ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿಯಾಧಾರಿತ ಉದ್ಯಮಗಳು / ಬೀಜಗಳಿಗಾಗಿ ನೆರವು ಯೋಜನೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬೀಜಗಳಿಗಾಗಿ ನೆರವು ಯೋಜನೆಗಳು

ಬೀಜಗಳಿಗಾಗಿ ನೆರವು ನೀಡುವ ಭಾರತ ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬೀಜಗಳಿಗಾಗಿ ನೆರವು ನೀಡುವ ಭಾರತ ಸರ್ಕಾರದ ಯೋಜನೆಗಳು


ಯೋಜನೆ/ಘಟಕ

ಬೆಳೆ

ನೆರವಿನ ಪ್ರಮಾಣ

ದೊಡ್ಡ ಪ್ರಮಾಣದ ನಿರ್ವಹಣೆ ಕೃಷಿ ವಿಧಾನ –ರಾಜ್ಯ ಕ್ರಿಯಾ ಯೋಜನೆ

ಅಕ್ಕಿ ಮತ್ತು ಗೋಧಿ ಸಜ್ಜೆ, ಜೋಳ,ರಾಗಿ ಮತ್ತು ಬಾರ್ಲಿ

(i)  ಪ್ರತಿ ಕ್ವಿಂಟಲ್ ಗೆ ರೂ. 500 ಅಥವಾ ಖರ್ಚಿನ ಶೇ. 50% ರಷ್ಟು, ಇವುಗಳಲ್ಲಿ ಯಾವುದು ಅಕ್ಕಿ ಮತ್ತು ಗೋಧಿಗಾಗಿ ಪ್ರಮಾಣಿತ ಬೀಜವಿತರಣೆಗಾಗಿ ಕಡಿಮೆಯಿರುವುದೋ ಅದು.
(ii)  ಪ್ರತಿ ಕ್ವಿಂಟಲ್ ಗೆ ರೂ. 800 ಅಥವಾ ಖರ್ಚಿನ ಶೇ.50% ರಷ್ಟು, ಇವುಗಳಲ್ಲಿ ಯಾವುದು ಸಜ್ಜೆ, ಜೋಳ ಮತ್ತು ಜವೆಗಾಗಿ ಪ್ರಮಾಣಿತ ಬೀಜವಿತರಣೆಗಾಗಿ ಕಡಿಮೆಯಿರುವುದೋ ಅದು.
(iii)  ಪ್ರತಿ ಕ್ವಿಂಟಲ್ ಗೆ ರೂ. 1000. ಹೈಬ್ರಿಡ್ ತಳಿಯ ಜೋಳ ಮತ್ತು ಸಜ್ಜೆಗಾಗಿ ಪ್ರಮಾಣಿತ ಬೀಜವಿತರಣೆಗಾಗಿ ಕಡಿಮೆಯಿರುವುದೋ ಅದು
(iv)  ಹೈಬ್ರಿಡ್ ಅಕ್ಕಿ ಬೀಜಗಳ ಉತ್ಪಾದನೆಗಾಗಿ ಸಹಾಯ, ಪ್ರತಿ ಕ್ವಿಂಟಲ್ ಗೆ ರೂ. 1000 ಅಥವಾ ಖರ್ಚಿನ ಶೇ. 50% ರಷ್ಟು. ಇವುಗಳಲ್ಲಿ ಕಡಿಮೆಯಿರುವುದು.
(v (v)  ಹೈಬ್ರಿಡ್ ಅಕ್ಕಿ ಬೀಜಗಳ ವಿತರಣೆಗಾಗಿ ಪ್ರತಿ ಕ್ವಿಂಟಲ್ ಗೆ ರೂ.2000 ಅಥವಾ ಖರ್ಚಿನ ಶೇ.50% ರಷ್ಟು, ಇವುಗಳಲ್ಲಿ ಯಾವುದು ಹೈಬ್ರಿಡ್ ಅಕ್ಕಿ ಬೀಜಗಳ ವಿತರಣೆಗೆ ಕಡಿಮೆ ಇರುವುದೋ ಅದು.

ಎಣ್ಣೆಬೀಜಗಳು, ಕಾಳುಗಳು, ಎಣ್ಣೆ ಪಾಂ, ಹಾಗೂ ಮೆಕ್ಕೆ ಜೋಳಗಳ ಸಮಗ್ರ ಯೋಜನೆ

ಎಲ್ಲಾ ಎಣ್ಣೆ ಬೀಜಗಳು, ಕಳಗಳು ಮತ್ತು ಮೆಕ್ಕೆ ಜೋಳ

 

ಪಾಮ್ ಸಸಿಗಳು

(i)  ತಳಿ ಬೀಜದ ಖರೀದಿಗಾಗಿ ಸಂಪೂರ್ಣ ಮೊತ್ತ
(ii)  ಪ್ರಮಾಣಿತ ಬೀಜ ಉತ್ಪಾದನೆಗಾಗಿ ಅಡಿಪಾಯ ಮತ್ತು ಉತ್ಪಾದಿಸಲು ಪ್ರತಿ ಕ್ವಿಂಟಲ್ ಗೆ ರೂ. 1000
(iii)  ಪ್ರಮಾಣಿತ ಬೀಜ ವಿತರಣೆಗಾಗಿ ಪ್ರತಿ ಕ್ವಿಂಟಲ್ ಗೆ ರೂ. 1200 ಅಥವಾ ಬೀಜ ಬೆಲೆಯ ಶೇ.25% ಸಹಾಯ
(iv)  ಹೆಚ್ಚು ಉತ್ಪಾದನೆ ಕೊಡುವ ಬಿಜ ತಳಿಯ ಮಿನಿಕಿಟ್ ಗಳಿಗಾಗಿ ಸಂಪೂರ್ಣ ಮೊತ್ತ (ಜಾರಿಗೆ ತರುವ ಏಜೆನ್ಸಿಗಳು ಎನ್.ಎಸ್.ಸಿ/ಎಸ್.ಎಫ಼್.ಸಿ. ಐ).
(v)  ರೂ. 7500/ಹೆ. ಏರುಮಿತಿಯೊಂದಿಗೆ ಖರ್ಚಿನ ಶೇ. 75% ರಷ್ಟು ಮೊತ್ತವನ್ನು ರೈತರು ಹೊಂದಿರುವ ಇಡೀ ಜಮೀನಿಗಾಗಿ ನೀಡಲಾಗುವುದು.

ಹತ್ತಿಯ ಮೇಲೆ ತಂತ್ರಜ್ಞಾನದ ಮಿಷನ್

ಹತ್ತಿ ಬೀಜ

(i)  ಪ್ರಾರಂಭಿಕ ಬೀಜ ಉತ್ಪಾದನೆಗಾಗಿ ಒಟ್ಟು ವೆಚ್ಚದ ಶೇ. 50% ರಷ್ಟು ಅಥವಾ ಪ್ರತಿ ಕೆ.ಜಿ. ಗೆ ರೂ. 50,ಇವುಗಳಲ್ಲಿ ಕಡಿಮೆಯಿರುವುದನ್ನು ನೀಡಲಾಗುವುದು
(ii)  ಒಟ್ಟು ವೆಚ್ಚದ ಶೇ. 50% ಅಥವಾ ಪ್ರತಿ ಕೆ.ಜಿ. ಗೆ ರೂ. 15, ಇವುಗಳಲ್ಲಿ ಕಡಿಮೆಯಿರುವುದನ್ನು ಪ್ರಮಾಣಿತ ಬೀಜೋತ್ಪಾದನೆಗಾಗಿ ನೀಡಲಾಗುವುದು.
(iii)  ಪ್ರಮಾಣಿತ ಬೀಜ ವಿತರಣೆಗಾಗಿ ಪ್ರತಿ ಕೆ. ಜಿ. ಗೆ ರೂ 20
(iv)  ಬೀಜೋಪಚಾರದ ವೆಚ್ಚದಲ್ಲಿ ಶೇ.50% ರಷ್ಟನ್ನು ಪ್ರತಿ ಒಂದು ಕಿ.ಗ್ರಾಂ ಬೀಜಕ್ಕೆ ರೂ. 40 ನಂತೆ ನೀಡಲಾಗುವುದು.

ಸೆಣಬು ಮತ್ತು ಮೆಸ್ಟಾದ ಮೇಲಿನ ತಂತ್ರಜ್ಞಾನದ ಮಿಷನ್

ಸೆಣಬು ಮತ್ತು ಮೆಸ್ಟಾ

(i)  ಪ್ರಾರಂಭಿಕ ಬೀಜ ಉತ್ಪಾದನೆಗೆ ಪ್ರತಿ ಕ್ವಿಂಟಲ್ ಗೆ ರೂ 3000 ರ ಪರಿಮಿತಿಯಲ್ಲಿ ಶೇ. 50% ರಷ್ಟು ವೆಚ್ಚದ ಭಾಗ.
(ii)  ಪ್ರಮಾಣಿತ ಬೀಜ ಉತ್ಪಾದನೆಗಾಗಿ ಪ್ರತಿ ಕ್ವಿಂಟಲ್ ಗೆ ರೂ 700 ರ ಪರಿಮಿತಿಯಲ್ಲಿ ಶೇ. 50% ರಷ್ಟು ವೆಚ್ಚವನ್ನು ಭರಿಸುವುದು.
(iii)  ಪ್ರಮಾಣಿತ ಬೀಜ ವಿತರಣೆಗಾಗಿ ಪ್ರತಿ ಕ್ವಿಂಟಲ್ ಗೆ ರೂ 2000 ಮಿತಿಯಲ್ಲಿ ವೆಚ್ಚದ ಶೇ 50%

ರಾಷ್ಟ್ರೀಯ ಆಹಾರ ಭದ್ರತಾ ಮಿಷನ್

 

ಭತ್ತ

(i)  ಪ್ರತಿ ಕ್ವಿಂಟಲ್ ಗೆ ರೂ 1000 ಅಥವಾ ಒಟ್ಟು ವೆಚ್ಚದ ಶೇ 50%, ಇವುಗಳಲ್ಲಿ ಕಡಿಮೆಯಿರುವುದನ್ನು ಪ್ರಮಾಣಿತ ಹೈಬ್ರಿಡ್ ಅಕ್ಕಿ ಬೀಜ ಉತ್ಪಾದನೆಗಾಗಿ ನೀಡಲಾಗುವುದು.
(ii)  ಪ್ರಮಾಣಿತ ಹೈಬ್ರಿಡ್ ಅಕ್ಕಿ ಬೀಜ ವಿತರಣೆಗಾಗಿ ಕ್ವಿಂಟಲ್ ಗೆ ರೂ 2000 ಅಥವಾ ಬೀಜ ಬೆಲೆಯ ಶೇ 50, ಇವುಗಳಲ್ಲಿ ಕಡಿಮೆಯಿರುವುದನ್ನು ನೀಡಲಾಗುವುದು.
(iii)  ಕೆ.ಜಿ. ಗೆ ರೂ. 5 ಅಥವಾ ಬೀಜ ಬೆಲೆಯ ಶೇ 50%, ಇವುಗಳಲ್ಲಿ ಕಡಿಮೆ ಇರುವುದನ್ನು ಉತ್ತಮ ಉತ್ಪನ್ನ ನೀಡುವ ವಿವಿಧ ಬೀಜಗಳ ವಿತರಣೆಗಾಗಿ ನೀಡಲಾಗುವುದು.
(iv)ಉತ್ತಮ ಉತ್ಪನ್ನ ನೀಡುವ ವಿವಿಧ ಬೀಜಗಳ ಮಿನಿ ಕಿಟ್ ಗಳ ಸಂಪೂರ್ಣ ವೆಚ್ಚ

ಗೋಧಿ

(i)  ಕೆ.ಜಿ. ಗೆ ರೂ 5 ಅಥವಾ ಬೀಜ ಬೆಲೆಯ ಶೇ 50%, ಇವುಗಳಲ್ಲಿ ಕಡಿಮೆ ಇರುವುದನ್ನು ಉತ್ತಮ ಉತ್ಪನ್ನ ನೀಡುವ ಪ್ರಮಾಣಿತ ವಿವಿಧ ಬೀಜಗಳ ವಿತರಣೆಗಾಗಿ ನೀಡಲಾಗುವುದು
(ii)  ಉತ್ತಮ ಉತ್ಪನ್ನ ನೀಡುವ ವಿವಿಧ ಬೀಜಗಳ ಮಿನಿ ಕಿಟ್ ಗಳ ಸಂಪೂರ್ಣ ವೆಚ್ಚ

ದ್ವಿದಳ ಧಾನ್

(i)  ಬೀಜ ಉತ್ಪಾದನೆಗಾಗಿ ಅಡಿಪಾಯ ಮತ್ತು ಬೀಜ ಉತ್ಪಾದನೆಗಾಗಿ ಕ್ವಿಂಟಲ್ ಗೆ ರೂ 1000.
(ii)  ಕ್ವಿಂಟಲ್ ಗೆ ರೂ 1200 ಅಥವಾ ಒಟ್ಟು ವೆಚ್ಚದ ಶೇ 50% ಪ್ರಮಾಣಿತ ಬೀಜ ವಿತರಣೆಗಾಗಿ ನೀಡಲಾಗುವುದು.
(iii)  ಉತ್ತಮ ಉತ್ಪನ್ನ ನೀಡುವ ವಿವಿಧ ಬೀಜಗಳ ಮಿನಿಕಿಟ್ ಗಳ ಪೂರ್ತಿ ವೆಚ್ಚ

ಬೀಜ ಗ್ರಾಮ ಕಾರ್ಯಕ್ರಮ

ಎಲ್ಲಾ ಕೃಷಿ ಬೆಳೆಗಳು

(i)  ರೈತರು ಉಳಿಸಿಕೊಂಡಂತಹ ಬೀಜಗಳ ಗುಣಮಟ್ಟ ಸುಧಾರಣೆ, ಉತ್ತಮ ಬೀಜಗಳ ಉತ್ಪಾದನೆಗಾಗಿ ಪ್ರಮಾಣಿತ ಬೀಜಗಳ ವಿತರಣೆಗಾಗಿ ಬೀಜ ವೆಚ್ಚದ ಶೇ 50% ಸಹಾಯ.
(ii)  ಬೀಜ ಉತ್ಪಾದನೆ ಮತ್ತು ತಂತ್ರಜ್ಞಾನದ ಕುರಿತು ತರಬೇತಿ ನೀಡಲು 50-150 ರೈತರ ಒಂದು ಗುಂಪಿಗಾಗಿ ರೂ. 15,000 ಖರ್ಚು ಮಾಡುವುದು.
(iii)  ಬೀಜಗಳ ಶೇಖರಣೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಂತೆ ರೈತರನ್ನು ‌ಪ್ರೋತ್ಸಾಹಿಸಲು ಅಂದರೆ 20 ಕ್ವಿಂಟಲ್ ಶೇಖರಣೆಯ ಸಾಮರ್ಥ್ಯದ ಡಬ್ಬಿಯನ್ನು ಹೊಂದಲು ಪಜಾ/ಪಪಂ ರೈತರಿಗೆ ಶೇ 33 ರಿಂದ ಗರಿಷ್ಠ ರೂ. 3000 ಮತ್ತು ಇತರ ರೈತರಿಗೆ ಶೇ 25 ರಿಂದ ಗರಿಷ್ಠ ರೂ. 2000 ಸಹಾಯ. ಬೀಜ ಗ್ರಾಮ ಯೋಜನೆ ಕಾರ್ಯಕ್ರಮ ಜಾರಿಯಲ್ಲಿರುವ ಹಳ್ಳಿಗಳಲ್ಲಿ 10 ಕ್ವಿಂಟಲ್ ಶೇಖರಣೆಯ ಸಾಮರ್ಥ್ಯದ ಡಬ್ಬಿಗಳನ್ನು ಹೊಂದಲು ಪಜಾ/ಪಪಂ ರೈತರಿಗೆ ಶೇ 33 ರಿಂದ ಗರಿಷ್ಠ ರೂ 1500 ಮತ್ತು ಇತರ ರೈತರಿಗೆ ಶೇ 25 ರಿಂದ ಗರಿಷ್ಠ ರೂ. 1000 ಸಹಾಯ

ಸಿಕ್ಕಿಂ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ,ಉತ್ತರ ಖಂಡ ಹಾಗೂ ಪಶ್ಚಿಮ ಬಂಗಾಳದ ಗುಡ್ಡ ಗಾಡು ಪ್ರದೇಶಗಳನ್ನು ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಬೀಜಗಳ ಸಾಗಾಣಿಕೆಗಾಗಿ ಸಾಗಾಣಿಕಾ ವೆಚ್ಚದಲ್ಲಿ ಸಹಾಯಧನ

ಆಲೂಗಡ್ಡಯನ್ನುಳಿದು ಇತರ ಎಲ್ಲಾ ಪ್ರಮಾಣೀಕೃತ ಬೀಜಗಳು

(i)  ಹೊರರಾಜ್ಯಗಳಲ್ಲಿ ಉತ್ಪಾದಿತ ಬೀಜಗಳನ್ನು ಸಂಬಂಧ ಪಟ್ಟ ರಾಜಧಾನಿ/ಜಿಲ್ಲಾ ಕಛೇರಿಗೆ ಸಾಗಿಸುವ.
(ii)  ರಾಜ್ಯಗಳು/ಏಜೆನ್ಸಿಗಳಿಗೆ ರೈಲು ಮತ್ತು ರಸ್ತೆ ಸಾರಿಗೆಯ ಮಧ್ಯೆ 100% ವ್ಯತ್ಯಾಸ ದಷ್ಟು ಹಣವನ್ನು ಮರುಪಾವತಿಸಲಾಗುವುದು.
(iii)  ಕ್ವಿಂಟಲ್ ಗೆ ರೂ 60 ರಷ್ಟು ಅಥವಾ ಕಡಿಮೆ ಖರ್ಚು ಮಾಡಿ ರಾಜ್ಯದೊಳಗಡೆ ರಾಜಧಾನಿ/ಜಿಲ್ಲಾ ಕೇಂದ್ರಗಳಿಂದ ಮಾರಾಟ ಮಳಿಗೆಗಳಿಗೆ/ಮಾರುಕಟ್ಟೆಗೆ ತಲಪಿಸಿದವರಿಗೆ ಬೀಜಗಳನ್ನು ಒಯ್ಯವ ಸಾರಿಗೆ ವೆಚ್ಚದ ಹಣವನ್ನು ಮರುಪಾವತಿಸಲಾಗುವುದು.

ಹೈಬ್ರಿಡ್ ಭತ್ತದ ಬೀಜ ಉತ್ಪಾದನೆ

ಭತ್ತ ಮಾತ್ರ

ಹೈಬ್ರಿಡ್ ಭತ್ತದ ಬೀಜ ಉತ್ಪಾದನೆಗಾಗಿ ಪ್ರತಿ ಕ್ವಿಂಟಲ್ ಗೆ ರೂ 2000 ಸಹಾಯ
ಹೈಬ್ರಿಡ್ ಭತ್ತದ ಬೀಜ ವಿತರಣೆಗಾಗಿ ಪ್ರತಿ ಕ್ವಿಂಟಲ್ ಗೆ ರೂ 2500 ಸಹಾಯ

ಮೂಲಭೂತ ಸೌಕರ್ಯಗಳ ಸೃಷ್ಟಿ ಮತ್ತು ಬಲವರ್ಧನೆ

ಎಲ್ಲಾ ಬೆಳೆಗಳು

ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ರಾಜ್ಯಗಳು/ರಾಜ್ಯ ಬೀಜ ಸಂಸ್ಥೆಗಳಿಗೆ ವಿತರಿಸಲು ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳ ಸೃಷ್ಟಿ ಮತ್ತು ಬಲಪಡಿಸುವಿಕೆ. ಬೀಜಗಳ ಸ್ವಚ್ಛತೆ, ಸುಧಾರಣೆ, ಸಂಸ್ಕರಣೆ, ಪ್ಯಾಕಿಂಗ್ ಮತ್ತು ಶೇಖರಣೆಗಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಆರ್ಥಿಕ ಸಹಾಯ ನೀಡಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಎಲ್ಲಾ ಬೆಳೆಗಳು

ಬೀಜಗಳಿಗಾಗಿ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಎಲ್ಲಾ ಚಟುವಟಿಕೆಗಳು

ಆಕರ : seednet gov material prog-schemes(http://seednet.gov.in/material/prog-schemes.htm)

2.90990990991
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top