ಳೆಯದಾದರೆ ಅಥವಾ ಕೆಟ್ಟದಾದರೆ ಎಲ್ಲರೂ ಜವಾಬ್ದಾರರಾಗಿರುತ್ತಾರೆ.
  • ತೀರ್ಮಾನ ಇಡೀ ಗುಂಪಿನದ್ದಾಗಿರುತ್ತದೆ.
  • ಆದ್ದರಿಂದ ಜಗಳ ಅಪನಂಬಿಕೆ ಇರುವುದಿಲ್ಲ ಒಗ್ಗಟ್ಟು ಹೆಚ್ಚುತ್ತದೆ.
  • ತೀರ್ಮಾನದಲ್ಲಿ ಎಲ್ಲರೂ ಭಾಗವಹಿಸುವುದರಿಂದ ಅದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಎಲ್ಲರಿಗೂ ಆಸಕ್ತಿ ಹಾಗೂ ಜವಾಬ್ದಾರಿ ಇರುತ್ತದೆ.
  • ತೆಗೆದುಕೊಂಡ ತೀರ್ಮಾನಗಳ ಅನುಷ್ಠಾನ ಆಗಿದೆಯೇ ಇಲ್ಲವೇ ಎಂದು ಉಸ್ತುವಾರಿ ಮಾಡಲು ಸಾಧ್ಯವಾಗುತ್ತದೆ.
  • ಪಾರದರ್ಶಕತೆ ಹೆಚ್ಚಿಸಲು, ಗುಂಪಿನ ಹಾಗೂ ಸದಸ್ಯರ ಹೊಣೆಗಾರಿಕೆ ಹೆಚ್ಚಿಸಲು ಕಾರಣವಾಗುತ್ತದೆ.
  • ತೀರ್ಮಾನದ ಕಾರಣ ಹಾಗೂ ಮಾಹಿತಿ ಎಷ್ಟೇ ದಿವಸಗಳಾದ ನಂತರವೂ ದಾಖಲಾಗಿರುವುದು ದೊರೆಯುತ್ತದೆ

ಸ್ವ ಸಹಾಯ ಗುಂಪಿನಲ್ಲಿ ನಾಯಕತ್ವ

  • ಗುಂಪಿಗೆ ಸೂಕ್ತ ಮಾರ್ಗದರ್ಶನ ನೀಡಲು.
  • ಗುಂಪಿನ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳಲು.
  • ಗುಂಪಿನ ಎಲ್ಲಾ ಕೆಲಸಗಳಲ್ಲಿ ಸಮನ್ವಯತೆ ತರಲು ಮತ್ತು ಗುಂಪಿನ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುವಂತೆ ನೋಡಿಕೊಳ್ಳಲು.
  • ಗುಂಪಿನ ಸದಸ್ಯರ ಮಧ್ಯೆ ಸ್ನೇಹ ಸಂಬಂಧ ಬೆಳೆಸಲು.
  • ಗುಂಪಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳಲು.
  • ಬೇರೆ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಲು ಮತ್ತು ಒಕ್ಕೂಟ ಹಾಗೂ ಇತರೆ ಸಂಸ್ಥೆಗಳೊಂದಿಗೆ ಸಂಘದ ಪರವಾಗಿ ಪ್ರತಿನಿಧಿಸಲು ಹಾಗೂ ಗುಂಪಿಗೆ ಹೆಚ್ಚಿನ ಬೆಂಬಲ ಪಡೆಯಲು.
  • ಒಂದಕ್ಕೊಂದು ಕೆಲಸಗಳನ್ನು ಜೋಡಿಸಿ ಕಡಿಮೆ ಕಾಲ ಮತ್ತು ಕಡಿಮೆ ಖರ್ಚಿನಲ್ಲಿ ನೆರವೇರಿಸುವಂತೆ ಯೋಜನೆ ತಯಾರಿಸಲು.
  • ಗುಂಪಿಗೆ ಯೋಜನೆ ಮತ್ತು ಮುಂದಿನ ಗುರಿ ರೂಪಿಸಲು.
  • ಗುಂಪಿನ ಪ್ರತಿ ಸದಸ್ಯರಿಗೆ ಹಾಗೂ ಗುಂಪಿನ ಇತರೆ ಸದಸ್ಯರನ್ನು ಉತ್ತೇಜಿಸಿ ಅವರಿಂದ ಒಳ್ಳೆಯ ಕೆಲಸಗಳನ್ನು ಮಾಡಿಸಲು.
  • ಗುಂಪಿನಲ್ಲಿ ಜಗಳಗಳು ಬಂದಾಗ ಪರಿಹರಿಸಲು.

ಮಾದರಿ ನಾಯಕತ್ವ

ವಿವಿಧ ರೀತಿಯ ನಾಯಕತ್ವದ ಮಾದರಿಗಳು

  • ವಿವಿಧ ರೀತಿಯ ನಾಯಕತ್ವದ ಮಾದರಿಗಳು :
    • ಸ್ವಾರ್ಥಿ ಅಧಿಕಾರ ಚಲಾಯಿಸುವುದು.
    • ಸಂಕುಚಿತ ಮನೋಭಾವ ಮತ್ತು ಅಹಂಕಾರದಿಂದಿರುವವರು.
    • ತಾವೇ ಎಲ್ಲರಿಗಿಂತ ಹೆಚ್ಚಿನವರು ಎಂದು ತಿಳಿದಿರುತ್ತಾರೆ.
  • ತಟಸ್ಥ ನಾಯಕತ್ವ
    • ಈ ಮಾದರಿ ನಾಯಕರು ಕೇವಲ ಹೆಸರಿಗೆ ನಾಯಕರಾಗಿರುತ್ತಾರೆ.
    • ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ.
  • ಅರಾಜಕ ನಾಯಕತ್ವ
  • ಇವರ ಆಡಳಿತದಲ್ಲಿ ಪೂರ್ತಿ ಜಗಳ.
  • ಯಾರು ಏನನ್ನೂ ಬೇಕಾದರು ಮಾಡುತ್ತಾರೆ.
  • ಹಾಗೂ ಅದನ್ನು ಕೇಳುವವರು ಯಾರು ಇರುವುದಿಲ್ಲ. ಎಲ್ಲರೂ ನಾಯಕರಂತೆ ವರ್ತಿಸುತ್ತಾರೆ.
ಪ್ರಜಾಪ್ರಭುತ್ವ ಅಥವಾ ಭಾಗವಹಿಸುವಿಕೆ ಮಾದರಿ
  • ಈ ನಾಯಕರು ಎಲ್ಲಾ ಜನಗಳ ಪರವಾಗಿ ಅವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ.
  • ಪ್ರತಿಯೊಬ್ಬರ ಅಭಿಪ್ರಾಯ ಕೇಳಿ, ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ.
  • ಜವಬ್ದಾರಿ ತೆಗೆದುಕೊಳ್ಳಲು ಮುಂದಿರುತ್ತಾರೆ.
  • ಕೆಲಸ ಮಾಡುವಾಗ ಭೇಧ ಭಾವ ಇರುವುದಿಲ್ಲ.
  • ತನ್ನ ಗುಂಪಿನಲ್ಲಿ ಇತರೆ ಸದಸ್ಯರೂ ಸಹ ನಾಯಕರಾಗಿ ಬೆಳೆಯಲು ಸಹಾಯ ಮಾಡುತ್ತಾರೆ.

ಈ ಮೇಲಿನ ನಾಲ್ಕು ಮಾದರಿಯ ನಾಯಕದಲ್ಲಿ ಯಾವುದು ಉತ್ತಮ ಮಾದರಿಯ ನಾಯಕತ್ವ ಎಂಬುದನ್ನು ನೀವೇ ತೀರ್ಮಾನಿಸಿ?

ಒಳ್ಳೆ ನಾಯಕರ ಗುಣಗಳು

  • ಪ್ರಾಮಾಣಿಕರಾಗಿರುತ್ತಾರೆ.
  • ಧೈರ್ಯಶಾಲಿಗಳಾಗಿರುತ್ತಾರೆ.
  • ವಿನಯಿಗಳಾಗಿರುತ್ತಾರೆ.
  • ತನ್ನ ಗುಂಪಿನ ಸದಸ್ಯರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಕೊಡುತ್ತಾರೆ.
  • ಸದಾ ಕಲಿಯಲು ಹಾಗೂ ಮಾಹಿತಿ ಪಡೆಯಲು ಮುಂದಿರುತ್ತಾರೆ.
  • ಎಲ್ಲಾ ಮಾಹಿತಿಗಳನ್ನು ಸರ್ವ ಸದದ್ಯರಿಗೆ ತಿಳಿಸುತ್ತಾರೆ.
  • ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.
  • ಗುಂಪು ಮುಂದೇನು ಮಾಡಬೇಕು ಎಂದು ಮುಂದಾಲೋಚಿಸುತ್ತಾರೆ.
  • ತನ್ನ ಸ್ವಂತ ಕೆಲಸಗಳಿಗಿಂತ ಗುಂಪಿನ ಕೆಲಸ ಇವರಿಗೆ ಮುಖ್ಯವಾಗಿರುತ್ತದೆ.
  • ಸಂಘದಲ್ಲಿ ಇತರೆ ಸದಸ್ಯರಿಗೆ ನಾಯಕರಾಗಿ ಬೆಳೆಯಲು ಅವಕಾಶ ಕೊಡುತ್ತಾರೆ.
  • ಕೆಲಸಗಳಲ್ಲಿ ಭೇಧ ಭಾವ ಮಾಡುವುದಿಲ್ಲ.
  • ಗುಂಪಿನಲ್ಲಿನ ಯಾವುದೇ ಹಣವು ದುರುಪಯೋಗವಾಗದಂತೆ ನೋಡಿಕೊಳ್ಳುತ್ತಾರೆ.
  • ಗುಂಪಿನಲ್ಲಿನ ಬಡ ಸದಸ್ಯರಿಗೆ ಮೊದಲು ಸಹಾಯ ಸಿಗುವಂತೆ ಮಾಡುತ್ತಾರೆ.
  • ಗುಂಪಿನ ಲೆಕ್ಕ ಪತ್ರಗಳನ್ನು ಜೋಪಾನ ಮಾಡುತ್ತಾರೆ ಮತ್ತು ಎಲ್ಲರಿಗೂ ತಿಳಿಸುತ್ತಾರೆ.

ಗುಂಪಿನಲ್ಲಿ ನಾಯಕರ ಜವಾಬ್ದಾರಿಗಳನ್ನು ಏಕೆ ಹಂಚಿಕೊಳ್ಳಬೇಕು

  • ಎಲ್ಲಾ ಸದಸ್ಯರು ಜವಾಬ್ದಾರಿ ತೆಗೆದುಕೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಲು ಎಲ್ಲರಿಗೂ ಅವಕಾಶ ಸಿಗುತ್ತದೆ.
  • ಎಲ್ಲರೂ ಜವಾಬ್ದಾರಿ ಹಂಚಿಕೊಳ್ಳುವುದರಿಂದ ಒಬ್ಬರಿಗೆ ಹೆಚ್ಚು ಹೊರೆ ಆಗುವುದಿಲ್ಲ.
  • ಗುಂಪಿನ ಪ್ರತಿನಿಧಿಗಳು ಅಥವಾ ಅಧ್ಯಕ್ಷರು/ಕಾರ್ಯದರ್ಶಿ ಬೇರೆ ಕೆಲಸಕ್ಕೆ ಹೊರಗಡೆ ಹೋಗಬೇಕಾದ ಸಂದರ್ಭಗಳಲ್ಲಿ ಗುಂಪಿನ ಕೆಲಸಗಳು ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
  • ಜವಬ್ದಾರಿ ಯಾವಾಗಲೂ ಒಬ್ಬ ಅಥವಾ ಇಬ್ಬರ ಕೈಯಲ್ಲಿ ಇದ್ದರೆ ಅಧಿಕಾರವೂ ಸಹ ಒಬ್ಬಿಬ್ಬರ ಕೈಯಲ್ಲಿರುತ್ತದೆ. ಇದರಿಂದ ಅವರೂ ಸಹ ಅಧಿಕಾರ ಚಲಾಯಿಸಲು ಪ್ರಾರಂಭಿಸಬಹುದು. ಆದ್ದರಿಂದ ಎಲ್ಲಾ ಸದಸ್ಯರೂ ನಾಯಕರ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಕಲಿಯಬೇಕು.

ಎಲ್ಲಾ ಸದಸ್ಯರಲ್ಲಿ ನಾಯಕ ಗುಣ ಬೆಳೆಸಲು ಏನು ಮಾಡಬೇಕು

  • ಪ್ರತಿ ವರ್ಷ ಪ್ರತಿನಿಧಿಗಳನ್ನು ಬದಲಾಯಿಸಬೇಕು.
  • ಪ್ರತಿ ಸದಸ್ಯರಿಗೆ ವಿವಿಧ ರೀತಿಯ ತರಬೇತಿ ನೀಡಬೇಕು.
  • ಪ್ರತಿ ವಾರದ ಸಭೆಗೆ ಅಧ್ಯಕ್ಷತೆ ವಹಿಸಿ ಸಭೆ ನಡೆಸಲು ಎಲ್ಲಾ ಸದಸ್ಯರಿಗೆ ಅವಕಾಶ ನೀಡಬೇಕು.
  • ಬ್ಯಾಂಕಿಗೆ ಹಣ ತುಂಬಲು ಪಾಳಿ ಪ್ರಕಾರ ಎಲ್ಲಾ ಸದಸ್ಯರು ಹೋಗಬೇಕು.
  • ಜಲಾನಯನ ಇಲಾಖೆ, ಕೃಷಿ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸಗಳಿದ್ದಾಗ ಪ್ರತಿನಿಧಿಗಳು ಬೇರೆ ಬೇರೆ ಸದಸ್ಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿರಬೇಕು.
  • ಪ್ರತಿ ವಾರದ ಸಭೆಯಲ್ಲಿ ಹೊಸ ವಿಷಯಗಳನ್ನು ಚರ್ಚಿಸುತ್ತಿರಬೇಕು.

ಪ್ರತಿ ವಾರದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಸದಸ್ಯರಿಗೂ ಜವಾಬ್ದಾರಿ ನೀಡುತ್ತಿರಬೇಕು.

  • ಓದು ಬರಹ ಬರುವ ಎಲ್ಲಾ ಸದಸ್ಯರು ಗುಂಪಿನ ಪುಸ್ತಕ ಬರೆಯಬೇಕು.
  • ಕ್ಷೇತ್ರ ಭೇಟಿ, ಉಪಗ್ರಹ ಆಧಾರಿತ ತರಬೇತಿ ಇತ್ಯಾದಿಗಳಿಗೆ ಬೇರೆ ಬೇರೆ ಸದಸ್ಯರನ್ನು ಕಳುಹಿಸುತ್ತಿರಬೇಕು.
  • ಸದಸ್ಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.

ಗುಂಪಿನಲ್ಲಿ ಜಗಳ

ಗುಂಪಿನಲ್ಲಿ ಜಗಳ ಪರಿಹಾರ ಮಾರ್ಗಗಳು :

ಸ್ವ ಸಹಾಯ ಗುಂಪಿನಲ್ಲಿ ಜಗಳ ಏಕೆ ಬರುತ್ತದೆ?

  • ಗುಂಪಿನಲ್ಲಿ ಜಗಳ ಬರುವುದು ಸಹಜ. ಕಾರನ ಪ್ರತಿ ವ್ಯಕ್ತಿಯು ಬೇರೆಯಾಗಿದ್ದು, ಅವರ ವಿಚಾರ, ಮನೋಭಾವನೆ, ಅನುಭವ ಮತ್ತು ನಿರೀಕ್ಷೆಗಳೂ ಸಹ ಬೇರೆ ಬೇರೆಯಾಗಿರುತ್ತದೆ.
  • ಆದ್ದರಿಂದ ಅಭಿಪ್ರಾಯಗಳು ಸಹ ಭಿನ್ನವಾಗಿರುತ್ತದೆ. ಇಂತಹ ಭಿನ್ನಾಭಿಪ್ರಾಯಗಳನ್ನು ಸರಿಯಾದ ರೀತಿಯಲ್ಲಿ ತಿಳಸದಿದ್ದರೆ ಜಗಳ ಉಂಟಾಗುತ್ತದೆ.
  • ಸದಸ್ಯರ ಮಧ್ಯೆ ನಂಬಿಕೆ ವಿಶ್ವಾಸಗಳು ಇಲ್ಲದಿದ್ದರೂ ಸಹ ಜಗಳ ಬರುತ್ತದೆ.

ಜಗಳದಿಂದಾಗುವ ಪರಿಣಾಮವೇನು?

  • ಗುಂಪಿನಲ್ಲಿ ಸಭೆ ಸರಿಯಾಗಿ ನಡೆಯುವುದಿಲ್ಲ.
  • ಸದಸ್ಯರು ಗುಂಪು ಬಿಟ್ಟು ಹೋಗಬಹುದು.
  • ಸದಸ್ಯರ ಮನೆಗಳಲ್ಲಿ ಜಗಳ ಉಂಟಾಗಬಹುದು.
  • ಸದಸ್ಯರ ಮಧ್ಯದ ಒಗ್ಗಟ್ಟು ಉಂಟಾಗಬಹುದು.
  • ಗುಂಪಿನ ಕೆಲಸಗಳು ನಿಂತು ಹೋಗುತ್ತದೆ.
  • ಹೊರಗಿನ ಸಂಘ ಸಂಸ್ಥೆಗಳು ಸಹಾಯ ಮಾಡುವುದನ್ನು ನಿಲ್ಲಿಸುತ್ತವೆ.
  • ಮನಸ್ಸಿನ ಕಹಿ ಅನುಭವದಿಂದ ಆರೋಗ್ಯ ಕೆಡಬಹುದು.
  • ಯಾರೂ ಮುಂದುವರೆಯಲು ಸಾಧ್ಯವಾಗುವುದಿಲ್ಲ.

ಜಗಳ ಪರಿಹಾರ ಹೇಗೆ?

  • ಜಗಳ ಪರಿಹರಿಸಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ.
  • ಸಮ್ಮನಿರುವುದು, ಉದಾಸೀನ ಮಾಡುವುದು, ಸಮಜಾಯಿಸುವುದು ಅಥವಾ ಜಗಳ ಮಾಡಿರುವವರು ತಪ್ಪು ಒಪ್ಪಿಕೊಳ್ಳುವಂತೆ ಒತ್ತಡ ತರುವುದು ಇತ್ಯಾದಿ.
  • ಇಂತಹ ಮಾರ್ಗಗಳು ಕೇವಲ ತಾತ್ಕಾಲಿಕವಾಗಿರುತ್ತವೆ.
  • ಇದರಿಂದ ನಿಜವಾಗಿ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ.

ಜಗಳಗಳನ್ನು ಪರಿಹರಿಸಲು ಈ ಕೆಳಗಿನ ಹಂತಗಳನ್ನು ಬಳಸಿ ಪರಿಹಾರ ಮಾಡಲು ಸಾಧ್ಯವಿದೆ

  • ಮೊದಲು ಜಗಳ ಏಕೆ, ಎಲ್ಲಿ ಮತ್ತು ಯಾರ ಮಧ್ಯೆ ಬಂತು ಎಂದು ಆಲಿಸಬೇಕು.
  • ಎಲ್ಲಾ ಸದಸ್ಯರ ಮುಂದೆ ಜಗಳ ಮಾಡಿರುವ ಸದಸ್ಯರ ಅಭಿಪ್ರಾಯವನ್ನು ಕೇಳಿ ಅವರ ಪರಿಸ್ಥಿತಿಯಲ್ಲಿ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
  • ಜಗಳಕ್ಕೆ ಎಲ್ಲರಿಂದ ಪರಿಹಾರ ಕೇಳಬೇಕು.
  • ಪ್ರತಿ ಪರಿಹಾರದ ಒಳಿತು ಕೆಡಕುಗಳನ್ನು ಗುರುತಿಸಬೇಕು.
  • ಪರಿಹಾರವು ತಾತ್ಕಾಲಿಕವಾಗಿರಬಾರದು.
  • ದೂರದೃಷ್ಟಿಯುಳ್ಳ ಹಾಗೂ ಜಗಳ ಮಾಡಿರುವ ಎಲ್ಲರಿಗೂ ಹೆಚ್ಚಿನಾಂಶ ನ್ಯಾಯ ಸಿಗುವಂತಹ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವ ಪರಿಹಾರವನ್ನು ಆಯ್ಕೆ ಮಾಡುವುದು.
  • ಆಯ್ಕೆಯಾದ ಪರಿಹಾರವನ್ನು ಯಾವಾಗ, ಯಾರು ಅನುಷ್ಠಾನ ಮಾಡುತ್ತಾರೆಂದು ತೀರ್ಮಾನಿಸಬೇಕು.
  • ಅನುಷ್ಠಾನವಾದ ತೀರ್ಮಾನದಿಂದ ಜಗಳ ಪರಿಹಾರವಾಗಿದೆಯೇ ಎಂದು ನೋಡಬೇಕು. ಇಲ್ಲದಿದ್ದಲ್ಲಿ ಮತ್ತೇನು ಮಾಡಬೇಕೆಂದು ಚರ್ಚಿಸವೇಖು.
  • ಕೆಲವು ಸಲ ತುಂಬಾ ದೊಡ್ಡ ಜಗಳ ಸುಲಭವಾಗಿ ಪರಿಹಾರವಾಗದೆ ಇರಬಹುದು.
  • ಅಂತಹ ಸಂದರ್ಭದಲ್ಲಿ ಹೊರಗಿನವರ ಮಧ್ಯಸ್ಥಿಕೆಯ ಸಹಾಯ ಪಡೆಯಬೇಕಾಗುತ್ತದೆ.
  • ಜಗಳ ಪರಿಹಾರದ ‘ನೇರ ಮಾರ್ಗವು’ ತುಂಬಾ ಸಮಯ ತೆಗೆದುಕೊಂಡರೂ ಸಹ, ಅದರಿಂದ ಹೊಸ ವಿಚಾರಗಳು ಹೊರ ಬರುವುದರಿಂದ ಸದಸ್ಯರ ಮಧ್ಯೆ ಹೆಚ್ಚಿನ ವಿಶ್ವಾಸ ಬೆಳೆಯುತ್ತದೆ.

ಆದಾಯ ಉತ್ಪನ್ನ ಚಟುವಟಿಕೆ

  • ಸರ್ಕಾರೇತರ ಸಂಸ್ಥೆಯು ಸ್ವ ಸಹಾಯ ಗುಂಪುಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಗ್ರೇಡಿಂಗ್ ಮಾಡಬೇಕು.
  • ಜಲಾನಯನ ಸಮಿತಿ / ಕಾರ್ಯಕಾರಿ ಸಮಿತಿಯವರ ಸಹಕಾರದೊಂದಿಗೆ ಭೂರಹಿತ ದುರ್ಬಲ ವರ್ಗದ ಸದಸ್ಯರನ್ನು ಪ್ರತಿ ಜಲಾನಯನ ಸಮಿತಿವಾರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
  • ಉದ್ಯಮಶೀಲತಾ ತರಬೇತಿ 100% ಫಲಾನುನವಿಗಳಿಗೆ ಕೊಡಲಾಗುವುದು ಹಾಗೂ ತರಬೇತಿ ಪಡೆದವರ ಪೈಕಿ ಕೌಶಲ್ಯ ತರಬೇತಿಗೆ ಅವಕಾಶ ಅಂದಾಜು 30% ಫಲಾನುಭವಿಗಳಿಗೆ ಕೊಡಲಾಗುವುದು.
  • ಹಾಗೂ ಅವರಿಗೆ ಆಯ್ಕೆ ಮಾಡಿರುವ ಚಟುವಟಿಕೆಗಳ ಮೇಲೆ ಕೌಶಲ್ಯ ತರಬೇತಿಯನ್ನು ನೀಡಲಾಗತುವುದು. ಈ ಕುರಿತು ಒಂದು ಉಪಯೋಜನೆ ಸರ್ಕಾರೇತರ ಸಂಸ್ಥೆಯು ತಯಾರಿಸಬೇಕು.

ಉದ್ಯಮಶೀಲತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು

  • ಆಯ್ಕೆ ಆಗಿರುವ ಎಲ್ಲಾ ಫಲಾನುಭವಿಗಳಿಗೆ 3 ದಿವಸದ ಉದ್ಯಮಶೀಲತಾ ಜಾಗೃತ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  • ಈ ತರಬೇತಿಗೆ ಈಗಾಗಲೇ ಅನುಭವವಿರುವ ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಫಲಾನುಭವಿಗೆ ತಿಳಿಸುವುದು.
  • ಈ ಕಾರ್ಯಕ್ರಮದ ಕೊನೆಯ ದಿವಸ ಫಲಾನುಭವಿಗಳು ತೆಗೆದುಕೊಳ್ಳುವ ಚಟುವಟಿಕೆಗಳನ್ನು ನಿರ್ಧರಿಸುವುದು.

ಉಪ ಯೋಜನೆಯನ್ನು ತಯಾರಿಮಾಡುವುದು :

  • ಉದ್ಯಮಶೀಲತಾ ತರಬೇತಿ ಕೊನೆಯ ದಿವಸ ಉಪಯೋಜನೆಯನ್ನು ತಯಾರಿಸಲಾಗುವುದು.
  • ತಯಾರಿಸಿದ ಉಪ ಯೋಜನೆಯನ್ನು ಸ್ವ ಸಹಾಯ ಗುಂಪಿನವರು ಚರ್ಚಿಸುವುದು.

ಸುತ್ತು ನಿಧಿ ಬಿಡುಗಡೆ ಮತ್ತು ಕೌಶಲ್ಯ ಚಟುವಟಿಕೆಗಳ ಅನುಷ್ಠಾನ

  • ಜಿಲ್ಲಾ ಮಟ್ಟದ ಸಲಹಾ ಸಮಿತಿಯಲ್ಲಿ (ಆಐಖಅ) ಒಪ್ಪಿಗೆ ಆಗಿ ಬಂದಿರುವ ಕ್ರಿಯಾ ಯೋಜನೆಯ ಪ್ರಕಾರ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳು ಜಲಾನಯನ ಸಮಿತಿವಾರು ಸುತ್ತು ನಿಧಿಯನ್ನು ಜಲಾನಯನ ಸಮಿತಿಗೆ ಬಿಡುಗಡೆ ಮಾಡುತ್ತಾರೆ.
  • ಸ್ವ ಸಹಾಯ ಗುಂಪಿನವರು ತಯಾರಿಸಿದ ಉಪ ಯೋಜನೆಯ ಆಧಾರದ ಮೇಲೆ ಬೇಡಿಕೆ ಪತ್ರವನ್ನು ಜಲಾನಯನ ಸಮಿತಿಗೆ ಸಲ್ಲಿಸುವುದು.
  • ಮರುಪಾವತಿಯಾದ ನಿಧಿಯನ್ನು ಮುಂದೆ ಸಂಘದ ಇತರೆ ಸದಸ್ಯರಿಗೆ ಉದ್ಯಮಶೀಲತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬಳಸಿಕೊಳ್ಳಬೇಕು.
  • ಯೋಜನೆಯಿಂದ ಬಿಡುಗಡೆ ಮಾಡಿದ ಮೊತ್ತವು ಮರು ಪಾವತಿಯಾಗಿ ಕ್ರೋಢೀಕರಣವಾದಾಗ ಸದಸ್ಯರು ಯಾವುದೇ ಕಾರಣದಿಂದ ಸಮಾನವಾಗಿ ವಿಂಗಡಿಸಿ ಹಂಚಿಕೊಳ್ಳಬಾರದು. ಬದಲಾಗಿ ಈ ನಿಧಿಯನ್ನು ಪುನರಾವರ್ತಿತ ರೀತಿಯಲ್ಲಿ ಸದುಪಯೋಗವಾಗುತ್ತಿರಬೇಕು.
  • ಉಪ ಯೋಜನೆಯಲ್ಲಿ ಏನಾದರೂ ಬದಲಾವಣೆ ಮಾಡಬೇಕಾದಲ್ಲಿ ಮಾಡಿ ಜಲಾನಯನ ಸಮಿತಿಯ ಅನುಮೋದನೆಗಾಗಿ ಒಪ್ಪಿಸುವುದು.
  • ಅವಶ್ಯಕತೆ ಇದ್ದಲ್ಲಿ ಸಂಬಂದಪಟ್ಟವರ ಜೊತೆ ಚರ್ಚಿಸಿ ಬದಲಾವಣೆ ಮಾಡಿ ಸರ್ಕಾರೇತರ ಸಂಸ್ಥೆಯವರ ಮೂಲಕ ಜಿಲ್ಲಾ ಜಲಾನಯನ ಅಭಿವೃದ್ಧಿ
  • ಅಧಿಕಾರಿಗಳಿಗೆ ಸಲ್ಲಿಸುವುದು.
  • ಜಲಾನಯನ ಸಮಿತಿಯ ಪ್ರತಿ ಸ್ವ ಸಹಾಯ ಗುಂಪಿಗೆ ಹಣವನ್ನು ನಿಯಮಾನುಸಾರ ಬಿಡುಗಡೆ ಮಾಡುವುದು.
  • ಬಿಡುಗಡೆ ಮಾಡಿದ ಮೊತ್ತಕ್ಕೆ ದಾಖಲೆಯಾಗಿ ಚಲನ್ ಸಂಗ್ರಹಣೆ ಮಾಡುವುದು ಹಾಗೂ ಅದನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸರ್ಕಾರೇತರ ಸಂಸ್ಥೆ ಮೂಲಕ ಸಲ್ಲಿಸುವುದು.
  • ಈ ರೀತಿ ಬಿಡುಗಡೆಯಾದ ಹಣವು ಪ್ರೋತ್ಸಾಹ ಧನವೇ ಹೊರತು ಯಾವ ಸದಸ್ಯರ ವೈಯಕ್ತಿಕ ಹಣವಾಗಿರುವುದಿಲ್ಲ.
  • ಸ್ವ ಸಹಾಯ ಗುಂಪು ಉದ್ಯಮಶೀಲರಿಗೆ ಸಂಘದ ನಿಯಮದಂತೆ ಸಾಲವಾಗಿ ಈ ಹಣವನ್ನು ಬಿಡುಗಡೆ ಮಾಡುತ್ತಾರೆ. ಈ ಉದ್ಯಮಶೀಲರು ಅತೀ ಬಡವರಾಗಿರುವುದರಿಂದ ಬಡ್ಡಿಯನ್ನು ನಿಗದಿಪಡಿಸುವಾಗ ಎಚ್ಚರಿಕೆವಹಿಸಿ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಸಾಲವನ್ನು ನೀಡಬೇಕು. ಅಲ್ಲದೇ, ಈ ಹಣದ ಮರುಪಾವತಿಗೆ ಸೂಕ್ತ ಅವಧಿಯನ್ನು ನಿಗದಿಪಡಿಸಬೇಕು.
  • ಉದ್ಯಮಗಳನ್ನು ಸ್ಥಾಪಿಸಲು ಇನ್ನೂ ಹೆಚ್ಚಿಗೆ ಮೊತ್ತದ ಅವಶ್ಯಕತೆಯ ಸಂದರ್ಭದಲ್ಲಿ ಸ್ವ ಸಹಾಯ ಗುಂಪು ತನ್ನ ನಿಧಿಯಿಂದ ಅಥವಾ ಬ್ಯಾಂಕಿನಿಂದ ಸಾಲ ಪಡೆಯಬೇಕು.

ಹಣಕಾಸು ಮತ್ತು ಮಾರುಕಟ್ಟೆ ಸಂಪರ್ಕ

  • ಯೋಜನೆಯಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಬೇಕಾದಲ್ಲಿ ಸರ್ಕಾರೇತರ ಸಂಸ್ಥೆಯವರ ಸಹಾಯದಿಂದ ಬ್ಯಾಂಕ್ ಲಿಂಕೇಜ್ ಮಾಡಿ ಸಾಲ ಪಡೆಯುವುದು.
  • ಪ್ರತಿ ಸ್ವ ಸಹಾಯ ಸಂಘಗಳು ಸಕಾರೇತರ ಸಂಸ್ಥೆಗಳ ಸಹಾಯದಿಂದ ಬ್ಯಾಂಕ್ನಲ್ಲಿ ಖಾತೆ ತೆಗೆಯುವುದು.
  • ಫಲಾನುಭವಿಗಳು ತಯಾರಿಸಲಾದ ವಸ್ತುಗಳನ್ನು ಮಾರಾಟ ಮಾಡಲು ಸ್ವ ಸಹಾಯ ಗುಂಪಿನ ಸದಸ್ಯರು ಸರ್ಕಾರೇತರ ಸಂಸ್ಥೆಯವರ ನೆರವನ್ನು ಪಡೆಯಬಹುದು.
  • ಫಲಾನುಭವಿಗಳು ಚಟುವಟಿಕೆಗಳನ್ನು ಕೈಗೊಳ್ಳುವಾಗ ಮಾರುಕಟ್ಟೆ ಸೌಲಭ್ಯವಿರುವ ಚಟುವಟಿಕೆಗಳನ್ನು ಮಾತ್ರ ತೆಗೆದುಕೊಳ್ಳುವುದು.
  • ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
  • ಹಾಗೂ ಫಲಾನುಭವಿಗಳು ಸಂಬಂದಪಟ್ಟವರಿಂದ ಮಾರ್ಗದರ್ಶನ ಪಡೆಯುವುದು.

ಕೌಶಲ್ಯ ತರಬೇತಿ

  • ಕೌಶಲ್ಯ ತರಬೇತಿ ಪಡೆದ ಸದಸ್ಯರಲ್ಲಿ 30ರಷ್ಟು ಮಾತ್ರ ನೀಡುವುದು.
  • ಕೌಶಲ್ಯ ತರಬೇತಿಗಳಲ್ಲಿ 2 ವಿಧಾನಗಳಿವೆ.
  • ಸಾಂಪ್ರದಾಯಿಕ ಕೌಶಲ್ಯ ತರಬೇತಿಗಳು
  • ಹಣಕಾಸಿನ ಸೌಲಭ್ಯ-ಪ್ರತಿ ಆಯ್ದ ಸ್ವ ಸಹಾಯ ಗುಂಪಿನಲ್ಲಿ ಸದಸ್ಯರಿಗೆ ತಲಾ 75000 ಸುತ್ತು ನಿಧಿಯಾಗಿ ಬಿಡುಗಡೆ ಮಾಡಲಾಗುವುದು.
  • ಫಲಾನುಭವಿಗಳು ಆಯ್ದ ಚಟುವಟಿಕೆಗೆ ಸಂಬಂಧಪಟ್ಟಂತೆ ಚಟುವಟಿಕೆ ತಗಲುವ ವೆಚ್ಚವನ್ನು ಮಾತ್ರ ಯೋಜನೆಯಿಂದ ಕೊಡಲಾಗುವುದು.
  • ಸ್ವ ಸಹಾಯ ಗುಂಪಿನ ಸದಸ್ಯರು ಜಲಾನಯನ ಸಮಿತಿಯಿಂದ ಪಡೆದ ಹಣಕ್ಕೆ ಸಂಬಂಧ ಪಟ್ಟ ಫಲಾನುಭವಿಗಳಿಂದ ರಸೀದಿ ಹಾಗೂ ವೋಚರನ್ನು ಪಡೆದು ಪಾವತಿಸವುದು.

ಸಾಲದ ಬಿಡುಗಡೆ ಮತ್ತು ಬಳಕೆ

  • ಉಧ್ಯಮಶೀಲತಾ ತರಬೇತಿ ಪಡೆದ ಸದಸ್ಯರಿಗೆ ಮಾತ್ರ ಮೊದಲ ಸುತ್ತಿನಲ್ಲಿ ಹಣ ಬಿಡುಗಡೆ ಮಾಡುವುದು.
  • ಸುತ್ತು ನಿಧಿಯನ್ನು ಮಾರ್ಗಸೂಚಿಯ ಪ್ರಕಾರ ಬಳಸಬೇಕು.
  • ಸಾಲ ಪಡೆಯುವ ಸದಸ್ಯರು ಪ್ರತಿ ಸಭೆಗೆ ಹಾಜರಾಗಬೇಕು, ನಿಯಮಿತವಾಗಿ ಉಳಿತಾಯ ಹಾಗೂ ಸಾಲ ಮರುಪಾವತಿ ಮಾಡುತ್ತಿರಬೇಕು.
  • ತರಬೇತಿ ಪಡೆದ ಫಲಾನುಭವಿಗಳು ಆಯ್ಕೆ ಮಾಡಿದ ಚಟುವಟಿಕೆಯನ್ನು ಶೀಘ್ರವೇ ಪ್ರಾರಂಭಿಸುವುದು ಸುತ್ತು ನಿಧಿಯನ್ನು ಮರುಪಾವತಿಸಲು ಸಮಯವನ್ನು ನಿಗದಿಪಡಿಸುವುದು.
  • ಮರುಪಾವತಿಯ ಹಣವನ್ನು ಸ್ವ ಸಹಾಯ ಗುಂಪಿನ ಇತರೆ ಸದಸ್ಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಉಪಯೋಗಿಸುವುದು. ಯಾವುದೇ ಕಾರಣಕ್ಕಾದರೂ ಹಣವನ್ನು ಸ್ವ ಸಹಾಯ ಗುಂಪಿನವರು ಹಂಚಿಕೊಳ್ಳದೇ ಆದಾಯ ತರುವಂತಹ ಚಟುವಟಿಕೆಗಳಿಗೆ ಉಪಯೋಗಿಸುವುದು

ಸಾಲದ ಬಿಡುಗಡೆ ಮತ್ತು ಬಳಕೆ

  • ಸಂಪ್ರದಾಯಿ ಚಟುವಟಿಕೆ, ಕೌಶಲ್ಯ ಆದಾರಿತ ಚಟುವಟಿಕೆ ಹಾಗೂ ಉದ್ಯಮಶೀಲತಾ ತರಬೇತಿ ಪಡೆದ ಸದಸ್ಯರು ಈ ಸಮಿತಿಯಲ್ಲಿ ಇರಬೇಕು.
  • ಸ್ವತ್ತುಗಳ ಖರೀದಿ
  • ಜಾನವಾರು ಸಾಕಣೆಯ ಫಲಾನುಭವಿಗಳು ಆಯಾ ಪ್ರದೇಶಗಳಿಗೆ ಹೊಂದಿಕೊಳ್ಳುವ ತಳಿಗಳನ್ನು ಖರೀದಿಸಬೇಕು ಹಾಗೂ ವಿಮೆ ತಪ್ಪದೇ ಮಾಡಿಸಬೇಕು.
  • ಗುಣಮಟ್ಟದ ಸ್ವತ್ತುಗಳನ್ನು ಮಾತ್ರ ಖರೀದಿಸಲು ಈ ಕೆಳಕಂಡ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವುದು :
  • ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ
  • ಜಲಾನಯನ ಸಮಿತಿಯ ತಂಡದ ಪ್ರತಿನಿಧಿ
  • ಜಲಾನಯನ ಸಮಿತಿಯ ಅನುಭವವುಳ್ಳ ಪ್ರತಿನಿಧಿ.
  • ಯೋಜನೆಯಲ್ಲಿನ ಆದಾಯಕ್ಕನುಗುಣವಾಗಿ ಕಂತಿನ ಮೊತ್ತವನ್ನು ನಿಗಧಿಪಡಿಸುವುದು.
  • ಸಾಲದ ವಿವರ ಹಾಗೂ ಮರುಪಾವತಿಯ ಕುರಿತು ಸಾಲದ ಪಾಸ್ ಪುಸ್ತಕದಲ್ಲಿ ನಮೂದಿಸುವುದು.

ಗ್ರಾಮ ಮಟ್ಟದ ತರಬೇತಿ- I

  • ಸ್ಥಳೀಯವಾಗಿ ಗ್ರಾಮ ಮಟ್ಟದಲ್ಲಿಯೇ ಜಾನುವಾರು ಸಾಕಣೆ ರೈತರಿಗೆ ಸದಸ್ಯರಿಗೆ, ಜಾನುವಾರುಗಳ ಖರೀದಿಗೆ ಮುನ್ನ ಒಂದು ದಿನದ ತರಬೇತಿಯನ್ನು ನೀಡಲಾಗುವುದು.
  • ಉತ್ತಮ ತಳಿಯ ಜಾನುವಾರಗಳ ಆಯೆ, ಧರ ನಿಗದಿ, ಖರೀದಿ ಮತ್ತು ಸುರಕ್ಷಿತವಾಗಿ ಸಾಗಾಣಿಕೆ ಮಾಡುವ ಬಗ್ಗೆ ತರಬೇತಿ ನೀಡಲಾಗುವುದು. ಈ ತರಬೇತಿಯನ್ನು ಕಾರ್ಯಕಾರಿ ಸಮಿತಿಯವರು ಏರ್ಪಡಿಸುತ್ತಾರೆ.

ಗ್ರಾಮ ಮಟ್ಟದ ತರಬೇತಿ- II

  • ಜಾನುವಾರುಗಳ ಖರೀದಿಯ ನಂತರ ಜಾನುವಾರು ಸಾಕಣೆ ರೈತರಿಗೆ ಸದಸ್ಯರಿಗೆ, ವಿವಿಧ ಜಾನುವಾರು ಸಾಕಣೆ ಕೌಶಲ್ಯಗಳನ್ನು ಅಂದರೆ, ಹಸಿರುವ ಮೇವು ಪೂರೈಕೆ, ಸಮತೋಲನ ಆಹಾರದ ಬಗ್ಗೆ, ಜಾನುವಾರು ರೋಗಿಗಳನ್ನು ತಡೆಗಟ್ಟುವ ಬಗ್ಗೆ ಹಾಗೂ ಉತ್ಪಾದನೆ ಹೆಚ್ಚಳವಾಗಿ ಒಂದು ದಿನದ ತರಬೇತಿ ನೀಡಲಾಗುವುದು.

ಆದಾಯ ಉತ್ಪದನಾ ಚಟುವಟಿಕೆಗಳ ನೋಟ

ಸಂಪ್ರದಾಯಿಕ ಚಟುವಟಿಕೆ

ಕೌಶಲ್ಯ ಆಧಾರಿತ ಚಟುವಟಿಕೆ

ನವೀನ ಚಟುವಿಕೆ

ವಿವಿಧ ಭಾಗಿದಾರರ ಹೆಚ್ಚುವರಿ ಜವಾಬ್ದಾರಿ

  • ಸಕಾರೇತರ ಸಂಸ್ಥೆಯು ಸ್ವ ಸಹಾಯ ಗುಂಪುಗಳು ವಂತಿಕೆ ತುಂಬುವಲ್ಲಿ ಮಾರ್ಗದರ್ಶನವನ್ನು ನೀಡುವುದು ಹಾಗೂ ಸ್ವ ಸಹಾಯ ನಡುವಿನ ಒಪ್ಪಂದ ಪತ್ರ ಹಾಗೂ ಗುಂಪಿನ ಮತ್ತು ಸದಸ್ಯರ ನಡುವಿನ ಕರಾರು ಪತ್ರ ಏರ್ಪಡಿಸುವಂತೆ ಮಾರ್ಗದರ್ಶನ ನೀಡುವುದು.
  • ಸ್ವ ಸಹಾಯ ಗುಂಪುಗಳಿಗೆ ವಿಶೇಷ ತರಬೇತಿ ನೀಡಿ ಸೌಲಭ್ಯ ದೊರಕಿಸುವಲ್ಲಿ ಸರ್ಕಾರೇತರ ಸಂಸ್ಥೆಯೊಡಗೂಡಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯವರೊಡನೆ ಸಂಪರ್ಕ ಸಾಧಿಸುವುದು.

ಲೆಕ್ಕ ಪುಸ್ತಕ ಹಣಕಾಸು ನಿರ್ವಹಣೆ

ಪರಿಶೋಧನೆ ಮತ್ತು ಹಣಕಾಸು

ಗುಂಪಿನ ಲೆಕ್ಕ ಪುಸ್ತಕ ಪರಿಶೋಧನೆ (ಆಡಿಟ್) ಏಕೆ?

  • ಗುಂಪಿನ ಲೆಕ್ಕ ಪುಸ್ತಕಗಳನ್ನು ಚಾರ್ಟ್‍ಡ್ ಲೆಕ್ಕಗರಿಂದ ಪರಿಶೋಧನೆ ಮಾಡಿಸುವುದರಿಂದ ಗುಂಪಿಗೆ ಸಹಾಯವಾಗುತ್ತದೆ.
  • ಸಾಮಾನ್ಯವಾಗಿ ಸಂಘಗಳು 6 ತಿಂಗಳಿಗೊಮ್ಮೆ ಲೆಕ್ಕ ಪರಿಶೋಧನೆಯನ್ನು ಮಾಡಿಸುತ್ತವೆ.
  • ಈ ರೀತಿ ವರ್ಷದಲ್ಲಿ ಎರಡು ಬಾರಿ ಪರಿಶೋಧನೆ ಮಾಡಲು ಕಷ್ಠವಾದರೆ ವರ್ಷಕ್ಕೊಮ್ಮೆಯಾದರೂ ಲೆಕ್ಕ ಪರಿಶೋಧನೆ ಮಾಡಿಸಬೇಕು.
  • ಲೆಕ್ಕ ಪರಿಶೋಧನೆ ಖರ್ಚನ್ನು ಸಂಘವು ಕೊಡುತ್ತವೆ.
  • ಲೆಕ್ಕ ಪರಿಶೋಧನೆಯಿಂದ ಗುಂಪಿನ ಲೆಕ್ಕ ಸರಿ ಇದೆಯೇ ಎಂದು ಸದಸ್ಯರು ತಿಳಿದುಕೊಳ್ಳಬಹುದು.
  • ಗುಂಪಿನ ಬಂದ ಹಾಗೂ ಖರ್ಚಾದ ಹಣದ ವಿವರ ಸರಿಯಾಗಿ ತಿಳಿಯುತ್ತದೆ.

ಸ್ವ ಸಹಾಯ ಗುಂಪಿನ ಬಂಡವಾಳದಲ್ಲಿ ಯಾವ ಯಾವ ಹಣ ಸೇರಿದೆ?

  • ಸದಸ್ಯರಿಂದ ಪಡೆದ ಸದಸ್ಯತ್ವ ಶುಲ್ಕ.
  • ಸದಸ್ಯರಿಂದ ಬಂದ ಉಳಿತಾಯದ ಹಣ.
  • ದಂಡದ ಕಡೆಗೆ ವಸೂಲಿಯಾದ ಹಣ.
  • ಗುಂಪಿಗೆ ಕೊಡುಗೆ ಅಥವಾ ದಾನವಾಗಿ ಬಂದ ಹಣ.
  • ಸದಸ್ಯರ ಸಾಲಕ್ಕೆ ಪಡೆದ ಬಡ್ಡಿ ಹಾಗೂ ಬ್ಯಾಂಕಿನಲ್ಲಿಟ್ಟ ಹಣಕ್ಕೆ ಬಂದ ಬಡ್ಡಿ.
  • ಇತರೆ ಸಂಘ ಸಂಸ್ಥೆಗಳಿಂದ ಪಡೆದಿರುವ ಸಾಲ ಅಥವಾ ಸಹಾಯ ಧನದ ಹಣ.
  • ಒಟ್ಟಾರೆ : ಗುಂಪಿನ ಸದಸ್ಯರ ಮೇಲಿರುವ ಸಾಲದ ಮರುಪಾವತಿ ಮೊತ್ತ + ಕೈಯಲ್ಲಿ

ಉಳಿದಿರುವ ಮೊತ್ತ + ಬ್ಯಾಂಲಿನಲ್ಲಿರುವ ಗುಂಪಿನ ಖಾತೆಯ ಮೊತ್ತ + ಎಫ್. ಡಿ ಮೊತ್ತ= ಗುಂಪಿನ ಬಂಡವಾಳವಾಗಿರುತ್ತದೆ.

ಬಂಡವಾಳವನ್ನು ಸರಿಯಾಗಿ ಬಳಸುವುದು ಹೇಗೆ?

  • ಬಂಡವಾಳವನ್ನು ಕೇವಲ ಬ್ಯಾಂಕಿನಲ್ಲಿಟ್ಟಿದ್ದರೆ ಹೆಚ್ಚಿನ ಉಪಯೋಗವಿಲ್ಲ. ಅದು ಸದಸ್ಯರಿಗೆ ಹೆಚ್ಚು ಹೆಚ್ಚು ಸಾಲ ಕೊಡಲು ಉಪಯೋಗವಾದರೆ ಸ್ವ ಸಹಾಯ ಗುಂಪಿನ ಬಂಡವಾಳ ಹೆಚ್ಚು ಬೆಳೆಯುತ್ತದೆ. ಸದಸ್ಯರಿಗೂ ಸಹ ಹೆಚ್ಚಿನ ಉಪಯೋಗವಾಗುತ್ತದೆ.
  • ಹೆಚ್ಚು ಸಾಲ ಕೊಟ್ಟು ಸರಿಯಾಗಿ ಮರು ಪಾವತಿ ಮಾಡಿದ್ದರೆ, ಆ ಗುಂಪಿಗೆ ಬೇರೆ ಸಂಸ್ಥೆಗಳಿಂದ (ಬ್ಯಾಂಕ್ ಇತ್ಯಾದಿ) ಸಾಲ ಪಡೆಯುವ ಯೋಗ್ಯತೆ ಬರುತ್ತದೆ.
  • ಬ್ಯಾಂಕಿನಿಂದ ಅಥವಾ ಇತರೆ ಸಂಸ್ಥೆಗಳಿಂದ ಪಡೆದ ಸಾಲವನ್ನು ತಕ್ಷಣ ಸದಸ್ಯರಿಗೆ(ಅಥವಾ ಪಡೆದ ಉದ್ದೇಶಕ್ಕೆ) ಸಾಲವಾಗಿ ನೀಡಬೇಕು. ಇಲ್ಲವಾದರೆ ಗುಂಪು ತನ್ನ ಬಂಡವಾಳದಿಂದ ಆ ಹಣಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ.
  • ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡುತ್ತಿರುವಂತೆ ನೋಡಿಕೊಳ್ಳಬೇಕು. ಮರುಪಾವತಿ ಆದ ಹಣವನ್ನು ಮತ್ತೆ ಸಾಲ ನೀಡಲು ಬಳಸಬೇಕು.
  • ಸಾಲ ಮರುಪಾವತಿ ಮಾಡುವಾಗ ನಿಗದಿಸಿರುವ ಪ್ರಕಾರ ಸೇವಾ ಶುಲ್ಕ ಪಡೆಯಬೇಕು. ಇಲ್ಲವಾದರೆ ಗುಂಪಿನ ಬಂಡವಾಳದಿಂದ ಹೊರಗಿನ ಸಂಸ್ಥೆಗಳಿಗೆ ಬಡ್ಡಿ ಕಟ್ಟಬೇಕಾಗುತ್ತದೆ.
  • ಗುಂಪಿನ ಬಂಡವಾಳವನ್ನು ಅನಾವಶ್ಯಕ ಕಾರ್ಯಕ್ರಮಗಳಿಗೆ ಖರ್ಚು ಮಾಡಬಾರದು (ಪೆಂಡಾಲ್ ಹಾಕಲು, ಹಾರ ತರಲು, ಊಟ ಹಾಕಿಸಲು ಇತ್ಯಾದಿ)
  • ಬಂಡವಾಳವು ಹೆಚ್ಚು ಇದ್ದಲ್ಲಿ ಅದನ್ನು ಹೆಚ್ಚು ಬಡ್ಡಿ ಬರುವಂತಹ ಖಾತೆಗಳಲ್ಲಿ ತೊಡಗಿಸಬೇಕು (ನಿಗದಿತ ಠೇವಣಿ ಇತ್ಯಾದಿ)
  • ಹೆಚ್ಚಿರುವ ಬಂಡವಾಳವನ್ನು ಆದಾಯ ಬರುವಂತಹ ಕಾರ್ಯಕ್ರಮಗಳಿಗೆ ತೊಡಗಿಸಿ ಹೆಚ್ಚು ಲಾಭ ಪಡೆಯಬಹುದು.

ಯಾರಿಗೆ ಮೊದಲು ಸಾಲ ಮತ್ತು ಹೇಗೆ ನೀಡುತ್ತಾರೆ?

  • ಗುಂಪಿನ ಸದಸ್ಯರು ಸಾಲ ಕೇಳಿದಾಗ ಯಾವ ಆಧಾರದ ಮೇಲೆ, ಯಾರಿಗೆ ಮತ್ತು ಎಷ್ಟು ಸಾಲ ಕೊಡಬೇಕು ಎಂದು ತೀರ್ಮಾನಿಸುವುದು ಬಹಳ ಮುಖ್ಯವಾದ ಹಾಗೂ ಸೂಕ್ಷ್ಮವಾದ ಕೆಲಸವಾಗಿದೆ. ಈಗಾಗಲೇ ಸಾಲ ಕೊಡುತ್ತಿರುವ ಗುಂಪುಗಳು ಈ ಕೆಳಗಿನ ಅಂಶಗಳನ್ನು ಆಧರಿಸಿ ಸಾಲ ಕೊಡುತ್ತಿವೆ
  • ಸಾಲ ಕೇಳಿರುವ ಸದಸ್ಯಳು/ನು ಸರಿಯಾಗಿ ಸಭೆಗೆ ಹಾಜರಾಗಿರಬೇಕು
  • ಪ್ರತಿ ವಾರ ಕೈಲಾದಷ್ಟು ಉಳಿತಾಯ ಮಾಡಿರಬೇಕು
  • ಗುಂಪುಗಳು ಒಗ್ಗಟ್ಟಾಗಿ ತೆಗೆದುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಬೇಕು
  • ಗುಂಪಿನ ಇತರೆ ಕೆಲಸಗಳಲ್ಲಿ ಭಾಗವಹಿಸಿ ಜವಾಬ್ದಾರಿ ಹಂಚಿಕೊಳ್ಳುತ್ತಿರಬೇಕು
  • ಕೇಳಿರುವ ಸಾಲದ ಉದ್ದೇಶ ಯಾವುದು ಹಾಗೂ ಅದರ ಅವಶ್ಯಕತೆ ಎಷ್ಟಿದೆ ಎಂದು ನೋಡುತ್ತಾರೆ.
  • ಸಾಲದಿಂದ ಖರೀದಿಸುವ ವಸ್ತುವನ್ನು ಸಾಲ ಪಡೆಯುವವರು ನಿರ್ವಹಿಸುವ ಶಕ್ತಿ ಹೊಂದಿರಬೇಕು.
  • ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವ ಶಕ್ತಿ ಇರಬೇಕು.
  • ಹಳೆ ಸಾಲ ತೆಗೆದುಕೊಂಡಿದ್ದರೆ ಅದನ್ನು ಸರಿಯಾಗಿ ಬಳಸಿಕೊಂಡಿರಬೇಕು ಮತ್ತು ಸಾಲ ಮರು ಪಾವತಿ ಸರಿಯಾಗಿ ಮಾಡಿರಬೇಕು.
  • ಸ್ವ ಸಹಾಯ ಗುಂಪಿನ ಸಭೆಯಲ್ಲಿ ಸಾಲವನ್ನು ಸದಸ್ಯರು ಕೇಳುತ್ತಾರೆ. ಅದನ್ನು ತೀರ್ಮಾನ ಪುಸ್ತಕದಲ್ಲಿ ಬರೆಯಲಾಗುತ್ತದೆ. ಸದಸ್ಯರು ಸಾಲವನ್ನು ಯಾವುದೇ ಉದ್ದೇಶಕ್ಕೂ ಕೇಳಬಹುದು. ಎಲ್ಲಾ ಸದಸ್ಯರು ಸೇರಿ ಕೇಳಿರುವ ಸಾಲಗಳನ್ನು ವಿವರವಾಗಿ ಚರ್ಚಿಸುತ್ತಾರೆ. ಸಾಲ ಎಷ್ಟು ತುರ್ತಾಗಿ ಬೇಕಾಗಿದೆ, ಅದರ ಅವಶ್ಯಕತೆ, ಗುಂಪಿನಲ್ಲಿ ಬಂಡವಾಳ ಎಷ್ಟಿದೆ ಎಂಬುದನ್ನು ಮುಖ್ಯವಾಗಿ ಚರ್ಚಿಸಿ ಸಾಲ ಕೊಡಬೇಕೆ ಬೇಡವೇ ಎಂಬುದನ್ನು ತೀರ್ಮಾನಿಸುತ್ತಾರೆ.

ಸಾಲ ಕೊಟ್ಟಿದ್ದಕ್ಕೆ ಯಾವ ಯಾವ ದಾಖಲಾತಿಗಳು ಇರಬೇಕು?

  • ಸಾಲದ ಅರ್ಜಿ ಅಥವಾ ತೀರ್ಮಾನ ಪುಸ್ತಕದಲ್ಲಿ ಬರೆದಿರುವುದು.
  • ಸಾಲ ಕೊಡಲು ತೆಗೆದುಕೊಂಡ ತೀರ್ಮಾನವನ್ನು ತೀರ್ಮಾನ ಪುಸ್ತಕದಲ್ಲಿ ಬರೆದಿರಬೇಕು.
  • ಸದಸ್ಯರ ಪಾಸ್ ಪುಸ್ತಕದಲ್ಲಿ ಬರೆದಿರಬೇಕು.
  • ವೈಯಕ್ತಿಕ ಸಾಲದ ಖಾತೆ ಪುಸ್ತಕದಲ್ಲಿ ಬರೆದಿರಬೇಕು.
  • ನಗದು ಪುಸ್ತಕದಲ್ಲಿ ಬರೆದಿರಬೇಕು.
  • ಸಾಲವನ್ನು ಚೆಕ್ ಮೂಲಕ ನೀಡಿರಬೇಕು.

ಯೋಜನಾ ಮುಗಿದ ನಂತರ ಸ್ವ ಸಹಾಯ ಗುಂಪಿನಿಂದ ಸೃಜಿಸಿದ ಆಸ್ತಿ ನಿರ್ವಹಣೆ ಬಗ್ಗೆ ಕ್ರಮ:

  • ಜಾನುವಾರುಗಳು ಸಮುದಾಯ ಜಮೀನಿನಲ್ಲಿ ಮೇಯುವುದನ್ನು ನಿಯಂತ್ರಿಸುವುದು.
  • ಹಸಿ ಮರ ಕಡಿಯುದನ್ನು ನಿಲ್ಲಿಸುವುದು ಮತ್ತು ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಸಮಿತಿಗೆ ಒತ್ತಾಯಿಸುವುದು.
  • ಸಾಲ ಹಾಗೂ ಮರುಪಾವತಿಯ ಬಗ್ಗೆ ಗುಂಪು ಸದಾ ಗಮನ ಇಡಬೇಕು.
  • ಸ್ವತ್ತುಗಳ ಉಸ್ತುವಾರಿಗಾಗಿ ಪ್ರತೀ ವಾರ ಸಭೆ ಸೇರಿ ಚರ್ಚಿಸಬೇಕು.
  • ಅವಶ್ಯಕತೆ ಇದ್ದ ಎಲ್ಲಾ ಸ್ವತ್ತುಗಳಿಗೆ ಅಗತ್ಯವಾಗಿ ವಿಮೆಯನ್ನು ಮಾಡುವುದು.

ದುರ್ಬಲ ವರ್ಗದ ಸಹಯೋಜನೆಯ ಉಸ್ತುವಾರಿ ಹೇಗೆ?

  • ಸ್ವ ಸಹಾಯ ಗುಂಪು ಸಾಲ ತೆಗೆದುಕೊಂಡ ಸದಸ್ಯರು ಉದ್ಯೋಗ ಪ್ರಾರಂಭಿಸಿದ್ದಾರೆಯೇ ಎಂದು ನೋಡಿಕೊಳ್ಳಬೇಕು. ಈ ಬಗ್ಗೆ ಜಲಾನಯನ ಸಮಿತಿಗೆ ಪ್ರತಿನಿಧಿಯು ವಾರದ ಸಭೆಯಲ್ಲಿ ವರದಿ ಸಲ್ಲೆಸುತ್ತಿರಬೇಕು.
  • ಸ್ವ ಸಹಾಯ ಗುಂಪು ಸಾಲ ನೀಡಿದ ವಿವರ, ವಸೂಲಾತಿ ಹಾಗೂ ಉದ್ಯೋಗ ವಿವರ ಇತ್ಯಾದಿಗಳ ದಾಖಲಾತಿಗಳನ್ನು ಪುಸ್ತಕದಲ್ಲಿ ಬರೆಯಬೇಕು.
  • ಜಲಾನಯನ ಸಮಿತಿಯು ಸ್ವ ಸಹಾಯ ಗುಂಪುಗಳಿಂದ ಉಪಯುಕ್ತ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಈ ಪ್ರಮಾಣಪತ್ರದಲ್ಲಿ ಸಾಮಾಜಿಕ ಪರಿಶೋಧನಾ ಸಮಿತಿ ಸಹಿ ಮಾಡಿರಬೇಕು.
  • ಜಲಾನಯನ ಸಮಿತಿಯು ಎಲ್ಲಾ ಸ್ವ ಸಹಾಯ ಗುಂಪುಗಳಿಗೆ ನೀಡಿದ ಹಣಕ್ಕೆ ದಾಖಲಾತಿಗಳನ್ನು ಪುಸ್ತಕದಲ್ಲಿ ಬರೆಯಬೇಕು. ಪ್ರತಿ ತಿಂಗಳೂ ಆರ್ಥಿಕ ವರದಿಯನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು.
  • ಕ್ಷೇತ್ರ ಮಾರ್ಗದರ್ಶಿ ಸಂಸ್ಥೆಯು ಪ್ರತಿ ಸದಸ್ಯರ ಉದ್ಯೋಗಗಳನ್ನು ಬೇಟಿ ಮಾಡಿ ಉದ್ಯೋಗದ ಪ್ರಗತಿ, ಪಡೆಯುತ್ತಿರುವ ಆದಾಯ ಹಾಗೂ ಸಮಸ್ಯೆಗಳ ಬಗ್ಗೆ ವರದಿಯನ್ನು ಪ್ರತಿ ತಿಂಗಳೂ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಹಾಗೂ ಮಾರ್ಗದರ್ಶಿ ಸಂಸ್ಥೆಗೆ ನೀಡಬೇಕು.
  • ಜಿಲ್ಲಾ ಮಾರ್ಗದರ್ಶಿ ಸಂಸ್ಥೆಯು ಕೆಲವು ಉದ್ಯೋಗಗಳನ್ನು ಬೇಟಿ ಮಾಡಿ ಪ್ರಗತಿ ಉಸ್ತುವಾರಿ ಮಾಡಿ ಅವಶ್ಯಕತೆ ಇದ್ದಲ್ಲಿ ಕ್ರಮ ತೆಗೆದುಕೊಳ್ಳಬೇಕು.
  • ಉಸ್ತುವಾರಿ ಮತ್ತು ಮೌಲ್ಯ ಮಾಪನ ಸಂಸ್ಥೆಯವರು ತಮ್ಮ ನಿಯಮದ ಪ್ರಕಾರ ಉಸ್ತುವಾರಿ ಮಾಡಿ ವರದಿ ನೀಡಬೇಕು.

ನೆನಪಿಡಿ

  • ಕಿರು ಉದ್ಯೋಗವನ್ನು ಪ್ರಾರಂಭಿಸುವಾಗ ಗ್ರಾಮದ ಆಸಕ್ತ ಜನರು ಒಂದೇ ರೀತಿಯ ಉದ್ಯೋಗವನ್ನು ಕೈಗೊಳ್ಳಬಾರದು. ಹೀಗಾದಾಗ ಮಾರುಕಟ್ಟೆ ಮತ್ತು ಕಚ್ಚಾ ವಸ್ತುಗಳ ಕೊರತೆ ಆಗಬಹುದು. ಪ್ರತಿಯೊಬ್ಬರು ಬೇರೆ ಬೇರೆ ರೀತಿಯ ಉದ್ಯೋಗಗಳನ್ನು ಕೈಗೊಳ್ಳಬೇಕು.
  • ರಾಸಾಯನಿಕಗಳು ಮತ್ತು ವಿಷಕಾರಿ ಅನಿಲಗಳು ಉತ್ಪತ್ತಿಯಾಗುವ ಕಿರು ಉದ್ಯೋಗವನ್ನು ಆಯ್ಕೆ ಮಾಡಬಾರದು. ರಾಸಾಯನಿಕದಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.

ಸ್ವ ಸಹಾಯ ಗುಂಪುಗಳ ಸಂಪರ್ಕ

ಸಂಪರ್ಕ ಎಂದರೇನು?

ಸ್ವ ಸಹಾಯ ಗುಂಪು, ಬ್ಯಾಂಕು, ಗ್ರಾಮ ಪಂಚಾಯತಿ ಹಾಗೂ ಇತರೆ ಸಂಘ ಸಂಸ್ಥೆಗಳೊಂದಿಗೆ ಒಳ್ಳೆಯ ಸಂಬಂಧ, ಸಂಪರ್ಕ ಬೆಳೆಸಿ ಅಲ್ಲಿಂದ ದೊರೆಯುವ ಸಹಾಯ ಪಡೆಯಬೇಕು.

ಸಂಪರ್ಕ ಏಕೆ ಬೆಳೆಸಬೇಕು?

  • ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು.
  • ಸಾಲ ಪಡೆಯಲು ಮತ್ತು ಮರುಪಾವತಿ ಮಾಡಲು.
  • ಬಡವರಿಗಾಗಿ ಇರುವ ಸೌಲಭ್ಯ ಪಡೆದುಕೊಳ್ಳಲು.
  • ತರಬೇತಿ ಪಡೆದುಕೊಳ್ಳಲು.
  • ಗ್ರಾಮಾಭಿವೃದ್ಧಿ ಕೆಲಸ ಮಾಡಲು.
  • ಗ್ರಾಮದ ಮತ್ತು ಗುಂಪಿನ ಸದಸ್ಯರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು.
  • ನೇರ ಸಂಪರ್ಕ ಹೊಂದಿ ಮಧ್ಯವರ್ತಿಗಳ ಮೇಲೆ ಅವಲಂಭನೆ ಕಡಿಮೆ ಮಾಡಲು.
  • ಗುಂಪಿನ ಕೆಲಸ ಕಾರ್ಯಗಳ ಬಗ್ಗೆ ತಿಳುವಳಿಕೆ ನೀಡಲು.
  • ಹೊರಗಿನವರಿಗೆ ಹೆಚ್ಚು ಪರಿಚಯ ಇದ್ದರೆ ಹೊಸ ಕಾರ್ಯಕ್ರಮಗಳು ಬಂದಾಗ ಅವರೇ ನೆನಪು ಮಾಡಿಕೊಂಡು ಮಾಹಿತಿ ತಿಳಿಸುತ್ತಾರೆ./li>
  • ಗುಂಪುಗಳು ನಿರಂತರವಾಗಿ ತನ್ನ ಕೆಲಸವನ್ನು ಸ್ವಾತಂತ್ರ್ಯವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಸಂಪರ್ಕ ಬೆಳೆಸಲು ಸ್ವ ಸಹಾಯ ಗುಂಪಿಗೆ ಏನು ಅರ್ಹತೆಗಳಿರಬೇಕು?

  • ಸ್ವ ಸಹಾಯ ಗುಂಪು ತಪ್ಪದೇ ಸಭೆ ನಡೆಸುತ್ತಿರಬೇಕು.
  • ಸದಸ್ಯರ ಹಾಜರಿ ಚೆನ್ನಾಗಿರಬೇಕು.
  • ಗುಂಪಿನಲ್ಲಿ ಹೆಚ್ಚು ಬಡವರಿರಬೇಕು.
  • ಗುಂಪಿನಲ್ಲಿ ಉಳಿತಾಯ ಹಾಗೂ ಸಾಲದ ವ್ಯವಹಾರಗಳು ಚೆನ್ನಾಗಿರಬೇಕು.
  • ಪುಸ್ತಕಗಳನ್ನು ಸರಿಯಾಗಿ ಬರೆದಿಡಬೇಕು.
  • ಗ್ರಾಮಾಭಿವೃದ್ಧಿ ಕೆಲಸಗಳಲ್ಲಿ ಭಾಗವಹಿಸುತ್ತಿರಬೇಕು.

ಉದಾಹರಣೆಗಾಗಿ ಸಂಪರ್ಕಿಸವಹುದಾದ ಇಲಾಖೆಗಳು :

ಇಲಾಖೆ ಪಡೆದುಕೊಳ್ಳಬಹುದಾದ ಸೌಲಭ್ಯ

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ

  • ಅಂಗನವಾಡಿ ಮಾಹಿತಿ.
  • ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೋಷ್ಟಿಕಾಂಶ ಆಹಾರ
  • ಮತ್ತು ವೈದಕೀಯ ಶುಶ್ರೂಸೆ
  • ಸ್ವಸಹಾಯ ಗುಂಪುಗಳ ಸ್ಥಾಪನೆ

ಸಮಾಜ ಕಲ್ಯಾಣ

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ಸ್ಕಾಲರ್‍ಶಿಪ್ ಸೌಲಭ್ಯ
  • ಹಿಂದುಳಿದ ದುರ್ಬಲ ವರ್ಗಗಳಿಗೆ ವಿವಿಧ ಕಲ್ಯಾಣ ಯೋಜನೆಗಳು

ಕೃಷಿ

  • ಕಿರು ಉದ್ಯಮಗಳ ಸ್ಥಾಪನೆ.
  • ಸಾವಯುವ ಕೃಷಿ.
  • ಎರೆಹುಳು ಗೊಬ್ಬರ ತಯಾರಿಕೆ
  • ರೈತ ಮಹಿಳೆ ಅಭಿವೃದ್ಧಿಗೆ ಮಾಹಿತಿ.
  • ಕೃಷಿ ಸಾಮಾಗ್ರಿಗಳ ಲಭ್ಯತೆ.
  • ಆಧುನಿಕ ಕೃಷಿ ತಂತ್ರಜ್ಞಾನ ಬೆಳೆ ಉತ್ಪಾದನೆ

ತೋಟಗಾರಿಕೆ

  • ನರ್ಸರಿ ತಯಾರಿಸುವಿಕೆ ಮತ್ತು ಸಸಿಗಳ ಲಭ್ಯತೆ.
  • ಹಣ್ಣಿನ ಮತ್ತು ಹುಲ್ಲಿನ ಗಿಡಗಳನ್ನು ಬೆಳೆಸುವಿಕೆ.
  • ಹೂವ ಮತ್ತು ಹಣ್ಣಿನ ಮಾರುಕಟ್ಟೆ ವ್ಯವಸ್ಥೆ.
  • ಫಲ ಪುಷ್ಪ ವಸ್ತು ಪ್ರದರ್ಶನ

ಅರಣ್ಯ

  • ನರ್ಸರಿ ತಯಾರಿಸುವಿಕೆ ಮತ್ತು ಸಸಿಗಳ ಲಭ್ಯತೆ
  • ಮರಮುಟ್ಟು ಲಭ್ಯತೆ
  • ವನ್ಯ ಜೀವಿ ಮಾಹಿತಿ
  • ಪರಿಸರ ಅಭಿವೃದ್ಧಿ ಮಾಹಿತಿ.

ಪಶುಸಂಗೋಪನೆ

  • ಉತ್ತಮ ಹಾಲು ಕೊಡುವ ತಳಿಗಳ ಮಾಹಿತಿ.
  • ಜಾನುವಾರುಗಳಿಗೆ ಪೌಷ್ಟಿಕ ಆಹಾರ.
  • ಉತ್ತಮ ಮೇವು ತಳಿಗಳು ಮತ್ತು ಲಭ್ಯತೆ.
  • ಹಾಲು ಉತ್ಪಾದನೆ ಮಾರಾಟ.
  • ಆದಾಯ ಉತ್ಪನ್ನ ಹೆಚ್ಚಿಸುವ ಜಾನುವಾರು ಚಟುವಟಿಕೆ.

ಮೀನುಗಾರಿಕೆ

  • ಮತ್ಸ್ಯಾಭಿವೃದ್ಧಿ
  • ಅಲಂಕಾರಿಕ ಮೀನು ಸಾಕಾಣಿಕೆ ಮತ್ತು ಮಾರಾಟ.

ರೇಷ್ಮೆ

  • ರೇಷ್ಮೆ ಬೆಳೆಸುವಿಕೆ ಮತ್ತು ರೇಷ್ಮೆ ಹುಳು ಸಾಕಾಣಿಕೆ ಮತ್ತು ಮಾರಾಟ.
  • ಬೆಳೆ ತಳಿಗಳು
  • ರೇಷ್ಮೆ ಮಾರುಕಟ್ಟೆ

ವಾಣಿಜ್ಯ ಮತ್ತು ಕೈಗಾರಿಕೆ

  • ಜೀವನಾಧಾರಿತ ಆದಾಯ ಉತ್ಪನ್ನ ಚಟುವಟಿಕೆಗಳು.
  • ಸಣ್ಣ ಕೈಗಾರಿಕೆ ಸ್ಥಾಪನೆ.
  • ಹಣ್ಣು ಹಂಪಲ ಪ್ರೋಸ್ಸೆಸಿಂಗ್ ಘಟಕಗಳ ಸ್ಥಾಪನೆ

ಸಮುದಾಯ ಸಂಘಗಳು-ಬಳಕೆದಾರರ ಗುಂಪು

ಜಂಟಿ ಭಾದ್ಯತಾ ಗುಂಪು

ಜಂಟಿ ಬಾದ್ಯತಾ ಗುಂಪು (ಎಐಉ) ಎಂದರೆ ಪರಸ್ಪರ ಖಾತರಿ ಆಧಾರದ ಮೇಲೆ ವೈಯುಕ್ತಿಕವಾಗಿ ಅಥವಾ ಗುಂಪಿನ ಸಂಯೋಜನೆಯ ಮೂಲಕ ಸಾಲ ಪಡೆಯುವ ಉದ್ದೇಶದಿಂದ ಒಟ್ಟುಗೂಡಿರುವ 4-11 ವ್ಯಕ್ತಿಗಳು ಸೇರಿದ ಅನೌಪಚಾರಿಕ ಗುಂಪು. ಸಾಮಾನ್ಯವಾಗಿ ಎಐಉ ಯ ಸದಸ್ಯರು ಕೃಷಿ, ಕೃಷಿ ಸಂಬಂಧಿತ ಅಥವಾ ಕೃಷಿಯೇತರ ವಲಯದಲ್ಲಿ ಒಂದೇತರಹದ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಸಾಲ ಪಡೆಯುವಿಕೆಯನ್ನು ಸಾಧ್ಯವಾಗಿಸುವ ಜಂಟಿ ಮುಚ್ಚಳಿಕೆಯೊಂದನ್ನು ಗುಂಪಿನ ಸದಸ್ಯರು ಬ್ಯಾಂಕಿಗೆ ನೀಡಿರುತ್ತಾರೆ. ವೃತ್ತಿ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದರಲ್ಲಿ ಎಐಉ ಯ ಸದಸ್ಯರು ಪರಸ್ಪರರಿಗೆ ಬೆಂಬಲ ನೀಡುವುದನ್ನು ನಿರೀಕ್ಷಿಸಲಾಗುವುದು.

ಸದಸ್ಯತ್ವಕ್ಕೆ ಅರ್ಹತಾ ಮಾನದಂಡಗಳು

  • ಸದಸ್ಯರು ಒಂದೇ ತರಹದ ಸಾಮಾಜಿ-ಆರ್ಥಿಕ ಹಿನ್ನೆಲೆ ಮತ್ತು ಪರಿಸರದ ಕೃಷಿ, ಕೃಷಿ ಸಂಬಂಧಿತ ಅಥವಾ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಾಗಿದ್ದು, ಜಂಟಿ ಬಾಧ್ಯತಾ ಗುಂಪಿನಂತೆ ಕಾರ್ಯ ನಿರ್ವಹಿಸಲು ಒಪ್ಪಿರಬೇಕು. ಇದರಿಂದ ಗುಂಪುಗಳು ಐಕ್ಯತೆಯಿಂದಿರುತ್ತವೆ ಮತ್ತು ಸಮಾನಮನುಷ್ಯ ರೈತರು / ಉದ್ದಿಮೆದಾರರು /ವ್ಯಕ್ತಿಗಳಿಂದ / ಸಂಘಟನೆಗೊಂಡು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
  • ಸದಸ್ಯರು ಒಂದೇ ಹಳ್ಳಿ / ಪ್ರದೇಶ / ನೆರೆಹೊರೆಯಲ್ಲಿರುವವರಾಗಿ, ಗುಂಪಿನ / ವೈಯುಕ್ತಿಕ ಸಾಲಗಳಿಗೆ ಜಂಟಿ ಬಾಧ್ಯತೆಯನ್ನು ತೆಗೆದುಕೊಳ್ಳುವಷ್ಟು ಒಬ್ಬರನೊಬ್ಬರು ಅರಿತಿದ್ದು ನಂಬಿಕೆಯಿರುವವರಾಗಿರಬೇಕು.
  • ಈ ಹಿಂದೆ ಯಾವುದೇ ಔಪಚಾರಿಕ ಆರ್ಥಿಕ ಸಂಸ್ಥೆಗೆ ಸುಸ್ತಿಯಾಗಿರುವ ವ್ಯಕ್ತಿಗಳು ಗುಂಪಿನ ಸದಸ್ಯತ್ವಕ್ಕೆ ಅನರ್ಹರಾಗಿರುತ್ತಾರೆ.
  • ಒಂದೇ ಕುಟುಂಬದಿಂದ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳನ್ನು ಎಐಉ ಯಲ್ಲಿ ಸೇರಿಸಿಕೊಳ್ಳಬಾರದು.

ಗುಂಪಿನ ಮೂಲಕ ನೆರವು :

  • ಎಐಉ ಯ ಚಟುವಟಿಕೆಗಳನ್ನು ನಿರ್ವಹಿಸಲು ನಾಯಕತ್ವವನ್ನು ವಹಿಸುವಷ್ಟು ಎಐಉ ಯ ಎಲ್ಲಾ ಸದಸ್ಯರು ಚುರುಕಾಗಿರಬೇಕು. ಒಬ್ಬ ಪ್ರಭಾವಿ / ಸಮರ್ಥ / ಚುರುಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು. ಎಐಉ ಗೆ ಅತ್ಯವಶ್ಯಕ, ಏಕೆಂದರೆ ಅಂತಿಮವಾಗಿ ಇದು ಎಲ್ಲ ಎಐಉ ಯ ಸದಸ್ಯರಿಗೆ ಉಪಯುಕ್ತವಾಗಿರುತ್ತದೆ. ನಾಯಕನು ಐಕ್ಯತೆಯ ಭಾವವನ್ನು ಪೋಷಿಸಿ, ಶಿಸ್ತನ್ನು ನೋಡಿಕೊಳ್ಳಲು ಹಾಗೂ ಮುಂದುವರಿಯಲು, ಮಾಹಿತಿಯನ್ನು ಹಂಚಲು ಮತ್ತು ಮರುಪಾವತಿಗೆ ಅನುವಾಗಿಸುತ್ತಾನೆ. ಬ್ಯಾಂಕಿಗೆ ಈತನೇ ಗುಂಪಿನ ಚಟುವಟಿಕೆಗಳಿಗೆ ಕೇಂದ್ರಬಿಂದು.
  • ಎಐಉ ಯು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು ಮತ್ತು ಅವುಗಳಲ್ಲಿ ಪರಸ್ಪರ ಆಸಕ್ತಿಯ ವಿಷಯಗಳನ್ನು ಚರ್ಚಿಸಲು ಎಲ್ಲಾ ಸದಸ್ಯರು ತಪ್ಪದೇ ಹಾಜರಾಗಬೇಕು.
  • ಸ್ವ-ಸಹಾಯ ಮತ್ತು ಸಾಂಘಿಕ ಬಲದ ತತ್ವಗಳಿಗೆ ಒತ್ತು ನೀಡಬೇಕು. ಗುಂಪಿನ ಐಕ್ಯತೆಯನ್ನು ಸುಭದ್ರಗೊಳಿಸಬೇಕು. ಗುಂಪಿನ/ಸದಸ್ಯರ ಪಾತ್ರ ನಿರೀಕ್ಷೆ ಮತ್ತು ಕರ್ತವ್ಯಗಳಿಗೆ ಹಾಗೂ ಪ್ರಕ್ರಿಯೆಗಳ ಲಾಭಗಳಿಗೆ ಸಾಕಷ್ಟು ಒತ್ತು ನೀಡಬೇಕು.
  • ತಂತ್ರಜ್ಞಾನ ವರ್ಗಾವಣೆಗೆ ಎಐಉ ಯು ಸೌಲಭ್ಯವಾದ ಮಾಧ್ಯಮವಾಗಿ, ಮಾರುಕಟ್ಟೆ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ತರಬೇತಿಗೆ ಮತ್ತು ಪರೀಕ್ಷೆ ತರಬೇತಿ ಮತ್ತು ಹೂಡಿಕೆ ಅಗತ್ಯಗಳನ್ನು ಲೆಕ್ಕಹಾಕಲು ತಂತ್ರಜ್ಞಾನ ಪ್ರಸರಣೆಗೆ ನೆರವಾಗುತ್ತದೆ.
  • ಉತ್ಪನ್ನವೊಂದರ ಅಭಿವೃದ್ಧಿಗಾಗಿ, ಧಾನ್ಯಗಳು /ತರಕಾರಿ/ ಹಣ್ಣು ಉತ್ಪಾದನೆ ಅಥವಾ ನೇಯ್ಗೆಯಂತಹ ನಿರ್ದಿಷ್ಟ ಚಟುವಟಿಕೆಗಳ ಎಐಉ ಗಳನ್ನು ಹಳ್ಳಿ/ತಾಲ್ಲೂಕು ಮಟ್ಟದಲ್ಲಿ ಒಕ್ಕೂಟಗಳನ್ನಾಗಿ ಮಾಡಬಹುದು.
  • ಕಚ್ಚಾ ಪದಾರ್ಥ ಹಾಗೂ ಉತ್ಪನ್ನಗಳ ಕೊಳ್ಳುವಿಕೆ, ಸಂಸ್ಕರಣ ಮತ್ತು ಉತ್ಪನ್ನ ಮಾರಾಟದಲ್ಲಿನ ವೆಚ್ಚವನ್ನು ಕಡಿಮೆ ಮಾಡಲು ಇಡೀ ಸರಪಳಿಯ ಭಾಗವಾಗುವ ಮೂಲಕ ಎಐಉ ಗಳು ಸ್ಥಿರೀಕರಣವಾದ ಮೇಲೆ ಸಮೂಹ ಒಕ್ಕೂಟ ಅಥವಾ ಉತ್ಪಾದಕರ ಕಂಪನಿಗಳಿಗಾಗಿ ಒಟ್ಟುಗೂಡಬಹುದು.
  • ಎಐಉ ಗಳು ಮತ್ತು ಅವುಗಳ ಒಕ್ಕೂಟಗಳ ಸದಸ್ಯರ ನಡುವೆ ಮಹತ್ತರ ಸಂಪರ್ಕ ಮತ್ತು ಅಂತರಾವಂಬನೆಗೆ ದಾರಿಮಾಡಿಕೊಡುವ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಸೌಹಾರ್ದತೆಯನ್ನು ನಿರ್ಮಿಸಲು ಹಾಗೂ ಕ್ರಿಯಾತ್ಮಕವಾಗಿ ಸಾಲ ಸಂಯೋಜನೆಗಳನ್ನು ರೂಪಿಸಬಹುದಾಗಿದೆ.

ಉಳಿತಾಯ : -

ಎಐಉ ಗಳ ಸದಸ್ಯರು ನಿಯತವಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸಬೇಕು. ನಿಯತವಾಗಿ ಉಳಿತಾಯ ಮಾಡುವ ಪ್ರೋತ್ಸಾಹಿಸಬೇಕು. ನಿಯತವಾಗಿ ಉಳಿತಾಯ ಮಾಡುವ ಹವ್ಯಾಸಗಳನ್ನು ಖಾತರಿಮಾಡಿಕೊಳ್ಳಲು ಬ್ಯಾಂಕುಗಳು ಯ / ಸದಸ್ಯರ ಪ್ರತ್ಯೇಕ ಉಳಿತಾಯ ಖಾತೆಗಳನ್ನು ತೆರೆಯಬೇಕು. ಅವರ ಗುಂಪಿಗೆ ನೀಡುವ ಸಾಲದ ಪ್ರಮಾಣವು ಉದ್ದಿಮೆಯ ಸಾಲ ಅಗತ್ಯಗಳಿಗೆ ಸಂಬಂಧಿಸಿರಬೇಕು. ಉಳಿತಾಯದ ಮೊತ್ತಕ್ಕಲ್ಲ.

ಎಐಉ ಮಾದರಿಗಳು : ಎಐಉ ಗಳಿಗೆ ಸಾಲನೀಡಲು ಬ್ಯಾಂಕುಗಳು ಎರಡು ಮಾದರಿಗಳಲ್ಲಿ ಯಾವುದಾದರು ಒಂದನ್ನು ಅಳವಡಿಸಿಕೊಳ್ಳಬಹುದು.

ಮಾದರಿ ಒಂದು- ಎಐಉ ಯಲ್ಲಿನ ಪ್ರತ್ಯೇಕ ಸದಸ್ಯರಿಗೆ ಸಾಲ ನೀಡುವುದು.

ಎಐಉ ಯ ಪ್ರತಿ ಸದಸ್ಯರಿಗೆ ಪ್ರತ್ಯೇಕ ಏಅಅ ಯನ್ನು ನೀಡಬೇಕು. ಸಾಗುವಳಿ ಮಾಡಬೇಕಾದ ಬೆಳೆ, ಲಭ್ಯವಿರುವ ಸಾಗುವಳಿ ಭೂಮಿ/ಮಾಡಬೇಕೆಂದುಕೊಂಡಿರುವ ಚಟುವಟಿಕೆ ಮತ್ತು ಪ್ರತಿ ಸದಸ್ಯರ ಸಾಲ ನಿರ್ವಹಿಸುವ ಸಾಮಥ್ರ್ಯದ ಆಧಾರದ ಮೇಲೆ ಸಾಲದ ಅಗತ್ಯವನ್ನು ಸಾಲನೀಡುವ ಬ್ಯಾಂಕ್ ನಿಗಧಿಪಡಿಸಬಹುದು. ಗುಂಪಿನ ಎಲ್ಲಾ ಸದಸ್ಯರು ಜಂಟಿಯಾಗಿ ಸಾಲ ಒಪ್ಪಂದವನ್ನು ಬ್ಯಾಂಕಿಗೆ ನೀಡಿ, ಪ್ರತಿ ಸದಸ್ಯರು ಜಂಟಿಯಾಗಿ ಹಾಗೂ ವೈಯಕ್ತಿಕವಾಗಿ ಗುಂಪಿಗೆ ಸೇರಿದ ಪ್ರತಿ ಸದಸ್ಯರು ಪಡೆದುಕೊಂಡ ಎಲ್ಲಾ ಸಾಲಗಳ ಮರು ಪಾವತಿಗೆ ಬಾಧ್ಯರಾಗಿರುತ್ತಾರೆ.

ಕಿಸಾನ್ ಕ್ರೆಡಿಟ್ ಕಾಡ್ (ಏಅಅ) ಅಥವಾ ಸ್ವರೋಜ್‍ಗಾರ್ ಕ್ರೆಡಿಟ್ ಕಾರ್ಡ್ (ಉಅಅ) ಗಳಡಿ ರೂಪುಗೊಂಡ ಸಾಲಬಾಧ್ಯತೆ ಸೇರಿದಂತೆ ವೈಯಕ್ತಿಕ ಸಾಲ ಬಾದ್ಯತೆಯ ಮೊತ್ತದ ಬಗ್ಗೆ ಮುಚ್ಚಳಿಕೆಯಲ್ಲಿ ಎಲ್ಲಾ ಸದಸ್ಯರ ನಡುವೆ ಒಮ್ಮತ ಮೂಡಿರಬೇಕು. ಯಾವುದೇ ಸದಸ್ಯರ ಗುಂಪಿನಿಂದ ಹೊರ ಹೋದಾಗ ಅಥವಾ ಸೇರಿದಾಗ ಹೊಸ ಸಾಲ ಒಪ್ಪಂದವನ್ನು ಬ್ಯಾಂಕ್ ದಾಖಲಾತಿಗಾಗಿ ಶಾಖೆಗೆ ನೀಡಬೇಕು.

ಮಾದರಿ ಎರಡು – ಎಐಉ ಗೆ ಸಾಲ ನೀಡುವುದು

ಎಐಉಯು ಒಂದೇ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಗುಂಪಿನ ಎಲ್ಲಾ ಸದಸ್ಯರ ಒಟ್ಟು ಸಾಲಾವಶ್ಯಕತೆಯನ್ನು ಎಐಉಯು ಪಡೆದುಕೊಳ್ಳಲು ಅರ್ಹವಾಗಿರುತ್ತದೆ. ಸಾಗುವಳಿ ಮಾಡಬೇಕಾದ ಬೆಳೆ, ಲಭ್ಯವಿರುವ ಸಾಗುವಳಿ ಭೂಮಿ/ಮಾಡಬೇಕೆಂದುಕೊಂಡಿರುವ ಚಟುವಟಿಕೆಯಾಧಾರದ ಮೇಲೆ ಸಾಲದ ಮೊತ್ತವನ್ನು ನಿಗಧಿಪಡಿಸಬಹುದು. ಎಲ್ಲಾ ಸದಸ್ಯರು ಜಂಟಿಯಾಗಿ ಸಾಲ ಒಪ್ಪಂದವನ್ನು ಬ್ಯಾಂಕಿಗೆ ನೀಡಿ, ಸದಸ್ಯರು ಜಂಟಿಯಾಗಿ ಹಾಗೂ ವೈಯಕ್ತಿಕವಾಗಿ ಗುಂಪು ಪಡೆದುಕೊಂಡು ಸಾಲದ ಮರುಪಾವತಿಗೆ ಬಾಧ್ಯರಾಗಿರುತ್ತಾರೆ.

ವೈಯಕ್ತಿಕ ಸಾಲ ಬಾಧ್ಯತೆಯ ಮೊತ್ತದ ಬಗ್ಗೆ ಮುಚ್ಚಳಿಕೆಯಲ್ಲಿ ಎಲ್ಲಾ ಸದಸ್ಯರ ನಡುವೆ ಒಮ್ಮತ ಮೂಡಿರಬೇಕು. ಗುಂಪಿನ ಸದಸ್ಯತ್ವದಲ್ಲಿ ಯಾವುದೇ ಬದಲಾವಣೆಯಾದಾಗ ಹೊಸ ಒಪ್ಪಂದವನ್ನು ಬ್ಯಾಂಕ್ ಶಾಖೆಯಲ್ಲಿ ದಾಖಲು ಮಾಡಬೇಕು.

ಕೃಷಿಕರ/ ಉದ್ದಿಮೆದಾರರ ಎಐಉ ಸಾಲಗಳನ್ನು ಆದ್ಯತಾ ವಲಯಕ್ಕೆ ನೀಡುವ ಸಾಲವಾಗಿ ಪರಿಗಣನೆ :-

ಪ್ರತಿ ಸಾಲ ಪಡೆಯುವ ವ್ಯಕ್ತಿಗೆ ರೂ. 50,000/- ಗಳಿಗೆ ಮೀರದಂತೆ ನೇರವಾಗಿ ಅಥವಾ Sಊಉ/ಎಐಉ ಮುಖಾಂತರ ನೀಡುವ ಸಾಲ ಮತ್ತು ಆರ್ಥಿಕ ಸೇವೆಗಳು ಖಃI ನಿರ್ದೇಶನಗಳನುಸಾರ ಆದ್ಯತಾವಲಯದಡಿ ಕಿರುಸಾಲಗಳೆಂದು ಪರಿಗಣಿತವಾಗುತ್ತವೆ. ಎಐಉ ಗಳಿಗೆ ಸಾಲ ನೀಡುವುದನ್ನು ಬ್ಯಾಂಕ್‍ಗಳು ತಮ್ಮ ಸಾಂಸ್ಥಿಕ ಯೋಜನೆಯಲ್ಲಿ ಸೇರಿಸಿಕೊಳ್ಳುವುದಲ್ಲದೇ ತಮ್ಮ ಅಧಿಕಾರಿಗಳ/ಸಿಬ್ಬಂದಿಯ ತರಬೇತಿ ಸೂಚಿಯಲ್ಲಿ ಸೇರಿಸಿಕೊಳ್ಳಬಹುದು.

ಎಐಉ ಗಳನ್ನು ಯಾರು ರಚಿಸಬಹುದು

ಬ್ಯಾಂಕ್ ವಹಿವಾಟುಗಳಿಗೆ ನೆರವಾಗುವರು. ಸರ್ಕಾರೇತರ ಸಂಸ್ಥೆಗಳು, ರೈತ ಕೂಟಗಳು, ರೈತ ಸಂಘಗಳು, ಪಂಚಾಯಿತಿ ರಾಜ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ಮಹಾ ವಿದ್ಯಾಲಯಗಳು, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಇತರ ಸಹಕಾರ ಸಂಘಗಳು, ಸರ್ಕಾರಿ ಇಲಾಖೆಗಳು, ವ್ಯಕ್ತಿಗಳು ಮತ್ತು ಬೀಜ / ರಸಗೊಬ್ಬರ / ಕೀಟನಾಶಕ ಇತ್ಯಾದಿಗಳ ಮಾರಾಟಗಾರರು.

ಎಐಉ ಗಳ ಪ್ರವರ್ಧನೆಗೆ ಪ್ರೋತ್ಸಾಹಧನ

ಕ್ಷೇತ್ರೀಯ ಗ್ರಾಮೀಣ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕ್ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳ ಎಐಉ ಗಳ ರಚನೆ, ಪೋಷಣೆ ಮತ್ತು ಅವುಗಳಿಗೆ ಸಾಲನೀಡಿಕೆಗಾಗಿ ಒಂದು ಎಐಉ ಗೆ ರೂ. 2000/ ದಂತೆ ಸಹಾಯಧನದ ನೆರವನ್ನು ಬ್ಯಾಂಕುಗಳಿಗೆ ಮತ್ತಿತರ ಅರ್ಹ ಸಂಸ್ಥೆಗಳಿಗೆ ನೀಡಲಾಗುವುದು.

ಎಐಉ ಗೆ ಬ್ಯಾಂಕ್ ಸಾಲ ಮಂಜೂರು ಮಾಡಿದ ನಂತರ ಸಹಾಯಧನ ಮೊದಲ ಕಂತಾದ ರೂ. 1000/- ಗಳನ್ನು ಪ್ರವರ್ಥಿಸಿದ ಬ್ಯಾಂಕಿಗೆ / ಸಂಸ್ಥೆಗೆ ಬಿಡುಗಡೆ ಮಾಡಲಾಗುವುದು. ಎರಡನೇ ಮತ್ತು ಮೂರನೇ ಕಂತುಗಳನ್ನು ಗುಂಪಿನ ಎಲ್ಲಾ ಸದಸ್ಯರು ನಿಯತವಾಗಿ ಮರುಪಾವತಿ ಮಾಡಿದ ಬಗ್ಗೆ ಬ್ಯಾಂಕ್ ದೃಢೀಕರಿಸಿದ ನಂತರ ಬಿಡುಗಡೆ ಮಾಡಲಾಗುವುದು.

ಸಾಮಥ್ರ್ಯ ನಿರ್ಮಾಣ

ಬ್ಯಾಂಕ್ ಸಿಬ್ಬಂದಿಗಳಿಗೆ ಅರಿವು ಮೂಡಿಸುವುದು ಹಾಗೂ ಅವರ ಧೇಯಿಕರಣ ಮುಂತಾದ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳಿಗೆ ನಬಾರ್ಡ್ ನೆರವಾಗುತ್ತದೆ.

ಎಐಉ ನಬಾರ್ಡ್ ಪುನರ್ಧನ

ಎಐಉ ಗಳಿಗೆ ನೀಡುವ ಹೂಡಿಕೆ ಸಾಲಗಳಿಗೆ ಶೇ100 ರಷ್ಟು ಪುನರ್ಧನವನ್ನು ಬ್ಯಾಂಕ್‍ಗಳಿಗೆ ನಬಾರ್ಡ್ ನೀಡುತ್ತದೆ.

ಪ್ರವರ್ಧನಾ ಯೋಜನೆ

ಅತಿ ಸಣ್ಣ ರೈತರಿಗೆ, ಸಣ್ಣ ರೈತರಿಗೆ, ಒಕ್ಕಲು ರೈತರಿಗೆ ಬೆಳೆ ಪಾಲುದಾರರು ಹಾಗೂ ಮೌಖಿಕ ಭೋಗ್ಯದಾರರಿಗೆ ಮತ್ತು ಕೃಷಿಯೇತರ ವಲಯದಲ್ಲಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರಿಗೆ ಸಮರ್ಪಕ ಸಾಲ ಯೋಜನೆ.

ಜಂಟಿ ಬಾಧ್ಯತಾ ಗುಂಪುಗಳ ಪ್ರವರ್ಧನಾ ಯೋಜನೆ

ನಬಾರ್ಡ್ ಮಂಚೂಣೆಗೆ ತಂದ ಸ್ವ-ಸಹಾಯ ಗುಂಪು-ಬ್ಯಾಂಕ್ ಜೋಡಣೆ ಕಾರ್ಯಕ್ರಮವು ಆಸ್ತಿರಹಿತರಿಗೆ ಅಥವಾ ಕಡು ಬಡವರಿಗೆ ಔಪಚಾರಿಕ ಬ್ಯಾಂಕಿಗ್ ವಲಯದಿಂದ ಆರ್ಥಿಕ ಸೇವೆಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಉತ್ಪಾದಕ ಆಸ್ತಿಗಳನ್ನು ನಿಲುಕಿಸಿಕೊಂಡಿರುವ ಅತಿ ಸಣ್ಣ ರೈತರಿಗೆ, ಸಣ್ಣ ರೈತರಿಗೆ ಒಕ್ಕಲು ರೈತರಿಗೆ ಬೆಳೆ ಪಾಲುದಾರರು ಹಾಗೂ ಮೌಖಿಕ ಭೋಗ್ಯದಾರರಿಗೆ ಮತ್ತು ಕೃಷಿಯೇತರ ವಲಯದಲ್ಲಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರಿಗೆ ಸಮರ್ಪಕ ಸಾಲ ಯೋಜನೆಗಳನ್ನು ಅಭಿವೃದ್ಧಿಪಡಿಸಲು ನಬಾರ್ಡ್ ಜಂಟಿ ಭಾದ್ಯತಾ ಗುಂಪುಗಳಿಗೆ ನೀಡುವ ಯೋಜನೆಯನ್ನು ರೂಪಿಸಿದೆ.

ಯೋಜನೆಯ ಉದ್ದೇಶಗಳು

  • ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅತಿ ಸಣ್ಣ ರೈತರಿಗೆ, ಸಣ್ಣ ರೈತರಿಗೆ, ಒಕ್ಕಲು ರೈತರಿಗೆ ಬೆಳೆ ಪಾಲುದಾರರು ಹಾಗೂ ಮೌಖಿಕ ಭೋಗ್ಯದಾದರಿಗೆ ಮತ್ತು ಕೃಷಿಯೇತರ ವಲಯದಲ್ಲಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರಿಗೆ ಸಾಲದ ಹರಿವನ್ನು ಉತ್ತಮಪಡಿಸುವುದು.
  • ಗುಂಪುಗಲಿಗೆ ನೀಡುವ ಸಾಲಗಳ ಭದ್ರತೆಗೆ ಪರ್ಯಾಯವಾಗುವುದು.
  • ಬ್ಯಾಂಕ್ ಮತ್ತು ಗುಂಪಿನ ನಡುವೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ನಿರ್ಮಿಸುವುದು.
  • ಗುಂಪಿನ ಮಾರ್ಗ, ಗುಂಪುಗಳ ಗೊಂಚಲಿನ ಮಾರ್ಗ, ಸಹಪಾಠಿಗಳಿಗೆ ಅರಿವು ಮೂಡಿಸುವುದು ಮತ್ತು ಸಾಲ ಶಿಸ್ತಿನ ಮೂಲಕ ಬ್ಯಾಂಕ್‍ಗಳ ಸಾಲಗಳ ಖಾತೆಯ ಗಂಡಾಂತರಗಳನ್ನು ಕಡಿಮೆಗೊಳಿಸುವುದು.
  • ಎಐಉ ಸಂಯೋಜನೆಯ ಮೂಲಕ ಕೃಷಿ ಉತ್ಪನ್ನ ಹಾಗೂ ಉತ್ಪಾದಕತೆಯ ಹೆಚ್ಚಳದಿಂದ ಮತ್ತು ಜೀವನೋಪಾಯಗಳ ಪ್ರವೃದ್ಶಿಯಿಂದ ಆಹಾರ ಭದ್ರತೆಯನ್ನೊದಗಿಸುವುದು.

ಬಳಕೆದಾರರ ಗುಂಪು ಮುಖ್ಯ ಅಂಶಗಳು

ಬಳಕೆದಾರರ ಗುಂಪಿನಲ್ಲಿ ಇರುವ ರೈತರ ಚಟುವಟಿಕೆಗಳನ್ನು ಆಧರಿಸಿ ಅಂತಹ ಗುಂಪಿಗೆ ಅವರ ಚಟುವಟಿಕೆಗಳನ್ನು ಆಧರಿಸಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉದಾ: ಪಶು ಸಂಗೋಪನೆ, ತೋಟಗಾರಿಕೆ, ಅರಣ್ಯೀಕರಣ, ಸಾವಯವ ಕೃಷಿ, ಇತ್ಯಾದಿ.

ಈ ಗುಂಪುಗಳು ರಚಿಸುವುದರ ಮೂಲಕ ಯಾವ ಚಟುವಟಿಕೆಗಳನ್ನು ಅವರವರ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬಹುದು. ಯಾವ ರೀತಿ ಜನಸಹಭಾಗಿತ್ವ ಹೆಚ್ಚಿಸುವುದು ಮತ್ತು ಭೂ ಆಧಾರಿತ ಚಟುವಟಿಕೆಗಳ ಮಹತ್ವ ನಿರ್ಣಯಗಳನ್ನು ಕೈಗೊಳ್ಳುವಾಗ ಸಕ್ರೀಯವಾಗಿ ಭಾಗವಹಿಸಲು ಈ ಬಳಕೆದಾರರ ಗುಂಪುಗಳು ಮುಂದಾಗಬೇಕು.

ಸ್ವಸಹಾಯ ಗುಂಪಿನ ಹಾಗೆಯೇ ಈ ಬಳಕೆದಾರರ ಗುಂಪುಗಳು ಸಹ ಉಳಿತಾಯ ಮಾಡಿ ಉಳಿತಾಯದ ನಿಧಿ ಹಾಗೂ ಅವರಲ್ಲಿಯೇ ಸಾಲ ನೀಡುವಿಕೆ. ಬ್ಯಾಂಕ್‍ನಲ್ಲಿ ಖಾತೆ ತೆರೆಯುವಿಕೆ ಹಾಗೂ ಸಾಲ ಸೌಲಭ್ಯ ನೀಡುವುದು ಮತ್ತು ಜಮೀನಿನ ಉಪಚಾರಗಳಿಗೆ ವಂತಿಗೆ ಕಟ್ಟುವ ಬಗ್ಗೆ ಸಹ ಈ ಗುಂಪುಗಳು ರೂಪುರೇಷೆಗಳನ್ನು ಹಮ್ಮಿಕೊಳ್ಳಬೇಕು.

ರೈತರ ಮಟ್ಟದಲ್ಲಿ ಯೋಜನೆಗಳನ್ನು ಸಿದ್ಧಪಡಿಸಿ ನಂತರ ಅದನ್ನು ಕ್ರಿಯಾ ಯೋಜನೆಯಲ್ಲಿ ತರಲು ಬಳಕೆದಾರರ ಗುಂಪುಗಳು ಮಹತ್ವದ ಕೆಲಸ ನಿರ್ವಹಿಸಬೇಕಾಗುತ್ತದೆ.

ಬಳಕೆದಾರರ ಗುಂಪುಗಳಿಂದ ಪ್ರತಿನಿಧಿಗಳನ್ನು ಸಹ ಆಯ್ಕೆ ಮಾಡಿ ಜಲಾನಯನ ಸಮಿತಿಗೆ ಸದಸ್ಯರಾಗಿ ಮಾಡುವುದು.

ಬಳಕೆದಾರರ ಗುಂಪುಗಳ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಕ್ರಿಯಾ ಯೋಜನೆಯಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ತಾವೇ ಸ್ವತಃ ಇಲಾಖಾ ರೀತಿ ನಿಯಮಗಳನ್ನು ಪಾಳಿಸಿ ಅನುಷ್ಠಾನ ಮಾಡುವುದು ಹಾಗೂ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸುವ ಅವಕಾಶವಿರುತ್ತದೆ.

ಬಳಕೆದಾರರ ಗುಂಪಿನ ಎಲ್ಲಾ ಸದಸ್ಯರು ಜಲಾನಯನ ಅಭಿವೃದ್ಧಿ ತಂಡ, ಇಲಾಖಾ ಕ್ಷೇತ್ರ ಸಿಬ್ಬಂದಿ, ಕ್ಷೇತ್ರ ಮಟ್ಟದ ಸರ್ಕಾರೇತರ ಸಂಸ್ಥೆಗಳ ತಾಂತ್ರಿಕ ಮಾರ್ಗದರ್ಶನ ಪಡೆದು ಕ್ರಿಯಾ ಯೋಜನೆಯನ್ನು ತಯಾರಿಸಲು ಸಕ್ರೀಯವಾಗಿ ಭಾಗವಹಿಸಿ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ತಿಳುವಳಿಕೆ ಪಡೆದು ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಕರಿಸುವುದು.

ಪ್ರತಿ ಬಳಕೆದಾರರ ಗುಂಪು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಿದ ಪ್ರತಿನಿಧಿಯನ್ನು ಪ್ರತಿ ವರ್ಷ ಬದಲಿಸುವುದು ಹಾಗೂ ಸರ್ವ ಸದಸ್ಯರ ಚಟುವಟಿಕೆಗಳ ಬಗ್ಗೆ ತಮ್ ಅನಿಸಿಕೆಗಳನ್ನು ಮುಕ್ತವಾಗಿ ತಿಳಿಸುವುದು.

ಪಾಲನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಯೋಜನಾ ನಂತರ ನಿರ್ಮಿಸಿದ ಕಾಮಗಾರಿಗ ಸುಸ್ಥಿರತೆ ಬಗ್ಗೆ ನಿಧಿ ರೂಪಿಸಿ ಅವುಗಳಿಂದ ನಿರಂತರ ಉಪಯೋಗ ಪಡೆಯುವುದು.

ಸಭೆ ಮತ್ತು ಮುಖ್ಯಸ್ಥರ ಜವಾಬ್ದಾರಿಗಳು

ಎಲ್ಲಾ ಸದಸ್ಯರು ಗುಂಡಾಕಾರವಾಗಿ ಕುಳಿತುಕೊಳ್ಳುವುದು.
  • ಪ್ರಾರ್ಥನೆ ಅಥವಾ ಉತ್ತೇಜನಕಾರಿ ಹಾಡು (ಸಂಘದವರಿಗೆ ಇಷ್ಟವಿದ್ದಲ್ಲಿ ಮಾತ್ರ)
  • ದಿನದ ಸಭೆ ನಡೆಸಲು ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು.
  • ಸಭೆಗೆ ಹಾಜರಿದ್ದವರಿಗೆ ಸ್ವಾಗತ ಮಾಡುವುದು. ಹಾಜರಿ ತೆಗೆದುಕೊಳ್ಳುವುದು (ಹಾಜರಾತಿಯನ್ನು ಸಭೆ ಮೊದಲು ಹಾಗೂ ಕೊನೆಯಲ್ಲಿ ಎರಡು ಬಾರಿ ತೆಗೆದುಕೊಂಡರೆ ಮಧ್ಯದಲ್ಲಿ ಯಾರೂ ಎದ್ದು ಹೋಗುವುದಿಲ್ಲ)
  • ಹಿಂದಿನ ವಾರದ ಸಭೆಯ ತೀರ್ಮಾನ ಓದುವುದು ಹಾಗೂ ಯಾವುದಾದರೂ ಸದಸ್ಯರು ಕೆಲಸದ ಜವಾಬ್ದಾರಿವಹಿಸಿಕೊಂಡು ಅದರ ಬಗ್ಗೆ ಕೇಳುವುದು.
  • ಚರ್ಚೆಸಬೇಕಾದ ವಿಷಯಗಳ ಸಂಗ್ರಹಣೆಯನ್ನು ಎಲ್ಲಾ ಸದಸ್ಯರಿಂದ ಹಾಗೂ ಹಾಜರಿದ್ದ ಅತಿಥಿಗಳಿಂದ ಸಂಗ್ರಹಣೆ ಮಾಡುವುದು. (ಅತಿಥಿಗಳಿಂದ ಸಂಗ್ರಹಣೆ ಮಾಡುವುದು. (ಅತಿಥಿಗಳು ಪ್ರಶ್ನೆ ಕೇಳುವುದಿದ್ದರೆ ಸಭೆಯ ಕೊನೆಯಲ್ಲಿ ಕೇಳುವಂತೆ ವಿನಂತಿಸುವುದು. ಇಲ್ಲವಾದರೆ ಸಭೆ ನಡೆಸಲು ತೊಂದರೆಯಾಗುತ್ತದೆ.)
  • ಸಭೆಯಲ್ಲಿ ಶಿಸ್ತನ್ನು ಪಾಲಿಸುವಂತೆ ಅಧ್ಯಕ್ಷರು ನೋಡಿಕೊಳ್ಳಬೇಕು. ಸಂಘದ ನಿಯಮಗಳನ್ನು ಸಭೆ ಮುಗಿಯುವವರೆಗೆ ಪಾಲಿಸುವುದು.
  • ಹಣದ ವ್ಯವಹಾರ ಮುಗಿಸುವುದು. (ಉಳಿತಾಯ ಮಾಡುವುದು, ಸೇವಾ ಶುಲ್ಕ ಹಾಗೂ ದಂಡ ವಸೂಲಿಗಳ ನಂತರ ಸಾಲ ನೀಡುವುದು).
  • ನಂತರ ಉಳಿದ ವಿಷಯಗಳನ್ನು ಒಂದೊಂದಾಗಿ ಚರ್ಚಿಸಿ ತೀರ್ಮಾನಿಸುವುದು. ಒಂದು ವಿಷಯ ಚರ್ಚಿಸಿ ತೀರ್ಮಾನವಾದ ನಂತರವೇ ಮತ್ತೊಂದ ವಿಷಯ ಚರ್ಚಿಸಬೇಖು.
  • ಚರ್ಚಿಸುವಾಗ ಎಲ್ಲಾ ಸದಸ್ಯರು ಭಾಗವಹಿಸಬೇಕು. ತೀರ್ಮಾನ ಕೈಗೊಳ್ಳುವಾಗ ಪ್ರತಿ ಸದಸ್ಯರ ಅಭಿಪ್ರಾಯ ಕೇಳಬೇಕು. ತೀರ್ಮಾನ ಕೈಗೊಳ್ಳುವಾಗ ಪ್ರತಿ ಸದಸ್ಯರ ಅಭಿಪ್ರಾಯ ಕೇಳಬೇಕು. ಪುಸ್ತಕ ಬರಹಗಾರರು ಸದಸ್ಯರಲ್ಲದಿದ್ದರೆ ಅವರು ತೀರ್ಮಾನದಲ್ಲಿ ಭಾಗವಹಿಸಬಾರದು.
  • ತೀರ್ಮಾನವಾದ ಕೆಲಸಗಳನ್ನು ಯಾರು ನಿರ್ವಹಿಸಬೇಕು ಎಂದು ನಿಗದಿಪಡಿಸಬೇಕು.
  • ಜಲಾನಯನ ಸಮಿತಿಯ ಸಭೆಗೆ ಹಾಜರಾಗುವ ಪ್ರತಿನಿಧಿಯಿಂದ ಆ ಸಭೆಯಲ್ಲಿ ನಡೆದ ವಿಚಾರಗಳನ್ನು ಕೇಳಿ ತಿಳಿದುಕೊಂಡು, ಅವಶ್ಯಕತೆ ಇದ್ದರೆ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.
  • ಕೇವಲ ಉಳಿತಾಯ, ಸಾಲ ಇತ್ಯಾದಿ ವಿಷಯಗಳಲ್ಲದೆ ಇತರೆ ಸಾಮಾಜಿ ವಿಷಯಗಳನ್ನು ಸಹ ಚರ್ಚಿಸಬೇಕು. (ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಇತ್ಯಾದಿ)
  • ಎಲ್ಲಾ ತೀರ್ಮಾನಗಳನ್ನು ತೀರ್ಮಾನ ಪುಸ್ತಕದಲ್ಲಿ ಬರೆದು, ಎಲ್ಲಾ ಸದಸ್ಯರಿಂದ ಸಹಿ ಪಡೆಯಬೇಕು.
  • ಹಣಕಾಸು ವ್ಯವಹಾರವನ್ನು ಸಂಬಂಧಿಸಿದ ಪುಸ್ತಕಗಳಲ್ಲಿ ಬರೆಯಬೇಕು.
  • ವಂದನಾರ್ಪಣೆ ಮಾಡಿ ಸಭೆ ಮುಕ್ತಾಯಗೊಳಿಸುವುದು.
  • ಬಳಕೆದಾರರ ಗುಂಪಿನ ಮುಖ್ಯಸ್ಥರ ಜವಾಬ್ದಾರಿಗಳು
  • ಬಳಕೆದಾರರ ಗುಂಪಿನ ಸಭೆ ಕರೆಯುವುದು. ಸಭೆಗೆ 10 ನಿಮಿಷ ಮೊದಲೇ ಹಾಜರಿರಬೇಕು.
  • ಬಳಕೆದಾರರ ಗುಂಪಿನ ಸಭೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು.
  • ಗುಂಪಿನ ಲೆಕ್ಕ ಪುಸ್ತಕಗಳನ್ನು ಬರೆಯುವುದು ಅಥವಾ ಪುಸ್ತಕಗಾರರಿಂದ ಬರೆಸುವುದು.
  • ಪ್ರತಿನಿಧಿಗಳಿಗೆ ನಡೆಸುವ ಎಲ್ಲಾ ತರಬೇತಿಗೆ ಹಾಜರಾಗುವುದು ಮತ್ತು ಕಲಿಸುವ ವಿಷಯಗಳನ್ನು ಗುಂಪಿನ ಸಭೆಯಲ್ಲಿ ಎಲ್ಲರಿಗೂ ತಿಳಿಸುವುದು.
  • ಬಳಕೆದಾರರ ಗುಂಪಿನ ಸಭೆಯಲ್ಲಿ ಸದಸ್ಯರು ಸರಿಯಾದ ತೀರ್ಮಾನಗಳನ್ನು ಕೈಗೊಳ್ಳುವಂತೆ ಸಹಾಯ ಮಾಡುವುದು.
  • ಗುಂಪಿನ ಹಣಕಾಸು ವ್ಯವಹಾರ ಸರಿಯಾಗಿರುವಂತೆ ನೋಡಿಕೊಳ್ಳುವುದು ಮತ್ತು ಪ್ರತಿ ವರ್ಷ ಗುಂಪಿನ ಲೆಕ್ಕವನ್ನು ಆಡಿಟ್ ಮಾಡಿಸಬೇಕು.
  • ಜಲಾನಯನ ಸಮಿತಿಯ ಕ್ರಿಯಾ ಯೋಜನೆಯಲ್ಲಿ ಭಾಗವಹಿಸುವುದು.
  • ಬಳಕೆದಾರರ ಗುಂಪಿನಿಂದ ಕ್ರಿಯಾ ಯೋಜನೆಯನ್ನು ಜಲಾನಯನ ಸಂಘದಲ್ಲಿ ಅಳವಡಿಸುವಂತಗೆ ಮಾಡುವುದು.
  • ಬಳಕೆದಾರರ ಗುಂಪಿನ ಸದಸ್ಯರಿಗೆ ನಡೆಸುವ ತರಬೇತಿಗೆ ಎಲ್ಲಾ ಸದಸ್ಯರು ಹಾಜರಿರುವಂತೆ ನೋಡಿಕೊಳ್ಳುವುದು.
  • ಗುಂಪಿನಲ್ಲಿ ಜಗಳ ಬಂದಾಗ ಪರಿಹಾರ ಮಾಡಲು ಸಹಕರಿಸುವುದು.
  • ಬ್ಯಾಂಕ್‍ಗಳಿಗೆ ಭೇಟಿ ನೀಡಿ ಬಳಕೆದಾರರ ಗುಂಪಿಗೆ ಸಾಲ ಪಡೆಯುವುದು ಹಾಗೂ ಅದರ ಮರುಪಾವತಿ ಮಾಡಿಸುವುದು.
  • ಗ್ರಾಮ ಪಂಚಾಯತಿ ಹಾಗೂ ಇತರೆ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿ ಸದಸ್ಯರಿಗೆ ಸೌಲಭ್ಯ ಒದಗಿಸುವುದು.
  • ಬಳಕೆದಾರರ ಗುಂಪಿನಿಂದ ಜಲಾನಯನ ಸಮಿತಿಗೆ ಸದಸ್ಯರ ನಾಮ ನಿರ್ದೇಶನ ಮಾಡುವುದು ಹಾಗೂ ನಾಮ ನಿರ್ದೇಶಿತರ ಕರ್ತವ್ಯಗಳು
  • ಜಲಾನಯನ ಸಮಿತಿಗೆ ಬಳಕೆದಾರರ ಗುಂಪುಗಳಿಂದ ಆಯ್ದ 5 ರಿಂದ 6 ಜನ ಸದಸ್ಯರನ್ನು ಸಭೆಯಲ್ಲಿ ಚರ್ಚಿಸಿ ನಾಮ ನಿರ್ದೇಶನ ಮಾಡುವುದು.
  • ಸಾಮಾನ್ಯವಾಗಿ ಬಳಕೆದಾರರ ಗುಂಪುಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಒಂದು ವರ್ಷದ ಅವಧಿ ಮುಗಿದ ಮೇಲೆ ಇನ್ನಿತರೆ ಗುಂಪುಗಳಿಗೆ ಜಲಾನಯನ ಸಮಿತಿಗೆ ಸದಸ್ಯರನ್ನು ಕಳುಹಿಸಲು ಅನುವು ಮಾಡಿಕೊಡಬೇಕು.
  • ನಾಮ ನಿರ್ದೇಶನ ಮಾಡಿದ ಸದಸ್ಯರು ಪ್ರತಿ ಸಭೆಗೆ ತಪ್ಪದೇ ಹಾಜರಾಗಿ ಚರ್ಚೆಯಲ್ಲಿ ಸಕ್ರೀಯವಾಗಿ ಭಾಗವಹಿಸುವುದು.
  • ಜಲಾನಯನ/ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ತಮ್ಮ ಕ್ಷೇತ್ರ ಗುಂಪಿನ ಸದಸ್ಯರಿಗೆ ಸಭೆಯಲ್ಲಿ ತಿಳಿಸುವುದು.
  • ಕ್ರಿಯಾ ಯೋಜನೆ ತಯಾರಿಸುವಾಗ ತಮ್ಮ ಕ್ಷೇತ್ರದ ರೈತರನ್ನು ನಿಗದಿಪಡಿಸಿದ ದಿನಾಂಕ, ಸ್ಥಳ ಹಾಗೂ ಸಮಯಕ್ಕೆ ಬರುವಂತೆ ತಿಳಿಸುವುದು.
  • ತಮ್ಮ ಕ್ಷೇತ್ರದ ಎಲ್ಲಾ ರೈತರ ಭೂಮಿಯ ಕ್ರಿಯಾ ಯೋಜನೆ ಮಾಡುವಂತೆ ನೋಡಿಕೊಳ್ಳುವುದು.
  • ಬಳಕೆದಾರರ ಗುಂಪಿನಲ್ಲಿ ಚರ್ಚಿಸಿ ತೀರ್ಮಾನವಾದ ರೈತರ ಪಟ್ಟಿಯನ್ನು ಕಾರ್ಯಕಾರಿ ಸಮಿತಿಗೆ ಸಲ್ಲಿಸುವುದು. ಆ ರೈತರ ಕೆಲಸಗಳಿಗೆ ಕಾರ್ಯಕಾರಿ ಸಮಿತಿಯಲ್ಲಿ ಮಂಜೂರಾತಿ ಮಾಡಿಸುವುದು.
  • ಮಂಜೂರಾದ ರೈತರ ಹೊಲಗಳಿಗೆ ಕೃಷಿ ಸಹಾಯಕರು ಬಂದು ಅಳತೆ ಮಾಡಿ ಅಂದಾಜು ಪಟ್ಟಿ ತಯಾರಿಸುವಂತೆ ನೋಡಿಕೊಳ್ಳುವುದು.
  • ತಮ್ಮ ಕ್ಷೇತ್ರದ ಅಂದಾಜು ಪಟ್ಟಿ ಬೇಗ ಮಂಜೂರಾಗುವಂತೆ ನೋಡಿಕೊಳ್ಳುವುದು.
  • ತಮ್ಮ ಬಲಕೆದಾರರ ಗುಂಪಿನ ಸದಸ್ಯರಿಂದ ವಂತಿಗೆ ಸಂಗ್ರಹಿಸಿ ಜಲಾನಯನ ಸಮಿತಿಯ ಬ್ಯಾಂಕ್ ಖಾತೆಗೆ ಪ್ರತಿವಾರ ಕಟ್ಟುವುದು.
  • ಕ್ರಿಯಾ ಯೋಜನೆ ಅನುಷ್ಠಾನದಲ್ಲಿ ಉಸ್ತುವಾರಿ ಮಾಡುವುದು.
  • ಸಣ್ಣ, ಅತೀ ಸಣ್ಣ ಹಾಗೂ ಪರಿಶಿಷ್ಟ ಜಾತಿ/ ವರ್ಗದವರಿಗೆ ಸರಿಯಾಗಿ ಯೋಜನೆಗಳು ತಲುಪುವಂತೆ ನೋಡಿಕೊಳ್ಳುವುದು.
  • ಅನುಷ್ಠಾನದಲ್ಲಿ ತಪ್ಪುಗಳು ಕಂಡು ಬಂದರೆ ತಕ್ಷಣ ಬಳಕೆದಾರರ ಗುಂಪು ಮತ್ತು ಜಲಾನಯನ ಸಮಿತಿಗೆ ತಿಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಾಡುವುದು.

ಗುಂಪುಗಳ ರಚನೆ ಮತ್ತು ಪಾತ್ರ

ಸಮಿತಿ ರಚನೆ

ಬಳಕೆದಾರ ಗುಂಪು ಏಕೆ ಬೇಕು?

  • ಉಪ ಜಲಾನಯನ ಪ್ರದೇಶವು ಸುಮಾರು 5000 ಹೆಕ್ಟೇರ್ ಇದ್ದು, ಇಲ್ಲಿ ಸುಮಾರು 1000 ರಿಂದ 2500 ರೈತರು ಭೂಮಿ ಹೊಂದಿರಬಹುದು. ಈ ಪ್ರದೇಶ ಹಾಗೂ ರೈತರ ಸಂಖ್ಯೆ ದೊಡ್ಡದಾಗಿದ್ದು ಎಲ್ಲಾ ರೈತರು ಭಾಗವಹಿಸಿ ಕ್ರಿಯಾ ಯೋಜನೆ ತಯಾರಿಸಲು ಸಾಧ್ಯವಾಗುವುದಿಲ್ಲ.
  • ಉಪ ಜಲಾನಯನದ ಎಲ್ಲಾ ರೈತರು ಸಭೆಗೆ ಹಾಜರಾಗಲು ಕಷ್ಟವಾಗುತ್ತದೆ. ಕಾರಣ ಅವರು ಬೇರೆ ಬೇರೆ ಗ್ರಾಮಗಳಲ್ಲಿ ವಾಸಿಸುತ್ತಿರುವ ಸಾಧ್ಯತೆ ಹೆಚ್ಚಿದೆ.
  • ಬಳಕೆದಾರರ ಗುಂಪುಗಳಿಲ್ಲದಿದ್ದರೆ ಎಲ್ಲಾ ರೈತರಿಗೆ ಅವಶ್ಯಕ ತರಬೇತಿಗಳು ಸಿಗುವುದಿಲ್ಲ. ಇದರಿಂದ ಯೋಜನೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
  • ಎಲ್ಲ ರೈತರು ಪ್ರತಿವಾರ ಸಭೆ ಸೇರಿದರೆ ಮಾತ್ರ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿ, ಎಲ್ಲರಿಗೂ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ, ಎಲ್ಲರಿಗೂ ಕಾರ್ಯಕ್ರಮದ ಪ್ರಯೋಜನೆ ಸಿಗುತ್ತದೆ. ಈ ರೀತಿ ಪ್ರತಿ ವಾರ ಸಭೆ ಸೇರಲು ಹತ್ತಿರದಲ್ಲಿ ವಾಸಿಸುತ್ತಿರುವ ರೈತರಿಗೆ ಮಾತ್ರ ಸಾಧ್ಯವಾಗುತ್ತದೆ.
  • ಜಲಾನಯನ ಕೆಲಸಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರು ಎಲ್ಲಾ ಕಡೆ ಓಡಾಡಿ ಕೆಲಸ ಮಾಡಲು ಕಷ್ಟವಾಗುತ್ತದೆ. ಬಳಕೆದಾರರ ಗುಂಪುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಸುವುದರಿಂದ ಉಸ್ತುವಾರಿ ಚೆನ್ನಾಗಿರುತ್ತದೆ ಹಾಗೂ ಕೆಲಸ ಬೇಗ ಮುಗಿಯುತ್ತದೆ.
  • ಇದರಲ್ಲಿ ಪ್ರತಿ ಸದಸ್ಯರು ತಮ್ಮ ಜಮೀನನ್ನು ಸಹ ಹೊಂದಿರುತ್ತಾರೆ ಮತ್ತು ತಮ್ಮ ಜಮೀನನ್ನು ಅಭಿವೃದ್ಧಿ ಕೆಲಸಗಳಲ್ಲಿ ನೇರವಾಗಿ ಭಾಗವಹಿಸುತ್ತಾರೆ. ಅವರಿಗದೇ ಕೆಲಸವಾದ್ದರಿಂದ ಹೆಚ್ಚು ಜವಾಬ್ದಾರಿ ಮತ್ತು ಆಸಕ್ತಿಯಿಂದ ಕೆಲಸ ಮಾಡುತ್ತಾರೆ.
  • ಬಳಕೆದಾರರ ಗುಂಪುಗಳೂ ಸಹ ಸ್ವಸಹಾಯ ಸಂಘಗಳಂತೆ ಉಳಿತಾಯ ಮಾಡುವುದರಿಂದ ಆ ಹಣದಿಂದ ತಮ್ಮ ಗುಂಪುಗಳಲ್ಲಿರುವ ರೈತರಿಗೆ ಸಾಲ ನೀಡಬಹುದು. ಇದರಿಂದ ರೈತರು ಜಲಾನಯನ ಅಭಿವೃದ್ಧಿ ಕೆಲಸಗಳ ಯೋಜನೆ ನಂತರ ಅಭಿವೃದ್ಧಿ ಕೆಲಸಗಳನ್ನು ತಮ್ಮ ಜಮೀನಿನಲ್ಲಿ ಕೈಗೊಳಲ್ಲು ಸಹಾಯವಾಗುತ್ತದೆ.
  • ಬಳಕೆದಾರರ ಗುಂಪುಗಳು ಸ್ವಸಹಾಯ ಸಂಘಗಳಂತೆ ಚೆನ್ನಾಗಿ ಸಂಘ ನಡೆಸಿದರೆ ಬ್ಯಾಂಕ್ ಹಾಗೂ ಇತರೇ ಸಂಘ ಸಂಸ್ಥೆಗಳಿಂದ ಸಾಲ / ಸಹಾಯ ಪಡೆಯಲು ಅರ್ಹತೆ ಹೊಂದುವ ಸಾಧ್ಯತೆ ಇದೆ.
ಬಳಕೆದಾರರ ಗುಂಪು ರಚನೆ ಮಾಡುವುದು ಹೇಗೆ?

ದೂರ ಸಂವೇದಿ ಸಂಸ್ಥೆಯವರು ತಯಾರಿಸಿರುವ ಜಲಾನಯನದ ನಕ್ಷೆಗಳನ್ನು ಪಡೆದುಕೊಳ್ಳಬೇಕು. ಇದರಲ್ಲಿ ಪ್ರತಿ ಜಮೀನಿನ ಸರ್ವೆ ನಂಬರ್ ಹಾಗೂ ಹಳ್ಳ, ಕೊಳ್ಳಗಳನ್ನು ಗುರುತಿಸಿರುತ್ತಾರೆ.

ಖಾತೆದಾರರ ಪಟ್ಟಿಯನ್ನು ತಾಲ್ಲೂಕು ಕಛೇರಿ ಅಥವಾ ಕಂದಾಯ ಇಲಾಖೆಯಿಂದ ಪಡೆದುಕೊಳ್ಳಬೇಕು. (ಅವರ ಪುಸ್ತಕದಿಂದ ನಕಲು ಮಾಡಿಕೊಳ್ಳಬೇಕು). ಇದನ್ನು ಸರ್ಕಾರೇತರ ಸಂಸ್ಥೆ ಹಾಗೂ ಜಲಾನಯನ ಇಲಾಖೆ ಸಿಬ್ಬಂದಿ ಸಹಾಯದಿಂದ ಪಡೆದುಕೊಳ್ಳಬಹುದು.

  • ಸಿಬ್ಬಂದಿಯೊಂದಿಗೆ ಜಲಾನಯನವನ್ನು ದಿನ್ನೆಯಿಂದ ಕೊಳ್ಳದವರೆಗೆ ಸುತ್ತಾಡಿ ನಕ್ಷೆ ಸರಿ ಇದೆಯೇ ಎಂದು ತಿಳಿದುಕೊಳ್ಳಬೇಕು. ಸರಿ ಇಲ್ಲದಿದ್ದರೆ ದೂರ ಸಂವೇದಿ ಸಂಸ್ಥೆಯವರಿಗೆ ತಿಳಿಸಿ ಅದನ್ನು ಸರಿಪಡಿಸಿಕೊಳ್ಳಬೇಕು.
  • ಗ್ರಾಮವಾರು ಜಲಾನಯನ ನಕ್ಷೆಯ ಮೇಲೆ ಚಿಕ್ಕ ಚಿಕ್ಕ ನಾಲಾಗಳನ್ನು ಗುರುತಿಸಿ, ಸಣ್ಣ ಸಂಗ್ರಹಣಾ ಪ್ರದೇಶವನ್ನು ವಿಂಗಡನೆ ಮಾಡಿ ಸುಮಾರು 20 ರೈತರುಗಳ ಜಮೀನು ಒಳಗೊಳ್ಳುವಂತೆ ಗುರುತಿಸಿ ಒಂದು ಬಳಕೆದಾರರ ಗುಂಪನ್ನು ರಚಿಸಲಾಗುತ್ತದೆ.
  • ಕ್ಷೇತ್ರ ಪ್ರದೇಶದಲ್ಲಿ ಬರುವ ಎಲ್ಲಾ ರೈತರನ್ನು ಕ್ಷೇತ್ರ ಗುಂಪಿಗೆ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು.
  • ಪ್ರತಿ ವಾರ ಸಭೆ ಸೇರಬೇಕು.
  • ಪ್ರತಿನಿಧಿ ಆಯ್ಕೆ ಮಾಡಬೇಕು.
  • ಸದಸ್ಯರಿಗೆ ಸಾಲ ನೀಡಿ ಅದನ್ನು ಮರುಪಾವತಿ ಮಾಡಿಸಿಕೊಳ್ಳಬೇಕು.
  • ಸಂಘದ ಸರ್ವ ಸದಸ್ಯರ ಸಭೆಗೆ ಎಲ್ಲಾ ಸದಸ್ಯರು ಹಾಜರಾಗುತ್ತಿರಬೇಕು.
  • ಬಳಕೆದಾರರ ಗುಂಪಿನಿಂದ ಒಬ್ಬ ಸದಸ್ಯರನ್ನು ಜಲಾನಯನ ಸಂಘದ ಕಾರ್ಯಕಾರಿ ಸಮಿತಿಗೆ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವುದು.
  • ತಮ್ಮ ಕ್ಷೇತ್ರದಲ್ಲಿ ಮುಂದಿನ 15 ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕೆಲಸ ಹಾಗೂ ರೈತರ ವಿವರಗಳನ್ನು ಬಳಕೆದಾರರ ಗುಂಪಿನಲ್ಲಿ ಚರ್ಚಿಸಿ ಕಾರ್ಯಕಾರಿ ಸಮಿತಿಗೆ ಕಳಿಸಬೇಕು.

ಆಯ್ಕೆಯಾದ ಪ್ರತಿನಿಧಿಯು ಪ್ರತಿ ವಾರದ ಜಲಾನಯನ/ಕಾರ್ಯಕಾರಿ ಸಮಿತಿ ಸಭೆಗೆ ಹಾಜರಾಗುವುದು. ಅಲ್ಲಿ ಚರ್ಚೆ ಮಾಡಿ ತೀರ್ಮಾನಗಳಲ್ಲಿ ಭಾಗವಹಿಸುವುದು. ಚರ್ಚೆ ವಿಷಯ ಹಾಗೂ ತೀರ್ಮಾನಗಳನ್ನು ಬಳಕೆದಾರರ ಗುಂಪಿನ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ತಿಳಿಸುವುದು.

  • ಯೋಜನೆಯ ಎಲ್ಲಾ ತರಬೇತಿ ಹಾಗೂ ಕ್ಷೇತ್ರ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
  • ತಮ್ಮ ಕ್ಷೇತ್ರದ ಕ್ರಿಯಾ ಯೋಜನೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಬೇಕು.
  • ಜಲಾನಯನ ಸಂಘದ ಒಟ್ಟು ಕ್ರಿಯಾ ಯೋಜನೆ ಕ್ರೋಢಿಕರಿಸುವಾಗ ಎಲ್ಲಾ ಸದಸ್ಯರು ಹಾಜರಿರಬೇಕು.
  • ಹೆಚ್ಚು ರೈತ ಮಹಿಳೆಯರು ಕ್ರಿಯಾ ಯೋಜನೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.
  • ಅತೀ ಸಣ್ಣ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಸರಿಯಾದ ಸಹಾಯವಾಗುವಂತೆ ಕ್ರಿಯಾ ಯೋಜನೆ ತಯಾರಿಸಬೇಖು.
  • ತಮ್ಮ ಸದಸ್ಯರಿಂದ ವಂತಿಗೆ ವಸೂಲಿ ಮಾಡಿ ಸರಿಯಾದ ಸಮಯಕ್ಕೆ ಜಲಾನಯನ ಸಮಿತಿಗೆ ಕಟ್ಟಬೇಕು.
  • ತಮ್ಮ ಕ್ಷೇತ್ರದ ಕ್ರಿಯಾ ಯೋಜನೆ ಅನುಷ್ಠಾನ ಮಾಡಬೇಕು.
  • ಕ್ರಿಯಾ ಯೋಜನೆ ಅನುಷ್ಠಾನದ ಉಸ್ತುವಾರಿ ಮಾಡಬೇಕು. ತಪ್ಪುಗಳು ಕಂಡು ಬಂದಲ್ಲಿ ಅದನ್ನು ಜಲಾನಯನ ಸಮಿತಿಯಲ್ಲಿ ಚರ್ಚಿಸಿ ಕ್ರಮವಹಿಸಬೇಕು.
  • ಪ್ರತಿ ಸದಸ್ಯರು ಸಂಘದ ಒಳಿತಿಗಾಗಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಜವಾಬ್ದಾರಿಗಳನ್ನು ಕೇವಲ ಪ್ರತಿನಿಧಿಗಳಿಗೆ ಬಿಟ್ಟರೆ ಒಬ್ಬರ ಮೇಲೆ ಹೊರೆಯಾಗುತ್ತದೆ. ಆದ್ದರಿಂದ ಬಳಕೆದಾರರ ಗುಂಪಿನ ಪ್ರತಿ ಸದಸ್ಯರೂ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು.
  • ಸರದಿ ಬಂದಾಗ ವಾರದ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಸಭೆ ನಡೆಸಬೇಕು.
  • ಪ್ರತಿ ವಆರ ಉಳಿತಾಯ ಮಾಡಬೇಕು.
  • ಬಳಕೆದಾರರ ಗುಂಪಿನಿಂದ ಸಾಲ ತೆಗೆದುಕೊಂಡಿದ್ದರೆ ಸೇವಾ ಶುಲ್ಕದೊಂದಿಗೆ ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು.
  • ಜಲಾನಯನ ಸಮಿತಿಯ ಕೆಲಸಗಳನ್ನು ಪರಿಶೀಲಿಸಬೇಕು. ಅಲ್ಲಿನ ಹಣಕಾಸಿನ ವ್ಯವಹಾರ ತಿಳಿದುಕೊಳ್ಳಬೇಕು.
  • ವೈಯಕ್ತಿಕ ಜಮೀನಿನಲ್ಲಿ ಕೈಗೊಳ್ಳುವ ಕಾಮಗಾರಿಕೆಗಳಿಗೆ ನಗದು ರೂಪದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ, ವರ್ಗ, ಅತೀ ಸಣ್ಣ ಮತ್ತು ಸಣ್ಣ ರೈತರಿಂದ ಕಾಮಗಾರಿ ವೆಚ್ಚದ ಶೇಕಡ 5ರಷ್ಟು ಮತ್ತು ಇನ್ನುಳಿದ ವೆಚ್ಚದ ಶೇಕಡ 5ರಷ್ಟು ಮತ್ತು ಇನ್ನುಳಿದ ರೈತರಿಂದ ಶೇಕಡ 10ರಷ್ಟು ವಂತಿಗೆಯನ್ನು ಸಮಿತಿಗೆ ನೀಡಿ ಅದನ್ನು ಓ ಮತ್ತು ಎಂ ಅಕೌಂಟಿಗೆ ಜಲಾನಯನ ಸಮಿತಿಯು ತುಂಬಬೇಕು.
ಯೋಜನೆಯಿಂದ ಬಳಕೆದಾರರ ಗುಂಪಿಗೆ ಏನು ಉಪಯೋಗ ?
  • ಬಳಕೆದಾರರ ಗುಂಪು ರಚಿಸಲು ಸಹಾಯ ಮತ್ತು ತಿಳಿವಳಿಕೆ ದೊರೆಯುತ್ತದೆ.
  • ಜಲಾನಯನ ಸಮಿತಿಯಲ್ಲಿ ಸದಸ್ಯತ್ವ ಸಿಗುತ್ತದೆ.
  • ಎಲ್ಲಾ ಸದಸ್ಯರಿಗೆ ವಿವಿಧ ತರಬೇತಿಗಳು ದೊರೆಯುತ್ತದೆ.
  • ಆಯ್ಕೆಯಾದ ಸದಸ್ಯರಿಗೆ ಕ್ಷೇತ್ರ ಪ್ರವಾಸದ ಅವಕಾಶವಿದೆ.
  • ಬಳಕೆದಾರರ ಗುಂಪಿನ ಎಲ್ಲಾ ಸದಸ್ಯರಿಗೆ ಅವರ ಭೂಮಿ ಅಭಿವೃದ್ಧಿಪಡಿಸಿಕೊಳ್ಳಲು ಅವಶ್ಯಕ ಇರುವ ಹಾಗೂ ಅನುಮತಿ ಇರುವ ಜಲಾನಯನ ಕಾರ್ಯಕ್ರಮಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ.
  • ಸದಸ್ಯರು ಒಂದು ಕಡೆ ಆಗಾಗ್ಗೆ ಸೇರಿ ಚರ್ಚಿಸಲು ಅವಕಾಶ ದೊರೆಯುತ್ತದೆ.
  • ಸಭೆ ನಡೆಸುವುದರಿಂದ ಸದಸ್ಯರಲ್ಲಿ ಶಿಸ್ತು ಮತ್ತು ಸಾಮಥ್ರ್ಯ ಬೆಳೆಯುತ್ತದೆ.
  • ಸಭೆಯಲ್ಲಿ ಉತ್ತಮ ಚರ್ಚೆಗಳು ನಡೆಯುವುದರಿಂದ ಒಬ್ಬರಿಂದೊಬ್ಬರು ಕಲಿಯುತ್ತಾರೆ.
  • ಸಭೆಯಲ್ಲಿ ಉಳಿತಾಯ, ಸಾಲ ನೀಡುವುದು, ಮರುಪಾವತಿ ಮಾಡುವಂತಹ ಉತ್ತಮ ಕೆಲಸಗಳು ನಡೆಯುತ್ತದೆ.
  • ಹಣಕಾಸಿನ ವ್ಯವಹಾರದ ಬಗ್ಗೆ ಪ್ರತಿವಾರ ಸಭೆಯಲ್ಲಿ ಕೇಳುವುದರಿಂದ ಸಾಲ ಮರುಪಾವತಿಯು ಸರಿಯಾಗಿ ನಡೆಯುತ್ತದೆ.
  • ಪ್ರತಿವಾರ ಸಭೆ ನಡೆಸುವುದರಿಂದ ಸದಸ್ಯರು ಚೆನ್ನಾಗಿ ಹಾಗೂ ಧೈರ್ಯವಾಗಿ ಮಾತನಾಡಲು ಕಲಿಯುತ್ತಾರೆ.
  • ಸಭೆಗೆ ಹೊರಗಿನಿಂದ ಅಧಿಕಾರಿಗಳು ಭೇಟಿ ನೀಡುವುದರಿಂದ ಹೆಚ್ಚಿನ ವಿಷಯ ತಿಳಿಯುತ್ತದೆ.
  • ಸದಸ್ಯರು ಸ್ವಂತ ವಿಷಯಗಳನ್ನು ಅಥವಾ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.
  • ಬಳಕೆದಾರರ ಗುಂಪಿನ ಸಭೆಯು ಸದಸ್ಯರ ಅಭಿಪ್ರಾಯ ಅವರ ಆಸೆ ಹಾಗೂ ಅವರೊಳಗಿನ ಶಕ್ತಿಯನ್ನು ಹೊರಗೆ ತರಲು ಸಹಾಯ ಮಾಡುತ್ತದೆ.

ಸಭೆ ನಡೆಸಲು ಯಾವು ಪರಿಸರ ಹಾಗೂ ವಸ್ತುಗಳು ಬೇಕು

  • ಎಲ್ಲಾ ಸದಸ್ಯರು ತೊಂದರೆ ಇಲ್ಲದೆ ಸೇರಲು ಸಾಧ್ಯವಾಗುವಂತಹ ಜಾಗ.
  • ಎಲ್ಲಾ ಸದಸ್ಯರಿಗೂ ಅನುಕೂಲ ಇರುವಂತಹ ಸಮಯ.
  • ರಾತ್ರಿ ಸಭೆ ನಡೆಯಯುವುದಿದ್ದರೆ ಬೆಳಕು ಇರುವಂತಹ ಜಾಗ.
  • ಎಲ್ಲರೂ ಗುಂಪಾಗಿ ಕುಳಿತುಕೊಳ್ಳಲು ಸಾಕಷ್ಟು ಜಾಗ ಹಾಗೂ ಚಾಪೆ ಇದ್ದರೆ ಉತ್ತಮ.
  • ಬಳಕೆದಾರರ ಗುಂಪಿನ ಎಲ್ಲಾ ಪುಸ್ತಕಗಳು, ಟ್ರಂಕು ಹಾಗೂ ಪೆನ್ನು ಇರಬೇಕು.
  • ಎಲ್ಲಾ ಸದಸ್ಯರು ಹಾಗೂ ಪ್ರತಿನಿಧಿಗಳು ಹಾಜರಿರಬೇಕು.
  • ಸಭೆಯಲ್ಲಿ ಚರ್ಚಿಸಲು ಇರುವ ವಿಷಯಗಳ ಪಟ್ಟಿ ಇರಬೇಕು.

ಜಲಾನಯನ ಸಮಿತಿ-ಕಾರ್ಯಕಾರಿ ಸಮಿತಿಯು ಗ್ರಾಮ ಪಂಚಾಯತಿ ಉಪ ಸಮಿತಿಯಾಗಿರುತ್ತದೆ. ಇದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಜಲಾನಯನ ಕ್ಷೇತ್ರಕ್ಕೆ ಅನುಗುಣವಾಗಿ ಸ್ವ ಸಹಾಯ ಗುಂಪುಗಳಿಂದ 4-6 ಪ್ರತಿನಿಧಿಗಳು, ಬಳಕೆದಾರರ ಗುಂಪುಗಳಿಂದ 5-6 ಪ್ರತಿನಿಧಿಗಳು ಮತ್ತು ಜಲಾನಯನ ವ್ಯಾಪ್ತಿಯಲ್ಲಿರುವ 2-3 ಗ್ರಾಮ ಪಂಚಾಯತಿ ಸದಸ್ಯರನ್ನೊಳಗೊಂಡಂತೆ ಒಟ್ಟಾರೆ 11-15 ಸದಸ್ಯರ ಸಮಿತಿಯಾಗಿರುತ್ತದೆ. ಇದಕ್ಕೆ ಪೂರಕವಾಗಿ ಸಮಿತಿಯು ಕೆಲಸ ನಿರ್ವಹಿಸಲು ಇಲಾಖೆಯಿಂದ ಕ್ಷೇತ್ರ ಮಟ್ಟದ ಒಬ್ಬ ತಾಂತ್ರಿಕ ಸಿಬ್ಬಂದಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಾರೆ. ಜಲಾನಯನ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಜಲಾನಯನ ಸಮಿತಿ ಇರುತ್ತದೆ.

ಸ್ವ ಸಹಾಯ ಗುಂಪು, ಬಳಕೆದಾರರ ಗುಂಪು ರಚನೆ ಆದ ನಂತರ ಗ್ರಾಮ ಸಭೆಯನ್ನು ಸರ್ಕಾರೇತರ ಸಂಸ್ಥೆಯವರು ಇಲಾಖಾ ಜಲಾನಯನ ಅಭಿವೃದ್ಧಿ ತಂಡದ ಸಹಕಾರದಿಂದ ಏರ್ಪಡಿಸುವುದು. ಜಲಾನಯನ ಯೋಜನೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳ ಎಲ್ಲಾ ಕುಟುಂಬಗಳ ವಯಸ್ಕ ಸದಸ್ಯರು ಸರ್ವ ಸದಸ್ಯರ ಸಭೆಗೆ ಸದಸ್ಯರಾಗಿರುತ್ತಾರೆ. ಗ್ರಾಮ ಸಭೆಯಲ್ಲಿ ಸಮಿತಿಯ ರಚನೆ ಬಗ್ಗೆ ಒಪ್ಪಿಗೆ ಪಡೆಯಬೇಕು. ಈ ಸಭೆಯಲ್ಲಿ ಕಿರು ಜಲಾನಯನಗಳ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಯೋಜನೆ ಅನುಷ್ಠಾನದ ಬಗ್ಗೆ, ವಸ್ತುಸ್ಥಿತಿ, ಲೆಕ್ಕ, ವೆಚ್ಚ, ಪ್ರಗತಿ, ವಂತಿಕೆ ಹಾಗೂ ಇತರೆ ಮಾಹಿತಿಗಳನ್ನು ಚರ್ಚಿಸಬೇಕು

ಕಾರ್ಯಕಾರಿ ಸಮಿತಿ

ಕಾರ್ಯಕಾರಿ ಸಮಿತಿಯಲ್ಲಿ ಶೇಕಡ 50 ರಷ್ಟು ಮಹಿಳೆಯರಿರಬೇಕು ಮತ್ತು ಸ್ವ ಸಹಾಯ ಹಾಗೂ ಬಳಕೆದಾರರ ಗುಂಪುಗಳಿಂದ ಪ್ರತಿನಿಧಿಗಳು ಸಣ್ಣ ರೈತರು, ಅತೀ ಸಣ್ಣ ರೈತರು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರಗತಿ ಪರ ರೈತರ, ಜಮೀನಿಲ್ಲದವರ ಮತ್ತು ಗ್ರಾಮೀಣ ಕುಶಲ ಕರ್ಮಿಗಳನ್ನೊಳಗೊಂಡಂತೆ ಇರುವುದು. ಶೇಕಡ 18 ರಷ್ಟು ಪರಿಶಿಷ್ಟ ಜಾತಿ / ಪಂಗಡದ ಸದಸ್ಯರು ಜಲಾನಯನ ಸಮಿತಿಯಲ್ಲಿರುವಂತೆ ಕ್ರಮವಹಿಸುವುದು. ಶೇಕಡ 30 ರಷ್ಟು ಕಾರ್ಯಕಾರಿ ಸಮಿತಿ ಸದಸ್ಯರು ಪ್ರತಿ ವರ್ಷ ಬದಲಾಗುತ್ತಿರಬೇಕು. ಆಲಾನಯನ ಸಮಿತಿ ಕ್ಷೇತ್ರದಲ್ಲಿ ಹೆಚ್ಚಿನ ಗ್ರಾಮ ಪಂಚಾಯತಿ ಸದಸ್ಯರಿದ್ದರೆ ಎಲ್ಲರಿಗೂ ಅವಕಾಶ ಸಿಗುವ ಹಾಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಬದಲಾದಂತೆ ಇವರನ್ನೂ ಸಹ ಆ ಅವಧಿಯಲ್ಲಿ ಬದಲಾಯಿಸುವುದು

 

ಮೂಲ : ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಮತ್ತು  ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate