ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಹವಾಮಾನ ಬದಲಾವಣೆ ಮತ್ತು ಕೃಷಿ / ಜಾನುವಾರು ಅಭಿವೃದ್ಧಿ ಪರಿಚಯ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಜಾನುವಾರು ಅಭಿವೃದ್ಧಿ ಪರಿಚಯ

ಕೃಷಿ ಆಧಾರಿತ ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಗೆ, ಜಾನುವಾರು ಮತ್ತು ಮೇವು ಉತ್ಪಾದನಾ ಚಟುವಟಿಕೆಗಳು ಸದೃಢವಾದ ಆಧಾರ ನೀಡುತ್ತವೆ.

ಕೃಷಿ ಆಧಾರಿತ ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಗೆ, ಜಾನುವಾರು ಮತ್ತು ಮೇವು ಉತ್ಪಾದನಾ ಚಟುವಟಿಕೆಗಳು ಸದೃಢವಾದ ಆಧಾರ ನೀಡುತ್ತವೆ. ಗ್ರಾಮೀಣ ಭಾರತದಲ್ಲಿ ಬಹುಪಾಲು ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು, ತಮ್ಮ ಜೀವನಾಧಾರಕ್ಕಾಗಿ ಹಾಗೂ ಹೆಚ್ಚುವರಿ ಆದಾಯಕ್ಕಾಗಿ ಜಾನುವಾರುಗಳನ್ನು ಸಾಕುತ್ತಿದ್ದಾರೆ.

ಕೃಷಿ ಮತ್ತು ಪಶುಸಂಗೋಪನೆ ಪರಸ್ಪರ ಅವಲಂಬಿತವಾಗಿದ್ದು, ಹೆಚ್ಚು ಮೌಲ್ಯದ, ಪ್ರಾಣಿ ಮೂಲದ ಆಹಾರ ಉತ್ಪಾದಿಸಲು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಲು, ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಸಾಕುವುದು ಅತ್ಯಾವಶ್ಯಕವಾಗಿದೆ. ಆದಕಾರಣ ಜಲಾನಯನ ಪ್ರದೇಶದಲ್ಲಿ, ಸಮಗ್ರ ಕೃಷಿ/ಕ್ಷೇತ್ರ ಪದ್ಧತಿಯಲ್ಲಿ ಜಾನುವಾರು ಸಾಕಣೆ ಸುಸ್ಥಿರ ಮತ್ತು ಅತ್ಯಂತ ಲಾಭದಾಯಕ ಪದ್ಧತಿಯೆಂದು ಕಂಡುಬಂದಿದೆ.

ಜಾನವಾರುಗಳ ಉಪಯುಕ್ತತೆ;

 • ಹಾಲು, ಮಾಂಸ ಮತ್ತು ಮೊಟ್ಟೆ ಉತ್ಪಾದನೆಗಾಗಿ.
 • ಭೂಮಿ ಉಳುಮೆ ಮತ್ತು ಹೊರೆ ಹೊರುವ ಶಕ್ತಿ.
 • ಜೈವಿಕ ಅನಿಲ ಮತ್ತು ಕೊಟ್ಟಿಗೆ ಕೊಬ್ಬರ ಲಭ್ಯತೆಗಾಗಿ.
 • ಉಣ್ಣೆ/ತುಪ್ಪಟ, ಚರ್ಮ/ತೊಗಲು ಮತ್ತು ಗೊರಸು ಲಭ್ಯತೆಗಾಗಿ

2008ರ ಸಾಮಾನ್ಯ ಮಾರ್ಗಸೂಚಿಯಂತೆ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಜೊತೆಗೆ ಸಮಗ್ರವಾದ ಜಲಾನಯನ ಅಭಿವೃದ್ಧಿಗಾಗಿ ಗ್ರಾಮೀಣ ಮಟ್ಟದಲ್ಲಿ ಜಾನುವಾರು ಚಟುವಟಿಕೆಗಳನ್ನು ಅನುಷ್ಟಾನ ಮಾಡಬೇಕು. ಇದರಿಂದಾಗಿ ಸಾವಯವ ಕೃಷಿಗೆ ಮಾತ್ರವಲ್ಲದೆ ಗ್ರಾಮದ ಎಲ್ಲಾ ರೈತರಿಗೆ ಮತ್ತು ಭೂರಹಿತ ಅತಿ ಬಡವರ ಜೀವನಾಧಾರಕ್ಕೆ ಒತ್ತು ನೀಡಿದಂತಾಗುತ್ತದೆ ಹಾಗೂ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶದ ಸಾಧನೆಗಾಗಿ ಈ ಕೆಳಕಂಡಂತೆ ಜಾನುವಾರು ಚಟುವಟಿಕೆಗಳ ಅನುಷ್ಠಾನಕ್ಕೆ ಅನುದಾನ ಲಭ್ಯವಿರುತ್ತದೆ;

 1. ಜಲಾನಯನ ಕಾಮಗಾರಿಗಳು ಅಡಿಯಲ್ಲಿ
 2. ಮೇವು ಅಭಿವೃದ್ಧಿಗಾಗಿ ಅನುದಾನ-3.6%

  ಈ ಅನುದಾನದಲ್ಲಿ ಮೇವು ಅಭಿವೃದ್ದಿಗಾಗಿ ಈ ಕೆಳಕಂಡ ಚಟುವಟಿಕೆಗಳನ್ನು ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ;

  1. 10 ಗುಂಟೆ ನೀರಾವರಿ ಜಮೀನಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆಯುವುದು.
  2. ಬೆಳೆ ಅಂಚಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆಯುವುದು.
  3. ಮಿನಿಕಿಟ್ ಬಳಸಿ ಸುಧಾರಿತ ಮೇವು ಬೆಳೆಯುವುದು.
  4. ಬದುಗಳ ಮೇಲೆ ಸುಧಾರಿತ ಬಹುವಾರ್ಷಿಕ ಮೇವು ಬೆಳೆಯುವುದು.
  5. ಸುಧಾರಿತ ಮೇವು ನರ್ಸರಿ ಸ್ಥಾಪಿಸುವುದು

  ಜಾನುವಾರುಗಳುಳ್ಳ ರೈತರು ಕನಿಷ್ಠ ಒಂದು ಚಟುವಟಿಕೆಯನ್ನಾದರೂ ಹಮ್ಮಿಕೊಳ್ಳಲು ಕ್ರಮವಹಿಸುವುದು.

 3. ಉತ್ಪಾದನಾ ಪದ್ದತಿಗಳು:- ಇದರಲ್ಲಿ ಈ ಕೆಳಕಂಡ ಜಾನುವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು
 4. ಸಮುದಾಯ ಆಧಾರಿತ ಚಟುವಟಿಕೆಗಳು;

  1. ಜಾನುವಾರು ಆರೋಗ್ಯ ಶಿಬಿರಗಳು.
  2. ದೊಡ್ಡ ಗ್ರಾಮಗಳಲ್ಲಿ ಟ್ರೆವಿಸ್ ಅಳವಡಿಸುವುದು.

  ಪ್ರಾತ್ಯಕ್ಷತೆಗಳು;

  • ಮಾದರಿ ದನದ ಕೊಟ್ಟಿಗೆ ನಿರ್ಮಾಣ
  • ಮಾದರಿ ಕುರಿ ಶೆಡ್ ನಿರ್ಮಾಣ
  • ಮಾದರಿ ಹಂದಿ ಶೆಡ್ ನಿರ್ಮಾಣ
  • ರಸಮೇವು ಉತ್ಪಾದನೆ.

  ಅಜೋಲ್ಲ ಬೆಳೆಸುವುದು / ಉತ್ಪಾದಿಸುವುದು.

  1. ಆಸ್ಥಿರಹಿತರಿಗೆ ಜೀವನಾಧಾರ ಚಟುವಟಿಕೆಗಳು:
  2. ಇದರಲ್ಲಿ ಫಲಾನುಭವಿಗಳ ಅವಶ್ಯಕತೆಗೆ ತಕ್ಕಂತೆ, ಈ ಕೆಳಕಂಡ ಜಾನುವಾರು ಚಟುವಟಿಕೆಗಳನ್ನು ಅನುಷ್ಠಾನ ಮಾಡುವುದು.

   1. ಮಿಶ್ರತಳಿ ಹಸು ಸಾಕಾಣಿಕೆ.
   2. ಸುಧಾರಿತ ಎಮ್ಮೆ ಸಾಕಾಣಿಕೆ.
   3. ಕುರಿ ಸಾಕಾಣಿಕೆ (10+1) ಅಥವಾ (20+1) ಘಟಕ.
   4. ಮೇಕೆ ಸಾಕಾಣಿಕೆ (10+1) ಅಥವಾ (20+1) ಘಟಕ.
   5. ಹಂದಿ ಸಾಕಾಣಿಕೆ (2+1) ಘಟಕ.
   6. ಮೊಲ ಸಾಕಾಣಿಕೆ (10+2)
   7. ಗಿರಿರಾಜ/ಗಿರಿರಾಣಿ/ಸ್ವರ್ಣಧಾರಾ ಕೋಳಿ ಸಾಕಾಣಿಕೆ. (20+1 ಅಥವಾ 50+2)

   (ಸರ್ಕಾರಿ ಕುಕ್ಕುಟ ಕ್ಷೇತ್ರಗಳಿಂದ ನಿಗದಿತ ದರಗಳಲ್ಲಿ ಖರೀದಿಸುವುದು)

   ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

2.97810218978
ಭಿಮನಗೌಡ ಪಾಟೀಳ Jun 23, 2019 04:24 PM

ಹಂದಿ ಸಾಕಾಣಿಕೆಯ ಸಂಪೂರ್ಣ ಮಾಹಿತಿ ನೀಡಿ

ದೀಪಾ Apr 01, 2019 10:29 AM

ದೇಸಿ ಹಸು ಸಾಗಾಣಿಕೆಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಟಿಪ್ಪಣಿ ಹೇಳಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top