ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ದ್ರವರೂಪದ ಸಾವಯವ ಗೊಬ್ಬರಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದ್ರವರೂಪದ ಸಾವಯವ ಗೊಬ್ಬರಗಳು

ದ್ರವರೂಪದ ಸಾವಯವ ಗೊಬ್ಬರಗಳ ಬಗ್ಗೆ

ಸಾವಯವ ಕೃಷಿಯಲ್ಲಿ ವಿವಿಧ ರೀತಿಯ ಸಾವಯ ದ್ರವಗೊಬ್ಬರಗಳನ್ನು ಬಳಸಲಾಗುತ್ತಿದೆ. ಇವುಗಳು ಬೆಳೆಗಳಿಗೆ ಎಲ್ಲಾ ಪೋಷಕಾಂಶಗಳನ್ನು ಅತಿ ಶೀಘ್ರವಾಗಿ ಒದಗಿಸುವ ಗುಣಹೊಂದಿರುತ್ತವೆ. ಅವುಗಳಲ್ಲಿ ಪ್ರಮುಖವಾದುವೆಂದರೆ, ವರ್ಮಿವಾಶ್, ಜೀವಾಮೃತ, ಪಂಚಗವ್ಯ, ಬಯೋಡೈಜೆಸ್ಟರ್ ದ್ರಾವಣ, ಕೈಗಾರಿಕಾ/ಪಟ್ಟಣ ತ್ಯಾಜ್ಯಗಳು, ಮಾನವನ ಮೂತ್ರ. ಇತ್ಯಾದಿ.

ವರ್ಮಿವಾಶ್

ವರ್ಮಿವಾಶ್ ಎಂಬುವುದು ಎರೆಹುಳುವಿನಿಂದ ಸಿಗುವಂತಹ ದ್ರವರೂಪದ ಗೊಬ್ಬರ. ಇದು ದ್ರವರೂಪಸ ಗೊಬ್ಬರವಾಗಿಯೂ ಮತ್ತು ಪೋಡನಾಶಕವಾಗಿಯೂ ಕೆಲಸ ಮಾಡುತ್ತದೆ. ವರ್ಮಿವಾಶ್ ದ್ರಾವಣವು ಕಂದು ಬಣ್ಣ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ. ಇದರ ಸಿಂಪರಣೆಯಿಂದ ಅನೇಕ ಹಣ್ಣು ಮತ್ತು ತರಕಾರಿ ಬೆಳೆಗಳ ಇಳುವರಿ ಪ್ರಮಾಣ ಮತ್ತು ಗುನಮಟ್ಟವನ್ನು ಹೆಚ್ಚಿಸುತ್ತದೆ. ಒಂದು ಲೀಟರ್ ವರ್ಮಿವಾಶ್‍ನ್ನು 5 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೇಗಳಿಗೆ ಸಿಂಪಡಿಸಬೇಕು. ಇದನ್ನು ನೇರವಾಗಿ ಬೆಳೆಗಳ ಮೇಲೆ ಅಥವಾ ನೀರಿನ ಜೊತೆ ಒದಗಿಸಬಹುದು. ವರ್ಮಿವಾಶ್ ದ್ರಾವಣದಲ್ಲಿ ಹೇರಳವಾಗಿ ಅಮೈನೋ ಆಮ್ಲ, ಜೀವ ಸತ್ವಗಳು, ಪೋಷಕಾಂಶಗಳಾದ ಸಾರಜನಕ, ರಂಜಕ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ ಮತ್ತು ಕೆಲವು ಬೆಳವಣಿಗೆ ಚೋದಕಗಳಾದ ಆಕ್ಸನ್, ಸೈಟೋಕೈನಿನ್ಸ್ ಮತ್ತು ಇದರಲ್ಲಿ ಸಾರಜನಕ ಸ್ಥರೀಕರಿಸುವ ಮತ್ತು ರಂಜಕವನ್ನು ಕರಗಿಸುವ ಹಲವಾರು ದುಂಡಾಣುಗಳು ( ನೈಟ್ರಸೋಮೊನಾಸ್, ನೈಟ್ರೋಬ್ಯಾಕ್ಟರ್ ಮತ್ತು ಆಕ್ಟಿನೋಮೈಸಿಟ್ಸ್) ಇರುವುದರಿಂದ ತರಕಾರಿ ಬೆಳೆಗಳು ಹೆಚ್ಚು ಪ್ರಬಲವಾಗಿ ಬೆಳೆದು ಇಳುವರಿಯನ್ನು ಹೆಚ್ಚಿಸುತ್ತದೆ. ಕೆಲವು ಸಂಶೋಧನಾ ವರದಿಗಳ ಪ್ರಕಾರ ಪ್ರತೀ ವಾರ ವರ್ಮಿವಾಶ್ ಬಳಕೆಯಿಂದ ಮೂಲಂಗಿಯಲ್ಲಿ ಶೇ. 7.3 ರಷ್ಟು ಉತ್ಪಾದನೆ ಹೆಚ್ಚುತ್ತದೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.93103448276
Nagaraj Hegde Aug 01, 2019 01:24 PM

ಅಡಿಕೆಯಲ್ಲಿ poshkamshagala samagra ನಿರ್ವಹಣೆ ಹೇಗೆ lequid ಗೊಬ್ಬರಗಳು ಹೇಗೆ ಉಪಯೋಗಿಸಬೇಕು ಮಾಹಿತಿ ಕೊಡಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top