অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಹು ಉಪಯೋಗಿ ಅಣುಜೀವಿಗಳು

ಬಹು ಉಪಯೋಗಿ ಅಣುಜೀವಿಗಳು

ಉಪಯೋಗಿ ಅಣುಜೀವಿಗಳು ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದರಿಂದ ಸಸ್ಯಗಳ ಬೆಳವಣಿಗೆ ಮತ್ತು ಇಳುವರಿಗೆ ಸಹಾಯವಾಗುತ್ತದೆ. ಜೊತೆಗೆ ಮಣ್ಣಿನಲ್ಲಿರುವು ಹಲವಾರು ರೋಗಾಣುಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಬಹು ಉಪಯೋಗಿ ಅಣುಜೀವಿಗಳಲ್ಲಿ ಮೂರು ವಿಧ. ಅವುಗಳೆಂದರೆ - ಸಾರಜನಕ ಸ್ಥರೀಕರಿಸುವ, ರಂಜಕವನ್ನು ಕರಗಿಸುವ ಮತ್ತು ಪೋಷಕಾಂಶಗಳನ್ನು ಸಾಗಿಸುವ ವಿಧಗಳುಂಟು

ರೈಜೋಬಿಯಂ

ಈ ಜೀವಿಗಳ ದ್ವಿದಳ ಧಾನ್ಯ ಗುಂಪಿಗೆ ಸೇರಿದ ಸಸ್ಯಗಳ ಬೇರಿನ ಮೇಲಿನ ಗಂಟುಗಳಲ್ಲಿ ಜೀವಿಸಿ ವಾತಾವರಣದಲ್ಲಿ ಇರುವ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿನ ಸಾರಜನಕ ಅಂಶವನ್ನು ಸೇರಿಸುತ್ತದೆ. ಮಣ್ಣಿನಲ್ಲಿ ಸಾರಜನಕ ಅಂಶ ಬೆಳೆಗಳಿಗೆ ದೊರೆತು, ಬೆಳೆ ಸಮೃದ್ಧಿಯಾಗಿ ಬೆಳೆದು ಇಳುವರಿ ಅಧಿಕಾವಾಗುತ್ತದೆ. ಬೆಳೆಗಳಿಗೆ ಕೊಡುವ ಸಾರಜನಕವನ್ನು ಶೇ. 25 ರಿಂದ 30 ರಷ್ಟು ಕಡಿಮೆಗೊಳಿಸಬಹುದು. ಜೊತೆಗೆ ಕೃಷಿಯ ಖರ್ಚನ್ನೂ ಸಹ ತಗ್ಗಿಸಬಹುದು.

ಪಿ.ಎಸ್.ಬಿ.

ಪಿ.ಎಸ್.ಬಿ. ಅಣುಜೀವಿಗಳು ಮಣ್ಣಿನಲ್ಲಿರುವ ಬೆಳೆಗಳಿಗೆ ಸಿಗದ ರಂಜಕವನ್ನು ಕರಗಿಸಿ ಬೆಳೆಗಳಿಗೆ ರಂಜಕ ಪೋಷಕಾಂಶವನ್ನು ಒದಗಿಸುತ್ತದೆ.

ಮೈಕೋರೈಜ

ಮಣ್ಣಿನಲ್ಲಿರುವ ಪೋಷಕಾಂಶ ಮತ್ತು ತೇವಾಂಶವನ್ನು ಮೈಕೊರೈಜ ನಾಳದ ಮುಖಾಂತರ

ಬೆಳೆಗಳಿಗೆ ಸಿಗುವಂತೆ ಮಾಡುತ್ತದೆ. ಜೊತೆಗೆ ಮಣ್ನಿನಲ್ಲಿರುವ ಅನೇಕ ವಿಧದ ರೋಗಾಣುಗಳ ಬೆಳವಣಿಗೆಯನ್ನು ಕುಠಿತಗೊಳಿಸುತ್ತದೆ. ಕೃಷಿ ವಿಶ್ವವಿಧ್ಯಾಲಯವು ಮೂರು ತಳಿಯನ್ನು ಅಭಿವೃದ್ಧಿಗೊಳಿಸುವೆ, ಅವುಗಳಲ್ಲಿ ಗ್ಲೊಮಸ್ ಮ್ಯಾಕ್ರೋಕಾರ್ಪಮ್, ಗ್ಲೋಬಸ್ ಫಾಸುಕ್ಯುಲೇಟಮ್ ಮತ್ತು ಅಕಲೋಸ್ಟೋರ ಲೀವಿಸ್, ಇದನ್ನು ನಾಟಿ ಮಾಡುವ ಬೆಳೆಗಳಿಗೆ ಸಸಿಮಡಿಯಲ್ಲಿಯೇ ಸೇರಿಸಿ (ಪ್ರತಿ ಚದುರ ಮೀಟರ್ ಸಸಿಮಡಿಗೆ 2 ಕೆ/ಜಿ. ಮೈಕೊರೈಜ) ಸಸಿಮಡಿಗೆ ಬೀಜ ಬಿತ್ತನೆ ಮಾಡಬೇಕು. ನಂತರ ಮುಖ್ಯ ಜಮೀನಿಗೆ ನಾಟಿ ಮಾಡಬೇಕು.

ಅಜೋಲ

ನೀರಿನ ಮೇಲೆ ತಲಾಡಿಕೊಂಡು ಬೆಳೆಯಬಲ್ಲ ಝರಿ ಸಸ್ಯ. ಅಜೋಲವನ್ನು ಭತ್ತದ ಗದ್ದೆಯಲ್ಲಿ ಬೆಳೆಸುವುದರಿಂದ ಭತ್ತದ ಬೆಳೆಗೆ ಸಾಕಷ್ಟು ಹಸಿರೆಲೆ ಗೊಬ್ಬರ ದೊರೆಯುವುದಲ್ಲದೆ. ಬೆಳೆಗೆ ಬೇಕಾದ ಇತರ ಪೋಷಕಾಂಶಗಳನ್ನು ಸಸ್ಯಕ್ಕೆ ದೊರಕಿಸಿಕೊಡುತ್ತದೆ. ಹಾಗೂ ಕಳೆಯನ್ನು  ನಿಯಂತ್ರಿಸಲು ಸಹಾಯಕವಾಗಿದೆ. ಇದನ್ನು ಭತ್ತದ ಗದ್ದೆಗಳಲ್ಲಿ ಬೆಳೆಸಿ, ನಾಟಿಗೆ ಮುಂಚೆ ಮಣ್ಣಿನಲ್ಲಿ ಸೇರಿಸುವುದರಿಂಧ ಒಂದು ಹೆಕ್ಟೇರಿಗೆ 40-50 ಕಿ.ಗ್ರಾಂ.ಗಳಷ್ಟು ಸಾರಜನಕವನ್ನು ಒದಗಿಸಿದಂತಾಗುತ್ತದೆ. ಜೊತೆಗೆ 4000-5000 ಕಿ.ಗ್ರಾಂ ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸಿದಂತಾಗುತ್ತದೆ. ಹಾಗೂ ಬೆಳೆಗೆ ಬೇಕಾದ ಇತರೆ ಪೋಷಕಾಂಶಗಳು ದರೆಯುತ್ತದೆ. ಅಜೋಲ ಮಣ್ಣಿನಲ್ಲಿ ಹ್ಯೂಮಸ್ ಮಟ್‍ಟ, ಹಾಗೂ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಗಳನ್ನು ಹೆಚ್ಚಿಸುತ್ತದೆ. ಅಜೋಲಾವನ್ನು ಪರ್ಯಾಯ ಪಶು ಆಹಾರವಾಗಿ ಹಾಗೂ ಕೋಳಿಸಾಕಣೆ ಮತ್ತು ಮೀನುಸಾಕಣೆಯ ಆಹಾರವಾಗಿ ಬಳಸಲಾಗುತ್ತಿದೆ

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 7/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate