অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳೆಯರಿಗೆ ಕೃಷಿ ಕ್ಷೇತ್ರ ಶಾಲೆ

ಟೊಮೆಟೊ ಬೆಳೆಯಲ್ಲಿ ಇ ಪಿ ಎಮ್—ಎಪ್ ಎಫ್ ಎಸ್ ಒಂದು ಅನುಭವ

ಟೊಮೆಟೋ ಧರ್ಮ ಪುರಿ ಜಿಲ್ಲೆಯ ಕೊಟ್ಟುರು , ಸಿರಿರಾಮ ಪಟ್ಟಿ, ಏಚಾಂಪಲ್ಲಂ ಗ್ರಾಮಗಳಲ್ಲಿಗಳಲ್ಲಿ ಒಂದು ಪ್ರಮುಖ ಬೆಳೆ. ಇದಕ್ಕೆ ಅಧಿಕ ಕಾರ್ಮಿಕರು ಅಗತ್ಯವಾದ್ದರಿಂದ, ಟೊಮೇಟೊ ಬೆಳೆಯು ಗ್ರಾಮದಲ್ಲಿ ಹೆಚ್ಚಿನ ಉದ್ಯೋಗ ಮೂಲವೂ ಆಗಿದೆ.ಅಲ್ಲಿನ ರೈತರು ಟೊಮೇಟೋ ಬೆಳೆಗೆ ಹೆಚ್ಚಿನ ಪ್ರಮಾಣ ದಲ್ಲಿ ಹೊರಗಿನ ಪರಿಕರಗಳಾದ ದುಬಾರಿ ಬೆಲೆಯ ರಸಾಯನಿಕ ಗೊಬ್ಬರ,ಮತ್ತು ಕೀಟನಾಶಕಗಳನ್ನು ಅವಲಂಬಿಸಿ ಬೇಸಾಯ ಮಾಡುತ್ತಾರೆ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿವೇಚನೆ ಇಲ್ಲದೆ ಉಪಯೋಗ ಮಾಡುವುದರಿಂದ ಉತ್ಪಾದನಆ ವೆಚ್ಚವೂ ಅತಿ ಹೆಚ್ಚಾಗುವುದು. ರೈತರ ಉತ್ಪದನಾ ವೆಚ್ಚ ಕಡಿಮೆ ಮಾಡಲು ಪರ್ಯಾಯ ಬೆಳೆ ಪದ್ದತಿ ಬಳಸಲು ಅವರು ಸಶಕ್ತರಾಗುವಂತೆ ಮಾಡುವದು ಅಗತ್ಯವಾಗಿತ್ತು. ಅದಕ್ಕಾಗಿ ಕೃಷಿ ಕ್ಷೇತ್ರ ಶಾಲೆ (FFS), ಎಂಬ ಕಂಡುಹಿಡಿದು ಕಲಿಯುವ ವ್ಯವಸ್ಥೆಯು ಈ ಉದ್ದೇಶಕ್ಕೆ ಸೂಕ್ತವೆನಿಸಿತು.

ಪ್ರಕ್ರಿಯೆಗಳು

ಕೃಷಿ ಪರಿಸರ ಪದ್ದತಿ ವಿಶ್ಲೇಣೆ ಇಲ್ಲಿ ಅನುಭವ ಮತ್ತು ಕಲಿಕೆಗಾಗಿ .64 ಎಕರೆ ಭೂಮಿಯನ್ನು ಮೀಸಲಿಡಲಾಯಿತು.ಕೃಷಿ ಪದ್ದತಿಗಳ ಬಗ್ಗೆ ಅನೇಕ ಪ್ರಯೋಗ, ನಿರ್ಧಾರಿತ, ದೂರಗಾಮಿ ಮತ್ತು ಇ ಪಿ ಎಂ ಪರ್ಯಾಯಗಳನ್ನು ಇಲ್ಲಿ ಭಾಗವಹಿಸಿದವರು ಮಾಡಬಹುದಾಗಿತ್ತು. ಮಧ್ಯಂತರ ಬೆಳೆಗಳಾದ ಕೌ ಪೀ, ಬದುವಿನ ಬೆಳೆಗಳಾದ ಮಕ್ಕೆಜೋಳ, ಚೆಂಡುಹೂ ಮತ್ತು ಸೆಜ್ಜೆ ಗಳನ್ನು ಕೀಟ ನಿಯಂತ್ರಕಗಳಾಗಿ ಮತ್ತು ಹೆಚ್ಚುವರಿ ಆದಾಯಕ್ಕಾಗಿ ಬೆಳಸಲಾಯಿತು.ಪ್ರತಿ ವಾರವೂ ಎ ಇ ಎಸ್ ಎ ತಾಕಿನಲ್ಲಿ ಮಾಡಿದ ಪರಿಶೀಲನೆಯು ಗುಂಪಿನಲ್ಲಿ ಚರ್ಚಿತವಾಗುತ್ತಿದ್ದವು.ಇದರಿಂದ ಅನುಭವದ ವಿನಿಮಯ ಮತ್ತು ಉತ್ತಮ ನಿರ್ಧಾರ ಸಾಧ್ಯವಾಗುತ್ತಿತ್ತು. ಪೋಷಕಾಂಶ ನಿರ್ವಹಣೆ ,ಕೀಟ ಸಂಗ್ರಹಾಲಯ, ಹಸಿಗೊಬ್ಬರ ಹಾಕುವುದು ಮತ್ತು ಎಲೆ ಗೊಬ್ಬರ ಮೊದಲಾದವುಗಳನ್ನು ಮಾಡುವುದರಿಂದ ಭಾಗವಹಿಸಿದವರಿಗೆ ನೇರ ಅನುಭವ ಆಗುತ್ತಿತ್ತು.

ಗುಂಪು ವೈವಿದ್ಯ ತಂಡ ನಿರ್ಮಾಣ ಮತ್ತು ಸಮಸ್ಯೆ ಪರಿಹಾರ ಕೌಶಲ್ಯ ಬೆಳೆಸಲು ಎಪ್ ಎಫ್ ಎಸ್ ಪ್ರಕ್ರಿಯೆ ಗುಂಪು ವೈವಿದ್ಯ ಚಟುವಟಿಕೆಗಳ ಭಾಗವಾಗಿತ್ತು. ಎಪ್ ಎಫ್ ಎಸ್ ಅಭ್ಯರ್ಥಿಗಳು ಇತರ ಗ್ರಾಮದ ಇತರ ಗುಂಪುಗಳ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಲ್ಲಿ ಟೊಮೆಟೋ ಬೆಳೆಯುವಲ್ಲಿನ ತಮ್ಮ ಅನುಭವಗಳನ್ನು ಸುತ್ತಮುತ್ತಲಿನ ಐದು ಗ್ರಾಮದ ಟೊಮೇಟೋ ಬೆಳೆ ಗಾರರೊಂದಿಗೆ ಹಂಚಿಕೊಂಡರು

ಆಚರಣೆ

ನರ್ಸರಿ ಬೆಳಸುವುದು ಟೊಮೇಟೋ ಸಸಿಗಳನ್ನು ನರ್ಸರಿಯಲ್ಲಿ ವಿಶೇಷವಾಗಿ ಎತ್ತರಿಸಿದ ಮಡಿಯಲ್ಲಿ ಬೆಳೆಯುವುದರಿಂದ ಮಣ್ಣಿನಿಂದ ಬರುವ ಪೆಥೋಜಿನ್ ನಿರೋಧಿಸಲು ಮತ್ತು ಆರೋಗ್ಯವಂತ ಸಸಿ ಬೆಳೆಯಲು ಅನುಕೂಲ ಎಂದ ತಿಳಿಯಿತು.ನರ್ಸರಿಯಲ್ಲಿ ಸಾಲಾಗಿ ಬಿತ್ತಿದರೆ ಸುಲಭವಾಗಿ ಕಳೆ ತೆಗೆಯಲು ಅನುಕೂಲವೆಂದು ಗೊತ್ತಾಯಿತು.

ತಡೆ ಬೆಳೆ ಮತ್ತು ಬಲೆ ಬೆಳೆ ಬಳಕೆ ಟೊಮೆಟೋವನ್ನು ಯಾವಾಗಲೂ ಏಕ ಬೆಳೆಯಾಗಿಯೇ ಪಡೆಯುವರು. ಎಪ್ ಎಫ್ ಎಸ್ ಗೆ ಮೊದಲು ರೈತರು ಅಂತರ್ ಬೆಳೆಯಿಂದ ಟೊಮೇಟೋಗೆ ಇತರ ಬೆಳೆಗಳು ಸ್ಪರ್ಧೀಗಳಾಗಿ ಕಳೆ ಹೆಚ್ಚಾಗುವುದು ಎಂದು ನಂಬಿದ್ದರು.ಎಪ್ ಎಫ್ ಎಸ್ ನಲ್ಲಿ ಭಾಗವಹಿಸಿದ ಮೇಲೆ ಅವರಿಗೆ ಮೊದಲಬಾರಿಗೆ ಟೊಮೇಟೋ ಜತೆ ಇತರ ಬೆಳೆ ಹಾಕುವುದರ ಪ್ರಾಮುಖ್ಯತೆ ಗೊತ್ತಾಯಿತು.ಅವರ ತಪ್ಪು ಕಲ್ಪನೆ ದೂರವಾಯಿತು. ಬದುವಿನ ಬೆಳೆಗಳಾದ ಮೆಕ್ಕೆ ಜೋಳ , ಸೆಜ್ಜೆ ಗಳು ಬಿಳಿ ನೊಣದ ಚಲನೆಗೆ ಅಡ್ಡ ಹಾಕಿದವು. ಚೆಂಡುಹೂವು ಹಣ್ಣು ಕೊರೆಕ ಹುಳುವನ್ನು ಮೊಟ್ಟೆ ಇಡಲು ಆಕರ್ಷಿಸಿ ಬೆಳೆ ಬಲೆ ಯಾಗಿ ಕೆಲಸ ಮಾಡಿತು. ಕೌಪೀ ದಾಳಿಕೋರರಿಗೆ ಆಹಾರಮೂಲವಾಗಿ ಆಕರ್ಷಿಸಿತು

ಹೊದಿಕೆ ಬಹು ಲಾಭ ದಾಯಕ ಹೊದಿಕೆಯ ಲಾಭವನ್ನು ಅರ್ಥಮಾಡಿ ಕೊಳ್ಳುವುದು ಒಂದು ಅತಿ ಮುಖ್ಯ ಕಲಿಕೆ . ಹೊಲದಲ್ಲಿನ ಉಳಿಕೆಗಳಾದ , ಕಬ್ಬಿನ ರವದಿ, ಬಳಸಲಾಗದ ನೆಲ್ಲು ಹುಲ್ಲು ಮತ್ತು ತೆಂಗಿನ ಗರಿಗಳನ್ನು ಟೊಮೆಟೋ ಹೊಲದಲ್ಲಿ ಹೊದಿಕೆಯಾಗಿ ಬಳಸಲಾಗುವುದು. ಹೊದಿಕೆಯ ಬಳಕೆಯಿಂದ ಮಣ್ಣಿನ ತೇವಾಂಶದ ಮಟ್ಟವನ್ನು ಕಾಪಾಡುವುದು ಸಾಧ್ಯ ಎಂಬುದನ್ನು ಅರಿತರು. ಇದರಿಂದ -.

  • ಬೆಳೆಯನ್ನು ವ್ಯಾಪಕವಾಗಿ ನಾಶ ಮಾಡುವ ಕೆಂಪು ಜೇಡ ಕೀಟದ ಬಾಧೆ ಕಡಿಮೆಯಾಗುವುದು.
  • ಬೆಳೆಗೆ ನೀರುಣಿಸುದು ಕಡಿಮೆಯಾಗುವುದು. ( 3-4 ದಿನಗಳ ಬದಲು 7 ದಿನಗಳಿಗೊಮ್ಮೆ ಸಾಕು)
  • ಬೆಳವಣಿಗೆ ಹೆಚ್ಚುವುದು.ಎಲೆಗಳ ಸಂಖ್ಯೆ,ಸಸ್ಯದ ಎತ್ತರ ಇತ್ಯಾದಿಗಳು 30% ಗೂ ಅಧಿಕ ವಾಗುವವು.
  • ಕಳೆಯ ಪ್ರಮಾಣ ತಗ್ಗುವುದು.

ಅನೇಕ ಐ ಪಿ ಎಂ ವಿಧಾನಗಳಾದ ಹಳದಿ ಅಂಟು ಬಲೆ ,ಫೆರ್ಮೋನು ಬಲೆ ಪಿಟ್ ಫಾಲ್ ಬಲೆ , ಪರೊಪಜೀವಿಗಳಾದ ಟ್ರಿಕೊಗ್ರಮದ ಮೊಟ್ಟೆಗಳನ್ನು ಬಿಡುವುದು,  ಕಾರದಪುಡಿ-ಬೆಳ್ಳುಳ್ಳಿ ಸಿಂಪರಣೆ , ಲಾಂಟಾನಾ ರಸ, ಪಂಚಗವ್ಯ , ಎನ್ ಪಿ ವಿ ,ಸೂಡೊ ಫ್ಲೋರಸೆನ್ಸ ಮೊದಲಾದ ಹೊಸ ಸಸ್ಯ ಸಂರಕ್ಷಣ ವಿಧಾನಗಳನ್ನು ಕಲಿತರು.

ಪ್ರಮುಖ ಫಲಿತಗಳು

ವೆಚ್ಚದ ಇಳಿತ ಉತ್ಪಾದನಾ ವೆಚ್ಚವು ಎಕರೆಗೆ . 13,000 ರೂಪಾಯಿಯಷ್ಟು ಕಡಿಮೆಯಾಯಿತು. ಅದಕ್ಕೆ ಕಾರಣ ಹೊರಗಿನ ಪರಿಕರ ಹಾಕುವುದನ್ನು ಕಡಿಮೆ ಮಾಡಿರುವದೆ ಆಗಿತ್ತು ಟೊಮೇಟೋ ಸಸಿಗಳನ್ನು ರೈತರು ತಾವೆ ಬೆಳಸಿದ್ದರಿಂದ ಸಸಿಗಳ ವೆಚ್ಚ 68%. ನಷ್ಟು ಕಡಿಮೆ ಆಯಿತು. ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚವು ಹಿಂದಿನ ಪದ್ದತಿಗೆ ಹೋಲಿಸಿದರೆ 75% ನಸ್ಟು ಭಾರಿ ಕಡಿತ ಕಂಡಿತು.ಎಫ್ ಎಫ್ ಎಸ್ ತಾಕುಗಳಲ್ಲಿ ಕಳೆಯೆ ಇಲ್ಲದ್ದರಿಂದ ಕಾರ್ಮಿಕರ ಖರ್ಚು 16%. ಕಡಿಮೆ ಯಾಯಿತು.ಇದೆಲ್ಲದರಿಂದ ಒಟ್ಟು ಉತ್ಪಾದನ ವೆಚ್ಚವು 29% ರಷ್ಟು ಇಳಿತ ಕಂಡಿತು..

ಐ ಪಿ ಎಂ ನಿರ್ಧಾರಗಳು - ಮಹಿಳೆ ರಿಂದಾಗಿ ಭಿನ್ನತೆ ಕೊಟ್ಟೂರಿನಲ್ಲಿ ಕೃಷಿಯ ನಿರ್ಣಯ ಮಾಡುವುದು ಅದರಲ್ಲೂ ವಿಶೇಷವಾಗಿ ಕೀಟ ನಿರ್ವಹಣೆಯ ವಿಷಯವು ಗಂಡಸರ ವ್ಯಾಪ್ತಿಯ ವಿಷಯವಾಗಿತ್ತು. ಈ ಸಲ ಮಹಿಳೆಯರೂ ತಾವು ಹೊಸದಾಗಿ ಎಫ್ ಎಫ್ ಎಸ್ ಮೂಲಕ ಕಲಿತ ಪರ್ಯಾಯ ಪದ್ದತಿಗಳನ್ನು ತಮ್ಮ ಭೂಮಿಯಲ್ಲಿ ಅಳವಡಿಸಿಕೊಂಡು ಟೊಮೊಟಾ ಬೆಳೆಯನ್ನು ಹಾಳು ಮಾಡುತ್ತಿದ್ದ ಕೆಂಪು ಜೇಡ ಕೀಟದ ಹಾವಳಿ ನಿಯಂತ್ರಿಸಿದರು. ಇದನ್ನು ನೋಡಿದ ಮನೆಯಲ್ಲಿನ ಗಂಡಸರು ಮೊದಲು ಹಿಂದೆ ಮುಂದೆ ನೋಡಿದರೂ ಕ್ರಮೇಣ ಟೊಮೇಟೋ ಐ ಪಿ ಎಂ ಕೃಷಿಯಲ್ಲಿ ಮಹಿಳೆಯರ ನಿರ್ಧಾರಗಳನ್ನು ಒಪ್ಪತೊಡಗಿದರು. ಅದೂ ಅಲ್ಲದೆ ಅವರು ದುಬಾರಿಯಾದ ರಸಾಯನಿಕಗಳ ಮೇಲಿನ ಹಣವು ಉಳಿತಾಯವಾದ್ಧರಿಂದ ಖುಷಿಯಾದರು. ಮಹಿಳೆಯರನ್ನು ಅ ಸಭೆಗಳಿಗೆ ತಪ್ಪದೆ ಹಾಜರಾಗಲು ಉತ್ತೇಜಿಸಿದರು. ಈಗ ಮಹಿಳೆಯರು ಎಫ್ ಎಫ್ ಎಸ್ ನಿಂದಾಗಿ ತಾವೂ ಕೂಡಾ ಕೃಷಿ ಉತ್ಪಾದನೆಗೆ ತಮ್ಮ ಹೆಚ್ಚಿದ ಜ್ಞಾನದ ಮಟ್ಟದಿಂದಾಗಿ ಸಕಾರಾತ್ಮಕ ಕೊಡಿಗೆ ನೀಡುವುದರಿಂದ ಖುಷಿಯಾದರು. ಮತ್ತು ಗಂಡಸರು ಇದನ್ನು ಗುರ್ತಿಸಿದರು.

ಒಂದು ಎಕರೆಗೆ ತುಲನಾತ್ಮಕ ವೆಚ್ಚ ಮತ್ತು ಅದಾಯ

ಸಂ.

ವಿವಿರ

ತಳ ಮಟ್ಟ

ಎಫ್ ಎಫ್ ಎಸ್ ತಾಕು

ವ್ಯತ್ಯಾಸ (%)

1

ಉತ್ಪಾದನ ವೆಚ್ಚ

ಭೂಮಿ ತಯಾರಿ

2200

2200

-

ಸಾಮಗ್ರಿಗಳು

12000

12000

-

ಪರಿಕರಗಳು (ಸಸಿ ಮತ್ತು ಸಾವಯವ ಗೊಬ್ಬರ, ರಸಾಯನಿಕ ಗೊಬ್ಬರ & ಕೀಟನಾಶಕಗಳು )

15590

5125

67%

ಕೂಲಿ

15860

13260

16%

ಒಟ್ಟು

45650

32585

29%

2

ಇಳುವರಿ

18420

17800

-3%

3

ಒಟ್ಟು ಆದಾಯ

230250

222500

-3%

4

ನಿವ್ವಳ ಆದಾಯ

184600

189915

3%

ಹೆಚ್ಚಿದ ಆದಾಯ

ರೈತರಿಗೆ ಹೆಚ್ಚುವರಿಯಾಗಿ ಎಕರೆಯೊಂದಕ್ಕೆ . 5315 ರೂಪಾಯಿ ಆದಾಯ ಪಡೆದರು.ಇದಕ್ಕೆ ಕಾರಣ ಕಡಿಮೆಯಾದ ಉತ್ಪಾದನಾ ವೆಚ್ಚ ಮತ್ತು ಸುಗ್ಗಿ ಹಂಗಾಮಿನಲ್ಲಿ ಅತಿ ಹೆಚ್ಚಾಗುತ್ತಿದ್ದ ಕೃಷಿ ಗೆಟ್ ಶುಲ್ಕ . ಇಳುವರಿ ಎಕರೆ ಯೊಂದಕ್ಕೆ620 ಕೆಜಿ ಕಡಿಮೆಯಾದರೂ 3% ಆದಾಯ ಹೆಚ್ಚಾಯಿತು. ಇದೆಲ್ಲ ಆದದ್ದು ರಸಾಯನಿಕ ಕೃಷಿಯಿಂದ ಎಲ್ ಇ ಐ ಎಸ್ ಎ ಪದ್ದತಿಗೆ ಬದಲಾದ ಮೊದಲ ವರ್ಷದಲ್ಲಿ.

 

ರೈತರ ನವೀನತೆ ಹಳದಿ ಅಂಟಿನ ಬಲೆಗೆ ಸ್ಥಳಿಯ ಪರ್ಯಾಯ


ಹಳದಿ ಅಂಟಿನ ಬಲೆಯಾಗಿ ತೆಂಗಿನ ಕರಟ

ಭಾಗಿಯಾಗಿದ್ದವರು ಹಳದಿ ಅಂಟಿನ ಬಲೆಗೆ ಸ್ಥಳಿಯ ಪರ್ಯಾಯವನ್ನು ಕಂಡುಕೊಂಡರು.ತೆಂಗಿನ ಕರಟ ವನ್ನು ಸಂಗ್ರಹಿಸಿ ಹಳದಿಬಣ್ಣ ಬಳಿದರು. ಹೊರ ಮೈಗೆ ಹರಳೆಣ್ಣೆ ಹಚ್ಚಿದರು.ಇದರಿಂದ ಕೀಟಗಳನ್ನು ಹಿಡಿಯುವದು ಸಾಧ್ಯವಾಯಿತು. ಹರಳೆಣ್ಣೆಯನ್ನು ಪ್ರತಿ 3-4 ದಿನಗಳಿಗೆ ಒಮ್ಮೆ ಹಚ್ಚುವುದರಿಂದ ಕೀಟಗಳನ್ನು ಪರಿಣಾಮಕಾರಿಯಾಗಿ ಹಿಡಿಯಬಹುದಾಗಿತ್ತು.

 

ಪರಿಸರ ಸಂರಕ್ಷಣೆ ಬಗ್ಗೆ ಯುವ ಮನಸ್ಸುಗಳಲ್ಲಿ ಕಿಡಿಮೂಡಿಸುವುದು

ಮಕ್ಕಳು ಪರಿಸರ ವ್ಯವಸ್ಥೆಯ ಜೊತೆಯ ಸಂಬಂಧವನ್ನು ಅರಿಯಲು ಸಹಾಯ ಮಾಡುವುದ ಒಂದು ಅನನ್ಯ ಅನುಭವವಾಗಿತ್ತು ಮಕ್ಕಳು ತಮ್ಮ ವಿರಾಮ ಸಮಯದಲ್ಲಿ , ಎಫ್ ಎಫ್ ಎಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅವರು ಭೂ ಪರಿಶೀಲನೆ , ಚಾರ್ಟ ಗಳ ತಯಾರಿ ಅವುಗಳ ಮಂಡನೆಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲುಗೊಂಡು , ಬೆಳೆ, ಕೀಟಗಳು ಮತ್ತು ಅವುಗಳ ಸಂಬಂಧದ ಬಗೆಗೆ ಹೊಸ ಮಾಹಿತಿ ಪಡೆದರು. ,ಜತೆಗೆ ಅದನ್ನು ತಮ್ಮ ಇತರ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜತೆ ಹಂಚಿಕೊಂಡರು.


ಈ ಕಾರ್ಯ ಕ್ರಮವನ್ನು 2005 ರಲ್ಲಿ ಎ ಎಮ ಇ ಫೌಂಡೇಷನ್ ಮೈರಾಡ ಸಹಯೋಗದಿಂದ ನೆಡೆಸಿತು

ಮೂಲ: AME Foundation(http://www.amefound.org/)

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate