ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೂಗಳ ರಕ್ಷಣೆ

ತೋಟಗಾರಿಗೆ ತುಂಬಾ ತಾಳ್ಮೆ ಮತ್ತು ದೃಢತೆ ಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಚಳಿಗಾಲದ ಸಮಯದಲ್ಲಿ ತೋಟಗಾರಿಕೆಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆ ಬೇಕಾಗುತ್ತದೆ.

ಚಳಿಗಾಲದಲ್ಲಿ ಕೋಮಲ ಹೂಗಳ ರಕ್ಷಣೆ ಹೇಗೆ ?

ತೋಟಗಾರಿಗೆ ತುಂಬಾ ತಾಳ್ಮೆ ಮತ್ತು ದೃಢತೆ ಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಚಳಿಗಾಲದ ಸಮಯದಲ್ಲಿ ತೋಟಗಾರಿಕೆಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆ ಬೇಕಾಗುತ್ತದೆ. ಶೀತ ಮಾರುತದಿಂದಾಗಿ ನವಿರಾದ ಸಸ್ಯಗಳಿಗೆ ಹಾನಿಯಾಗಬಹುದು. ತುಂಬಾ ಸೂಕ್ಷ್ಮವಾಗಿರುವ ಹೂಗಳನ್ನು ಚಳಿಗಾಲದಲ್ಲಿ ರಕ್ಷಿಸುವುದು ತುಂಬಾ ಕಠಿಣ ಕೆಲಸ. ತೋಟದಲ್ಲಿ ಸ್ವಲ್ಪ ಸಮಯ ಕಳೆದರೆ ಚಳಿಗಾಲದಲ್ಲಿ ಕೋಮಲವಾಗಿರುವ ಹೂಗಳನ್ನು ಸುಲಭವಾಗಿ ರಕ್ಷಿಸಬಹುದು.

ಚಳಿಗಾಲದಲ್ಲಿ ಕೋಮಲವಾಗಿರುವ ಹೂಗಳನ್ನು ರಕ್ಷಿಸಲು ಚಳಿಗಾಲದ ತೋಟಗಾರಿಕೆಯ ಕೆಲವೊಂದು ಟಿಪ್ಸ್ ಗಳಿವೆ. ನೀವು ವಾಸಿಸುವ ಪ್ರದೇಶದಲ್ಲಿ ಚಳಿಯ ಪ್ರಭಾವ ಎಷ್ಟು ಇದೆ ಎನ್ನುವುದರ ಮೇಲೆ ಕೋಮಲವಾಗಿರುವ ಹೂಗಳನ್ನು ರಕ್ಷಿಸಲು ವಿಧಾನಗಳನ್ನು ಬಳಸಬಹುದು. ಶೀತ ಮಾತ್ರ ನಿಮ್ಮ ಹೂಗಳ ಮೇಲೆ ಪರಿಣಾಮ ಬೀರುವುದಲ್ಲ, ಚಳಿಗಾಲದ ಮಾರುತಗಳು ಇದಕ್ಕೆ ಹಾನಿಯನ್ನುಂಟುಮಾಡಬಹುದು. ಚಳಿಗಾಲದ ಹವಾಮಾನವು ಕೋಮಲವಾಗಿರುವ ಹೂಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಚಳಿಗಾಲದಲ್ಲಿ ನಿಮ್ಮ ಹೂದೋಟವು ಬಣ್ಣಬಣ್ಣದಿಂದ ಕಂಗೊಳಿಸಲು ನೀವು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಹೂಗಳಿಗೆ ಶೀತಗಾಳಿಯಿಂದ ರಕ್ಷಣೆ ಮತ್ತು ಸರಿಯಾದ ತಾಪಮಾನ ಅತ್ಯಗತ್ಯ. ಚಳಿಗಾಲದಲ್ಲಿ ಕೋಮಲವಾಗಿರುವ ಹೂಗಳಿಗೆ ಸಾಕಷ್ಟು ನಿರೋಧಕಗಳನ್ನು ನೀಡುವಂತಹ ವಿಧಾನಗಳನ್ನು ಅನುಸರಿಸಿ. ಸರಳವಾಗಿರುವ ಆಶ್ರಯ ಸಸ್ಯಗಳಿಗೆ ಹೆಚ್ಚಿನ ರಕ್ಷಣೆ ನೀಡಲಿದೆ. ಇಲ್ಲಿರುವ ಕೆಲವೊಂದು ಟಿಪ್ಸ್ ಗಳನ್ನು ನೀವು ಪ್ರಯತ್ನಿಸಬಹುದು. ಕೋಮಲವಾಗಿರುವ ಹೂಗಳ ಬಗ್ಗೆ ಚಿಂತಿಸದೆ ಈ ಚಳಿಗಾಲವನ್ನು ನಿಮ್ಮ ಹೂದೋಟದಲ್ಲಿ ಆನಂದಿಸಿ.

ಹೊದಿಕೆ

ಚಳಿಗಾಲದ ಒರಟು ಗಾಳಿಯಿಂದ ಸಸ್ಯಗಳನ್ನು ರಕ್ಷಿಸುವುದು ತುಂಬಾ ಮುಖ್ಯ. ಹೊದಿಕೆ ಹಾಕುವುದರಿಂದ ಚಳಿಗಾಲದ ಶೀತ ಹಾಗೂ ಒಣ ಗಾಳಿಯಿಂದ ಹೂಗಳನ್ನು ರಕ್ಷಿಸಬಹುದು. ಮೊಗ್ಗುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಸ್ಯಗಳನ್ನು ಹೊದಿಕೆ ಮಾಡಿ.

ಮಡಕೆಗಳಲ್ಲಿ ಸಸ್ಯ

ಶೀತ ಹವಾಮಾನವು ಯಾವುದೇ ರೀತಿಯ ಪರಿಣಾಮ ಬೀರಬಾರದು ಎಂದಿದ್ದರೆ ಆಗ ಹೂಬಿಡುವ ಸಸ್ಯಗಳನ್ನು ಮಡಕೆಗಳಲ್ಲಿ ಇಡುವುದರಿಂದ ನಿಮಗೆ ನೆರವಾಗಲಿದೆ. ಚಳಿಗಾಲದ ಹೂತೋಟದ ಟಿಪ್ಸ್ ಗಳು ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಯಾಕೆಂದರೆ ಸಸ್ಯಗಳನ್ನು ನೀವು ಸೂರ್ಯನ ಬೆಳಕಿನಲ್ಲೂ ಇಡಬಹುದು.

ಒಳಾಂಗಣದಲ್ಲಿಡಿ

ಚಳಿಗಾಲದಲ್ಲಿ ಕೋಮಲವಾಗಿರುವ ಹೂಗಳನ್ನು ರಕ್ಷಿಸಲು ಒಳ್ಳೆಯ ವಿಧಾನವೆಂದರೆ ಸಸ್ಯಗಳನ್ನು ಮನೆಯ ಒಳಗಿಡಿ. ಇದರಿಂದ ನಿಮ್ಮ ಕೋಣೆಗೆ ಅಂದ ಬರುತ್ತದೆ ಮತ್ತು ಚಳಿಗಾಲವನ್ನು ಸುಂದರವಾಗಿಸುತ್ತದೆ.

ಸರಿಯಾದ ಸಮಯದಲ್ಲಿ ಇದನ್ನು ಮಾಡಿ

ಚಳಿಗಾಲದಲ್ಲಿ ಕೋಮಲವಾದ ಹೂಗಳನ್ನು ರಕ್ಷಿಸಲು ನೀವು ಬಯಸಿದ್ದರೆ ಆಗ ಋತುವಿನ ಆಗಮನಕ್ಕೆ ಮೊದಲೇ ಯೋಜನೆ ಹಾಕಿಕೊಳ್ಳಬೇಕು. ಚಳಿಗಾಲದ ಆಗಮನದ ಬಳಿಕ ಹೂಗಳನ್ನು ರಕ್ಷಿಸಲು ನೀವು ಪ್ರಯತ್ನಿಸುತ್ತಿದ್ದರೆ ಆಗ ಅದು ತುಂಬಾ ವಿಳಂಬ ಮತ್ತು ಹೂಗಳಿಗೆ ಹಾನಿಯಾಗಿರುತ್ತದೆ.

ತಾತ್ಕಾಲಿಕ ಹಸಿರುಮನೆ

ಚಳಿಗಾಲದಲ್ಲಿ ಕೋಮಲವಾಗಿರುವ ಹೂಗಳನ್ನು ರಕ್ಷಿಸಲು ಅತ್ಯುತ್ತಮ ವಿಧಾನವೆಂದರೆ ತಾತ್ಕಾಲಿಕ ಹಸಿರುಮನೆಯ ನಿರ್ಮಾಣ ಮಾಡುವುದು. ಹಸಿರುಮನೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಬಯಸದಿದ್ದರೆ ಆಗ ನೀವು ಹೂಪ್ ಶೈಲಿಯ ಹಸಿರು ಮನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ನೀವು ಪಿಬಿಸಿ ಪೈಪ್ ಮತ್ತು ವಿಸ್ ಕ್ವೀನ್ ಬಳಸಿ ತಯಾರಿಸಬಹುದು.

ಮುಚ್ಚಿಡಿ

ತುಂಬಾ ಒರಟಾದ ಚಳಿಗಾಲವನ್ನು ನಿರೀಕ್ಷಿಸುತ್ತಿದ್ದರೆ ಆಗ ಕೋಮಲವಾದ ಹೂಗಳನ್ನು ರಕ್ಷಿಸಲು ನೀವು ಅವುಗಳನ್ನು ಮುಚ್ಚಿಡಬೇಕಾಗುತ್ತದೆ. ಹಳೆಯ ಕಂಬಳಿ, ಬಟ್ಟೆ ಅಥವಾ ಸಸ್ಯಗಳನ್ನು ಮುಚ್ಚಿಡುವಂತಹ ಕವರ್ ಗಳನ್ನು ಬಳಸಬಹುದು. ಸೂರ್ಯನ ಬೆಳಕು ಬೀಳಲು ಇದನ್ನು ತೆಗೆಯಲು ಮರೆಯಬೇಡಿ.

ಚಳಿಗಾಲಕ್ಕೆ ಮೊದಲು ಗೊಬ್ಬರ ಹಾಕಿ

ಚಳಿಗಾಲಕ್ಕೆ ಎರಡು ತಿಂಗಳ ಮೊದಲು ಸರಿಯಾದ ರೀತಿಯಲ್ಲಿ ಗೊಬ್ಬರ ಹಾಕುವುದು ತುಂಬಾ ಮುಖ್ಯ. ದೊಡ್ಡ ಮಟ್ಟದ ಕಟಾವು ಅಥವಾ ಕತ್ತರಿಸುವಿಕೆ ಮಾಡಬೇಡಿ. ಇದರಿಂದ ಚಳಿಗಾಲದಲ್ಲಿ ಹೊಸ ಹೂಗಳು ಅರಳುವುದನ್ನು ತಡೆಯಲು ಈ ಟಿಪ್ಸ್ ನೆರವಾಗಲಿದೆ.

ಹಸಿ ಗೊಬ್ಬರ ಹಾಕ

ಚಳಿಗಾಲದಲ್ಲಿ ತುಂಬಾ ಶೀತ ಹವಾಮಾನವಿದ್ದರೆ ಹಸಿ ಗೊಬ್ಬರವನ್ನು ಹೂಬಿಡುವ ಸಸ್ಯಗಳ ರಕ್ಷಣೆಗೆ ಬಳಸಬಹುದು. ಸಸ್ಯಗಳ ಸುತ್ತ ಗೋಣಿತಾಟು ಬಳಸಿ. ಇದರ ಬಳಿಕ ಒಣಗಿದ ಎಲೆಗಳು ಅಥವಾ ಪೇಪರ್ ಹಾಕಿ ಮುಚ್ಚಿ.

ರಟ್ಟು ಬಳಸಿ

ಚಳಿಗಾಲದ ಶೀತ ಮಾರುತದಿಂದ ಹೂಬಿಡುವ ಸಸ್ಯಗಳನ್ನು ರಟ್ಟುಗಳಿಂದ ಸುತ್ತಿ ರಕ್ಷಿಸಬಹುದು. ರಟ್ಟಿನ ಮಧ್ಯದಲ್ಲಿ ಎಲೆಗಳು ಅಥವಾ ಪೇಪರ್ ಹಾಕಿ. ಚಳಿಗಾಲದಲ್ಲಿ ಕೋಮಲ ಹೂಗಳನ್ನು ಬಿಡುವ ಸಸ್ಯಗಳನ್ನು ರಕ್ಷಿಸಲು ಇದು ಒಳ್ಳೆಯ ಟಿಪ್ಸ್.

ಮೂಲ : ಬೋಲ್ಡ್ ಸ್ಕೈ(http://kannada.boldsky.com/ )

3.0119047619
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top