ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬೇವಿನ ಎಲೆ

ಬೇವಿನ ಎಲೆಯ ಏಳು ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ

ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!

ಇಂಡೋ ಮಲೇಶಿಯನ್ ಪ್ರದೇಶದ ಮೂಲವಾಗಿರುವ ಬೇವು ಆಫ್ರಿಕಾ ಮತ್ತು ಏಷ್ಯಾದಂತಹ ಉಷ್ಣ ವಲಯ ಮತ್ತು ಉಪ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಬೇವನ್ನು ಬೆಳೆಸುವುದು ತುಂಬಾ ಸುಲಭವಾದ್ದರಿಂದ 120 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.

ಬೇವು ಅದರ ವೈದ್ಯಕೀಯ ಗುಣಗಳಿಂದ ಶ್ರೇಷ್ಠವಾಗಿದ್ದು 12-15 ಮೀಟರ್ ಎತ್ತರದಲ್ಲಿ ಇದು ಬೆಳೆಯುತ್ತದೆ. ವೈದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೇವನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ವಾತಾವರಣ ಕೂಡ ಸ್ವಚ್ಛವಾಗಿರುತ್ತದೆ ಎಂಬ ಪ್ರತೀತಿ ಇದೆ.

ಬೇವಿನ ಮರದ ಹಣ್ಣುಗಳನ್ನು ರೋಗಕ್ಕೆ ಔಷಧವಾಗಿ ಬಳಸಲಾಗುತ್ತದೆ. ಚರ್ಮ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹಕ್ಕೆ ರಾಮಬಾಣವಾಗಿರುವ ಬೇವು ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ಕೂಡ ಬಳಸಲಾಗುತ್ತದೆ.

ಬೇವಿನ ಹಣ್ಣು ಮತ್ತು ಎಲೆಗಳಿಂದ ಬರುವ ರಸವನ್ನು ಹಲವಾರು ರೋಗಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಆದ್ದರಿಂದ ಮನೆಯ ಹಿತ್ತಲಿನಲ್ಲಿ ಬೇವನ್ನು ಬೆಳೆಸುವುದು ಮನೆ ಮದ್ದಿಗೆ ಸೂಕ್ತವಾಗಿದೆ. ನಿಮ್ಮ ಮನೆಯಲ್ಲಿ ಬೇವನ್ನು ಬೆಳೆಸಲು ಅಗತ್ಯವಾಗಿರುವ ಕೆಲವು ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಸಣ್ಣ ಗಿಡವನ್ನು ಖರೀದಿಸಿ:

ನೀವು ಬೇವಿನ ಮರವನ್ನು ನಿಮ್ಮ ಮನೆಯಂಗಳದಲ್ಲಿ ಬೆಳೆಸುವ ಇಚ್ಛೆಯನ್ನು ಹೊಂದಿದವರಾಗಿದ್ದರೆ ಸಣ್ಣ ಗಿಡವನ್ನು ಅಥವಾ ಉತ್ತಮ ಕಂಪಡನಿಯಿಂದ ಬೇವಿನ ಬೀಜವನ್ನು ಪಡೆದುಕೊಳ್ಳಿ. ಆನ್‌ಲೈನ್‌ನಲ್ಲೂ ಕೂಡ ಬೇವಿನ ಬೀಜಗಳನ್ನು ನಿಮಗೆ ಪಡೆದುಕೊಳ್ಳಬಹುದು.

ಎಲ್ಲಾ ಪ್ರಕಾರದ ಮಣ್ಣು:

ಬೇವಿಗೆ ಎಲ್ಲಾ ಪ್ರಕಾರದ ಮಣ್ಣೂ ಕೂಡ ಅನ್ವಯವಾಗುತ್ತದೆ. ಲವಣಯುಕ್ತ, ಕಪ್ಪು ಮಣ್ಣು ಹೀಗೆ ಯಾವ ಪ್ರಕಾರದ ಮಣ್ಣೂ ಕೂಡ ಬೇವಿಗೆ ಸೂಕ್ತವಾಗಿದೆ.

ತುಸು ಬೆಚ್ಚನೆಯ ತಾಪಮಾನದಲ್ಲಿ ಪಾಟ್ ಅನ್ನು ಇರಿಸಿ:

ಮಣ್ಣಿನಲ್ಲಿ ಒಂದು ಇಂಚಿನಷ್ಟು ಆಳದಲ್ಲಿ ಸಸಿಯನ್ನು ನೆಡುವುದು ಉತ್ತಮ. ಹೆಚ್ಚಿನ ಮರಗಳನ್ನು ನೆಡುವುದು ನಿಮ್ಮ ಉದ್ದೇಶವಾಗಿದ್ದರೆ ಸಣ್ಣ ಪಾಟ್‌ಗಳಲ್ಲಿ ಬೀಜಗಳನ್ನು ನೆಡಿ. ವಸಂತ ಕಾಲದಲ್ಲಿ ಬೇವಿನ ಗಿಡವನ್ನು ನೆಡುವುದು ಒಳ್ಳೆಯದು. ಏಕೆಂದರೆ ಈ ಕಾಲವು ಬೇವಿಗೆ ಸೂಕ್ತವಾಗಿರುತ್ತದೆ.

ಸೂರ್ಯನ ಬಿಸಿಲನ್ನು ತಡೆಗಟ್ಟಿ:

ನಿಮ್ಮ ಪಾಟ್‌ನಲ್ಲಿ ಸಣ್ಣ ತೂತುಗಳನ್ನು ಮಾಡಿ ಗಿಡವನ್ನು ನೆಡುವುದು ಉತ್ತಮವಾಗಿರುತ್ತದೆ. ಪ್ರಖರವಾದ ಸೂರ್ಯನ ಬಿಸಿಲಿನಲ್ಲಿ ಗಿಡವನ್ನು ನೆಡುವುದರಿಂದ ಅದು ಬಿಸಿಲಿಗೆ ಬಾಡಿ ಹೋಗುತ್ತದೆ. ಪಾಟ್‌ಗೆ ಸೂಕ್ತವಾದ ಮಣ್ಣನ್ನು ತುಂಬಿಸಿ ಇದರಿಂದ ನೈಸರ್ಗಿಕ ಸೂರ್ಯ ಬಿಸಿಲಿನಲ್ಲಿ ಎಲ್ಲಾ ತಾಪಮಾನಕ್ಕೂ ಬೇವು ಚೆನ್ನಾಗಿ ಬೆಳೆಯುತ್ತದೆ.

ಸೂಕ್ತ ಗೊಬ್ಬರ ಬಳಸಿ:

ನಿಮ್ಮ ಹೂಕುಂಡದ ಗಾತ್ರಕ್ಕಿಂತಲೂ ದೊಡ್ದದಾದ ಗುಂಡಿಯನ್ನು ಅಗೆದು ಅಲ್ಲಿ ಮರವನ್ನು ನೆಡಿ. ಬೇರನ್ನು ಗುಂಡಿ ಚೆನ್ನಾಗಿ ಮುಚ್ಚುವಂತೆ ನೋಡಿಕೊಳ್ಳಿ. ಸಾವಯವ ಗೊಬ್ಬರವನ್ನು ಬೇವಿನ ಪೋಷಣೆಗೆ ಬಳಸುವುದು ಸೂಕ್ತವಾಗಿರುತ್ತದೆ. ಮೀನಿನ ಮಿಶ್ರಣದಂತಹ ಸಾವಯವ ಗೊಬ್ಬರ ಬೇವಿಗೆ ಸೂಕ್ತ. ಈ ಗೊಬ್ಬರವನ್ನು ಗಿಡಗಳಿಗೆ ಹಾಕುವಾಗ ಸೂಕ್ತವಾದ ನಿರ್ದೇಶನಗಳನ್ನು ಪಡೆದುಕೊಳ್ಳಿ.

ಮಣ್ಣು ಒಣಗಿರಬೇಕು:

ಮಣ್ಣಿನಲ್ಲಿ ತೇವಾಂಶ ಉಳಿಯಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಗಿಡಕ್ಕೆ ನೀರುಣಿಸುವುದನ್ನು ಮರೆಯದಿರಿ.

ಗಿಡಕ್ಕೆ ಕತ್ತರಿ ಪ್ರಯೋಗ:

ನಿರ್ವಹಣೆಗೆ ತಕ್ಕುದಾದ ಗಾತ್ರವನ್ನು ನೀವು ಪಡೆಯಬೇಕೆಂದು ಬಯಸಿದ್ದಲ್ಲಿ ನಿಮ್ಮ ಗಿಡದ ತುದಿಯನ್ನು ಆಗಾಗ ಕತ್ತರಿಸುತ್ತಿರಿ. ಇದರಿಂದ ಸೂಕ್ತ ಆಕಾರ ಬೇವಿಗೆ ದೊರಕುತ್ತದೆ. ಈ ಸಲಹೆಗಳನ್ನು ನಿಮ್ಮ ಬೇವಿನ ಕೃಷಿಯಲ್ಲಿ ಅಗತ್ಯವಾಗಿ ಪಾಲಿಸಲೇಬೇಕು.

ಮೂಲ : ಬೋಲ್ಡ್ ಸ್ಕೈ

2.93181818182
ಯಮನಪ್ಪ ಹಂಡೇಲ್ Feb 01, 2019 07:33 AM

ಶೂನ್ಯ ಬಜೆಟ್ ಕೃಷಿ ಕುರಿತು ಮಾಹಿತಿ

Dragon Aug 13, 2016 05:34 AM

Posts like this bretighn up my day. Thanks for taking the time.

ಚಂದ್ರಮಹಿಪಾಲ ದೇಸಾಯಿ ವೀರಭದ್ರ 584115 Jun 02, 2016 07:30 AM

ಬೇವಿನ ಸೊಪ್ಪು ಬಗ್ಗೆ ಒಳ್ಳೆಯ ಮಾಹಿತಿಗಾಗಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top