অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಂಪ್ರದಾಯಿಕ ಜ್ಞಾನ

ಸಾಂಪ್ರದಾಯಿಕ ಜ್ಞಾನ ಕ್ಷಾಮ ನಿವಾರಣೆಗೆ ಸಹಾಯಕ

ಕೇರಳ ರಾಜ್ಯದ ಪಾಲಕ್ಕಾಡ್‌ ಜಿಲ್ಲೆಯ ಪಾದಯಟ್ಟಿ ಗ್ರಾಮದ ಎರಿಮಯೂರನಲ್ಲಿ ಭತ್ತವು ಪ್ರಧಾನ ಬೆಳೆ. ಇಲ್ಲಿ 69 ಕುಟುಂಬಗಳಿವೆ. ಸುಮಾರು 100 ಎಕರೆಯಲ್ಲಿ ಭತ್ತ ಬೆಳೆಯುವರು.. ಕಳೆದ ವರ್ಷ ಆಗಷ್ಟ ತಿಂಗಳಲ್ಲಿ ಕೇರಳ ರಾಜ್ಯ ಜೈವಿಕ ವೈವಿದ್ಯ ಮಂಡಳಿ ಮತ್ತು ತಿರುವನಂತಪುರದಲ್ಲಿನ ತನಾಲ್, ಸ್ವಯಂ ಸೇವಾ ಸಂಘವು ಮೂರುವರ್ಷದ ಕೃಷಿ ಆಧಾರಿತ ಜೈವಿಕ-ವೈವಿದ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಲು ಸಾವಯವ ಗ್ರಾಮವನ್ನಾಗಿಸಲು ಕ್ರಮ ತೆಗೆದುಕೋಂಡಿತು.

ಇವರ ಗದ್ದೆಗಳೂ ಎರಡು ಬೆಟ್ಟಗಳ ನಡುವೆ ಇವೆ. ಮನೆಗಳು ಗದ್ದೆಗಳಿಗಿಂತ ತುಸು ದೂರದಲ್ಲಿವೆ. ಭತ್ತದ ಗದ್ದೆಗಿಂತ ಮೇಲ್ಮಟ್ಟದಲ್ಲಿವೆ ಅಲ್ಲಿನ ಸರಾಸರಿ ಮಳೆ 1200 ಮಿಮಿ. ಇಲ್ಲಿನ ಮಳೆಯು ನೈರುತ್ಯ ಮಾರುತಗಳಿಂದ ಬರುವುದು. ಕೇರಳದ ಇತರ ಭಾಗಗಳಲ್ಲಿ ಬರುವ ಈಶಾನ್ಯ ಮಾರುತಗಳ ತುಲಾವರ್ಷಂ ಮಳೆ ಇಲ್ಲಿ ಬಹು ಕಡಿಮೆ.

ಸತತ ಕ್ಷಾಮ

ಮಳೆಯಾಧಾರಿತ ಪರಿಸ್ಥಿತಿಯಲ್ಲಿ ರೈತರು ಎರಡು ಬೆಳೆ ತೆಗೆಯುತ್ತಾರೆ. ಎರಡನೆ ಬೆಳೆ ಯು ಬಹುತೇಕ ಭಾಗದಲ್ಲಿ ಜಲಕ್ಷಾಮದ ಭಯ ಯಾವಾಗಲೂ ಇರುವುದು. ಮಲಂಪುಳ ಆಣೆಕಟ್ಟಿನ ಕಾಲುವೆಯು ಗ್ರಾಮದ ಪಕ್ಕದಲ್ಲೆ ಹಾದು ಹೋಗುತ್ತದೆ. ಜನವರಿ ಕೊನೆಗೆ ಅದು ಸಹಾ ಇರುವುದಿಲ್ಲ.ಕಾಲವೆಗಿಂತ ಕೆಳ ಮಟ್ಟದಲ್ಲಿರು ಸುಮಾರು 25 ಎಕರೆ ಭೂಮಿಯಿರುವ ರೈತರು ಹೇಗೋ ಮಾಡಿಕಾಲುವೆಯಿಂದ ನೀರು ಪಡೆದು ಬೆಳೆ ಕಾಪಾಡಿಕೊಳ್ಳುವರು. ಆದರೆ ಆ ನೀರನ್ನು ಬಹು ದೂರಕ್ಕೆ ಪಂಪು ಮಾಡಲಾಗುವುದಿಲ್ಲ. ಮೇಲ್ ಮಟ್ಟದಲ್ಲಿ ಭೂಮಿ ಇರುವ ರೈತರು 2-3 ವಾರ ನೀರಿಲ್ಲದೆ ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಕುಡಿಯುವ ನೀರಿಗಾಗಿ ಅವರು ತೆರೆದ ಬಾವಿಯನ್ನು ಅವಲಂಬಿಸಿದ್ದಾರೆ. ಕೆಲವು ಸಾರ್ವಜನಿಕ ಹಾಗೂ ಖಾಸಗಿ ಬಾವಿಗಳಿವೆ. ತೆರೆದ ಬಾವಿಗಳು ಫೆಬ್ರವರಿ – ಮಾರ್ಚನಲ್ಲಿ ಒಣಗುತ್ತವೆ. ಸುಮಾರು ಹತ್ತು ಮನೆಯವರು ಕೊಳವೆ ಬಾವಿಯನ್ನು ಕೂಡಾ ಕೊರಸಿರುವರು.ಗುಡ್ಡದ ಬಹು ಭಾಗವು ಕಲ್ಲು ಬಂಡೆಗಳಿಂದ ಕೂಡಿವೆ.ಯಾವ ಗದ್ದೆಗಳಿಗೆ ಹೆಚ್ಚು ಮೇಲು ಮಣ್ಣು ಇಲ್ಲ. ಅವು ಕಲ್ಲು ಬಂಡೆಗಳಿಂದ ಕೂಡಿವೆ. ಅವುಗಳಲ್ಲಿನ ಬೆಳೆ ಬೇಗ ಒಣಗಿ ಹೋಗುತ್ತದೆ ಎಂಬುದನ್ನು ಗಮನಿಸಲಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಕೆಲ ರೈತರು ತಮ್ಮ ಹೊಲದಲ್ಲಿ ಚಿಕ್ಕ ಹೊಂಡಗಳನ್ನು ಹೊಂದಿರುವರು. ಅವನ್ನು ಸ್ಥಳಿಯವಾಗಿ ಕೊಕ್ಕರಣಿ ಎನ್ನುವರು. ಅವು ಒಂದೆರಡು ಹೊಲಗಳಿಗೆ ರಕ್ಷಣಾ ನೀರು ಒದಗಿಸುವವು. ಯಾರ ಹೊಲದಲ್ಲಿ ಕೊಕ್ಕರಣಿಗಳಿವೆಯೋ ಅವರು ಪಂಪುಗಳನ್ನು ಬಾಡಿಗೆಗೆ ಪಡೆದು ತಮ್ಮ ಭೂಮಿಗೆ ನೀರು ಪಡೆದು ಬೆಳೆ ರಕ್ಷಿಸಿ ಕೊಳ್ಳುವರು .

ಸಂಪ್ರದಾಯಿಕ ನೀರ ಅಸರೆಗಳು

ಕೊಕ್ಕರಣಿಯು ಕೃಷಿ ಹೊಂಡವಲ್ಲದೆ ಬೇರೇನೂ ಅಲ್ಲ.ಇದು ಸಾಧಾರಣವಾಗಿ ಮಣ್ಣಿನ ಕೆರೆಗಿಂತ ಚಿಕ್ಕದಿರುವುದು , (ಕುಲಂ) ತೆರೆದ ಬಾವಿಗಿಂತ ದೊಡ್ಡದಿರುವುದು..ಅದರ ಕೆಲಸವನ್ನು ಗಮನಿಸಿದರೆ ಅದನ್ನು ತಲಾಕುಲಂ( ಕಿರಿಯ ಕೆರೆ) ಗೆ ಹೋಲಿಸಬಹುದು. ಎಂದು ಹಿರಿಯ ರೈತರಾದ ಜಬ್ಬಾರ ಹೇಳುತ್ತಾರೆ. ನಮ್ಮ ಪೂರ್ವಜರು ಹನ್ನೆರಡಕ್ಕಿಂತ ಹೆಚ್ಚು ಈ ರೀತಿಯ ಕೊಕ್ಕರಣಿಗಳನ್ನು ಎತ್ತರದ ಮಟ್ಟದಲ್ಲಿ ತೋಡಿದ್ದರು ಎಂದು ನೆನಸಿಕೊಳ್ಳುತ್ತಾರೆ. “ಇವುಗಳನ್ನು ನಮ್ಮ ಪೂರ್ವಜರು ಮಲಪುರಂ ಆಣೆಕಟ್ಟು ಆಗುವ ದಶಕಗಳ ಮೊದಲೆ ನಿರ್ಮಿಸಿದ್ದರು “ಎಂದು ನೆನಸಿಕೊಳ್ಳವರು.ಇವು ಬೇಸಿಗೆಯಲ್ಲಿ ಒಣಗುವುದಿಲ್ಲ.ಫೆಬ್ರವರಿ- ಮಾರ್ಚಿನಲ್ಲಿ ಬೆಳೆಯ ಕುಯಿಲು ಆದ ಮೇಲೆ ಕೊಕ್ಕರಣಿಗಳನ್ನು ಸ್ನಾನ ಮಾಡಲೂ ಉಪಯೋಗಿಸುತ್ತಿದ್ದರು.ಅವು ಕೆಳ ಹಂತದಲ್ಲಿನ ಭತ್ತದ ಗದ್ದೆಯಲ್ಲಿನ ತೇವಾಂಶ ಹಿಡಿದಿಡುವಲ್ಲಿ ಸಹಾಯ ಮಾಡುತ್ತಿದ್ದವು,”“ ಹಾಗಾದರೆ ಎಲ್ಲಿ ತಪ್ಪಾಯಿತು?“ ಕುಟುಂಬಗಳು ವಿಭಜನೆಯಾಗುತ್ತಾ ಹೋದಂತೆ ಬೂಮಿಯೂ ಹರಿದು ಹಂಚಿ ಹೋಯಿತು. ಭೂಮಿಯ ಮೇಲೆ ಒತ್ತಡ ಜಾಸ್ತಿಯಾಯಿತು. ಮರಗೆಣಸಿನ ಬೆಳೆಯು ಕೊಕ್ಕರಣಿಯ ಜಲಾಯನ ಪ್ರಧೇಶಗಳಿಗೂ ಕೂಡಾ ಹರಡಿತು .ಇದು ಜಲ ಪ್ರದೇಶಗಳಿಗೆ ಮರಣಮೃದಂಗ ಬಾರಿಸಿತು.ಮಣ್ಣು ಸಡಿಲವಾಗಿ ಅವುಗಳಲ್ಲಿ ಶೇಖರಣೆಯಾಗತೊಡಗಿತು. ಈಗ ನಮ್ಮ ಪೂರ್ವಜರು ಕಷ್ಟಪಟ್ಟು ನಿರ್ಮಿಸಿದ್ದ ಜಲಾಗರಗಳ ಗುರುತೂ ಕೂಡಾ ಕಾಣದಾಗಿದೆ.”ಒಂದು ದಶಕದ ಹಿಂದೆ , ಬರಗಾಲವು ಭೀಕರವಾಗಿದ್ದಾಗ ಕೃಷಿ ಸಮುದಾಯವು ತಮ್ಮಪುರಾತನ ಕೊಕ್ಕರಣಿ ಗಳನ್ನು ನೆನಸಿಕೊಂಡರು., ಸುಮಾರು ಹತ್ತು ಹನ್ನರಡು ರೈತರಿಗೆ ತಮ್ಮ ಹೊಲದ ಪಕ್ಕದಲ್ಲೆ ಕೊಕ್ಕರಣಿಗಳು ಇದ್ದವು.ಜಬ್ಬಾರನು ಕೂಡಾ ಎರಡು ಕೊಕ್ಕರಣಿಗಳನ್ನು ತೋಡಿದ್ದ.ಅವುಗಳಿಗೆ ಸುಮಾರು .15,000 ರೂಪಾಯಿ ವೆಚ್ಚ ತಗುಲಿತ್ತು.. “ ಇಲ್ಲಿನ ಮಣ್ಣು ಸಡಿಲವಾದ್ದರಿಂದ , ಅದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಹೋಗುತ್ತದೆ. ಅವು ಹತ್ತು ವರ್ಷ ದ ವರೆಗೆ ಉಪಯುಕ್ತವಾಗಲು ಅವುಗಳ ಒಳಗೆ ಕಲ್ಲಿನ ಗೋಡೆ ಕಟ್ಟಿಸಬೇಕು. ಅದು ಬಹು ದುಬಾರಿಯಯಾದ ಕೆಲಸ.” ಜಬ್ಬಾರ ಹೇಳಿದರು.ಪಾದಯಟ್ಟಿಯ ಮೂರು ನಾಲಕ್ಕು ರೈತರು ಆರೀತಿಯ ತಡೆಗೋಡೆಗಳನ್ನು ಕಟ್ಟಿಸಿದ್ದಾರೆ. ಮಾನ ಸೂನು ಬರುವ ಮುಂಚೆ ಕಲ್ಲಿನ ಗೋಡೆಯ ಬದಲಾಗಿ ಸಾಲು ಸಾಲಾಗಿ ವೆಟಿವೆರ್ ಗಳನ್ನು ನೆಟ್ಟಿದ್ದಾರೆ. ಇದು ಮೊದಲನೆ ಹಂಗಾಮಿನಲ್ಲೆ ಅಗ್ಗವಾದ ಮತ್ತು ಪರಿಣಾಮಕಾರಿ ಪರ್ಯಾಯ ವಾಯಿತು.

ಮಲಂಪುಳ ಆಣೆಕಟ್ಟಿನ ನೀರು ಬಾರದೆ ಇರವಲ್ಲಿ , ಕೊಕ್ಕರಣಿಗಳು ಈಗಲೂ ಇವೆ ಮತ್ತು ಅವನ್ನು ಎರಿಮಯೂರು ಪಂಚಾಯತಿಯು ನೋಡಿಕೊಳ್ಳುತ್ತಿದೆ.ಕುಲಸ್ಸೆರಿ ಯಲ್ಲಿ ಅನೇಕyಕೊಕ್ಕರಣಿಗಳಿವೆ. ಅದೇ ರೀತಿಯಲ್ಲಿ ಕುತ್ತನೂರು ಪಂಚಾಯತನ ಮರುದಾಂತದಮ್ ನಲ್ಲೂ ಇವೆ. ಕೊಕ್ಕರಣಿಗಳ ಇನ್ನೊಂದು ಅನುಕೂಲ ಎಂದರೆ ಅದರೀಂದ ಸಾವಕಾಸ ವಾಗಿ ಇಂಗುವ ನೀರು ಬೂಮಿಯ ಮೇಲ್ ಮಣ್ಣಿನ ತೇವಾಂಶವನ್ನು ಕಾಪಾಡುವುದು ಮತ್ತು ಅಂತರ್ ಜಲ ಮಟ್ಟವನ್ನು ಹೆಚ್ಚಿಸುವುದು ಈ ಮಳೆ ನೀರ ಹಿಡಿದಿಡುವ ಪ್ರದೇಶದಲ್ಲ್ಲಿಹೊಂಡಗಳನ್ನು ಎತ್ತರದ ಪ್ರದೇಶದಲ್ಲಿ ಅಗೆದರೆ ತುಂಬ ಅನುಕೂಲ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಈ ರೀತಿಯ ರಚನೆಗಳು ಪ್ರತಿ ಕುಟುಂಬದ ಭತ್ತದ ಗದ್ದೆಗಳಲ್ಲಿ ಇರುತ್ತಿದ್ದವು. ಇತ್ತೀಚೆಗೆ ಜನರು ಇವುಗಳು ಗದ್ದೆಗಳಿಗೆ ಮತ್ತು ಅಂತರ್ ಜಲ ಕಾಪಾಡುವಲ್ಲಿ ನೀಡುವ ಕೊಡುಗೆಯನ್ನು ಮರೆತಿದ್ದಾರೆ. ಜಲಾನಯನ ಪ್ರಧೇಶವು ಕಲ್ಲುಬಂಡೆಗಳಿಂದ ಕೂಡಿದ್ದರೆ , ಎಲ್ಲ ರೈತರು ಹೊಂಡವನ್ನು ಎತ್ತರದ ಪ್ರಧೇಶದಲ್ಲಿ ತೋಡಬೇಕು. ಆಗ ಕೆಳ ಮಟ್ಟದ ಭೂಮಿಗೆ ಅದರ ಪರಿಣಾಮ ವಾಗಿ ನೀರು ಸಾವಕಾಶವಾಗಿ ಬಸಿಯುವುದು. ಒಟ್ಟಾರೆ ಪರಿಣಾಮದಿಂದ ಎರಡನೆ ಬೆಳೆ ಯಾದ ಭತ್ತವನ್ನು ಪಡೆದ ನಂತರ ದ್ವಿದಳ ಧಾನ್ಯಗಳಾದ ಹುರುಳಿ ಅಥವ ಉದ್ದನ್ನು ಬೆಳೆಯಬಹುದು

೫% ಮಾದರಿ

ಪಿ ಆರ್ ಎ ಡಿ ಎ ಎನ್ (ಪ್ರದನ್  ) ವೃತ್ತಿಪರ ಸಹಾಯ ಅಭಿವೃದ್ಧಿ ಕ್ರಿಯೆಗೆ, ಬಿಹಾರದ ಒಂದು ಸರಕಾರೇತರ ಸಂಸ್ಥೆಯು ಇದೆ ರೀತಿಯ ಸಂರಚನೆಯನ್ನು ಜನಪ್ರಿಯ ಗೊಳಿಸಿದೆ. ಅದನ್ನು ಐದು ಶತಾಂಶ ಮಾದರಿ ಎನ್ನುವರು. ದೀನ ಬಂಧು ಕರ್ಮಕರ್, ಪ್ರದನ್  ಕಾರ್ಯ ಕ್ರಮ ನಿರ್ಧೇಶಕರು. ವಿವರಿಸುತ್ತಾರೆ “ ಈ ಚಿಂತನೆಯು ಮೊದಲಲ್ಲಿ ಪುರುಲಿಯಾ ಜಿಲ್ಲೆಯ ಮಳೆಯಾಧಾರಿತ ಭತ್ತದ ಬೆಳೆಯನ್ನು ಸೆಪ್ಟಂಬರ್ ನಿಂದ ಶುರುವಾಗುವ ಶುಷ್ಕ ಹವಾಮಾನದಲ್ಲಿ ಸಾಮಾನ್ಯವಾಗಿ ತಿತಯಾ ಎಂದು ಕರೆಯುವ ಕಾಲದಲ್ಲಿ ಬೆಳೆ ರಕ್ಷಿಸಲು ಪ್ರಾರಂಭಿಸಲಾಯಿತು.ಈ 5% ಮಾದರಿಯ ಮೂಲಚಿಂತನೆಗೆ ಪ್ರತಿ ಸಾಗು ಮಾಡುವ ಭೂಭಾಗದಲ್ಲಿ ನೀರಿನ ಆಸರೆ ಇರಬೇಕು.ಅದು ಮಳೆಗಾಲದಲ್ಲಿ ಬೀಳುವ ಮಳೆನೀರ ೫ % ಅನ್ನು ಹರಿದು ಹೋಗದಂತೆ ಹಿಡಿದಿಟ್ಟುಕೊಳ್ಳ ಬೇಕು. ಗುಂಡಿಗಳಲ್ಲಿ ಶೇಖರವಾದ ನೀರು ಸಂಕಷ್ಟ ಸಮಯದಲ್ಲಿ ನೀರು ಒದಗಿಸ ಬಹುದು. ಆ ಗುಂಡಿಯ ಹೊಲದ ಕೆಳಗಿನ ಭಾಗಕ್ಕೆ ನೆಲ ದೊಳಗೆ ನೀರ ಹರಿವಿಗೆ ಅನುಕೂಲ ಮಾಡಿಕೊಡುವುದು ಮತ್ತು ಪೂರ್ಣ ಪ್ರದೇಶದ ತೇವಾಂಶವನ್ನು ಮರು ನವೀಕರಿಸುವುದು.

ಪಾದಯತ್ತಿಯಲ್ಲಿ ಅವರ ಸಾಂಪ್ರದಾಐಕ ಬೆಳೆಯಾದ– 120ದಿನಗಳ ಅವಧಿಯ ಭತ್ತವನ್ನು ಬೆಳೆಯುತ್ತಾರೆ. ಅದರಿಂದ ಕಡಿಮೆ ಅವಧಿಯ ಬೆಳೆಗೆ ಬದಲಾಯಿಸಿ ಕೊಳ್ಳುವುದು ಮತ್ತು ಎಸ್ ಆರ್ ಐ ವಿಧಾನಕ್ಕೆ ಆತಂಕ ಕಾರಿ ಭತ್ತದ ಗದ್ದೆಗೆ ನೀರಿನ ಕೊರತೆಯ ಕಾಲ ಎದುರಿಸಲು ಇರುವ ಎರಡು ವಿಧಾನಗಳಲ್ಲಿ ..ಥಾನಲ್ ಯಶಸ್ವಿಯಾಗಿ ಶ್ರೀ ವಿಧಾನವನ್ನುನ ಗುತ್ತಿಗೆಗೆ ಪಡೆದ ಭತ್ತದ ಗದ್ದೆಗಳಲ್ಲಿ ಪ್ರಾತ್ಯಕ್ಷಿಕೆ ಕೃಷಿ ಮಾಡಿ ತೋರಿಸಿದೆ.

ಈಗ , ಹಲವು ಅರಿವು ಮೂಡಿಸುವ ಕಾರ್ಯಾಗಾರಗಳ ನಂತರ ಪದಯಾತ್ತಿಯ ಜನರು ಹೆಚ್ಚು ಹೊಸ ಕೊಕ್ಕರ್ಣೀಗಳನ್ನು ತೋಡಲು ಸಿದ್ಧರಾದರು .ಅದರಿಂದ ಬರವನ್ನು ಎದುರಿಸುವ ಶಕ್ತಿ ಬಂದಿತು. ಈಗಾಗಲೆ.50 ಶತಾಂಶ ಭಾಗದಲ್ಲಿ ಸಾವಯವ ಕೃಷಿಗೆ ಪರಿವರ್ತನೆಯಾಗಿದ್ದಾರೆ .ಕೇರಳದ ಸರ್ಕಾರೇತರ ಪರಿಸರ ಸಂಸ್ಥೆಯ ಎಸ್ ಉಷಾ ಹೇಳುತ್ತಾರೆ. ಸುಮಾರು ಡಜನ್ ಮನೆಗಳವರು ರಸ ಗೊಬ್ಬರ ಬಳಸದೆ ಸಾವಯವ ಪದ್ದತಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.ಪದಯಟ್ಟಿಯು ಸಾವಧಾನವಾಗಿ ಎರಡನೆ ಸ್ವಾತಂತ್ರ್ಯದೆಡೆಗೆ ಸಾಗುತ್ತಿದೆ.ಯಾರಿಗೆ ಗೊತ್ತು , ಕೆಲವೆ ವರ್ಷಗಳಲ್ಲಿ ಪದಯೆಟ್ಟಿಯು ಪಾಲಕ್ಕಾಡಿನ ಬರಪೀಡಿತ ಭತ್ತದ ಗದ್ದೆಗಳಿಗೆ ಪಾಠ ಕಲಿಸಬಹುದು. ಇದರ ಉತ್ತಮ ಅಂಶವೆಂದರೆ ಹಿಂದಿನ ಅನುಭವದ ಮರುನವೀಕರಣ.

ಮೂಲ: ಶ್ರೀ  ಪಾದ್ರಿ , ವಾಟರ್  ಜರ್ನಲಿಸ್ಟ್ , ಪೋಸ್ಟ್  ವನಿನಗರ್  ವಿಯ : ಪೆರ್ಲ  - ಕೇರಳ , ೬೭೧  ೫೫೨

ಕೊನೆಯ ಮಾರ್ಪಾಟು : 6/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate