ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶ್ರೀಗಂಧ

2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.

 1. ಈಗಿನ ಶ್ರೀಗಂಧದ ಚಿಲ್ಲರೆ ಮಾರಾಟದ ದರಗಳೆಷ್ಟು?
 2. 2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.

 3. ಶ್ರೀಗಂಧದ ಚಿಲ್ಲರೆ ಮಾರಾಟವನ್ನು ಯಾರು ಮಂಜೂರು ಮಾಡಬಹುದು?
 4. ಸರ್ಕಾರದ ಆದೇಶ ಸಂಖ್ಯೆ ಎಎ.ಪಿಎ.ಜೆಐ. 102 ಎಎ.ಪಿಎ.ಎಸ್ಇ. 99, ದಿನಾಂಕ 04-09-2003ರಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಜೂರುಮಾಡಲ್ಪಟ್ಟಿರುವ ಹಣಕಾಸು ಅಧಿಕಾರದ ಪ್ರಕಾರ, ಕೆಳಕಂಡ ವರ್ಗಗಳ ಅರಣ್ಯ ಅಧಿಕಾರಿಗಳು ಶ್ರೀಗಂಧದ ಚಿಲ್ಲರೆ ಮಾರಾಟವನ್ನು ಮಂಜೂರು ಮಾಡಬಹುದು :

  ಡಿಸಿಎಫ್

  3 ಕೆಜಿ

  ಸಿಎಫ್

  10 ಕೆಜಿ

  ಎಪಿಸಿಸಿಎಫ್/ಸಿಸಿಎಫ್

  20 ಕೆಜಿ

  ಪಿಸಿಸಿಎಫ್

  ಸಂಪೂರ್ಣ ಅಧಿಕಾರ

   

  ಷರಾ :ಲಭ್ಯತೆ ಮತ್ತು ನೀತಿ ನಿರ್ಧಾರಗಳನ್ನು ದೃಷ್ಠಿಯಲ್ಲಿಟ್ಟುಕೊಂಡು, ಪ್ರತಿ ಪ್ರಕರಣಗಳಲ್ಲಿ ಹಂಚಿಕೆಯನ್ನು ಸೀಮಿತಗೊಳಿಸಬಹುದು.

 5. ಯಾವ ಆಧಾರದ ಮೇಲೆ ಶ್ರೀಗಂಧದ ಚಿಲ್ಲರೆ ಮಾರಾಟವನ್ನು ನಿರ್ಧರಿಸಲಾಗುತ್ತದೆ?
 6. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕರಿಗಳ (ಅರಣ್ಯ ಪಡೆಯ ಮುಖ್ಯಸ್ಥರು) ಶಿಫಾರಸಿನ ಆಧಾರ ಮೇಲೆ ಸರ್ಕಾರವು ಶ್ರೀಗಂಧದ ಚಿಲ್ಲರೆ ಮಾರಾಟ ದರವನ್ನು ನಿಗದಿ ಮಾಡುತ್ತದೆ. ಈ ದರಗಳು ಹಿಂದಿನ ವರ್ಷದಲ್ಲಿ ಕ್ರಮವಾದ ಶ್ರೀಗಂಧ ದಾಸ್ತಾನು ಉಗ್ರಾಣಗಳಲ್ಲಿನ ವಿವಿಧ ವರ್ಗಗಳ ಶ್ರೀಗಂದದ ಹರಾಜು ಮಾರಾಟ ದರಗಳ ಮೇಲೆ ಆಧಾರಿತವಾಗಿರುತ್ತದೆ.

 7. ಚಿಲ್ಲರೆ ದರದಲ್ಲಿ ಶ್ರೀಗಂಧವನ್ನು ಪಡೆಯಲು ಯಾರು ಅರ್ಹರಾಗಿರುತ್ತಾರೆ?
 8. ಯಾವುದೇ ಸಾರ್ವಜನಿಕ ವ್ಯಕ್ತಿ/ಧಾರ್ಮಿಕ ಸಂಘಸಂಸ್ಥೆಗಳು/ಸಾರ್ವಜನಿಕ ವಲಯದ ಉದ್ದಿಮೆಗಳು/ಸಂಸ್ಥೆಗಳು ಚಿಲ್ಲರೆ ದರದಲ್ಲಿ ಶ್ರೀಗಂಧ ಪಡೆಯಲು ಅರ್ಜಿ ಸಲ್ಲಿಸಬಹುದು.

 9. ಚಿಲ್ಲರೆ ದರದಲ್ಲಿ ಶ್ರೀಗಂಧಕ್ಕಾಗಿ ಅರ್ಜಿ ಸಲ್ಲಿಸಲು ಯಾರನ್ನು ಸಂಪರ್ಕಿಸಬೇಕು?
  • ಅವಶ್ಯಕತೆಯು 3 ಕೆಜಿಗಿಂತ ಕಡಿಮೆ ಇದ್ದಲ್ಲಿ – ತಮ್ಮ ನಿಯಂತ್ರಣದಲ್ಲಿ ಶ್ರೀಗಂಧ ದಾಸ್ತಾನು ಉಗ್ರಾಣ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಮೈಸೂರು, ಧಾರವಾಡ, ಶಿವಮೊಗ್ಗ ವಿಭಾಗಗಳು)
  • 3 ಕೆಜಿಗಿಂತ ಹೆಚ್ಚು ಹಾಗೂ 10 ಕೆಜಿಯ ವರೆಗೆ - ಅರಣ್ಯ ಸಂರಕ್ಷಣಾಧಿಕಾರಿಗಳು (ಮೈಸೂರು, ಧಾರವಾಡ ಮತ್ತು ಶಿವಮೊಗ್ಗ)

  10 ಕೆಜಿಗಿಂತ ಹೆಚ್ಚು – ಎಪಿಸಿಸಿಎಫ್ (ಎಫ್ಆರ್ಎಂ), ಅರಣ್ಯ ಭವನ, ಬೆಂಗಳೂರು.

  ಮೂಲ : ಅರಣ್ಯ ಇಲಾಖೆ

3.0
ಅಯ್ಯಪ್ಪ Jul 14, 2019 08:59 AM

ಹೊಸದಾಗಿ ಶ್ರೀಗಂಧದ ಬೆಳೆಯನ್ನು ಬೆಳೆಸಲು ಬಳ್ಳಾರಿ ಜಿಲ್ಲೆಯ ಸುತ್ತಮುತ್ತ ಸಸಿಗಳು ದೊರಕುತ್ತದೆಯೇ ಮತ್ತು ಅದರ ಬೆಲೆ ಏನು ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿಸಿಕೊಡಿ

ಅಶೋಕ್ Betasur Apr 06, 2019 08:09 PM

ಹೊಸದಾಗಿ ಶ್ರೀಗಂದದ ಬೇಳೆ ಬೇಳೆಯಲು ಧಾರವಾಡ ದಲ್ಲಿ ಗಿಡಗಳು ಸಿಗುತ್ತವೆಯೇ ಹಾಗೂ ಅವುಗಳ ಬೆಲೆ ಏನು ?

ಮಹೇಶ ಕುಮಾರ್ Aug 06, 2015 07:49 AM

ಹೊಸದಾಗಿ ಶ್ರೀಗಂದದ ಬೇಳೆ ಬೇಳೆಯಲು ಮೈಸೊರಿನಲ್ಲಿ ಗಿಡಗಳು ಸಿಗುತ್ತವೆಯೇ

ಮಹೇಶ ಕುಮಾರ್ Aug 06, 2015 07:40 AM

ಹೊಸದಾಗಿ ಶ್ರೀಗಂದದ ಬೇಳೆ ಬೇಳೆಯಲು ಮೈಸೊರಿನಲ್ಲಿ ಗಿಡಗಳು ಸಿಗುತ್ತವೆಯೇ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top