অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಎಸಿಎಬಿಸಿ ತರಬೇತಿ

ತರಬೇತಿ

ಹೈದರಾಬಾದ್ನ ಮ್ಯಾನೇಜ (MANAGE) ಸಂಸ್ಥೆಯು ಕೃಷಿ ಕ್ಲಿನಿಕ್ ಮತ್ತು ಕೃಷಿ ವ್ಯವಹಾರ ಕೇಂದ್ರ (ACABC) ತರಬೇತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ತರಬೇತಿ ಸಂಸ್ಥೆ ಎಂದು ಗುರುತಿಸಿದೆ. ನಿರುದ್ಯೋಗಿ ಕೃಷಿ ಪದವೀಧರರು, ಕೃಷಿಯಲ್ಲಿ ಡಿಪ್ಲೋಮಾ ಪಡೆದವರು ಹಾಗೂ ಕೃಷಿಗೆ ಸಂಬಂಧಿಸಿದಂತೆ ಇನ್ನಿತರ ಪದವಿಗಳನ್ನು ಪಡೆದವರಿಗಾಗಿ ಲಾಭದಾಯಕ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಗುರಿಯನ್ನು ಈ ತರಬೇತಿಯು ಹೊಂದಿದೆ. ಆದಾಯ ಗಳಿಸುವ ಅವಕಾಶಗಳನ್ನು ಒದಗಿಸುವ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶ ಇದರಲ್ಲಿ ಅಡಕವಾಗಿದೆ.

  • 60 ದಿನಗಳ ಉಚಿತ ತರಬೇತಿ
  • ಸ್ವಯಂ ಉದ್ಯೋಗ
  • ವೈಯಕ್ತಿಕ ಹಾಗೂ ಗುಂಪುಯೋಜನೆಗಳಿಗಾಗಿ ಪಡೆದ ಬ್ಯಾಂಕ್ ಸಾಲದ ಮೇಲೆ ಭಾರತ ಸರಕಾರದ ಸಹಾಯ ಧನ
  • ಸಾಲ ನೀಡುವ ಸಂಸ್ಥೆಗಳಿಗೆ ನಬಾರ್ಡನಿಂದ ಪ್ರತಿಶತ ನೂರರಷ್ಟು ಮರುಸಾಲ
  • ದೇಶದಲ್ಲಿ ಈ ಯೋಜನೆಯಡಿ ಸ್ಥಾಪನೆಯಾದ ಕೃಷಿ ಉದ್ದಿಮೆಗಳ ಸಂಖ್ಯೆ 13218
  • ಕರ್ನಾಟಕದಲ್ಲಿ 1043 ಕೃಷಿ ಉದ್ದಿಮೆಗಳು
  • ತರಬೇತಿಗಾಗಿ ಅರ್ಜಿಗಳ ಆಹ್ವಾನ

ಕರ್ನಾಟಕ ರಾಜ್ಯದ ಅರ್ಹ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಹಾಕಿ, ಉದ್ಯಮಶೀಲತೆಯನ್ನು ಹೊಂದಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಈ ಮೂಲಕ ಪ್ರೋತ್ಸಾಹಿಸಲಾಗಿದೆ.

ಹಿನ್ನಲೆ

ಭಾರತ ಸರಕಾರದ ಕೃಷಿ ಸಚಿವಾಲಯವು NABARD (National Bank for Agriculture and Rural Development) ನ ಸಹಯೋಗದೊಂದಿಗೆ ಕೃಷಿ ಪದವೀಧರರು, ಕೃಷಿಯಲ್ಲಿ ಡಿಪ್ಲೋಮಾ ಪಡೆದವರು ಹಾಗೂ ಕೃಷಿಗೆ ಸಂಬಂಧಿಸಿದಂತೆ ಇನ್ನಿತರ ಪದವಿಗಳನ್ನು ಪಡೆದವರಿಗಾಗಿ ಲಾಭದಾಯಕ ಸ್ವಯಂ ಉದ್ಯೋಗ ಪ್ರಾರಂಭಿಸಲು Agri-Clinics and Agri-Business Centres (ACABC) ಎಂಬ ವಿನೂತನವಾದ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ನೀಡಲಾಗುವ ತರಬೇತಿಯು ಸಾರ್ವಜನಿಕ ಕೃಷಿ ವಿಸ್ತರಣಾ ವ್ಯವಸ್ಥೆಯನ್ನು ಸಧೃಢಗೊಳಿಸಿ, ಆದಾಯ ಗಳಿಕೆಯ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾಗುತ್ತದೆಂಬ ಆಶಯ ಇಲ್ಲಿ ಅಡಗಿದೆ. 60 ದಿವಸಗಳ ಅವಧಿಯ ಈ ತರಬೇತಿ ಕಾರ್ಯಕ್ರಮಗಳು ಉಪನ್ಯಾಸ, ಸಂಬಂಧಿಸಿದ ಸಂಘ ಸಂಸ್ಥೆಗಳಿಗೆ ಪ್ರಾಯೋಗಿಕ ಭೇಟಿ ಹಾಗೂ ಸ್ವತ: ಮಾಡಿ ಕಲಿಯುವ ಅವಕಾಶಗಳನ್ನು ಒದಗಿಸುವದರ ಜತೆಗೆ ಶಿಕ್ಷಾರ್ಥಿಗಳು ತಮಗಿಷ್ಟವಾದ ಕೃಷಿ ಉದ್ಯಮಕ್ಕೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ತಯಾರಿಸಲು ಹಾಗೂ ಆರ್ಥಿಕ ಸಹಾಯಕ್ಕಾಗಿ ಅದನ್ನು ಬ್ಯಾಂಕಿಗೆ ಸಲ್ಲಿಸಲು ಅನುವು ಮಾಡಿಕೊಡುತ್ತವೆ. ಈ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಗುವ ಸ್ವಯಂ ಉದ್ಯೋಗ ಎರಡು ರೀತಿಯದ್ದಾಗಿರಬಹುದು

  • ಮಣ್ಣಿನ ಆರೋಗ್ಯ, ಸಸ್ಯ ಸಂರಕ್ಷಣೆ, ಬೆಳೆ ವಿಮೆ, ಮೇವು ನಿರ್ವಹಣೆ ಮುಂತಾದವುಗಳ ಬಗ್ಗೆ ತಜ್ಞ ಸಲಹೆ ನೀಡುವದಕ್ಕಾಗಿ ಕೃಷಿ ಕ್ಲಿನಿಕ್ಗಳನ್ನು (Agriclinics) ಸ್ಥಾಪಿಸುವದು ಹಾಗೂ
  • ಕೃಷಿ ಉಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಪೂರೈಸುವದು, ಕೃಷಿ ಕಚ್ಚಾವಸ್ತುಗಳ ಮಾರಾಟ ಮಾಡುವದು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಪಶು ಸಂಗೋಪನೆ ಇತ್ಯಾದಿ ಕೃಷಿ ಉದ್ಯಮಗಳನ್ನು ಪ್ರಾರಂಭಿಸುವದು.

ತರಬೇತಿ ಪಡೆದವರು ಕೃಷಿಗೆ ಸಂಬಂಧಿಸಿದ ಉದ್ದಿಮೆಗಳ ಮುಖಾಂತರ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು, ಯೋಜನೆಯ ಸೂಕ್ತತೆಗೆ ಅನುಗುಣವಾಗಿ, ಸಾಲ ಸೌಲಭ್ಯ ಒದಗಿಸಲು ಹಣಕಾಸು ಸಂಸ್ಥೆಗಳನ್ನು NABARD ಪ್ರೇರೇಪಿಸುತ್ತದೆ. ಈ ಯೋಜನೆಗಳಿಗಾಗಿ ಸಾಲ ನೀಡಿದ ಸಂಸ್ಥೆಗಳಿಗೆ NABARD ಪ್ರತಿಶತ 100 ರಷ್ಟು ಮರುಸಾಲ ನೀಡುತ್ತದೆ. ಹಾಗೆಯೆ, ಭಾರತ ಸರಕಾರದ ಕೃಷಿ ಹಾಗೂ ಸಹಕಾರ ಇಲಾಖೆಯಿಂದ NABARD ಮೂಲಕ ಇಂಥ ಯೋಜನೆಗಳಿಗಾಗಿ ಸಹಾಯಧನ ದೊರೆಯುತ್ತದೆ.

ACABC ಯೋಜನೆಯಡಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ದೇಶದಾದ್ಯಂತ MANAGE ರಿಂದ ಗುರುತಿಸಲ್ಪಟ್ಟ ತರಬೇತಿ ಸಂಸ್ಥೆಗಳ [Nodal Training Institute (NIT)] ಮುಖಾಂತರ ನಡೆಸಲಾಗುತ್ತದೆ. ಜುಲೈ 2013 ರಲ್ಲಿ, ದೇಶದಲ್ಲಿ ಇಂಥ 128 ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳಲ್ಲಿ ಐದು ಸಂಸ್ಥೆಗಳು ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿವೆ. ಈ ಯೋಜನೆಯಡಿಯಲ್ಲಿ ಸುಮಾರು 13,218 ಕೃಷಿ ಉದ್ದಿಮೆಗಳು ದೇಶಾದ್ಯಂತ ಪ್ರಾರಂಭಿಸಲ್ಪಟ್ಟಿದ್ದು ಅವುಗಳಲ್ಲಿ 1,043 ಉದ್ದಿಮೆಗಳು ಕರ್ನಾಟಕದಲ್ಲಿಯೇ ಪ್ರಾರಂಭವಾಗಿವೆ. ಇತ್ತೀಚಿಗೆ, MANAGE ಸಂಸ್ಥೆಯು ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ತರಬೇತಿ ಸಂಸ್ಥೆಯೆಂದು ಗುರುತಿಸಿದೆ. ಕರ್ನಾಟಕ ರಾಜ್ಯದ ಅರ್ಹ ಅಭ್ಯರ್ಥಿಗಳು ಈ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಹಾಕಲು ಹಾಗೂ ತರಬೇತಿ ಮುಖಾಂತರ ಉದ್ಯಮಶೀಲತೆಯ ಕೌಶಲ್ಯವನ್ನು ಹೊಂದಿ ಸ್ವಯಂ ಉದ್ಯೋಗಕ್ಕೆ ಮುಂದಾಗಲು ಈ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

ಆರ್ಹತೆ

ಕೆಳಕಾಣಿಸಿದ ಅಭ್ಯರ್ಥಿಗಳು (ಕರ್ನಾಟಕ ರಾಜ್ಯದವರು ಮಾತ್ರ) ಈ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಬಹುದು

  • ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಂದ/ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳಿಂದ/ ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ (ICAR) ಅಥವಾ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಮಾನ್ಯ ಮಾಡಲ್ಪಟ್ಟ ವಿಶ್ವವಿದ್ಯಾಲಯಗಳಿಂದ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಸ್ನಾತಕ ಪದವಿ ಪಡೆದಿರಬೇಕು. ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಪಡೆದ ಪದವಿಯು ಬೇರೆ ಸಂಸ್ಥೆಗಳಿಂದ ನೀಡಲ್ಪಟ್ಟಿದ್ದರೆ, ಅದನ್ನು ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಭಾರತ ಸರಕಾರದ ಕೃಷಿ ಮತ್ತು ಸಹಕಾರ ಇಲಾಖೆಯ ಒಪ್ಪಿಗೆಗೆ ಒಳಪಟ್ಟು ಪರಿಗಣಿಸಲಾಗುವದು.
  • ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಂದ/ ರಾಜ್ಯ ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ/ ರಾಜ್ಯ ತಾಂತ್ರಿಕ ಶಿಕ್ಷಣ ಲಾಖೆಯಿಂದ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ನೀಡಲ್ಪಟ್ಟ ಡಿಪ್ಲೋಮಾ (ಕನಿಷ್ಟ ಪ್ರತಿಶತ 50 ಗುಣಗಳೊಂದಿಗೆ) ಅಥವಾ ಸ್ನಾತಕೋತ್ತರ ಡಿಪ್ಲೋಮಾ ಹೊಂದಿರಬೇಕು. ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಪಡೆದ ಡಿಪ್ಲೋಮಾಬೇರೆ ಸಂಸ್ಥೆಗಳಿಂದ ನೀಡಲ್ಪಟ್ಟಿದ್ದರೆ ಅದನ್ನು ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಭಾರತ ಸರಕಾರದ ಕೃಷಿ ಮತ್ತು ಸಹಕಾರ ಇಲಾಖೆಯ ಒಪ್ಪಿಗೆಗೆ ಒಳಪಟ್ಟು ಪರಿಗಣಿಸಲಾಗುವದು.
  • ಜೈವಿಕ ವಿಜ್ಞಾನದಲ್ಲಿ ಸ್ನಾತಕ ಪದವಿ ಪಡೆದು ಕೃಷಿ ಹಾಗೂ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದವರು
  • ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ದಿಂದ ಮಾನ್ಯತೆ ಪಡೆದ ಹಾಗೂ ಪಠ್ಯದಲ್ಲಿ ಪ್ರತಿಶತ 60 ಕ್ಕೂ ಅಧಿಕ ಪ್ರಮಾಣದಲ್ಲಿ ಕೃಷಿ ಮತ್ತು ಸಂಬಂಧಿಸಿದ ವಿಷಯಗಳನ್ನು ಹೊಂದಿದ ಪದವಿ ಪಡೆದವರು.
  • ಮಾನ್ಯತೆ ಪಡೆದ ಕಾಲೇಜು/ ವಿಶ್ವವಿದ್ಯಾಲಯಗಳಿಂದ ಜೈವಿಕ ವಿಜ್ಞಾನದಲ್ಲಿ ಬಿ.ಎಸ್.ಸಿ. ಪದವಿ ಪಡೆದು, ಪಠ್ಯದಲ್ಲಿ ಪ್ರತಿಶತ 60 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮತ್ತು ಸಂಬಂಧಿಸಿದ ವಿಷಯ ಹೊಂದಿದ ಡಿಪ್ಲೋಮಾ/ ಸ್ನಾತಕೋತ್ತರ ಡಿಪ್ಲೋಮಾ ಪಡೆದವರು.
  • ಎಸ್.ಎಸ್.ಎಲ್.ಸಿ. ನಂತರ ಎರಡು ವರ್ಷ ಕೃಷಿಗೆ ಸಂಬಂಧಿಸಿದ ಕೋರ್ಸುಗಳನ್ನು ಕನಿಷ್ಟ ಪ್ರತಿಶತ 55 ಅಂಕಗಳೊಂದಿಗೆ ಮುಗಿಸಿದವರು.

ಗಮನಿಸಿ: ACABC ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಯಸ್ಸಿನ ನಿರ್ಬಂಧವಿಲ್ಲ.

ಅರ್ಜಿ ಹಾಗೂ ಆಯ್ಕೆ

ಅರ್ಜಿ ಶುಲ್ಕ : ಆಸಕ್ತ ಅಭ್ಯರ್ಥಿಗಳು ಮರಳಿಸಲಾಗದ (Non-refundable) ರೂ.500 ರ ಶುಲ್ಕವನ್ನು ಡಿ.ಡಿ.ಮುಖಾಂತರ ಸಂದರ್ಶನದ ಸಮಯದಲ್ಲಿ ಪಾವತಿಸಬೇಕು. ಡಿ.ಡಿ. ಯನ್ನು ACABC, MANAGE ಹೆಸರಿನಲ್ಲಿ ಹೈದರಾಬಾದನಲ್ಲಿ ಸಂದಾಯವಾಗುವಂತೆ ಪಡೆದಿರಬೇಕು.

ಆಯ್ಕೆಯ ಪ್ರಕ್ರಿಯೆ : ಅರ್ಜಿಗಳ ಪರಿಶೀಲನೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯು MANAGE ನಿಯಮಾವಳಿಗಳಿಗನುಗುಣವಾಗಿ ರಚಿಸಲ್ಪಟ್ಟ ಸಮಿತಿಯ ಮೂಲಕ ನಡೆಯುತ್ತದೆ. ಅಭ್ಯರ್ಥಿಗಳು NTI ಕೃಷಿ ವಿಶ್ವವಿದ್ಯಾಲಯ, ಧಾರವಾಡ) ನಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವ ಖರ್ಚನ್ನು ತಾವೇ ಭರಿಸಬೇಕು.

ಅರ್ಜಿ ಫಾರ್ಮ : ಅರ್ಜಿ ಫಾರ್ಮನ್ನು ವೆಬ್ಸೈಟ್ನಿಂದ ಪಡೆಯಬಹುದು

ಸೌಲಭ್ಯ ಹಾಗೂ ಪ್ರೋತ್ಸಾಹ

ತರಬೇತಿ ಸೌಲಭ್ಯಗಳು ಹಾಗೂ ಅನಂತರದ ಪ್ರೋತ್ಸಾಹ: ಈ ತರಬೇತಿ ಕಾರ್ಯಕ್ರಮದ ಅವಧಿ 60 ದಿವಸಗಳು. ಈ ಅವಧಿಯಲ್ಲಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ, ಬೋಧನೆ, ಬೋಧನಾ ಸಾಮಗ್ರಿ, ಪ್ರಾಯೋಗಿಕ ಭೇಟಿಗಳು ಇತ್ಯಾದಿಉಚಿತವಾಗಿ ದೊರೆಯುತ್ತವೆ. ಆದರೆ, ತರಬೇತಿಗಾಗಿ NTI (ಕೃಷಿ ವಿಶ್ವವಿದ್ಯಾಲಯ, ಧಾರವಾಡ) ಗೆ ಬರಲು ಹಾಗೂ ಮರಳಿ ಹೋಗಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಅಭ್ಯರ್ಥಿಗಳೇ ಭರಿಸಬೇಕು.

ತರಬೇತಿ ಅವಧಿಯ ಕೊನೆಯಲ್ಲಿ, ಅಭ್ಯರ್ಥಿಗಳು ತಮಗೆ ಇಷ್ಟವಾದ ಕೃಷಿ ಉದ್ಯಮಕ್ಕೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ತಯಾರಿಸಿ ಸಾಲ ಸೌಲಭ್ಯಕ್ಕಾಗಿ ಅದನ್ನು ಬ್ಯಾಂಕಿಗೆ ಸಲ್ಲಿಸಲು ಸೂಕ್ತ ಮಾರ್ಗದರ್ಶನ ಮಾಡಲಾಗುತ್ತದೆ. ತರಬೇತಿ ನಂತರದ ಒಂದು ವರ್ಷದವರೆಗೆ, ಅಭ್ಯರ್ಥಿಗಳಿಂದ ಬ್ಯಾಂಕಿಗೆ ವಿವರವಾದ ಯೋಜನಾ ವರದಿ ಸಲ್ಲಿಕೆ, ಬ್ಯಾಂಕ್ ಸಾಲ ಮಂಜೂರಾತಿ ಹಾಗೂ ಕೃಷಿ ಉದ್ಯಮ ಸ್ಥಾಪನೆ ಬಗ್ಗೆ NTI ನಿಗಾವಹಿಸುತ್ತದೆ.

ಸಾಲ ಸೌಲಭ್ಯ ಹಾಗೂ ಸಹಾಯಧನ

ಈ ತರಬೇತಿ ಕಾರ್ಯಕ್ರಮದಡಿಯಲ್ಲಿ ಸಿಗುವ ಸಹಾಯವು ಅಭ್ಯರ್ಥಿಗಳು ತಯಾರಿಸಿದ ಯೋಜನಾ ವರದಿಯ ಸೂಕ್ತತೆಗೆ ಅನುಗುಣವಾಗಿ ಬ್ಯಾಂಕುಗಳು ನೀಡಬಹುದಾದ ಸಾಲಕ್ಕೆ ಮಾತ್ರ ಸಂಬಂಧಿಸಿರುತ್ತದೆ.

ಈ ಉದ್ದೇಶಕ್ಕಾಗಿ ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಹೀಗಿವೆ

  • ವಾಣಿಜ್ಯ ಬ್ಯಾಂಕುಗಳು
  • ಗ್ರಾಮೀಣ ಬ್ಯಾಂಕುಗಳು
  • ರಾಜ್ಯ ಸಹಕಾರಿ ಬ್ಯಾಂಕುಗಳು
  • ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು
  • NABARD ನಿಂದ ಮರುಸಾಲಕ್ಕೆ ಅರ್ಹವಾದ ಇತರ ಯಾವುದೇ ಸಂಸ್ಥೆಗಳು.
  • ಸಹಾಯಧನದ ಪ್ರಮಾಣ : ಸ್ತ್ರೀಯರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಾಲ ಮರುಪಾವತಿಯ ಕೊನೆಯ ಹಂತದಲ್ಲಿ ಪ್ರತಿಶತ 44 ರ ಪ್ರಮಾಣದಲ್ಲಿ ಸಂಯುಕ್ತ (composite) ಸಹಾಯಧನ ಸಿಗುತ್ತದೆ. ಇತರರಿಗೆ ಸಹಾಯಧನದ ಪ್ರಮಾಣ ಪ್ರತಿಶತ 36 ರಷ್ಟು ಇರುತ್ತದೆ.

    ಸಹಾಯಧನಕ್ಕೆ ಅರ್ಹವಿರುವ ಸಾಲದ ಮಿತಿ : ಒಬ್ಬ ವ್ಯಕ್ತಿಯು ತಾನು ಪಡೆದ ಸಾಲದಲ್ಲಿ ಗರಿಷ್ಟ ರೂ.20 ಲಕ್ಷದವರೆಗಿನ ಮೊತ್ತದ ಮೇಲೆ ಸಹಾಯಧನವನ್ನು ಪಡೆಯಬಹುದು (ಅತ್ಯಂತ ಯಶಸ್ವಿಯಾದ ಯೋಜನೆಗಳಲ್ಲಿ ಈ ಮೊತ್ತ ರೂ.25 ಲಕ್ಷ ಆಗಿರುತ್ತದೆ).ಗುಂಪಿನಿಂದ ಕೈಗೆತ್ತಿಕೊಂಡ ಯೋಜನೆಗಳಲ್ಲಿ, ಸಹಾಯಧನಕ್ಕೆ ಅರ್ಹವಾದ ಸಾಲದ ಭಾಗ ಗರಿಷ್ಟ ರೂ.100 ಲಕ್ಷ. ಗಮನಿಸಬೇಕಾದ ಅಂಶವೆಂದರೆ, ಈ ಯೋಜನೆಯಡಿಯಲ್ಲಿ ಸ್ಥಾಪಿತವಾಗುವ ಉದ್ಯಮಗಳಿಗೆಅವುಗಳ ಆರ್ಥಿಕ ಹಾಗೂ ತಾಂತ್ರಿಕ ಸೂಕ್ತತೆಗೆ ಅನುಗುಣವಾಗಿ ಸಿಗುವ ಸಾಲದ ಪ್ರಮಾಣವು ಸಹಾಯಧನಕ್ಕೆ ಅರ್ಹವಾದ ಗರಿಷ್ಟ ಮೊತ್ತಕ್ಕಿಂತ ಹೆಚ್ಚಾಗಿರಬಹುದು.

    ವಿಚಾರಣೆ

    • ಡಾ. ಎಸ್.ಬಿ. ಮಹಾಜನಶೆಟ್ಟಿ

    ಪ್ರಾಧ್ಯಾಪಕರು ಹಾಗೂ ACABC ನೋಡಲ್ ಆಫೀಸರ್

    ಕೃಷಿ ವ್ಯವಹಾರ ನಿರ್ವಹಣೆ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9731196749

    ಇಮೇಲ್ : acabc@uasd.in

    • ಡಾ. ಎಚ್. ಬಸವರಾಜ

    ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯ ಮುಖ್ಯಸ್ಥರು

    ಕೃಷಿ ಅರ್ಥಶಾಸ್ತ್ರ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9741177121

    ಇಮೇಲ್ : hbraja12@rediffmail.com

    • ಡಾ. ಬಿ.ಕೆ. ನಾಯ್ಕ

    ಪ್ರಾಧ್ಯಾಪಕರು ಕೃಷಿ ವ್ಯವಹಾರ ನಿರ್ವಹಣೆ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9448495332

    ಇಮೇಲ್ : bpkoti@yahoo.com

    • ಡಾ. ಎಸ್.ಎಸ್. ಡೊಳ್ಳಿ

    ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9845142796

    ಇಮೇಲ್ : ssdolli@yahoo.com

    • ಡಾ. ಜೆ.ಎಸ್. ಸೊನ್ನದ

    ಸಹ ಪ್ರಾಧ್ಯಾಪಕರು ಕೃಷಿ ವ್ಯವಹಾರ ನಿರ್ವಹಣೆ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9901169323

    ಇಮೇಲ್ : jssonnad@yahoo.com

    • ಡಾ. ಎ.ಡಿ. ನಾಯ್ಕ

    ಸಹ ಪ್ರಾಧ್ಯಾಪಕರು ಕೃಷಿ ವ್ಯವಹಾರ ನಿರ್ವಹಣೆ ವಿಭಾಗ,

    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005

    ಮೊಬೈಲ್ ಫೋನು : 9480073313

    ಇಮೇಲ್: adnaikuasd@gmail.com

    ಸಂಪರ್ಕಿಸಿ

    ಡಾ. ಎಸ್.ಬಿ. ಮಹಾಜನಶೆಟ್ಟಿ
    ಪ್ರಾಧ್ಯಾಪಕರು ಹಾಗೂ ACABC ನೋಡಲ್ ಆಫೀಸರ್
    ಕೃಷಿ ವ್ಯವಹಾರ ನಿರ್ವಹಣೆ ವಿಭಾಗ,
    ಕೃಷಿ ವಿಶ್ವವಿದ್ಯಾಲಯ, ಧಾರವಾಡ-580 005
    ಮೊಬೈಲ್ ಫೋನು : 9731196749
    ಇಮೇಲ್ : acabc@uasd.in.

    ಮೂಲ : ಅಗ್ರಿ ಕ್ಲಿನಿಕ್ಸ್ ಮತ್ತು ಅಗ್ರಿ ಬ್ಯುಜಿನೆಸ್ ಸೆಂಟರ್ಸ(ಎಸಿಎಬಿಸಿ) ಯೋಜನೆ

    ಕೊನೆಯ ಮಾರ್ಪಾಟು : 6/29/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate