ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಹವಾಮಾನ ಬದಲಾವಣೆ ಮತ್ತು ಕೃಷಿ / ಸಮುದಾಯ ಆಧಾರಿತ ಚಟುವಟಿಕೆಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮುದಾಯ ಆಧಾರಿತ ಚಟುವಟಿಕೆಗಳು

ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಕೆಲವು ವಿವರಗಳು

 1. ಜಾನುವಾರು ಆರೋಗ್ಯ ಶಿಬಿರಗಳು.
 2. ಜಾನುವಾರುಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಶಕ್ತಿ ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ. ಕಾಲಕಾಲಕ್ಕೆ ಜಲಾನಯನ ಪ್ರದೇಶಗಳಲ್ಲಿ ಪಶು ಆರೋಗ್ಯ ಶಿಬಿರಗಳು ನಡೆಸಲಾಗುತ್ತದೆ. ಶಿಬಿರಗಳಲ್ಲಿ ಜಾನುವಾರುಗಳಿಗೆ, ಒಳ ಮತ್ತು ಹೊರಪರೋಪ ಜೀವಿಗಳ ವಿರುದ್ದ ಔಷಧಿ, ಸಾಂಕ್ರಾಮಿಕ ರೋಗಗಳ ವಿರುದ್ದ ಲಸಿಕೆ, ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪಶು ಸಂಗೋಪನಾ ಇಲಾಖೆಯ ಪಶುವೈದ್ಯಾಧಿಕಾರಿ, ಸಹಾಯಕ ನಿರ್ದೇಶಕರ ಸಹಕಾರದೊಂದಿಗೆ, ಪ್ರಾತ್ಯಕ್ಷತೆಗಳು, ಪ್ರವಚನಗಳು, ಚಲನಚಿತ್ರ ಪ್ರದರ್ಶನಗಳನ್ನು ಏರ್ಪಡಿಸುವುದು.

  ಈ ಶಿಬಿರದಲ್ಲಿ ಒಣಮೇವು ಪೌಷ್ಠೀಕರಣ ಪ್ರಾತ್ಯಕ್ಷತೆಯನ್ನು ಏರ್ಪಡಿಸುವುದು ಹಾಗೂ ರೈತರಿಗೆ ಜಾನುವಾರು ಸಾಕಣೆ ಬಗ್ಗೆ ಉಪನ್ಯಾಸ ಏರ್ಪಡಿಸುವುದು.

  ಜಾನುವಾರುಗಳ ಆರೋಗ್ಯ ಕಾಪಾಡಲು, ಉತೊಆದನೆ ಹೆಚ್ಚಿಸಲು ಮತ್ತು ಬಂಜೆತನ ನಿವಾರಣೆ ಮಾಡಲು, ಜಾನುವಾರು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಜಾನುವಾರು ಆರೋಗ್ಯ ಶಿಬಿರಗಳನ್ನು ನಡೆಸುವಾಗ ಕೇಂದ್ರ ಕಚೇರಿಯ ಸುತ್ತೋಲೆಯ ವಿವರಗಳನ್ನು ತಪ್ಪದೆ ಪಾಲಿಸಿ ಏರ್ಪಡಿಸಬೇಕು.

 3. ದೊಡ್ಡ ಗ್ರಾಮಗಳಲ್ಲಿ ಟ್ರೆವಿಸ್ ಅಳವಡಿಸುವುದು:
 4. ಗ್ರಾಮ ಮಟ್ಟದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಲಸಿಕೆಗಳನ್ನು ಹಾಕಲು ಮತ್ತು ಕೃತಕಗರ್ಭಧಾರಣೆಗೆ ಅನುಕೂಲವಾಗುತ್ತದೆ. ಜಲಾನಯನದ ಅತಿ ದೊಡ್ಡ ಗ್ರಾಮದ ಸಮುದಾಯ ಜಾಗದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವ ಸ್ಥಳದಲ್ಲಿ ಅಳವಡಿಸುವುದು.

  ಪ್ರಾತ್ಯಕ್ಷತೆಗಳು:

  ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇಯಿಸುವುದನ್ನು ಪ್ರೋತ್ಸಾಹಿಸುವುದು.

  ಜಲಾನಯನ ಪ್ರದೆÉೀಶದಲ್ಲಿ ಮೇವಿನ ಲಭ್ಯತೆಗೆ ಅನುಗುಣವಾಗಿ ಗುಣಮಟ್ಟದ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸಿ, ಜಾನುವಾರುಗಳನ್ನು ಮಿತಿ ಮೀರಿ ಮುಕ್ತವಾಗಿ ಮೇಯಿಸುವುದನ್ನು ಕಡಿಮೆ ಮಾಡಲು ಮತ್ತು ಹುಲ್ಲುಗಾವಲು/ಅರಣ್ಯ ರಕ್ಷಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ;

  1. ಜಾನುವಾರುಗಳಿಗೆ ಕೊಟ್ಟಿಗೆ ಮತ್ತು ಚರಣಿ ನಿರ್ಮಿಸುವುದು:
   • ಜಾನುವಾರುಗಳಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ.
   • ಮೇವಿಗಾಗಿ ಅಲೆದಾಟ ತಪ್ಪಿಸಬಹುದು
   • ಸಗಣಿ, ಗಂಜಲ ಲಭ್ಯತೆಗಾಗಿ
   • ಮೇವುನಷ್ಠ ತಪ್ಪಿಸಬಹುದು. ಇದರಿಂದ ಉತ್ಪಾದನೆ ಹೆಚ್ಚುವುದು.
   • ಪರಾವಲಂಬಿ ಜೀವಿಗಳು/ರೋಗ ರುಜಿನಗಳನ್ನು ಕಡಿಮೆ ಮಾಡಲು.

    

  2. ಮಾದರಿ ಕುರಿ ಶೆಡ್:
  3. 10+1 ಕುರಿಗಳಿಗೆ ಮಾದರಿ ಶೆಡ್ ನಿರ್ಮಾಣ.

   ಈ ಚಟುವಟಿಕೆಯನ್ನು ಕುರಿಗಳನ್ನು ಮನೆಯಲ್ಲೀಯೇ ಕಟ್ಟಿ ಮೇಯಿಸಲು ಪ್ರೋತ್ಸಾಹಿಸಲು ಹಮ್ಮಿಕೊಳ್ಳುವುದು.

  4. ಮಾದರಿ ಹಂದಿ ಶೆಡ್ (2 ಹೆಣ್ಣು + 1 ಗಂಡು ಹಂದಿ).
  5. ಈ ಚಟುವಟಿಕೆಯನ್ನು ಪರಿಸರ ಮತ್ತು ಸಾಮಾಜಿಕ ದೃಷ್ಠಿಯಿಂದ ಗ್ರಾಮದಿಂದ 2-3 ಕಿ.ಮೀ. ದೂರದಲ್ಲಿ ಹಂದಿ ಶೆಡ್ ನಿರ್ಮಾಣ ಮಾಡುವುದು. ಹಂದಿಗಳನ್ನು ಬೀಡಾಡಿ ಮೇಯಲು ಬಿಡಬಾರದು. ಅಡಿಗೆ ಮನೆ ಉಳಿಕೆ ಪದಾರ್ಥಗಳನ್ನು ಮತ್ತು ಕೈತಿಂಡಿಯನ್ನು (ಬೂಸ) ನೀಡಿ ಸಾಕಾಣಿಕೆ ಮಾಡಿದರೆ ಹೆಚ್ಚು ಲಾಭದಾಯಕ.

  6. ಅಜೋಲ್ಲ ಉತ್ಪಾದನೆ:
  7. ಅಸಂಪ್ರದಾಯಕವಾಗಿ ಹಸಿರು ಮೇವು ಉತ್ಪಾದನೆ. ಅಜೋಲ್ಲದಲ್ಲಿ 50% ಸಸಾರಜನಕ ಹಾಗೂ ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿರುತ್ತವೆ.

  8. ರಸಮೇವು ಉತ್ಪಾದನೆ
  9. ಹಸಿರು ಮೇವಿನ ಗುಣ ಮತ್ತು ಅದರಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ಶೇಖರಿಸಿ ಮುಚ್ಚಿಟ್ಟು ಮಾಗಿದ ಮೇವಿಗೆ ರಸಮೇವು ಎನ್ನುವರು. ರಸಮೇವಿನಲ್ಲಿ ಹಸಿರು ಮೇವಿನಂತೆ ತೇವಾಂಶವಿರುತ್ತದೆ. ಬೇಲದ ಹಣ್ಣಿನ ಸುವಾಸನೆ ಇರುತ್ತದೆ. ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ. ಹಸಿರು ಮೇವು ಹೇರಳವಾಗಿ ಲಭ್ಯವಿರುವಾಗ ರಸಮೇವನ್ನಾಗಿ ತಯಾರಿಸಿ ಬೇಸಿಗೆ ಕಾಲದಲ್ಲಿ ಉಪಯೋಗಿಸಬಹುದು. ರಸಮೇವು ತಯಾರಿಸಲು ಉತ್ತಮ ಬೆಳೆಗಳೆಂದರೆ ಮುಸುಕಿನ ಜೋಳ, ಓಟ್ಸ್ ಮತ್ತು ಸಜ್ಜೆ, ಶೇಕಡ 10 ರಿಂದ 15 ರವರೆಗೆ ದ್ವಿದಳ ದಾನ್ಯದ ಮೇವುಗಳನ್ನೂ ಬಳಸಬಹುದು.

   ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

2.98095238095
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top