ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚಿಕ್ಕದು ಚೊಕ್ಕದು

ಸುಸ್ಥಿರ ಕೃಷಿ ಬಗೆಗಿನ ಒಂದು ಯಶೋಗಾಥೆಯನ್ನು ಇಲ್ಲಿ ವಿವರಿಸಲಾಗಿದೆ.

ರಾಖಿ ತುರಿ ಎನ್ನುವ ಗೃಹಿಣಿ ಬೋಲ್ಪುರ್ ಪಟ್ಟಣದ ಕೊಳಚೆಗೇರಿಯ ನಿವಾಸಿಯಾಗಿರುವುದಲ್ಲದೆ, ಭೋಲಾಪುಕುರ್ 1 ಎಂಬ ಸಣ್ಣ ಉಳಿತಾಯ ಮತ್ತು ಸಾಲದ ಗುಂಪಿನ ಸದಸ್ಯೆಯೂ ಹೌದು. ಆಕೆಯ ಪತಿ ಬಿಕಾಶ್ ತುರಿ ರಿಕ್ಷಾ ಎಳೆಯುವ ಕೆಲಸಮಾಡುತ್ತಾರೆ. ಆತನ ಮಾಸಿಕ ವರಮಾನ ರೂ. 1650 ಆಗಿದ್ದು, ಅದರಿಂದ ಅವರ ಐದು ಸದಸ್ಯರಿರುವ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ. ಈ ಪರಿಶಿಷ್ಠ ಜಾತಿಯ ಕುಟುಂಬವು ಸರಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೆಂದು ಪ್ರಮಾಣೀಕರಿಸಲ್ಪಟ್ಟಿದೆ. ರಾಖಿಯು ಕೆಲಸದ ಹುಡುಕಾಟದಲ್ಲಿ ತೊಡಗಿದ್ದರೂ ಯಾವುದೇ ಕೆಲಸ ಲಭ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಕೆ. ಎಸ್.ಯು.ಪಿ. ಯ ಇನ್ನೋವೇಟಿವ್ ಚಾಲೆಂಜ್ ಫಂಡ್ ನಿಂದ ಸಹಕರಿಸಲ್ಪಟ್ಟ ಎರೆಗೊಬ್ಬರ ತಯಾರಿಕಾ ಪ್ರಯತ್ನದೊಂದಿಗೆ ಡಿ.ಆರ್.ಸಿ.ಎಸ್.ಸಿ ಯು ಮಧ್ಯಪ್ರವೇಶ ಮಾಡಿತು. ರಾಖಿ ತುರಿ ಮತ್ತು ಆಕೆಯ ತಂಡ /ಗುಂಪು ಈ ಪ್ರಯತ್ನದಲ್ಲಿ ಆಸಕ್ತಿ ತೋರಿಸಿತು.

ಯೋಜನೆಯು ಪ್ರತಿ ತಂಡದಲ್ಲಿ ಹದಿನೈದು ಸದಸ್ಯರಿರುವ ಐದು ಗುಂಪುಗಳನ್ನು ರಚಿಸುವ ಗುರಿಯನ್ನು ಇಟ್ಟುಕೊಂಡಿತು. ಈ ಗುಂಪುಗಳು ಬೋಲ್ಪುರದ ಮಾರುಕಟ್ಟೆಯಿಂದ ತರಕಾರಿಯ ತ್ಯಾಜ್ಯವನ್ನು ಸಂಗ್ರಹಿಸಿ ಎರೆಗೊಬ್ಬರವನ್ನು ವ್ಯವಹಾರಿಕವಾಗಿ ತಯಾರಿಸಲಿರುವುದು. ಭೋಲಾಪುಕುರ್ 1 ಗುಂಪಿನ ಸದಸ್ಯರು ಎರೆಗೊಬ್ಬರ ತಯಾರಿಗೆ ಬೇಕಾಗುವ ತೊಟ್ಟಿಯನ್ನು ಸಪೋರ್ಟ್ ಎನ್ನುವ ಸಂಸ್ಥೆಗೆ ಜಮುಬೋನಿ ಎಂಬಲ್ಲಿರುವ ಜಮೀನಿನಲ್ಲಿ ನಿರ್ಮಾಣ ಮಾಡುವುದೆಂದು ನಿರ್ಧಾರಿಸಿದರು. ಮಹಿಳಾ ಸದಸ್ಯರಿಗೆ ಎರೆಗೊಬ್ಬರ ತಯಾರಿಯ ತರಬೇತಿ ನೀಡಲಾಯಿತು. ಕುಟುಂಬದ ಪುರುಷ ಸದಸ್ಯರೂ ಮಾರುಕಟ್ಟೆಯಿಂದ ತರಕಾರಿ ತ್ಯಾಜ್ಯ ಸಂಗ್ರಹಣೆಯಲ್ಲಿ ನೆರವಿನ ಹಸ್ತ ನೀಡಿದರು. ಮಹಿಳೆಯರು ಒಣಹುಲ್ಲು, ಸೆಗಣಿ, ಇತ್ಯಾದಿಗಳ ಸಂಗ್ರಹಣೆಯಲ್ಲಿ ತೊಡಗಿದರು. ಉತ್ತಮ ಗುಣಮಟ್ಟದ ಎರೆಹುಳಗಳನ್ನು ಬಳಸಿ ಎರೆಗೊಬ್ಬರ ತಯಾರಿಯನ್ನು ಆರಂಭಿಸಿದರು. ತಮ್ಮ ಎರೆಗೊಬ್ಬರಕ್ಕೆ/ಉತ್ಪನ್ನಕ್ಕೆ “ಬಸುಂಧರಾ ಎರೆಗೊಬ್ಬರ” ಎಂದು ನಾಮಕರಣ ಮಾಡಿದರು. ಎರಡು ಪೀಪಾಯಿಗಳ ನೆರವಿನಿಂದ ಮೊದಲ ತಿಂಗಳಿನಲ್ಲಿ ಪಡೆದ ಒಟ್ಟು ಉತ್ಪನ್ನ 400 ಕಿ.ಗ್ರಾಂ. ಈಗ ಅವರು ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ತೊಡಗಬೇಕಾಗಿತ್ತು. ಉತ್ಪನ್ನದ ಮಾರುಕಟ್ಟೆ ದರವನ್ನು ಪ್ರತಿ ಕಿ.ಗ್ರಾಂ.ಗೆ ರೂ. 10 ಎಂದು ನಿಗದಿ ಮಾಡಲಾಯಿತು. ಮಾರಾಟದ ನಂತರ ರೂ. 1000 ವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ ಮುಂದೆ ಭವಿಷ್ಯದಲ್ಲಿ ತೊಟ್ಟಿಯ ನಿರ್ಮಾಣಕ್ಕೆ ಬಳದುವುದೆಂದು ನಿರ್ಧಾರ ಮಾಡಲಾಯಿತು. ಉಳಿದ ಮೊತ್ತ/ಸಂಪಾದನೆಯನ್ನು ಸದಸ್ಯರ ನಡುವೆ ಸಮನಾಗಿ ಹಂಚುವುದೆಂದು ನಿರ್ಧರಿಸಲಾಯಿತು.

ರಾಖಿ ತುರಿ ತನ್ನ ದಿನ ನಿತ್ಯದ ಗೃಹಕೃತ್ಯದ ನಂತರ 1-2 ಘಂಟೆಯ ಅವಧಿಯನ್ನು ಇದಕ್ಕಾಗಿ ವಿನಿಯೋಗಿಸಲು ಸಾಧ್ಯವಿತ್ತು. ಆಕೆ ಮೊದಲ ತಿಂಗಳಿನಲ್ಲಿ ರೂ. 200 ಸಂಪಾದಿಸಿದರು. ಆಕೆಯ ಪತಿಯೂ ಈ ಯೋಜನೆಯ ಪ್ರಚಾರದಿಂದ ಹಾಗೂ ತನ್ನ ರಿಕ್ಷಾವನ್ನು ತ್ಯಾಜ್ಯ ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಸುವುದರ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಯಿತು. ರಾಖಿ ತುರಿಗೆ ತನ್ನ ಬಿಡುವಿನ ವೇಳೆಯನ್ನು ವಿನಿಯೋಗಿಸಿ ಹೆಚ್ಚಿನ ಆದಾಯಗಳಿಸುವ ಅವಕಾಶ ದೊರಕಿದುದರ ಬಗ್ಗೆ ಖುಶಿಯಿದೆ. ಈ ವ್ಯವಹಾರವನ್ನು ತಾವು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಲಿದ್ದೇವೆ ಎಂದು ಆಕೆ ಹೇಳುತ್ತಾರೆ.

ಆಧಾರ: ಡಿ.ಆರ್. ಸಿ.ಎಸ್. ಸಿ. ವಾರ್ತಾಪತ್ರ, ಸಂಚಿಕೆ: 6

3.01388888889
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top