ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಕೋಶ / ಚಾರಣ ಚಿತ್ರೀಕರಣ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚಾರಣ ಚಿತ್ರೀಕರಣ

ಅರಣ್ಯ ಪ್ರದೇಶದಲ್ಲಿ ಚಾರಣ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕೆ ಎಂಬುದರ ಬಗ್ಗೆಗಿನ ಮಾಹಿತಿ

 1. ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿಗಾಗಿ ಯಾರನ್ನು ಸಂಪರ್ಕಿಸಬೇಕು?
 2. ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು/ಚಾರಣ ಮಾಡಲು ಅನುಮತಿ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯಗಳ ಉಸ್ತುವಾರಿ ಹೊಂದಿರುವ ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು.

 3. ರಾಷ್ಟ್ರೀಯ ಉದ್ಯಾನವನದೊಳಕ್ಕೆ ಯಾವ ಉದ್ದೇಶಕ್ಕೆ ಪ್ರವೇಶ ನೀಡಲಾಗುತ್ತದೆ?
 4. ಕೆಳಕಂಡ ಎಲ್ಲಾ ಅಥವಾ ಯಾವುದೇ ಒಂದು ಕಾರಣಕ್ಕಾಗಿ ಅಭಯಾರಣ್ಯವನ್ನು ಪ್ರವೇಶಿಸಲು ಅಥವಾ ಅಲ್ಲಿ ವಾಸಿಸಲು ಯಾವುದೇ ವ್ಯಕ್ತಿಗೆ ಮುಖ್ಯ ವನ್ಯಜೀವಿ ವಾರ್ಡನ್ ರವರು ಅನುಮತಿ ನೀಡಬಹುದು; ಅವುಗಳೆಂದರೆ :

  • ವನ್ಯಜೀವಿಗಳ ಶೋಧನೆ ಅಥವಾ ಅಧ್ಯಯನ ಮತ್ತು ಅದಕ್ಕೆ ಅನುಗುಣವಾದ ಅಥವಾ ಸಾಂದರ್ಭಿಕವಾದ ಉದ್ದೇಶಗಳಿಗಾಗಿ.
  • ಛಾಯಗ್ರಹಣ
  • ವೈಜ್ಞಾನಿಕ ಸಂಶೋಧನೆ
  • ಪ್ರವಾಸೋದ್ಯಮ
  • ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಯಾವುದೇ ವ್ಯಕ್ತಿಯ ಜೊತೆ ಕಾನೂನುಬದ್ಧ ವ್ಯಾಪಾರ ವ್ಯವಹಾರ ನಡೆಸಲು.
  • ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಕ್ಕೆ ಪ್ರವೇಶಿಸಲು ಅನುಮತಿ ಪಡೆಯುವುದರಿಂದ ಯಾರಿಗೆ ವಿನಾಯಿತಿ ಇರುತ್ತದೆ?
  • ಸಾರ್ವಜನಿಕ ಸೇವಾ ಕರ್ತವ್ಯದ ಮೇಲಿರುವವರು.
 5. ಅಭಯಾರಣ್ಯದ ಪರಿಮಿತಿಯೊಳಗೆ ವಾಸಿಸಲು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯಿಂದ ಅನುಮತಿ ನೀಡಲ್ಪಟ್ಟಿರುವ ವ್ಯಕ್ತಿ.
 6. ಅಭಯಾರಣ್ಯದ ಪರಿಮಿತಿಯೊಳಗಿನ ಸ್ಥಿರ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿರುವ ವ್ಯಕ್ತಿ.
 7. dependants of the person referred to in clause (a), clause (b) or clause (c.)ಉಪವಾಕ್ಯ (ಅ), ಉಪವಾಕ್ಯ (ಆ) ಅಥವಾ ಉಪವಾಕ್ಯ (ಇ) ಗಳಲ್ಲಿ ಉಲ್ಲೇಖಿಸಿರುವ ವ್ಯಕ್ತಿಯ ಮೇಲೆ ಅವಲಂಬಿತರಾಗಿರುವವರು.
 8. ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?
 9. ಪ್ರತಿ ವ್ಯಕ್ತಿಯೂ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ವಾಸಿಸುವಷ್ಟು ಕಾಲವೂ ಈ ಕೆಳಕಂಡ ಅಂಶಗಳಿಗೆ ಬದ್ಧನಾಗಿರತಕ್ಕದ್ದು :

  • ಅಭಯಾರಣ್ಯದಲ್ಲಿ ಈ ಕಾಯಿದೆಯ ವಿರುದ್ಧವಾದ ಯಾವುದೇ ಅಪರಾಧ ನಡೆಯುವುದನ್ನು ತಡೆಯುವುದು.
  • ಅಭಯಾರಣ್ಯದಲ್ಲಿ ಈ ಕಾಯಿದೆಗೆ ವಿರುದ್ಧವಾದ ಅಂತಹ ಯಾವುದೇ ಅಪರಾಧಗಳು ನಡೆದಿದೆ ಎಂದು ನಂಬಲು ಕಾರಣವಿದ್ದಲ್ಲಿ, ಅಪರಾಧಿಯನ್ನು ಕಂಡುಹಿಡಿಯಲು ಮತ್ತು ಬಂಧಿಸಲು ಸಹಾಯ ಮಾಡುವುದು.
  • ಯಾವುದೇ ಕಾಡು ಪ್ರಾಣಿಯ ಸಾವನ್ನು ವರದಿ ಮಾಡುವುದು ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕೃತ ಅಧಿಕಾರಿಯು ಉಸ್ತುವಾರಿ ವಹಿಸುವವರೆಗೂ ಅದರ ದೇಹವನ್ನು ರಕ್ಷಿಸುವುದು.
  • ತನ್ನ ಅರಿವಿಗೆ ಅಥವಾ ಮಾಹಿತಿಗೆ ಬರುವ ಅಂತಹ ಅಭಯಾರಣ್ಯದಲ್ಲಿನ ಯಾವುದೇ ಬೆಂಕಿಯನ್ನು ನಂದಿಸುವುದು ಮತ್ತು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೇ ವಿಧಾನದಿಂದ ಅದು ಹರಡದಂತೆ ತಡೆಯುವುದು ಮತ್ತು
  • ಈ ಕಾಯಿದೆಯ ವಿರುದ್ಧವಾಗಿ ನಡೆಯುವ ಅಪರಾಧಗಳನ್ನು ತಡೆಯಲು ಅಥವಾ ಅಂತಹ ಯಾವುದೇ ಅಪರಾಧದ ತನಿಖೆಯಲ್ಲಿ ಅರಣ್ಯ ಅಧಿಕಾರಿ, ಮುಖ್ಯ ವನ್ಯಜೀವಿ ವಾರ್ಡನ್, ವನ್ಯಜೀವಿ ವಾರ್ಡನ್ ಅಥವಾ ನೀತಿ ನಿರೂಪಕ ಅಧಿಕಾರಿಯು ಸಹಾಯ ಕೇಳಿದಲ್ಲಿ ಅವರಿಗೆ ಸಹಕರಿಸುವುದು.
 10. ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಪ್ರವೇಶಿಸಲು ಯಾವುದಾದರೂ ಪ್ರವೇಶ ಶುಲ್ಕವಿದೆಯೆ; ವಿಧಿಸಲು ಇರುವ ನಿಯಮಗಳು?
 11. ಹೌದು, ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್ 28ರ ಅನ್ವಯ ರಾಷ್ಟ್ರೀಯ ಉದ್ಯಾನವನ/ಅಭಯಾರಣ್ಯದೊಳಗೆ ಹೋಗಲು ಪ್ರವೇಶ ಶುಲ್ಕವಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಪ್ರವೇಶ ಶುಲ್ಕವನ್ನು ನಿರ್ಧರಿಸುತ್ತಾರೆ.

  • ಚಿಲ್ಲರೆ ದರದಲ್ಲಿ ಶ್ರೀಗಂಧವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?
  • ಯಾವುದೇ ಖಾಸಗಿ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಖಾಸಗಿ ವಲಯದ ಸಂಸ್ಥೆಗಳು/ಸಂಘಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧಕ್ಕಾಗಿ ಅರ್ಜಿ ಸಲ್ಲಿಸಬಹುದು.
3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top