ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ

ದೇಶದ ಒಟ್ಟು ಸಾಗುವಳಿ ಕ್ಷೇತ್ರವಾದ 143.9 ದಶಲಕ್ಷ ಹೆಕ್ಟೇರ್ ಪ್ರದೇಶವು ಒಣ ಭೂಮಿಯೆಂದು ವರ್ಗೀಕರಿಸಲಾಗಿದ್ದು, ಕೈಗೊಳ್ಳುವ ಪ್ರತಿಯೊಂದು ಕೃಷಿ ಚಟುವಟಿಕೆಗಳು ಮಳೆಯನ್ನೇ ಅವಲಂಬಿಸಿವೆ. ಇಂತಹ ಪ್ರದೇಶಗಳಲ್ಲಿ ಬೀಳುವ ಮಳೆಯೂ ಕೇವಲ 2-3 ತಿಂಗಳುಗಳಲ್ಲಿ ಅತ್ಯಂತ ವೇಗವಾಗಿ ಸುರಿದು ಕೆರೆ ಹಳ್ಳಗಳನ್ನು ಸೇರಿ ಹರಿದು ಹೋಗುತ್ತದೆ. ಗ್ರಾಮಾಂತರ ಪ್ರದೇಶಗಳೂ ಅಥವಾ ಪಟ್ಟಣಗಳಲ್ಲಿ ಮತ್ತು ಅವುಗಳ ಸಮೀಪ ಇರುವ ಜಲಾನಯನ ಪ್ರದೇಶಗಳಲ್ಲಿ ನೀರನ್ನು ಶೇಖರಿಸಬಹುದಾಗಿದ್ದು, ಈ ತರಹ ಶೇಖರಿಸಿದ ನೀರು ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣಕ್ಕೆ ನಾವು ಆದ್ಯತೆ ಕೊಡಬೇಕಾಗಿದೆ.

ಮಳೆ ನೀರಿನ ಕೊಯ್ಲು ಎಂದರೆ ಮಳೆ ಬಂದಾಗ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವುದು.

ಮಳೆ ನೀರು ಕೊಯ್ಲಿನ ಲಾಭಗಳು

• ಪರಿಸರಸ್ನೇಹಿ ಸರಳ ತಂತ್ರಜ್ಞಾನವಾಘಿದ್ದು, ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು
• ಬರಗಾಲದಲ್ಲಿ ನೆರವಾಗುವುದು ಹಾಗು ಅಂತರ್ಜಲವನ್ನು ಹೆಚ್ಚಿಸಿ ಮಣ್ಣಿನ ಕೊಚ್ಚಣೆ ತಡೆಯುವುದು
• ತಗ್ಗಿನ ಪ್ರದೇಶಗಳಿಗೆ ಬರುವ ನೆರೆ ಪ್ರವಾಹವನ್ನು ತಡೆಗಟ್ಟುವುದು
• ನೀರಿನ ಉಳಿತಾಯವಾಗುವುದು
• ನಿಖರವಾದ ಸ್ಥಳಗಳಲ್ಲಿ / ಸಮಯದಲ್ಲಿ ನೀರಿನ ಪೂರೈಕೆಯಾಗುವುದು
• ಜಲಭರಗಳಲ್ಲಿ ಗುಣಮಟ್ಟದ ನೀರಿನ ಸಂಗ್ರಹಣೆಯಾಗುವುದು
• ಸಮುದ್ರದ ನೀರು ಅಂತರ್ಜಲದಲ್ಲಿ ಸೇರುವುದನ್ನು ತಡೆಗಟ್ಟುವುದು
• ನೀರನ್ನು ಮೇಲೆತ್ತುವಲ್ಲಿ ವಿದ್ಯುತ್ತಿನ ಕಡಿಮೆ ಬಳಕೆಯಾಗುವುದು

 

Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

2.89247311828
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top