ರಾಷ್ಟ್ರೀಯ ಕಿರು ನೀರಾವರಿ ಯೋಜನೆ (NMMI)ಯನ್ನು ಜೂನ್ 2010 ರಂದು ಒಂದು ಮಿಷನ್ನಿನ ರೂಪದಲ್ಲಿ ಆರಂಭಿಸಲಾಯಿತು. ಅದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSM), ಸಮಗ್ರ ಎಣ್ಣೆ ಕಾಳುಗಳು, ಬೇಳೆ, ಎಣ್ಣೆ ನೀಡುವ ತಾಳೆ ಜಾತಿಯ ಮರಗಳು ಹಾಗೂ ಮೆಕ್ಕೆ ಜೋಳದ ಯೋಜನೆ(ISOPOM), ಹತ್ತಿ ಬೆಳೆಯ ತಾಂತ್ರಿಕ ಮಿಷನ್ (TMC), ಇತ್ಯಾದಿ ಯೋಜನೆಗಳನ್ನು ಸಂಕಲಿತ ಬಹು ಉದ್ದೇಶಗಳ ಯೋಜನೆಯಾಗಿದೆ. ಕಿರು ನೀರಾವರಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ರೈತರ ಬೆಳೆಯ ಉತಪನ್ನವನ್ನು ಹೆಚ್ಚಿಸುವುದು, ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದು, ಹಾಗೂ ರೈತರ ಆದಾಯವನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ. ಇದರಲ್ಲಿರುವ ಹೊಸ ಕಾರ್ಯಸೂಚಿಗಳು ನೀರಿನ ಬಳಕೆಯ ದಕ್ಷತೆಯನ್ನು ,ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಇವುಗಳ ಮೂಲಕ ನೀರಿನ ಕ್ಷಾರಗುಣ ಮತ್ತು ಜವುಗು ಸಮಸ್ಯಗಳಿಗೆ ಉತ್ತರವನ್ನು ಪಡೆಯಬಹುದಾಗಿದೆ.
- ಈ ಯೋಜನೆಯ ಮುಖ್ಯ ಲಕ್ಷಣಗಳು:
- ಸಣ್ಣ ಹಾಗೂ ಮಧ್ಯಮ ರೈತರು ಈ ಯೋಜನೆಯಡಿಯಲ್ಲಿ ಶೇ. 60 ರಷ್ಟು ಸಹಾಯಧನ ಪಡೆಯಲಿದ್ದಾರೆ. ಜೊತೆಗೆ ಇತರ ಫಲಾನುಭವಿಗಳು ಭಾರತ ಸರಕಾರದ ಭಾಗವಾಗಿ ಐದು ಹೆಕ್ಟೇರ್ ವರೆಗೆ ಭೂಮಿಯಿರುವವರಿಗೆ ಶೇ. 50 ರಷ್ಟು ಸಹಾಯಧನ ಪಡೆಯಲಿದ್ದಾರೆ.
- ಕಿರು ನೀರಾವರಿಗೆ ಅರೆ-ಖಾಯಂ ಹನಿ ನೀರಾವರಿ ಪದ್ಧತಿ, ನೀರುಗೊಬ್ಬರ ಪದ್ಧತಿ, ಮರಳಿನ ಜರಡಿಯ ಪದ್ಧತಿ, ವಿವಿಧ ಬಗೆಯ ಕವಾಟಗಳು, ಇತ್ಯಾದಿ, ಹೊಸ ಹೊಸ ಭಾಗಗಳನ್ನು ಪರಿಚಯ ಮಾಡಿಸುವುದು.
- ಜಿಲ್ಲೆಗಳಿಗೆ ಬದಲಾಗಿ ಕೇಂದ್ರದಿಂದ ಅನುದಾನವನ್ನು ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ಬಿಡುಗಡೆ ಮಾಡುವುದು.
ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರವಂತೆ ನೋಡಿಕೊಳ್ಳಲು ಹಾಗೂ ಒಟ್ಟಾರೆ ಬೆಳೆಗಳಡಿಯ ಭೂಮಿಯನ್ನು ಹೆಚ್ಚಿಸಲು ಎಲ್ಲಾ ಫಲಾನುಭವಿಗಳು, ಪಂಚಾಯತಿಗಳು, ರಾಜ್ಯ ಅನುಷ್ಠಾನ ಸಂಸ್ಥೆಗಳು ಮತ್ತು ವ್ಯವಸ್ಥಿತ ಸಲಕರಣೆಗಳ ನೋಂದಾಯಿತ ಪೂರೈಕೆದಾರರ ನಡುವೆ ಸಾಮರಸ್ಯವನ್ನು ಕಾಪಡಿಕೊಳ್ಳುವುದು ಮಹತ್ವವಾಗಿದೆ.
ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರಲು ನೆರವಾಗುತ್ತಿರುವುದು ತೋಟಗಾರಿಕೆಯಲ್ಲಿ ಪ್ಲಾಸ್ಟಿಕಲ್ಟರ್ ನ ಅನ್ವಯಿಕೆಯ ರಾಷ್ಟ್ರೀಯ ಸಮಿತಿ (NCPAH). ಅದು ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ಯಶಸ್ವಿಯಾಗಲು ಅಗತ್ಯವಿರುವ ನೀತಿಯ ಬೆಂಬಲ ಒದಗಿಸುತ್ತದೆ. ಇದು, ಅಂದರೆ NCPAH ಯು 22 ನಿಷ್ಕೃಷ್ಟ ಬೇಸಾಯ ಅಭಿವೃದ್ಧಿ ಕೇಂದ್ರ (PFDCs) ಗಳ ಕಾರ್ಯ ನಿರ್ವಹಣೆಯನ್ನು ನಿರಂತರವಾಗಿ ಪರಿವೀಕ್ಷಣೆ ಮಾಡುತ್ತದೆ. ಜೊತೆಗೆ ದೇಶದಲ್ಲಿ ನಿಷ್ಕೃಷ್ಟ ಬೇಸಾಯ ಪದ್ಧತಿಯ ಸಮಗ್ರ ಅಭಿವೃದ್ಧಿ, ಹಾಗೂ ಸಾಮಾನ್ಯವಾಗಿ ಹೆಚ್ಚಿನ ತಾಂತ್ರಿಕ ಮಧ್ಯಸ್ಥಿಕೆನ್ನೂ ವಹಿಸುತ್ತದೆ.
ಆಕರ: PIB(http://www.pib.nic.in/)