অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೈವಿಕ –ಇಂಧನ ಮರಗಳ / ಸಸ್ಯಗಳ ವಿಮೆ

ವಿಶ್ವದ ಶಕ್ತಿಯ 80 % ಬೇಡಿಕೆಯನ್ನು ಪಳೆಯುಳಿಕೆ ಇಂಧನ ಮೂಲದಿಂದ ಪೂರೈಕೆಯಾಗುತ್ತಿದೆ. ಅದು ದಿನೇ ದಿನೇ ಹೆಚ್ಚುತ್ತಿರುವ ಬಳಕೆಯಿಂದಾಗಿ ನಶಿಸುವತ್ತ ಸಾಗಿದೆ. ಇದರ ಪರಿಣಮವಾಗಿ ಪರ್ಯಾಯ ಇಂಧನ ಮೂಲದ ಶೋಧನೆ ಆಗ ಬೇಕಿದೆ. ಅವುಗಳಲ್ಲಿ ಅತ್ಯಂತ ಆಶಾದಾಯಕವಾದ ಮೂಲ ಎಂದರೆ ಜೈವಿಕ ಇಂಧನ.. ಈ ಪರಿಸರ ಪ್ರೇಮಿ ಉರುವಲನ್ನು ಪ್ರಾಯೋಜಿಸಲು ಸರ್ಕಾರವು ಅನೇಕ ಸಬ್ಸಿಡಿಗಳನ್ನು ಮತ್ತು ಪ್ರೋತ್ಸಾಹ ಧನವನ್ನು ಜೈವಿಕ ಉರುವಲು ಬೆಳೆಗಾರರಿಗೆ ನೀಡಿ ಇಂಧನ ಭದ್ರತೆಯನ್ನು ಸಾಧಿಸಲಿದೆ.

ಈ ನೀತಿಯ ಪ್ರಮುಖ ಲಕ್ಷಣಗಳು

  • ಆರು ರಿತಿಯ ಮರಗಳಿಗೆ/ ಸಸ್ಯ ಪ್ರಬೇಧ ಗಳಿಗೆ , ಜಾತ್ರೊಪ ಸೇರಿದಂತೆ ವಿಶಿಷ್ಟವಾದ ವಿಮಾ ವ್ಯಾಪ್ತಿ.
  • ಕ್ಷಾಮದಲ್ಲಿ ಆಗುವ ನಷ್ಟಕ್ಕೆ ಪರಿಹಾರ
  • ಕೃಷಿ ಖರ್ಚು & ಬೇರೆ ಬೇರೆ ಪ್ರಬೇಧಗಳಿಗೆ ಬದಲಾಗುವ ಮರದ / ಗಿಡದ ವಯಸ್ಸಿಗೆ ಅನುಗುಣವಾಗಿ ಹೊಣೆಯೂ ಬೇರೆ ಯಾಗಿರುವುದು.

ಅನ್ವಯ

ಈ ವಿಮಾಯೋಜನೆಯು ಜೈವಿಕ ಇಂಧನ ಮರ/ ಗಿಡಗಳ ಬೆಳೆಗಾರರಿಗೆ , ಉತ್ಪಾದಕರಿಗೆ ಅವರ ಇಳುವರಿಯು ನಿರ್ಧಿಷ್ಟ ಅಪಾಯಗಳಿಗೆ ಗುರಿಯಾಗುವುದರ ವಿರುದ್ಧ ವಿಮಾ ಸೌಲಭ್ಯ ವಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ಗಿಡ/ ಮರಗಳು: ಜಾತ್ರೊಪಾ ಕರಕಾಸ್( ಜಾತ್ರೋಫಾ), ಪೊಂಗಮಿನ ಪಿನ್ನಾಟ( ಕಾರಂಜಾ), ಅಝಡಿರಚ್ಟಾ ಇಂಡಿಕಾ( ನೀಮ್), ಬಸ್ಸಿಯಾ ಲಟಿಫೊಲಿಯಾ( ಮಹುಆ), ಕಲ್ಲೊಫೈಲಂ ಇನೊ ಫೈಲಂ ( ಪೊಲಂಗ) & ಸಿಮರೌಬಾಗ್ಲಕ( ಪ್ಯಾರಡೈಜ ಟ್ರೀ)

ವ್ಯಾಪ್ತಿಯ ಅವಕಾಶ

ನೈಸರ್ಗಿಕ ವಿಕೋಪಗಳಾದ, ನೆರೆ, ಚಂಡಮಾರುತ, ಬಿರುಗಾಳಿ, ಹಿಮ ,ಕೀಟ & ರೋಗ ಇತ್ಯಾದಿಗಳಂದಾದ ಆರ್ಥಿಕ ನಷ್ಟ ಹಾಕಿದ ಬಂಡವಾಳ,ಅಥವ ಒಟ್ಟು ಬಂಡವಾಳಕ್ಕೆ ಪರಿಹಾರ ಕೊಡುವರು. ನಷ್ಟವು ಒಂದು ಮರ, ಅಥವ ಎಲ್ಲ ಬೆಳೆಗೆ ಕೊಡಬಹುದು. ಆದ ಹಾನಿಯಿಂದ ಬೆಳೆ ಆರ್ಥಿಕವಾಗಿ ನಿರುಪಯುಕ್ತವಾದಾಗ ನಷ್ಟ ಪರಿಹಾರ ಸಿಗುವುದು

ವಿಮೆ ಮೊತ್ತ

ವಿಮಾ ಮೊತ್ತವು ವಿಮೆ ಮಾಡುವ ಒಂದು ಘಟಕದ ವಿಸ್ತೀರ್ಣಕ್ಕೆ ತಗುಲುವ ಕೃಷಿ ಒಳಾ0ಶ ವೆಚ್ಚಗಳನ್ನು ಅವಲಂಭಿಸಿದೆ. ಅದು ಆ ಗಿಡ /ಮರ ಮತ್ತು ಅದರ ವ ಯಸ್ಸಿಗೆ ಅನುಗುಣವಾಗಿರುವುದು . ವಿಮಾ ಮೊತ್ತವು ಸಾಮಾನ್ಯವಾಗಿ ತೊಡಗಿಸಿದ ಬಂಡವಾಳದಷ್ಟಿರುವುದು. ಅದು ಬಂಡವಾಳದ 125% / 150% ರ ತನಕ ಇರಬಹುದು

ಪ್ರಿಮಿಯಮ್

ಪ್ರಿಮಿಯಮ್ ದರವನ್ನು ಈ ರೀತಿ ಲೆಕ್ಕಹಾಕಲಾಗುವುದು.
(ఎ) ಮರದ / ಬೆಳೆಯ ಬಾಧ್ಯತೆ ಸ್ವರೂಪ;
(బి) ನಷ್ಟಪರಿಹಾರದ ಸ್ವರೂಪ;
(ಸಿ) ಭೂ ಪ್ರದೇಶ;
(ಡಿ) ಇತರರು ಇದೆ ಸಂದರ್ಭದಲ್ಲಿ ವಿಧಿಸುವ ದರ;
(ಇ) ಖೋತಾ ಮಾಡಬೇಕಾದವುಗಳು,ಮತ್ತು
(ಎಫ್) ವಿಮೆಮಾಡಿಸುವವರಿಗಾಗಿ ಮಾಡುವ ವೆಚ್ಚಗಳುr.

ವಿಮಾ ಅವಧಿ

ಪಾಲಸಿಯ ಅವಧಿ ವಾರ್ಷಿಕ. ಮತ್ತು ಪಾಲಸಿಯನ್ನು 3 ಅಥವ 5 ವರ್ಷದ ಅವಧಿಗೆ ಪಡೆಯ ಬಹುದು.

ನಷ್ಟ ಮೌಲ್ಯ ಮಾಪನ ವಿಧಾನ

ವಿಮೆ ಮಾಡಿದ ಮರ/ ಸಸ್ಯಕ್ಕೆ ಪೂರ್ಣ ನಷ್ಟವಾದಾಗ ಅಗ್ರಿಕಲ್ಚರ್ ಇನ್ ಶುರೆನ್ಸ ಕಂಪನೆಇ ಇಂಡಿಯಾ ಲಿ ಇವರಿಗೆ ನಿಗದಿತ ಕ್ಲೇಮ್ ಫಾರ್ಮ್ ಸಲ್ಲಿಸಬೇಕು.ನಂತರ ಕಂಪನಿಯು ಪರವಾನಿಗೆ ಪಡೆದ ಭಾ ಮಾಪಕರನ್ನು ಒಬ್ಬ ಕೃಷಿ ಪರಿಣಿತನೊಡನೆ ನಷ್ಟವನ್ನು ಅರಿಯಲು ಹೊಲಕ್ಕೆ ಕಳುಹಿಸುವುದು.ಇದರಿಂದ ಕ್ಲೇಮ್ ಸಂಸ್ಕರಣೆ ಮಾಡಲು ಅನುಕೂಲವಾಗುವುದು. ಮರದ ಪೂರ್ಣ ನಾಶ ಅಥವ ಹಾನಿಯಾಗಿ ಅದು ಆರ್ಥಿಕ ವಾಗಿ ಅನುತ್ಪಾದಕ ಎನಿಸಿದಾಗ ಅನದನು ಪಾಲಸಿಯ ಪ್ರಕಾರ ನಷ್ಟ ಎಂದು ಪರಿಗಣಿಸಲಾಗುವುದು. ಇಳುವರಿಯಲ್ಲಿ ಕುಸಿತ ಅಥವ ಬೆಳವನೆಗೆ ಕುಂಠಿತ ವಾದರೆ ಅದನ್ನು ನಷ್ಟ ಎಂದು ಪರಿಗಣಿಸುವುದಿಲ್ಲ.

ಸೂಚನೆ: ಈ ಮೇಲಿನ ವಿವರಗಳು ಮಾಹಿತಿಗಾಗಿ ಮಾತ್ರ, ನೈಜವಾದ ವಿಮಾ ಯೋಜನೆಯ ವಿವರವನ್ನು ಅಕ್ಷರಶಃ ಸರಿಯಾಗಿರದಿರಬಹುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate