ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇ ಗವರ್ನೆನ್ಸ್‌ / ನಾಗರಿಕ ಸೇವೆಗಳು / ಕರ್ನಾಟಕ ಲೋಕಸೇವಾ ಆಯೋಗ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕರ್ನಾಟಕ ಲೋಕಸೇವಾ ಆಯೋಗ

ಆಯೋಗದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವಿದು, ಉತ್ತರ ಪತ್ರಿಕೆಗಳ ಕೋಡಿಂಗ್‍ಗಾಗಿ "ಬಾರ್ ಕೋಡಿಂಗ್ ಸಿಸ್ಟಮ್" ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಓಎಂಆರ್ (ಆಪ್ಟಿಕಲ್ ಮಾರ್ಕರ್ ರೀಡರ್) ಉತ್ತರ ಹಾಳೆಗಳನ್ನು ಉಪಯೋಗಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗವು ಭಾರತ ಸಂವಿಧಾನದ 316ನೇ ಅನುಚ್ಛೇದದೊಂದಿಗೆ ಓದಿಕೊಂಡ 315ನೇ ಅನುಚ್ಛೇದದ ಪ್ರಕಾರ ರಚಿತವಾದ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು 09 ಸದಸ್ಯರುಗಳಿರುತ್ತಾರೆ.  ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಆಯೋಗದ ನಾಲ್ಕು ಪ್ರಾದೇಶಿಕ ಕಚೇರಿಗಳು ಮೈಸೂರು, ಬೆಳಗಾವಿ, ಗುಲ್ಬರ್ಗಾ ಮತ್ತು ಶಿವಮೊಗ್ಗ ನಗರಗಳಲ್ಲಿರುತ್ತವೆ.  ಆಯೋಗದಲ್ಲಿ ಕಾನೂನು ವಿಭಾಗವಿದ್ದು, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ವಿಭಾಗದ ಮುಖ್ಯಸ್ಥರಾಗಿದ್ದು ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.  ಆಯೋಗದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವಿದು, ಉತ್ತರ ಪತ್ರಿಕೆಗಳ ಕೋಡಿಂಗ್‍ಗಾಗಿ "ಬಾರ್ ಕೋಡಿಂಗ್ ಸಿಸ್ಟಮ್" ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ.  ಓಎಂಆರ್ (ಆಪ್ಟಿಕಲ್ ಮಾರ್ಕರ್ ರೀಡರ್) ಉತ್ತರ ಹಾಳೆಗಳನ್ನು ಉಪಯೋಗಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಕಾರ್ಯ ಮತ್ತು ಕರ್ತವ್ಯಗಳು

  • ರಾಜ್ಯದ ಸೇವೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸುವುದು.
  • ಸರ್ಕಾರವು ಪ್ರಸ್ತಾಪಿಸುವ ರಾಜ್ಯ ಸರ್ಕಾರಿ ನೌಕರರ ಬಡ್ತಿ ಮತ್ತು ಶಿಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಾನ್ವಯ ಸಮಾಲೋಚಿಸುವುದು.
  • ರಾಜ್ಯ ಸರ್ಕಾರಿ ನೌಕರರಿಗಾಗಿ ವರ್ಷಕ್ಕೆರಡು ಬಾರಿ ಇಲಾಖಾ ಪರೀಕ್ಷೆಗಳನ್ನು ನಡೆಸುವುದು.
  • ಕೇಂದ್ರ ಲೋಕಸೇವಾ ಆಯೋಗದ ಪರವಾಗಿ ರಾಜ್ಯದಲ್ಲಿ ಪರೀಕ್ಷೆಗಳನ್ನು ನಡೆಸುವುದು.

ಆಯೋಗದಲ್ಲಿ ಒಂದು ಕಾರ್ಯದರ್ಶಿ ಹುದ್ದೆ ಇದ್ದು, ಅದು ಐ.ಎ.ಎಸ್. ಎನ್‍ಕಾಡರ್ ಹುದ್ದೆಯಾಗಿದ್ದು, ಈ ಹುದ್ದೆಯಲ್ಲಿ ಐ.ಎ.ಎಸ್. ಅಧಿಕಾರಿಯೊಬ್ಬರು ಕಾರ್ಯನಿರ್ವಹಿಸಲು ಸರ್ಕಾರದಿಂದ ನಿಯೋಜಿತರಾಗಿರುತ್ತಾರೆ.  ಅವರು ಆಯೋಗದ ಕೇಂದ್ರೀಯ ಕಾರ್ಯಕಾರಿ ಮುಖ್ಯಸ್ಥರಾಗಿದ್ದು, ರಾಜ್ಯದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರವಾಗಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳ ಸಮಗ್ರ ಜವಾಬ್ದಾರಿಯನ್ನು ಹೊಂದಿರುತ್ತಾರೆ ಹಾಗೂ ಆಯೋಗವು ಸಮರ್ಥವಾಗಿ ಕಾರ್ಯನಿರ್ವಹಿಸಲು ಜವಾಬ್ದಾರರಾಗಿದ್ದು ಅವರಿಗೆ ಕೆಳಕಂಡ ಅಧಿಕಾರಿಗಳು ನೆರವಾಗುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಕರ್ನಾಟಕ ಲೋಕಸೇವಾ ಆಯೋಗ

ಮೂಲ : ಕರ್ನಾಟಕ ಲೋಕಸೇವಾ ಆಯೋಗ

2.9880952381
ಅವಿನಾಶ್.ಏಲ್ವಿ Jun 18, 2016 07:57 AM

ನಾನು KAS ಮಾಡುವ ಗುರಿ ಹೋನ್ದಿದ್ದೇನಿ

ಮಹಂತೇಶ್.ಕೇ ಏಲ್ Jun 03, 2016 09:11 PM

ನಾನು KAS ಮಾಡುವ ಗುರಿ ಹೋಂದಿದ್ದಿನಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top