ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಧಾರ್ ಏಕೆ

ಆಧಾರ್‌-ಆಧರಿತ ಗುರುತಿಗೆ ಎರಡು ವಿಶಿಷ್ಟ ಗುಣಲಕ್ಷಣಗಳಿವೆ.

  • ಇದಕ್ಕೆ ಸಾರ್ವತ್ರಿಕತೆ ಇರುತ್ತದೆ. ಏಕೆಂದರೆ, ಕ್ರಮೇಣ ದೇಶಾದ್ಯಂತ ಮತ್ತು ಎಲ್ಲ ಸೇವಾ ಪೂರೈಕೆದಾರರು ಇದಕ್ಕೆ ಮನ್ನಣೆ ನೀಡಿ ಪರಿಗಣಿಸುತ್ತಾರೆ.
  • ಈ ಸಂಖ್ಯೆಯ ಸಾರ್ವತ್ರಿಕ ಗುರುತು ಮೂಲಸೌಕರ್ಯ ಆಧರಿತವಾಗಿರುವ ಕಾರಣ, ದೇಶಾದ್ಯಂತ ರೆಜಿಸ್ಟ್ರಾರ್‌ಗಳು ಮತ್ತು ಏಜೆನ್ಸಿಗಳು ತಮ್ಮ ಗುರುತು ಆಧರಿತ ಅನ್ವಯಿಕಗಳನ್ನು ರೂಪಿಸಬಹುದು.
  • ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ್‌ ಸಂಖ್ಯೆಗಾಗಿ ನಿವಾಸಿಗಳ ದಾಖಲಾತಿಗಾಗಿ ದೇಶದಾದ್ಯಂತ ವಿವಿಧ ರೆಜಿಸ್ಟ್ರಾರ್‌ ಜತೆ ಪಾಲುದಾರಿಕೆ ಹೊಂದಲಿದೆ. ರಾಜ್ಯ ಸರ್ಕಾರ, ಸಾರ್ವಜನಿಕ ರಂಗದ ಘಟಕಗಳು, ಬ್ಯಾಂಕುಗಳು. ದೂರಸಂಪರ್ಕ ಕಂಪನಿ ಮೊದಲಾದವು ಇದರಲ್ಲಿ ಸೇರಿದೆ. ಈ ರೆಜಿಸ್ಟ್ರಾರ್‌ಗಳು ಮುಂದಿನ ಹಂತದಲ್ಲಿ ಆಧಾರ್‌ ಸಂಖ್ಯೆಗಾಗಿ ನಿವಾಸಿಗಳ ದಾಖಲಾತಿಗಾಗಿ ಏಜೆನ್ಸಿಗಳ ಜೊತೆ ಪಾಲುದಾರಿಕೆ ಹೊಂದುತ್ತವೆ.
  • ಆಧಾರ್‌, ಸಾರ್ವಜನಿಕರು, ಖಾಸಗಿ ಏಜೆನ್ಸಿ ಮತ್ತು ನಿವಾಸಿ ನಡುವೆ ವಿಶ್ವಾಸಾರ್ಹತೆ ವೃದ್ಧಿಸುತ್ತದೆ. ನಿವಾಸಿ ಒಮ್ಮೆ ಆಧಾರ್‌ ದಾಖಲಾತಿ ಪಡೆದರೆ, ಸೇವೆ ಒದಗಿಸುವ ಮುನ್ನ ಸೇವಾ ಪೂರೈಕೆದಾರರು, ''ನಿಮ್ಮ ಗ್ರಾಹಕರನ್ನು ಅರಿಯಿರಿ'' (ಕೆವೈಸಿ) ಪರಿಶೀಲಿಸಲು ಯಾವುದೇ ತೊಂದರೆಯನ್ನು ಎದುರಿಸುವುದಿಲ್ಲ. ಗುರುತಿನ ದಾಖಲೆಗಳಿಲ್ಲ ಎನ್ನುವ ಕಾರಣಕ್ಕಾಗಿ ನಿವಾಸಿಗೆ ಸೇವೆ ಪೂರೈಕೆ ನಿರಾಕರಿಸುವ ಪ್ರಮೇಯವೇ ಬರುವುದಿಲ್ಲ. ನಿವಾಸಿಯೂ ಕೂಡಾ ಬ್ಯಾಂಕ್‌ ಖಾತೆ ತೆರೆಯಲು, ಪಾಸ್‌ಪೋರ್ಟ್‌ ಅಥವಾ ಚಾಲನಾ ಪರವಾನಗಿ ಮೊದಲಾದವುಗಳಿಗಾಗಿ ಪದೇ ಪದೇ 'ಗುರುತು' ಒದಗಿಸುವ ತೊಂದರೆ ಎದುರಿಸಬೇಕಾಗಿಲ್ಲ.
  • ಸ್ಪಷ್ಟವಾದ ಗುರುತು ''ಆಧಾರ್‌'' ಒದಗಿಸುವ ಮೂಲಕ ಬಡವರು ಮತ್ತು ಪ್ರಯೋಜನ ದೊರಕದ ನಿವಾಸಿಗಳನ್ನು ಬ್ಯಾಂಕಿಂಗ್‌ ಸೌಲಭ್ಯ ಮತ್ತು ಸರ್ಕಾರ ಹಾಗೂ ಖಾಸಗಿ ರಂಗ ಒದಗಿಸುವ ವಿವಿಧ ಸೇವೆಗಳನ್ನು ಪಡೆಯಲು ಸಶಕ್ತರನ್ನಾಗಿಸಲಾಗುತ್ತಿದೆ. ಯುಐಡಿಎಐ ಒದಗಿಸುವ ಕೇಂದ್ರೀಕೃತ ವ್ಯವಸ್ಥೆ ಯಾವುದೇ ಕಾಲದಲ್ಲಿ, ಯಾವುದೇ ಸ್ಥಳದಲ್ಲಿ, ಹೇಗಿದ್ದರೂ ಅಧಿಕೃತತೆಯನ್ನು ಒದಗಿಸುತ್ತದೆ. ಆಧಾರ್‌, ಸಂಚಾರದಲ್ಲೆ ಇರುವ ವಲಸಿಗರಿಗೆ ಗುರುತು ಸೌಲಭ್ಯ ಒದಗಿಸುತ್ತದೆ.
  • ಆಧಾರ್‌ ಅಧಿಕೃತತೆಯನ್ನು ಆಫ್‌ಲೈನ್‌, ಆನ್‌ಲೈನ್‌ ಎರಡೂ ಮಾರ್ಗಗಳಲ್ಲಿ ಖಚಿತಪಡಿಸಿಕೊಳ್ಳಬಹುದಾಗಿದೆ. ದೂರದಲ್ಲಿರುವ ಸಂದರ್ಭಗಳಲ್ಲಿ ನಿವಾಸಿಯು ತಮ್ಮ ಸಂಖ್ಯೆಯನ್ನು ಸ್ಥಿರ ಅಥವಾ ಚರ ದೂರವಾಣಿ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ನಗರ ಭಾಗದ ಬಡವರಲ್ಲದ ನಿವಾಸಿಗಳು ಬ್ಯಾಂಕಿಂಗ್‌, ರಿಟೈಲ್‌ ಸೇವೆ ಪಡೆಯಲು ಆಧಾರ್‌ ಖಚಿತತೆಗೆ ಯಾವ ಸೌಲಭ್ಯವನ್ನು ಹೊಂದಿರುವರೊ, ಅದೇ ಸೌಲಭ್ಯವನ್ನು ಗ್ರಾಮೀಣ ಭಾಗದ ಬಡವರಿಗೂ ಈ ಸೌಕರ್ಯ ಒದಗಿಸುತ್ತದೆ. ಆಧಾರ್‌ ಸಂಖ್ಯೆ ನೀಡುವಾಗ, ಸೂಕ್ತವಾದ ಪರಿಶೀಲನೆ ಅಗತ್ಯವಾಗಿರುತ್ತದೆ.
  • ಸದ್ಯ ಭಾರತದಲ್ಲಿರುವ ಮಾಹಿತಿ ಮೂಲಗಳು, ಖೊಟ್ಟಿ, ನಕಲಿ ಮತ್ತು ಅಗೋಚರ ಫಲಾನುಭವಿಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. 'ಆಧಾರ್‌' ಮಾಹಿತಿ ಮೂಲಗಳನ್ನು ಇಂತಹ ತೊಂದರೆಗಳಿಂದ ದೂರವಿರಿಸಲು ಯುಐಡಿಎಐ ನಿವಾಸಿಯ ಪ್ರಜಾವಿವರ ಮತ್ತು ಜೈವಿಕ ಮಾಪನ ಮಾಹಿತಿ ಆಧರಿಸಿದ ಸೂಕ್ತ ಮಾಹಿತಿ ಪರಿಶೀಲನೆ ನಂತರದ ದಾಖಲಾತಿಗೆ ಯೋಜಿಸಿದೆ.
  • ಇದು ಸಂಗ್ರಹಿತ ಮಾಹಿತಿ ಆರಂಭದಿಂದಲೆ ನಿಚ್ಚಳವಾಗಿದೆ ಎಂಬುದನ್ನು ಖಾತರಿಪಡಿಸುತ್ತದೆ. ಆದರೆ, ಅನೇಕ ಬಡವರು ಹಾಗೂ ಪ್ರಯೋಜನ ಸಿಗದ ವಂಚಿತ ಜನಸಂಖ್ಯೆಗೆ ಗುರುತಿನ ದಾಖಲೆಗಳೇ ಇಲ್ಲ. ವಿವಿಧ ಪ್ರಯೋಜನಗಳನ್ನು ಪಡೆಯಲು ಅವರಿಗೆ ಆಧಾರ್‌ ಮೊದಲ ಗುರುತು ದಾಖಲೆಯಾಗಲಿದೆ. ದಾಖಲೆಗಳೇ ಇರದ ಬಡವರು ಹಾಗೂ ಪ್ರಯೋಜನ ವಂಚಿತರಿಗೆ 'ನಿಮ್ಮ ನಿವಾಸಿಗಳನ್ನು ಅರಿಯಿರಿ' (ಕೆಆರ್‌ವೈ) ಗುಣಮಟ್ಟ ತಡೆಗೋಡೆಯಾಗದಂತೆ ಯುಐಡಿಎಐ ಖಾತರಿ ಮಾಡಲಿದೆ.
  • ಈ ವ್ಯವಸ್ಥೆಯಲ್ಲಿ ಆಧಾರ್‌ ಹೊಂದಿದ ಅಧಿಕೃತ ವ್ಯಕ್ತಿಗಳು (ಪರಿಚಯಕರು) ಯಾವುದೇ ಗುರುತು ದಾಖಲೆಗಳಿಲ್ಲದ ನಿವಾಸಿಗಳು ಆಧಾರ್‌ ಪಡೆಯುವಂತೆ ಅವರನ್ನು ಪರಿಚಯಿಸಬಹುದು.

ಮೂಲ :ಯು ಐ ಡಿ ಎ ಐ

2.9746835443
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top