অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೋಗಗಳು

ಗಂಟುರೋಗ

‘ನಾಸಿಮಾ ಬಾಂಬಿಸಿಸ್’, ಎಂಬ ಪ್ರೋಟೋಜೋವ ವರ್ಗಕ್ಕೆ ಸೇರಿದ ಏಕಕೋಶ ಜೀವಿಯಿಂದ ಈ ರೋಗ ಬರುತ್ತದೆ.ಪ್ರಾರಂಭದಲ್ಲಿ ರೋಗಪೀಡಿತ ಹುಳುಗಳು ಆರೋಗ್ಯವಂತ ಹುಳುಗಳಂತೆ ಕಂಡು ಬಂದರೂ ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆ ಮಾಡಿದಾಗ ಅಂಡಾಕಾರದ ಸ್ಪೋರುಗಳು ಕಂಡುಬರುತ್ತವೆ. ಈ ರೋಗ ತಾಯಿ ಚಿಟ್ಟೆಯಿಂದ ಭ್ರೂಣದ ಮುಖಾಂತರ ಹರಡುವುದು ಒಂದು ವಿಧವಾದರೆ, ಹಿಪ್ಪುನೇರಳೆ ಎಲೆಗಳ ಮುಖಾಂತರ ಸೋಂಕಿನಿಂದ ಬರುವುದು ಮತ್ತೊಂದು ವಿಧ. ರೋಗ ಉಲ್ಬಣಗೊಂಡಾಗ ಹುಳುಗಳು ಸೊಪ್ಪು ತಿನ್ನದೆ, ಚಟುವಟಿಕೆ ಕಳೆದುಕೊಂಡು, ಹುಳುಗಳ ಗಾತ್ರದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹುಳುಗಳು ನಂತರ ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ. ಕೆಲವೊಮ್ಮೆ ಸತ್ತ ಹುಳುಗಳು ಬ್ಯಾಕ್ಟೀರಿಯಾ ಸೋಂಕಿನ ಕಾರಣ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಗಂಟುರೋಗ ಪೀಡಿತ ಹೆಣ್ಣು ಚಿಟ್ಟೆಯು ಮೊಟ್ಟೆಯಿಟ್ಟಲ್ಲಿ, ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಿ ಮೊಟ್ಟೆಗಳು ಗುಂಪಾಗಿ ಒಂದರ ಮೇಲೊಂದಿರುತ್ತವೆ.

ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಿ ಮೊಟ್ಟೆಗಳು ಗುಂಪಾಗಿ ಒಂದರ ಮೇಲೊಂದಿರುತ್ತವೆ.ಸಾಮಾನ್ಯವಾಗಿ ಮಳೆ ಮತ್ತು ಚಳಿಗಾಲದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಗಂಟುರೋಗ ಪೀಡಿತ ರೇಷ್ಮೆ ಹುಳುಗಳು ಹೊರಹಾಕುವ ಹಿಕ್ಕೆ ಮತ್ತು ಕರುಳು ರಸದಲ್ಲಿ ರೋಗಾಣುಗಳು ಇರುತ್ತವೆ. ಇದರಿಂದ ಹುಳು ಸಾಕಾಣಿಕೆ ವಾತಾವರಣ, ಉಪಕರಣಗಳು ಮತ್ತು ಹಿಪ್ಪುನೇರಳೆ ಸೊಪ್ಪಿಗೆ ಸೋಂಕು ತಗಲಿ ರೋಗ ಹರಡುವಿಕೆಗೆ ಕಾರಣವಾಗುತ್ತದೆ.

ಬಿತ್ತನೆಕೋಠಿ, ಸಾಮಗ್ರಿ, ಹುಳು ಸಾಕಾಣಿಕೆ ಮನೆ, ಸಲಕರಣೆಗಳು ಮತ್ತು ಪರಿಸರ ಇವುಗಳನ್ನು ಸೋಂಕು ಮುಕ್ತ ಮಾಡುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಬಹುದು. ರೋಗಪೀಡಿತ ಹುಳು/ಗೂಡು/ಮೊಟ್ಟೆಗಳನ್ನು ಸುಟ್ಟು ನಾಶಪಡಿಸಬೇಕು ಅಥವಾ ಹೂಳಬೇಕು. ಮೊಟ್ಟೆ ಉತ್ಪಾದನೆಯಲ್ಲಿ ಗಂಟು ರೋಗ ಗುರುತಿಸಲು ವೈe್ಞÁನಿಕ ಕ್ರಮಗಳಿಂದ ಕೂಡಿದ ತಾಯಿ ಚಿಟ್ಟೆ ಪರೀಕ್ಷೆ ವಿಧಾನವನ್ನು ಅನುಸರಿಸಬೇಕು. ಹುಳು ಸಾಕಾಣಿಕೆ ಅವಧಿಯಲ್ಲಿ ಅಸಮ ಹುಳುಗಳು, ಅಥವಾ ಹುಳು ಹಿಕ್ಕೆಯನ್ನು ಕಾಲಕಾಲಕ್ಕೆ ನಿಗದಿತ ವಿಧಾನದಲ್ಲಿ ಪರೀಕ್ಷಿಸಿ, ರೋಗಾಣು ಕಂಡು ಬಂದಲ್ಲಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಸೋಂಕು ನಿವಾರಿಸಬೇಕು.

ರೋಗಾಣುಗಳ ಇರುವಿಕೆಯನ್ನು ಗುರುತಿಸಲು ತಾಯಿ ಚಿಟ್ಟೆಯನ್ನು ಶೇ.0.6ರ 2 ಮಿ.ಲೀ. ಪೊಟ್ಯಾಷಿಯಂ ಕಾರ್ಬೊನೇಟ್ ದ್ರಾವಕದಲ್ಲಿ ಅರೆದು, ರಸವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಬೇಕು. ಇದೇ ರೀತಿ ಹುಳು ಸಾಕಾಣಿಕೆ ಪರಿಸರದ ಧೂಳು, ಚಾಕಿಯಾಗದ/ಸತ್ತ/ಮೊಟ್ಟೆಗಳ ಪರೀಕ್ಷೆ, ಅಸಮಗಾತ್ರದ ಚಾಕಿ ಹುಳು ಮತ್ತು ಪ್ರೌಢ ಹುಳುಗಳನ್ನು ಮೇಲೆ ತಿಳಿಸಿದ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ಇದಲ್ಲದೆ ಕಸ/ಹಿಕ್ಕೆಗಳನ್ನು ಸಹ ರೋಗಾಣುಗಳ ಪತ್ತೆಗಾಗಿ ಪರೀಕ್ಷಿಸಿ, ರೋಗಾಣುಗಳಿದ್ದಲ್ಲಿ ಬೆಳೆಯನ್ನು ನಾಶಪಡಿಸಿ ಸೋಂಕು ನಿವಾರಿಸಬೇಕು.

‘ನಾಸಿಮಾ ಬಾಂಬಿಸಿಸ್’, ಎಂಬ ಪ್ರೋಟೋಜೋವ ವರ್ಗಕ್ಕೆ ಸೇರಿದ ಏಕಕೋಶ ಜೀವಿಯಿಂದ ಈ ರೋಗ ಬರುತ್ತದೆ.ಪ್ರಾರಂಭದಲ್ಲಿ ರೋಗಪೀಡಿತ ಹುಳುಗಳು ಆರೋಗ್ಯವಂತ ಹುಳುಗಳಂತೆ ಕಂಡು ಬಂದರೂ ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆ ಮಾಡಿದಾಗ ಅಂಡಾಕಾರದ ಸ್ಪೋರುಗಳು ಕಂಡುಬರುತ್ತವೆ.ಈ ರೋಗ ತಾಯಿ ಚಿಟ್ಟೆಯಿಂದ ಭ್ರೂಣದ ಮುಖಾಂತರ ಹರಡುವುದು ಒಂದು ವಿಧವಾದರೆ, ಹಿಪ್ಪುನೇರಳೆ ಎಲೆಗಳ ಮುಖಾಂತರ ಸೋಂಕಿನಿಂದ ಬರುವುದು ಮತ್ತೊಂದು ವಿಧ. ರೋಗ ಉಲ್ಬಣಗೊಂಡಾಗ ಹುಳುಗಳು ಸೊಪ್ಪು ತಿನ್ನದೆ, ಚಟುವಟಿಕೆ ಕಳೆದುಕೊಂಡು, ಹುಳುಗಳ ಗಾತ್ರದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹುಳುಗಳು ನಂತರ ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ. ಕೆಲವೊಮ್ಮೆ ಸತ್ತ ಹುಳುಗಳು ಬ್ಯಾಕ್ಟೀರಿಯಾ ಸೋಂಕಿನ ಕಾರಣ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಗಂಟುರೋಗ ಪೀಡಿತ ಹೆಣ್ಣು ಚಿಟ್ಟೆಯು ಮೊಟ್ಟೆಯಿಟ್ಟಲ್ಲಿ, ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಿ ಮೊಟ್ಟೆಗಳು ಗುಂಪಾಗಿ ಒಂದರ ಮೇಲೊಂದಿರುತ್ತವೆ.ಸಾಮಾನ್ಯವಾಗಿ ಮಳೆ ಮತ್ತು ಚಳಿಗಾಲದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಗಂಟುರೋಗ ಪೀಡಿತ ರೇಷ್ಮೆ ಹುಳುಗಳು ಹೊರಹಾಕುವ ಹಿಕ್ಕೆ ಮತ್ತು ಕರುಳು ರಸದಲ್ಲಿ ರೋಗಾಣುಗಳು ಇರುತ್ತವೆ. ಇದರಿಂದ ಹುಳು ಸಾಕಾಣಿಕೆ ವಾತಾವರಣ, ಉಪಕರಣಗಳು ಮತ್ತು ಹಿಪ್ಪುನೇರಳೆ ಸೊಪ್ಪಿಗೆ ಸೋಂಕು ತಗಲಿ ರೋಗ ಹರಡುವಿಕೆಗೆ ಕಾರಣವಾಗುತ್ತದೆ.ಬಿತ್ತನೆಕೋಠಿ, ಸಾಮಗ್ರಿ, ಹುಳು ಸಾಕಾಣಿಕೆ ಮನೆ, ಸಲಕರಣೆಗಳು ಮತ್ತು ಪರಿಸರ ಇವುಗಳನ್ನು ಸೋಂಕು ಮುಕ್ತ ಮಾಡುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಬಹುದು. ರೋಗಪೀಡಿತ ಹುಳು/ಗೂಡು/ಮೊಟ್ಟೆಗಳನ್ನು ಸುಟ್ಟು ನಾಶಪಡಿಸಬೇಕು ಅಥವಾ ಹೂಳಬೇಕು. ಮೊಟ್ಟೆ ಉತ್ಪಾದನೆಯಲ್ಲಿ ಗಂಟು ರೋಗ ಗುರುತಿಸಲು ವೈe್ಞÁನಿಕ ಕ್ರಮಗಳಿಂದ ಕೂಡಿದ ತಾಯಿ ಚಿಟ್ಟೆ ಪರೀಕ್ಷೆ ವಿಧಾನವನ್ನು ಅನುಸರಿಸಬೇಕು. ಹುಳು ಸಾಕಾಣಿಕೆ ಅವಧಿಯಲ್ಲಿ ಅಸಮ ಹುಳುಗಳು, ಅಥವಾ ಹುಳು ಹಿಕ್ಕೆಯನ್ನು ಕಾಲಕಾಲಕ್ಕೆ ನಿಗದಿತ ವಿಧಾನದಲ್ಲಿ ಪರೀಕ್ಷಿಸಿ, ರೋಗಾಣು ಕಂಡು ಬಂದಲ್ಲಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಸೋಂಕು ನಿವಾರಿಸಬೇಕು.ರೋಗಾಣುಗಳ ಇರುವಿಕೆಯನ್ನು ಗುರುತಿಸಲು ತಾಯಿ ಚಿಟ್ಟೆಯನ್ನು ಶೇ.0.6ರ 2 ಮಿ.ಲೀ. ಪೊಟ್ಯಾಷಿಯಂ ಕಾರ್ಬೊನೇಟ್ ದ್ರಾವಕದಲ್ಲಿ ಅರೆದು, ರಸವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಬೇಕು. ಇದೇ ರೀತಿ ಹುಳು ಸಾಕಾಣಿಕೆ ಪರಿಸರದ ಧೂಳು, ಚಾಕಿಯಾಗದ/ಸತ್ತ/ಮೊಟ್ಟೆಗಳ ಪರೀಕ್ಷೆ, ಅಸಮಗಾತ್ರದ ಚಾಕಿ ಹುಳು ಮತ್ತು ಪ್ರೌಢ ಹುಳುಗಳನ್ನು ಮೇಲೆ ತಿಳಿಸಿದ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ಇದಲ್ಲದೆ ಕಸ/ಹಿಕ್ಕೆಗಳನ್ನು ಸಹ ರೋಗಾಣುಗಳ ಪತ್ತೆಗಾಗಿ ಪರೀಕ್ಷಿಸಿ, ರೋಗಾಣುಗಳಿದ್ದಲ್ಲಿ ಬೆಳೆಯನ್ನು ನಾಶಪಡಿಸಿ ಸೋಂಕು ನಿವಾರಿಸಬೇಕು.

ಹಾಲು ತೊಂಡೆ ರೋಗ

‘ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್’ ವೈರಸ್‍ನಿಂದ ಈ ರೋಗ ಬರುತ್ತದೆ. ಪ್ರಾರಂಭದಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ ರೋಗ ಉಲ್ಬಣಿಸಿದಾಗ ಹುಳುವಿನ ಜೀರ್ಣಶಕ್ತಿ ಕಡಿಮೆಯಾಗಿ ಹುಳುವಿನ ಮೈಮೇಲಿನ ಉಂಗುರ ವಲಯ ಭಾಗ ಊದಿಕೊಳ್ಳುತ್ತದೆ. ಹುಳುವಿನ ಚರ್ಮವು ಜ್ವರಕ್ಕೆ ಮೊದಲು ಹೊಳೆಯುತ್ತಿದ್ದು, ಜ್ವರಕ್ಕೆ ಹೋಗುವಲ್ಲಿ ವಿಫಲವಾಗುತ್ತದೆ. ಚರ್ಮವು ಸುಲಭವಾಗಿ ಒಡೆದು ಹುಳುಗಳ ಶರೀರದಿಂದ ದಟ್ಟ ಬಿಳಿ ರಸ ಹೊರಬರುತ್ತದೆ. ಇದರಲ್ಲಿ ಲಕ್ಷಾಂತರ ಪಾಲಿಹೆಡ್ರಾ ವೈರಸ್‍ಗಳು ಇರುತ್ತವೆ. ಈ ರೋಗ ವರ್ಷದ ಎಲ್ಲಾ ಕಾಲದಲ್ಲಿ ಕಂಡುಬಂದರೂ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ವಾತಾವರಣದ ಹಠಾತ್ ವೈಪರೀತ್ಯ ಈ ರೋಗಕ್ಕೆ ಕಾರಣವಾಗುತ್ತದೆ.

ಹುಳು ಸಾಕಾಣಿಕೆ ಮನೆ ಮತ್ತು ಸಲಕರಣೆಗಳನ್ನು ಸಂಪೂರ್ಣ ಸೋಂಕು ನಿವಾರಣೆಯಿಂದ ಮೂಲ ಕಾರಣವಾದ ವೈರಸ್‍ಗಳನ್ನು ನಾಶಪಡಿಸಬೇಕು. ರೋಗದ ತೀವ್ರತೆ ಹೆಚ್ಚಾಗಿದ್ದಲ್ಲಿ ಶೇ.0.3 ರ ಸುಣ್ಣದ ತಿಳಿನೀರನ್ನು ಹುಳು ಸಾಕುವ ಮನೆ ಮತ್ತು ಸಲಕರಣೆಗಳಿಗೆ ಸಿಂಪರಣೆ ಮಾಡುವುದನ್ನು ಶಿಫಾರಸ್ಸು ಮಾಡಲಾಗಿದೆ. ಹುಳು ಸಾಕಾಣಿಕೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಶಿಫಾರಿತ ಹಾಸಿಗೆ ಸೋಂಕು ನಿವಾರಕಗಳನ್ನು ತಿಳಿಸಿದ ಕ್ರಮದಲ್ಲಿ ಬಳಸಬೇಕು. ರೋಗದ ತೀವ್ರತೆ ಹೆಚ್ಚಾಗಿದ್ದಲ್ಲಿ ಸುಟ್ಟ ಸುಣ್ಣದ ಪುಡಿಯನ್ನು ಹುಳು ಹಾಸಿಗೆಯಲ್ಲಿ ಧೂಳೀಕರಿಸಿ ಸೋಂಕು ನಿವಾರಿಸಬಹುದು. ರೋಗಪೀಡಿತ ಹುಳುಗಳನ್ನು ಗುರುತಿಸಿ ಆಯ್ದು ನಾಶಪಡಿಸಬೇಕು. ಹುಳು ಸಾಕಾಣಿಕೆ ಮನೆಯ ಉಷ್ಣಾಂಶ ಮತ್ತು ಶ್ಶೆತ್ಯಾಂಶದಲ್ಲಿ ವೈಪರೀತ್ಯ ಬರದಂತೆ ನಿಯಂತ್ರಿಸಬೇಕು. ಉತ್ತಮ ಗುಣಮಟ್ಟದ ಸೊಪ್ಪು, ಅಗತ್ಯ ಸ್ಥಳಾವಕಾಶ ಹಾಗೂ ಗಾಳಿ ಸಂಚಾರವನ್ನು ವಿಶೇಷವಾಗಿ 4 ಮತ್ತು 5 ನೇ ಹಂತದ ಹುಳುಗಳಿಗೆ ಒದಗಿಸಬೇಕು. ಸಪ್ಪೆ ರೋಗ: ಸೈಟೊಪ್ಲಾಸ್ಮಿಕ್ ಪಾಲಿಹೆಡ್ರೋಸಿಸ್ ವೈರಸ್, ಕೆಂಚು ವೈರಸ್‍ಗಳಿಂದ ಹಾಗೂ ಹಲವಾರು ಬ್ಯಾಕ್ಟೀರಿಯಾಗಳಿಂದ ಈ ರೋಗ ಬರುತ್ತದೆ.

ಸಪ್ಪೆರೋಗದಲ್ಲಿ ಹಲವಾರು ವಿಧಗಳಿವೆ. ಅವುಗಳನ್ನು ಬಿಳಿಸಪ್ಪೆ, ಕೆಂಚು, ಸರಪಿಕ್ಕೆ, ತಲೆಕೆಂಚು ಎಂದು ಕರೆಯುತ್ತಾರೆ. ರೋಗಭಾದಿತ ಹುಳುಗಳ ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದರಿಂದ ಕೆಂಚು ರೋಗವೆಂದು, ಕೆಲವೊಮ್ಮೆ ಚರ್ಮ ಬಿಳಿಚಿಕೊಂಡು, ಹುಳುಗಳ ಹಿಕ್ಕೆ, ಸರದ ರೂಪದಲ್ಲಿರುವುದರಿಂದ ಸರಪಿಕ್ಕೆ ಎಂದು ಕರೆಯುತ್ತಾರೆ. ರೋಗದ ಪ್ರಾರಂಭದಲ್ಲಿ ಹುಳುಗಳು ಚಟುವಟಿಕೆಯಿಂದಿರದೆ ಬೆಳವಣಿಗೆಯಲ್ಲಿ ಏರುಪೇರುಂಟಾಗುತ್ತದೆ. ಆಕಾರವಿಲ್ಲದ ರೀತಿಯಲ್ಲಿ ಹಿಕ್ಕೆಗಳನ್ನು ಇಡುತ್ತವೆ. ಕೆಲವೊಮ್ಮೆ ಮಣಿಸರದಂತೆ ಹಿಕ್ಕೆಯನ್ನಿಡುತ್ತವೆ. ಜ್ವರಕ್ಕೆ ಸಮವಾಗಿ ಹೋಗದೆ ರೋಗ ಉಲ್ಬಣಗೊಂಡಂತೆ ಹುಳುಗಳ ದೇಹ ಮೃದುವಾಗಿ ಚರ್ಮ ಸಡಿಲವಾಗಿ ವಾಂತಿ ಮತ್ತು ಅತಿ ಸಾರದಿಂದ ಬಳಲುತ್ತವೆ. ಸತ್ತ ಹುಳುಗಳ ಶರೀರ ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿ ಕೆಟ್ಟ ವಾಸನೆ ಹೊರಸೂಸುತ್ತದೆ. ರೋಗಪೀಡಿತ ಹುಳುಗಳು ಗೂಡುಕಟ್ಟದೆ ಕಪ್ಪಾಗಿ ಚಂದ್ರಿಕೆಯಲ್ಲಿ ನೇತು ಬೀಳುತ್ತವೆ. ಈ ರೋಗ ವರ್ಷಪೂರ್ತಿ ಕಂಡುಬಂದರೂ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಹೆಚ್ಚಾಗಿರುತ್ತದೆ. ಹುಳು ಸಾಕಾಣಿಕೆ ಮನೆ, ಪರಿಸರ, ಸಲಕರಣೆಗಳು ಮತ್ತು ಮೊಟ್ಟೆಗಳನ್ನು ವೈe್ಞÁನಿಕ ರೀತಿಯಲ್ಲಿ ಸೋಂಕು ನಿವಾರಣೆ ಮಾಡಬೇಕು. ಮುಂಜಾಗ್ರತೆ ಕ್ರಮವಾಗಿ ಶಿಫಾರಿತ ಹಾಸಿಗೆ ಸೋಂಕು ನಿವಾರಕಗಳನ್ನು ಬಳಸಬೇಕು.

ರೋಗದ ತೀವ್ರ ಹಾವಳಿ ಕಂಡುಬಂದಲ್ಲಿ ಸುಟ್ಟ ಸುಣ್ಣದ ಪುಡಿಯನ್ನು ಹುಳು ಹಾಸಿಗೆಯಲ್ಲಿ ಧೂಳೀಕರಿಸಬಹುದು. ರೋಗಪೀಡಿತ ಹುಳುಗಳನ್ನು ಸಾಧ್ಯವಾದಷ್ಟು ಬೇಗನೆ ಬೇರ್ಪಡಿಸಿ ಸೋಂಕು ನಿವಾರಕಗಳಿಂದ ಅಥವಾ ಸುಟ್ಟು ನಾಶಪಡಿಸಬೇಕು ಅಥವಾ ಹೂಳಬೇಕು. ಹುಳು ಸಾಕಾಣಿಕೆ ಅವಧಿಯಲ್ಲಿ ಶುಚಿತ್ವವನ್ನು ಕಾಪಾಡುವುದಲ್ಲದೆ ಉತ್ತಮ ಗುಣಮಟ್ಟದ ಸೊಪ್ಪು, ಸ್ಥಳಾವಕಾಶ ಮತ್ತು ಗಾಳಿ ಸಂಚಾರ ಒದಗಿಸಬೇಕು. ಒದ್ದೆ ಸೊಪ್ಪನ್ನು ನೀಡಬಾರದು. ನಿಗದಿತ ಉಷ್ಣಾಂಶ ಮತ್ತು ಶ್ಶೆತ್ಯಾಂಶವನ್ನು ಕಾಪಾಡಬೇಕು.

ಸುಣ್ಣಕಟ್ಟು ರೋಗ

ಸುಣ್ಣಕಟ್ಟು ರೋಗ ಮತ್ತು ಆಸ್ಪರ್‍ಜಿಲ್ಲೋಸಿಸ್: "ಬುವೇರಿಯಾ ಬ್ಯಾಸಿಯಾನ" ಮತ್ತು "ಆಸ್ಪರ್ ಜಿಲ್ಲಸ್" ಎಂಬ ಶಿಲೀಂಧ್ರಗಳಿಂದ ಈ ರೋಗಗಳು ಬರುತ್ತವೆ. ಪ್ರಾರಂಭಿಕ ಹಂತದಲ್ಲಿ ರೋಗದ ಯಾವುದೇ ಹೊರಲಕ್ಷಣಗಳು ಕಾಣುವುದಿಲ್ಲ. ಹುಳುಗಳು ಸೊಪ್ಪುತಿನ್ನದೆ ಚಟುವಟಿಕೆ ಕಳೆದುಕೊಂಡು ಸೊಪ್ಪಿನ ತಳಭಾಗದಲ್ಲಿ ಸೇರುತ್ತವೆ. ರೋಗ ಪೀಡಿತ ಹುಳುಗಳು ಕ್ರಮೇಣ ಸತ್ತು ನಂತರ ಗಡಸಾಗುತ್ತವೆ. ಹುಳುವಿನ ಮೈಮೇಲೆ ಶಿಲೀಂಧ್ರದ ಕೊನಿಡಿಯಾ ಉತ್ಪತ್ತಿಯಾಗಿ, ಸತ್ತಹುಳು ಬಿಳಿಯದಾಗಿ ಕಾಣುತ್ತದೆ. ಐದನೆ ಹಂತದ ಹುಳುಗಳಿಗೆ ಈ ರೋಗ ತಗುಲಿದರೆ ಅಂತಹ ಹುಳುಗಳು ಗೂಡು ಕಟ್ಟಿದರೂ ಸಹ ಕೋಶ ಸತ್ತು ಗಟ್ಟಿಯಾಗುತ್ತದೆ. ಆಸ್ಪರ್ ಜಿಲ್ಲಸ್ ಶಿಲೀಂಧ್ರವು ಸಾಮಾನ್ಯವಾಗಿ ಚಾಕಿ ಹುಳುವಿನ ಹಂತದಲ್ಲಿ ಸೋಂಕು ಉಂಟುಮಾಡುತ್ತದೆ. ಸೋಂಕು ತಗುಲಿದ ಹುಳುಗಳು ಚಟುವಟಿಕೆ ಕಳೆದುಕೊಂಡು ಹುಳುಗಳ ಮೈಮೇಲೆ ಸ್ಪಷ್ಟ ಲಕ್ಷಣಗಳು ಕಾಣದಂತೆ ಸತ್ತುಹೋಗುತ್ತವೆ.

ಪ್ರೌಢ ಹುಳುಗಳಿಗೆ ಸೋಂಕು ತಗುಲಿದಲ್ಲಿ ಸೋಂಕು ತಗುಲಿದ ಭಾಗದಲ್ಲಿ ಕಪ್ಪುಮಚ್ಚೆ ಕಂಡುಬಂದು ಶಿಲೀಂಧ್ರಗಳ ವಿಷಕಾರಿ ಪರಿಣಾಮದಿಂದ ಹುಳುಗಳು ಸಾಯುತ್ತವೆ. ಸುಣ್ಣಕಟ್ಟು ರೋಗವು ಮಳೆಗಾಲದಲ್ಲಿ ಕಾಣಿಸಿಕೊಂಡು ಚಳಿಗಾಲದಲ್ಲಿ ಪ್ರಬಲವಾಗುವುದು. ಚಾಕಿ ಹುಳುಗಳಿಗೆ ಬೇಕಾದ ಪೂರಕ ಅಂಶಗಳಾದ ಹೆಚ್ಚಿನ ಉಷ್ಣಾಂಶ (27-280 ಸೆಂ.) ಮತ್ತು ಶ್ಶೆತ್ಯಾಂಶ (ಶೇ. 85-95) ಆಸ್ಪರ್ ಜಿಲ್ಲಸ್ ಶಿಲೀಂಧ್ರದ ಬೆಳೆವಣಿಗೆಗೆ ಅನುಕೂಲಕರ. ಆದ್ದರಿಂದ ಈ ರೋಗವು ಚಾಕಿ ಹುಳುಗಳಲ್ಲಿ ಹೆಚ್ಚು ಕಂಡುಬರುತ್ತದೆ. ಹುಳು ಸಾಕಾಣಿಕೆ ಮನೆ, ಪರಿಸರ, ಸಾಮಗ್ರಿ ಮತ್ತು ಮೊಟ್ಟೆಗಳ ಸೋಂಕು ನಿವಾರಣೆಯನ್ನು ವೈe್ಞÁನಿಕ ರೀತಿಯಲ್ಲಿ ಅನುಸರಿಸಬೇಕು. ಹುಳು ಸಾಕಾಣಿಕೆ ಅವಧಿಯಲ್ಲಿ ರೋಗಪೀಡಿತ ಹುಳುಗಳನ್ನು ಬೇರ್ಪಡಿಸಿ ನಾಶಪಡಿಸಬೇಕು.

ಶುಚಿತ್ವವನ್ನು ಕಾಪಾಡುವುದಲ್ಲದೆ, ಹುಳುವಿನ ಪ್ರತಿ ಜ್ವರದ ಸಮಯದಲ್ಲಿ ಸುಟ್ಟ ಸುಣ್ಣದ ಪುಡಿಯನ್ನು ಹುಳು ಹಾಸಿಗೆಯಲ್ಲಿ ಧೂಳೀಕರಿಸಬೇಕು. ಹುಳು ಹಾಸಿಗೆ ತೆಳುವಾಗಿ ಒಣಗಿರುವಂತೆ ನೋಡಿಕೊಳ್ಳಬೇಕು. ಸಾಕಷ್ಟು ಗಾಳಿ ಸಂಚಾರಕ್ಕೆ ಅನುಕೂಲ ಮಾಡಬೇಕು. ಶೇ. 1 ರಿಂದ 2 ರಷ್ಟು (ಶೇ. 1 ರಷ್ಟು ಚಾಕಿ ಹುಳುಗಳಿಗೆ ಮತ್ತು ಶೇ. 2 ರಷ್ಟು ಪ್ರೌಢ ಹಂತದ ಹುಳುಗಳಿಗೆ) ಡೈಥೇನ್ ಒ-45 (ಇಂಡೋಫಿಲ್ ಎಂ-45) ಶಿಲೀಂಧ್ರನಾಶಕವನ್ನು ಸುದ್ದೆ ಮಣ್ಣಿನಲ್ಲಿ ಅಥವಾ ಕ್ಯಾಪ್ಟಾನ್ (ಛಿಚಿಠಿಣಚಿಟಿ) ಶಿಲೀಂಧ್ರನಾಶಕವನ್ನು ಸುಣ್ಣದ ಪುಡಿಯಲ್ಲಿ ಬೆರೆಸಿ ಅಥವ ಶಿಫಾರಿತ ಹಾಸಿಗೆ ಸೋಂಕು ನಿವಾರಕವನ್ನು ಹುಳುಗಳು ಜ್ವರದಿಂದ ಎದ್ದಕೂಡಲೇ ಮತ್ತು ಐದನೇ ಹಂತದ ನಾಲ್ಕನೆ ದಿನ ಧೂಳೀಕರಿಸಬೇಕು. ಫಾರ್ಮಲಿನ್ ಚಾಫ್ ತಯಾರಿಸಲು ಭಾಗಶಃ ಸುಟ್ಟ ಭತ್ತದ ಹೊಟ್ಟನ್ನು ಫಾರ್ಮಲಿನ್ ಜೊತೆ ಶೇ. 0.6/0.8 ನ್ನು (0.6% ಫಾರ್ಮಲಿನ್ ಚಾಕಿ ಹುಳುವಿಗೆ, ಮತ್ತು 0.8% ಪ್ರೌಢ ಹುಳುವಿಗೆ) 10:1 ರ ಅನುಪಾತದಲ್ಲಿ ಮಿಶ್ರಣ ಮಾಡಬೇಕು. ಹೊಟ್ಟನ್ನು ಒಂದೇ ಸಮವಾಗಿ ಪ್ರತಿ ಸಾರಿ ಜ್ವರದಿಂದ ಎದ್ದ ಹುಳುವಿನ ಮೇಲೆ ಚದರ ಅಡಿಗೆ 3.5 ಗ್ರಾಂ.ನಂತೆ ಹರಡಿ ಮೇಣದ ಕಾಗದ/ವೃತ್ತಪತ್ರಿಕೆಯಿಂದ 30 ನಿಮಿಷಗಳವರೆಗೆ ಮುಚ್ಚಬೇಕು. ತರುವಾಯ ವೃತ್ತಪತ್ರಿಕೆ ತೆಗೆದು ಸೊಪ್ಪು ಕೊಡಬೇಕು. ಫಾರ್ಮಲಿನ್ ದ್ರಾವಣದಿಂದ ಸೋಂಕು ನಿವಾರಣೆ ಮಾಡಿದಲ್ಲಿ, ಆಸ್ಪರ್ ಜಿಲ್ಲೋಸಿಸ್‍ನ ರೋಗಾಣುಗಳು ಸಂಪೂರ್ಣ ನಾಶವಾಗುವುದಿಲ್ಲ. ಸಾಕಣಿಕೆ ಕೊಠಡಿ ಮತ್ತು ಸಲಕರಣೆಗಳನ್ನು ಶೇ. 1 ರ ಸುಣ್ಣದ ತಿಳಿ ನೀರು ಅಥವಾ ಶಿಫಾರಿತ ಸೋಂಕು ನಿವಾರಕಗಳಿಂದ ಸೋಂಕು ನಿವಾರಿಸಬೇಕು. ಬ್ಲೀಚಿಂಗ್ ಪುಡಿ ಮತ್ತು ಕ್ಲೋರೀನ್ ಡೈಆಕ್ಸೈಡ್ ಸೋಂಕು ನಿವಾರಣೆಯಲ್ಲಿ ಸುಣ್ಣದಪುಡಿ ಬಳಸುವ ಕಾರಣ ಮತ್ತೊಮ್ಮೆ ಸುಣ್ಣದ ತಿಳಿ ಸಿಂಪಡಿಸುವ ಅವಶ್ಯಕತೆಯಿರುವುದಿಲ್ಲ.

ಸುಣ್ಣಕಟ್ಟು ರೋಗ ಮತ್ತು ಆಸ್ಪರ್‍ಜಿಲ್ಲೋಸಿಸ್:"ಬುವೇರಿಯಾ ಬ್ಯಾಸಿಯಾನ" ಮತ್ತು "ಆಸ್ಪರ್ ಜಿಲ್ಲಸ್" ಎಂಬ ಶಿಲೀಂಧ್ರಗಳಿಂದ ಈ ರೋಗಗಳು ಬರುತ್ತವೆ. ಪ್ರಾರಂಭಿಕ ಹಂತದಲ್ಲಿ ರೋಗದ ಯಾವುದೇ ಹೊರಲಕ್ಷಣಗಳು ಕಾಣುವುದಿಲ್ಲ. ಹುಳುಗಳು ಸೊಪ್ಪುತಿನ್ನದೆ ಚಟುವಟಿಕೆ ಕಳೆದುಕೊಂಡು ಸೊಪ್ಪಿನ ತಳಭಾಗದಲ್ಲಿ ಸೇರುತ್ತವೆ. ರೋಗ ಪೀಡಿತ ಹುಳುಗಳು ಕ್ರಮೇಣ ಸತ್ತು ನಂತರ ಗಡಸಾಗುತ್ತವೆ. ಹುಳುವಿನ ಮೈಮೇಲೆ ಶಿಲೀಂಧ್ರದ ಕೊನಿಡಿಯಾ ಉತ್ಪತ್ತಿಯಾಗಿ, ಸತ್ತಹುಳು ಬಿಳಿಯದಾಗಿ ಕಾಣುತ್ತದೆ. ಐದನೆ ಹಂತದ ಹುಳುಗಳಿಗೆ ಈ ರೋಗ ತಗುಲಿದರೆ ಅಂತಹ ಹುಳುಗಳು ಗೂಡು ಕಟ್ಟಿದರೂ ಸಹ ಕೋಶ ಸತ್ತು ಗಟ್ಟಿಯಾಗುತ್ತದೆ. ಆಸ್ಪರ್ ಜಿಲ್ಲಸ್ ಶಿಲೀಂಧ್ರವು ಸಾಮಾನ್ಯವಾಗಿ ಚಾಕಿ ಹುಳುವಿನ ಹಂತದಲ್ಲಿ ಸೋಂಕು ಉಂಟುಮಾಡುತ್ತದೆ. ಸೋಂಕು ತಗುಲಿದ ಹುಳುಗಳು ಚಟುವಟಿಕೆ ಕಳೆದುಕೊಂಡು ಹುಳುಗಳ ಮೈಮೇಲೆ ಸ್ಪಷ್ಟ ಲಕ್ಷಣಗಳು ಕಾಣದಂತೆ ಸತ್ತುಹೋಗುತ್ತವೆ. ಪ್ರೌಢ ಹುಳುಗಳಿಗೆ ಸೋಂಕು ತಗುಲಿದಲ್ಲಿ ಸೋಂಕು ತಗುಲಿದ ಭಾಗದಲ್ಲಿ ಕಪ್ಪುಮಚ್ಚೆ ಕಂಡುಬಂದು ಶಿಲೀಂಧ್ರಗಳ ವಿಷಕಾರಿ ಪರಿಣಾಮದಿಂದ ಹುಳುಗಳು ಸಾಯುತ್ತವೆ.ಸುಣ್ಣಕಟ್ಟು ರೋಗವು ಮಳೆಗಾಲದಲ್ಲಿ ಕಾಣಿಸಿಕೊಂಡು ಚಳಿಗಾಲದಲ್ಲಿ ಪ್ರಬಲವಾಗುವುದು. ಚಾಕಿ ಹುಳುಗಳಿಗೆ ಬೇಕಾದ ಪೂರಕ ಅಂಶಗಳಾದ ಹೆಚ್ಚಿನ ಉಷ್ಣಾಂಶ (27-280 ಸೆಂ.) ಮತ್ತು ಶ್ಶೆತ್ಯಾಂಶ (ಶೇ. 85-95) ಆಸ್ಪರ್ ಜಿಲ್ಲಸ್ ಶಿಲೀಂಧ್ರದ ಬೆಳೆವಣಿಗೆಗೆ ಅನುಕೂಲಕರ.

ಆದ್ದರಿಂದ ಈ ರೋಗವು ಚಾಕಿ ಹುಳುಗಳಲ್ಲಿ ಹೆಚ್ಚು ಕಂಡುಬರುತ್ತದೆ.ಹುಳು ಸಾಕಾಣಿಕೆ ಮನೆ, ಪರಿಸರ, ಸಾಮಗ್ರಿ ಮತ್ತು ಮೊಟ್ಟೆಗಳ ಸೋಂಕು ನಿವಾರಣೆಯನ್ನು ವೈe್ಞÁನಿಕ ರೀತಿಯಲ್ಲಿ ಅನುಸರಿಸಬೇಕು. ಹುಳು ಸಾಕಾಣಿಕೆ ಅವಧಿಯಲ್ಲಿ ರೋಗಪೀಡಿತ ಹುಳುಗಳನ್ನು ಬೇರ್ಪಡಿಸಿ ನಾಶಪಡಿಸಬೇಕು. ಶುಚಿತ್ವವನ್ನು ಕಾಪಾಡುವುದಲ್ಲದೆ, ಹುಳುವಿನ ಪ್ರತಿ ಜ್ವರದ ಸಮಯದಲ್ಲಿ ಸುಟ್ಟ ಸುಣ್ಣದ ಪುಡಿಯನ್ನು ಹುಳು ಹಾಸಿಗೆಯಲ್ಲಿ ಧೂಳೀಕರಿಸಬೇಕು. ಹುಳು ಹಾಸಿಗೆ ತೆಳುವಾಗಿ ಒಣಗಿರುವಂತೆ ನೋಡಿಕೊಳ್ಳಬೇಕು. ಸಾಕಷ್ಟು ಗಾಳಿ ಸಂಚಾರಕ್ಕೆ ಅನುಕೂಲ ಮಾಡಬೇಕು.ಶೇ. 1 ರಿಂದ 2 ರಷ್ಟು (ಶೇ. 1 ರಷ್ಟು ಚಾಕಿ ಹುಳುಗಳಿಗೆ ಮತ್ತು ಶೇ. 2 ರಷ್ಟು ಪ್ರೌಢ ಹಂತದ ಹುಳುಗಳಿಗೆ) ಡೈಥೇನ್ ಒ-45 (ಇಂಡೋಫಿಲ್ ಎಂ-45) ಶಿಲೀಂಧ್ರನಾಶಕವನ್ನು ಸುದ್ದೆ ಮಣ್ಣಿನಲ್ಲಿ ಅಥವಾ ಕ್ಯಾಪ್ಟಾನ್ (ಛಿಚಿಠಿಣಚಿಟಿ) ಶಿಲೀಂಧ್ರನಾಶಕವನ್ನು ಸುಣ್ಣದ ಪುಡಿಯಲ್ಲಿ ಬೆರೆಸಿ ಅಥವ ಶಿಫಾರಿತ ಹಾಸಿಗೆ ಸೋಂಕು ನಿವಾರಕವನ್ನು ಹುಳುಗಳು ಜ್ವರದಿಂದ ಎದ್ದಕೂಡಲೇ ಮತ್ತು ಐದನೇ ಹಂತದ ನಾಲ್ಕನೆ ದಿನ ಧೂಳೀಕರಿಸಬೇಕು. ಫಾರ್ಮಲಿನ್ ಚಾಫ್ ತಯಾರಿಸಲು ಭಾಗಶಃ ಸುಟ್ಟ ಭತ್ತದ ಹೊಟ್ಟನ್ನು ಫಾರ್ಮಲಿನ್ ಜೊತೆ ಶೇ. 0.6/0.8 ನ್ನು (0.6% ಫಾರ್ಮಲಿನ್ ಚಾಕಿ ಹುಳುವಿಗೆ, ಮತ್ತು 0.8% ಪ್ರೌಢ ಹುಳುವಿಗೆ) 10:1 ರ ಅನುಪಾತದಲ್ಲಿ ಮಿಶ್ರಣ ಮಾಡಬೇಕು. ಹೊಟ್ಟನ್ನು ಒಂದೇ ಸಮವಾಗಿ ಪ್ರತಿ ಸಾರಿ ಜ್ವರದಿಂದ ಎದ್ದ ಹುಳುವಿನ ಮೇಲೆ ಚದರ ಅಡಿಗೆ 3.5 ಗ್ರಾಂ.ನಂತೆ ಹರಡಿ ಮೇಣದ ಕಾಗದ/ವೃತ್ತಪತ್ರಿಕೆಯಿಂದ 30 ನಿಮಿಷಗಳವರೆಗೆ ಮುಚ್ಚಬೇಕು. ತರುವಾಯ ವೃತ್ತಪತ್ರಿಕೆ ತೆಗೆದು ಸೊಪ್ಪು ಕೊಡಬೇಕು.ಫಾರ್ಮಲಿನ್ ದ್ರಾವಣದಿಂದ ಸೋಂಕು ನಿವಾರಣೆ ಮಾಡಿದಲ್ಲಿ, ಆಸ್ಪರ್ ಜಿಲ್ಲೋಸಿಸ್‍ನ ರೋಗಾಣುಗಳು ಸಂಪೂರ್ಣ ನಾಶವಾಗುವುದಿಲ್ಲ. ಸಾಕಣಿಕೆ ಕೊಠಡಿ ಮತ್ತು ಸಲಕರಣೆಗಳನ್ನು ಶೇ. 1 ರ ಸುಣ್ಣದ ತಿಳಿ ನೀರು ಅಥವಾ ಶಿಫಾರಿತ ಸೋಂಕು ನಿವಾರಕಗಳಿಂದ ಸೋಂಕು ನಿವಾರಿಸಬೇಕು. ಬ್ಲೀಚಿಂಗ್ ಪುಡಿ ಮತ್ತು ಕ್ಲೋರೀನ್ ಡೈಆಕ್ಸೈಡ್ ಸೋಂಕು ನಿವಾರಣೆಯಲ್ಲಿ ಸುಣ್ಣದಪುಡಿ ಬಳಸುವ ಕಾರಣ ಮತ್ತೊಮ್ಮೆ ಸುಣ್ಣದ ತಿಳಿ ಸಿಂಪಡಿಸುವ ಅವಶ್ಯಕತೆಯಿರುವುದಿಲ್ಲ.

ಮೂಲ : ಕರ್ನಾಟಕ  ರೇಷ್ಮೆ  ಇಲಾಖೆ

ಕೊನೆಯ ಮಾರ್ಪಾಟು : 12/2/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate