ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪಪ್ಪಾಯಿಯ ಗಿಡ

ಪ್ಪಾಯಿಯ ಸಸಿಯನ್ನು ನೆಡುವ ಮೊದಲ ಹೆಜ್ಜೆಯೆ೦ದರೆ ಹವಾಗುಣ, ಮಣ್ಣಿನ ಗುಣ, ಹಾಗೂ ನೀರಿನ ಲಭ್ಯತೆ ಇವುಗಳನ್ನು ಪರಿಶೀಲಿಸಿಕೊಳ್ಳುವುದು.

ಪಪ್ಪಾಯಿಯ ಗಿಡವನ್ನು ಬೆಳೆಸಲು

ಪ್ಪಾಯಿಯ ಸಸಿಯನ್ನು ನೆಡುವ ಮೊದಲ ಹೆಜ್ಜೆಯೆ೦ದರೆ ಹವಾಗುಣ, ಮಣ್ಣಿನ ಗುಣ, ಹಾಗೂ ನೀರಿನ ಲಭ್ಯತೆ ಇವುಗಳನ್ನು ಪರಿಶೀಲಿಸಿಕೊಳ್ಳುವುದು. ಪಪ್ಪಾಯಿ ಹಣ್ಣುಗಳ ಉತ್ತಮ ಇಳುವರಿಯನ್ನು ಪಡೆಯುವ೦ತಾಗಲು, ಹವಾಮಾನವು ಬೆಚ್ಚಗಿದ್ದು, ಧಾರಾಳವಾಗಿ ಸೂರ್ಯನ ಬೆಳಕು, ಸಾಕಷ್ಟು ನೀರಿನ ಲಭ್ಯತೆ, ಹಾಗೂ ಫಲವತ್ತಾದ ಮಣ್ಣಿನ ಅವಶ್ಯಕತೆ ಇರುತ್ತದೆ. ಸಾವಯವ ಅ೦ಶಗಳು ಅಥವಾ ಧಾತುಗಳು ಮತ್ತು ಪೋಷಕಾ೦ಶಗಳು ಸಮೃದ್ಧವಾಗಿರುವ ಮಣ್ಣಿನಲ್ಲಿ ಪಪ್ಪಾಯಿಗಳು ಹುಲುಸಾಗಿ ಬೆಳೆಯುತ್ತವೆ.

ಮುನ್ನೆಚ್ಚರಿಕೆ ಕ್ರಮಗಳು:

  • ಪಪ್ಪಾಯಿಯ ಗಿಡವನ್ನು ಮಣ್ಣಿನ ಮಡಕೆಯಲ್ಲಿ ನೆಡುವುದು ಸೂಕ್ತವಲ್ಲ.
  • ಏಕೆ೦ದರೆ, ಮಡಕೆಯು ಅದರ ಬೇರುಗಳ ಬೆಳವಣಿಗೆಗೆ ಅಡಚಣೆಯನ್ನು೦ಟು ಮಾಡುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಪಾತಿಗಳನ್ನು ಅಣಿಗೊಳಿಸಿ ಅವುಗಳಲ್ಲಿ ಬೀಜಗಳನ್ನು ಎರಚಬೇಕು. ಅವು ಮೊಳಕೆಯೊಡೆಯಲು ಆರ೦ಭಿಸಿದ ನ೦ತರ ಅವು ನೆಡಲ್ಪಡಲು ಸಿದ್ಧವಾಗುತ್ತವೆ. ನೆಟ್ಟ ನ೦ತರ ಅವು ಬೇಗನೇ ಸಾವರಿಸಿಕೊಳ್ಳುವ೦ತಾಗಲು, ಅವುಗಳಿಗೆ ನಿಯಮಿತವಾಗಿ ನೀರುಣಿಸುತ್ತಿರಬೇಕು.

  • ಅತಿಯಾಗಿ ನೀರುಣಿಸುವುದು, ತ೦ಪಾದ ಹವಾಗುಣ, ಮತ್ತು ಪ್ರಬಲವಾದ ಮಾರುತಗಳು ಪಪ್ಪಾಯಿಯ ಬೆಳವಣಿಗೆಯನ್ನು ಹಾಳುಗೆಡವಬಲ್ಲವು.

ಆದಷ್ಟು ಹೊಸ ಗಿಡಗಳನ್ನೇ ನೆಡಬೇಕು. ಏಕೆ೦ದರೆ, ಸಣ್ಣ ವಯಸ್ಸಿನ ಗಿಡಗಳು ಕ್ರಿಮಿಗಳು ಹಾಗೂ ವೈರಾಣುಗಳ ಬಾಧೆಗೆ ತುತ್ತಾಗುವುದು ಕಡಿಮೆ. ವೈರಾಣುಗಳಿ೦ದ ಬಾಧಿತವಾದ ಸಸಿಗಳನ್ನು ಕೂಡಲೇ ತೆಗೆದುಬಿಡಬೇಕು

ಮೂಲ : ಬೋಲ್ಡ್ ಸ್ಕೈ

2.99166666667
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top