ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಕೋಶ / ಮರಮುಟ್ಟುಗಳ ಹಂಚಿಕೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮರಮುಟ್ಟುಗಳ ಹಂಚಿಕೆ

ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.

 1. ಅರಣ್ಯ ಇಲಾಖೆಯಿಂದ ಮರಮುಟ್ಟುಗಳ ಹಂಚಿಕೆ ಪಡೆಯಲು ಯಾರು ಅರ್ಹರಾಗಿರುತ್ತಾರೆ?
 2. ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.

 3. ಮರಮುಟ್ಟುಗಳ ಹಂಚಿಕೆ ಮಂಜೂರು ಮಾಡಲು ಯಾರು ಅಧಿಕಾರ ಹೊಂದಿರುತ್ತಾರೆ?
 4. ಕೆಳಕಂಡ ಹಂತದ ಇಲಾಖಾ ಅಧಿಕಾರಿಗಳು ಮಂಜೂರಾದ ದರದಲ್ಲಿ ಸ್ವಂತ ಉಪಯೋಗದ ಉದ್ದೇಶಕ್ಕಾಗಿ ಮರಮುಟ್ಟುಗಳನ್ನು ಹಂಚಿಕೆ ಮಾಡುವ ಅಧಿಕಾರ ಹೊಂದಿರುತ್ತಾರೆ :

  ಪ್ರಬೇಧಗಳು

  ಅಧಿಕಾರದ ಮಿತಿಗಳು

  ಪಿಸಿಸಿಎಫ್

  ಎಪಿಸಿಸಿಎಫ್/ಸಿಸಿಎಫ್

  ಸಿಎಫ್

  ಡಿಸಿಎಫ್

  ತೇಗದ ಮರ

  ಸಂಪೂರ್ಣ ಅಧಿಕಾರ

  5 ಕ್ಯು.ಮೀ.

  3 ಕ್ಯು.ಮೀ.

  -

  ಬೀಟೆ, ಶ್ರೀಗಂಧ ಮತ್ತು ಬಿಳಿ ದೇವದಾರು ಹೊರತುಪಡಿಸಿ ಇತರ ವಿಧಗಳು

  ಸಂಪೂರ್ಣ ಅಧಿಕಾರ

  10 ಕ್ಯು.ಮೀ.

  5 ಕ್ಯು.ಮೀ.

  3 ಕ್ಯು.ಮೀ.

  ತೆಳುಗೊಳಿಸಿದ ತೇಗದ ಕೋಲುಗಳು

  ಸಂಪೂರ್ಣ ಅಧಿಕಾರ

  250 ಕೋಲುಗಳು

  100 ಕೋಲುಗಳು

  50 ಕೋಲುಗಳು

  ತೆಳುಗೊಳಿಸಿದ ಕೋಲುಗಳು (ಇತರ ಕಾಡು ಮರಗಳು)

  ಸಂಪೂರ್ಣ ಅಧಿಕಾರ

  ಸಂಪೂರ್ಣ ಅಧಿಕಾರ

  ಸಂಪೂರ್ಣ ಅಧಿಕಾರ

  ಸಂಪೂರ್ಣ ಅಧಿಕಾರ

  ಷರಾ :ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು,ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

 5. ಮರಮುಟ್ಟುಗಳ ಹಂಚಿಕೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ಅರ್ಜಿ ನಮೂನೆ ಇದೆಯೇ?
 6. ಇಲ್ಲ, ಯಾವುದೇ ನಿಗದಿತ ನಮೂನೆ ಇರುವುದಿಲ್ಲ. ಅಗತ್ಯವಿರುವ ಮರಮುಟ್ಟುಗಳ ವಿಧ ಹಾಗೂ ಪ್ರಮಾಣ ಹಾಗೂ ಆಯ್ದ ಸರ್ಕಾರಿ ಮರಮುಟ್ಟುಗಳ ದಾಸ್ತಾನು ಉಗ್ರಾಣ/ವಿಭಾಗದ ಹೆಸರನ್ನು ವಿವರಿಸುವ ಸಾಮಾನ್ಯ ಅರ್ಜಿಯನ್ನು ಸಲ್ಲಿಸಬಹುದು. ಆದಾಗ್ಯೂ ಅರ್ಜಿಯ ಜೊತೆಯಲ್ಲಿ ಕೆಳಕಂಡ ದಾಖಲಾತಿಗಳನ್ನು ಲಗತ್ತಿಸುವುದು ಅಗತ್ಯ.

 7. ಸಕ್ಷಮ ಪ್ರಾಧಿಕಾರಿಯಿಂದ ಅನುಮೋದಿಸಲ್ಪಟ್ಟಿರುವ ನಿರ್ಮಿಸಲು ಉದ್ದೇಶಿಸಿರುವ ಮನೆಯ ನೀಲನಕ್ಷೆ.
 8. ಎಂಜಿನಿಯರ್ರಿಂದ ಮರದ ಅಂದಾಜು ಪಟ್ಟಿ.
 9. ಖಾತಾ ನಕಲು.
 10. ಕಟ್ಟಡ ನಿರ್ಮಿಸಲು ಅನುಮತಿಯ ಬಗ್ಗೆ ಸಕ್ಷಮ ಪ್ರಾಧಿಕಾರಿಯಿಂದ ಅನುಮತಿ.
 11. ಈ ಹಿಂದೆ ಅರಣ್ಯ ಇಲಾಖೆಯಿಂದ ಮರಮುಟ್ಟುಗಳ ಹಂಚಿಕೆ ಪಡೆದಿಲ್ಲವೆಂದು ಘೋಷಿಸುವ ಪ್ರಮಾಣಪತ್ರ (ನೋಟರಿಯವರ ಎದುರು ಸಹಿ ಮಾಡಿರುವುದು).
 12. ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು?
 13. ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ಬಿದ್ದಲ್ಲಿ ಅವರು ಹೆಚ್ಚಿನ ದಾಖಲಾತಿಗಳಿಗೆ ಹಾಗೂ ಸ್ಥಳ ಪರಿಶೀಲನೆಗೆ ವ್ಯವಸ್ಥೆ ಮಾಡಲು ಕೇಳಬಹುದು.

 14. ಯಾವ ದರದಲ್ಲಿ ಮರಮುಟ್ಟುಗಳನ್ನು ಹಂಚಿಕೆ ಮಾಡಲಾಗುತ್ತದೆ?
 15. ವಿವಿಧ ವರ್ಗಗಳ ಮರಗಳಿಗೆ 2014-15ನೇ ಸಾಲಿನಲ್ಲಿ ಮಂಜೂರು ಮಾಡಿರುವ ದರಗಳ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.

2.96062992126
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top