ಜಾನುವಾರುಗಳಿಗೆ ಪೌಷ್ಟಿಕ ಆಹಾರ: ಅಜೊಲ್ಲಾ

ಅಜೊಲ್ಲ ಬಗ್ಗೆ

ಅಜೊಲ್ಲಾ ನೀರಿನಲ್ಲಿ ತೇಲಾಡುವ ರೆಕ್ಕೋಪಾದಿಯ ಎಲೆಗಳುಳ್ಳ ಒಂದು ಸಸ್ಯ ಪ್ರಬೇಧ. ಇದು ಪಾಚಿಯನ್ನು ಹೋಲುತ್ತದೆ.

ಸಾಮಾನ್ಯವಾಗಿ ಇದನ್ನು ಭತ್ತದ ಗದ್ದೆಗಳಲ್ಲಿ ಅಥವ ಆಳವಲ್ಲದ ನೀರಿನ ಹೊಂಡಗಳಲ್ಲಿಬೆಳೆಸುತ್ತಾರೆ.

ಬಹು ಬೇಗ ಬೆಳೆದು ಪಸರಿಸುತ್ತದೆ

ಅಜೊಲ್ಲಾ- –ಒಳ ನೋಟ

ಮೇವು/ಆಹಾರವಾಗಿ ಅಜೊಲ್ಲಾ

ಪ್ರೊಟೀನುಗಳು, ಜೀವನಾವಶ್ಯಕ ಅಮಿನೊ ಆಮ್ಲಗಳು, ಅನ್ನಾಂಗ(ವಿಟಮಿನ್) ಗಳು (ಎ, ಬಿ12, ಬೀಟಾ ಕೆರೋಟಿನ್), ಬೆಳವಣಿಗೆ ಪ್ರಚೋದಿಸುವ ಜೀವಸತ್ವಗಳು, ಲವಣಗಳಾದ ಕ್ಯಾಲ್ಶಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ ಮತ್ತು ರಂಜಕಗಳಿಂದ ಸಮೃಧ್ಧವಾಗಿದೆ,

ಒಣ ಅಜೊಲ್ಲ ಶೇಕಡಾವಾರು 25-35 ರಷ್ಟು ಪ್ರೋಟೀನು, 10-15 ಲವಣಗಳು,7-10 ಅಮಿನೊ ಆಮ್ಲಗಳು, ಜೀವ ಚೈತನ್ಯಕಾರಕಗಳು ಮತ್ತು ಪಾಲಿಮರ್ ಗಳು ಸೇರಿವೆ.

ಹೆಚ್ಚಿನ ಪ್ರೋಟಿನು ಮತ್ತು ಕಡಿಮೆ ನಾರಿನಾಂಶದ ಪ್ರಯುಕ್ತ ಜಾನುವಾರುಗಳು ಅಜೊಲ್ಲಾವನ್ನು ಸುಲಭವಾಗಿ ಜೀರ್ಣಿಸಿ ರಕ್ತಗತ ಮಾಡಿಕೊಳ್ಳುತ್ತವೆ.

ಅಜೊಲ್ಲವನ್ನು ನೇರವಾಗಿ ಅಥವಾ ಹಿಂಡಿ ( ಸಮತೋಲನ ಪಶು ಆಹಾರ) ಜೊತೆಗೆ ಜಾನುವಾರುಗಳಿಗೆ ನೀಡಬಹುದು.

ಕೋಳಿ, ಕುರಿ, ಆಡು, ಹಂದಿ ಮತ್ತು ಮೊಲಗಳಿಗೂ ಅಜೊಲ್ಲವನ್ನು ತಿನ್ನಿಸಬಹುದು.

ಅಜೊಲ್ಲಾ ಉತ್ಪಾದನೆ

ಬೆಳೆಸಬೇಕಾದ ಭೂಮಿಯನ್ನು ಹದಗೊಳಿಸಿ ಕಳೆ ತೆಗೆದು ಸಮತಟ್ಟಾಗಿಸಬೇಕು.

ಇಟ್ಟಿಗೆಯನ್ನು ಅಡ್ಡವಾಗಿಟ್ಟು ಆಯತಾಕಾರದಲ್ಲಿ ಜೋಡಿಸಿಕೊಳ್ಳಬೇಕು

ಯು.ವಿ. ಕಿರಣಗಳಿಂದ ತೀಡಲ್ಪಟ್ಟ 2 ಮೀ x 2 ಮೀ ಅಳತೆಯ ಸಿಲ್ಪಾಲಿನ್ ಹಾಳೆಯನ್ನು ಸಮನಾಗಿ ಇಟ್ಟಿಗೆಗಳು ಹೊದಿಕೆಯಾಗುವಂತೆ ತಗ್ಗಾಗುವಂತೆ ಹಾಸಬೇಕು.

10-15 ಕಿಲೊ ಸೋಸಿದ ಮಣ್ಣನ್ನು ಸಿಲ್ಪಾಲಿನ್ ಹಾಳೆ ಮೇಲೆ ಸಮನಾಗಿ ಹರಡಬೇಕು.

2 ಕಿಲೊ ಹಸುವಿನ ಸಗಣಿ ಯನ್ನು 30 ಗ್ರಾಂ ಸುಪರ್ ಫಾಸ್ಫೇಟ್ ದೊಂದಿಗೆ 10 ಲೀ ನೀರಿನಲ್ಲಿ ಮಿಶ್ರಣ ಮಾಡಿದ ರಾಡಿಯನ್ನು ಹಾಳೆಯ ಮೇಲೆ ಹಾಕಿ. ನಂತರ ಹೆಚ್ಚಿನ ನೀರನ್ನು ಸುರಿದು ನೀರಿನ ಮಟ್ಟ 10 ಸೆಂ.ಮೀ ನಷ್ಟು ಆಗುವಂತೆ ನೋಡಿಕೊಳ್ಳಿ.

ಮಣ್ಣು ಹಾಗೂ ನೀರನ್ನುನಿಧಾನವಾಗಿ ಕದಡಿದ ಮೇಲೆ 0.5-1.0ಕಿಲೊ ದಷ್ಟು ಬೀಜಕ್ಕಾಗಿರುವ ತಾಯಿ ಅಜೊಲ್ಲಾ ವನ್ನು ನೀರಿನ ಮೇಲೆ ಹರಡಿ, ಅಜೊಲ್ಲಾ ಸಸಿಗಳನ್ನು ಮೇಲ್ಮುಖವಾಗಿ ನಿಲ್ಲಿಸಲು ಮತ್ತೆ ಸ್ವಲ್ಪನೀರನ್ನು ಸಿಂಪಡಿಸಿರಿ.

ಒಂದು ವಾರದೊಳಗಾಗಿ ಅಜೊಲ್ಲಾ ಸಸಿಗಳು ಬಹು ಸಂಖ್ಯೆಯಲ್ಲಿ ಬೆಳೆದು ದಪ್ಪ ಚಾಪೆಯಂತೆ ಇಡೀ ತಗ್ಗಿನಲ್ಲಿ ಹರಡಿಕೊಳ್ಳುತ್ತವೆ.

ಅಜೊಲ್ಲಾದ ನಿರೀಕ್ಷಿತ ಬೆಳವಣಿಗೆ ಗತಿ ಕಾಪಾಡಲು ಪ್ರತೀ ವಾರ 20 ಗ್ರಾಮ್ ಸುಪರ್ ಫಾಸ್ಫೇಟ್ ಮತ್ತು 1 ಕಿಲೊ ಹಸುವಿನ ಸೆಗಣಿ ನೀಡುತ್ತಿರಬೇಕು. ಇದರಿಂದ ದಿನಕ್ಕೆ 500 ಗ್ರಾಂ ಇಳುವರಿ ದೊರೆಯುತ್ತದೆ.

ಸೂಕ್ಷ್ಮ ಲವಣಗಳಾದ ಮೆಗ್ನೇಶಿಯಂ, ತಾಮ್ರ, ಗಂಧಕ, ಇತ್ಯಾಫ್ದಿಗಳ ಮಿಶ್ರಣವನ್ನು ವಾರದ ಅಂತರದಲ್ಲಿ ನೀಡುವುದರಿಂದ ಅಜೊಲ್ಲಾ ಸಸ್ಯದಲ್ಲಿನ ಲವಣಾಂಶಗಳ ಪ್ರಮಾಣ ಹೆಚ್ಚಿಸಬಹುದು.

ಪ್ರತೀ ತಿಂಗಳಿಗೊಮ್ಮೆ 5 ಕಿಲೊದಷ್ಟು ಮಣ್ಣನ್ನು ಹೊಸ ಮಣ್ಣಿನಿ0ದ ಬದಲಾಯಿಸುತ್ತಿರಬೇಕು. ಇದರಿಂದ ಸಾರಜನಕದ ಸಾಂಧ್ರತೆ ಹೆಚ್ಚುವುದನ್ನು ತಡೆಯಬಹುದು ಮತ್ತು ಸೂಕ್ಶ್ಮ ಪೋಷಕಾಂಶಗಳ ಕೊರತೆ ನಿವಾರಿಸಬಹುದು.

ಪ್ರತೀ 10 ದಿನಗಳಿಗೊಮ್ಮೆ ಶೆ 25-30 ರಷ್ಟು ನೀರನ್ನು ಸಹ ಬದಲಿಸುವುದರಿ0ದ ಸಾರಜನಕದ ಸಾಂಧ್ರತೆ ನಿಯಂತ್ರಿಸಬಹುದು.

ಎಲ್ಲಾ ಹಾಸಲನ್ನು ಅಜೊಲ್ಲಾ ಸಹಿತ ಪ್ರತೀ 6 ತಿಂಗಳಿಗೊಮ್ಮೆ ಬದಲಿಸಬೇಕು.

ಕೀಟಗಳುಮತ್ತು ರೋಗಗಳು ಕಂಡು ಬಂದಾಗ ಹಳೆ ವ್ಯವಸ್ಥೆ ಬದಲಿಸಿ ಅಜೊಲ್ಲಾ ಸಹಿತ ಹೊಸ ಹಾಸಲನ್ನು ತಯಾರಿಸಿಕೊಳ್ಳಬೇಕು.

ಚನ್ನಾಗಿ ಬೆಳೆದ ಅಜೊಲ್ಲಾ

ಅಜೊಲ್ಲಾ ಉತ್ಪಾದನೆ ಗುಂಡಿ

ಗುಂಡಿಗೆ ಮರಳಿ ಅತಿ ಸಣ್ಣ ಸಸ್ಯಗಳನ್ನು ಸೇರಿಸಲು ಜಾಳಿಗೆಯನ್ನು ಉಪಯೋಗಿಸಿಸ್ ತೊಳೆಯುವುದು ಉಪಯುಕ್ತವಾಗಿದೆ.

ಉಷ್ಣಾಂಶವನ್ನು 25°ಸೆ. ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

ಬೆಳಕಿನ ಪ್ರಖರತೆಯನ್ನು ನಿಯಂತ್ರಿಸಲು ನೆರಳಿನ ಜಾಳಿಗೆ (ಶೇಡ್ ನೆಟ್) ಉಪಯೋಗಿಸಬಹುದು

ಅಜೊಲ್ಲಾ ಸಸ್ಯಗಳನ್ನು ದಿನಾಲು ಕೊಯ್ಲು ಮಾಡುವುದರಿಂದ ಗುಂಡಿಯಲ್ಲಿ ಅವುಗಳ ಸಾಂಧ್ರತೆ ನಿಯಂತ್ರಿಸಬಹುದು.

ಪೋರ್ಟಲ್ ತಂಡ