ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನಿಖರ ಕೃಷಿ

ನಿಖರ ಕೃಷಿ ಅಥವಾ ನಿಖರ ವ್ಯವಸಾಯವು ಹೊಸ ತಂತ್ರಜ್ಞಾನ ಮತ್ತು ಪ್ರಾತ್ಯಕ್ಷಿಕೆ ಗಳ ಮೂಲಕ ಸಂಗ್ರಹಿತವಾದ ಮಾಹಿತಿಯನ್ನು ಬಳಸಿ ಕೃಷಿ ಮಾಡುವ ಪರಿಕಲ್ಪನೆ. ಸರಿಯಾದುದುನ್ನು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಮಾಡುವ ವಿಧಾನ.

ನಿಖರ ಕೃಷಿ ಎಂದರೇನು

 • ನಿಖರ ಕೃಷಿ ಅಥವಾ ನಿಖರ ವ್ಯವಸಾಯವು ಹೊಸ ತಂತ್ರಜ್ಞಾನ ಮತ್ತು ಪ್ರಾತ್ಯಕ್ಷಿಕೆ ಗಳ ಮೂಲಕ ಸಂಗ್ರಹಿತವಾದ ಮಾಹಿತಿಯನ್ನು ಬಳಸಿ ಕೃಷಿ ಮಾಡುವ ಪರಿಕಲ್ಪನೆ. ಸರಿಯಾದುದುನ್ನು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಮಾಡುವ ವಿಧಾನ. ಸಂಗ್ರಹಿಸಿದ ಮಾಹಿತಿಯನ್ನು ಹಿತಕರವಾದ ಬಿತ್ತನೆಯ ಸಾಂದ್ರತೆ, ಗೊಬ್ಬರದ ಅಂದಾಜು, ಇತರ ನೀಡಿಕೆಗಳ ಅಗತ್ಯ ಮತ್ತು ಬರಬಹುದಾದ ಉತ್ಪನ್ನದ ನಿಖರ ಅಂದಾಜು ಅರಿಯಲು ಉಪಯೋಗಿಸಬಹುದು.
 • ಇದರಿಂದ ಸ್ಥಳೀಯ ಮಣ್ಣಿಗೆ, ಹವಾಮಾನಕ್ಕೆ ಹೊಂದಿಕೆಯಾಗದ ಬೆಳೆಗಳನ್ನು ಕೈ ಬಿಡಬಹುದು. ಇದರಿಂದ ಹೆಚ್ಚಿನ ಕೂಲಿಗಳು, ನೀರು, ಗೊಬ್ಬರ ಕೀಟನಾಶಕ ಇತ್ಯಾದಿಗಳ ಬಳಕೆ ಕಡಿಮೆ ಯಾಗುವುದು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ಖಾತ್ರಿದೊರೆಯುವುದು.

ತಮಿಳುನಾಡು ನಿಖರ ಕೃಷಿ ಯೋಜನೆ

ಯೋಜನೆಯ ಬಗ್ಗೆ

 • ನಿಖರ ಕೃಷಿ ಯೋಜನೆಯು ಮೊದಲು ತಮಿಳು ನಾಡಿನ ಧರ್ಮ ಪುರಿ ಜಿಲ್ಲೆಯಲ್ಲಿ 2004-05 ಪ್ರಾಂಭವಾಯಿತು.ಇದು ಪ್ರಪ್ರಥಮವಾಗಿ 2004-05 ರಲ್ಲಿ 250 ಎಕರೆಗಳಲ್ಲಿ , 2005-06ರಲ್ಲಿ 500 ಎಕರೆಯಲ್ಲಿ ಮತ್ತು 2006-07 ರಲ್ಲಿ 250 ಎಕರೆ ಭೂಮಿಯಲ್ಲಿ ಅನುಷ್ಠಾನ ಗೊಳಿಸಲಾಯಿತು ತಮಿಳುನಾಡು ಸರಕಾರವು ಈ ಕಾರ್ಯವನ್ನು ತಮಿಳು ನಾಡು ವಿಶ್ವವಿದ್ಯಾಲಯಕ್ಕೆ ವಹಿಸಿಕೊಟ್ಟಿತು.
 • ಹನಿ ನೀರಾವರಿ ಅಳವಡಿಕೆಗಾಗಿ ರೂ.75,000/- ಮೊತ್ತವನ್ನು ಮತ್ತು ಬೆಳೆ ಉತ್ಪಾದನೆ ಕೆಲಸಕ್ಕಾಗಿ 40000/- ರೂಪಾಯಿಗಳನ್ನು ನೀಡಲಾಯಿತು. ಮೊದಲನೆ ಬೆಳೆಯನ್ನು ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಪೂರ್ಣ ಮಾರ್ಗದರ್ಶನದಲ್ಲಿ ಪಡೆಯಲಾಯಿತು. ನಂತರದ ಐದು ಬೆಳೆಗಳನ್ನು ರೈತರೇ ಮೂರುವರ್ಷದಲ್ಲಿ ಪಡೆದರು.
 • ಮೊದಲ ವರ್ಷದಲ್ಲಿ ,ರೈತರು ಯೋಜನೆಯನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅವರು 2002 ರಿಂದ ಕಾಡಿದ ಸತತ 4 ವರ್ಷದ ಬರದಿಂದ ಕೃಷಿಯಬಗ್ಗೆ ಹತಾಶರಾಗಿದ್ದರು. ಅದರೆ ಮೊದಲ 100 ಜನ ರೈತರು ಪಡೆದ ಯಶಸ್ಸು ಮತ್ತು ಮಾರುಕಟ್ಟೆಯಲ್ಲಿ ಈ ಯೋಜನೆಯಲ್ಲಿ ಬೆಳೆದ ಉತ್ಪನ್ನಕ್ಕೆ ದೊರೆತ ಉತ್ತಮ ದರ ನೋಡಿ, ತಾವೇ ಈ ಯೋಜನೆಗೆ ತಂಡ ತಂಡವಾಗಿ ಬಂದು ನೊಂದಾಯಿಸಿಕೊಳ್ಳ ತೊಡಗಿದರು. ಎರಡನೆ ವರ್ಷ ( ಶೇಕಡಾ 90 ಸಬ್ಸಿಡಿ) ಮತ್ತು ಮೂರನೆ ವರ್ಷ (ಶೆಕಡಾ 80 ಸಬ್ಸಿಸಿಡಿ )

ತಂತ್ರಜ್ಞಾನಗಳು

 1. ಉಪಗ್ರಹ ಆಧಾರಿತ ಮಣ್ಣಿನ ನಕ್ಷೆ
 2. ಉಪಗ್ರಹ ಆಧಾರಿತ ಭೂನಕ್ಷೆ ಯ ಆಧಾರದ ಮೇಲೆ ಭೂಮಿಯ ನಿರ್ವಹಣೆ ಮತ್ತು ಗೊಬ್ಬರದ ಪೂರೈಕೆ ಮಾಡಿದರು. ಈ ತಂತ್ರಜ್ಞಾನವು ಆ ಪ್ರದೇಶದ ಮಣ್ಣಿನ ಫಲವತ್ತತ್ತೆಯನ್ನು ನಿಖರವಾಗಿ ಗುರುತಿಸುವುದು.

 3. ಚಾಣ ದಿಂದ ಉಳುಮೆ
 4. ಟ್ರಾಕ್ಟರನ್ನು ಅನೇಕ ವರ್ಷಗಳ ವರೆಗೆ ಬಳಸಿದುದರ ಪರಿಣಾಮವಾಗಿ ಮತ್ತು ನೆರೆ ಕೃಷಿಯ ಅಭ್ಯಾಸಗಳಿಂದ, ಭೂಮಿಯ ಮೇಲ್ಪದರವು 45 ಸೆ.ಮಿ ರಷ್ಟು ಗಟ್ಟಿಯಾಗಿ ಹೋಗಿತ್ತು. ಇದರಿಂದ ನೀರಿನ ಇಂಗುವಿಕೆ ಮತ್ತು ಗಾಳಿ ಯಾಡುವುದು ಕಡಿಮೆಯಾಗಿದೆ.ಚಾಣದಿಂದ ನೆಲವನ್ನು ಅಗೆದು ಉಳುಮೆಮಾಡಿದರೆ ಈ ಸಮಸ್ಯೆಯು ಪರಿಹಾರವಾಗುವುದು.ವರ್ಷಕ್ಕೆ ಎರಡು ಸಲ ಈ ರೀತಿಯ ಉಳುಮೆ ಮಾಡುವುದು ಅಗತ್ಯ.

 5. ಹನಿ ನಿರಾವರಿ
  • ಹನಿ ನಿರಾವರಿಯನ್ನು ಮಾಡಲು ಅವುಗಳನ್ನು 1.5 x 0.6 ಮೀ. ಅಂತರದಲ್ಲಿ ಸ್ಥಾಪಿಸಬೇಕು.ಅದರಿಂದ ಬಹಳ ಅನುಕೂಲಗಳಿವೆ..
  • ಪ್ರತಿ ಎಕರೆಗೆ ಬೇಕಾಗುವ ನೀರಿನ ಮತ್ತು ಗೊಬ್ಬರದ ಪ್ರಮಾಣ ಕಡಿಮೆಯಾಗುವುದು.
  • ಮೇಲಿನ ಪದರ ಒಣಗಿರುವುದರಿಂದ ಕೊಳೆಯು ಕಡಿಮೆಯಾಗುವುದು
  • ತೇವಾಂಶ ಮತ್ತು ಮಣ್ಣಿನಲ್ಲಿನ ಗಾಳಿಯಾಡುವುದು ಸಕ್ರಮವಾಗಿರುವುದರಿಂದ ಹಣ್ಣು ಮತ್ತು ಎಲೆ ಉದುರುವುದು ಕಡಿಮೆಯಾಗುವುದು.
  • ತುಲನಾತ್ಮಕ ತೇವಾಂಶವು 60% ಕ್ಕೂ ಕಡಿಮೆ ಇರುವುದರಿಂದ ರೋಗ ಮತ್ತು ಕೀಟಗಳ ಬಾಧೆ ಯಾಗುವುದು ಕಡಿಮೆ
  • ಗಾಳಿ ಯಾಡುವುದು ಶೆಕಡಾ 40 ರಷ್ಟು ಹೆಚ್ಚಾಗುವುದರಿಂದ ಬೇರಿನ ಬೆಳವಣಿಗೆ ಹೆಚ್ಚಾಗುವುದು

 6. ಸಮುದಾಯ ನರ್ಸರಿ
 7. Community nurseries were developed by the precision farmers with the guidance of the university scientists to produce 100% healthy vegetable seedlings.

   

 8. ಕೀಟ ಮತ್ತು ರೋಗ ನಿಯಂತ್ರಣ
 9. ವಾತಾವರಣಕ್ಕೆ ಅನುಗುಣವಾದ ಮುನ್ನೆಚ್ಚರಿಕೆ ಮತ್ತು ಅಗತ್ಯವಿದ್ದಷ್ಟೆ ಕೀಟನಾಶಕ ಮತ್ತು ಫಂಗಿಸೈಡಗಳನ್ನು ಬಳಸುವುದರಿಂದ ವೆಚ್ಚದ ಮೂರನೆ ಒಂದಾಂಶ ಕಡೆಮೆಯಾಗುವುದು..

  ನಿಖರ ಕೃಷಿ ರೈತರ ಸಂಘ

  ಪ್ರತಿ 25 ರಿಂದ 30 ಫಲಾನುಭವಿ ರೈತರು ಒಟ್ಟಾಗಿ ಒಂದು ನೊಂದಾಯಿತ ನಿಖರ ರೈತರ ಸಂಘ ಮಾಡಿಕೊಂಡರು.. ಈ ಸಂಘಗಳು ಕೆಳ ಕಂಡ ಚಟುವಟಿಕೆಗಳನ್ನು ನೆಡೆಸುವವು.,

  • ಕೃಷಿ ಮಾರಾಟಗಾರರ ಜತೆ ಅಗತ್ಯ ವಸ್ತುಗಳ ಖರೀದಿಸುವಾಗ ಮಾತುಕತೆ
  • ತರಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಬೆಳೆಯುವ ಸಾಧ್ಯತೆಯ ಬಗ್ಗೆ ಚರ್ಚೆ
  • ವಿವಿಧ ಮಾರುಕಟ್ಟೆಗಳಿಗೆ ಭೇಟಿ ಮತ್ತು ಮಾಹಿತಿಸಂಗ್ರಹಣೆ.
  • ಸಹ ಸದಸ್ಯರ ಜೊತೆ ತಮ್ಮ ಅನುಭವ ಹಂಚಿಕೊಳ್ಳುವುದು.
  • ತಮಿಳು ನಾಡಿನ ಇತರೆ ಜಿಲ್ಲೆಗಳಿಂದ ಬಂದ ರೈತರೊಡನೆ ನಿಖರ ಕೃಷಿಕರ ಅನುಭವದ ವಿವರಣೆ .

  ಮಾರುಕಟ್ಟೆ ವ್ಯವಸ್ಥೆ

  • ಉತ್ಪನ್ನವನ್ನು ಅಧಿಕ ಬೆಲೆಗೆ ಮಾರಲು ರೈತರಿಗೆ ವಿಜ್ಞಾನಿಗಳ ಸಹಾಯ. ಮಾರಕಟ್ಟೆಯ ಬೇಡಿಕೆಯನ್ನು ಗಮನಿಸಿ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಸೂಕ್ತವಾದ ಹಂಗಾಮಿನಲ್ಲಿ ಬೆಳೆಯುವುದು.
  • ಟಿ ಎನ್ ಎ ಯು ತಜ್ಞರ ಸಹಾಯದಿಂದ ನಿಖರ ಕೃಷಿಕರ ಉತ್ಪನ್ನಗಳಿಗೆ ವಿಶಿಷ್ಟವಾದ ಲೋಗೋವನ್ನು ನಿರ್ಮಿಸುವುದು.
  • ಉತ್ತಮ ಗುಣ ಮಟ್ಟದಿಂದಾಗಿ ನಿಖರ ಕೃಷಿ ಪ್ರದೇಶದ ರೈತರು ಎಲ್ಲ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆ ಪಡೆಯುವರು.

ಮೂಲ : ಕ್ಯಾಪ್ಸಿಕಂ  ಫಿನ್ದ್ಸ್  ನ್ಯೂ  ಕಮರ್ಷಿಯಲ್  ವ್ಯಾಲ್ಯೂ  ಇನ್  ಗುಂತುರ್  ಡಿಸ್ಟ್ರಿಕ್ಟ್  ಆಫ್  ಆಂಧ್ರ  ಪ್ರದೇಶ್

2.91489361702
ಲಕ್ಷ್ಮೀಪುತ್ರ ಎಸ್.ಕಿರನಳ್ಳಿ ವಿಜ್ಞಾನ ಶಿಕ್ಷಕರು ವಿಜಯಪುರ ಮೊ-೯೭೪೦೬೦೬೮೧೪ Dec 20, 2018 11:09 AM

ಈ ಪಧ್ಧತಿ ಯು ರೈತರಿಗೆ ಬಹು ಉಪಯೋಗ ವಿರುವುದರಿಂದ ಇದನ್ನು ನಮ್ಮ ತೋಟಗಾರಿಕೆ ಇಲಾಖೆಯು ಪಠ್ಯದಲ್ಲಿ ಇದನ್ನು ಅಳವಡಿಸಬೇಕು ಹಾಗೂ ದೇಶದ ಪ್ರತಿ ರಾಜ್ಯಗಳು ಇದನ್ನು ಕಡ್ಡಾಯವಾಗಿ ಅಳವಡಿಸುವಂತಾಗಬೇಕು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top