ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ "ರೈತ ಮಿತ್ರ ಯೋಜನೆ" ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ. ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು "ರೈತ ಸಂಪರ್ಕ ಕೇಂದ್ರಗಳು" ಎಂದು ಕರೆಯಲಾಗುತ್ತಿದೆ. ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಪ್ರತಿ ಹೋಬಳಿಗೆ ಒಂದರಂತೆ 747 ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮೂಲ: ರೈತ ಮಿತ್ರ
ಕೊನೆಯ ಮಾರ್ಪಾಟು : 7/2/2020