অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಜನೆಗಳು

ಯೋಜನೆಗಳು

ಕೃಷಿ ಪ್ರಯೋಗ ಸಂಘಟನೆಗಳು

ಕೆಪಿಪಿ ಅವರ ಕೃಷಿ ಪ್ರಯೋಗಗಳನ್ನು ರೈತರ ಜಮೀನುಗಳಲ್ಲಿ ನಡೆಸುತ್ತಾರೆ.ಈ ಚಟುವಟಿಕೆಯನ್ನು ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಹಾಗು ಸಹಾಯದಿಂದ ಮಾಡಲಾಗುತ್ತದೆ.ಈ ಪ್ರಯೊಗಗಳನ್ನು ಗೊ ಮುತ್ರ, ನೀರು ಗೊಬ್ಬರ ಮತ್ತು ಬೆಳೆಗಳ ಮೇಲೆ ಚಂದ್ರನ ಚಲನೆಯ ಪ್ರಭಾವ ವಿಶಯದ ಮೇಲೆ ಮಾಡಲಾಗುತ್ತದೆ.ಕೆಪಿಪಿ ಅವರು ಕೊಪ್ಪಳ ತಾಲುಕು,ಚಿಕ್ಕಮಗ್ಗಳುರಿನಲ್ಲಿ ಅಡಿಕೆ ಮರಕ್ಕೆ ಬರುವ ಹಳದಿ ಎಲೆ ಖಾಯಿಲೆ ಬಗ್ಗೆ ವೃಕ್ಶಾಯುರ್ವೆದದಲ್ಲಿ ಸಿಕ್ಕಿರುವ ಸುಳಿವುಗಳ ಮೇಲೆ ಪ್ರಯೊಗಗಳನ್ನು ನಡೆಸುತ್ತಿದಾರೆ.

ಉತ್ಪಾದಕರು – ಬಳಕೆದಾರ ಸಂಯೋಜನೆ ಕಾರ್ಯಕ್ರಮಗಳು

ಭಾರತೀದ್ಯ ಕೃಷಿ ಮಾರಾಟ ವ್ಯವಸ್ಥೆಯನ್ನು ಉತ್ಪಾದಕ ಮತ್ತು ಗ್ರಾಹಕ ಇಬ್ಬರಿಗೂ ಉಪಯುಕ್ತವಲ್ಲ ಎಂಬುದನ್ನು ಕರೆಯಲಾಗುತ್ತದೆ.ಇದರ ಸಲುವಾಗಿ ಕೆಪಿಪಿ ಅವರು ಉತ್ಪಾದಕರು ಹಾಗು ಬಳಕೆದಾರರನ್ನು ಸಾವಯವ ಕೃಷಿ ಉತ್ಪಾದಕಗಳಿಗೆ ನೇರವಾಗಿ ಸಂಯೋಜಿಸುವ ಕಾರ್ಯಕ್ರಮ ಹೂಡಿದ್ದಾರೆ.ಈ ಕಾರ್ಯಕ್ರಮ ಸಾವಯವ ರೈತರನ್ನು ಬಳಕೆದಾರ ಸಂಘಗಳಿಗೆ ಹಾಗು ಚಿಕ್ಕ ಮಾರಾಠರನ್ನು ನೇರವಾಗಿ ಸಂಯೋಜಿಸಿದೆ.ಇದರಿಂದ ಬಹಳ ರೈತರು ತಮ್ಮ ಉತ್ಪನ್ನಗಳನ್ನು ನೆರವಾಗಿ ಬಳಕೆದಾರರಿಗೆ ಮಾರಿ ಒಳ್ಳೆ ಲಾಭವನ್ನು ಕಂಡುಕೊಂಡಿದ್ದಾರೆ.

ವಿಚಾರಗೋಷ್ಠಿಗಳನ್ನು ಸಂಯೋಜಿಸುವುದು, ಪರ್ಯಾಯ ಕೃಷಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು ಮತ್ತು ತರಬೇತಿ

ಕೆಪಿಪಿ ಅವರು ಕರ್ನಾಟಕದ ಬೇರೆ ಬೇರೆ ಹಳ್ಳಿಗಳಲ್ಲಿ ಬಹಳ ಸಭೆಗಳನ್ನು/ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಅಥವ ಭಾಗವಹಿಸಿದ್ದಾರೆ.ಈ ಕಾರ್ಯಕ್ರಮವು ಈಗಿನ ಕಾಲದಲ್ಲಿ ಸಾವಯವ ಕೃಷಿ ಬಗ್ಗೆ ಆವಶ್ಯಕತೆಯನ್ನು ತೊರಿಸುತ್ತದೆ, ಸಾವಯವ ಕೃಷಿಯ ಮುಲಭೂತ ತತ್ವಗಳು, ಪರ್ಯಾಯ ರೀತಿಯ ರಸಾಯನಿಕ ಗೊಬ್ಬರಗಳನ್ನು ಸದೃಶ್ಯವಾದ ಮಿಶ್ರಗೊಬ್ಬರ/ಸಸ್ಯಗೊಬ್ಬರ/ ಹುಳುವಿನಮಿಶ್ರಗೊಬ್ಬರ ಇತ್ಯಾದಿ., ಕ್ರಿಮಿನಾಶಕ ಹಾಗು ಕಿಟನಾಶಕ ಔಷದಿಗೆ ಪರ್ಯಯವಾಗಿ ಸಸ್ಯ ಮೂಲದ ಕಷಾಯಗಳು, ಬೀಜ ಸಂಸ್ಕರಣಗಳು ಇತ್ಯಾದಿ.ಈಗ 10,000ಕ್ಕು ಹೆಚ್ಚು ರೈತರು ಸಾವಯವ ಕೃಷಿಯನ್ನು ಬಳಸುತ್ತಿದ್ದಾರೆ ಅಥವ ಅದರ ಯೊಜನೆಯಲ್ಲಿ ತೊಡಗಿದ್ದಾರೆ.ಕೆಪಿಪಿ ಅವರು ಈ ಮೌಲ್ಯದ ಜೊತೆಗೆ ಗ್ರಾಮೀಣ ಯುವಕರನ್ನು ಮತ್ತು ಮಹಿಳೆಯರನ್ನು ಕೃಷಿ/ತೊಟಗಾರಿಕ ಬೆಳೇಗಳ ತರಬೆತಿ ಮತ್ತು ಸಣ್ಣ ಕಾಡಿನ ಕೆಲವು ಉತ್ಪಾದನೆಗಳು.ಈ ತರಬೇತಿಗಳು ಅವರಲ್ಲಿ ಹೆಚ್ಚು ಆರ್ಥಿಕವಗಿ ಬೆಳೆಗಳು ಬಳಸಿಕೊಳ್ಳಲು ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಅವುಗಳನ್ನು ಸುತ್ತುವರೆದಿರುವ ಪರಿಸರವನ್ನು ಕಾಪಾಡಿ ಅದರ ಜೀವಿಕ ವೈವಿಧ್ಯತೆಯ ಬಗ್ಗೆ ಜ್ಞಾನವನ್ನು ಗಳಿಸುವದು.ಕೆಪಿಪಿ ಅವರು ಪರ್ಯಾಯ ಔಷದಿಯಲ್ಲು ತರಬೆತಿ ನೀಡುತ್ತಿದ್ದಾರೆ.

ಹೊಸ ಕಲ್ಪನೆಗಳು/ಪರ್ಯಾಯಗಳು

ಕೆಪಿಪಿ ಅವರು ಸ್ವಯಂ ತರಬೆತಿ ಹೊಂದಿರುವ ಯಾರಿಗೆ ಯಾವ ಒಂದು ಔಪಚಾರಿಕ ಶಿಕ್ಷಣ ಇಲ್ಲದಿರುವ ಒಬ್ಬ ಯಾಂತ್ರಿಕನನ್ನು ಪ್ರೆರಣೆ ಕೊಟ್ಟು ಸಣ್ಣ ನೆಲ್ಲಿಕಾಯಿ ತುಂಡು ಮಾಡಿ ಅದರ ರಸ ಹಿಂಡುವ ಎರಡು ಯಂತ್ರವನ್ನು ಮಾಡಿಸಿದ್ದಾರೆ.ನಿರಂತರ ಪ್ರಚಾರದಿಂದ ಕೆಪಿಪಿ ಅವರು ಜನರಲ್ಲಿ ನೆಲ್ಲಿಕಾಯಿ ಮರದ ಬಗ್ಗೆ ಎದ್ದುಕಾಣುವ ವರ್ತನೆಗಳನ್ನು ತಂದಿದ್ದಾರೆ.ನೆಲ್ಲಿಕಾಯಿ ಮರದ ಕಡಿತವು ಈಗ ಕಮ್ಮಿಯಾಗಿದೆ.ಇದಲ್ಲದೆ ಈಗ ರೈತರ ಹಾಗು ಹಳ್ಳಿಯವುರು ನೆಲ್ಲಿಕಾಯಿ ಗಿಡವನ್ನು ಮತ್ತೆ ನೆಡುತ್ತಿದ್ದಾರೆ.ಇದಕ್ಕೆ ಕಾರಣವೆಂದರೆ ನಾವು ಯಶಸ್ವಿಯಾಗಿ ಅಡಿಕೆ ಪ್ರದೆಶದಲ್ಲಿ ಒನ್ದು ನೆಲ್ಲಿಕಾಯಿ ಮರದಿಂದ ಇಳುವರಿ ಒನ್ದು ಅಡಿಕೆ ಮರಕ್ಕೆ ಹೊಲಿಸಿದರೆ ಹೆಚ್ಚು ಎಂದು ತೊರಿಸಿದೆವು.

ಸಾವಯವ ಕುಂಕುಮ ಪ್ರಾಚಾರ

ಕುಂಕುಮವು ಹಿಂದು ಜನರು ವ್ಯಾಪಕವಾಗಿ ಬಳಸಲವ ಪವಿತ್ರವಾದ ಒಂದು ಕೆಂಪು ಪುಡಿ ಎಂದು ಹೆಸರಾಗಿದೆ. ಈದು ಅಲೊಚನೆಗಳು ಮತ್ತು ಭಾವನೆಗಳನ್ನು ಸುಧಾರಿಸಳು ಸಹಾಯ ಮಾಡಿ,ಸಾತ್ವಿಕ ಅಥವ ಮೌನ ಭಾವನೆಗಳನ್ನು ಅಭಿವ್ರುದ್ಧಿಗೊಳಿಸಿ, ತಾಳ್ಮೆ ಮತ್ತು ಸ್ವಯಂ ನಿಯಂತ್ರಣ ಮತ್ತು ಮನಸಿಕ-ಸಂತುಲನ ಮತ್ತು ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಪ್ರಪಂಚದ ಸಂಪರ್ಕ ಲಕ್ಶಣಗಳನ್ನು ಸುಧಾರಿಸುತ್ತದೆ.ಕೆಪಿಪಿ ಅವರು ಈ ದಿನದ ವರೆಗು 30000ಕ್ಕು ಹೆಚ್ಚು ಮಹಿಳೆಯರಿಗೆ 300 ತರಬೇತಿ ಕೆಂದ್ರಗಳಲ್ಲಿ ಶುದ್ದ ಸಾವಯ ಕುಂಕುಮ ಮಾಡುವ ತರಬೇತಿ ನೀಡಿ ಅವರಿಗೆ ಹೆಚ್ಚುವರಿ ಆದಾಯ ಒದಗಿಸಿದೆ.

ಗೊ ಉತ್ಪನ್ನಗಳ ಸಲಹೆ

ಕೆಪಿಪಿ ಅವರು ಕೃಷಿಯಲ್ಲಿ ಪುರಾತನ ಕಾಲದ ಬರಹಗಳಿಂದ ಆಲೋಚನೆ ಬಳಸಿ ಗೊ ಮೂತ್ರ,ಸಗಣಿ,ಹಾಲು,ಮೊಸರು,ಮಜ್ಜಿಗೆ ಹಾಗು ಹಾಲುಕೊದಕು ಬಳಸಿ ಪ್ರಯೋಗಗಳನ್ನು ನಡೆಸಿದ್ದಾರೆ.ಈ ಬರಹಗಳು ಹೂವುಗಳನ್ನು ಹೆಚ್ಚಿಸಲು ಅಮಿನಿಯೊಟಿಕ್ ದ್ರವದ ಬಳಕೆಯ ಸಲಹೆಯನ್ನು ನೀಡಿದ್ದಾರೆ.ಗೊ ಉತ್ಪನ್ನಗಳನ್ನು ರೈತರು ಬಹಳವಾಗಿ ಹೀಗೆ ಬಳಸುತ್ತಾರೆ : ಗೊ ಮೂತ್ರವನ್ನು ಎಲೆಗಳ ಸ್ಪ್ರೇ, ಸಗಣಿಯನ್ನು ಮಿಶ್ರಗೊಬ್ಬರಕ್ಕೆ, ಹಾಅಲನ್ನು ವೈರಸ್ ಬಾರದ ಹಾಗೆ ಸ್ಪ್ರೇಗಾಗಿ, ಮೊಸರು ಮತ್ತು ಮಜ್ಜಿಗೆಯನ್ನು ಮಣ್ಣಲ್ಲಿ ಸೂಕ್ಶ್ಮ ಜೀವಿಗಳ ಚಟುವಟಿಕೆಗಳನ್ನು ಜಾಸ್ತಿಮಾಡಲು ಮತ್ತು ತುಪ್ಪವನ್ನು ಪಾರಂಪರಿಕ ಬೀಜ ಚಿಕಿತ್ಸೆಗೆ ಉಪಯೊಗಿಸುತ್ತಾರೆ.

ಸಮುದಾಯ ಬೀಜ ರಾಶಿ/ಬ್ಯಾಂಕ್

ಕೆಪಿಪಿ ಅವರು 4 ಸಮುದಾಯ ಬೀಜ ರಾಶಿ/ಬ್ಯಾಂಕ್ಗಳನ್ನು ಹೊಂದಿಸಿದ್ದಾರೆ.ಈ ಬ್ಯಾಂಕ್ಗಳು ಸ್ಥಳಿಯ ಹಾಗು ಪಾರಂಪರಿಕ ಬೆಳೆಗಳನ್ನು ಸಂರಕ್ಶಸಿ,ಹೆಚ್ಚಿಸಿ,ವಿತರಸಿ,ಬಿತ್ತರಿಸುವ ಕೆಲಸಮಾಡಿ ಪಾಲಿಸುತ್ತದೆ.ಇವುಗಳುನ್ನು ಸಮುದಾಯಗಳೆ ನಡೆಸುತ್ತಾರೆ.ಈಗ ಈ ಸಮುದಾಯ ಬೀಜ ಬ್ಯಾಂಕ್ಗಳು ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿದ್ದಾರೆ.

ಮಳೆ ನೀರು ಕೊಯ್ಲು ತರಬೆತಿ

ಕೆಪಿಪಿ ಅವರು ಆಸಕ್ತಿ ಇರುವ ವ್ಯಕ್ತಿಗಳಿಗೆ ಮತ್ತು ರೈತರಿಗೆ ಮಳೆ ನೀರು ಕೊಯ್ಲು, ನೀರು ಸಂರಕ್ಶಣೆ ಇತ್ಯಾದಿ ಬಗ್ಗೆ ತರಬೇತಿಯನ್ನು ಕೊಟ್ಟಿದ್ದಾರೆ.ಪ್ರಾಯೊಗಿಕವಗಿ ಮಳೆ ನೀರಿನ ಕೊಯ್ಲು ಕ್ರಮಗಳನ್ನು ಕಾರ್ಯರುಪಕ್ಕೆ ಮಾಡಿದ ರೈತರು ಅದರ ಧನಾತ್ಮಕ ಪರಿಣಾಮಗಳನ್ನು ನೊಡಿ ಈ ವಿಶಯದ ಬಗ್ಗೆ ಎಲ್ಲರಿಗು ಪ್ರಚಾರ ಮಾಡುತ್ತಿದ್ದಾರೆ. ಕೆಪಿಪಿ ಅವರು ಪ್ರೌಢ ಶಾಲೆ ಮಕ್ಕಳ್ಳಿಗು ಮಳೆ ನೀರು ಕೊಯ್ಲು ಅರಿವು ಮೂದಿಸುವ ಕಾರ್ಯಕ್ರಮ ಮಾಡಿದ್ದಾರೆ.ಈ ಕಾರ್ಯಕ್ರಮವು ಸಾಗರ ಹಾಗು ತೀರ್ಥಹಳ್ಳಿ ತಾಲುಕಿನ ಪ್ರೌಢ ಶಾಲೆಗಳಲ್ಲಿ ನಡೆದಿದೆ.ಇಲ್ಲಿ 10000ಕ್ಕು ಹೆಚ್ಚು ವಿದ್ಯಾರ್ತಿಗಳನ್ನು ತರಬೇತಿಸಿದ್ದಾರೆ.ಮುನ್ನಡೆ ಚಟುವಟಿಕೆಗಳನ್ನು ನಡೆಸಿದ್ದಾರೆ.ಕೆಲ ಪ್ರೌಢ ಶಾಲೆಗಳು ಈ ಅರ್ ಡಬ್ಲ್ಯು ಹಚ್ ಅನ್ನು ಅವರ ಶಾಲೆಯ ಆವರಣಗಳಲ್ಲಿ ಪ್ರದರ್ಶಿಸಿದ್ದಾರೆ.2500 ಶಾಲ ಮಕ್ಕಳ ಮೆರವಣಿಗೆ ಸಾಗರದಲ್ಲಿ ಮಾಡಲಾಯಿತು.ಇದರಿಂದ ಜನಸಾಮನ್ಯರಿಗೆ ಇದರ ಪ್ರಾಮುಖ್ಯತೆಯ ಬಗ್ಗೆ ತಿಲುವರಿಪಡಿಸಲಾಯಿತು.

ಸಾವಯವ ಕೃಷಿ ಜಾಗೃತಿ ಶಿಬಿರ

ಸಾವಯವ ಕೃಷಿ ಜಾಗೃತಿ ಶಿಬಿರ(ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಮತ್ತು ಪರ್ಯಾಯ ಕೃಷಿ) ತೀರ್ಥಹಳ್ಳಿ ತಾಲುಕಿನ ಬೇರೆ ಬೇರೆ ಹಳ್ಳಿಗಳಲ್ಲಿ ನಡೆಸಲಾಯಿತು.ಈ ಕರ್ಯಕ್ರಮಗಳು ಹಸಿರು ಕ್ರಾಂತಿ ತಾಂತ್ರಿಕಗಳು ಮತ್ತು ರಾಸಯಿನಿಕ ಕೃಷಿಗಳ ಅನಾನುಕುಲಗಳಾದ ಹೆಚ್ಚಿನ ಆರೊಗ್ಯದ ಸಮಸ್ಯೆಗಳು,ನೀರು-ಗಾಳಿ-ಮಣ್ಣಿನ ಮಾಲಿನ್ಯ, ಹೆಚ್ಚಿನ ಕೀಟ ಹಾಗು ರೊಗಕಾರಕ ಪ್ರತಿರೊಧ,ಬೆಳೆಗಳ ಕಡಿಮೆ ಉತ್ಪಾದನೆ,ಹೆಚ್ಚಿನ ಕೃಷಿಯ ಬೆಲೆ, ಪರಿಸರ ಸಮತೊಲನ ನಷ್ಟ ಇತ್ಯಾದಿ.ಸಾವಯ ತತ್ವಶಾಸ್ತ್ರ, ಅಗ್ನಿಹೊತ್ರವನ್ನು ವಿತರಿಸಿದೆ.ಇದನ್ನು 400ಕ್ಕು ಹೆಚ್ಚು ರೈತರು ಭಾಗವಹಿಸಿದರು. ಇದನ್ನು ಪುರುಶೊತಮ ರಒ ಕೃಷಿ ಸ್ಥಾಪನೆಯವರು ಮತ್ತು ಸ್ಥಲೀಯ ಸಂಸ್ಥೆಗಳ ಜೊತೆಗೂಡಿ ನಡೆಸಲಾಯಿತು.

ಸಾವಯ ಹಳ್ಳಿ ಕಾರ್ಯಕ್ರಮ

ಕೆಪಿಪಿ ಅವರು ರಾಜ್ಯದ ಕೃಷಿ ವಿಭಾಗದ ಸಾವಯವ ಕೃಷಿ ಹಳ್ಳಿ ಕಾರ್ಯಕ್ರಮದಲ್ಲಿ ಪಾಲುಗೊಂಡಿರುತ್ತಾರೆ.ಈ ಕಾರ್ಯಕ್ರಮಗಳನ್ನು ಸಾಗರ ತಾಲುಕಿನ ಹುಳೆಗಾರು ಹಳ್ಳಿ,ಸಿದ್ದಾಪುರ ತಾಲುಕಿನ ಕಿಲಾರ ಹಳ್ಳಿ,ತೀರ್ಥಹಳ್ಳಿ ತಾಲುಕಿನ ಚಕ್ಕೊಡುಬೈಲು ಹಳ್ಳಿ ಮತ್ತು ಯೆಲ್ಲಾಪುರ ತಾಲುಕಿನ ಲಾಲ್ಗುಲಿ ಹಳ್ಳಿಗಳಲ್ಲಿ ನಡೆಸಲಗುತ್ತುದೆ.ಈ ಕಾರ್ಯಕ್ರಮಕ್ಕೆ “ಅಕ್ಶಯ ಜೀವನ” ಎಂದು ಕರೆಯಲಾಗುತ್ತದೆ.ಈ ಕಾರ್ಯಕ್ರಮವು 100ಎಕರೆ ಕೃಷಿ ಭೂಮಿಯನ್ನು ಸಾವಯವ ವ್ಯವಸಾಯಕ್ಕೆ ಪರಿವರ್ತಿಸುವ ಯೊಜನೆಯನ್ನು ಹೊಂದಿದ್ದಾರೆ.

ಸಾವಯವ ರೈತರ ಸಂಘಟನೆಗಳ ಊತ್ತೆಜನ

ಕೆಪಿಪಿ ಅವರು ಪ್ರತಿ ತಾಲುಕಿನ ಸಾವಯವ ರೈತರನ್ನು ಸಾವಯವ ಕೃಷಿ ಪರಿವರದ ಹೆಸರಿನಲ್ಲಿ ಸ್ವತಹ ಸಂಘಟಿಸಲು ಉತ್ತೆಜಿಸಿದೆ.ಈಗ 170 ತಾಲುಕಗಳಲ್ಲಿ ಈ ಪರಿವಾರವು ಇದೆ.ಕೆಲ ರೈತರು 100ಪ್ರತಿಶತ್ತು ಸಾವಯವ ರೈತರಾಗಿದ್ದಾರೆ ಮತ್ತು ಕೆಲವರು ಸಾವಯವ ವ್ಯವಸಾಯಕ್ಕೆ ತಿರುಗುತ್ತಿದ್ದಾರೆ.

ಸಾವಯವ ಗುಂಪು ಪ್ರಾಮಣಿಕರಣ

ಗುಂಪು ಪ್ರಾಮಣಿಕರಣಕ್ಕಾಗಿ 100 ಪ್ರತಿಶತ್ತು ಸಾವಯವ ರೈತರು ಒಂದು ಆಂತರಿಕ ನಿಯನ್ತ್ರಣ ವ್ಯವಸ್ಥೆಯಲ್ಲಿ ಇದ್ದಾರೆ.ಈಗ 149 ರೈತರನ್ನು ಪ್ರಾಮಣಿಕರಣಗೊಳಿಸಿದ್ದಾರೆ ಇದರ ಜೊತೆಗೆ ಎಕರೆಗಳು ಪ್ರಾಮಣಿಕರಣಗೊಳಿಸುವಲ್ಲಿದ್ದಾರೆ.

ಮೂಲ : ಸಾವಯವ ಕೃಷಿ ಪರಿವರ್

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate