ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ತಜ್ಞ ವ್ಯವಸ್ಥೆಗಳು / ಮಣ್ಣು ಮತ್ತು ನೀರು ಸಂರಕ್ಷಣೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಣ್ಣು ಮತ್ತು ನೀರು ಸಂರಕ್ಷಣೆ

ಮಣ್ಣು ಮತ್ತು ನೀರು ಸಂರಕ್ಷಣೆ

ಮಣ್ಣು ಕೊಚ್ಚಣೆಯ ಕಾರಣಗಳು :

 • ಮುಖ್ಯವಾಗಿ ನೀರು ಮತ್ತು ಗಾಳಿ
 • ತಗ್ಗು ದಿಣ್ಣೆಗಳಿಂದ ಕೂಡಿದ ಭೂಮು
 • ಹೆಚ್ಚುತ್ತಿರುವ ಬೇಸಾಯದ ಒತ್ತಡ. ಅನುಚಿತ/ಅವೈಜ್ಞಾನಿಕ ಬೇಸಾಯ ಪದ್ಧತಿ.
 • ವಿನಾಶವಾಗುತ್ತಿರುವ ಸಸ್ಯ, ಹುಲ್ಲಿನ ಕವಚ
 • ಏರುಪೇರು ಮತ್ತು ಅನಿಶ್ಚಿತತೆಯಿಂದ ಕೂಡಿದ ಮಳೆ

ಮಣ್ಣು ಕೊಚ್ಚಣೆಯ ಪರಿಣಾಮಗಳು :

 • ಭೂ ಸವಕಳಿ
 • ನೀರು ಮತ್ತು ಸಸ್ಯ ಪೋಷಕಾಂಶಗಳ ನಷ್ಟ
 • ಬೆಳೆ ಉತ್ಪಾದಕತೆ ಕುಂಠಿತ
 • ಹಳ್ಳ, ಕೆರೆ, ಕುಂಟೆ, ಅಣೆಕಟ್ಟುಗಳು, ಬಂದರುಗಳಲ್ಲಿ ಹೂಳು ತುಂಬುವಿಕೆ, ನಂತರ ಅವುಗಳ ನಿರುಪಯುಕ್ತತೆ+

ಭೂ ಉಪಚಾರಗಳು

ಅ) ವ್ಯವಸಾಯ ಯೋಗ್ಯವಲ್ಲದ ಜಮೀನಿನ ಉಪಚಾರಗಳು:

ಸಮಪಾತಳಿ ಕಂದಕ

 • ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಮಪಾತಳಿ ರೇಖೆಯ ಮೇಲೆ
 • ಇಳಿಜಾರಿಗನುಗುಣವಾಗಿ ನಿಗದಿತ ಅಂತರದಲ್ಲಿ 0.45 ಮೀ ಆಳ, 0.6 ಮೀ ಅಗಲ, ಮತ್ತು ಗರಿಷ್ಠ 15 ಮೀ, ಉದ್ಧದ ಕಂದಕ.
 • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 5-10 ಭೂ ಇಳಿಜಾರಿನವರೆಗೆ 7.5 ಮೀ. ಮತ್ತು ಶೇ. 10-20 ರವರೆಗೆ ಭೂ ಇಳಿಜಾರಿಗೆ 5 ಮೀ  ಅಂತರದಲ್ಲಿ ಕಂದಕ.
 • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು.
 • ಕಂದಕಗಳಲ್ಲಿ ಸೂಕ್ತ ಅರಣ್ಯ/ಖುಷ್ಕಿ ತೋಟಗಾರಿಕೆ ಸಸ್ಯಗಳನ್ನು ನೆಡುವುದು.
 • ವಾರಡಿ ಕಂದಕ:
 • ವಾರ್ಷಿಕ ಸರಾಸರಿ 750 ಮಿ.ಮೀ ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ವಾರಡಿ ರೇಖೆಯ ಮೇಲೆ ಇಳಿಜಾರಿಗೆ ಅನುಗುಣವಾಗಿ ನಿಗದಿತ ಅಂತರದಲ್ಲಿ ಕಂದಕ ನಿರ್ಮಾಣ.
 • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 5-10 ಭೂ ಇಳಿಜಾರಿನವರೆಗೆ 7.5 ಮೀ, ಮತ್ತು ಶೇ 10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರದಲ್ಲಿ ಕಂದಕ.
 • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು.
 • ಪರ್ಯಾಯ ಸಮಪಾತಳಿ ಕಂದಕ:
 • ಭೂಮಿಯಲ್ಲಿ ಭೂ ಏರಿಳಿತ ಹೆಚ್ಚು ಇದ್ದಾಗ ನಿರ್ಮಾಣ.
 • ಎರಡು ಕಂದಕಗಳ ನಡುವಿನ ಅಂತರ ಕೆಳಗಿನ ಕಂದಕದ ಎರಡು ಪಟ್ಟು.
 • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 15-0 ಭೂ ಇಳಿಜಾರಿನವರೆಗೆ 7.5 ಮೀ ಮತ್ತು ಶೇ 10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರದಲ್ಲಿ ಕಂದಕ.
 • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು.
 • ತಿರುವು ಗಾಲುವೆ
 • ವ್ಯವಸಾಯ ಯೋಗ್ಯವಲ್ಲದ ಜಮೀನಿನಿಂದ ವ್ಯವಸಾಯ ಯೋಗ್ಯ ಜಮೀನಿಗೆ ಬರುವ ನೀರನ್ನು ನಿಯಂತ್ರಣ ಮಾಡಲು ನಿರ್ಮಾಣ.
 • ಹರಿದು ಬರುವ ನೀರನ್ನು ಕೊರಕಲು/ಹಳ್ಳಕ್ಕೆ ತಿರುಗಿಸಲಾಗುವುದು.
 • ಕಂದಕದ ಗಾತ್ರ ಮೇಲಿನಿಂದ ಹರಿದು ಬರುವ ನೀರಿನ ಪ್ರಮಾಣವನ್ನು ಅನುಸರಿಸಿರುತ್ತದೆ

ಸಸ್ಯ ಶೋಧಕ ಪಟ್ಟಿ

ವ್ಯವಸಾಯ ಯೋಗ್ಯವಲ್ಲದ ಜಮೀನಿನಿಂದ ವ್ಯವಸಾಯ ಯೋಗ್ಯ ಜಮೀನಿಗೆ ಬರುವ ನೀರನ್ನು ತಡೆಯುವ ಸಲುವಾಗಿ ಕಡಿಮೆ ಇಳಿಜಾರಿರುವ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುವುದು.

0.3 ಮೀ ಆಳ ಮತ್ತು 0.3 ಮೀ ಅಗಲದ ಎರಡು ಕಂದಕಗಳನ್ನು 1.5 ಮೀ ಅಂತರ ಬಿಟ್ಟು ತೆಗೆಯುವುದು. ಇದರಲ್ಲಿ ಅರಣ್ಯ ಸಸಿಗಳನ್ನು ಕಡಿಮೆ ಅಂತರ ಕೊಟ್ಟು ನೆಡುವುದು. ಈ ಕಂದಕಗಳ ಮದ್ಯೆ 0.3 ಮೀ ಆಳ ಮತ್ತು 0.3 ಮೀ ಅಗಲದ 5 ಕಂದಕಗಳನ್ನು ತೆಗೆದು 0.3 ಮೀ ಅಂತರದಲ್ಲಿ ಕತ್ತಾಳೆ/ಐಪೋಮಿಯ/ಇತರೆ ಕಂಟಿಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸುವುದು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.94059405941
dayanand Feb 07, 2016 12:11 PM

ತುಂಬಾ ಮಹತ್ವ ವಾಗಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top