ಉಪಯೋಗಗಳು: ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗುತ್ತದೆ, ನೀವು ಉದ್ಯೋಗ ನಿಗಮದ ವಿಶಿಷ್ಟವಾದ ನೋಂದಣಿ ಸಂಖ್ಯೆಯನ್ನು ಪಡೆಯುವಿರಿ, ಸರ್ಕಾರದ ಸಂಸ್ಥೆಯಿಂದ ನಿಮ್ಮ ಶಿಕ್ಷಣ ಅರ್ಹತೆಗೆ ಸಂಬಂಧಪಟ್ಟ ಖಾಲಿಯಿರುವ ಹುದ್ದೆ ಬಗ್ಗೆ ಘೋಷಿಸದಾಗಲೆಲ್ಲಾ ನಿಮ್ಮ ಉಮೇದುವಾರಿಕೆಯನ್ನು ಅನುಕ್ರಮವಾದ ಉದ್ಯೋಗದಾತನಿಗೆ ರವಾನಿಸಲಾಗುತ್ತದೆ. ನೋಂದಣಿಯ ಪ್ರಕ್ರಿಯೆ ಆನ್ ಲೈನ್ ನಲ್ಲಿ ನಿಮ್ಮನ್ನು ನೋಂದಾಯಿಸಲು, ದಯವಿಟ್ಟು Employment Exchange ಗೆ ದಾಖಲಾಗಿ, ಡ್ರಾಪ್ ಡೌನ್ ಬಾಕ್ಸ್ ನಿಂದ ರಾಜ್ಯ>>ಜಿಲ್ಲಾ>> ಉದ್ಯೋಗ ವಿನಿಮಯ ಕೇಂದ್ರದ ಹೆಸರನ್ನು ಆಯ್ಕೆ ಮಾಡಿ ಕೊಳ್ಳಿ. ನೀಡಿದ ಬಾಕ್ಸ್ ನಲ್ಲಿ ಕೋಡ್ ಅನ್ನು ನಮೂದಿಸಿ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ನಿಮ್ಮ ಬಳಕೆದಾರ ಲಾಗ್ ಇನ್, ಪಾಸ್ ವರ್ಡ್, ನಿಗದಿ ಪಡಿಸಿದ ನೋಂದಣಿ ಸಂಖ್ಯೆ ಮತ್ತು ಉದ್ಯೋಗ ವಿನಿಮಯ ಕೇಂದ್ರದ ಹೆಸರನ್ನು ಪಡೆಯುವಿರಿ, ನಿಮ್ಮ ಮುಂದಿನ ಉಪಯೋಗಕ್ಕೆ, ದಯವಿಟ್ಟು ಆ ಪುಟದ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಪುಟದ ಎಡ ಭಾಗ ಕೆಳಗೆ ಕೊಂಡಿ ಲಭ್ಯ, ದಯವಿಟ್ಟು ನಿಗದಿಪಡಿಸಿದ ನೋಂದಣಿ ಸಂಖ್ಯೆಯನ್ನು ಭವಿಷ್ಯದ ಉಪಯೋಗಕ್ಕಾಗಿ ಬರೆದಿಟ್ಟುಕೊಳ್ಳಿ ಮತ್ತು ಅದು ತಾತ್ಕಾಲಿಕ, ಶಿಕ್ಷಣ, ಅನುಭವ, ಜಾತಿ, ಕ್ರೀಡೆ, ಅಂಗವಿಕಲತೆ (ವೈದ್ಯಕೀಯ ಬೋರ್ಡ್/CMO ನಿಂದ ನೀಡಿದ), ಮಾಜಿ ಸೈನಿಕ, ವಿದುವೆ, ಸ್ವಾತಂತ್ರ್ಯ ಹೋರಾಟಗಾರ ಮತ್ತು ನಿವಾಸದ ಪುರಾವೆಗಳನ್ನು ಬೆಂಬಲಿಸುವ ಎಲ್ಲಾ ಪ್ರಮಾಣಪತ್ರಗಳನ್ನು ಒದಗಿಸಿ, ಮೇಲೆ ಸೂಚಿಸಿದ ದಾಖಲೆಗಳನ್ನು ಹೊರತು ಪಡಿಸಿ, ನಿಮ್ಮ ನಿವಾಸದ ಪುರಾವೆಗಾಗಿ ಕೆಳಕಂಡ ಯಾವುದಾದರೂ ಒಂದು ದಾಖಲೆಯನ್ನು ನೀವು ಸಲ್ಲಿಸಬೇಕು: ಪಡಿತರ ಚೀಟಿ ಮತದಾರ ಐ-ಕಾರ್ಡ್ ಹಳದಿ ಕಾರ್ಡ್ ನಿಂದ ಧೃಡಿಕರಣ ಪತ್ರಪಂಚ್ಮುನ್ಸಿಪಾಲ್ ಕೌನ್ಸಿಲರ್/ಸರ್ ರಾಜ್ಯದಲ್ಲಿ ಹೆತ್ತವರ ಉದ್ಯೋಗದ ಸಾಕ್ಷಿ ರಾಜ್ಯದಲ್ಲಿ ಶಿಕ್ಷಣದ ಪ್ರಮಾಣಪತ್ರ ಗೆಜೆಟ್ ಅಧಿಕಾರಿಯಿಂದ ಅಥವಾ ಶಾಲಾ ಮುಖ್ಯಸ್ಥರಿಂದ ಪತ್ರ MLA / MP ಯಿಂದ ನೀಡಿದ ದೃಡಿಕರಣ ಪತ್ರ ಕಾಯಂ ವಾಸಸ್ಥಳದ ಪ್ರಮಾಣ ಪತ್ರ ಅಂತಿಮವಾಗಿ, ಉದ್ಯೋಗ ವಿನಿಮಯ ಕೇಂದ್ರವು ನಿಮ್ಮ ನೋಂದಣಿ ಸಂಖ್ಯೆಯನ್ನು ಹೊಂದಿದ ನೋಂದಣಿ ಕಾರ್ಡ್ ಅನ್ನು ಆ ನೋಂದಣಿಯ ನವೀಕರಣದ ದಿನಾಂಕದೊಂದಿಗೆ ನೀಡಲಾಗುತ್ತದೆ. ಮೂಲ: ಪೋರ್ಟಲ್ ತಂಡ