ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಭತ್ತದ ಬೆಳೆಗೆ ನೀಲಿ ಹಸಿರು ಪಾಚಿಯ ಬಳಕೆ ವಿಧಾನ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭತ್ತದ ಬೆಳೆಗೆ ನೀಲಿ ಹಸಿರು ಪಾಚಿಯ ಬಳಕೆ ವಿಧಾನ

ಭತ್ತದ ಬೆಳೆಗೆ ನೀಲಿ ಹಸಿರು ಪಾಚಿಯ ಬಳಕೆ ವಿಧಾನ

ಮದೊಲು ಗದ್ದೆಯನ್ನು 2-3 ಸಲ ಕೆಸರು ಮಾಡಿ ಭೂಮಿ ಸಿದ್ಧ ಪಡಿಸಿಕೊಳ್ಳಬೇಕು. ನಂತರ 5-10 ಸೆಂ.ಮೀ. ನಷ್ಟು ನೀರು ಬಿಟ್ಟ ಮೇಲೆ ನೀರು ತಿಳಿಯಾಗುವವರೆಗೆ ಬಿಡಬೇಕು. ಒಂದು ಹೆಕ್ಟೇರ್ ಭೂಮಿಗೆ 10 ಕಿ.ಗ್ರಾಂ ನಂತೆ ಮಣ್ಣು ಆಧಾರಿತ ಒಣಗಿದ ಪಾಚಿಯನ್ನು ಎಲ್ಲ ಕಡೆ ಹಾಕಬೇಕು. ಎರಡು – ಮೂರು ವಾರಗಳಲ್ಲಿ ಪಾಚಿಯು ಚೆನ್ನಾಗಿ ಬೆಳೆಯುವುದು. ನಂತರ ನಿಂತ ನೀರನ್ನು ನಿಧಾನವಾಗಿ ಬಸಿದು ಪಾಚಿಯನ್ನು ಮಣ್ಣಿನಲ್ಲಿ ಬೆರೆಸಬೇಕು. ನಂತರ ನಾಟಿ ಮಾಡಬೇಕು. ಹೀಗೆ ಎರಡು – ಮೂರು ವರ್ಷಗಳವರೆಗೆ ಸತತವಾಗಿ ಹಾಕಿದ ನಂತರ, ಭೂಮಿಯಲ್ಲಿ ಸಾಕಷ್ಟು ನೀಲಿ ಹಸಿರು ಪಾಚಿಯು ವೃದ್ಧಿಯಾದ ಮೇಲೆ ಜೈವಿಕ ಗೊಬ್ಬರದ ಬಳಕೆಯನ್ನು 2-3 ವರ್ಷಗಳವರೆಗೆ ನಿಲ್ಲಿಸಬಹುದು. ಭತ್ತದ ಗದ್ದೆಗಳಲ್ಲಿಯೇ ಇದನ್ನು ಕೆಳಗೆ ವಿವರಿಸಿದಂತೆ ಬೆಳೆಸಿ ಉಪಯೋಗಿಸಬಹುದು.

ಬೆಳೆಸುವ ಕ್ರಮ

1. ಗದ್ದೆಯನ್ನು 2-3 ಸಲ ಕೆಸರು ಮಾಡಿ ಭೂಮಿ ಸಿದ್ಧಪಡಿಸಿಕೊಳ್ಳಬೇಕು.

2. ಸುಮಾರು 10 ಮೀ.  10 ಮೀ. ಅಳತೆಯ ಸಣ್ಣ ಮಡಿಗಳನ್ನು ಮಾಡಿ ಗಟ್ಟಿಯಾಗಿ ಬದುಗಳನ್ನು ಹಾಕಿ ಪ್ರತಿ ಮಡಿಗೂ 1 ಕಿ.ಗ್ರಾಂ ಸೂಪರ್‍ಫಾಸ್ಟೇಟ್, 50 ಗ್ರಾಂ ಸುಣ್ಣ ಹಾಗೂ 100 ಗ್ರಾಂ ಕಾರ್ಬೋಫ್ಯುರಾನ್ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು.

3. ಮಡಿಗೆ ನೀರು ಹಾಯಿಸಿ 5-10 ಸೆಂ.ಮೀ. ಆಳ ನೀರು ನಿಲ್ಲಿಸಬೇಕು. ನೀರು ತಿಳಿಯಾದಾಗ 1 ಕಿ.ಗ್ರಾಂ ಮಣ್ಣು ಆಧಾರಿತ ನೀಲಿ ಹಸಿರು ಪಾಚಿ ಗೊಬ್ಬರವನ್ನು ಸಮವಾಗಿ ಹರಡಬೇಕು.

4.ಬೇಸಿಗೆ ಕಾಲದಲ್ಲಿ ಪಾಚಿ ಶೀಘ್ರವಾಗಿ ಬೆಳೆದು 7-10 ದಿವಸಗಳಲ್ಲಿ ಪಾಚಿಯ ದಪ್ಪ ಪದರು ನೀರಿನ ಮೇಲೆ ತೇಲುತ್ತದೆ.

5.15 ದಿವಸಗಳ ನಂತರ ಮಡಿಗಳಲ್ಲಿಯ ನೀರನ್ನು ಬಸಿದು ಪಾಚಿ ಒಣಗಲು ಬಿಡಬೇಕು. ನಂತರ ಪಾಚಿಯ ಪದರನ್ನು ಮಣ್ಣುಸಮೇತ ಶೇಖರಿಸಿ ನೆರಳಿನಲ್ಲಿ ಒಣಗಿಸಿ ಶೇಖರಿಸಬಹುದು. ಪ್ರತಿ ಮಡಿಯಲ್ಲೂ 15-20 ಕಿ.ಗ್ರಾಂ ಒಣ ಪಾಚಿ ದೊರೆಯುತ್ತದೆ. ಅದೇ ಮಡಿಯನ್ನು ಮತ್ತೆ ಪಾಚಿ ಬೆಳೆಸಲು ಬಳಸಬಹುದು. ಒಣಗಿದ ಪಾಚಿಯನ್ನು ಬಹಳ ಕಾಲದವರೆಗೆ ಬಳಸಬಹುದು.

Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.89473684211
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top