ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಸತು ರಸಗೊಬ್ಬರಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸತು ರಸಗೊಬ್ಬರಗಳು

ಸತು ರಸಗೊಬ್ಬರಗಳ ಬಗ್ಗೆ

ಸತುವಿನ ರಸಗೊಬ್ಬರಗಳು

ಸತು ಸಾಮಾನ್ಯ ಸಸ್ಯ ಬೆಳವಣಿಗೆಗೆ ಬೇಕಾದ ಒಂದು ಲಘು (ಟ್ರೇಸ್) ಪೋಷಕಾಂಶವಾಗಿದೆ. ನೇರ ರಸಗೊಬ್ಬರಗಳ ಬಳಕೆಯಿಂದ ಹಾಗೂ ಸಾವಯವ ಗೊಬ್ಬರದ ಕಡಿಮೆ ಸೇರ್ಪಡೆಯಿಂದ ಹ್ಯೂಮಸ್ ಅಂಶವು ಕಡಿಮೆಯಾಗಿ, ಇದರಿಂದ ಸತು ಪೂರೈಕೆ ಮಾಡುವ ಕೆಲವು ವಸ್ತಗಳು ಈ ಕೆಳಕಂಡಂತಿವೆ.

ವಸ್ತುಗಳು

ಸತು ಪೋಷಕಾಂಶ (ಶೇ.)

ಸತುವಿನ ಸಲ್ಫೇಟ್ (ಹೈಪ್ಟಹೈಡ್ರೇಟ್)

21.0

ಸತುವಿನ ಸಲ್ಫೇಟ್ (ಮಾನೋಹೈಡ್ರೇಟ್)

33.0

ಸತು-ಇ.ಡಿ.ಟಿ.ಎ.

12.0

ಬಹಳಷ್ಟು ಲಘು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ಹೆಚ್ಚಿನ ಮಟ್ಟಿಗೆ ಸತುವಿನ ಕೊರತೆ ಇರುವುದು ಬಹಳಷ್ಟು ವಿಜ್ಞಾನಿಗಳ ಗಮನ ಕೆಳೆದಿದೆ.

ಸತುವಿನ ಸಲ್ಫೇಟ್ :

ರಾಸಾಯನಿಕ ಸಂಯುಕ್ತ, ನೀರಿನಲ್ಲಿ ಕರಗುವ, ಪಾರದರ್ಶಕ, ವರ್ಣರಹಿತ, ಸ್ಫಟಿಕದಂತಹ ಸಂಯುಕ್ತ ವಸ್ತು. ಇದು ಸಾಮಾನ್ಯವಾಗಿ ಹೆಪ್ಟ್ ಹೈಡ್ರೇಟ್ ರೂಪದಲ್ಲಿ ಬಳಸಲಾಗುತ್ತದೆ. ಮತ್ತು ಸಾಮಾನ್ಯವಾಗಿ ಇದನ್ನು ಬಿಳಿ ಗಂಧಕಾಮ್ಲವೆಂದು ಕರೆಯಲಾಗುತ್ತದೆ. ಸತುವನ್ನು ಕೃಷಿಗೆ ರಸಗೊಬ್ಬರವಾಗಿ ಹಾಗೂ ಸಿಂಪರಣೆಯ ಮೂಲಕ ಪೂರೈಕೆ ಮಾಡಲಾಗುತ್ತದೆ.

ಸತು ಹಲವು ರೂಪಗಳಲ್ಲಿ ಲಭ್ಯವಿದೆ. ಸತುವಿನ ಸಲ್ಫೇಟ್ ಅತ್ಯಂತ ಪರಿಣಾಮಕಾರಿ ಎಂದು ಕಂಡುಬಂದಿದೆ. ಸತುವಿನ ಕಿಲೇಟ್‍ನ ಹೆಚ್ಚಿನ ಬೆಲೆಯಿಂದ, ಅವುಗಳ ಉತ್ತಮ ಗುಣಧರ್ಮವಿದ್ದರೆ, ಅವುಗಳ ಬಳಕೆಯ ಮಿತಿಯನ್ನು ಕಡಿಮೆಗೊಳಿಸುತ್ತದೆ.

ಸತು ಮಿಶ್ರಿತ ಯೂರಿಯಾ, ಡಿ.ಎ.ಪಿ. ಮತ್ತು ಸಂಕೀರ್ಣ ಗೊಬ್ಬರಗಳು ಸಹ ಸತುವಿನ ಕೊರತೆಯನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾಗಿವೆ. ಸತುವಿನ ಜೊತೆ ಕೊಟ್ಟಿಗೆ ಗೊಬ್ಬರ, ಹಸುರೆಲೆ ಗೊಬ್ಬರವನ್ನು ಸಮಗ್ರವಾಗಿ ಬಳಸಿದಾಗ ಸುಮಾರು ಶೇ. 50 ರಷ್ಟು ಸತುವಿನ ಸಲ್ಫೇಟ್ ಬಳಕೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ವಸ್ತುಗಳು

ಕಬ್ಬಿಣ ಪೋಷಕಾಂಶ (ಶೇ)

ಫೇರಸ್ ಸಲ್ಫೇಟ್ (ಹೆಪ್ತ / ಹೈಡ್ರೇಟ್)

19.0

ಕಬ್ಬಿಣ - ಇ.ಡಿ.ಟಿ.ಎ.

12.0

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.9875
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top