ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನೀಲಗಿರಿ ರೈತ

ಡಿಮೆ ವೆಚ್ಚ ಅಧಿಕ ಲಾಭ: ನೀಲಗಿರಿ ರೈತರ ಕಲ್ಪಂ

ದೊಡ್ಡಬಳ್ಳಾಪುರ ಸುತ್ತ ಮುತ್ತ ಮಳೆಯ ಅಭಾವವಿರುವುದರಿಂದ ಅಲ್ಲಿನ ನೂರಾರುರೈತರು ನೀಲಗಿರಿ ಬೆಳೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ. ಅದರಲ್ಲೂ ಸರ್ವೆಹಾಗೂ ನೀಲಗಿರಿ ಮರಗಳನ್ನು ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳಸಲಾಗುತ್ತಿದೆ. ಅತೀ ಕಡಿಮೆನೀರಿನಲ್ಲೂ ಹೆಚ್ಚಿನ ಪಸಲನ್ನು ತೆಗೆಯಬಹುದು. ಕಷ್ಟದ ಕಾಲದಲ್ಲಿ ತುರ್ತುಅವಶ್ಯಕತೆಗಳಿಗೆ ರೈತರಿಗೆ ಆರ್ಥಿಕ ನೆರವು ನೀಡುವುದೇ ಈ ಮರಗಳು. ಹಾಗಾಗಿತಾಲೂಕಿನ ಬಹುತೇಕ ರೈತರು ನೀಲಗಿರಿ, ಸರ್ವೆ ಬೆಳೆಯುತ್ತಿದ್ದಾರೆ. ಸರ್ವೆ ಗಿಡಗಳುಎರಡರಿಂದ ಮೂರು ವರ್ಷಕ್ಕೆಲ್ಲಾ ಕಟಾವಿಗೆ ಬರುತ್ತವೆ. ನೀಲಗಿರಿ ಸಸಿಗಳನ್ನು ಗಾತ್ರಕ್ಕೆತಕ್ಕಂತೆ 2 ವರ್ಷದಿಂದ 12 ವರ್ಷದ ವರೆಗೂ ಕಟಾವು ಮಾಡಬಹುದಾಗಿದೆ.

ದೊಡ್ಡಬಳ್ಳಾಪುರ ಜಿಲ್ಲೆಯ ಮಲ್ನಾಯಕನ ಹಳ್ಳಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳರೈತರು ನೀಲಗಿರಿ ಬೆಳೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ಮಳೆಯಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಕಂಗಾಲಾಗಿರುವ ರೈತರು ಕಡಿಮೆ ಖರ್ಚಿನಲ್ಲಿಖಚಿತ ಲಾಭ ಗಳಿಸುವ ಉದ್ದೇಶದಿಂದ ನೀಲಗಿರಿ ಬೆಳೆಸಲು ಮುಂದಾಗಿದ್ದಾರೆ. ಇದರಿಂದಕೃಷಿ ಭೂಮಿ ನೀಲಗಿರಿ ತೋಪುಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಒಂದೆಡೆ ಅರಣ್ಯ ನಾಶಎಗ್ಗಿಲ್ಲದೆ ಸಾಗುತ್ತಿದ್ದರೆ ಮತ್ತೊಂದೆಡೆ ನೆಡು ತೋಪುಗಳನ್ನು ಬೆಳೆಸುವ ಕಾರ್ಯ ಸದ್ದಿಲ್ಲದೆನಡೆಯುತ್ತಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ನೆಡುತೋಪ ಸಾಮಾನ್ಯವಾಗುತ್ತಿದೆ. ಸರ್ವೆ,ನೀಲಗಿರಿ ಸಸಿಗಳನ್ನು ರೈತರು ತಮ್ಮ ಹೊಲಗದ್ದೆಗಳು ಹಾಗೂ ತೆಂಗಿನ ತೋಟಗಳನಡುವೆ ಇಲ್ಲವೆ ಯಾವುದೇ ಬೆಳೆ ಬೆಳೆಯಲಾದ ಜಮೀನುಗಳಲ್ಲಿ ನೆಡುವ ಮೂಲಕಪರಿಸರದ ಬಗ್ಗೆಯೂ ಕಾಳಜಿ ತೋರುತ್ತಿದ್ದಾರೆ. ಸರ್ವೆ ಸಸಿಗಳು ಕಡಿಮೆ ಮೊತ್ತಕ್ಕೆದೊರೆಯುತ್ತವೆ. ಒಂದೂವರೆ ತಿಂಗಳಿಂದ 2 ತಿಂಗಳ ಸಸಿಗಳನ್ನು 3 ಚದರ ಅಡಿಗೆಒಂದರಂತೆ ಒಂದನ್ನು ನಾಟಿ ಮಾಡಲಾಗುತ್ತದೆ.

ನೀಲಗಿರಿ ಹೆಚ್ಚು ಲಾಭದಾಯಕ:

ರೈತರಿಗೆ ನೀಲಗಿರಿ, ಸರ್ವೆ ಬೆಳೆ ಲಾಭದಾಯಕವೂಹೌದು. ಒಂದು ಎಕರೆಗೆ 1800 ರಿಂದ 2200 ರವರೆಗೆ ನಾಟಿ ಮಾಡಬಹುದಾಗಿದೆ. ಈಸಸಿಗಳಿಗೆ ಬತ್ತ, ಕಬ್ಬು, ರಾಗಿ ಬೆಳೆಗಳಂತೆ ಹೆಚ್ಚು ನೀರು ಬೇಕಾಗುವುದಿಲ್ಲ. 5 ರಿಂದ 6ಅಡಿ ಬೆಳೆಯುವವರೆಗೆ ಅಗತ್ಯಕ್ಕೆ ತಕ್ಕಂತೆ ನೀರೂಣಿಸಿದರೆ ಸಾಕು. ಆ ನಂತರ ಇವಕ್ಕೆತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ನೀರು ಹಾಯಿಸಿದರೂ ಸಾಕಾಗುತ್ತದೆ.ಐದಾರು ಇಂಚು ದಪ್ಪದಾದ ಪ್ರತಿ ನೀಲಗಿರಿ, ಸರ್ವೆ ಪೋಲ್‌ಗಳಿಗೆ ಮಾರುಕಟ್ಟೆಯಲ್ಲಿ 250ರಿಂದ 320 ಬೆಲೆ ಇದೆ. ಸರ್ವೆ ಮರಗಳಿಂದ ಪ್ರತಿ ಎಕರೆಗೆ 3ರಿಂದ 4 ಲಕ್ಷ, ನೀಲಗಿರಿಮರಗಳಿಂದ 4ರಿಂದ 5 ಲಕ್ಷ ಲಾಭಗಳಿಸಬಹುದು ಎನ್ನುತ್ತಾರೆ ರೈತರು. ಸರ್ವೆ ಮರವನ್ನುಕಟಾವು ನಂತರ ಮತ್ತೆ ನೆಡಬೇಕು. ಆದರೆ, ನೀಲಗಿರಿ ಕಟಾವು ಮರಗಳ ಬುಡದಿಂದಚಿಗುರಿ ಅವುಗಳೇ ಮತ್ತೆ ಮರಗಳಾಗುತ್ತವೆ. ಇದರಿಂದ ರೈತರಿಗೆ ಆದಾಯವಿದೆ. ಆಯಾಭೂಮಿಯ ಫಲವತ್ತತೆ ಆಧಾರದ ಮೇಲೆ ಇಳುವರಿ ಸಿಗುತ್ತದೆ.

ನೀಲಗಿರಿ ಆಕರ್ಷಣೆ?:

ನೀಲಗಿರಿಯು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಹುಲುಸಾಗಿಬೆಳೆಯುತ್ತದೆ. ನೀಲಗಿರಿ ಸಸಿ ನೆಟ್ಟು ಒಂದು ವರ್ಷ ಪೋಷಿಸಿದರೆ ಸಾಕು ಅದು ಪ್ರತಿಮೂರು ವರ್ಷಕ್ಕೊಮ್ಮೆ ಕಟಾವಿಗೆ ಬರುತ್ತದೆ. ನೀಲಗಿರಿಗೆ ಯಾವುದೇ ಜಾನುವಾರುಗಳಕಾಟ ಇಲ್ಲ. ಯಾವುದೇ ಉಳುಮೆ, ಗೊಬ್ಬರದ ಖರ್ಚೂ ಇಲ್ಲ. ಬೇಲಿ ನಿರ್ಮಿಸಿ ಕಾಪಾಡುವಅಗತ್ಯವೂ ಇಲ್ಲ. ಹೆಚ್ಚು ಕೃಷಿ ಭೂಮಿ ಉಳ್ಳ ರೈತರು ನಿರ್ವಹಣೆ ಮಾಡಲಾಗದೆ ನೀಲಗಿರಿಬೆಳೆಯಲು ಮುಂದಾಗಿದ್ದರೆ ಸಾಂಪ್ರದಾಯಿಕ ಬೆಳೆಗಳಲ್ಲಿ ನಷ್ಟ ಅನುಭವಿಸಿದ ಅನೇಕರೈತರು ನೀಲಗಿರಿಯತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಜಮೀನು ಖರೀದಿಸಿ ಬೇರೆಡೆವಾಸವಿರುವವರು ರಕ್ಷಣೆ ದೃಷ್ಟಿಯಿಂದ ತಮ್ಮ ಭೂಮಿಯನ್ನು ನೀಲಗಿರಿ ನೆಡುತೋಪನ್ನಾಗಿಪರಿವರ್ತಿಸಿದ್ದಾರೆ.

ಮಳೆ ಕೊರತೆ ಹಾಗೂ ಅಂರ್ತಜಲ ಕುಸಿತದಿಂದ ನೀರಿನ ಆಭಾವ ಹೆಚ್ಚಾಗಿ. ಸಾವಿರಾರು ಅಡಿ ಬೋರ್ ವೆಲ್ ಕೊರೆಸಿದರು ನೀರು ಸಿಗದಂತಾಗಿದೆ. ಇಂತ ಪರಿಸ್ಥಿತಿಯಲ್ಲಿ ಆದಾಯ ಬೆಳೆಗಳನ್ನು ಸಾಧ್ಯವಿಲ್ಲ. ಹಾಗೂ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಆದಾಯ ಬೆಳೆಗಳನ್ನು ಬೆಳೆದರು ಸೂಕ್ತ ಮಾರುಕಟ್ಟೆ ಧಾರಣೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಬಳಿಜಮೀನಿದೆ ಆದರೆ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಬೇರೆ ಕೆಲಸಮಾಡಿಕೊಂಡಿದ್ದು, ಜಮೀನನ್ನು ಪಾಳು  ಬಿಡುವುದು ಸರಿಯಲ್ಲ ಎನ್ನುವ ಉದ್ದೇಶದಿಂದನಾನು ಎರಡೂವರೆ ಎಕರೆ ಜಮೀನಿನಲ್ಲಿ ನೀಲಗಿರಿ ಬೆಳೆಯುತ್ತಿದ್ದೇನೆ. ಈ ಬೆಳೆಗೆ ಹೆಚ್ಚುಪರಿಶ್ರಮದ ಅಗತ್ಯ ಇಲ್ಲ. ಮೊದಲ ಸರ್ತಿ ಸಸಿ ನೆಟ್ಟಾಗ ಮಾತ್ರ ಸ್ವಲ್ಪಜಾಗರೂಕತೆಯಿಂದ ನೋಡಿಕೊಳ್ಳಬೇಕು. ಮೊದಲ ಸಲ ಕಟಾವಿಗೆ ಬಂದ ನಂತರಮುಂದಿನ ಸಲದಿಂದ ಬುಡದಿಂದಲೇ ಸಸಿ ಬೆಳೆಯುತ್ತದೆ ಇದರಿಂದ ನಮಗೆ ಹೆಚ್ಚಿನ ಲಾಭಸಿಗುತ್ತದೆ ಎಂದಿದ್ದಾರೆ ಮಲ್ನಾಯಕನಹಳ್ಳಿ ರೈತ ಅಪ್ಪಾಜ್ಜಿ ಗೌಡ.

ಮೂಲ: ವಿಶ್ವನಾಥ್. ಎಸ್

2.98148148148
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top