ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಕೋಶ / ಅರಣ್ಯಾಭಿವೃದ್ಧಿ ಚಟುವಟಿಕೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅರಣ್ಯಾಭಿವೃದ್ಧಿ ಚಟುವಟಿಕೆಗಳು

ಅರಣ್ಯಾಭಿವೃದ್ಧಿ ಚಟುವಟಿಕೆಗಳ ಬಗ್ಗೆ

ಜಲಾನಯನ ಪ್ರದೇಶದ ಟ್ರಾನ್ಸಾಕ್ಸ್ ವಾಕ್ ಮತ್ತು Pಖಂ ಚಟುವಟಿಕೆಗಳನ್ನು ಕೈಗೊಂಡು ಜಲಾನಯನ ಪ್ರದೇಶದ ಪರಿಚಯ ಹೊಂದಿ ಕೆಳಗಿನ ವಿವಿಧ ಅರಣ್ಯೀಕರಣ ಚಟುವಟಿಕೆಗಳನ್ನು ಒಳಗೊಂಡ ಒಂದು ಸಮಗ್ರ ಅರಣ್ಯೀಕರಣ ಯೋಜನೆಯನ್ನು ಹಮ್ಮಿಕೊಳ್ಳಬೇಕಾಗಿದೆ.

1.            ಫಾರ್ಮ ಫಾರೆಸಟ್ರಿ / ಕೃಷಿ ಅರಣ್ಯೀಕರಣ.

2.            ಸಮುದಾಯ ಪ್ರದೇಶದಲ್ಲಿ ಅರಣ್ಯೀಕರಣ.

3.            ನಾಲಾಬದು ಉಪಚಾರ.

4.            ನಾಲಾಬದು, ತಡೆ ಅಣೆ, ರಬಲ್ ತಡೆ, ಗುಂಡುಕಲ್ಲು ತಡೆಗಳನ್ನು ಬಲಗೊಳಿಸಲು ಸಸಿಗಳನ್ನು ನಾಟಿ ಮಾಡುವ ಕಾರ್ಯಕ್ರಮ.

5.            ಸಮಪಾತಳಿ ಬದುಗಳ ಮೇಲೆ ಸಸಿಗಳನ್ನು ನಾಟಿ ಮಾಡುವುದು.

6.            ಬದುಗಳ ಮೇಲೆ ಬೀಜ ಬಿತ್ತನೆ.

•             ಮೇಲಿನ ವಿವಿಧ ಚಟವಟಿಕೆಗಳನ್ನು ಒಳಗೊಂಡ ವಿಸ್ತಾರವಾದ ಜಲಾನಯನ ಅರಣ್ಯೀಕರಣ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ತಾಲ್ಲೂಕು/ಜಿಲ್ಲಾ ಜಲಾನಯನ ಅಭಿವೃದ್ಧಿ ತಂಡ ಹೊಂದಿದೆ.

•             ನರ್ಸರಿ ಚಟುವಟಿಕೆಗಳನ್ನು ಒಂದು ವರ್ಷ ಮುಂಚಿತವಾಗಿ ಯೋಜಿಸತಕ್ಕದ್ದು, ಅರಣ್ಯೀಕರಣ ಕಾರ್ಯಕ್ರಮಗಳನ್ನು ಯೋಜನೆಯ ಪ್ರಾರಂಭಿಕ ಹಂತದಲ್ಲಿ ಪೂರ್ಣಗೊಳಿಸುವುದರಿಂದ ಉತ್ತಮ ನೆಡುತೋಪು ಬೆಳೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಅರಣ್ಯೀಕರಣ ಕಾರ್ಯಕ್ರಮಗಳನ್ನು ಮೊದಲ 3 ವರ್ಷಗಳಲ್ಲಿ ಯೋಜಿಸಿ ಅನುಷ್ಠಾನಗೊಳಿಸುವುದು ಉತ್ತಮ.

•             ಅರಣ್ಯೀಕರಣ ಯೋಜನೆಯ ಕುರಿತಾಗಿ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕ್ರೋಢೀಕರಿಸಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಒಪ್ಪಿಸುವರು.

•             ಕ್ರಿಯಾ ಯೋಜನೆಯ ತಾಂತ್ರಿಕ ಅನುಮೋದನೆ ಹಾಗೂ ಮಾದರಿ ಡಾಟಾ ಶೀಟ್‍ಗಳ ಮಂಜೂರಾತಿಯನ್ನು ಅರಣ್ಯ ಅಂರಕ್ಷಣಾಧಿಕಾರಿಗಳು ನೀಡುವರು.

ನರ್ಸರಿ / ಸಸ್ಯ ಕ್ಷೇತ್ರ:

ವಿವಿಧ ಅಗ್ರೋ ಕ್ಲೈಮಾಟಿಕ್ ಜೋನ್‍ಗಳಿಗೆ ಸೂಕ್ತವಾದ ವಿವಿಧ ಜಾತಿಯ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಲು ವಲಯ ಅರಣ್ಯ ಅಧಿಕಾರಿಗಳು ಕ್ರಮ ಜರುಗಿಸುವರು. ಆನವರಿ ಅಂತ್ಯಕ್ಕೆ ನರ್ಸರಿಯಲ್ಲಿ ಸಸಿಗಳ ದಾಸ್ತಾನು ಇರತಕ್ಕದ್ದು. ಇದರಿಂದ ಸಸಿಗಳು ನರ್ಸರಿಯಲ್ಲಿ ಬೆಳೆವಣಿಗೆ ಹೊಂದಲು ಕನಿಷ್ಠ 5-6 ತಿಂಗಳು ಅವಧಿ ದೊರಕಲಿದೆ.ಸಮುದಾಯ ಭೂಮಿ / ಸಂಸ್ಥೆಗಳ ಭೂಮಿಯಲ್ಲಿ ನೆಡಲು 18-20 ತಿಂಗಳು ಎತ್ತರವಾದ ಸಸಿಗಳನ್ನು ಬೆಳೆಸತಕ್ಕದ್ದು.

•             ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ನರ್ಸರಿ ಗುಣಮಟ್ಟ ಉಸ್ತುವಾರಿ ನಿರ್ವಹಿಸುವರು. ಸಸ್ಯ ಕ್ಷೇತ್ರ ನಿರ್ವಹಣೆಯಲ್ಲಿ ಕಾಲ ಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ಆಯುಕ್ತಾಲಯದಿಂದ ಜಾರಿ ಮಾಡಿರುವಂತೆ ಪಾಲಿಸುವುದು.

•             ನೆಡುತೋಪು ಕಾರ್ಯಕ್ರಮಕ್ಕೆ ಉತ್ತಮ ಗುಣಮಟ್ಟದ ಕಸಿ ಸಸಿಗಳನ್ನು ಘಟಕದ ಮುಖ್ಯಸ್ಥರಿಂದ ಅನುಮೋದನೆ ಪಡೆದು ಅರಣ್ಯ ಇಲಾಖೆಯ ಸಂಶೋಧನಾ ಘಟಕದಿಂದ ಪೂರೈಸಿಕೊಳ್ಳಬಹುದಾಗಿದೆ. ನರ್ಸರಿ ಚಟುವಟಿಕೆಗಳ ವಿವರ ಮತ್ತು ದಾಸ್ತಾನುಗಳ ವಹಿಯನ್ನು ಸಸ್ಯ ಕ್ಷೇತ್ರಗಳಲ್ಲಿ ನಿರ್ವಹಿಸತಕ್ಕದ್ದು.

 

 

 

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ:

•             ಉತ್ಕøಷ್ಟ ಸಸಿಗಳನ್ನು ಬೆಳೆಸಿ ಜಲಾನಯನ ರೈತರ ಬೇಡಿಕೆ ಪರಿಗಣಿಸಿ ನಾಟೆ ಮಾಡಬೇಕಾಗುತ್ತದೆ. ಇದನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಎಂದು ಪರಿಗಣಿಸಿದೆ. ಕೃಷಿ ಅರಣ್ಯ ಮಾದರಿಯಲ್ಲಿ ರೈತರ ಜಮೀನು ಉಪಚರಿಸುವಾಗ ಪ್ರತಿ ಹೆಕ್ಟೇರ್‍ಗೆ 100 ಉತ್ಕøಷ್ಟ ಸಸಿಗಳನ್ನು ನಾಟಿ ಮಾಡತಕ್ಕದ್ದು.

•             ಕೃಷಿ ಅರಣ್ಯ ಕಾರ್ಯಕ್ರಮದಡಿ ಸಸಿಗಳನ್ನು ನಾಟಿ ಮಾಡುವ ವರ್ಷ / ಋತುಮಾನದಲ್ಲಿ ಮಾತ್ರ ಕಳೆ ತೆಗೆಯುವ ಕಾರ್ಯ ಹಾಗೂ ಮಣ್ಣು ಹದ ಮಾಡುವ ಕಾರ್ಯ ಕೈಗೊಂಡು ನಂತರ ಮುಂದಿನ ನಿರ್ವಹಣೆ ರೈತರಿಗೆ ವಹಿಸುವುದು. ಫಲಾನುಭವಿ ರೈತರಿಗೆ ಮುಂದಿನ ಎರಡು ಹಾಗೂ ಮೂರನೆ ವರ್ಷ ಸಸಿಗಳನ್ನು ನಿರ್ವಹಿಸಲು ಬಿಡುತ್ತಿದ್ದು ಇದಕ್ಕೆ ಅವಶ್ಯವಾದ ತರಬೇತಿ ನೀಡತಕ್ಕದ್ದು. ಸಾಮಾನ್ಯ ಮಾರ್ಗಸೂಚಿಯ ಪ್ಯಾರಾ 9.6 ಕಂಡಿಕೆ 73 ರಂತೆ ಎನ್ ಆರ್ ಎಂ ಕುರಿತಾಗಿ ಫಲಾನುಭವಿಗಳಿಂದ ವಂತಿಗೆ ಪಡೆಯುವುದು.

ಸಮಗ್ರ ನಿರ್ವಹಣೆ;

ಸೂಕ್ತ ಜಾತಿಯ ಎತ್ತರದ ಸಸಿಗಳನ್ನು ನರ್ಸರಿಗಳನ್ನು ಬೆಳೆಸಿ ಸಮುದಾಯ ಅಥವಾ ಫಲಾನುಭವಿ ರೈತರ ಕೃಷಿ ಜಮೀನಿನಲ್ಲಿ ಪ್ರತಿ ಹೆಕ್ಟೇರ್‍ಗೆ ಕನಿಷ್ಠ 400 ಸಸಿಗಳಂತೆ ನಾಟಿ ಮಾಡಿ ರಕ್ಷಣಾ ಬೇಲಿ ನಿರ್ಮಿಸಿ ಅಗತ್ಯ ರಸಗೊಬ್ಬರ / ಕೊಟ್ಟಿಗೆ ಗೊಬ್ಬರ ಪ್ರೊಟೆಕ್ಟವ್ ಇರಿಗೇಷನ್ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಒಟ್ಟು ಮೂರು ವರ್ಷ ಪೋಷಿಸಿ ಬೆಳೆಸಲಾಗುವ ನೆಡುತೋಪುಗಳನ್ನು / ಫಾರ್ಮ ಫಾರೆಸ್ಟ್ರಿ ಕಾಮಗಾರಿಗಳನ್ನು ಸಮಗ್ರ ನಿರ್ವಹಣೆ ಎಂದು ವ್ಯಾಖ್ಯಾನಿಸಲಾಗಿದೆ. ಮೇಲಿನಂತೆ ಫಲಾನುಭವಿಯು ನಿರ್ವಹಣಾ ವೆಚ್ಚ ಭರಿಸಲು ಸಿದ್ದರಿದ್ದಲ್ಲಿ ಅಂತಹ ಪ್ರಸಂಗಗಳಲ್ಲಿ ಫಲಾನುಭವಿ ವಂತಿಗೆಯನ್ನು ಇನ್‍ಟೆನ್ಸಿವ್ ಮ್ಯಾನೇಜ್‍ಮೆಂಟ್ ಮಾನದಂಡ ಅನುಸರಿಸಿ ಪಡೆಯುವುದು.

ಕಾಮಗಾರಿಗಳ ಅಳತೆ ತಪಾಸಣೆ;

ಅರಣ್ಯ ರಕ್ಷಕರು, ವನಪಾಲಕರು ಹಾಗೂ ಅರಣ್ಯಾಧಿಕಾರಿಗಳು ಜಲಾನಯನಕ್ಕೆ ಮೇಲಿಂದ ಮೇಲೆ ಭೇಟಿ ನೀಡಿ ಫಲಾನುಭವಿಗಳಿಗೆ ತಾಂತ್ರಿಕ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಬೇಕು. ಹಾಗೂ ಕಾಮಗಾರಿ ಗುಣಮಟ್ಟ ಮತ್ತು ಪ್ರಮಾಣ ಖಚಿತಪಡಿಸಿಕೊಳ್ಳಬೇಕು.

•             ವನಪಾಲಕರು ಸಂಪೂರ್ಣಗೊಂಡ ಕಾಮಗಾರಿ ವಿವರಗಳನ್ನು ಅಳತೆ ಪುಸ್ತಕದಲ್ಲಿ ಬರೆಯುತ್ತಾರೆ. ವನಪಾಲಕರು ದಾಖಲಿಸಿದ ಕಾಮಗಾರಿಗಳ ಅಳತೆ ತಪಾಸಣೆಯನ್ನು ವಲಯ ಅರಣ್ಯಾಧಿಕಾರಿ ಶೇಕಡ 100 ರಷ್ಟು ಮಾಡುತ್ತಾರೆ.

•             ಈ ಕಾಮಗಾರಿಗಳ ಶೇಕಡ 25 ರಷ್ಟು ತಪಾಸಣೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ವಹಿಸುತ್ತಾರೆ. ಅಳತೆ ತಪಾಸಣೆ ಕುರಿತ ಯಾವುದೇ ವಿವಾದ ಎದ್ದರೆ ಆ ಕುರಿತಂತೆ ಅರಣ್ಯ ಸಂರಕ್ಷಣಾಧಿಕಾರಿಯವರ ತೀರ್ಮಾನವೇ ಅಂತಿಮ.

•             ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಲಾನಯನಕ್ಕೆ ಭೇಟಿ ನೀಡಿ ಕಾರ್ಯಗಳ ಪರಿವೀಕ್ಷಣೆ, ಅಳತೆ ತಪಾಸಣೆ ಮಾಡುತ್ತಾರೆ. ಹಣ ಸಂದಾಯದ ಬಿಲ್‍ಗಳನ್ನು ಜಲಾನಯನ ಸಮಿತಿ ಸಿದ್ದಪಡಿಸುತ್ತದೆ. ಅರಣ್ಯೀಕರಣ ಕಾಮಗಾರಿಗಳ ಕುರಿತು ಸೂಕ್ತ ದಾಖಲೆ ವಹಿ, ಪ್ಲಾಂಟೀಷನ್ ಜರ್ನಲ್ ಇತ್ಯಾದಿ ನಿರ್ವಹಿಸುವುದು.

ತರಬೇತಿ;

ಜಲಾನಯನ ಅರಣ್ಯೀಕರಣ ಕುರಿತಾಗಿ ಯೋಜನೆ ಸಿದ್ಧಪಡಿಸುವುದು ಹಾಗೂ ನರ್ಸರಿ ತಾಂತ್ರಿಕತೆ ಮತ್ತು ಸಿಲ್ವಿ ಕಲ್ಚರ್ ಪ್ರಾಕ್ಟಿಸ್ ಕುರಿತಾಗಿ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ಆಯೋಜಿಸತಕ್ಕದ್ದು. ಜಲಾನಯನ ಮಟ್ಟದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಅರಣ್ಯೀಕರಣ ಚಟುವಟಿಕೆ ನಿರ್ವಹಿಸಿದ ಎಲ್ಲಾ ರೈತರನ್ನು ಒಗ್ಗೂಡಿಸಿ ಅವರಿಗೆ ಅವಶ್ಯ ತಾಂತ್ರಿಕ ಸಲಹೆಗಳನ್ನು ನೀಡುವುದು. ತರಬೇತಿ ವೇಳೆ ಸಸಿಗಳ ಮುಂದಿನ ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ಮಾಹಿತಿಗಳನ್ನೂಳಗೊಂಡ ಪುಸ್ತಕಗಳನ್ನು ಸಹ ಒದಗಿಸುವುದು. ಇದರಿಂದ ಹಣ್ಣು / ಮೇವು / ಸಣ್ಣ ಉರುವಲು ದೊರಕುವುದರ ಜೊತೆಗೆ ರೈತನಿಗೆ ಹೆಚ್ಚಿನ ಆದಾಯವನ್ನು ಕೂಡ ತರುತ್ತದೆ.

ಪ್ರಾತ್ಯಕ್ಷಿಕೆ;

ವಿವಿಧ ಉತ್ಪನ್ನಗಳನ್ನು ನೀಡುವ ಮರ ಕೃಷಿ (ಟ್ರೀ ಕಲ್ಟವೇಷನ್) ಕುರಿತಾಗಿ ಅಲ್ಲದೆ ಕಡಿಮೆ ಅವಧಿಯಲ್ಲಿ (ಶಾರ್ಟ ಡ್ಯೂರೇಷನ್) ತೀರ್ವವಾಗಿ ಬೆಳೆದು (ಫಾಸ್ಟ್ ಗ್ರೋಯಿಂಗ್) ಹೆಚ್ಚು ಇಳುವರಿ ನೀಡುವ ಕ್ಲೋನಲ್ ಮರಗಳ / ಸಸಿ ಮರಗಳ ಪ್ರಾತ್ಯಕ್ಷಿಕೆಗಳನ್ನು ಪ್ರೊಡಕ್ಷನ್ ಸಿಸ್ಟಮ್ ಡೆಮಾನ್ಸಟ್ರೇಶನ್ ಅಡಿ ಕೈಗೊಳ್ಳಬಹುದಗಿದೆ

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.86516853933
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top