অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿದ್ಯಾಕಾಶಿಯಲ್ಲಿ ಅರಳಿದ ಸಸ್ಯ ಕಾಶಿ

ವಿದ್ಯಾಕಾಶಿಯಲ್ಲಿ ಅರಳಿದ ಸಸ್ಯ ಕಾಶಿ

ವೆಂಕಟೇಶ್.ಸಿ.ಭೀಮಸಮುದ್ರ ವಿಶ್ವವಿದ್ಯಾಲಯಗಳು ವಿದ್ಯೆ ಕಲಿಸುವ ಕೇಂದ್ರಗಳು. ಅದಕ್ಕೆಂದೇ ಅವುಗಳನ್ನು ವಿದ್ಯಾಕಾಶಿ ಎನ್ನಲಾಗುತ್ತದೆ. ದಾವಣಗೆರೆ ವಿವಿ ಎಂಬ ವಿದ್ಯಾಕಾಶಿ ಱಸಸ್ಯ ಕಾಶಿ'ಯಾಗಿ ಅರಳಿರುವ ಕತೆಯಿದು.

ಇಂದು ನೀವು ಇಲ್ಲಿನ ಕ್ಯಾಂಪಸ್‌ಗೆ ಬಂದ ಎಲ್ಲಿ ಕಣ್ಣು ಹಾಯಿಸಿದರೂ ಹಸಿರು ಕಾಣಸಿಗುತ್ತದೆ. ಸ್ವಚ್ಛ ಗಾಳಿ, ತಂಪಾದ ವಾತಾವರಣ ನಿಮ್ಮನ್ನು ಮುದಗೊಳಿಸುತ್ತದೆ. ಆದರೆ ಇದು ಒಂದು ದಿನದಲ್ಲಿ ಅರಳಿದ ತೋಟವಲ್ಲ. ಸತತ 17 ವರ್ಷಗಳ ಪರಿಶ್ರಮ ಇದರ ಹಿಂದಿದೆ. ಈ ಸಸ್ಯ ಕಾಶಿಯ ರೂವಾರಿ ದಾವಣಗೆರೆ ವಿಶ್ವವಿದ್ಯಾಲಯದ ತೋಟಗಾರಿಕೆ ಈಕ್ಷಕ ವೈ.ಎಚ್.ಕುಂದರಗಿಎಂದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.

ದಾವಣಗೆರೆ ವಿಶ್ಯವಿದ್ಯಾಲಯದ ಶಿವಗಂಗೊತ್ರಿ ಕ್ಯಾಂಪಸ್‌ನಲ್ಲಿ ಸಸ್ಯ ಸಂಪತ್ತನ್ನು ಉಳಿಸಿ, ಬೆಳೆಸಲು ಪ್ರತಿ ವರ್ಷ ಐದರಿಂದ ಏಳು ಸಾವಿರ ಅರಣ್ಯ ಸಸಿಗಳು ಮತ್ತು ಅಲಂಕಾರಿಕ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತದೆ. ಆಸಕ್ತಿಯಿಂದ ನೆಟ್ಟಿದ್ದನ್ನು ಅಷ್ಟೇ ಶ್ರದ್ಧೆಯಿಂದ ಬೆಳೆಸಲಾಗುತ್ತದೆ. ಇಲ್ಲಿ ನಾನಾ ಬಗೆಯ ಅರಣ್ಯ ತಳಿಗಳು ಮತ್ತು 15ಕ್ಕೂ ಹೆಚ್ಚು ಅಲಂಕಾರಿಕ ಸಸ್ಯಗಳನ್ನು ಪೋಷಿಸಲಾಗುತ್ತಿದೆ.

ಸಂರಕ್ಷಣೆಗೆ 10 ಮಂದಿ:

ಇಲ್ಲಿರುವ ಹಸಿರು ಸಿರಿಯ ಸಂರಕ್ಷಣೆಗೆಂದೇ ಹತ್ತು ಮಂದಿ ಕೆಲಸಗಾರರನ್ನು ನೇಮಿಸಲಾಗಿದೆ. ಪ್ರತಿ ದಿನ ಗಿಡಗಳಿಗೆ ನೀರು ಬಿಡುವುದು, ಗೊಬ್ಬರ ಮತ್ತಿತರ ಪೋಷಕಾಂಶಗಳನ್ನು ಪೂರೈಸುವುದು, ಬೆಳವಣಿಗೆಯ ಹಂತದಲ್ಲಿರುವ ಗಿಡಗಳಿಗೆ ಯಾವುದೇ ರೋಗ ಇಲ್ಲವೇ ಕಳೆಗಳ ಕಾಟ ಉಂಟಾಗದಂತೆ ಎಚ್ಚರ ವಹಿಸುವುದು ಇವರ ಕೆಲಸ. ಇದಲ್ಲದೆ ಇಲ್ಲಿ ಪ್ರತಿ ವರ್ಷ 7 ಸಾವಿರ ಗಿಡಗಳನ್ನು ವಿವಿಯ ಆವರಣದಲ್ಲಿ ಬೆಳೆಸುವ ಹೊಣೆಯೂ ಇವರ ಮೇಲಿದೆ. ಬೇರೆಡೆ ದುಬಾರಿ ಹಣ ನೀಡುವುದಕ್ಕಿಂತ ವಿವಿಯ ನರ್ಸರಿಯಲ್ಲೇ ಗಿಡಗಳನ್ನು ಬೆಳೆಸಿ ವರ್ಷಕ್ಕೆ ಕನಿಷ್ಠ ಮೂರು ಲಕ್ಷ ರೂ. ಉಳಿಸಲು ಇಲ್ಲಿ ಸಾಧ್ಯವಿದೆ ಎನ್ನುವುದಾಗಿ ಕ್ಯಾಂಪಸ್‌ನ ಪರಿಸರ ಪ್ರಿಯರು ನೀಡುವ ಸಲಹೆ. ಇದನ್ನು ವಿವಿ ಆಡಳಿತ ಸ್ವೀಕರಿಸುವುದೇ ಕಾದು ನೋಡಬೇಕು.

ಬಗೆ ಬಗೆಯ ಸಸ್ಯಗಳು:

ವಿವಿಯ ಅಂಗಳದಲ್ಲಿ ಸುಮಾರು 30ಕ್ಕೂ ಅಕ ಜಾತಿಗಳ ಮರಗಳನ್ನು ಕಾಣಬಹುದು. ಹೊಂಗೆ, ನೇರಳೆ, ಹುಣಸೆ, ಮಾವು, ಬೇವು, ನೆಲ್ಲಿಕಾಯಿ, ಅರಳಿ ಮರ, ಮೇ ಫ್ಲವರ್, ಅಕೆಶಿಯಾ ಗಿಡಗಳು ಇಲ್ಲಿ ಮರಗಳಾಗಿ ಬೆಳೆಯವು ದನ್ನುನೋಡುವುದೇ ಚೆಂದ. ಕೆಂಪು ಮತ್ತು ಮರಳು ಮಿಶ್ರಿತ ಮಣ್ಣನ್ನು ಪ್ಯಾಕೇಟ್‌ನಲ್ಲಿ ತುಂಬಿ ವಿವಿಯ ಆವರಣದಲ್ಲಿ ಬೆಳೆದ ಗಿಡಗಳ ಅರೆಯನ್ನು ಕಸಿ ಮಾಡಿ ಹಾಕುವುದು ತ್ತು ಅರಣ್ಯ ಇಲಾಖೆೆಯಿಂದ ಅರಣ್ಯ ಸಸಿಗಳ ಬೀಜಗಳನ್ನು ತಂದು ಇಲ್ಲಿ ಪೋಷಿಸಲಾಗುತ್ತಿದೆ.
ಜಾಗತೀಕರಣದ ಹಿನ್ನೆಲೆಯಲ್ಲಿ ಪರಿಸರ ನಶಿಸುತ್ತಿರುವುದು ವಿಷಾದನೀಯ ಸಂಗತಿ. ನಾವು ಸಸ್ಯ ಸಂಪತ್ತನ್ನು ಬೆಳೆಸುವ ಮೂಲಕ ಪರಿಸರ ಪ್ರೇಮವನ್ನೂ ತೋರ್ಪಡಿಸಬೇಕಾದ ಸನ್ನಿವೇಶವಿದು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕೂಡ ಕೈಜೋಡಿಸಿದರೆ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಸೃಷ್ಟಿಸಲು ಸಾಧ್ಯವಾಗಲಿದೆ. ಅದು ನಮ್ಮ ಕರ್ತವ್ಯವೂ ಹೌದು.

ಮೂಲ :ವೈ. ಎಚ್. ಕುಂದರಗಿ, ದಾವಣಗೆರೆ ವಿಶ್ವವಿದ್ಯಾಲಯ ತೋಟಗಾರಿಕೆ ವೀಕ್ಷಕ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate