অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಬ್ಬಿಣ,ಮ್ಯಾಂಗನೀಸ್,ತಾಮ್ರ


">

ಕಬ್ಬಿಣದ ರಸಗೊಬ್ಬರಗಳು

ಕಬ್ಬಿಣ ಪೂರೈಕೆ ಮಾಡುವ ವಸ್ತುಗಳು ಈ ಕೆಳಕಂಡಂತಿವೆ.

ಕಬ್ಬಿಣದ ಕಿಲೇಟ್‍ಗಳು  :  ಈ ಲೋಹದ ಕೊಂಡಿಯಾಗಿಸುವ ಸಂಕೀರ್ಣವು ವಿಶೇಷ ರೂಪದ ಕಿಲೇಟಿಂಗಳ ಮಧ್ಯವರ್ತಿಗಳ ಪರಿಣಾಮದಿಂದ ಉತ್ಪತ್ತಿಯಾಗುತ್ತದೆ. ಇದರಿಂದ ಅನೇಕ ಲೋಹದ ಅಯಾನುಗಳು ಬಂಧಿಸುವುದನ್ನು ರೂಪಿಸಲು ಸಮರ್ಥವಾಗಿದೆ. ಈ ಬಂಧಗಳು ಲೋಹದ ಅಯಾನುಗಳ ಸುತ್ತ ಉಂಗುರಾಕಾರದಲ್ಲಿ ಸಂಭವಿಸುತ್ತವೆ. ಕಬ್ಬಿಣದ ರೂಪದಲ್ಲಿನ ಕಿಲೇಟ್‍ಗಳು ರಾಸಾಯನಿಕ ಪರಿಸರದಲ್ಲಿ ಕರಗುವ ರೂಪದಲ್ಲಿರುತ್ತದೆ. ಆದರೆ ಕಿಲೇಟ್ ಅಲ್ಲದ ಕಬ್ಬಿಣವು ಪ್ರಿಸಿಪಿಟೆಟ್ ರೂಪದಲ್ಲಿರುತ್ತದೆ. ಆದ್ದರಿಂದ ಕಿಲೇಟ್‍ಗಳನ್ನು ಸಾಮಾನ್ಯವಾಗಿ ರಸಗೊಬ್ಬರದ ಜೊತೆ ಸೇರಿಸಲಾಗುತ್ತದೆ. ಕಿಲೇಟ್‍ಗಳ ಕಬ್ಬಿಣಕ್ಕೆ ಹೆಚ್ಚು ಆಕರ್ಷಣೆಯನ್ನು ಹೊಂದಿವೆ ಮತ್ತು ಸಾಮಾನ್ಯವಾಗಿ 4 ರಿಂದ 7 ಇದ್ದರೆ ಲೋಹದ ಜೊತೆ ಸ್ಥಿರ ಸಂಕೀರ್ಣಗಳನ್ನು ಉಂಟುಮಾಡುತ್ತದೆ.

ಬೆಳಕಿನ ತೀವ್ರತೆ ಹಾಗೂ ತಾಪಮಾನವು ಕಬ್ಬಿಣದ ಕಿಲೇಟದ ಕೊಳೆಯುವಿಕೆಯ ದರದ ಮೇಲೆ ಪರಿಣಾಮ ಬೀರುತ್ತದೆ. ರಿಡಕ್ಟೇಷ್ ಚಟುವಟಿಕೆ ಮತ್ತು ಬೇರಿನ ಫಲದ ಆಮ್ಲೀಕರಣವು ಕಬ್ಬಿಣದ ದಕ್ಷತೆಯ ಪ್ರಕ್ರಿಯೆಗಳು ಬೆಳಕಿನಿಂದ ಕಬ್ಬಿಣದ ಕಿಲೇಟ್‍ಗಳ ಕೊಳೆಯುವಿಕೆ ಹಾಗೂ ನಂತರದ ವಾಣಿಜ್ಯ ಗೊಬ್ಬರಗಳ ದ್ರಾವಣದಲ್ಲಿ ಕರಗುವ ಕಬ್ಬಿಣವು ಕಡಿಮೆಯಾಗುತ್ತದೆ.

ಫೇರಸ್ ಸಲಫೇಟ್ :  ರಸಗೊಬ್ಬರಗಳ ತಯಾರಿಕೆಯಲ್ಲಿ ರಸಾಯನಿಕÀವಾಗಿ ಬಳಸಿದ ನೀಲಿ ಹಸಿರು ಸ್ಫಟಿಕ, ಕ್ಷಾರೀಯ ರುಚಿಯನ್ನು ಹೊಂದಿರುವ ನೀರಿನಲ್ಲಿ ಕರಗುವ ಹೆಪ್ಟಹೈಡ್ರೈಟ್ ರೂಪದ ಘನವಸ್ತು. ಇದನ್ನು ಹಸಿರು ಗಂಧಕಾಮ್ಲವೆಂದು ಕರೆಯಲಾಗುತ್ತದೆ.

ವಸ್ತುಗಳು

 

ಮ್ಯಾಂಗನೀಸ್ ಪೋಷಕಾಂಶ (ಶೇ)

 

ಮ್ಯಾಂಗನೀಸ್` ಸಲ್ಫೇಟ್

30.5

 

ಮ್ಯಾಂಗನೀಸ್ - ಇ.ಡಿ.ಟಿ.ಎ.

12.೦

ಮ್ಯಾಂಗನೀಸ್‍ನ ರಸಗೊಬ್ಬರಗಳು

ಮ್ಯಾಂಗನೀಸ್ ಪೂರೈಕೆ ಮಾಡುವ ವಸ್ತುಗಳು ಈ ಕೆಳಕಂಡಂತಿವೆ.

ಮ್ಯಾಂಗನೀಸ್ ಸಲ್ಫೇಟ್ : ಗುಲಾಬಿ ಬಣ್ಣದ ನೀರಿನಲ್ಲಿ ಕರಗುವ, ಟೆಹೈಡ್ರಾಯಿಟ್ ಎಪ್ಪು ರಾಸಾಯನಿಕ ಗೊಬ್ಬರಗಳಾಗಿ ಬಳಸಲಾಗುತ್ತದೆ.

ತಾಮ್ರದ ರಸಗೊಬ್ಬರಗಳು

ತಾಮ್ರವನ್ನು ಪೂರೈಕೆ ಮಾಡುವ ವಸ್ತುಗಳು ಈ ಕೆಳಕಂಡಂತಿವೆ.

ವಸ್ತುಗಳು

ಕಬ್ಬಿಣ ಪೋಷಕಾಂಶ (ಶೇ)

ತಾಮ್ರದ ಸಲ್ಫೇಟ್

24.0

ತಾಮ್ರದ - ಇ.ಡಿ.ಟಿ.ಎ.

12.0

ತಾಮ್ರದ ಸಲ್ಫೇಟ್  :  ಇದನ್ನು ಬ್ಲೂವಿಟ್ರಿಯಲ್ ಎಂದು ಕರೆಯಲಾಗುತ್ತದೆ. ಹಾಗೂ ಇದು ಸಾಮಾನ್ಯವಾಗಿ ತಾಮ್ರದ ಕನಿಷ್ಠ ಬೆಳೆಯ ಮೂಲವಾಗಿದೆ. ಇದು ನುಣುಪಾದ ಅಥವಾ ಒರಟಾದ ಹರಳಿನ ವಸ್ತುವಿನ ರೂಪದಲ್ಲಿ ಲಭ್ಯವಿದೆ. ಇದು ತೇವಾಂಶವನ್ನು ಸಂಗ್ರಹಿಸುತ್ತದೆ. ಹಾಗೂ ಇತರ ಗೊಬ್ಬರಗಳೊಡನೆ ಮಿಶ್ರಣ ಮಾಡಲು ಕಷ್ಟವಾಗುತ್ತದೆ. ತಾಮ್ರದ ಸಲ್ಫೇಟ್ ಕೂಡ ನೀರಿನಲ್ಲಿ ಕರಗುವುದರಿಂದ ಮಣ್ಣಿನ ಮೇಲ್ಮೈ ಮೇಲೆ ಹಾಗೂ ಎಲೆಗಳ ಮೇಲೆ ಸಿಂಪಡಿಸುವುದರ ಮೂಲಕ ಹಾಕಬಹುದು. ಕೆಲವೊಮ್ಮೆ ಶೇ. 2ರ ದ್ರಾವಣವನ್ನು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಜೊತೆ ಬಫರ್ ಮಾಡಿ ಎಲೆಗಳ ಮೇಲೆ ಬಳಸಲಾಗುತ್ತದೆ.

ತಾಮ್ರದ ಸಲ್ಫೇಟ್ ಲೋಹದ ಜೊತೆ ಸಂಪರ್ಕಕ್ಕೆ ಬಂದಾಗ ಇದು ಹೆಚ್ಚು ನಾಶಕಾರಿ. ಸ್ಟೈನ್ಲೆಸ್ ಸ್ಟೀಲ್ ಮತ್ತು ಪ್ಲಾಸ್ಟಿಕ್ ಘಟಕಗಳು ರಸಗೊಬ್ಬರ ಹಾಗೂ ತುಂತುರುಗಳ ಬಳಸುವಿಕೆಯಲ್ಲಿ ಅಗತ್ಯ. ತಾಮ್ರದ ಇ.ಡಿ.ಟಿ.ಎ. ತಾಮ್ರದ ಕಿಲೇಟ್ ದ್ರಾವಣವು ಸುಮಾರು ಶೇ. 5 ರಿಂದ 7.5 ರಷ್ಟು ತಾಮ್ರವು ಮಣ್ಣಿಗೆ ಹಾಕಲು ಬೇಕಾಗುತ್ತದೆ. ತಾಮ್ರವು ಕಿಲೇಟ್‍ಗಳನ್ನು ತಾಂರದ ಸಲ್ಫೇಟ್ ದರದ ಶೇ. 10 ರಷ್ಟನ್ನು ಹಾಕಲಾಗುತ್ತದೆ. ಆದರೆ ಉಳಿದ ಪ್ರತಿಕ್ರಿಯೆಯ ಅವಧಿಯಲ್ಲಿ ಕಡಿಮೆ ಇರುತ್ತದೆ. ಡೈಸೋಡಿಯಂ ತಾಮ್ರದ ಇ.ಡಿ.ಟಿ.ಡ ಯು ತಾಮ್ರದ ಸಲ್ಫೇಟ್‍ಗಿಂತ ಹೆಚ್ಚು ಪರಿಣಾಮಕಾರಿ ಎಂದು ಭಾವಿಸಲಾಗಿದೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 7/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate