ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಹಸಿರೆಲೆ ಗೊಬ್ಬರದ ಬಳಕೆ ವಿಧಾನ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಸಿರೆಲೆ ಗೊಬ್ಬರದ ಬಳಕೆ ವಿಧಾನ

ಹಸಿರೆಲೆ ಗೊಬ್ಬರದ ಬಳಕೆ ವಿಧಾನದ ಬಗ್ಗೆ

 1. ತಾಕಿನಲ್ಲಿಯೇ ಬೆಳೆದು ಅಲ್ಲೇ ಉತ್ತು ಮಣ್ಣಿಗೆ ಸೇರಿಸುವುದು.
  • ಭೂಮಿ ಸಿದ್ಧತೆ.
  • ಸಾಮಾನ್ಯವಾಗಿ ಮೇ, ಜೂನ್ ತಿಂಗಳಲ್ಲಿ ಬಿತ್ತನೆ.
  • ಬಿತ್ತನೆ ಬೀಜ ಎರಚುವುದು.
  • ಬೀಜವರಿ: ಚೆಂಬೆ - 40-45 ಕೆಜಿ/ಹೆ, ಅಪ್ಸೆಣಬು - 40-45 ಕೆಜಿ/ಹೆ, ಉದ್ದು, ಹೆಸರು - 25-30 ಕೆಜಿ/ಹೆ, ಅಲಸಂದೆ - 40 ಕೆಜಿ/ಹೆ.
  • ಗೊಬ್ಬರ: ಎಕರೆಗೆ 50-60 ಕೆಜಿ ಸೂಪರ್ ಫಾಸ್ಫೇಟ್ ಅಥವಾ 80 ಕೆಜಿ ಶಿಲಾರಂಜಕ
  • ಚೆಂಬೆಯಾದಲ್ಲಿ 6-7 ವಾರದ ಬೆಳೆಯನ್ನು, ಅಪ್ಸೆಣಬಾದಲ್ಲಿ 4-5 ವಾರದ ಬೆಳೆಯನ್ನು ಉತ್ತು ಮಣ್ಣಿಗೆ ಸೇರಿಸುವುದು.
  • ಮಣ್ಣಿಗೆ ಸೇರಿಸುವಾಗ ಸಾಕಷ್ಟು ತೇವಾಂಶವಿರಬೇಕು
  • ಮೂರು ವಾರಗಳಷ್ಟು ಕಳೆಯಿಸಿದ ನಂತರ, ಮುಂದಿನ ಮುಖ್ಯ ಬೆಳೆ ಬಿತ್ತನೆ/ನಾಟಿ ಕೈಗೊಳ್ಳಬೇಕು.
 2. ಹಸಿರು ಎಲೆಗಳುಳ್ಳ ಸಸ್ಯ ಭಾಗಗಳನ್ನು ಹೊರಗಿನಿಂದ ತಂದು ತಾಕಿಗೆ ಸೇರಿಸುವುದು.
  • ಹಸಿರು ಎಲೆ ಮತ್ತು ಎಳೆ ಟೊಂಗೆಗಳನ್ನು, ಬಹು ವಾರ್ಷಿಕ ಪೊದೆ ಮತ್ತು ಮರಗಿಡಗಳಿಂದ, ಬೇರೆ ಕಡೆಯಿಂದ ತಂದು ತಾಕಿನಲ್ಲಿ ಸೇರಿಸುವುದು ಸಾಮಾನ್ಯವಾಗಿ ಭತ್ತದ ಗದ್ದೆಯಲ್ಲಿ ವಾಡಿಕೆ.
  • ಉದಾ: ಗ್ಲಿರಿಸೀಡಿಯಾ, ಹೊಂಗೆ, ಕ್ಯಾಸಿಯಾ, ಎಕ್ಕ, ಬೇವು, ಬಾಗೆ ಇತ್ಯಾದಿ.
 3. ಹಸಿರೆಲೆ ಗೊಬ್ಬರಗಳ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು.
  • ದೀರ್ಘಾವಧಿ ಬೆಳೆಗಳಲ್ಲಿ ಎರಡು ಸಾಲುಗಳ ನಡುವೆ ಹೆಚ್ಚಿನ ಅಂತರ ಕೊಡುವುದರಿಂದ ಕೆಲವು ದ್ವಿದಳ ಧಾನ್ಯ ಜಾತಿಯ ಬೆಳೆಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಯಬಹುದು.

  ಉದಾ: ಕಬ್ಬು - ಡಯಾಂಚ, ಕಬ್ಬು - ಅಲಸಂದೆ, ಹತ್ತಿ - ಅಲಸಂದೆ ಇತ್ಯಾದಿ.

  ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.10606060606
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top