ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಭತ್ತದ ಕಂದು ಜಿಗಿ ಹುಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭತ್ತದ ಕಂದು ಜಿಗಿ ಹುಳು

ಭತ್ತಕ್ಕೆ ಕಂದು ಜಿಗಿ ಹುಳುಗಳ ಕಾಟ ಹೆಚ್ಚು. ಈ ಕೀಟದಿಂದ ಅನುಭವಿಸುವ ತೊಂದರೆಗಳು ಸಣ್ಣವೇನಲ್ಲ. ಒಂದು ಪ್ರದೇಶದಲ್ಲಿ ಕಾಣಿಸಿಕೊಂಡರೆ ಸಾವಿರಾರು ಎಕರೆಗಳ ರಸ ಹೀರಿ ನಾಶಪಡಿಸುವ ಶಕ್ತಿ ಈ ಕೀಟಗಳಿಗಿದೆ.

ಭತ್ತಕ್ಕೆ ಕಂದು ಜಿಗಿ ಹುಳುಗಳ ಕಾಟ ಹೆಚ್ಚು. ಈ ಕೀಟದಿಂದ ಅನುಭವಿಸುವ ತೊಂದರೆಗಳು ಸಣ್ಣವೇನಲ್ಲ. ಒಂದು ಪ್ರದೇಶದಲ್ಲಿ ಕಾಣಿಸಿಕೊಂಡರೆ ಸಾವಿರಾರು ಎಕರೆಗಳ ರಸ ಹೀರಿ ನಾಶಪಡಿಸುವ ಶಕ್ತಿ ಈ ಕೀಟಗಳಿಗಿದೆ. ಈ ಕೀಟಗಳ ಬಾಯಿ ರಸ ಹೀರಲು ಅನುಕೂಲಕರವಾಗಿ ರೂಪುಗೊಂಡಿದೆ. ಭತ್ತದ ಗಿಡಗಳ ರಸ ಹೀರಲು ಬಾಯಲ್ಲಿ ಒಳ್ಳೆಯ ಕೊಳವೆ ಮಾದರಿಯ ಅವಯವ ಇದಕ್ಕಿದೆ. ಇದರಿಂದ ರಸ ಹೀರಿದಾಗ ಗಿಡ ಸತ್ವರಹಿತವಾಗಿ ಒಣಗುತ್ತಾ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಹುಳ ದಿನದ ಹಗಲಿನ ಉದ್ದ ಕಡಿಮೆಯಾಗಿ ಉಷ್ಣತೆಯು ಕಡಿಮೆಯಾಗುತ್ತಿ ದ್ದಂತೆ ಇದರ ರೆಕ್ಕೆಗಳಲ್ಲಿ ಬದಲಾಗುತ್ತಿದ್ದವು. ಕಾರಣ ಆ ಸಮಯದಲ್ಲಿ ಭತ್ತದ ಬೆಳೆ ಕಡಿಮೆಯಾಗಿ ಹೊಸ ಗದ್ದೆಯನ್ನು ಹಾರುತ್ತಾ ಹುಡುಕಲು ಉದ್ದನೆಯ ರೆಕ್ಕೆಗಳು ಕೀಟಕ್ಕೆ ಬೇಕು. ಸಾಕಷ್ಟು ಬೆಳೆ ಇರುವ ಉದ್ದ ಹಗಲಿನ ದಿನಗಳಲ್ಲಿ ಹೆಚ್ಚು ಹಾರಾಟವಿರಲಿಲ್ಲ. ಅಲ್ಲೇ ಕುಳಿತಲ್ಲೇ ಹೀರುತ್ತಾ ಒಂದೇ ಕೀಟ ಸುಮಾರು 700ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟು ಸಂತಾನ ಹೆಚ್ಚಿಸುತ್ತಿತ್ತು. ಅನಂತರ ಇಲ್ಲದ ಜಾಗಕ್ಕೂ ಹಾರಿ ಹೋಗಿ ಆಹಾರ ಹೊಂಚಲು ಉದ್ದ ರೆಕ್ಕೆಗಳನ್ನು ಬರುವಂತೆ ತನ್ನೊಳಗಿನ ಜೀನನ್ನು ಪ್ರಚೋದಿಸುತ್ತಿದೆ. ಹಿಂದೆಲ್ಲಾ ಇದು ಅರ್ಥವಾಗಿರಲಿಲ್ಲ. ಇದ್ದಕ್ಕಿಂದಂತೆ ಹಾರಿ ಬರಬಲ್ಲ ಈ ಕೀಟಗಳ ರೆಕ್ಕೆಗಳು ದೊಡ್ಡದಾಗಲು ಅದು ಯಾವ ಮಾಯ ಮಾಡುತ್ತಿದೆ ಎಂದೇ ತಿಳಿದಿರಲಿಲ್ಲ. ಒಂದೇ ರಸದೂತ ಇದನ್ನು ನಿರ್ವಹಿಸುತ್ತಿರಬಹುದೇ ಎಂಬ ಅನುಮಾನಗಳಿದ್ದವು. ಇದೀಗ ಇಲ್ಲ ಎರಡೂ ರೆಕ್ಕೆಯನ್ನೂ ಕಾಲಕ್ಕೆ ತಕ್ಕಂತೆ ಬದಲಿಸಬಲ್ಲ ಉತ್ತೇಜಕ ಜೀನನ್ನು ಒಳಗೊಂಡಿದೆಯಂತೆ. ಇದು ಹಗಲಿನ ಕಾಲ ಕಡಿಮೆಯಾಗಿ ಚಳಿ ಆರಂಭಕ್ಕೆ ಕೀಟ ಕಲಿತ ಜಾಣತನ. ವಾತಾವರಣ ಚಾಪೆ ಕೆಳಗೆ ನುಸಿದರೆ ಕೀಟ ರಂಗೋಲಿ ಕೆಳಗೆ ನುಸುಳಿ ಊಟ ಹುಡುಕಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕೆ ಇದೀಗ ಸಿಕ್ಕ ಜಾಡಿನಿಂದ ನಾವು ಯಾವುದರ ಕೆಳಗೆ ನುಸುಲಬೇಕೋ ನೋಡಬೇಕು! -ಟಿ.ಎಸ್. ಚನ್ನೇಶ್

2.9381443299
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top