ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದನಗಳು ಮತ್ತು ಎಮ್ಮೆಗಳು

ದನಗಳ ತಳಿಗಳು ಮತ್ತು ಅವುಗಳ ಆಯ್ಕೆ ಬಗ್ಗೆ ಮಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ದನಗಳ ತಳಿಗಳು ಮತ್ತು ಅವುಗಳ ಆಯ್ಕೆ

ಸಾಹಿವಾಲ್

 • ಪಂಜಾಬ್ .ಹರಿಯಾಣ. ಉ.ಪ್ರ.ದಲ್ಲಿ. ಬಿಹಾರ್ ಮತ್ತು ಮ.ಪ್ರ.ಗಳಲ್ಲಿ ಬಹುತೇಕವಾಗಿ ಕಂಡುಬರುವ ತಳಿ
 • ಹಾಲು ಉತ್ಪಾದನೆ- ಹಳ್ಳಿಗಳ ಪರಿಸರದಲ್ಲಿ - 1350 ಕೆ.ಜಿ– ವಾಣಿಜ್ಯ ಮಾದರಿ ಫಾರ್ಮ್ ಗಳಲ್ಲಿ - 2100 ಕೆ.ಜಿ
 • ಮೊದಲನೆ ಕರಾವಿನ ವಯಸ್ಸು – 32-36 ತಿಂಗಳು
 • ಕರಾವಿನ ಅಂತರ -15 ತಿಂಗಳು

ಗಿರ್

 • ದಕ್ಷಿಣ ಕಾಟಿಯಾವಾಡ್ ನ ಗಿರ್ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ತಳಿ
 • ಹಾಲು ಉತ್ಪಾದನೆ- ಹಳ್ಳಿಗಳ ಪರಿಸರದಕಲ್ಲಿ- 900 ಕೆ.ಜಿ
 • ವಾಣಿಜ್ಯ ಮಾದರಿ ಫಾರ್ಮ್ ಗಳಲ್ಲಿ - 1600 ಕೆ.ಜಿ
 • ದಕ್ಷಿಣ ಕಾಟಿಯಾವಾಡ್ ನ ಗಿರ್ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ತಳಿ
 • ಹಾಲು ಉತ್ಪಾದನೆ- ಹಳ್ಳಿಗಳ ಪರಿಸರದಕಲ್ಲಿ- 900 ಕೆ.ಜಿ
 • ವಾಣಿಜ್ಯ ಮಾದರಿ ಫಾರ್ಮ್ ಗಳಲ್ಲಿ - 1600 ಕೆ.ಜಿ

ಥಾರ್ಪಾರ್ಕರ್

 • ಜೋಧ್ಪುರ್ . ಕಛ್ ಮತ್ತು ಜೈಸಲ್ಮೇರ್ ಪ್ರದೇಶಗಳಲ್ಲಿ ಕಂಡು ಬರುವ ತಳಿ
 • ಹಾಲು ಉತ್ಪಾದನೆ - ಹಳ್ಳಿಗಳ ಪರಿಸರದಲ್ಲಿ- 1660 ಕೆ.ಜಿ
 • ವಾಣಿಜ್ಯ ಮಾದರಿ ಫಾರ್ಮ್ ಗಳಲ್ಲಿ - 2500 ಕೆ.ಜಿ

ಕೆಂಪ್ರಉ ಸಿಂಧಿ

 • ಪಂಜಾಬ್ . ಹರಿಯಾಣ. ಉ.ಪ್ರ. ಮತ್ತು ಒರಿಸ್ಸಾ ಗಳಲ್ಲಿಬಹುತೇಕವಾಗಿ ಕಂಡುಬರುವ ತಳಿ
 • ಹಾಲುಉತ್ಪಾದನೆ- ಹಳ್ಳಿಗಳ ಪರಿಸರದಲ್ಲಿ - 1100 ಕೆ.ಜಿ
 • ವಾಣಿಜ್ಯ ಮಾದರಿ ಫಾರ್ಮ್ ಗಳಲ್ಲಿ- 1900 ಕೆ.ಜಿ
 • ಹೈನು ಹಾಗು ಕೃಷಿ ಕೆಲಸಕ್ಕೆ ಸೂಕ್ತವಾದ ತಳಿಗಳು

ಓಂಗೋಲ್

 • ಆಂಧ್ರಪ್ರದೇಶದ ನೆಲ್ಲೂರು. ಕೃಷ್ಣಾ. ಗೋದಾವರಿ ಮತ್ತು ಗುಂಟೂರುಗಳಲ್ಲಿ ಕಂಡುಬರುತ್ತವೆ
 • ಪ್ರತೀ ಕರಾವಿನಲ್ಲಿ ಸರಾಸರಿ 1500 ಕಿಲೊ ಹಾಲು ನೀಡುತ್ತದೆ
 • ಎತ್ತುಗಳು ಬಲಶಾಲಿಯಾಗಿದ್ದು ಆಳ ಉಳಿಮೆಗೆ ಮತ್ತು ಚಕ್ಕಡಿ ಎಳೆಯಲು ಉತ್ತಮವಾಗಿವೆ

ಕರಣ್ ಫ್ರಿ ತಳಿ

 

 

ರಾಜಸ್ಥಾನದಲ್ಲಿ ಕಂಡುಬರುವಂತಹ ಥಾರ್ಪಾರ್ಕರ್ ಹಸುಗಳಿಗೆ ಹಾಲ್ ಸ್ಟೀನ್ ಫ್ರೀಸಿಯನ್ ಹೋರಿಗಳ ವೀರ್ಯವನ್ನು ಕೃತಕವಾಗಿ ಗರ್ಭಧಾರಣೆ ಮಾಡುವುದರ ಮೂಲಕ ಕರಣ್ ಫ್ರಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಥಾರ್ಪಾರ್ಕರ್ ಹಸುಗಳು ಸಾಮಾನ್ಯ ಪ್ರಮಾಣದಲ್ಲಿ ಹಾಲು ನೀಡುವುದಾದರೂ, ಅವು ಅಧಿಕ ಉಷ್ಣತೆ ಹಾಗೂ ಕಠಿಣ ಹವಾಮಾನವನ್ನು ತಾಳುವ ತಮ್ಮ ಸಾಮರ್ಥ್ಯದಿಂದಾಗಿ ಹೆಸರುವಾಸಿಯಾಗಿವೆ.

  ಈ ತಳಿಯ ವಿಶೇಷ ಗುಣಗಳು

 • ಈ ಜಾನುವಾರುಗಳ ಮೈಮೇಲೆ, ಹಣೆಯಲ್ಲಿ ಹಾಗೂ ಬಾಲದ ತುದಿಯಲ್ಲಿ ಕಪ್ಪು ಬಿಳಿ ಮಚ್ಚೆಗಳಿರುತ್ತವೆ. ಕೆಚ್ಚಲು ಗಾಡಬಣ್ಣದಿಂದ ಕೂಡಿದ್ದು, ಮೊಲೆಯ ಮೇಲೆ ಬಿಳಿ ಮಚ್ಚೆಗಳಿರುತ್ತವೆ. ಹಾಗೂ ಹಾಲು ಹರಿಯುವ ಧಮನಿಯೂ ಸ್ಪಷ್ಟವಾಗಿ ಗೋಚರವಾಗುತ್ತದೆ.
 • ಇವುಗಳು ಬಹಳವೇ ಸಾಧು ಸ್ವಭಾವದವಾಗಿದ್ದು, ಹೆಣ್ಣು ಕರುಗಳು ಗಂಡಿಗಿಂತ ಬೇಗನೆ ಪ್ರಾಯಕ್ಕೆ ಬರುತ್ತವೆ. ತಮ್ಮ 32-34 ತಿಂಗಳಿನ ವಯಸ್ಸಿಗೆ ಗರ್ಭಧಾರಣೆ ಮಾಡುತ್ತವೆ.
 • ಗರ್ಭಾವಸ್ಥೆ ಸುಮಾರು 280 ದಿನಗಳಾಗಿರುತ್ತದೆ. ಕರುಹಾಕಿದ 3 ರಿಂದ 4 ತಿಂಗಳುಗಳ ಕಾಲದ ನಂತರ ಮತ್ತೆ ಗರ್ಭಧಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಸ್ಥಳೀಯ ಹಸುಗಳು ಮತ್ತೆ ಗರ್ಭಧಾರಣೆ ಮಾಡಲು 5 ರಿಂದ 6 ತಿಂಗಳು ಸಮಯ ತೆಗೆದುಕೊಳ್ಳುವ ಸಾಮರ್ಥ್ಯಕ್ಕಿಂತ ಉತ್ತಮವಾಗಿದೆ.
 • ಹಾಲಿನ ಉತ್ಪಾದನೆ: ಕರಣ್ ಫ್ರೀ ತಳಿಯ ಹಸುಗಳು ಸಾಮಾನ್ಯವಾಗಿ 3,000 ರಿಂದ 3,400 ಲೀಟರ್ ಹಾಲು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಸಂಸ್ಥೆಯ ಕೊಟ್ಟಿಗೆಯಲ್ಲಿ ಈ ತಳಿಯ ಹಸುಗಳು ಸರಾಸರಿ 3,700 ಲೀಟರ್ ಹಾಲು ನೀಡಿದ್ದು, ಅದರಲ್ಲಿ 320 ದಿನಗಳ ಹಾಲು ನೀಡುವ ಕರಾವಿನ ಅವಧಿಯಲ್ಲಿ ಕೊಬ್ಬಿನಾಂಶ ಶೇ. 4.2; ಇತ್ತು ಎಂದು ಅವರು ವಿವರಿಸಿದರು.
 • ಹುಲುಸಾದ ಹಸಿರು ಮೇವನ್ನು ಸಮತೂಕದ ಮಿಶ್ರ ಅಹಾರದೊಂದಿಗೆ ನೀಡಿದರೆ ಈ ತಳಿಯ ಹಸುಗಳು ದಿನಕ್ಕೆ ಸರಾಸರಿ 15 ರಿಂದ 20 ಲೀಟರಿನಷ್ಟು ಹಾಲು ನೀಡುತ್ತವೆ. ಅದರ ಹಾಲು ನೀಡುವ ಶೃಂಗದ ಅವಧಿಯಲ್ಲಿ 25-35 ಲೀಟರಿನಷ್ಟು ಹಾಲನ್ನೂ ಕೊಡುವ ಸಾಮರ್ಥ್ಯ ಅದಕ್ಕಿದೆ (ಕರು ಹಾಕಿದ 3-4 ತಿಂಗಳಿನ ಅವಧಿಯಲ್ಲಿ).
 • ತಮ್ಮ ಹೆಚ್ಚು ಹಾಲು ನೀಡುವ ಸಾಮರ್ಥ್ಯದಿಂದಾಗಿ ಈ ತಳಿಯ ಹಸುಗಳು ಕೆಚ್ಚಲಿನ ರೋಗ (ಕೆಚ್ಚಲು ಬಾವು) ದಿಂದ, ಅಲ್ಲದೆ ಪೌಷ್ಠಿಕಾಂಶಗಳ ಕೊರತೆಯಿಂದ ನರಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಬೇಗನೆ ಕಂಡುಹಿಡಿದರೆ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ.
 • ಕರುಗಳ ಬೆಲೆ: ಹೊಸತಾಗಿ ಕರುಹಾಕಿದ ಹಸುವಿನ ಬೆಲೆ, ಹಾಲು ನೀಡುವ ಸಾಮರ್ಥ್ಯವನ್ನು ಹೊಂದಿಕೊಂಡು ಸರಾಸರಿ ಸುಮಾರು ರೂ. 20,000 ರಿಂದ ರೂ 25,000 ಇರುತ್ತದೆ.
 • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  ಮುಖ್ಯಸ್ಥರು

  ಹೈನು ಪಶು ಸಂಗೋಪನಾ ವಿಭಾಗ

  ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ, ಕರ್ನಾಲ್, ಹರಿಯಾಣಾ- 132001

  ದೂರವಾಣಿ: 0184-2259092.

  ಕಾಂಕ್ರೇಜ್

 • ಗುಜರಾತ್ ರಾಜ್ಯದ ಪ್ರಮುಖವಾದ ತಳಿ. ಇತ್ತೀಚೆಗೆ ಕರ್ನಾಟಕದ ವಿವಿದೆಡೆ ಇವುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.
 • ಹಾಲು ಉತ್ಪಾದನೆ- ಹಳ್ಳಿಗಳ ಪರಿಸರದಲ್ಲಿ- 1300 ಕೆ.ಜಿ.
 • ವಾಣಿಜ್ಯ ಮಾದರಿ ಫ಼ಾರ್ಮ್ ಗಳಲ್ಲಿ- 3600 ಕೆ.ಜ
 • ಮೊದಲನೆಯ ಕರಾವಿಗೆ ವಯಸ್ಸು 36-42 ತಿಂಗಳುಗಳು
 • ಕರಾವಿನ ಅಂತರ 15-16 ತಿಂಗಳುಗಳು.ಹೀಗಾಗಿ ಹೈನು ಚಟುವಟಿಕೆಗೂ ಲಾಭದಾಯಕವಾಗಿವೆ.
 • ಎತ್ತುಗಳು ಚುರುಕು ಮತ್ತು ಬಲಯುತವಾಗಿದ್ದು ವೇಗದ ನಡಿಗೆ ಹೊ0ದಿರುತ್ತವೆ. ಕೃಷಿ ಮತ್ತು ರಸ್ತೆ ಸಾರಿಗೆಗೆ ಉತ್ತಮ ಜಾನುವಾರುಗಳಾಗಿವೆ.

ದೇವಣಿ

 • ಪ್ರಮುಖವಾಗಿ ಆಂಧ್ರಪ್ರದೇಶದ ಉತ್ತರ ಪಶ್ಚಿಮ ಜಿಲ್ಲೆಗಳು, ಕರ್ನಾಟಕದ ಬೀದರ್ ಜಿಲ್ಲೆ ಮತ್ತು ಮಹಾರಾಷ್ಟ್ರದ ಲಾತೂರ್ ಪ್ರದೇಶದಲ್ಲಿ ಕಂಡುಬರುತ್ತದೆ.
 • ಕಪ್ಪು ಬಿಳುಪು ಮಚ್ಚೆಹೊಂದಿದ್ದು, ಕೋಡುಗಳು ಸಣ್ಣದಿರುತ್ತವೆ.
 • ಹಸುಗಳು ಹೆಚ್ಚಿಗೆ ಹಾಲನ್ನು (1600-1900 ಲೀ) ನೀಡುವುದರ ಜೊತೆಗೆ ಎತ್ತುಗಳು ಕೃಷಿ ಕೆಲಸಕ್ಕೆ ಉತ್ತಮವಾಗಿವೆ
 • ಕೃಷಿ ಕೆಲಸಕ್ಕೆ /ಎಳೆತಕ್ಕೆ ಸೂಕ್ತವಾದ ತಳಿಗಳು

ಅಮೃತ್ ಮಹಲ್

 • ಕರ್ನಾಟಕದ ಹಳೆ ಮೈಸೂರು ಭಾಗಗಳಲ್ಲಿ ಕಂಡುಬರುತ್ತದೆ.
 • ಉಳುಮೆ ಮತ್ತು ರಸ್ತೆ ಸಾರಿಗೆಗೆ ಉತ್ತಮವಾದ ಮತ್ತು ಹೆಸರಾಂತ ತಳಿ. ಟಿಪ್ಪು ಸುಲ್ತಾನ್ ನ ಸೈನಿಕರಿಗೆ ಯುಧ್ಧ ಸಮಯದಲ್ಲಿ ಸಕಾಲದಲ್ಲಿ ಸಾಮಗ್ರಿಗಳನ್ನು ಸಾಗಿಸಿ ಪ್ರಶಂಸೆಗೆ ಪಾತ್ರವಾದ ತಳಿ. ಮೈಸೂರು ರಾಜ ಮನೆತನದವರು ಈ ತಳಿ ರಕ್ಷಣೆಗೆಂದೇ ಕಾವಲ್ ಗಳ ರೂಪದಲ್ಲಿ ಹುಲ್ಲುಗಾವಲುಗಳನ್ನು ಮೀಸಲಾಗಿರಿಸಿದ್ದರು.

ಹಳ್ಳಿಕಾರ್

 • ಕರ್ನಾಟಕದ ತುಮಕೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
 • ಎತ್ತುಗಳು ರಸ್ತೆ ಸಾರಿಗೆಗೆ ಮತ್ತು ಕೃಷಿ ಕೆಲಸಕ್ಕೆ ಯೊಗ್ಯವಾಗಿವೆ.

ಖಿಲಾರ್

 • ಮಹಾರಾಷ್ಟ್ರದ ಸೋಲಾಪುರ, ಕರ್ನಾಟಕದ ಬಿಜಾಪುರ, ಬಾಗಲಕೋಟ ಹಾಗೂ ಬೆಳಗಾವಿಗಳಲ್ಲಿ ಕಂಡುಬರುವ ತಳಿ
 • ಕೋಡುಗಳು ಹಿಂಬಾಗಕ್ಕೆ, ಮೇಲಕ್ಕೆ ಇದ್ದು ಎತ್ತರದ ಮೈಕಟ್ಟು, ಬಿಳಿ ಬಣ್ಣ ಮತ್ತು ಎತ್ತರದ ಇಣಿ ಹೊಂದಿರುತ್ತದೆ.
 • ಕ್ಲಿಷ್ಟಕರವಾದ ಮಣ್ಣಿನಲ್ಲಿ ಕೃಷಿ ಕೆಲಸವನ್ನು ಸರಾಗವಾಗಿ ಮಾಡುವ ಬಲ ಎತ್ತುಗಳಲ್ಲಿ ಇರುತ್ತದೆ.

ಕಂಗಾಯಮ್

 • ತಮಿಳುನಾಡಿನ ಕೊಯಿಮುತ್ತೂರು, ಈರೋಡ್, ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ
 • ಉಳುಮೆಗೆ ಮತ್ತು ಸಾಗಾಣಿಕೆ ಕೆಲಸಗಳಿಗೆ ಅತ್ಯಂತ ಸೂಕ್ತವಾದ ತಳಿ, ಇದು ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಲ್ಲದು

ವಿದೇಶೀ ಹೈನು ತಳಿಗಳು

ಜರ್ಸಿ

 • ಮೂಲತಃ ಇದು ಇಂಗ್ಲಂಡ್ ದೇಶದ ನ್ಯೂ ಜರ್ಸ್ಯಿ ಪ್ರದೇಶದ್ದು.
 • ನಮ್ಮ ದೇಶದಲ್ಲಿ ಈ ತಳಿ ಉಷ್ಣ ಹಾಗೂ ಆರ್ದ್ರ ಪ್ರದೇಶಗಳಲ್ಲಿ ಉತ್ತಮವಾಗಿ ಹೊಂದಿಕೊಂಡಿದೆ.
 • ಕಂದು / ಕಂದುಮಿಶ್ರಿತ ಬೂದು ಬಣ್ಣ ಹಾಗೂ ಮಧ್ಯಮ ಗಾತ್ರದ ಶರೀರ ಹೊಂದಿದ್ದು ಸಣ್ಣ ಹಿಡುವಳಿದಾರರಿಗೆ ಅಚ್ಚುಮೆಚ್ಚಿನ ತಳಿಯಾಗಿದೆ.
 • ಪ್ರತೀ ಕರಾವಿನಲ್ಲಿ 5000 ದಿಂದ 8000 ಲೀ ವರೆಗೆ, ಅಂದರೆ, ದಿನಒಂದಕ್ಕೆ ಸರಾಸರಿ ಹಾಲು ಇಳುವರಿ 20 ಲೀ ವರೆಗೆ ಹಾಲು ನೀಡುತ್ತದೆ, ಇದರ ಮಿಶ್ರತಳಿಗಳು ದಿನಕ್ಕೆ 8-10 ಲೀ ನೀಡುತ್ತವೆ.
 • ನಸು ಬಂಗಾರದ ಬಣ್ಣದ ಹಾಲಿನಲ್ಲಿ ಕೊಬ್ಬಿನಾಂಶ ಶೇ 4 ರಿ0ದ 5 ರ ವರೆಗೆ ಇರುತ್ತದೆ
 • ಮೊದಲನೆಯ ಕರಾವಿಗೆ ವಯಸ್ಸು  26-30 ತಿಂಗಳುಗಳು/li>
 • ಕರಾವಿನ ಅಂತರ 13-14 ತಿಂಗಳುಗಳು.

ಹೋಲಸ್ಟೈನ್ ಫ್ರೀಸಿಯನ್

 • ಮೂಲತಃ ಇದು ಹಾಲೆಂಡ್ ದೇಶದ ತಳಿ./li>
 • ಕಪ್ಪು/ಕಂದು-ಬಿಳಿ ಬಣ್ಣದ ದೊಡ್ಡ ಶರೀರ
 • ಪ್ರತಿ ಕರಾವಿನಲ್ಲಿ 7200-9000 ಕಿಲೊ ಹಾಲನ್ನುನೀಡಬಲ್ಲದು. ಇದು ವಿದೇಶಿ ತಳಿಗಳಲ್ಲಿ ಅತ್ಯುತ್ತಮ ಹೈನು ತಳಿ ಎಂದು ಪರಿಗಣಿತವಾಗಿದೆ. ದಿನದ ಸರಾಸರಿ 25 ಲೀ ಇದ್ದರೆ, ಇದರ ಮಿಶ್ರ ತಳಿಗಳು 8-10 ಲೀ ಹಾಲು ನೀಡುತ್ತವೆ.
 • ಕಡಲ ತೀರ, ನೀರಾವರಿ ಸೌಲಭ್ಯವಿರುವ ಬಯಲು ಪ್ರದೇಶ, ಮಳೆ ಆಧಾರಿತ ಪ್ರದೇಶಗಳಲ್ಲಿಯೂ ಇದು ಉತ್ತಮ ಇಳುವರಿ ನೀಡಬಲ್ಲದು.

ಎಮ್ಮೆಗಳ ತಳಿಗಳು

ವಿಶ್ವ ಶೇಷ್ಠ ಹೈನು ಪ್ರಸಿದ್ಧಿ ತಳಿಗಳನ್ನು ಹೊಂದಿದ ನಮ್ಮ ದೇಶದಲ್ಲಿ ವಿಶ್ವದ ಶೇ 50 ಕ್ಕೂ ಹೆಚ್ಚು ಎಮ್ಮೆಗಳು ಇವೆ. ಸಧ್ಯದ ಒಟ್ಟಾರೆ ಹಾಲು ಉತ್ಪಾದನೆಯಲ್ಲಿ ಶೇ 50 ಕ್ಕೂ ಅಧಿಕ ಪಾಲುದಾರಿಕೆ ಎಮ್ಮೆಗಳಿಗೆ ಸೇರಿದೆ.

ಮುರ್ರಾ

 • ಹರಿಯಾಣ, ದಿಲ್ಲಿ ಮತ್ತು ಪಂಜಾಬಿನಲ್ಲಿ ಪ್ರಮುಖವಾಗಿ ಕಂಡುಬರುತ್ತವೆ.
 • ಕಳೆದ ದಶಕದಲ್ಲಿ ವಾಣಿಜ್ಯ ಮಾದರಿ ಹಾಲುಉತ್ಪಾದನೆಗೆ ಫಾರ್ಮ್ ಗಳಿಗಾಗಿ ದೇಶದ ವಿವಿಧ ಭಾಗಗಳಿಗೆ, ವಿಶೇಷವಾಗಿ ಮಹಾನಗರಿಗಳಿಗೆ ಕೊಂಡೊಯ್ಯಲ್ಪಟ್ಟ ಹಾಗೂ ಹೈನುಗಾರರ ಅಚ್ಚು ಮೆಚ್ಚಿನ ಎಮ್ಮೆ ತಳಿ ಇದಾಗಿದೆ.
 • ಸಾಧಾರಣವಾಗಿ ದೇಶದ ಬಹುತೇಕ ಭಾಗಗಳಲ್ಲಿ ಹೊಂದಿಕೊಂಡು ಭಾರತೀಯ ಹೈನೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ
 • ಕರಿ ಬಣ್ಣದ ತ್ವಚೆ ಹಾಗೂ ದೊಡ್ಡ ಶರೀರ ಹೊಂದಿದ ಎಮ್ಮೆಗೆ ತಲೆ ಹಿಂದೆ ಸಣ್ಣ, ಸುರುಳಿಯಾದ ಕೋಡುಗಳಿರುತ್ತವೆ
 • ಪ್ರತೀ ಕರಾವಿನಲ್ಲಿ ಸರಾಸರಿ 2400 ಲೀ ಹಾಲು ಕರೆಯುತ್ತವೆ. ದಿನವೊಂದಕ್ಕೆ 8-10ಲೀ ಇಳುವರಿ ನೀಡಬಹುದಾಗಿದೆ.

ಸುರ್ತಿ

 • ಮಧ್ಯಮ ಗಾತ್ರದ, ನಸುಗಪ್ಪು ಬಣ್ಣದ, ಕುಡುಗೋಲು ಆಕಾರದ ಕೊಂಬಿರುವ ಎಮ್ಮೆ ತಳಿ.
 • ಗುಜರಾತ್ ರಾಜ್ಯದ ಪ್ರಮುಖ ತಳಿ. ಇದನ್ನು ಮುರ್ರಾ ತಳಿಯೊಂದಿಗೆ ಸಂಕರಣ ಮಾಡಿ ಮೆಹಸಾನ ಎಂಬ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ.
 • ಪ್ರತಿ ಕರಾವಿನಲ್ಲಿ 1700-2500 ಲೀ ವರೆಗೆ ಹಾಲನ್ನು ನೀಡಬಲ್ಲದು

ಜಾಫ್ರಾಬಾದಿ:

 • ಆಂಗ್ಲ ‘ಜೆ’ ಆಕಾರದ ಕೋಡುಗಳನ್ನು ಹೊಂದಿದ, ದೊಡ್ಡ ಶರೀರ ಹೊಂದಿದ ಉತ್ತಮ ಹೈನು ತಳಿ.
 • ಇದೂ ಸಹ ಗುಜರಾತ್ ನ ಸೌರಾಷ್ಟ್ರ, ಕಾಥಿಯಾವಾಡ್ ಜಿಲ್ಲೆಯಲ್ಲಿ ಕಂಡುಬರುವ ತಳಿ
 • 1800-2700 ಕಿಲೊ ಹಾಲನ್ನು ಪ್ರತಿ ಕರಾವಿನಲ್ಲಿ ನೀಡಬಲ್ಲದು.

ನಾಗಪುರಿ

 • ಮಹಾರಷ್ಟ್ರದ ನಾಗಪುರ, ವಾರ್ಧ, ಅಕೊಲಾ, ಅಮರಾವತಿ ಮತ್ತು ಯಾವತ್ಮಾಳ್ ಗಳಲ್ಲಿ ಕಂಡು ಬರುವ ತಳಿ.
 • ಪ್ರತೀ ಕರಾವಿನಲ್ಲಿ 1030 ರಿಂದ 1500 ಲೀ ವರೆಗೆ ಇಳಿವರಿ ನೀಡುತ್ತದೆ
 • ಹೈನು ತಳಿಗಳ ಆಯ್ಕೆಗಾಗಿ ಸಾಮಾನ್ಯ ವಿಧಾನಗಳು

ಹೈನುತಳಿ ಹಸುಗಳ ಆಯ್ಕೆ

 • ಕರುಗಳ ಪ್ರದರ್ಶನದಲ್ಲಿ ಕರುಗಳ ಆಯ್ಕೆಯಾಗಲೀ ಅಥವಾ ದನಗಳ ಪ್ರದರ್ಶನದಲ್ಲಿ ಹಸುಗಳನ್ನು ಪ್ರಮಾಣೀಕರಿಸುವುದಾಗಲೀ ಇದು ಒಂದು ಕಲೆಯಾಗಿದೆ. ಹೈನುಗಾರರು ತಮ್ಮದೇ ಆದ ಹಸುಗಳ ಗುಂಪನ್ನು ತಳಿಸಂವರ್ಧನೆ ಮಾಡುತ್ತ ಬೆಳೆಸಬೇಕು. ಈ ಕೆಳಕಂಡ ಮಾರ್ಗ ಸೂಚಿಗಳು ಉತ್ತಮ ಹೈನುರಾಸುಗಳನ್ನು ಆಯ್ಕೆಮಾಡಲು ಸಹಕಾರಿಯಾಗಿವೆ.
 • ಹಸುಗಳನ್ನು ಸಂತೆಯಲ್ಲಿ ಖರೀದಿ ಮಾಡುವಾಗ ಅವುಗಳ ತಳಿ ಗುಣ ಲಕ್ಷಣಗಳನ್ನು ಹಾಗೂ ಹಾಲು ಉತ್ಪಾದನಾ ಕ್ಷಮತೆಯನ್ನು ಮಾನದಂಡವನ್ನಾಗಿಸಿ ಆಯ್ಕೆ ಮಾಡಬೇಕು.
 • ವ್ಯವಸ್ಥಿತವಾದ ಫಾರ್ಮ್ ಗಳಲ್ಲಿ ಹಸುಗಳ ಇತಿಹಾಸ ಮತ್ತು ವಂಶಾವಳಿ ದಾಖಲೆಗಳನ್ನು ಪರಿಶೀಲಿಸುವುದರಿಂದ ಅದರ ಉತ್ಪಾದಕತೆ ಕ್ಷಮತೆ ಬಗ್ಗೆ ತಿಳಿದುಕೊಳ್ಳಬಹುದು.
 • ಸಾಮಾನ್ಯವಾಗಿ ಹೈನು ರಾಸುಗಳು ಮೊದಲ ಐದನೆಯ ಕರಾವಿನವರೆಗೆ ಹೆಚ್ಚಿನ ಹಾಲನ್ನು ಕರೆಯುತ್ತವೆ. ಆದ್ದರಿಂದ ಮೊದಲನೆಯ ಅಥವಾ ಎರಡನೆಯ ಕರಾವಿನ ರಾಸುವನ್ನು ಕರು ಹಾಕಿದ ಒಂದು ತಿ0ಗಳಿನ ನಂತರ ಹಾಲು ಕರೆಯುವ ಪ್ರಮಾಣ ಧೃಡಪಡಿಸಿಕೊಂಡ ಬಳಿಕ ಖರೀದಿಸುವುದು ಸೂಕ್ತವಾಗಿದೆ.
 • ಹೀಗೆ ಹಾಲು ಕರೆಯುವ ಪ್ರಮಾಣ ಪ್ರಮಾಣಿಕರಿಸುವಾಗ ಸತತ ಮೂರು ಸರದಿಯ ಹಾಲನ್ನು ಕರೆಸಿ ಸರಾಸರಿ ಲೆಕ್ಕ ಹಾಕುವುದು ಸೂಕ್ತ.
 • ಹಸು ಸಾಧುವಾಗಿದ್ದು ಯಾರನ್ನಾದರೂ ಹಾಲು ಹಿಂಡಲು ಅವಕಾಶ ಮಾಡಿಕೊಡುವಂತಿರಬೇಕು
 • ಅಕ್ಟೋಬರ್ ಮತ್ತು ನವೆಂಬರ್ ಮಾಹೆಗಳು ಖರೀದಿಗೆ ಸೂಕ್ತವಾದ ಕಾಲ
 • ಕರಾವಿನ ಅತೀ ಹೆಚ್ಚು ಇಳುವರಿಯನ್ನು ಕರು ಹಾಕಿದ 90 ದಿನಗಳವರೆಗೆ ಗಮನಿಸಬಹುದು.

ಹೆಚ್ಚು ಹಾಲು ಕರೆಯುವ ಹಸುಗಳ ಗುಣ ಲಕ್ಷಣಗಳು

 • ಆಕರ್ಷಕ ಮೈಕಟ್ಟು, ನಡಿಗೆ, ಎದ್ದು ಕಾಣುವ ಹೆಣ್ಣುತನ, ಓಜಸ್ಸು, ಒಟ್ಟಾರೆ ಅಂಗಾಂಗಗಳ ಏಕತಮತೆ.
 • ಹಿಂದಿನಿಂದ ಮತ್ತು ಪಕ್ಕದಿಂದ ನೋಡಿದಾಗ ಹಸುವಿನ ಶರೀರ ಬೆಣೆಯಂತೆ, ಹಿಂಬದಿಗೆ ಬಂದಾಗ ಅಗಲವಾಗುತ್ತ ಸಾಗಬೇಕು
 • ತುಪ್ಪಟ ಹೊಳಪಾಗಿರಬೇಕು. ತಳಿಯ ಗುಣಗನುಸಾರ ಬಣ್ಣವಿರಬೇಕು. ಬಿರುಸಾದ ನಿಗುರಿನಿಂತ ಕೂದಲಿನಿಂದ ಕೂಡಿರಬಾರದು
 • ಸಪ್ಪಳಗಳಿಗೆ ಹಸು ಪ್ರತಿಕ್ರಿಯೆ ನೀಡುತ್ತಿರಬೇಕು. ಕಿವಿ ಸೋರುತ್ತಿರಬಾರದು.
 • >ಕಣ್ಣುಗಳು ಕಾಂತಿಯುತವಾಗಿದ್ದು ಕುತ್ತಿಗೆ ನೀಳವಾಗಿರಬೇಕು,  ಮೂಗು ಸೋರುತ್ತಿರಬಾರದು.
 • ಕೆಚ್ಚಲು ಹೊಟ್ಟೆಯ ಕೆಳ ಭಾಗಕ್ಕೆ ಮತ್ತು ತೊಡೆಗಳ ನಡುವೆ ಸಮನಾಗಿ ಧೃಡವಾಗಿ ಅಂಟಿಕೊಂಡಿರಬೇಕು (ಸಡಿಲವಾಗಿ ಜೋತುಬಿದ್ದಿರಬಾರದು), ಕೆಚ್ಚಲಿನ ತ್ವಚೆಯ ಮೇಲೆ ರಕ್ತನಾಳಗಳ ಜಾಲಬಂಧ ಎದ್ದು ಕಾಣುತ್ತಿರಬೇಕು
 • ಕೆಚ್ಚಲಿನ ಎಲ್ಲಾ ನಾಲ್ಕೂ ಭಾಗಗಳು ನಿಚ್ಚಳವಿದ್ದು, ಅಮುಕಿ ನೋಡಿದರೆ ಬಿರುಸಾದ, ಗಂಟು ಗಂಟಾದ ಅನುಭವ ಬರಬಾರದು. ಸ್ಪಂಜಿನಂತಿರಬೇಕು. ಕೆಚ್ಚಲಿನ ಮೇಲೆ ಬಿರುಸು ಕೂದಲುಗಳಿರಬಾರದು
 • ಮೊಲೆಗಳು ಸಮಾನಾಂತರದಲ್ಲಿ ನೆಟ್ಟಿರಬೇಕು. ಹೆಬ್ಬೆರಳುಮತ್ತು ತೋರು ಬೆರಳಿನಿಂದ ನೀವಿದಾಗ ನಯವಾಗಿರಬೇಕು, ಬಿರುಸಾದ ಗಂಟುಗಳು ಇರಬಾರದು.
 • ಹಾಲು ಕರೆದಾಗ ಹಾಲು ರಭಸದಿಂದ ಒಂದೇ ಧಾರೆಯಲ್ಲಿ ಚಿಮ್ಮಬೇಕು, ಪಾತ್ರೆಯಲ್ಲಿ ಬಿದ್ದಾಗ ಭೋರ್ಗರೆಯುವ0ತೆ ಶಬ್ದ ಬರಬೇಕು. ಹಾಲು ಒಡಕಾಗಿ, ಕೀವು, ರಕ್ತ ಬೀಳಬಾರದು
 • ಯೋನಿಯ ಸುತ್ತ ಬಿರುಸಾದ ಕೂದಲುಗಳ ಗೊಂಚಲಿರಬಾರದು. ಯೋನಿಯಿಂದ ಹೊಲಸಿನಂತಹ ಶ್ರಾವ ಬರಬಾರದು.

ವಾಣಿಜ್ಯೋದ್ದೇಶದ ಡೈರಿ ಫಾರ್ಮ್ ಗಳಿಗಾಗಿ ತಳಿಗಳ ಆಯ್ಕೆಗೆ ಸಲಹೆಗಳು

 • ನಮ್ಮ ದೇಶದ ಪರಿಸ್ಥಿಯಲ್ಲಿ, ವಾಣಿಜ್ಯೋದ್ದೇಶಗಳ ಡೈರಿ ಫಾರ್ಮ್ ನಲ್ಲಿ ಕನಿಷ್ಟ 10 ಎಮ್ಮೆ ಹಾಗೂ 10 ಹಸುಗಳು ಇರುವುದು ವ್ಯವಹಾರ ದೃಷ್ಟಿಯಿಂದ ಉತ್ತಮ. ಇದೇ ಪರಿಮಾಣದಲ್ಲಿ ಸಂಖ್ಯೆಯನ್ನು ಏರಿಕೆ ಮಾಡುತ್ತ, ಮಾರುಕಟ್ಟೆ ಹಾಗೂ ರೈತನಲ್ಲಿರುವ ಸಂಪನ್ಮೂಲಗಳನ್ನು ಆಧರಿಸಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
 • ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ, ಆರೋಗ್ಯ ಮತ್ತು ಸೌಂದರ್ಯ ಪ್ರಜ್ಞೆ ಯುಳ್ಳ ಗ್ರಾಹಕರು ಹಾಲಿನಲ್ಲಿ ಕಡಿಮೆ ಕೊಬ್ಬಿನಾಂಶವನ್ನು ಬಯಸುತ್ತಾರೆ. ಹಲವರು ಕೆನೆ ತೆಗೆದು ಮನೆಯಲ್ಲಿ ಬೆಣ್ಣೆ ಮಾಡುವ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ಮಿಶ್ರತಳಿ ಹಸು ಮತ್ತು ಎಮ್ಮೆಗಳನ್ನು ಒಂದೇ ಸೂರಿನಲ್ಲಿ ಬೇರೆ ಸಾಲುಗಳಲ್ಲಿ ಸಾಕುವುದು ಸೂಕ್ತ.
 • ತಾವು ಹಾಲು ಮಾರಬೇಕಾದ ಮಾರುಕಟ್ಟೆಯ ಅಧ್ಯಯನ ಮೊದಲು ಕೈಕೊಳ್ಳಿ. ಮಾರುಕಟ್ಟೆಯ ಅಗತ್ಯಗಳಿಗನುಸಾರ ಎಮ್ಮೆ ಹಾಗೂ ಹಸು ಹಾಲನ್ನು ಮಿಶ್ರ ಮಾಡಬಹುದು. ಕರ್ನಾಟಕ ಹಾಲು ಮಹಾಮಂಡಳಿಯ ಸಂಘಗಳಿಗೆ ಅಥವಾ ಖಾಸಗೀ ಡೈರಿ ಕಂಪನಿಗಳಿಗೆ ಮಾರಾಟ ಮಾಡುವುದಾದಲ್ಲಿ ಎಮ್ಮೆ ಹಾಗೂ ಹಸುವಿನ ಹಾಲನ್ನು ಪ್ರತ್ಯೇಕ ಸರಬರಾಜು ಮಾಡುವುದು ಲಾಭದಾಯಕ. ಗ್ರಾಹರಿಗೆ ನೇರ ಮಾರಾಟ ಸಾಧ್ಯವಿದ್ದಲ್ಲಿ, ಹೋಟಲ್ ಮತ್ತು ಹಾಲಿನಪದಾರ್ಥ ಮಾಡುವ ಘಟಕಗಳು, ಸಮಾನ್ಯ ಮನೆ ಗ್ರಾಹಕರು ಎಮ್ಮೆ ಹಾಲನ್ನು ಇಷ್ಟಪಡುತ್ತಾರೆ. ಆಸ್ಪತ್ರೆಗಳು ಹಸುವಿನಹಾಲನ್ನು ಆಯ್ಕೆ ಮಾಡುತ್ತವೆ.

ವಾಣಿಜ್ಯೋದ್ದೇಶದ ಡೈರಿ ಫಾರ್ಮ್ ಗಳಿಗಾಗಿ ಎಮ್ಮೆ ಹಾಗೂ ಹಸುಗಳ ತಳಿಗಳ ಆಯ್ಕೆಗೆ ಸಲಹೆಗಳು

ಹಸುಗಳು

 1. ಆಯ್ದ ಮಾರುಕಟ್ಟೆಗಳಲ್ಲಿ ಅಥವಾ ನೇರವಾಗಿ ರೈತರುಗಳ ಬಳಿ ಉತ್ತಮ ಗುಣಮಟ್ಟದ ರಾಸುಗಳು ಲಭ್ಯವಿದ್ದು, ಅವುಗಳ ಹಾಲು ಇಳುವರಿ ಮತ್ತು ಕರಾವಿನ ಸಂಖ್ಯೆ ಆಧರಿಸಿ ದರ ನಿಗದಿಯಾಗುತ್ತದೆ. ಪ್ರತೀ ಲೀಟರ್ ಹಾಲಿಗೆ ಸಧ್ಯ ರೂ. 1600 ದಿಂದ 2300 ವರೆಗೆ, ಅಂದರೆ, ದಿನಕ್ಕೆ 10 ಲೀ ಹಾಲು ಹಿಂಡುವಹಸುವಿಗೆ ರೂ. 16000 ದಿಂದ 23000 ವರೆಗೆ ದರ ಇದೆ.
 2. “ವರ್ಷಕ್ಕೊಂದು ಕರು” ಗುರಿಯಾಗಿಸಿ ಉತ್ತಮ ನಿರ್ವಹಣೆ ಮಾಡಿದಲ್ಲಿ ಲಾಭ ಹೆಚ್ಚು. ಕನಿಷ್ಟ 13-14 ತಿಂಗಳಿಗೊಂದು ಕರು ಹಾಕುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ.
 3. ಹಸುಗಳು ಸಾಧು ಪ್ರಾಣಿಗಳಾಗಿದ್ದು ನಿರ್ವಹಣೆ ಸುಲಭ. ಉತ್ತಮ ಹೈನುರಾಸುಗಳು (ಜರ್ಸಿ,ಹೋಲ್ ಹೋಲ್ಸ್ಟೀನ್) ಗಳು ನಮ್ಮ ದೇಶದ ವಾತಾವರಣಕ್ಕೆ ಒಗ್ಗಿಕೊಂಡಿವೆ.

ಎಮ್ಮೆಗಳು

 1. ವಾಣಿಜ್ಯೋದ್ದೇಶದ ಡೈರಿ ಫಾರ್ಮ್ ಗಳಿಗಾಗಿ ಸೂಕ್ತವಾದ ಮುರ್ರಾ, ಮೆಹಸಾನ ತಳಿಗಳು ನಮ್ಮ ದೇಶದಲ್ಲಿ ಹೇರಳವಾಗಿ ಲಭ್ಯವಿವೆ.
 2. ಎಮ್ಮೆ ಹಾಲು ಹೆಚ್ಚಿನ ಕೊಬ್ಬು ಮತ್ತು ಘನಾಂಶಗಳಿಂದ ಕೂಡಿದ್ದರಿಂದ ಬೆಣ್ಣೆ ಮತ್ತು ತುಪ್ಪ ತಯಾರಿಕೆಗೆ, ಚಹ ಹಾಗೂ ಚಾಸ್-ಲಸ್ಸಿ ಯಂತಹ ಸ್ವಾಗತ ಪಾನೀಯಗಳ ಬಳಕೆಗೆ ಸೂಕ್ತವಾಗಿದೆ.
 3. ಎಮ್ಮೆಗಳನ್ನು ಹೆಚ್ಚು ನಾರುಯುಕ್ತ ಕೃಷಿಬೆಳೆಗಳ ಉಳಿಕೆ ಹೊಟ್ಟು ಮತ್ತು ದಂಟುಗಳನ್ನು ಮೇವನ್ನಾಗಿ ಉಪಯೋಗಿಸಿ ಆಹಾರ ವೆಚ್ಚವನ್ನು ತಗ್ಗಿಸಬಹುದಾಗಿದೆ.
 4. ಎಮ್ಮೆಗಳು ಸಾಧಾರಣವಾಗಿ ತಡವಾಗಿ ಯವ್ವನಾವಸ್ಥೆ ತಲುಪುತ್ತವೆ. ಕರಾವಿನ ಅಂತರ ಕನಿಷ್ಟ 16-18 ತಿಂಗಳುಗಳುಇರುತ್ತವೆ. ಕೋಣಗರುಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ.
 5. ಬೇಸಿಗೆ ದಿನಗಳಲ್ಲಿ, ಅತಿ ಉಷ್ಣ ಪ್ರದೇಶಗಳಲ್ಲಿ ಎಮ್ಮೆಗಳ ಶರೀರ ತಂಪಾಗಿಸುವ ಸಾಧನಗಳು, ಅಂದರೆ ಈಜು ಕೆರೆ, ಫ್ಯಾನ್/ಶಾವರ್ ಗಳು ಬೇಕಾಗುತ್ತದೆ.
 6. ಮೂಲ: ಬೈಫ್ ಗ್ರಾಮೀಣ ಅಭಿವೃದ್ಧಿ ಸಂಶೋಧನೆ ಪ್ರತಿಷ್ಠಾನ, ಪುಣೆ ಹಾಗೂ ಲೇಖಕರ ಅನುಭವಗಳು

3.09356725146
ಚಂದ್ರ Apr 14, 2019 10:00 AM

ಹಸುಗಳ ಸಾಗಾಣಿಕೆ ಮಾಡಬೇಕು

Ambikamanju Sep 24, 2018 10:25 PM

Thanks for your information sir...

ಬಸವರಾಜ Jul 14, 2017 09:15 PM

ತುಂಬಾ ಧನ್ಯವಾದಗಳು ಮಾಹಿತಿ ನೀಡಿದಕ್ಕೆ

Lesa Apr 16, 2017 09:52 AM

I actually found this more enitetainrng than James Joyce. http://sorfqlvqb.com [url=http://sxbeimg.com]sxbeimg[/url] [link=http://kfuxmvmln.com]kfuxmvmln[/link]

ಸಂತೋಷ್ ಅಪಾಸಾಹೇಬ ಬಿರಾದಾರ Feb 08, 2017 11:52 PM

ಹಸು ಮತ್ತು ಎಮ್ಮೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top