অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹವಾಮಾನ ಆಧಾರಿತ ಬೆಳೆ ವಿಮೆ

ಹವಾಮಾನ ಆಧಾರಿತ ಬೆಳೆ ವಿಮೆ

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಎಂದರೇನು?

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು, ವಿಮೆ ಮಾಡಿದ ರೈತರಿಗೆ ಹವಾಮಾನದ ಪ್ರಕೋಪಗಳಾದ ಅತಿ ವೃಷ್ಟಿ, ಅನಾವೃಷ್ಟಿ , ಉಷ್ಣತೆ , ಹಿಮ ತೇವಾಂಶ ಮೊದಲಾದವುಗಳಿಂದ ಆಗ ಬಹುದಾದ ಬೆಳೆ ನಷ್ಟದ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡುವುದು.

ಹವಾಮಾನ ವಿಮೆ ಯೋಜನೆ ಯು ಬೆಳೆ ವಿಮಾ ಯೋಜನೆಗಿಂತ ಹೇಗೆ ಭಿನ್ನವಾಗಿದೆ

ಬೆಳೆ ವಿಮೆಯು ನಿರ್ಧಿಷ್ಟವಾಗಿ ರೈತರಿಗೆ ಕಡಿಮೆ ಇಳುವರಿಯಿಂದಾಗುವ ನಷ್ಟದ ಪರಿಹಾರ ನೀಡುವುದು. ಹವಾಮಾನ ವಿಮೆ ಯೋಜನೆಯು, ರೈತನು ಉತ್ತಮ ಫಸಲಿಗಾಗಿ ಎಲ್ಲಾ ಕ್ರಮಗಳನ್ನು ಕೈಕೊಂಡಿದ್ದರೂ ಬೆಳೆಯ ಮೇಲೆ ವಾತಾವರಣದಲ್ಲಿನ ಪ್ರತಿಕೂಲ ಪರಿಸ್ಥಿತಿಯ ಪರಿಣಾಮವಾಗಿ ಅವನು ಅನುಭವಿಸುವ ಉತ್ಪಾದನಾ ನಷ್ಟಕ್ಕೆ ರಕ್ಷಣೆ ಕೊಡುವುದು. ಹಿಂದಿನ ವರ್ಷಗಳ ಇಳುವರಿ ಮತ್ತು ಹವಾಮಾನದ ಪರಸ್ಪರ ಸಂಬಂಧದ ಅಧ್ಯಯನದಿಂದ , ಹವಾಮಾನದ ವಿವಿಧ ಅಂಶಗಳ ಗರಿಷ್ಟ ಮಿತಿಯನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ. ಈ ಮಿತಿಯಿಂದಾಚೆಗೆ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಈ ರೀತಿಯ ಹವಾಮಾನದ ಕ್ರಿಯಾ ಮಿತಿಗಳನ್ನು / ಟ್ರಿಗ್ಗರು ಗಳ ಸಹಾಯದಿಂದ ರೈತರು ಹೊಂದಬಹುದಾದ ನಷ್ಟದ ಪ್ರಮಾಣವನ್ನು ತಿಳಿದು ಅದಕ್ಕನುಗುಣವಾಗಿ ಪರಿಹಾರವನ್ನು ನಿರ್ಧರಿಸಲಾಗುತ್ತದೆ. ಹವಾಮಾನ ವಿಮೆಯಲ್ಲಿ ಹವಾಮಾನದಲ್ಲಿನ ಅಂಶಗಳ ಸ್ಥಿರ ಮಾಪನೆಗಳನ್ನು ರೈತರು ಹೊಂದಿರಬಹುದಾದ ನಷ್ಟದ ಅಂದಾಜಿಗೆ ಪರ್ಯಾಯವಾಗಿ /ಪ್ರಾಕ್ಷಿ ಯಾಗಿ ಬಳಸಲಾಗುತ್ತದೆ

ಹವಾಮಾನ ವಿಮೆ ಯೋಜನೆ ಯು ನ್ನು ಎಲ್ಲಿ ಜಾರಿಗೆ ತರಲಾಗಿದೆ?

ಹವಾಮಾನ ವಿಮೆ ಯೋಜನೆಯನ್ನು ಪ್ರಾಯೋಗಿಕವಾಗಿ 2003 ರ ಮುಂಗಾರು ಹಂಗಾಮಿನಿಂದ ಜಾರಿಗೆ ತರಲಾಗಿದೆ. ಇದನ್ನು ಜಾರಿಗೊಳಿಸಿದ ರಾಜ್ಯಗಳು: ಆಂಧ್ರ ಪ್ರದೇಶ, ಚತ್ತೀಸ್ ಗಡ,ಹರಿಯಾನ, ಕರ್ನಾಟಕ, ಮಧ್ಯ ಪ್ರದೇಶ,ಮಹರಾಷ್ಟ್ರ, ಪಂಜಾಬ್ , ರಾಜಸ್ತಾನ ಇತ್ಯಾದಿ ಪ್ರದೇಶಗಳಲ್ಲಿ ಜಾರಿಯಲ್ಲಿದೆ.

ಇದು ರಾಷ್ಟ್ರೀಯ ಕೃಷಿ ಯೋಜನೆ ಗಿಂತ ಹೇಗೆ ಭಿನ್ನ ವಾಗಿದೆ?

ಹವಾಮಾನ ಆಧಾರಿತ ವಿಮೆ ಯೋಜನೆ ಯು (WBCIS) ಒಂದು ಅನನ್ಯ ಹವಾಮಾನ ಆಧಾರಿತ ವಿಮಾ ಉತ್ಪನ್ನ. ಅನಾನುಕೂಲವಾದ ಹವಾಮಾನದಿಂದ ಬೆಳೆ ಉತ್ಪನ್ನದ ನಷ್ಟದ ವಿರುದ್ಧ ರಕ್ಷಣೆ ಕೊಡುವುದು.ಇದು ಮುಂಗಾರಿನಲ್ಲಿ ಮಳೆಯ ಅನಾಹುತ ( ಅತಿ ವೃಷ್ಟಿ & ಅನಾವೃಷ್ಟಿ) ಮತ್ತು ಹಿಂಗಾರಿನಲ್ಲಿ ಹಿಮಪಾತ,ಅತಿ ಉಷ್ಣತೆ . ತೇವಾಂಶ ,ಹದ ತಪ್ಪಿದ ಮಳೆ ಇತ್ಯಾದಿ ಹವಾಮಾನದ ವೈರೀತ್ಯದಿಂದ ರಕ್ಷಣೆ ಕೊಡುವುದು. ಇದು ಇಳುವರಿ ಖಾತ್ರಿ ವಿಮೆಯಲ್ಲ..

ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಗಳ ಹೋಲಿಕೆ

ಕ್ರ.ಸಂ.

ರಾಷ್ಟ್ರೀಯ ಕೃಷಿ ವಿಮೆ ಯೋಜನೆ(NAIS)

ಹವಾಮಾನ ಆಧಾರಿತ ಬೆಳೆ ಯೋಜನೆ(WBCIS)

1

ಎಲ್ಲ ನಷ್ಟಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ (  ಬರ, ಅತಿವೃಷ್ಟಿ, ನೆರೆ, ಆಲಿಕಲ್ಲು, ಕೀಟ ಬಾಧೆ  ಇತ್ಯಾದಿ.)

ಹವಾಮಾನದಿಂದ ಆದ ನಿಗದಿತ ನಷ್ಟಗಳು, ಮಳೆ , ಮಂಜು,ಅತಿ ಉಷ್ಣತೆ ,ತೇವಾಂಶ ಇತ್ಯಾದಿ  ಇದರ ವ್ಯಾಪ್ತಿಗೆ ಒಳಪಟ್ಟಿವೆ.    ಇದು  ಬಹುತೇಕ ಎಲ್ಲ ಬೆಳೆ ನಷ್ಟಗಳನ್ನು  ಒಳಗೊಂಡಿದೆ.

2

ಸುಲಭವಾಗಿ ವಿನ್ಯಾಸ ಮಾಡಬಹುದಾದ  10  ವರ್ಷಗಳ ವರೆಗಿನ ದತ್ತಾಂಶ ಲಭ್ಯವಿದೆ

ಹವಾಮಾನ ಸೂಚಕಗಳನ್ನು ವಿನ್ಯಾಸ ಮಾಡುವುದು ಮತ್ತು  ಅವುಗಳನ್ನು ಉತ್ಪನ್ನ ನಷ್ಟದ  ಹವಾಮಾನ ಸೂಚಕಗಳಿಗೆ ಜೋಡಿಸುವುದು ತಾಂತ್ರಿಕ ಸವಾಲಾಗಿದೆ.ಅದಕ್ಕೆ  25 ವರ್ಷಗಳ ವರೆಗಿನ ಹಿಂದಿನ ದತ್ತಾಂಶ ಬೇಕಾಗಬಹುದು.

3

ಹೆಚ್ಚಿನ ನಷ್ಟದ ಆಧಾರಿತ  ಪ್ರದೇಶದ (ವಲಯ/ ತಹಶಿಲ್) ಉತ್ಪನ್ನ ಮತ್ತು  ವೈಯುಕ್ತಿಕ ರೈತರು.

ಹವಾಮಾನ ಆಧಾರಿತ ನಷ್ಟವು  ಅಧಿಕ ಮಳೆ ಮತ್ತು ಹಿಮ,ಉಷ್ಣ ಮತ್ತು ತೇವಾಂಶ  ಇತ್ಯಾದಿಗಳಿಗೆ  ಸಾಮಾನ್ಯವಾಗಿರುವುದು.

4

ವಸ್ತು ನಿಷ್ಠತೆ ಮತ್ತು ಪಾರದರ್ಶಕತೆ ತುಲನಾತ್ಮಕವಾಗಿ ತುಂಬ ಕಡಿಮೆ

ವಸ್ತು ನಿಷ್ಠತೆ ಮತ್ತು ಪಾರದರ್ಶಕತೆ ತುಲನಾತ್ಮಕವಾಗಿ ತುಂಬ ಹೆಚ್ಚು

5

ಗುಣ ಮಟ್ಟದ  ನಷ್ಟವು ಪರಿಶೀಲನೆ ಮೀರಿದ್ದಾಗಿದೆ.

ಗುಣ ಮಟ್ಟದ ನಷ್ಟವು ತಕ್ಕಮಟ್ಟಿಗೆ ಹವಾಮಾನ ಸೂಚಿಯಲ್ಲಿ ಪ್ರತಿ ಫಲಿತವಾಗುತ್ತದೆ.

6

ಅತಿ ನಷ್ಟ ಮೌಲ್ಯಮಾಪನ ವೆಚ್ಚ

ಇಲ್ಲದ ನಷ್ಟ  ಮೌಲ್ಯಮಾಪನ ವೆಚ್ಚ

7

ಕ್ಲೈಮುಗಳ ಇತ್ಯರ್ಥದಲ್ಲಿ ವಿಳಂಬ

ತ್ವರಿತ ಕೈಮುಗಳ ಇತ್ಯರ್ಥ

8

ಸರಕಾರದ ಹಣಕಾಸಿನ ಹೊಣೆಗಳುಮುಕ್ತವಾಗಿವೆ, ಅವು ಸಬ್ಸಿಡಿ ಕ್ಲೈಮುಗಳನ್ನು ಬೆಂಬಲಿಸುವುದು.

ಸರಕಾರದ ಹಣಕಾಸಿನ ಹೊಣೆ ಅಯವ್ಯಯ ಪಟ್ಟಿಯಲ್ಲಿರಬೇಕು ಮತ್ತು ಮುಕ್ತವಾಗಿರಬೇಕು. ಅದ ಪ್ರಿಮಿಯಂ ಸಬ್ಸಿಡಿಗೆ ಬೆಂಬಲ ನೀಡುವುದು.

ಹವಾಮಾನ ಬೆಳೆ ವಿಮಾ ಯೋಜನೆ ಹೇಗೆ ಕೆಲಸ ಮಾಡುತ್ತದೆ ?

ಹವಾಮಾನ ಬೆಳೆ ವಿಮಾ ಯೋಜನೆಯು (WBCIS) ನಷ್ಟ ಪರಿಹಾರ ನೀಡಲು “ಪ್ರದೇಶ ಪರಿಗಣನೆ” ಪರಿಕಲ್ಪನೆ ಯ ಮೇಲೆ ಆಧಾರಿತವಾಗಿದೆ. “ಉಲ್ಲೇಖಿತ ವಿಸ್ತೀರ್ಣವು ( ಆರ ಎ ಯು) ” ವಿಮೆಯ ಘಟಕವಾಗಿರುವುದು. ರಾಜ್ಯ ಸರ್ಕಾರವು ಆರ ಎ ಯು ಅನ್ನು ಹಂಗಾಮಿನ ಮೊದಲೆ ಪ್ರಕಟಮಾಡುವುದು ಮತ್ತು ಎಲ್ಲ ವಿಮೆ ಮಾಡಿದವರ ಆ ಪ್ರದೇಶದಲ್ಲಿನ ನಿರ್ಧಿಷ್ಟ ವಿಮೆ ಮಾಡಿದ ಬೆಳೆಗಳು ಕ್ಲೈಮುಗಳ ಮೌಲ್ಯ ಮಾಪನಕ್ಕೆ ಅನುಸಾರವಾಗಿವೆ ಎಂದು ತಿಳಿಯ ಲಾಗುವುದು. ಆರ ಎ ಯು ಅನ್ನು ಉಲ್ಲೇಖಿತ ಹವಾಮಾನ ಕೇಂದ್ರದೊಂದಿಗೆ ( ಆರ ಡಬ್ಲ್ಯು ಎಸ್).ನೊಂದಿಗೆ ಜೋಡಿಸಲಾಗುವುದು. ಅದರ ಆಧಾರದ ಮೇಲೆ ಸದ್ಯದ ಹವಾಮಾನ ದತ್ತಾಂಸ ಮತ್ತು ಕ್ಲೈಮುಗಳ ಪರಿಶೀಲನೆ ಮಾಡಲಾಗುವುದು. ವ್ಯತಿರಿಕ್ತ ಹವಾಮಾನ ಘಟನೆಗಳು, ಸಧ್ಯದ ಹಂಗಾಮಿನಲ್ಲಿ ಇದ್ದರೆ. ವಿಮದಾರರು ಹಣ ಪಡೆಯುವರು. ಅದು “ ಹಣ ಪಾವತಿ ಸಂರಚನೆ” ಯಲ್ಲಿ ನಿರೂಪಿಸಿದಂತೆ ಹವಾಮಾನ ಟ್ರಿಗರ್ ಮತ್ತು ಯೋಜನೆಯ ಸೂಚನೆ & ಶರತ್ತುಗಳಿಗೆ ಅನುಗುಣವಾಗಿರಬೇಕು. ಈ ರೀತಿಯ ಪ್ರಧೇಶ ಪರಿಗಣನೆಯು ವೈಯುಕ್ತಿಕ ಪರಿಗಣನೆಗೆ ವಿರುದ್ಧವಾಗಿದೆ.. ಅಲ್ಲಿ ನಷ್ಟ ಅನುಭವಿಸಿದ ವಿಮೆ ಮಾಡಿದ ವೈಯುಕ್ತಿಕ ರೈತನ ಕ್ಲೈಮು ಮೌಲ್ಯ ಮಾಪನ ಮಾಡಲಾಗುವುದು.

ಸದ್ಯದ ವಾತಾವರಣದ ಅಂಶಗಳನ್ನು ಅಳೆಯುವ ಉಲ್ಲೇಖಿತ ಹವಾಮಾನ ಕೇಂದ್ರ ( ಆರ ಡಬ್ಲ್ಯು ಎಸ್) ನನ್ನ ಭೂಮಿಯಿಂದ ಬಹುದೂರದಲ್ಲಿ ಇಲ್ಲ ಎಂದು ಹೇಗೆ ತಿಳಿಯಬಹುದು?ಅದು ತುಂಬ ದೂರದಲ್ಲಿ ಇದ್ದರೆ ನನಗೆ ಹೇಗೆ ಹಿತವಾಗುವುದು ?

ಹವಾಮಾನದ ವ್ಯತ್ಯಾಸವು ( ವಿಶೇಷವಾಗಿ ಮಳೆ) ನಿರ್ಧಿಷ್ಟ ದಿನದಂದು ಚಿಕ್ಕ ಪ್ರದೇಶದಲ್ಲೆ ಬೇರೆ ಬೇರೆ ಆಗಿರುವದು. ಆದರೆ ಅದು ಒಂದು ತಿಂಗಳ ಇಲ್ಲವೆ ಹದಿನೈದು ದಿನದಲ್ಲಿ ಅಥವ ಆ ಹಂಗಾಮಿನಲ್ಲಿ ಆ ವಲಯದಲ್ಲಿ ಸರಿಸಮವಾಗುತ್ತದೆ. ವಲಯ/ ತಹಸಿಲು ಮಟ್ಟದಲ್ಲಿನ ಹವಾಮಾನದ ಈ ಸರಾಸರಿಯು ಆ ವಿಮೆ ಘಟಕದ ವ್ಯಕ್ತಿಗತ ರೈತರ ಅನುಭವವು ಸಾಮನ್ಯವಾಗಿ ಒಂದೇ ಆಗಿರುತ್ತದೆ.

. ಹವಾಮಾನ ಬೆಳೆ ವಿಮಾ ಯೋಜನೆಯನ್ನು ಯಾರು ಖರೀದಿಸಬಹುದು/ಪಡೆಯ ಬಹುದು?

ಯೋಜನೆಯ ಮುಂಚೂಣಿ ಪ್ರದೇಶದ ವಿಮೆ ಘಟಕದಲ್ಲಿರುವ ಹಾಗೂ ಯೋಜನೆಯಡಿಯಲ್ಲಿ ಅನುಸೂಚಿತವಾಗಿರುವ ಬೆಳೆ ಬೆಳೆಯುವ ಎಲ್ಲ ಕೃಷಿಕರು, ( ಪಾಲುದಾರರು, ಬಾಡಿಗೆ ರೈತರು ಸಹಿತವಾಗಿ) ಈ ಯೋಜನೆಯ ಅಡಿಯಲ್ಲಿ ವಿಮೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೂ ಮುಂಚೂಣಿ ಬ್ಯಾಂಕಿನಲ್ಲಿ / ಹಣ ಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವ ಎಲ್ಲ ರೈತರು , ನಿಗದಿತ ಬೆಳೆಗೆ ಸಾಲ ಮಿತಿಯನ್ನು ಹೊಂದಿರುವ ಎಲ್ಲರೂ ಕಡ್ಡಾಯವಾಗಿ ವಿಮೆ ಮಾಡಲೇ ಬೇಕು. ಇತರರಿಗೆ ವಿಮೆ ಮಾಡುವುದನ್ನು ಅವರ ಆಯ್ಕೆಗೆ ಬಿಡಲಾಗಿದೆ.

’ವಿಮಾ ರಕ್ಷಣೆ ಮೊತ್ತವನ್ನು’ (ವಿಮೆಯ ಮೊತ್ತ) ಹೇಗೆ ಲೆಕ್ಕಹಾಕುತ್ತಾರೆ?

’ವಿಮಾ ರಕ್ಷಣೆ ಮೊತ್ತ’ ವು (ವಿಮೆಯ ಮೊತ್ತ) ಸಾಮಾನ್ಯವಾಗಿ ಆ ಬೆಳೆಗೆ ಕೃಷಿ ಒಳಾಂಶಗಳಿಗಾಗಿ ತಗುಲುವ ವೆಚ್ಚ ವಾಗಿರುವುದು. ವಿಮೆಯ ಮೊತ್ತವನ್ನು ವಿಮಾ ಏಜನ್ಸಿ ಯು ಬೆಳೆ ಹಂಗಾಮಿನ ಪ್ರಾರಂಭದಲ್ಲಿ ರಾಜ್ಯದಲ್ಲಿನ ಪರಣಿತರೊಂದಿಗೆ ಸಮಾಲೋಚಿಸಿ ವಿಸ್ತೀರ್ಣ ಘಟಕ ಒಂದರ (ಹೆಕ್ಟೇರು) ಅನುಪಾತದಲ್ಲಿ ಘೋಷಿಸುವುದು. ಅದು ಬೇರೆ ಬೇರೆ ಬೆಳೆಗೆ ವಿವಿಧ ವಿಮಾ ಘಟಕಗಳಲ್ಲಿ ಬೇರೆಯೇ ಆಗಿರಬಹುದು. ಈ ವಿಮೆ ಮೊತ್ತವನ್ನು ಹವಾಮಾನದ ಸಂದರ್ಭಗಳಿಗೆ ಅನುಸಾರವಾಗಿ ಅವುಗಳ ತುಲನಾತ್ಮಕ ಪ್ರಾಮುಖ್ಯತೆ ಮೇರೆಗೆ ವಿಂಗಡಿಸಿ ನಿರ್ಧರಿಸಲಾಗುತ್ತದೆ .

ಪ್ರಿಮಿಯಂ ದರಗಳು ಎಷ್ಟು?

ಪ್ರಿಮಿಯಂ ದರಗಳು “ ಆಗಬಹುದಾದ ನಷ್ಟ” ವನ್ನು ಆಧರಿಸಿದೆ. ಅದು 25 ರಿಂದ 100 ವರ್ಷದ ಹವಾಮಾನದ ಸನ್ನಿವೇಶಗಳ ಮಾದರಿಯನ್ನು ಗಮನಿಸಿ, ಆ ಬೆಳೆಗೆ ಬೇಕಾಗುವ ಮಾದರಿ ಹವಾಗುಣವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಬೇರೆಯಾಗಿ ಹೇಳಬೇಕೆಂದರೆ, ಈ ಪ್ರೀಮಿಯಮ್ ದರಗಳು ಪ್ರತಿ ಬೆಳೆ ಹಾಗೂ ವಿಮಾಘಟಗಳಿಗೆ ಬೇರೆಯೇ ಆಗಿರಬಹುದಾಗಿದೆ. ಹಾಗಿದ್ದರೂ ರೈತನು ಭರಿಸಬೇಕಾದ ಪ್ರಿಮಿಯಂಗೆ ಮಿತಿ ಹಾಕಲಾಗಿದೆ. ಈ ಮಿತಿಯ ಮೇಲ್ಪಟ್ಟ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಆಧಾರದ ಮೇಲೆ ಭರಿಸುತ್ತವೆ.

ರೈತರು ವಿವಿಧ ಬೆಳೆಗಳಿಗೆ ನೀಡಬೇಕಾದ ಪ್ರಿಮಿಯಂ ಕೆಳಗಿನಂತೆ ಇವೆ

ಕ್ರ.ಸಂ

ಬೆಳೆಗಳು


ವಿಮೆ ಮಡಿದ ರೈತನು ನೀಡಬೇಕಾದ ಪ್ರಿಮಿಯಂ

1

ಗೋದಿ

1.5%   ಅಥವ  ಆಕ್ಚುರಿಯಲ್  ದರ , ಯಾವುದು ಕಡಿಮೆಯೋ ಅದು.

2

ಇತರ ಬೆಳೆಗಳು ( ಇತರ ಧಾನ್ಯಗಳು ,ತುಎನ್ಣೆ ಬೀಜಗ ಮಿಲೆಟ್ಸ, ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳು

2.0%  ಅಥವ  ಆಕ್ಚುರಿಯಲ್  ದರ , ಯಾವುದು ಕಡಿಮೆಯೋ ಅದು

ವಾರ್ಷಿಕ ವಾಣಿಜ್ಯ / ತೋಟಗಾರಿಕೆ ಬೆಳೆಗಳು

ಕ್ರ.ಸಂ.

ಪ್ರಿಮಿಯಮ್ ಸ್ಲಾಬ್

ಸಬ್ಸಿಡಿ/ಪ್ರಿಮಿಯಂ

1

Upto 2%

ಸಬ್ಸಿಡಿ ಇಲ್ಲ

2

>2 - 5%

25%,    ಕನಿಷ್ಟ ನಿವ್ವಳ 2%  ಪ್ರಿಮಿಯುಮ್ ಅನ್ನು ರೈತ ಕೊಡಬೇಕು

3

>5 - 8%

40%,    ಕನಿಷ್ಟ ನಿವ್ವಳ 3.75%  ಪ್ರಿಮಿಯುಮ್ ಅನ್ನು ರೈತ ಕೊಡಬೇಕು

4

>8%

50%,    ಕನಿಷ್ಟ ನಿವ್ವಳ 4.8%  & ಗರಿಷ್ಟ6%  ಪ್ರಿಮಿಯುಮ್ ಅನ್ನು ರೈತ ಕೊಡಬೇಕು.

ಸಾಲ ಮಾಡಿದ ರೈತನು ನೀಡಬೇಕಾದ ನಿವ್ವಳ ಪ್ರಿಮಿಯಂಹಣವನ್ನು ಸಾಲ ನೀಡುವ ಬ್ಯಾಂಕು ಕೊಡವುದು

ಸೂಚನೆ : ಈ ಮೇಲಿನ ವಿವರಗಳು ಮಾಹಿತಿಗಾಗಿ ಮಾತ್ರ, ನೈಜವಾದ ವಿಮಾ ಯೋಜನೆಯ ವಿವರ ಅಕ್ಷರಶಃ ಸರಿಇಲ್ಲದಿರಬಹುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate