ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಮಣ್ಣು ಮತ್ತು ನೀರಿನ ಸಂರಕ್ಷಣೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಣ್ಣು ಮತ್ತು ನೀರಿನ ಸಂರಕ್ಷಣೆ

ಮಣ್ಣು ಮತ್ತು ನೀರಿನ ಸಂರಕ್ಷಣೆ

ಮಣ್ಣು, ನೀರು ಮತ್ತು ಸಸ್ಯ ರಾಶಿ ಇವು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತುಗಳು. ಬೀಳುವ ಮಳೆ ನೀರನ್ನು ಯಶಸ್ವಿಯಾಗಿ ಬಳಸಿಕೊಂಡು ಖುಷ್ಕಿ

ಕೋಷ್ಟಕ 1: ಹೊಲಗಳಿಗೆ ಬದುಗಳನ್ನು ಹಾಕುವುದು

ಮಣ್ಣಿನ ಮಾದರಿ

ಶಿಫಾರಸ್ಸು ಮಾಡಿದ ಪದ್ಧತಿ

ನಿರ್ಧಿಷ್ಟ ವಿವರಣೆ

ನಿರ್ಮಾಣದ ವಿಧಾನ

ಅ. 600 ಮಿ.ಮೀ. ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ

ಕಡಿಮೆ ಆಳದ ಕಪ್ಪು ಭೂಮಿ

ಸಮಪಾತಳಿ ಬದುಗಳ ನಿರ್ಮಾಣ

1-1.2 ಚ.ಮೀ. ಗಾತ್ರದ ಬದು (ಪ್ರತಿ 1-1.5 ಮೀ. ಲಂಬಾಂತರಕ್ಕೆ ಒಂದರಂತೆ)

ಅದಷ್ಟು ಸಮಪಾತಳಿ ರೇಖೆಗುಂಟ ಬದುಗಳನ್ನು ಹಾಕಿ, ಸ್ವಲ್ಪ ಬದಲಾಔಣೆಯ ಅವಶ್ಯಕತೆಯಿದ್ದರೆ ದಿಬ್ಬದ ಕಡೆ 15 ಸೆಂ.ಮೀ. ತೆಗ್ಗಿನ ಕಡೆ 30 ಸೆಂ.ಮೀ. ವರೆಗೆ ದೂರ ಸರಿಯಬಹುದು. ಇಂತಹ ಬದಲಾವಣೆ ಆದ ಸ್ಥಳಗಳಲ್ಲಿ ಬದುವಿನ ಮೇಲ್ಬಾಗದ ಭೂಮಿಯನ್ನು ಸಮಪಾತಳಿಗೆ ಮಟ್ಟ ಮಾಡಿಕೊಳ್ಳಬೇಕು. ಸಮಪಾತಳಿಗಿಂತ 15 ಸೆಂ.ಮೀ. ಎತ್ತರವಿರುವಂತೆ ಹೊಳೆಗಟ್ಟಿಯನ್ನು ಕಟ್ಟಬೇಕು. ಬದುಗಳು ಭದ್ರವಾಗಿರಲು ಅವುಗಳ ಮೇಲೆ ಸಸಿಗಳನ್ನು ನಡುವುದು ಉತ್ತಮ. ಕೆಳಗಿನ ಕಡೆಯಿಂದ ಮಣ್ಣನ್ನು ತೆಗೆದು ಬದುಗಳನ್ನು ಹಾಕಿರಿ. ಬದುವಿನ ಮೇಲ್ಬಾಗದ ¼ ಪ್ರದೇಶವನ್ನು ಸಮಮಟ್ಟ ಮಾಡಿರಿ ಬದುವಿನ ಗಾತ್ರ ಹಾಳಾಗದಂತೆ ಕಾಳಜಿವಹಿಸಿರಿ ಸಸಿಗಳನ್ನು ಹಚ್ಚಿ ಬದುಗಳನ್ನು ಭದ್ರ ಮಾಡಬೇಕು.

2. ಕಡಿಮೆಯಿಂದ ಮಧ್ಯದ ಆಳದ ಕೆಂಪು ಭೂಮಿ

ಸಮಪಾತಳಿ ಬದುಗಳ ನಿರ್ಮಾಣ

1-1.5 ಮೀ. ಲಂಬಾಂತರಕ್ಕೆ ಒಂದರಂತೆ 0.54-0.81 ಚ.ಮೀ. ಗಾತ್ರದ ಬದುಗಳು

 

3. ಮಧ್ಯದ ಆಳದ ಕಪ್ಪು ಭೂಮಿ (ಪ್ರತಿ ಗಂಟೆಗೆ 8 ಮೀ. ಮೀ. ಗಿಂತ ಹೆಚ್ಚು ನೀರು ಇಂಗುವಿಕೆ ಪ್ರಮಾಣ

ಅ) ಸಮಪಾತಳಿ ಬದುಗಳ ನಿರ್ಮಾಣ ಬದುವಿನ ಮೇಲ್ಭಾಗದ ಶೇ.25 ರಷ್ಟು ಪ್ರದೇಶವನ್ನು ಸಮಮಟ್ಟ ಮಾಡುವುದು (ಝಿಂಗ್ ಟೆರೇಸಿಂಗ್) ಅಥವಾ ಬ) ಸಮಪಾತಳಿ ಬದು ಪಟ್ಟಿಗಳ ನಿರ್ಮಾಣ

ಕ) ಇಳಿಜಾರು ಬದುಗಳು

0.3 ಮೀ. ಲಂಬಾಂತರ -ಕ್ಕೆ ಒಂದರಂತೆ 0.24 ಚ.ಮೀ. ಗಾತ್ರದ ಬದುಗಳು 0.85 ಚ.ಮೀ. ಗಾತ್ರದ ಶೇ. 0.2 ರಿಂದ 0.4 ಇಳಿಜಾರಿನ ಬದುಗಳೂ, ಪ್ರತಿ 1 ರಿಂದ 1.5 ಮೀ. ಲಂಬಾಂತರಕ್ಕೆ

ಎರಡು ದಿಂಡುಗಳ ಮಧ್ಯದ ಪ್ರದೇಶವನ್ನು ಸಮ ಮಟ್ಟಗೊಳಿಸ. ಮಣ್ಣನ್ನು ಕತ್ತರಿಸುವ ಆಳ ಹಾಗೂ ತುಂಬುವ ಎತ್ರ 15 ಸೆಂ.ಮೀ. ಗಿಂತ ಹೆಚ್ಚಾಗಬಾರದು. ಪ್ರತಿ ಪಟ್ಟಿಯಲ್ಲಿಯೂ ನೀರನ್ನು ಹರಿದು ಹೋಗಲು ಸೂಕ್ತವಾದ ಕಟ್ಟಣಿಯನ್ನು ನಿರ್ಮಿಸಬೇಕು. ಸ್ಟೈಲೋಸ್ಯಾಂತಸ್ ಹೆಮೆಟಾ ಅಥವಾ ಹುಲ್ಲನ್ನು ಹಚ್ಚಿ ದಿಂಡುಗಳನ್ನು ಭದ್ರ ಪಡಿಸಬೇಕು ಇಳಿಜಾರು ಸಮಪಾತಳಿಯ ಮೇಲ್ಬಾಗದಲ್ಲಿ ಕಾಲುವೆ ಆಗೆದು ಆ ಮಣ್ಣಿನಿಂದ  ಕೆಳಭಾಗದಲ್ಲಿ ತ್ರಿಕೋನಾಕಾರದ (ಟ್ರೆಪೆಜಾಯಿಡಲ್) ಬದು ಹಾಕಿ ಕಾಲುವೆಗಳ ಕೊನೆಯಲ್ಲಿ ಹುಲ್ಲಿನ ನೀರು ದಾರಿ ಮಾಡಿ ಅಥವಾ ಹುಲ್ಲು ಬಎಳೆಸಿದ ಕಾಲುವೆಗಳ ಮುಖಾಂತರ ನೀರು ಹರಿದು ಹೋಗುವಂತೆ ಮಾಡಬೇಕು.

4. ಕಡಿಮೆಯಿಂದ ಮಧ್ಯಮ ಆಳದ ಕೆಂಪು ಭೂಮಿ

ಇಳಿಜಾರು ಬದುಗಳು

0.4-0.5 ಚ.ಮೀ. ಗಾತ್ರದ ಶೇ.0.2-0.4 ಇಳಿಜಾರಿನ ಬದುಗಳು, ಪ್ರತಿ 1-1.5 ಮೀ. ಲಂಬಾಂತರಕ್ಕೆ ಒಂದರಂತೆ

600 ಮಿ.ಮೀ. ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 4 ಮಿ.ಮೀ.ಗಿಂತ ಹೆಚ್ಚು ವೇಗವಾಗಿ ನೀರು ಇಂಗುವ ಭೂಮಿಗಳಲ್ಲಿ ಝಿಂಗ್ ಟೆರೇಸಿಂಗ್ ಅನುಸರಿಸುವುದು ಸೂಕ್ತ. ಸಮಪಾತಳಿ ಬದು ಪಟ್ಟಿಗಳನ್ನು ಯಾವುದೇ ಬದಲಾವಣೆಯಿಲ್ಲದೆ ಅಳವಡಿಸಬೇಕು.

5. ಹೆಚ್ಚು ಆಳದ ಕಪ್ಪು ಭೂಮಿ (ಪ್ರತಿ ಗಂ. 8 ಮಿ. ಮೀ.ಗಿಂತ ಕಡಿಮೆ ನೀರು ಇಂಗುವಿಕೆ ಪ್ರಮಾಣ)

ಆ) ಇಳಿಜಾರು ಬದು ಪಟ್ಟಿಗಳ ನಿರ್ಮಾಣ ಅಥವಾ

ಬ) ಇಳಿಜಾರು ಬದುಗ -ಳನ್ನು ಹಾಕಿ ಬದುಗಳ ಮೇಲ್ಭಾಗದ 1:4 ಪ್ರದೇಶವನ್ನು ಸಮಮಟ್ಟ ಮಾಡುವುದು.

0.24 ಚ.ಮೀ.ಗಾತ್ರದ ಮತ್ತು ಶೇ. 0.2 ಇಳಿಜಾರಿದ್ದ ಬದುಗಳು ಪ್ರತಿ 0.3 ಮೀ. ಲಂಬಾಂತರಕ್ಕೆ ಒಂದರಂತೆ, 0.85 ಚ.ಮೀ.ಗಾತ್ರದ ಶೇ. 0.1-0.2 ರಷ್ಟು ಇಳಿಜಾ –ರಿದ್ದ ಬದುಗಳು ಪ್ರತಿ 0.75-1.0ಮೀ. ಲಂಬಾಂ –ತರಕ್ಕೆ ಒಂದರಂತೆ ಬದು ನಿರ್ಮಾಣ

ಪಟ್ಟಿಗಳ ಗುಂಟ ಶೇ. 0.2 ರಷ್ಟು ಇಳಿಜಾರು ಕೊಟ್ಟು ಪರತಿ ಇಳಿಜಾರು ಪಟ್ಟಿಯ ಕೊನೆಗೆ ರಕ್ಷಿತ ನೀರುದಾರಿಯನ್ನು ಒದಗಿಸಬೇಕು. ಬದುಗಳನ್ನು ಹುಲ್ಲು ಮತ್ತು ಸೂಬಾಬುಲ್‍ಗಳಿಂದ ಭದ್ರ ಪಡಿಸಿ ಇಳಿಜಾರುಗಳ ಸಮಪಾತಳಿ ರೇಖೆಗುಂಟ ಬದುಗಳನ್ನು ಹಾಕಬೇಕು. ಬದುಗಳ ಮೇಲಿನ 1:4 ಪ್ರದೇಶವನ್ನು ಸಮಮಟ್ಟ ಮಾಡಿರಿ. ಇಳಿಜಾರು ಬದುಗಳಿಗೆ ಹುಲ್ಲಿನ ನೀರು ದಾರಿ ಅತೀ ಅವಶ್ಯಕ. ಬದುಗಳನ್ನು ಮತ್ತು ನೀರು ದಾರಿಯನ್ನು ಹುಲ್ಲು ಹಚ್ಚಿ ಭದ್ರಪಡಿಸಬೇಕು.

ಆ. 600 ಮಿ.ಮೀ. ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶ

1. ಕಡಿಮೆ ಆಳದ ಕಪ್ಪು ಭೂಮಿ

ಸಮಪಾತಳಿ ಬದುಗಳ ನಿರ್ಮಾಣ

1-1.2 ಚ.ಮೀ. ಗಾತ್ರದ ಬದು (ಪ್ರತಿ 1-1.5 ಮೀ. ಲಂಬಾಂತರಕ್ಕೆ ಒಂದರಂತೆ)

600 ಮಿ.ಮೀ. ಗಿಂತ ಹೆಚ್ಚಿಗೆ ಮಳೆ ಬೀಳುವ ಪ್ರದೇಶಗಳಲ್ಲಿ ಸಮಪಾತಳಿ ತೆರೆದ ಭಗವಾಗಿರಬೇಕು ಮತ್ತು ಸಮಪಾತಳಿಗೆ ಮಟ್ಟ ಮಾಡಿ ತೆರೆದ ಭಾಗವಾಗಿರಬೇಕು ಮತ್ತು ಸಮಪಾತಳಿಗೆ ಮಟ್ಟ ಮಾಡಿ ತೆರೆದ ಭಾಗಗಳನ್ನು ನೀರಿನ ಕಾಲುವೆಗೆ ಜೋಡಿಸಬೇಕು.

2. ಕೆಂಪು ಮಣ್ಣು (ಮರಳು ಗೋಡುಗಳು)

ಸಮಪಾತಳಿ ಬದುಗಳ ನಿರ್ಮಾಣ

1-1.5 ಮೀ. ಲಂಬಾಂತರಕ್ಕೆ ಒಂದರಂತೆ 0.50-0.80 ಚ.ಮೀ. ಗಾತ್ರದ ಬದುಗಳು.

ಇಳಿಜಾರು ಬದು ಪಟ್ಟಿಯ ಕೊನೆಗೆ ರಕ್ಷಿತ ನೀರುದಾರಿಯನ್ನು ಒದಗಿಸಿ, ದಿಂಡುಗಳನ್ನು ಹುಲ್ಲು ಮತ್ತು ಸೂಬಾಬುಲ್‍ಗಳಿಂದ ಭಧ್ರಪಡಿಸಬೇಕು.

3. ಮಧ್ಯಮದಿಂದ ಹೆಚ್ಚು ಆಳದ ಕಪ್ಪು ಭೂಮಿ (ಪ್ರತಿ ಗಂಟೆಗೆ 8 ಮಿ.ಮೀ. ಗಿಂತ ಕಡಿಮೆ ವೇಗವಾಗಿ ನೀರು ಇಂಗುವ  ಮಾದರಿ)

ಆ) ಇಳಿಜಾರು ಬದುಪಟ್ಟಿಗಳ ನಿರ್ಮಾಣ ಅಥವಾ ಬ) ಇಳಿಜಾರು ಬದುಗಳನ್ನು ಹಾಕಿ ಬದುಗಳ ಮೇಲ್ಭಾಗದ 1.4 ಪ್ರದೇಶ ವನ್ನು ಸಮಮಟ್ಟ ಮಾಡುವುದು.

ಪ್ರತಿ 0.3 ಮೀ. ಲಂಬಾಂತರಕ್ಕೆ ಒಂದರಂತೆ (0.24 ಚ.ಮೀ. ಗಾತ್ರ ದಿಂಡುಗಳು), ಶೇ.0.2 ಇಳಿಜಾರಿದ್ದ ಬದುಗಳು ಪರತಿ 0.75-1.0 ಮೀ. ಲಂಬಾಂತರಕ್ಕೆ ಒಂದರಂತೆ ಹಾಗೂ 0.85ಚ.ಮೀ. ಗಾತ್ರದ ಶೇ. 0.1-0.2ರಷ್ಟು ಇಳಿಜಾರಿದ್ದ ಬದುಗಳು ಪ್ರತಿ 0.75-1.0 ಮೀ. ಲಂಬಾಂತರಕ್ಕೆ ಒಂದರಂತೆ ಶೇ. 0.2 ರಿಂದ 0.4 ಇಳಿಜಾರಿರುವ 12-15 ಮೀ. ಅಗಲ ಮತ್ತು 120-150 ಮಿ. ಉದ್ದವಿರುವ ಪಟ್ಟಿಗಳು

ಇಳಿಜಾರು ಸಮಪಾತಳಿ ರೇಖೆಗುಂಟ ಬದುಗಳನ್ನು ಹಾಕಿ. ಬದುಗಳ ಮೇಲಿನ 1.4 ಪ್ರದೇಶವನ್ನು ಸಮಮಟ್ಟ ಮಾಡಬೇಕು. ಇಳಿಜಾರು ಬದುಗಳಿಗೆ ಹುಲ್ಲಿನ ದಾರಿ ಅತೀ ಅವಶ್ಯಕ. ಬದುಗಳು ಮತ್ತು ನೀರು ದಾರಿಯನ್ನು ಹುಲ್ಲು ಬೆಳೆದು ಭದ್ರ ಪಡಿಸಬೇಕು.

4. ಹೆಚ್ಚು ಆಳದ ಕೆಂಪು ಭೂಮಿ

ಇಳಿಜಾರು ಬದುಪಟ್ಟಿ

-ಸದರ-

ಇಳಿಜಾರಿಗೆ ಅಡ್ಡವಾಗಿ, ಇಳಿಜಾರು ಬದುಪಟ್ಟಿಗಳನ್ನು ನಿರ್ಮಿಸಿ ಪಟ್ಟಿಯ ಉದ್ದದ ಗುಂಟ ಇಳಿಜಾರು ಮಾಡಬೇಕು. ಈ ನಿರ್ಮಾಣದಲ್ಲಿ ಮಣ್ಣನ್ನು 15 ಸೆಂ.ಮೀ.ಗಿಂತ ಹೆಚ್ಚು ಕತ್ತರಿಸ ಬಾರದು ಮತ್ತು ಎತ್ತರ ತುಂಬಬಾರದು. ಕೆಳಭಾಗದಲ್ಲಿ ಸಂರಕ್ಷಿತ ನೀರು ದಾರಿಯನ್ನು ಒದಗಿಸಬೇಕು.

 

ಕೋಷ್ಟಕ: 2 ಬದುಗಳ ಮಧ್ಯದ ಜಮೀನಿನ ನಿರ್ವಹಣೆ

1. ಎಲ್ಲಾ ಮಾದರಿಯ ಭೂಮಿಗಳಲ್ಲಿ

ಅ. ಭೂಮಿ ಮಟ್ಟ ಮಾಡುವುದು

ಬ. ಸಮಪಾತಳಿ ಬೇಸಾಯ

 

ಎರಡೂ ಬದುಗಳ ಮಧ್ಯದ ಭೂಂಇಯನ್ನು ಸಮನಾದ ಇಳಿಜಾರಿಗೆ ತರಲು, ಭೂಮಿಯ ಉಬ್ಬು ತಗ್ಗುಗಳನ್ನು ಸರಿಪಡಿಸಬೇಕು. ಇದರಿಂದ ಬಿದ್ದ ಮಳೆ ನೀರು ಸಮನಾಗಿ ಹರಡಿ ನೀರು ನಿಲ್ಲುವುದು, ಕೊರಕಲು ಬೀಳುವುದು ಮತ್ತು ಝರಿ ಕೊಚ್ಚಣಿಗಳನ್ನು ತಡೆಯಬಹುದು. ಬಿತ್ತನೆ ಮುಂತಾದ ಎಲ್ಲ ಬೇಸಾಯ ಪದ್ಧತಿಗಳನ್ನು ಸಮಪಾತಳಿ ರೇಖೆ ಗುಂಟ ಅಥವಾ ಇಳಿಜಾರಿಗೆ ಅಡ್ಡವಾಗಿ ಮಾಡುವುದರಿಂದ ನೀರು ಹರಿಯಲು ಸಣ್ಣ ಅಡೆತಡೆಗಳುಂ -ಟಾಗಿ ನೀರು ಮತ್ತು ಮಣ್ಣಿನ ಸಂರಕ್ಷಣೆ ಆಗುತ್ತದೆ.

 

ಇ. ಮಾಗಿ ಉಳುಮೆ

ಭೂಮಿಯನ್ನು ಹೆಂಟೆಗಳಾಗಿ ಇಡುವುದು.

ಬೆಳೆಗಳ ಕಟಾವಿನ ನಂತರ ಭೂಮಿಯನ್ನು ಉಳುಮೆ ಮಾಡಿ ಇಡುವುದರಿಂದ ಮುಮದೆ ಬರುವ ಮಳೆ ನೀರು ಸಾಕಷ್ಟು ಇಂಗುತ್ತದೆ.

 

ಈ. ಆಚ್ಛಾದನೆ (ಮಲ್ಚಿಂಗ್)

ಕುಳೆ, ಬೆಳೆಯುಳಿಕೆ, ಕಸ ಕಡ್ಡಿ ಒನಹುಲ್ಲು ಮುಂತಾದವುಗಳನ್ನು ಭೂಮಿಯ ಮೇಲೆ ಹೊದಿಕೆಯಂತೆ ಹರಡುವುದು.

ಮಣ್ಣಿಗೆ ಈ ರೀತಿ ಹೊದಿಕೆ ಹಾಕುವುದರಿಂದ ಭೂಮಿಯಲ್ಲಿ ಶೇಖರಿಸಲ್ಪಟ್ಟ ತೇವಾಂಶವು ಆವಿಯಾಗಿ ಹೋಗುವ ಪ್ರಮಾಣ ಕಡಿಮೆಯಾಗುವುದು ಮತ್ತು ಬಿದ್ದ ಮಳೆ ನೀರಿನ ಇಂಗುವಿಕೆಯೂ ಹೆಚ್ಚುತ್ತದೆ.

2. ಆಳವಾದ ಕಪ್ಪು ಭೂಮಿ (ಹಿಂಗಾರಿಯಲ್ಲಿ ಬೆಳೆ ತೆಗೆದುಕೊಳ್ಳುವ ಪ್ರದೇಶ)

ಅ. ತಟ್ಟೆಯಾ ಕಾರದ ಗುಣಿಗಳು (ಸ್ಕೂಪಿಂಗ್)

ಅಲ್ಲಲ್ಲಿ ಹಂಚಿ ಹೋದ ತಟ್ಟಿಯಾ ಕಾರದ ಗುಣಿಗಳು

ಇಳಿಜಾರಿಗೆ ಅಡ್ಡಲಾಗಿ ಎಡೆಕುಂಟೆ ಅಥವಾ ಇತರೆ ಸಾಗುವಳಿ ಸಾಧನಗಳಿಂದ ಅಲ್ಲಲ್ಲಿ ತಟಟಯಾಕಾರದ ಗುಣಿಗಳನ್ನು ಮುಂಗಾರಿ ಮಳೆ ಪ್ರಾರಂಭವಾಗುವಾಗ ಮಾಡಬೇಕು. ಪ್ರತಿ ಮಳೆಯಾದ ನಂತರ ಹದವರಿತು ಇವುಗಳನ್ನು ಪುನರಾ ವರ್ತಿಸಬೇಕು. ಇದರಿಂದ ನೀರಿನ ಇಂಗುವಿಕೆ ಪ್ರಮಾಣ ಹೆಚ್ಚುತ್ತದೆ. ಹಿಂಗಾರು ಬೆಳೆ ಬಿತ್ತುವುದಕ್ಕೆ ಮುಂಚೆ ಗುಣಿಗಳನ್ನು ಸಮ ಮಾಡಬೇಕು.

 

ಆ. ಚೌಕು ಮಡಿಗಳ ನಿರ್ಮಾಣ

15-20 ಸೆಂ.ಮೀ. ಎತ್ರವಾದ ಬದುಗಳುಳ್ಳ 9-20 ಚ.ಮೀ. ಚೌಕು ಮಡಿಗಳ ನಿರ್ಮಾಣ

ಶೇ. 2.5 ರ ವರೆಗೆ ಇಳಿಜಾರು ಇರುವ ಜಮೀನುಗಳಲ್ಲಿ ಬದು ನಿರ್ಮಿಸುವ ಉಪಕರಣ (ಬಂಡ ಫಾರ್ಮರ್) ಉಪಯೋಗಿಸಿ ಜುಲೈ ತಿಂಗಳಲ್ಲಿ ಚೌಕು ಮಡಿಗಳನ್ನು ನಿರ್ಮಿಸಿ, ಇಳಿಜಾರು ಕಡಿಮೆಯಿದ್ದಾಗ ದೊಡ್ಡ ಚೌಕು ಮಡಿಗಳನ್ನು ಹಾಗೂ ಇಳಿಜಾರು ಜಾಸ್ತಿ ಇದ್ದಾಗ ಸಣ್ಣ ಚೌಕು ಮಡಿಗಳನ್ನು ನಿರ್ಮಿಸಬೇಕು.

 

 

ಸೆಂ.ಮೀ. ಅಂತರದಲ್ಲಿ ದಿಂಡು ಸಾಲುಗಳನ್ನು ಮಾಡಿ ಸಾಲುಗಳಲ್ಲಿ 4-5 ಮೀ.ಗೆ ಒಂದ ರಂತೆ ಮಣ್ಣಿನ ತಡೆಗಳನ್ನು ನಿರ್ಮಿಸಿ

ಇಳಿಜಾರಿಗೆ ಅಡ್ಡವಾಗಿ ದಿಂಡು ಸಾಲುಗಳನ್ನು ಜುಲೈ ತಿಂಗಳಲ್ಲಿ ನಿರ್ಮಿಸಬೇಕು. ಸಾಲುಗಳಲ್ಲಿಯ ಅಡೆತಡೆಗಳ ಎತ್ರ ದಿಂಡಿನ ಎತ್ರಕ್ಕಿಂತ ಹೆಚ್ಚು ಇರಬಾರದು. ದಿಂಡು ಸಾಲುಗಳು ಮತ್ತು ಅದರಲ್ಲಿಯ ಅಡೆತಡೆಗಳನ್ನು ಹಿಂಗಾರಿ ಬಿತ್ತುವವರಿಗೆ ಕಾಪಾಡಿಕೊಂಡು ಬರಬೇಕು.

 

ಈ. ಸಸ್ಯ ತಡೆ ಪಟ್ಟಿಗಳು

15-20 ಸೆಂ.ಮೀ. ಅಂತರದಲ್ಲಿ ತಡೆ ಪಟ್ಟಿಗಳನ್ನು ನಿರ್ಮಿಸಬೇಕು.

ಎರಡು ಸಾಲು ಸೂಬಾಬುಲ್ ಅಥವಾ ಹುಲ್ಲು ಇರುವ ಪಟ್ಟಿಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಿ, ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಕಡಿಮೆ ಅಂತರವಿಟ್ಟು 10-15 ಸೆಂ.ಮೀ. ಎತ್ರ ಬಿಟ್ಟು ಕತ್ತರಿಸಬೇಕು. ಸುಬಾಬುಲ್‍ನ ಅಥವಾ ಹುಲ್ಲಿನ ಈ ಪಟ್ಟಿಗಳು ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಯುವುದಲ್ಲದೇ ದನಗಳಿಗೆ ಹಸಿರು ಮೇವನ್ನು ಒದಗಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತವೆ.

 

ಉ. ಅಗಲ ಆಳದ ಬದು ಪಟ್ಟಿ ನಿರ್ಮಾಣ

ಶೇ. 0.2-0.4 ರಷ್ಟು ಇಳಿಜಾರುಳ್ಳ ಸುಮಾರು 1.5ಮೀ. ಅಗಲ ತಳದ ಬದುಪಟ್ಟಿಗಳು.

ಅಗಲ ಆಳದ ಬದುಪಟ್ಟಿಗಳನ್ನು ಇಳಿಜಾರಿಗೆ ಅಡ್ಡವಾಗಿ ನಿರ್ಮಿಸಬೇಕು. ಇವುಗಳ ನಿರ್ಮಾ ದಿಂದ ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬಹುದು.

 

ಊ. ಸಂರಕ್ಷಾತ್ಮಕ ಬೋದು ಸಾಲು ಮಾಡುವುದು

ಶೇ. 0.2-0.4 ರಷ್ಟು ಇಳಿಜಾರುಳ್ಳ ಸಂರಕ್ಷಾತ್ಮಕ ಸಾಲುಗಳು

ಸಾಲಿನಿಂದ ಸಾಲಿಗೆ ಹೆಚ್ಚು ಅಂತರವಿಟ್ಟು ಬೆಳೆಯುವ ಬೆಳೆಗಳಿಗೆ ಇಳಿಜಾರು ಕೊಟ್ಟು ಪ್ರತಿ ಎರಡು ಸಾಲುಗಳ ಮಧ್ಯ ಬೋದು ಸಾಲುಗಳನ್ನು ನಿರ್ಮಿಸ ಬೇಕು. ಸಾಲಿನಿಂದ ಸಾಲಿಗೆ ಕಡಿಮೆ ಅಂತರವಿಟ್ಟು ಬೆಳೆಯುವ ಬೆಳೆಗಳಿಗೆ ಇಳಿಜಾರಿಗೆ ಅಡ್ಡವಾಗಿ 3-4 ಕೂರಿಗೆ ಅಗಲದ ಅಂತರದಲ್ಲಿ ಬೋದು ಸಾಲುಗಳನ್ನು ನಿರ್ಮಿಸಿರಿ.

 

ಎ. ಆಚ್ಛಾದನಾ ಬೆಳೆಗಳು

ಮುಂಗಾರಿನಲ್ಲಿ ಅಕಾಲಿಕ ಅಲ್ಪ ಮತ್ತು ರಭಸದಿಂದ ಬೀಳುವ ಮಳೆಯನ್ನು ಮಣ್ಣಿನ ಕಣಗಳ ರಚನೆಗೆ ಧಕೆಯುಂ ಟಾಗದಂತೆ ಸ್ಥಳೀಯವಾಗಿ ನೀರನ್ನು ಮಣ್ಣಿನಲ್ಲಿ ಸಂಗ್ರಹಿಸುವುದು.

ಮುಂಗಾರಿ ಹಂಗಾಮಿನಲ್ಲಿ ಸೌತೆ, ಹೆಸರು, ಸಣಬು, ಆಚ್ಛಾದನಾ ಬೆಳೆಗಳನ್ನು ಬೆಳೆದು ಸೌತೆ ಮತ್ತು ಹೆಸರು ಕಾಯಿಗಳ ಒಕ್ಕಣೆಯಾದ ಮೇಲೆ ಆ ಬೆಳೆಗಳ ಸಸ್ಯ ಉಳಿಕೆಗಳನ್ನು ಮತ್ತು ಸೆಣಬನ್ನು ಬಿತ್ತಿದ 45-50 ದಿವಸಗಳ ನಂತರ ಮಣ್ಣಿನಲ್ಲಿ ಮುಗ್ಗು ಹೊಡೆದು ಹಿಂಗಾರಿ ಬೆಳೆಗಳಾದ ಸೂರ್ಯಕಾಂತಿ ಅಥವಾ ಬಿಳಿ ಜೋಳವನ್ನು ಬೆಳೆಯುವುದು ಲಾಭದಾಯಕ.

3. ಕೆಂಪು ಭೂಮಿ

ಅ. ದಿಂಡು ಸಾಲುಗಳ ನಿರ್ಮಾಣ

ಶೇ. 0.2 ರಿಂದ 0.4 ರಷ್ಟು ಇಳಿಜಾರು ಕೊಟ್ಟು ದಿಂಡು ಸಾಲುಗಳ ನಿರ್ಮಾಣ

ಸಾಲುಗಳ ಅಂತರ ಹೆಚ್ಚು ಇರುವಂತಹ ಗೋವಿನ ಜೋಳ ಔಡಲ, ತೊಗರಿ ಮುಂತಾದ

 

ಆ. ಬೋದುಗಳು

3 ಮೀ. ಅಂತರದಲ್ಲಿ ಬೋದುಗಳ ನಿರ್ಮಾಣ

ನೀರಿನ ಸಂರಕ್ಷಣೆ ಹಾಗೂ ಹೆಚ್ಚುವರಿ ನೀರು ಹೊರ ಹೋಗಲು ಸಾಲಿನ ಅಂತರ ಕಡಿಮೆಯಿರುವ ಶೇಂಗಾ, ರಾಗಿ, ಸಜ್ಜೆ ಮುಂತಾದ ಬೆಳೆಗಳಿಗೆ 3 ಮೀ. ಅಂತರದಲ್ಲಿ ಬೋದುಗಳನ್ನು ನಿರ್ಮಿಸಬೇಕು.

1.     4. ಆಳವಾದ ಕಪ್ಪು ಭೂಮಿ ಹಾಗೂ ಕರ್ಲ ಜಮೀನಿಗೆ

2.     ದಪ್ಪ ಉಸುಕು ಹರಡುವುದು

1. ಭೂಮಿಯ ಮೇಲೆ 7.5 ಸೆಂ.ಮೀ. ದಪ್ಪ

1. ಉಸುಕನ್ನು ಹಾಕುವ ಪೂರ್ವದಲ್ಲಿ ಬಹುವಾರ್ಷಿಕ ಕಳೆಗಳಿಲ್ಲದ ಭೂಮಿಯನ್ನು ಆಳವಾಗಿ ಉಳುಮೆ ಮಾಡಬೇಕು. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ತಿಪ್ಪೆ ಗೊಬ್ಬರವನ್ನು ಹಾಕಿ ದಪ್ಪ ಉಸುಕನ್ನು ಹಾಕಿದ ಮೇಲೆ, ಉಸುಕಿನ ಪದರಿನಲ್ಲಿ ಮಾತ್ರ ಹರಗುವದನ್ನು ಹೊರತು ಪಡಿಸಿ ಯಾವುದೇ ಆಳವಾದ ಉಳುಮೆಯನ್ನು ಮಾಡಬಾರದು. ಒಂದು ಹೆಕ್ಟೇರ್ ಪ್ರದೇಶಕ್ಕೆ 270 ಟ್ರ್ಯಾಕ್ಟರ್ ದಪ್ಪ ಉಸುಕು ಬೇಕಾಗುತ್ತದೆ. ದಪ್ಪ ಉಸುಕು ಹರಡುವುದರಿಂದ ಹೆಚ್ಚಿನ ತೇವಾಂಶ ಹಿಡಿದುಕೊಂಡು ಹೆಸರು  ಹಿಂಗಾರಿ ಜೋಳ ಮತ್ತು ಸೂರ್ಯಕಾಂತಿ ಬೆಳೆಗಳ ಇಳುವರಿಯನ್ನು ಹೆಚ್ಚಿಸಿ ಅಧಿಕ ಲಾಭವನ್ನು ಪಡೆಯಬಹುದು. ದಪ್ಪ ಉಸುಕನ್ನು ಹಾಕುವ ಖರ್ಚನ್ನು ಎರಡನೆಯ ವರ್ಷದ ಬೆಳೆಗಳಿಂದ ಹಿಂತಿರುಗಿ ಪಡೆಯಬಹುದು.

5. ಆಳವಾದ ಕಪ್ಪು ಭೂಮಿ

ಬೆಣಚು ಕಲ್ಲುಗಳನ್ನು ಕಾಪಾಡುವುದು

ಭೂಮಿಯ ಮೇಲೆ ಕಾಪಾಡಿಕೊಂಡು ಬರುವದು

ಮಣ್ಣಿನ ಮೇಲೆ ನೈಸರ್ಗಿಕವಾಗಿ ಇರುವಂತೆ ಬೆಣಚು ಕಲ್ಲುಗಳನ್ನು ಜಮೀನಿನಿಂದ ಹೊರಗಡೆ ತೆಗೆದು ಹಾಕಬಾರದು. ಹೆಚ್ಚಿನ ತೇವಾಂಶ ಹಿಡಿದುಕೊಂಡು ಅಧಿಕ ಇಳುವರಿಗೆ ಸಾಧ್ಯವಾಗುವುದು.

ಬೆಳೆಗಳ ಇಳುವರಿ ಹೆಚ್ಚಿಸಲು ಮಣ್ಣು ಕೊಚ್ಚಿ ಹೋಗುವುದನ್ನು ತಡೆಯುವುದು ಹಾಗೂ ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವುದು ಅವಶ್ಯವಾಗಿದೆ. ಈ ಉದ್ದೇಶ ಸಾಧನೆಗಾಗಿ ಈ ಮುಂದೆ ವಿವರಿಸಿದ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ.
1. ಹೊಲಗಳಿಗೆ ಬದುಗಳನ್ನು ಹಾಕುವುದು 
2. ಬದುಗಳ ಮಧ್ಯದ ಜಮೀನಿನ ನಿರ್ವಹಣೆ
3. ಹರಿದು ಹೋಗುವ ನೀರನ್ನು ಹೊಂಡಗಳಲ್ಲಿ ಶೇಖರಿಸಿ ಉಪಯೋಗಿಸುವುದು
4. ಬೆಳೆ ಮತ್ತು ಬೆಳೆಗಳ ಪದ್ಧತಿಗಳು
ಸರಿಯಾಗಿ ಸಮಪಾತಳಿ ಬೇಸಾಯ ಅನುಸರಿಸಿದಲ್ಲಿ ಭೂಮಿಯ ಇಳಿಜಾರು ಶೇ. 1 ರಷ್ಟು ಇದ್ದರೂ ಯಾವುದೇ ಯಾಂತ್ರಿಕ ನಿರ್ಮಾಣ ಅವಶ್ಯಕತೆಯಿರುವುದಿಲ್ಲ ಇಲ್ಲವಾದರೆ ಶೇ. 0.5 ರಷ್ಟು ಇಳಿಜಾರಿದ್ದರೂ ಸಂರಕ್ಷಣ ವಿಧಾನಗಳನ್ನು ಕೈಕೊಳ್ಳವುದು ಅವಶ್ಯಕ.

 

Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.9793814433
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top