ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಸಸ್ಯಾವಶೇಷಗಳಿಂದ ಕಾಂಪೋಸ್ಟ್ ತಯಾರಿಕೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಸ್ಯಾವಶೇಷಗಳಿಂದ ಕಾಂಪೋಸ್ಟ್ ತಯಾರಿಕೆ

ಸಸ್ಯಾವಶೇಷಗಳಿಂದ ಕಾಂಪೋಸ್ಟ್ ತಯಾರಿಕೆ , ಭೂಮಿಗೆ ಸೇರಿಸುವ ವಿಧಾನ/ಸಸ್ಯಾವಶೇಷಗಳ ನಿರ್ವಹಣೆ ಮತ್ತು ಪ್ರಯೋಜನಗಳು

ಸಸ್ಯಾವಶೇಷಗಳನ್ನು ನೇರವಾಗಿ ಭೂಮಿಗೆ ಸೇರಿಸಬಹುದು ಇಲ್ಲವೇ ಕಾಂಪೋಸ್ಟ್ ಮಾಡಿ ನಂತರ ಭೂಮಿಗೆ ಹಾಕಬಹುದು. ಈ ರೀತಿ ಕೃಷಿ ತ್ಯಾಜ್ಯ ಪದಾರ್ಥಗಳಿಂದ ತ್ವರಿತವಾಗಿ ಕಾಂಪೋಸ್ಟ್ ಮಾಡಲು ನಾಲ್ಕು ಶಿಲೀಂಧ್ರ (ಫೆನರೋಕೀಟ್ ಕೈಸೋಸ್ಫೋರಿಯಂ, ಫ್ಲುರೋಟಸ್, ಎಸ್ಪರಜಿಲಸ್ ಅವಮೋರಿ ಮತ್ತು ಟ್ರೈಕೋಡರ್ಮಾ ವಿರಿಡೆ) ಮತ್ತು ಎರಡು ರಂಜಕ ಕರಗಿಸುವ ಸೂಕ್ಷ್ಮ ಜೀವಿಗಳ ಜೊತೆಗೆ ಶೇ. 2 ರಷ್ಟು ಶಿಲಾರಂಜಕ, ಶೇ. 0.02 ರಷ್ಟು ಯೂರಿಯಾ ಮತ್ತು ಜೈವಿಕ ಅನಿಲ ಘಟಕದಿಂದ ಹೊರಬರುವ ರಾಡಿಯನ್ನು ಸಿಂಪಡಿಸುವುದರಿಂದ ಕಾಂಪೋಸ್ಟ್ ಕ್ರಿಯೆ ತ್ವರಿತಗೊಳ್ಳುವುದು.

ಭೂಮಿಗೆ ಸೇರಿಸುವ ವಿಧಾನ/ಸಸ್ಯಾವಶೇಷಗಳ ನಿರ್ವಹಣೆ

  • ಸಸ್ಯಾವಶೇಷಗಳನ್ನು ಭೂಮಿಗೆ ಸೇರಿಸುವ ಮುನ್ನ 10-15 ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ ಭೂಮಿಯ ಮೇಲೆ ಹರಡಿ ಟ್ರ್ಯಾಕ್ಟರ್ ಅಥವಾ ಎತ್ತಿನ ನೇಗಿಲಿನಿಂದ ಮಣ್ನಿನಲ್ಲಿ ಸೇರಿಸಬಹುದು.
  • 2.ಹೊಲದಲ್ಲೇ ಕೊಯ್ಲಿನ ನಂತರ ಟ್ರ್ಯಾಕ್ಟರ್ ಚಾಲಿತ ರೋಟೋವೇಟರ್/ರೋಟೋಸ್ಲ್ಯಾಶರ್ ಹಾಯಿಸುವುದರಿಂದ ಆಯಾ ಬೆಳೆಗಳಲ್ಲಿ ಬೆಳೆದ ಬೆಳೆ ಉಳಿಕೆಗಳು ಪುಡಿಪುಡಿಯಾಗಿ ಮಣ್ಣಿನಲ್ಲಿ ಸೇರುತ್ತವೆ.
  • ವಿವಿಧ ಬೇಸಾಯ ಪದ್ಧತಿಗೆ ಅಡೆತಡೆಯಾಗಿದ್ದರೆ ಅಥವಾ ಪ್ಲ್ಯಾಂಟೇಶನ್ ಬೆಳೆಗಳಲ್ಲಿ ಬೆಳೆ ಉಳಿಕೆಗಳನ್ನು ಭೂಮಿಯ ಮೇಲೆ ಹೊದಿಕೆಯಾಗಿ ಇಡುವುದರಿಂದ ಕ್ರಮೇಣ ಕಳಿಯುತ್ತವೆ ಮತ್ತು ಮಣ್ಣಿನ ಮೇಲ್ಮೈಯನ್ನು ರಕ್ಷಿಸುತ್ತವೆ

ಪ್ರಯೋಜನಗಳು

  • ಹೆಕ್ಟೇರಿಗೆ 5 ಟನ್ ಅಥವಾ ಆಯಾ ಬೆಳೆಗಳಲ್ಲಿ ಉತ್ಪಾದಿಸಲ್ಪಟ್ಟ ಸಸ್ಯಾವಶೇಷಗಳನ್ನು ಮರಳಿ ಮಣ್ಣಿಗೆ ಸೇರಿಸುವುದರಿಂದ ಬೆಳೆಗಳ ಇಳುವರಿ ಶೇ. 25-30 ರಷ್ಟು ಹೆಚ್ಚುವುದು, ಇದು ನಿರಂತರವಾಗಿ 2-3 ವರ್ಷಗಳ ನಂತರ ಸಾಧ್ಯ.
  • ಸಸ್ಯಾವಶೇಷಗಳು ಮುಖ್ಯ ಪೋಷಕಾಂಶಗಳಲ್ಲದೇ ಲಘುಪೋಷಕಾಂಶಗಳನ್ನು ಪುನರಾವರ್ತಿಸಿ ಭೂಮಿಯ ಫಲವತ್ತತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ.
  • ಸಸ್ಯಾವಶೇಷಗಳನ್ನು ಭೂಮಿಗೆ ಸೇರಿಸಿದಾಗ ಬೆಳೆಗೆ ಶಿಫಾರಸ್ಸು ಮಾಡಿದ ಅರ್ಧ ಪ್ರಮಾಣದ ರಸಗೊಬ್ಬರ ಸಾಕಾಗುತ್ತದೆ ಮತ್ತು ಪೂರ್ತಿ ರಸಗೊಬ್ಬರ ಹಾಕಿದ ಬೆಳೆಗಿಂತ ಅಧಿಕ ಇಳುವರಿ ಪಡೆದದ್ದು ಕಂಡುಬಂದಿದೆ. ಶಿಫಾರಸ್ಸು ಮಾಡಿದ ರಸಗೊಬ್ಬರ ಪ್ರಮಾಣದಲ್ಲಿ ಶೇ. 50 ರಷ್ಟು ಉಳಿತಾಯ ಮಾಡಲು ಸಾಧ್ಯ.  ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಿ ಆದಾಯ ಕೂಡ ಹೆಚ್ಚಾಗುತ್ತದೆ.
  • ಇವುಗಳ ಬಳಕೆಯಿಂದ ಮಣ್ಣಿನ ಭೌತಿಕ ಗುಣಧರ್ಮ ಸುಧಾರಿಸಿ ಮಣ್ಣಿನಲ್ಲಿ ನೀರು ಇಂಗುವಿಕೆ, ಬಸಿಯುವಿಕೆ ಹಾಗೂ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೆಚ್ಚುತ್ತದೆ.
  • ಸಸ್ಯಾವಶೇಷಗಳನ್ನು ನಿರಂತರ ಭೂಮಿಗೆ ಹೊದಿಕೆಯಾಗಿ ಹಾಕುವುದರಿಂದ ಜೈವಿಕ ಕ್ರಿಯೆ ಅಭಿವೃದ್ಧಿ ಹೊಂದಿದ್ದು ಕಂಡು ಬಂದಿದೆ.
  • ಸಸ್ಯಾವಶೇಷಗಳನ್ನು ಭೂಮಿಗೆ ಹೊದಿಕೆಯಾಗಿ ಹಾಕುವುದರಿಂದ ಕಳೆನಿಯಂತ್ರಣ ಕೂಡ ಆಗುತ್ತದೆ.

ಮೂಲ :ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

2.93548387097
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top