ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಬಯೋಡೈಜೆಸ್ಟರ್ ದ್ರಾವಣ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಯೋಡೈಜೆಸ್ಟರ್ ದ್ರಾವಣ

ಬಯೋಡೈಜೆಸ್ಟರ್ ಘಟಕವು ಹೆಚ್ಚಿನ ಪ್ರಮಾಣದಲ್ಲಿ ದ್ರಗೊಬ್ಬರ ತಯಾರಿಸಲು ಸೂಕ್ತವಾಗಿದ್ದು ಇದರಿಂದ ಸೇಖರಣೆಯಾಗುವ ದ್ರಾವಣವು ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತದೆ.

ಬಯೋಡೈಜೆಸ್ಟರ್ ಘಟಕವು ಹೆಚ್ಚಿನ ಪ್ರಮಾಣದಲ್ಲಿ ದ್ರಗೊಬ್ಬರ ತಯಾರಿಸಲು ಸೂಕ್ತವಾಗಿದ್ದು ಇದರಿಂದ ಸೇಖರಣೆಯಾಗುವ ದ್ರಾವಣವು ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಯೋಡೈಜೆಸ್ಟರ್ ದ್ರವಗೊಬ್ಬರದಲ್ಲಿ ವಿವಿಧ ಹಿಂಡಿಗಳು, ಪ್ರಾಣಿಗಳ ತ್ಯಾಜ್ಯಗಳಾದ ಗೋಮೂತ್ರ, ಸಗಣಿ, ಹಿಕ್ಕೆ, ಮಿನುಗೊಬ್ಬರ, ಪ್ರೆಸ್‍ಮಡ್ ಮುಂತಾದವುಗಳನ್ನು  ಬಳಸಿಕೊಂಡು ದ್ರವಗೊಬ್ಬರಗಳನ್ನು ಅಭಿವೃದ್ಧಿಸಬಹುದು. ಇವುಗಳಲ್ಲದೆ ಸ್ವಲ್ಪ ಸುಣ್ಣ ಅಥವಾ ಶೀಲಾರಂಜಕವನ್ನೂ ಸಹ ಬಳಸಬಹುದು. ಅಭಿವರ್ಧನೆ ಮೂಲಕ ದ್ರವಗೊಬ್ಬರದ ಸಾರಜನಕವನ್ನು ಶೇ. 0.23 ರಿಂದ 1.25 ವರೆಗೂ ಹೆಚ್ಚಿಸಬಹುದು. ದ್ರವಗೊಬ್ಬರದ ದ್ರಾವಣ ತಯಾರಾಗುವ ಅವಧಿ, ಉಪಯೋಗಿಸುವ ತ್ಯಾಜ್ಯವಸ್ತುಗಳ ಮೇಲೆ ಅವಲಂಬಿಸಿರುತ್ತದೆ. ಹಾಗೂ ಸುಮಾರು 20 ರಿಂದ 30 ದಿನಗಳಲ್ಲಿ ದ್ರವಗೊಬ್ಬರ ಬಳಸಲು ಸಿದ್ಧವಾಗುತ್ತದೆ. ನಂತರದಲ್ಲಿ ಪ್ರತಿ 15 ದಿನಗಳೀಗೊಮ್ಮೆ ಬಯೋಡೈಜೆಸ್ಟರ್‍ನಿಂದ ದ್ರವಗೊಬ್ಬರ ಪಡೆಯಬಹುದು.

ಬಯೋಡೈಜೆಸ್ಟರ್ ಗೊಬ್ಬರವನ್ನು ಉಪಯೋಗಿಸುವ ಪದ್ಧತಿ ಮತ್ತು ಸಮಯ

  • ಬೆಳೆಗಳಿಗೆ ತಿಪ್ಪೆಗೊಬ್ಬರ ಅತವಾ ಕಾಂಪೋಸ್ಟ್ ಜೊತೆಯಲ್ಲಿ ಅಥವಾ ಬೇರೆ ಸಮಯದಲ್ಲೂ ಕೊಡಬಹುದಾಗಿದೆ.
  • ದ್ರವಗೊಬ್ಬರದ ದ್ರಾವಣವನ್ನು 1 ಲೀಟರ್‍ಗೆ 10 ಲೀಟರ್ ನೀರನ್ನು ಮಿಶ್ರಣಮಾಡಿ ವಾರ್ಷಿಕ ಬೆಳೆಗಳಿಗೆ 3-4 ಸಲ ಕೊಡಬಹುದು.
  • ದ್ರವಗೊಬ್ಬರವನ್ನು ಮಣ್ಣಿನಲ್ಲಿ ತೇವಾಂಶವಿರುವಾಗ ಅಂದರೆ ಮಳೆ ಬಿದ್ದ ನಂತರ ಮಳೆಯಾಶ್ರಿತ ಬೆಳೆಗಳಿಗೆ ಕೊಡುವುದು ಸೂಕ್ತ.
  • ತೋಟಗಾರಿಕಾ ಬೆಳೆಗಳಲ್ಲಿ ಬಳಕೆ.: ಅಡಿಕೆ, ತೆಂಗು, ಮಾವು, ಸಪೋಟ, ಸೀಬೆ ಮುಂತಾದ ಗಿಡಗಳ ಸುತ್ತಲೂ 1/4 - 1/2  ಅಡಿ ಆಳ ಮತ್ತು 1 ರಿಂದ 2 ಅಡಿ ಅಗಲವಾಗಿ ಗುಂಡಿಯನ್ನು ತೆಗೆದು ದ್ರವಗೊಬ್ಬರದ ದ್ರಾವಣವನ್ನು ಕೊಡಬಹುದು ಅಥವಾ ನೀರಾವರಿ ನೀರಿನೊಂದಿಗೆ ದ್ರವಗೊಬ್ಬರವನ್ನು ಕೊಡುವುದು ಸೂಕ್ತ. ಮಳೆಯಾಶ್ರಿತ ಮಾವು, ಸಪೋಟ, ಸೀಬೆ, ಗೋಡಂಬಿ  ಮುಂತಾದವುಗಳಿಗೆ ಮಳೆಬಿದ್ದ ನಂತರ 3-4 ಬಾರಿ ಅಂದರೆ ಜೂನ್-ಜುಲೈ, ಅಕ್ಟೋಬರ್ - ನವೆಂಬರ್, ಮತ್ತು ಫೆಬ್ರವರಿ - ಮಾಚ್ ತಿಂಗಳುಗಳಲ್ಲಿ ಕೊಡಬಹುದು.

ಹನಿ ನೀರಾವರಿಯೊಂದಿಗೆ ಮಿಶ್ರಮಾಡಿ ಸಹ ಬೆಳೆಗಳಿಗೆ ಕೊಡಬಹುದು.

  • ಬೆಳೆಗಳಿಗೆ ಅವಶ್ಯಕತೆ ಇರುವ ಸಾರಜನಕವನ್ನು ದ್ರವರೂಪದ ಗೊಬ್ಬರದಲ್ಲಿರುವ ಸಾರಜನಕದ ಪ್ರಮಾಣವನ್ನು ಅನುಸರಿಸಿ ಲೆಕ್ಕಾಚಾರ ಹಾಕಿ ಕೊಡುವುದು ಸೂಕ್ತ. ಉದಾ : ಮಳೆಯಾಶ್ರಿತ ರಾಗಿ ಬೆಳೆಗೆ ಬೇಕಾಗಿರುವ ಪೋಷಕಾಂಶವನ್ನು ಒದಗಿಸಲು, ದ್ರವಗೊಬ್ಬರದಲ್ಲಿ ಶೇ. 1.0 ಸಾರಜನಕ ಇದ್ದಲ್ಲಿ 2000 ಲೀಟರ್ / ಎಕರೆಗೆ ಬೇಕಾಗುವುದು. ಹಾಗೆಯೇ ಶೇ. 0.5 ಸಾರಜನಕ ಇದ್ದಲ್ಲಿ, 4000 ಲೀಟರ್ ಎಕರೆಗೆ ಬೆಕಾಗುವುದು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.94444444444
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top