ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗ್ರಾಮೀಣ ಭಂಡಾರಣ

ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಈ ಕಾರಣದಿಂದಲೇ ಭಾರತ ಸರ್ಕಾರವು "ಗ್ರಾಮೀಣ ಭಂಡಾರಣ ಯೋಜನೆ" ಯನ್ನು ಪ್ರಾರಂಭಿಸಿದ್ದು ಅದು 1 ಏಪ್ರಿಲ್ 2011 ರಿಂದ ಕಾರ್ಯರೂಪಕ್ಕೆ ಬಂದಿದೆ.

ಗ್ರಾಮೀಣ ಭಂಡಾರಣ/ಉಗ್ರಾಣ ಯೋಜನೆ

ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಳ್ಳಿಗಳಲ್ಲಿ ಉಗ್ರಾಣಗಳನ್ನು ಸ್ಥಾಪಿಸುವುದರಿಂದ ಈ ಸಣ್ಣ ಪ್ರಮಾಣದ ರೈತರು ತಮ್ಮ ತಮ್ಮ ಕೃಷಿ ಉತ್ಪನ್ನಗಳನ್ನು ಅವುಗಳಲ್ಲಿ ಸಂಗ್ರಹಿಸಿಟ್ಟು, ಮಾರುಕಟ್ಟೆಯಲ್ಲಿ ಅವುಗಳನ್ನು ಯೋಗ್ಯ ಬೆಲೆಗೆ ಮಾರಲು ಸಾಧ್ಯವಾಗುತ್ತದೆ ಮತ್ತು ಅವಸರದಿಂದ ಸಿಕ್ಕ ಸಿಕ್ಕ ಬೆಲೆಗೆ ಮಾರಿ ಕೈಸುಟ್ಟುಕೊಳ್ಳುವುದು ತಪ್ಪುತ್ತದೆ.

ಈ ಕಾರಣದಿಂದಲೇ ಭಾರತ ಸರ್ಕಾರವು "ಗ್ರಾಮೀಣ ಭಂಡಾರಣ ಯೋಜನೆ" ಯನ್ನು ಪ್ರಾರಂಭಿಸಿದ್ದು ಅದು 1 ಏಪ್ರಿಲ್ 2011 ರಿಂದ ಕಾರ್ಯರೂಪಕ್ಕೆ ಬಂದಿದೆ.

ಯೋಜನೆಯ ಮುಖ್ಯ ಉದ್ದೇಶ

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು, ಸಂಸ್ಕರಿಸಿದ ಕೃಷಿ ಉತ್ಪನ್ನಗಳನ್ನು, ಬೆಳೆಗೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಶೇಖರಿಸಿಟ್ಟುಕೊಳ್ಳಲು, ಉತ್ತಮ ಬೆಲೆಗೆ ತಮ್ಮ ಉತ್ಪಾದನೆಗಳನ್ನು ಮಾರಲು ಮತ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ತಮ್ಮ ಉತ್ಪಾದನೆಗಳಿಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ವೈಜ್ಞಾನಿಕ ಪದ್ಧತಿಯಲ್ಲಿ ಉಗ್ರಾಣಗಳ ಸ್ಥಾಪನೆ ಈ ಯೋಜನೆಯ ಮುಖ್ಯ ಉದ್ದೇಶ.

ಈ ಯೋಜನೆಯು 31 ಮಾರ್ಚ್ 2012 ರ ವರೆಗೆ ಜಾರಿಯಲ್ಲಿರುತ್ತದೆ.

ಪ್ರಮುಖ ಲಕ್ಷಣಗಳು

ಅರ್ಹ ಸಂಘಟನೆಗಳು

ದೇಶದಾದ್ಯಂತ ರೈತರು, ರೈತ ಸಮೂಹಗಳು, ಸಹಭಾಗಿತ್ವ/ಸ್ವಾಮ್ಯತೆ ಇರುವ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು (NGO), ಸ್ವಸಹಾಯ ಸಮೂಹಗಳು (SHG), ಸಂಸ್ಥೆಗಳು, ಕಾರ್ಪೋರೇಶನ್ ಗಳು, ಸಹಕಾರಿ ಸಂಘಗಳು, ಮುನಿಸಿಪಾಲ್ ಕಾರ್ಪೋರೇಶನ್ ಗಳು, ಒಕ್ಕೂಟಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಮಾರುಕಟ್ಟೆ ಮಂಡಳಿಗಳು ಮತ್ತು ಕೃಷಿ ಸಂಸ್ಕರಣಾ ಸಂಸ್ಥೆಗಳಲ್ಲದೇ ಸ್ಥಳೀಯ ಆಡಳಿತ ಸಮಿತಿಗಳು ಇವರಲ್ಲಿ ಯಾರು ಬೇಕಾದರೂ ಉಗ್ರಾಣಗಳ ನಿರ್ಮಾಣವನ್ನು ಕೈಗೊಳ್ಳಬಹುದಾಗಿದೆ. ಆದರೆ ಸಹಕಾರಿ ಸಂಘಗಳಿಂದ ನಿರ್ಮಿಸಲಾದ ಉಗ್ರಾಣಗಳಿಗೆ ಮಾತ್ರ ಜೀರ್ಣೋದ್ಧಾರಕ್ಕಾಗಿ ಧನ ಸಹಾಯ ನೀಡಲಾಗುವುದು.

ಸ್ಥಳ

ಉದ್ಯಮಿಗಳು ತಮ್ಮ ವಾಣಿಜ್ಯ ಆವಶ್ಯಕತೆಗಳಿಗನುಗುಣವಾಗಿ ಮುನಿಸಿಪಾಲಿಟಿಗೆ ಸಂಬಂಧಿಸಿದ ಪ್ರದೇಶಗಳನ್ನು ಹೊರತು ಪಡಿಸಿ ಯಾವ ಸ್ಥಳದಲ್ಲಿ ಬೇಕಾದರೂ ಉಗ್ರಾಣಗಳನ್ನು ನಿರ್ಮಿಸಬಹುದಾಗಿದೆ. ಫುಡ್ ಪಾರ್ಕ್ ಗಳಲ್ಲಿ ನಿರ್ಮಿಸಲಾದ ಗ್ರಾಮೀಣ ಉಗ್ರಾಣಗಳು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ನೆರವು ಪಡೆದಿದ್ದರೆ, ಈ ಯೋಜನೆಯಡಿಯಲ್ಲಿ ಅವುಗಳಿಗೂ ಧನ ಸಹಾಯ ನೀಡಲಾಗುವುದು.

ವಿಸ್ತಾರ/ಅಳತೆ

ಉಗ್ರಾಣದ ಶೇಖರಣಾ ಸಾಮರ್ಥ್ಯವನ್ನು ಉದ್ಯಮಿಯೇ ನಿರ್ಧರಿಸುವನು. ಆದರೆ ಯೋಜನೆಯಡಿಯಲ್ಲಿ ಕನಿಷ್ಠ 1000 ಟನ್ ಮತ್ತು ಗರಿಷ್ಠ 10,000 ಟನ್ ಶೇಖರಣಾ ಸಾಮರ್ಥ್ಯವಿರುವ ಉಗ್ರಾಣಗಳಿಗೆ ಮಾತ್ರ ಸಹಾಯಧನ (ಸಬ್ಸಿಡಿ) ದೊರೆಯುವುದು.ಎನ್.ಸಿ.ಡಿ.ಸಿ (NCDC) ಯಿಂದ ನೆರವು ಪಡೆದು ಸಹಕಾರಿ ಸಂಘಗಳು ನಿರ್ಮಿಸಿದ ಉಗ್ರಾಣಗಳಿಗೆ ನಿಗದಿತ ಧನಸಹಾಯಕ್ಕಿಂತ ಅಧಿಕ ಮೊತ್ತವನ್ನು ನೀಡಲಾಗುವುದಿಲ್ಲ.

ಕೆಲವು ಪ್ರದೇಶಗಳ ಸ್ಥಳಾಕೃತಿಯ ಕಾರ್ಯ ಸಾಧ್ಯತೆಯ ವಿಶ್ಲೇಷಣೆಯ ಅಧಾರದ ಮೇಲೆ/ರಾಜ್ಯ ಅಥವಾ ಪ್ರದೇಶದ ವಿಶೇಷ ಅವಶ್ಯಕತೆಗನುಗುಣವಾಗಿ 50 ಟನ್ ಗಳಷ್ಟು ಕಡಿಮೆ ಶೇಖರಣಾ ಸಾಮರ್ಥ್ಯ ಹೊಂದಿರುವ ಗ್ರಾಮೀಣ ಉಗ್ರಾಣಗಳಿಗೂ ಯೋಜನೆಯಡಿಯಲ್ಲಿ ಧನಸಹಾಯ ನೀಡಲಾಗುವುದು. ಗುಡ್ಡಗಾಡು ಪ್ರದೇಶಗಳಲ್ಲಿ (ಅಂದರೆ ಉಗ್ರಾಣ ನಿರ್ಮಿಸಬೇಕಾದ ಜಾಗವು ಸಮುದ್ರ ಮಟ್ಟದಿಂದ 1000 ಮೀಟರ್ ಗಳಷ್ಟು ಎತ್ತರದಲ್ಲಿ ಸ್ಥಾಪಿತವಾಗಿದ್ದರೆ) 25 ಟನ್ ಗಳಷ್ಟು ಶೇಖರಣಾ ಸಾಮರ್ಥ್ಯ ಹೊಂದಿರುವ ಗ್ರಾಮೀಣ ಉಗ್ರಾಣಗಳಿಗೂ ಈ ಯೋಜನೆಯಡಿಯಲ್ಲಿ ಸಹಾಯಧನ (ಸಬ್ಸಿಡಿ) ದೊರೆಯುವುದು.

ಸಹಾಯಧನ (ಸಬ್ಸಿಡಿ)

  • ಉಗ್ರಾಣ ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಹಾಕಲ್ಪಟ್ಟಿದ್ದರೆ, ಯೋಜನೆಯು ಮಹಿಳಾ ಕೃಷಿಕರು/ಅವರ ಸ್ವಸಹಾಯ ಮತ್ತು ಸಹಕಾರಿ ಸಂಘಗಳು, ಪಜಾ/ಪಪಂ ಉದ್ಯಮಿಗಳು ಮತ್ತು ಅವರ ಸ್ವಸಹಾಯ ಸಂಘಗಳು/ಸಹಕಾರಿ ಸಂಘಗಳು ಇವೆಲ್ಲವುಗಳಿಗೂ ದೊರೆಯುವ ರೂ. 62.50 ಲಕ್ಷ ಸಬ್ಸಿಡಿಯ ಮೇಲೆ ಇನ್ನೂ ಅಧಿಕ ಧನಸಹಾಯ ದೊರೆಯುವುದು. ಎನ್. ಸಿ.ಡಿ.ಸಿ (NCDC) ಯಿಂದ ನೆರವು ಪಡೆದು ಸಹಕಾರಿ ಸಂಘಗಳು ನಿರ್ಮಿಸಿದ ಉಗ್ರಾಣಗಳಿಗೆ ನಿಗದಿತ ಧನಸಹಾಯಕ್ಕಿಂತ ಅಧಿಕ ಮೊತ್ತವನ್ನು ನೀಡಲಾಗುವುದಿಲ್ಲ.
  • ರೂ. 28.12 ಲಕ್ಷ ಸಬ್ಸಿಡಿಗೆ ಅರ್ಹರಾಗಿರುವ ವ್ಯಕ್ತಿಗಳು, ಸಂಘಗಳು, ಸಂಸ್ಥೆಗಳು ಇತ್ಯಾದಿ ಸೇರಿದಂತೆ ಇತರ ಎಲ್ಲ ವರ್ಗಗಳಿಗೆ ಬಂಡವಾಳ ವೆಚ್ಚದ ಶೇ 15% ರಷ್ಟು ಧನ ಸಹಾಯ ಮಾಡಲಾಗುವುದು.
  • ಎನ್. ಸಿ.ಡಿ.ಸಿ (NCDC)ಯಿಂದ ನೆರವು ಪಡೆದ ಸಹಕಾರಿ ಸಂಘಗಳು ನಿರ್ಮಿಸಿದ ಉಗ್ರಾಣಗಳ ಜೀರ್ಣೋದ್ಧಾರಕ್ಕಾಗಿ ಯೋಜನೆಯ ಬಂಡವಾಳ ವೆಚ್ಚದ ಶೇ 25% ರಷ್ಟು ಧನಸಹಾಯ ನೀಡಲಾಗುವುದು.

ಯೋಜನೆಗಾಗಿ ಬಂಡವಾಳ ರೂಪದಲ್ಲಿ ನೀಡಲಾಗುವ ಸಬ್ಸಿಡಿಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ:

  • 1000ಟನ್ ಗಳ ಸಾಮರ್ಥ್ಯ ಹೊಂದಿರುವ ಉಗ್ರಾಣಗಳಿಗಾಗಿ - ಧನಸಹಾಯ ಒದಗಿಸಲಿರುವ ಬ್ಯಾಂಕು ಯೋಜನೆಯ ಬಗ್ಗೆ ನಿರ್ಣಯಿಸಿದ ಮೌಲ್ಯ ಅಥವಾ ನಿಜವಾದ ಬೆಲೆ ಅಥವಾ ಶೇಖರಣಾ ಸಾಮರ್ಥ್ಯದ ಪ್ರತಿ ಟನ್ ಗೆ ರೂ 3500, ಇವುಗಳಲ್ಲಿ ಕನಿಷ್ಠವೆನಿಸಿದ್ದು
  • 1000 ಟನ್ ಮೀರಿದ ಶೇಖರಣಾ ಸಾಮರ್ಥ್ಯ ಹೊಂದಿರುವ ಉಗ್ರಾಣಗಳಿಗಾಗಿ - ಧನಸಹಾಯ ಒದಗಿಸಲಿರುವ ಬ್ಯಾಂಕು ಯೋಜನೆಯ ಬಗ್ಗೆ ನಿರ್ಣಯಿಸಿದ ಮೌಲ್ಯ ಅಥವಾ ನಿಜವಾದ ಬೆಲೆ ಅಥವಾ ಶೇಖರಣಾ ಸಾಮರ್ಥ್ಯದ ಪ್ರತಿ ಟನ್ ಗೆ ರೂ 3000, ಇವುಗಳಲ್ಲಿ ಕನಿಷ್ಠವೆನಿಸಿದ್ದನ್ನು ನೀಡಲಾಗುವುದು.
  • ಎನ್. ಸಿ.ಡಿ.ಸಿ ಯ ನೆರವು ಪಡೆದ ಸಹಕಾರಿ ಸಂಘಗಳಿಂದ ಉಗ್ರಾಣಗಳ ಜೀರ್ಣೋದ್ಧಾರಕ್ಕಾಗಿ- ಧನಸಹಾಯ ಒದಗಿಸಲಿರುವ ಬ್ಯಾಂಕು ಯೋಜನೆಯ ಬಗ್ಗೆ ನಿರ್ಣಯಿಸಿದ ಮೌಲ್ಯ ಅಥವಾ ಎನ್. ಸಿ.ಡಿ.ಸಿ ಯಿಂದ ನಿಗದಿಯಾದ ಬೆಲೆ ಅಥವಾ ಶೇಖರಣಾ ಸಾಮರ್ಥ್ಯದ ಪ್ರತಿ ಟನ್ ಗೆ ರೂ 750, ಇವುಗಳಲ್ಲಿ ಕನಿಷ್ಠವೆನಿಸಿದ್ದನ್ನು ನೀಡಲಾಗುವುದು.
  • ಫಲಾನುಭವಿಗಳು ಉಗ್ರಾಣ ಯೋಜನೆಗಾಗಿ ಅಥವಾ ಅದರ ಯಾವುದೇ ಭಾಗಕ್ಕಾಗಿ ಒಂದಕ್ಕಿಂತ ಹೆಚ್ಚು ಮೂಲದಿಂದ ಧನಸಹಾಯ ಪಡೆಯಕೂಡದು
  • ಉ‌ಗ್ರಾಣದ ಶೇಖರಣ ಸಾಮರ್ಥ್ಯವನ್ನು ಪ್ರತಿ ಘನ ಮೀಟರಿಗೆ 0.4 ಮೆ.ಟ (ಮೆಟ್ರಿಕ್ ಟನ್) ಯಂತೆ ಲೆಕ್ಕಹಾಕಲಾಗುವುದು.

ಮೂಲ :agmarknet(www.agmarknet.nic.in/amrscheme/ruralhead.htm)

2.95192307692
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
mailari May 31, 2019 05:23 PM

super imformation

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top