অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಒದೆಕರ್ ತೋಟ

ಒದೆಕರ್ ತೋಟ

ವಿಳಾಸ ಒಡೆಕರ್ ತೋಟ
ಸ್ಥಳ ನೆಳಹಾಳ್ ಸಮೀಪ , ತುಮಕೂರಿನಿಂದ ೩೦ ಕಿ.ಮೀ
ಕೃಷಿಕ ನೀಲಕಂಠ ಮೂರ್ತಿ
ಬೆಳೆ ತೆಂಗು
ಕೃಷಿ ಭೂಮಿ ೫೦ ಎಕರೆಗಳು
ವರದಿಗಾರ ವಿಶ್ವಾಸ್
ದಿನಾಂಕ 31-Aug-2013, 01-Sep-2013

೫೦ ಎಕರೆಯಷ್ಟು ವಿಸ್ತಾರದ ಈ ರಾಸಾಯನಿಕ ಮುಕ್ತ ಕೃಷಿ ಭೂಮಿಯಲ್ಲಿ ವಿವಿಧ ಬಗೆಯ ಕೃಷಿ, ಔಷದಿ ಮತ್ತು ಇತರ ಸಸಿಗಳನ್ನು ನೆಡಲಾಗಿದೆ ಹಾಗೂ ೩ ನೀರಿನ ಹೊಂಡಗಳನ್ನು ತೊಡಲಾಗಿದೆ. ಸದ್ಯಕ್ಕೆ ಕೇವಲ್ ೧೦ ಎಕರೆಯಲ್ಲಿ ಮಾತ್ರ ಕೃಷಿಯನ್ನ ಮಾಡಲಾಗುತ್ತಿದೆ. ಉಳಿದ ಜಾಗದಲ್ಲಿ ನೀರಿನ ಅಭಾವದಿಂದ ಕೃಷಿಯನ್ನು ಮಾಡಲಾಗಿಲ್ಲ. ಈ ಫಾರಂ ಮನೆಯಲ್ಲಿ ೧೦ ಹಸುಗಳು, ೨ ಎಮ್ಮೆಗಳನ್ನು ಸಾಕಲಾಗಿದೆ. ಈ ಎಲ್ಲ ಕೃಷಿ ಮತ್ತು ಜಾನುವಾರು ಸಾಕಣೆ ಕೆಲಸಗಳನ್ನು ೫ – ೬ ಜನರು ಮಾಡುತ್ತಿದ್ದಾರೆ. ಕಳೆದ ೪-೫ ವರ್ಷಗಲ್ಲಿ ಇಲ್ಲಿ ಮಳೆ ಕಡಿಮೆ ಆಗಿದ್ದು ಹೆಚ್ಚಿನ ಭೂಮಿಯನ್ನು ಪಾಳುಬಿಡಲಾಗಿದೆ. ಭೂಮಿಯ ಅಂತರಾಳದ ನೀರಿನ ಅಂಶವು ಕಡಿಮೆಯಾಗಿದೆ.

ತೆಂಗು ಇಲ್ಲಿನ ಮೂಲ ಬೆಳೆಯಾಗಿದ್ದು ೨೫೦ – ೩೦೦ ತೆಂಗಿನ ಮರಗಳು ಕಾಯಿ ನೀಡುತ್ತಿದ್ದು ಇದನ್ನ ಮನೆಗೆ ಬೇಕಾದಷ್ಟು ಬಳಸಿ ಉಳಿದಿದ್ದನ್ನ ಮಾರುತ್ತಿದ್ದಾರೆ. ಇಲ್ಲಿ ಕರಕುಶಲ ವಸ್ತುಗಳನ್ನ ತಯಾರಿಸಿ ಮಾರಲಾಗುತ್ತಿದೆ. ಉದಾ: ಮೈಸೋಪು, ಶಾಂಪು, ತಲೆ ಎಣ್ಣೆ , ಇತರೆ. “ಒಡೆಕರ್ ನ್ಯಾಚುರಲ್ಸ್” ಎಂಬ ಹೆಸರಿನಿಂದ ಈ ಉತ್ಪನ್ನಗಳನ್ನು ರಾಜ್ಯದ ಹಲವು ನಗರಗಳಲ್ಲಿ ಮಾರಲಾಗುತ್ತಿದೆ. ಇಲ್ಲಿ ಭೂಮಿಯ ಅಂತರಾಳದ ನೀರಿನ್ನು ಸೌರ ಚಾಲಿತ ವಿದ್ಯುತ್ ನಿಂದ ಎತ್ತಲಾಗುತ್ತದೆ. ಮಳೆ ಕೊಯ್ಲು ಪದ್ದತಿಯಂತೆ ಇಲ್ಲಿ ಮಳೆಗಾಲದಲ್ಲಿ ನೀರನ್ನು ಭೂಮಿಗೆ ಹಿಂಗಿಸಲಾಗುತ್ತಿದೆ. ಜಾನುವಾರುಗಳ ನಗಣಿಯಿಂದ ಬಯೋ ಅನಿಲವನ್ನು ಕೂಡ ಉತ್ಪಾದಿಸಲಾಗುತ್ತಿದೆ.

ಮೂಲ : ಸಾವಯವ ಕೃಷಿ ಪರಿವರ್

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate