অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಜ್ಯ ಅರಣ್ಯ ಇಲಾಖೆ

ರಾಜ್ಯ ಅರಣ್ಯ ಇಲಾಖೆ

ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಛೇರಿಯು ಬೆಂಗಳೂರು-560 003, ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಅರಣ್ಯ ಭವನ ಇಲ್ಲಿ ಇರುತ್ತದೆ.

ಅರಣ್ಯದ ವಿಷಯಗಳಲ್ಲಿ ಸರ್ಕಾರಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಸಲಹೆಗಾರರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಇವರು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಆಗಿರುತ್ತಾರೆ. ಇವರು ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳು ಮತ್ತು ವನ್ಯಜೀವಿಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ಇಲಾಖೆಯ ಪ್ರಾಂತೀಯ ಆಡಳಿತಾತ್ಮಕ ಉದ್ದೇಶಕ್ಕಾಗಿ ರಾಜ್ಯವನ್ನು ಕಾರ್ಯಸಂಬಂಧಿ ವೃತ್ತಗಳು ಅಂದರೆ ಅರಣ್ಯ ಸಂಶೋಧನೆ ಮತ್ತು ಉಪಯೋಗ, ಕ್ಷೇತ್ರೀಯ ನಿರ್ದೇಶಕರು (ಹುಲಿ ಯೋಜನೆ), ಕಾರ್ಯ ಯೋಜನೆ, ತರಬೇತಿ ಮತ್ತು ಅರಣ್ಯ ಸಂಚಾರಿ ದಳಗಳಷ್ಟೇ ಅಲ್ಲದೆ ಹದಿಮೂರು ಪ್ರಾಂತೀಯ ವೃತ್ತಗಳನ್ನಾಗಿ ವಿಂಗಡಿಸಲಾಗಿದೆ.

ಹುತಾತ್ಮರು

ಕಳ್ಳಸಾಗಾಣಿಕೆದಾರರು, ಕಳ್ಳಬೇಟೆಗಾರರಿಂದ ಅರಣ್ಯವನ್ನು ರಕ್ಷಿಸುವಾಗ ಮತ್ತು ಕೆಲವು ಬಾರಿ ವನ್ಯಪ್ರಾಣಿಗಳ ದಾಳಿಯಿಂದಾಗಿ ಹಲವಾರು ಅರಣ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳು ಸೇವೆಯಲ್ಲಿರುವಾಗ ತಮ್ಮ ಪ್ರಾಣ ಕಳೆದುಕೊಂಡಿತ್ತಾರೆ. ರಾಷ್ಟ್ರದ ಅರಣ್ಯಗಳನ್ನು ರಕ್ಷಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ಅಂತಹ ಅಧಿಕಾರಿಗಳು/ಸಿಬ್ಬಂದಿಗಳ ಹೆಸರುಗಳನ್ನು ಅಂತಹ ಅಧಿಕಾರಿಗಳ/ಸಿಬ್ಬಂದಿಗಳ ಸ್ಮರಣೆ ಹಾಗೂ ಗೌರವಾರ್ಥವಾಗಿ ಹುತಾತ್ಮರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರತಿ ವರ್ಷದ ನವೆಂಬರ್ 11ನೇ ದಿನಾಂಕದಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.

ಹುತಾತ್ಮರ ಪಟ್ಟಿ

ಕ್ರ. ಸಂ.

ಹುತಾತ್ಮರ ಹೆಸರು

ಹುದ್ದೆ

ವಿಭಾಗದ ಹೆಸರು

ನಿಧನದ ದಿನಾಂಕ

1

ಶಂಕರ್ ಮುದಲಗಿ

ಅರಣ್ಯ ರಕ್ಷಕ

ಬೆಳಗಾವಿ

13-08-1966

2

ಮಾದನಾಯಕ್

ಅರಣ್ಯ ರಕ್ಷಕ

ಚಾಮರಾಜನಗರ

29-12-1966

3

ಜೋಗೇಗೌಡ

ಉಪ ವಲಯ ಅರಣ್ಯಾಧಿಕಾರಿ

ಚಾಮರಾಜನಗರ

29-12-1966

4

ಅಬ್ದುಲ್ ಅಹ್ಮದ್

ಉಪ ವಲಯ ಅರಣ್ಯಾಧಿಕಾರಿ

ಕೊಳ್ಳೇಗಾಲ

18-01-1971

5

ಅಹ್ಮದ್ ಖಾನ್

ಉಪ ವಲಯ ಅರಣ್ಯಾಧಿಕಾರಿ

ಕೊಳ್ಳೇಗಾಲ

30-01-1971

6

ಹುಚ್ಚಾ ಶೆಟ್ಟಿ

ಅರಣ್ಯ ರಕ್ಷಕ

ಚಾಮರಾಜನಗರ

09-11-1976

7

ರಂಗಾರಾಜ್ ಅರಸ್ ಕೆ ಎನ್

ವಲಯ ಅರಣ್ಯ ಅಧಿಕಾರಿ

ಹಾಸನ

05-07-1978

8

ಹಂಪಯ್ಯ ಜಿ ಐ

ಅರಣ್ಯ ರಕ್ಷಕ

ಬೆಳಗಾವಿ

30-08-1982

9

ಬಸರಿ ಕಟ್ಟಿ ಎನ್ ಇ

ಅರಣ್ಯ ರಕ್ಷಕ

ಬೆಳಗಾವಿ

25-03-1983

10

ಪೃತು ಕುಮಾರ್ ಕೆ ಎಂ

ಅರಣ್ಯ ವೀಕ್ಷಕ

ಅರಣ್ಯ ಸಂಶೋಧನಾ, ಮಡಿಕೇರಿ

27-08-1983

11

ಹನುಮಂತಪ್ಪ ಹೆಚ್ ಎನ್

ವಲಯ ಅರಣ್ಯ ಅಧಿಕಾರಿ

ಚಿಕ್ಕಮಗಳೂರು

26-01-1985

12

ಖಾನಾಪುರಿ ಬಿ ಡಿ

ಉಪ ವಲಯ ಅರಣ್ಯಾಧಿಕಾರಿ

ಬೆಳಗಾವಿ

08-11-1986

13

ಅರವಿಂದ ಡಿ ಹೆಗಡೆ

ವಲಯ ಅರಣ್ಯ ಅಧಿಕಾರಿ

ಶಿರಸಿ

19-04-1988

14

ಮೋಹನಯ್ಯ ಬಿ ಸಿ

ಅರಣ್ಯ ರಕ್ಷಕ

ಕೊಳ್ಳೇಗಾಲ

04-08-1989

15

ಬಸವನ್ನೆ ಎಚ್

ಅರಣ್ಯ ರಕ್ಷಕ

ಸಾಗರ

06-11-1989

16

ಶ್ರೀನಿವಾಸ ಪಿ

ಉಪ ಅರಣ್ಯ ಸಂರಕ್ಷಣಾಧಿಕಾರಿ

ಚಾಮರಾಜನಗರ

10-11-1991

17

ನಾಗರಾಜು ಬಿ

ಡಿ ಗ್ರೂಪ್

ಭದ್ರ (ವ ಜೀ)

23-06-1994

18

ಪೂಜಾರಿ ಎಂ ಆರ್

ಅರಣ್ಯ ರಕ್ಷಕ

ಧಾರವಾಡ

14-06-1995

19

ಅಣ್ಣಯ್ಯ ಜಿ ಕೆ

ಆನೆ ಮಾವುದ

ಚಾಮರಾಜನಗರ

17-10-1996

20

ವಿಠಲ್ ಕೆ ಎಸ್

ಅರಣ್ಯ ರಕ್ಷಕ

ವಿರಾಜಪೇಟೆ

13-05-1997

21

ಲೋಕೇಶ್ ಎಲ್

ಅರಣ್ಯ ರಕ್ಷಕ

ಸಾಗರ

12-10-1997

22

ಗಣೇಶ್ ಎಸ್ ಟಿ

ದಿನಗೂಲಿ ನೌಕರ

ಸಾಗರ

12-10-1997

23

ಹನುಮಂತಪ್ಪ ವೈ

ಉಪ ವಲಯ ಅರಣ್ಯಾಧಿಕಾರಿ

ಸಾಗರ

28-11-1997

24

ಪೊನ್ನಪ್ಪ ಪಿ ಎ

ಅರಣ್ಯ ರಕ್ಷಕ

ಹುಣಸೂರು (ವ ಜೀ)

23-12-1997

25

ರಾಮ ಜಿ ಕೆ

ಅರಣ್ಯ ವೀಕ್ಷಕ

ಹುಣಸೂರು (ವ ಜೀ)

30-07-1998

26

ರಂಗನ ಗೌಡರ್ ಎಂ ವಿ

ವಲಯ ಅರಣ್ಯ ಅಧಿಕಾರಿ

ಬೆಳಗಾವಿ

20-03-1999

27

ಶ್ರೀನಿವಾಸಯ್ಯ

ಅರಣ್ಯ ವೀಕ್ಷಕ

ತುಮಕೂರು

24-07-1999

28

ವೀರ ಭದ್ರಪ್ಪ

ಅರಣ್ಯ ವೀಕ್ಷಕ

ಶಿವಮೊಗ್ಗ (ವ ಜೀ)

26-10-1999

29

ಅಣ್ಣಪ್ಪ ಮಲ್ಲಪ್ಪ ಮುಲಗೋಡ್

ಅರಣ್ಯ ರಕ್ಷಕ

ಹಳಿಯಾಳ

26-07-2002

30

ಕಾಳೇಗೌಡ

ಅರಣ್ಯ ರಕ್ಷಕ

ಚಿಕ್ಕಮಗಳೂರು

21-08-2002

31

ಶಿರ ಹಟ್ಟಿ ಎಂ ಡಿ

ಅರಣ್ಯ ರಕ್ಷಕ

ಗದಗ್

23-01-2005

32

ರಾಜಾ ಶೇಖರಪ್ಪ

ಅರಣ್ಯ ರಕ್ಷಕ

ತುಮಕೂರು

14-03-2006

33

ನಾರಾಯಣ್ ಎಚ್ ಸಿ

ಅರಣ್ಯ ವೀಕ್ಷಕ

ಶಿವಮೊಗ್ಗ

07-04-2007

34

ಮಂಜುನಾಥಪ್ಪ

ಅರಣ್ಯ ರಕ್ಷಕ

ಭದ್ರಾವತಿ

07-06-2010

35

ಪ್ರಭಾಕರ ಬಿ

ಉಪ ವಲಯ ಅರಣ್ಯಾಧಿಕಾರಿ

ಮಂಗಳೂರು

09-02-2011

36

ಎಂ ಎಚ್ ನಾಯಕ್

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ದಾಂಡೇಲಿ ಉಪ ವಿಭಾಗ

08-05-2012

37

ದಬ್ಬನ್ನ

ದಿನಗೂಲಿ ನೌಕರ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

09-08-2012


ಮೂಲ : ಅರಣ್ಯ ಇಲಾಖೆ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate