ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಸಾಂದ್ರೀಕರಿಸಿದ ಸಾವಯವ ಗೊಬ್ಬರ ಮತ್ತು ಹಿಂಡಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾಂದ್ರೀಕರಿಸಿದ ಸಾವಯವ ಗೊಬ್ಬರ ಮತ್ತು ಹಿಂಡಿ

ಸಾಂದ್ರೀಕರಿಸಿದ ಸಾವಯವ ಗೊಬ್ಬರ ಮತ್ತು ಹಿಂಡಿ

ಸಾಂದ್ರೀಕರಿಸಿದ ಸಾವಯವ ಗೊಬ್ಬರ

ಸಾಂದ್ರೀಕರಿಸಿದ ಸಾವಯವ ಗೊಬ್ಬರವು ಪ್ರಕೃತಿಯಲ್ಲಿ ಸಾವಯವ ವಸ್ತು ಮತ್ತು ಬೃಹತ್ ಸಾವಯವ ಗೊಬ್ಬರಗಳಿಗೆ ಹೋಸಿಸಿದರೆ ಸಾಂದ್ರೀಕರಿಸಿದ ಸಾವಯವ ಗೊಬ್ಬರವು ಹೆಚ್ಚು ಶೇಕಡಾವಾರು ಅವಶ್ಯಕ ಸಸ್ಯ ಪೋಷಕಾಂಶಗಳಾಸ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂಗಳನ್ನು ಒಳಗೊಂಡಿರುತ್ತದೆ. ಈ ಗೊಬ್ಬರವನ್ನು ಪ್ರಾಣಿ ಅಥವಾ ಸಸ್ಯ ಮೂಲದ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಬಳಸುವ ಸಾಂದ್ರೀಕರಿಸಿದ ಗೊಬ್ಬರಗಳೆಂದರೆ, ಹಿಂಡಿಗಳು, ಜೈವಿಕ ಗೊಬ್ಬರಗಳು ಹಾಗೂ ದ್ರವ ರೂಪದ ಗೊಬ್ಬರಗಳು.

ಹಿಂಡಿಗಳು :

ಎಣ್ಣೆಕಾಳು ಬೀಜಗಳನ್ನು ಸಾರೀಕರಣ ವಿಧಾನದಿಂದ ಎಣ್ಣೆಯನ್ನು ತೆಗೆದು ನಂತರ ಉಳಿಯುವ ಘನ ಭಾಗವೇ ಹಿಂಡಿ. ಹಿಂಡಿಗಳಲ್ಲಿ 2 ವಿಧ. 1. ತಿನ್ನಬಹುದಾದ ಹಿಂಡಿಗಳು (ಸೇವನೆ ಯೋಗ್ಯ) - ಇವು ಜಾನುವಾರುಗಳು ತಿನ್ನಲು ಸೂಕ್ತ. 2. ತನ್ನಲು ಯೋಗ್ಯವಲ್ಲದ ಹಿಂಡಿಗಳು - ಇವು ಜಾನುವಾರುಗಳು ತಿನ್ನಲು ಸೂಕ್ತವಲ್ಲ. ಸೇವನೆಗೆ ಯೋಗ್ಯವಾದ ಹಿಂಡಿಗಳನ್ನು ಸಾಮಾನ್ಯವಾಗಿ ಜಾನುವಾರುಗಳಿಗೆ ಸಾಂದ್ರೀಕರಿಸಿದ ಹಿಂಡಿಯಾಗಿ ಬಳಸುತ್ತಾರೆ. ಕೆಲವು ಸಲ ಸೇವನಾ ಯೋಗ್ಯ ಹಿಂಡಿಗಳನ್ನು ಮಣ್ಣಿಗೂ ಕೂಡ ಹಾಕಲಾಗುತ್ತದೆ. ಸಾರಜನಕದ ಪ್ರಮಾಣವು ಹಿಂಡಿಯ ವಿಧದ ಮೇಲೆ ಬದಲಾಗುತ್ತದೆ. ಎಲ್ಲಾ ಹಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕದ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ರಂಜಕ (ಶೇ. 0.8 ರಿಂದ 2.9 ) ಮತ್ತು ಪೊಟ್ಯಾಷಿಯಂ (ಶೇ. 12 ರಿಂದ 2.2 ) ಹಿಂಡಿಗಳು ಶೀಘ್ರ ಸಾವಯವ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಹಿಂಡಿಗಳು ನೀರಿನಲ್ಲಿ ಕರಗದ ವಸ್ತುವಾಗಿದ್ದರೂ ಸಹ, ಹಿಂಡಿಗಳನ್ನು ಬಳಸಿದ 7 ರಿಂದ 10 ದಿವಸಗಳ ಒಳಗಾಗಿ ಸಸ್ಯಗಳಿಗೆ ಸಾರಜನಕ ಶೀಘ್ರ ಲಭ್ಯವಾಗುವ ರೀತಿ ಮಾಡುತ್ತವೆ. ಬೇವಿನ ಹಿಂಡಿಗಳು ಒಣ ಮಣ್ಣು ಮತ್ತು ಒಣ ಹವಾಮಾನಕ್ಕಿಂತ ಹೆಚ್ಚು ತೇವಭರಿತ ಹಾಗೂ ಆದ್ರ್ರ ಹವಾಮಾನದಲ್ಲಿ ಬಹಳ ಪರಿಣಾಮಕಾರಿ.

ಹಿಂಡಿಗಳನ್ನು ಚೆನ್ನಾಗಿ ಪುಡಿ ಮಾಡಿ ನಂತರ ಬಳಸಬೇಕು. ಇದರಿಂದ ಸಮವಾಗಿ ಹರಡುವುದಕ್ಕೆ ಹಾಗೂ ಸೂಕ್ಷ್ಮಜೀವಿಗಳಿಂದ ಸುಲಭವಾಗಿ ವಿಭಜನೆಯಾಗಲು ಸಹಾಯವಾಗುತ್ತದೆ. ಇದನ್ನು ಬಿತ್ತನೆಗೆ ಕೆಲವು ದಿನಗಳ ಮುಂಚಿತವಾಗಿಯೂ ಅಥವಾ ಬಿತ್ತನೆ ಸಮಯದಲ್ಲಿಯೂ ಕೂಡ ಬಳಸಬಹುದು. ಬೆಳೆಗಳಿಗೆ ಅನುಗುಣವಾಗಿ, ಹಿಂಡಿಗಳನ್ನು ಎರಚುವ ಕೂರಿಗೆ ಮೂಲಕ ಅಥವಾ ಸಸ್ಯಗಳ ಎರಡು ಇಕ್ಕೆಲಗಳಲ್ಲಿ ಮಣ್ಣನ್ನು ಒತ್ತರಿದುವಾಗ ಬೇರಿನ ಸಮೀಪ ಕೂಡ ಇರಿಸಹುದು. ಇತ್ತೀಚಿನ ದಿನಗಳಲ್ಲಿ ಬೇವಿನ ಹಿಂಡಿಯನ್ನು ಬೆಳೆಗಳ ಸಾಗುವಳಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಕೇವಲ ಸಾರಜನಕ ಸಂರಕ್ಷಿಸಲು ಸಹಾಯ ಮಾಡುವುದಲ್ಲದೆ, ದುಂಡು ಜಂತುಗಳ ನಿಯಂತ್ರಣ ಮತ್ತು ಗೆದ್ದಲು ಹುಳುವಿನಲ್ಲಿ ಕೀಟ ನಿವಾರಕವಾಗಿ Pಲಸ ನಿರ್ವಹಿಸುತ್ತದೆ. ಬೇವಿನ ಹಿಂಡಿಯಲ್ಲದೆ ಹೊಂಗೆ ಹಿಂಡಿ, ಹತ್ತಿ ಬೀಜದ ಹಿಂಡಿಗಳನ್ನು ಸಹ ಕೃಷಿಯಲ್ಲಿ ಬಳಸಬಹುದು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.03773584906
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top