ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅನುಷ್ಠಾನ ವಿಧಾನ

ಜಾನುವಾರು ಚಟುವಟಿಕೆಗಳ ಅನುಷ್ಠಾನ ವಿಧಾನ

ಜಲಾನಯನ ಸಮಿತಿಯ ಮಟ್ಟದಲ್ಲಿ ಕ್ರಿಯಾ ಯೋಜನೆ ಮತ್ತು ಉಪಯೋಜನೆ ತಯಾರಿಸುವಾಗ, ಅನುದಾನದ ಲಭ್ಯತೆಯ ಆಧಾರದ ಮೇಲೆ, ಕ್ಷೇತ್ರ ಪದ್ದತಿಯಲ್ಲಿ ಸಮಗ್ರತೆ ಮತ್ತು ಜೀವನಾಧಾರ ಸುಸ್ಥಿರತೆ ಆಧಾರದ ಮೇಲೆ

 • ರೈತರು/ಫಲಾನುಭವಿಗಳು ಆಸಕ್ತಿ ತೋರಿಸುವ ಚಟುವಟಿಕೆಗಳನ್ನು
 • ಜಲಾನಯನ ಅಭಿವೃದ್ಧಿ ತಂಡದ ಪ್ರೇರಣೆಯಿಂದ ಹಾಗೂ ಅವರು ನೀಡುವ ಮಾಹಿತಿ ಆಧಾರದ ಮೇಲೆ ರೈತರು ಸೂಕ್ತ ಜಾನುವಾರು ಚಟುವಟಿಕೆಗಳನ್ನು ಆರಿಸಿಕೊಳ್ಳಬಹುದು.
 1. ಜಲಾನಯನ ಕಾಮಗಾರಿಗಳ ಅಡಿಯಲ್ಲಿ:
 2. ಸೂಚನೆ:ಈ ಕೆಳಕಂಡ ಚಟುವಟಿಕೆಗಳ ಘಟಕ ವೆಚ್ಚ, ಅಂದಾಜು ವಿವರ ಹಾಗೂ ಅನುಷ್ಠಾನ ವಿಧಾನ ಕುರಿತು ಕೇಂದ್ರ ಕಚೇರಿಯಿಂದ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು.

  1. 10 ಗುಂಟೆ ಪ್ರದೇಶದಲ್ಲಿ ಅಥವಾ 500 ಮೀ ಉದ್ದ (3 ಸಾಲಿನಲ್ಲಿ) ಬಹುವಾರ್ಷಿಕ ಹುಲ್ಲು ಬೆಳೆಸಲು

  ಜಲಾನಯನ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿರುವ ರೈತರಿಗೆ 10 ಗುಂಟೆ ಜಮೀನಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆಸಲು, ಅಂದರೆ, ಕೋ-1, ಸಿಗ್ನಲ್, ರೋಡ್ಸ್, ಗಿನಿ ಇತ್ಯಾದಿ. ಮಳೆಗಾಲದಲ್ಲಿ ಅನುಷ್ಠಾನ ಮಾಡಬಹುದು.

  ಸೂಚನೆ

  1. ಸಾಲಿನಿಂದ ಸಾಲುಗೆ 2 ಅಡಿ ಅಂತರ, ಬೇರಿನಿಂದ ಬೇರಿಗೆ 1 ಅಡಿ ಅಂತರ – ರೋಡ್ಸ್/ಗಿನಿ/ಸಿಗ್ನಲ್ (5000 ಹುಲ್ಲಿನ ಬೇರುಗಳು). ಅಥವಾ: ಸಾಲಿನಿಂದ ಸಾಲಿಗೆ 2 ಅಡಿ ಅಂತರ, ಬೇರಿನಿಂದ ಬೇರಿಗೆ 2 ಅಡಿ ಅಂತರ, ಎನ್‍ಬಿ 21/ ಕೋ1/ಕೋ2/ಕೋ3/ಕೋ63-(2700ಹುಲ್ಲಿನ ಬೇರುಗಳು).
  2. ರೈತನ ಹೆಸರು, ಮೇವು ಬೆಳೆ ಮಾಡಿರುವ ಭೂಮಿಯ ಸರ್ವೆ ಸಂಖ್ಯೆ ದಾಖಲಿಡಬೇಕು. ನೂತನವಾಗಿ ಸ್ಥಾಪಿಸುವ ತಾಕುಗಳಿಗೆ ಮಾತ್ರ ಅರ್ಹತೆ ಇರುವುದು. ಈಗಾಗಲೇ ಸ್ಥಾಪಿಸಿರುವ ತಾಕುಗಳಿಗೆ ಅರ್ಹತೆ ಇರುವುದಿಲ್ಲ.

  ಬಹುವಾರ್ಷಿಕ ಹುಲ್ಲು ಬೇರುಗಳನ್ನು ಯಾವುದೇ ಪಶು ಸಂಗೋಪನೆ ಕ್ಷೇತ್ರಗಳಿಂದ/ ಕೇಂದ್ರ ಸರ್ಕಾರದ ಕೇಂದ್ರೀಯ ಮೇವು ಬೀಜ ಉತ್ಪಾದನಾ ಕ್ಷೇತ್ರ ಹೆಸರಘಟ್ಟ, ಬೆಂಗಳೂರಿನಿಂದ/ ಕರ್ನಾಟಕ ಹಾಲು ಒಕ್ಕೂಟದಿಂದ/ ಪಶುವೈದ್ಯಕೀಯ ಕಾಲೇಜುಗಳಿಂದ/ ಕೃಷಿ ವಿಶ್ವವಿದ್ಯಾನಿಲಯಗಳಿಂದ/ ಕೃಷಿ ವಿಸ್ತರಣಾ ಕೇಂದ್ರಗಳಿಂದ/ ಸ್ಥಳೀಯ ಪ್ರಗತಿಪರ ರೈತರಿಂದ ಖರೀದಿಸಬಹುದು.

 3. ಬೆಳೆ ಅಂಚಿನಲ್ಲಿ ಮೇವು ಬೆಳೆಯುವುದು:
 4. ಹಾಲವಾಣ, ಗೊಬ್ಬರದ ಗಿಡ, ನುಗ್ಗೆ, ಮುಂತಾದ ಬಹುವಾರ್ಷಿಕ ಮೇವು ಪೊದೆಗಳು, ರೋಡ್ಸ್, ಸಿಗ್ನಲ್, ಅಂಜನ್ ಮುಂತಾದ ಹುಲ್ಲು, ಹಾಗೂ ಸೆರಾಟ್ರೋ, ಸೆಂಟ್ರೋಸೀಮ, ಗ್ಲೈಸೀನ್ ಮುಂತಾದ ದ್ವಿದಳ ಮೇವಿನ ಬಳ್ಳಿಗಳು, ರೈತನ ಕೃಷಿ ಬೆಳೆಗಳ ಅಂಚಿನಲ್ಲಿ ಬೆಳೆಯಲು – ಇದರಿಂದ ವರ್ಷವಿಡೀ ಮೇವು ಲಭ್ಯವಾಗುತ್ತದೆ. ಮೇವಿನ ಮರ ಮತ್ತು ಪೊದೆಗಳು ಗಾಳಿ ತಡೆಯಾಗಿ ಕೊಡ ಉಪಯೋಗವಾಗುತ್ತವೆ. ಸುಧಾರಿತ ಹುಲ್ಲು ನೆಡುವುದರಿಂದ ಬದುಗಳ ಸ್ಥಿರತೆಯನ್ನು ಕಾಪಾಡಬಹುದು.

  100 ಮೀಟರ್

  1 ಹೆಕ್ಟೇರ್ ಪ್ರದೇಶ

  100 ಮೀಟರ್

  100 ಮೀಟರ್

 5. ಬದುಗಳ ಮೇಲೆ ಸುಧಾರಿತ ಬಹುವಾರ್ಷಿಕ ಮೇವು ಬೆಳೆಯುವುದು:
 6. ಜಲಾನಯನ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ನಿರ್ಮಿಸುವ ವಿವಿಧ ಬದುಗಳ ಮೇಲೆ ಬಹುವಾರ್ಷಿಕ ಮೇವನ್ನು ಬೆಳೆಯುವುದು.

 7. ಮಿನಿಕಿಟ್ ಬಳಸಿ ಸುಧಾರಿತ ಮೇವು ಬೆಳೆಯುವುದು
 8. 10 ಗುಂಟೆ ವ್ಯವಸಾಯ ಯೋಗ್ಯ ಜಮೀನಿನಲ್ಲಿ ಬೆಳೆಯಲು ಸುಧಾರಿತ ಮೇವು ಬೀಜಗಳು, ಅಂದರೆ ಆಫ್ರಿಕನ್ ಟಾಲ್ ಮುಸುಕಿನ ಜೋಳ, ಮಲ್ಟಿಕಟ್ ಸೋರ್ಗಮ್, ಮೇವಿನ ಅಲಸಂದೆ, ಮುಂತಾದವುಗಳನ್ನು ರೈತರಿಗೆ ಸರಬರಾಜು ಮಾಡಲಾಗುವುದು.

  ಮಾದರಿ 1:

  ಆಫ್ರಿಕನ್ ಟಾಲ್ ಮುಸುಕಿನ ಜೋಳ 4 ಕಿಲೊ + ಮೇವಿನ ಅಲಸಂದೆ 3 ಕಿಲೊ.

  ಮಾದರಿ 2:

  ಬಹು ಕಟಾವು ಜೋಳ 4 ಕಿಲೊ + ಮೇವಿನ ಅಲಸಂದೆ 3 ಕಿಲೊ.

 9. ಸುಧಾರಿತ ಮೇವು ನರ್ಸರಿ ಸ್ಥಾಪಿಸುವುದು.
 10. ಸ್ಥಳೀಯವಾಗಿ ರೈತರಿಗೆ/ ಬಳಕೆದಾರರ ಗುಂಪುಗಳಿಗೆ ವಿವಿಧ ಹುಲ್ಲುಬೇರುಗಳ ಲಭ್ಯತೆಗಾಗಿ ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಈ ಕಾರ್ಯಕ್ರಮವನ್ನು ಆದಾಯ ಉತ್ಪನ್ನ ಚಟುವಟಿಕೆಯಾಗಿ ಆರಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಇಲ್ಲಿ ಬೆಳೆದಿರುವ ಸುಧಾರಿತ ಹುಲ್ಲು ಬೇರು ಮತ್ತು ದ್ವಿದಳ ಮೇವಿನ ಬೀಜಗಳನ್ನು ಬೇರೆ ರೈತರಿಗೆ, ಸಮುದಾಯ ಭೂಮಿಯಲ್ಲಿ ಸ್ಥಾಪಿಸಲು ಮತ್ತು ಸಂಘಗಳಿಗೆ ಮಾರಾಟ ಮಾಡಬಹುದು. ಮೇವಿನ ಮರಗಳ ಸಸಿಗಳನ್ನು ಅರಣ್ಯ ಘಟಕದ ನರ್ಸರಿಗಳಲ್ಲಿ ಬೆಳೆಸುವರು.

  ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

2.96428571429
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top