ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ತ್ಯಾಜ್ಯದಿಂದ ಗೊಬ್ಬರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತ್ಯಾಜ್ಯದಿಂದ ಗೊಬ್ಬರ

ಮಾನವನ ಮೂತ್ರ ಮತ್ತು ಕೈಗಾರಿಕಾ ತ್ಯಾಜ್ಯಗಳಿoದ

ಮಾನವನ ಮೂತ್ರ.

ನಾವು ಪ್ರಯೊಬ್ಬರೂ ದಿನ ಒಂದರಲ್ಲಿ ಸುಮಾರು 3-4 ಲೀಟರ್‍ನಷ್ಟು ಮೂತ್ರವನ್ನು ವಿಸರ್ಜಿಸುತ್ತೇವೆ. ಇಂತಹ ಮೂತ್ರದಲ್ಲಿ ಸಾರಜನಕ ಶೇ. 0.23-12 ರಂಜಕ ಶೇ. 0.17 ಶೇ. 0.18 ಮತ್ತು ಪೊಟ್ಯಾಶ್ ಶೇ. 0.14-0.17 ಇದ್ದು, ಈ ದ್ರವ ರೂಪದ ರಸಗೊಬ್ಬರವನ್ನು ಅವೈಜ್ಞಾನಿಕವಾಗಿ (ಹೇಗೆಂದರೆ ಹಾಗೆ) ವಿಸರ್ಜಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಮಾನವನ ಮೂತ್ರದಲ್ಲಿರುವ ಸಸ್ಯ ಪೋಷಕಾಂಶಗಳನ್ನು ಲಾಭದಾಯಕವಾಗಿ ಕೃಷಿಯಲ್ಲಿ ಬಳಸುವುದರಿಂದ ಬೆಳೆಗಳ ಇಳುವರಿಯು ಹೆಚ್ಚುವುದರ ಜೊತೆಗೆ ಅವೈಜ್ಞಾನಿಕ ರೀತಿಯಲ್ಲಿ ವಿಸರ್ಜಿಸುವುದರಿಂದಾಗುವ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ಬಳಸುವ ವಿಧಾನ :

ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣದಷ್ಟು ಸಾರಜನಕವನ್ನು ಆಧಾರವಾಗಿಟ್ಟುಕೊಂಡು ಲೆಕ್ಕಾಚಾರ ಮಾಡಿದ ನಂತರ ಬೆಳೆಗೆ ಬೇಕಾಗುವ ಮೂತ್ರದ ಪ್ರಮಾಣವನ್ನು ವಿವಿಧ ಹಂತಗಳಲ್ಲಿ ಒದಗಿಸಬೇಕು. ಮೂತ್ರದಲ್ಲಿ ರಂಜಕ ಮತ್ತು ಪೊಟ್ಯಾಷ್ ಅಂಶ ಕಡಿಮೆ ಇರುವುದರಿಂದ ಮೂತ್ರದ ಮೂಲಕ ಎಷ್ಟು ಒದಗುತ್ತದೆ ಎಂದು ಲೆಕ್ಕಾಚಾರ ಮಾಡಿ ಮಿಕ್ಕ ಪ್ರಮಾಣವನ್ನು ಬೇರೆ ಸಾವಯವ ಗೊಬ್ಬರಗಳ ಮುಖಾಂತರ ಬೆಳೆಗಳಿಗೆ ನೀಡಬೇಕು.

ಕೈಗಾರಿಕಾ ತ್ಯಾಜ್ಯಗಳು  :

ಡಿಸ್ಟಿಲರಿಯಿಂದ ಹೊರಬರುವ ಸುಮಾರು 40 ಬಿಲಿಯನ್ ಲೀಟರ್‍ನಷ್ಟು ಸ್ಪೆಂಟ್‍ವಾಷ್‍ನಿಂದ ಸುಮಾರು 0.48 ಮ.ಟನ್‍ನಷ್ಟು ಪೊಟ್ಯಾಷ್, 0.052 ಮಿ.ಟನ್‍ನಷ್ಟು ಸಾರಜನಕ ಹಾಗೂ 0.008 ಮಿಟನ್‍ನಷ್ಟು ರಂಜಕ ಪೋಷಕಾಂಶಗಳನ್ನು ಅಂದರೆ ಒಟ್ಟು 0.54 ಮುಲಿಯನ್ ಟನ್‍ನಷ್ಟು ಪೋಷಕಾಂಶಗಳನ್ನು ಪಡೆಯಬಹುದು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top