অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಡು ಮೃಗಗಳಿಂದ ಸಂಭವಿಸುವ ಮನುಷ್ಯನ ಮೃತ್ಯುವಿಗಾಗಿ

ಕಾಡು ಮೃಗಗಳಿಂದ ಸಂಭವಿಸುವ ಮನುಷ್ಯನ ಮೃತ್ಯುವಿಗಾಗಿ

  1. ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ನೀಡುವ ಬಗ್ಗೆ ಇರುವ ಸರ್ಕಾರಿ ಆದೇಶ ಯಾವುದು
  2. ಸರ್ಕಾರಿ ಆದೇಶ ಸಂಖ್ಯೆ ಎಫ್ಇಇ 70 ಎಫ್ಡಬ್ಲ್ಯೂಎಲ್ 2009 ದಿನಾಂಕ 10-08-2010ರ ಸರ್ಕಾರಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಿ.

  3. ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಯಾರು ಅರ್ಹರಾಗಿರುತ್ತಾರೆ
  4. ಕಾಡು ಮೃಗದಿಂದ ಸಾವಿಗೊಳಗಾದ ವ್ಯಕ್ತಿಯು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಲಿಲ್ಲವೆಂಬ ಷರತ್ತಿನೊಂದಿಗೆ ಕಾಡು ಮೃಗದ ದಾಳಿಯಿಂದ ಸಾವಿಗೊಳಗಾದ ವ್ಯಕ್ತಿಯ ಕಾನೂನುಬದ್ಧ ವಾರಸುದಾರನು ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. 

    ಸ್ಪಷ್ಟನೆ : ಕಾಡು ಮೃಗ ಎಂಬುದು ಯಾವುದನ್ನು ಒಳಗೊಂಡಿರುತ್ತದೆ ಎಂಬುದನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಸೆಕ್ಷನ್ 2 (36)ರಲ್ಲಿ ಹೇಳಿರುವ ವಿವರಣೆಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ.

  5. ಮನುಷ್ಯನ ಸಾವಿನ ಪ್ರಕರಣದಲ್ಲಿ ಎಷ್ಟು ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ
  6. ಮನುಷ್ಯನ ಸಾವಿನ ಪ್ರಕರಣದಲ್ಲಿ 2.00 ಲಕ್ಷ ರೂಪಾಯಿಗಳ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡಲಾಗುತ್ತದೆ.

  7. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಅರ್ಜಿ ಸಲ್ಲಿಸಲು ಯಾವುದಾದರೂ ನಿಗದಿತ ನಮೂನೆ ಇದೆಯೇ
  8. ಇಲ್ಲ. ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ನಮೂನೆ ಇರುವುದಿಲ್ಲ. ಆದಾಗ್ಯೂ, ಕಾನೂನುಬದ್ಧ ವಾರಸುದಾರನ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು.

  9. ಅರ್ಜಿಯ ಜೊತೆ ಯಾವ ಯಾವ ದಾಖಲಾತಿಗಳನ್ನು ಲಗತ್ತಿಸಬೇಕು
  10. ಕಾಡು ಮೃಗದ ದಾಳಿಯಿಂದ ಮನುಷ್ಯನು ಸಾವಿಗೀಡಾದ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪಡೆಯಲು ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲಾತಿಗಳೆಂದರೆ : 
    ವ್ಯಕ್ತಿಯು ಕಾಡು ಮೃಗದ ದಾಳಿಯಿಂದ ಮೃತಪಟ್ಟಿರುತ್ತಾನೆಂಬುದನ್ನು ಪ್ರಮಾಣೀಕರಿಸುವ ಮರಣೋತ್ತರ ಪರೀಕ್ಷಾ ವರದಿ. 

    Legal heir certificate issued by the concerned Tahsildar. 

    The police enquiry report of the case.

  11. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಯಾರಿಗೆ ಅರ್ಜಿ ಸಲ್ಲಿಸಬೇಕು
  12. ಅರ್ಜಿಯನ್ನು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.

  13. ಮನುಷ್ಯನ ಸಾವಿನ ಪ್ರಕರಣದಲ್ಲಿ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಮಂಜೂರು ಮಾಡಲು ಯಾರಿಗೆ ಅಧಿಕಾರ ನೀಡಲಾಗಿದೆ
  14. ಕಾಡು ಮೃಗದ ದಾಳಿಯಿಂದ ಮನುಷ್ಯನ ಸಾವಿನ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕಾನೂನುಬದ್ಧ ವಾರಸುದಾರನಿಗೆ ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಸೌಲಭ್ಯವನ್ನು ಮಂಜೂರು ಮಾಡಲು ಸಂಬಂಧಪಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅಧಿಕಾರ ನೀಡಲಾಗಿದೆ.

  15. ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ನೀಡುವಲ್ಲಿ ವಿಳಂಬವೇಕೆ
  16. ಕೆಲವು ಸಂದರ್ಭಗಳಲ್ಲಿ ಆ ಉದ್ದೇಶಕ್ಕಾಗಿ ಸಾಕಷ್ಟು ನಿಧಿಯ ಅಲಭ್ಯತೆಯ ಕಾರಣದಿಂದಾಗಿ ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಗತ್ಯ ದಾಖಲಾತಿಗಳಾದ ಮರಣೋತ್ತರ ಪರೀಕ್ಷಾ ವರದಿ, ಪೆÇಲೀಸ್ ವರದಿ ಅಥವಾ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಪಡೆಯುವಲ್ಲಿ ಆಗುವ ವಿಳಂಬದಿಂದ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತದೆ.

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate